Tuesday, April 29, 2025
Tuesday, April 29, 2025

Gangavathi Pranesh Nage Habba in Shivamogga ಶಿವಮೊಗ್ಗದಲ್ಲಿ ಮಾರ್ಚ್ 22 ರಂದು ಗಂಗಾವತಿ ಪ್ರಾಣೇಶ್ ನಗೆ ಹಬ್ಬ

Date:

Gangavathi Pranesh Nage Habba in Shivamogga  ಶಿವಮೊಗ್ಗ ನಗರದ ಜನಪ್ರಿಯ ಯುವ ಮುಖಂಡರಾದ ಶ್ರೀ ಕೆಇ ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗದ ವತಿಯಿಂದ ನಿರ್ಧರಿಸಲಾಗಿದೆ.

ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ, ರಾಜೀವ ಗಾಂಧಿ ಬಡಾವಣೆ, ಗುಂಡಪ್ಪ ಶೇಡ್, ಅಂಬೇಡ್ಕರ್ ನಗರ, ಬೆಂಕಿ ನಗರ, ನ್ಯೂ ಮಂಡ್ಲಿ, ಶಾಂತಿನಗರದ ಅವಶ್ಯಕತೆ ಇರುವ ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಲಾಗುತ್ತದೆ.

ಈ ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾರ್ಚ್ 21 ರ ಬೆಳಗ್ಗೆ 9 ಗಂಟೆಗೆ ಗುರುಪುರ ನಂಜುಂಡೇಶ್ವರ ಸಭಾಭವನದಲ್ಲಿ ನಡೆಸಲಾಗುತ್ತದೆ. ಶಿವಮೊಗ್ಗ ಬೆಕ್ಕಿನ ಕಲ್ಮಟ್ಟದ ಪೂಜ್ಯ ಶ್ರೀ.ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಮೊಗ್ಗ ಬಸವ ಕೇಂದ್ರದ ಪೂಜ್ಯ ಶ್ರೀ. ಬಸವ ಮರುಳಸಿದ್ದ ಸ್ವಾಮಿಗಳು, ಹೊಸದುರ್ಗ ಕನಕ ಗುರು ಪೀಠದ ಪೂಜ್ಯ ಶ್ರೀ ಈಶ್ವರನಂದ ಪುರಿ ಸ್ವಾಮಿಗಳು, ಚಿತ್ರದುರ್ಗ ಮಾದಾರ ಗುರುಪೀಠದ ಪೂಜ್ಯ ಶ್ರೀ ಮಾದರ ಚೆನ್ನಯ್ಯ ಸ್ವಾಮಿಗಳು ಮತ್ತು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಇನ್ನು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

Gangavathi Pranesh Nage Habba in Shivamogga  ಈ ದಿನ ಶಿವಮೊಗ್ಗದ ಶಾರದ ಅಂದರ ವಿಕಾಸ ಕೇಂದ್ರ, ತಾಯಿ ಮನೆ, ಮಾತೃ ಛಾಯ, ಜೀವನ ಸಂಜೆ, ತರಂಗ, ಗುಡ್ ಲಕ್ ಹಾರೈಕೆ ಕೇಂದ್ರ, ವೃದ್ದಾಶ್ರಮಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಮಾರ್ಚ್ 22ರ ಯುಗಾದಿಯ ಸಂಜೆ ವಿಶೇಷ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಶ್ರೀ ಶನೀಶ್ಚರ ದೇವಾಲಯದ ಆವರಣ, ಶುಭ ಮಂಗಳ ಸಮುದಾಯ ಭವನ ದಲ್ಲಿ ಆಯೋಜಿಸಲಾಗಿದೆ.

ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಗಂಗಾವತಿ ಪ್ರಾಣೇಶ್ ಮತ್ತು ಶ್ರೀ ಬಸವರಾಜ್ ಹಾದಿಮನಿಯವರು ಹಾಸ್ಯ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಯುಗಾದಿ ವಿಶೇಷ ಪಂಚಾಂಗ ಶ್ರವಣ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಲಿದೆ. ಶಿವಮೊಗ್ಗ ನಗರದ ಶಾಸಕರಾದ ಕೆ ಎಸ್ ಈಶ್ವರಪ್ಪ  ಯುಗಾದಿ ಸಂಭ್ರಮ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಇ ಕಾಂತೇಶ್ ಕೂಡ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಪತ್ರಿಕಾ ವರದಿಯ ಮೂಲಕ ಕಾಂತೇಶ್ ಸ್ನೇಹಿತರ ಬಳಗ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...