Friday, April 10, 2026
Friday, April 10, 2026
Home Blog Page 1277

Inauguration of Smart Class ಜ್ಞಾನವು ಎಲ್ಲಕ್ಷೇತ್ರಗಳಲ್ಲೂ ಶೀಘ್ರ ಬೆಳೆದು ಪ್ರಭಾವಿಯಾಗಿದೆ-ಸಿ.ಟಿ.ಜಯದೇವ

0

Inauguration of Smart Class ಸ್ಪರ್ಧಾತ್ಮಕ ಯುಗದಲ್ಲಿ ಮಾನವ ಜೀವನ ನಡೆಸುತ್ತಿದ್ದು ಕಾಲಕ್ರಮೇಣ ಜ್ಞಾನವು ಎಲ್ಲಾ ಕ್ಷೇತ್ರದಲ್ಲೂ ಪ್ರಭಾವ ಬೀರಿ ವೇಗವಾಗಿ ಮುನ್ನೆಡೆಯುತ್ತಿದೆ ಎಂದು ಎಐಟಿ ಕಾಲೇಜಿನ ಪ್ರಾಂಶು ಪಾಲ ಸಿ.ಟಿ.ಜಯದೇವ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಸಮೀಪದ ಸಂತ ಝೇವಿರ‍್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃತಕಬುದ್ದಿಮತ್ತೆ ಕುರಿತ ಸ್ಮಾರ್ಟ್ಕ್ಲಾಸ್‌ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯಲ್ಲಿ ಪ್ರಥಮ ಬಾರಿಗೆ ಸ್ಲಾರ್ಟ್ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯ ಬೇಕು. ಕೃತಕಬುದ್ದಿಮತ್ತೆಯು ಕಲಿಕಾ ವಿಧಾನ, ಕೌಶಲ್ಯ ಮತ್ತು ಮನೋಭಾವಗಳ ಜ್ಞಾನ ಸಂಪಾದನೆಯ ಪ್ರಕ್ರಿಯೆ ಯಾಗಿದೆ. ಈ ತಂತ್ರಜ್ಞಾವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಜ್ಞಾನವನ್ನು ಸಂಪಾದಿಸಬೇಕು ಎಂದರು.

ಹಿಂದಿನ ಕಾಲಘಟ್ಟದಲ್ಲಿ ಶಿಕ್ಷಣ ಸಾಂಪ್ರದಾಯಿಕವಾಗಿ ಬೋಧನೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಬೋಧನೆ ಮತ್ತು ಕಲಿಕೆ ಒಟ್ಟೊಟ್ಟಿಗೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ತಾಂತ್ರಿಕತೆಯ ವಿಜ್ಞಾನ ಮತ್ತು ಗಣಿತ ಮೂಲಭೂತ ಕಲಿಕೆಗೆ ತುಂಬಾ ಉಪಕಾರಿಯಾಗಲಿದೆ ಎಂದು ತಿಳಿಸಿದರು.

ಸ್ಮಾರ್ಟ್ಪೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಇಂದಿನ ಸಮಯದಲ್ಲಿ ಮಾಹಿತಿಯನ್ನು ಕಲೆ ಹಾಕಲು ಬಳಸ ಲಾಗುತ್ತಿದ್ದು ಈ ತಾಂತ್ರಿಕತೆಯು ವಿದ್ಯಾರ್ಥಿಗಳ ಜೀವನವನ್ನು ಸರಳಗೊಳಿಸಿ ಅನೇಕ ಪ್ರಯೋಜನಗಳನ್ನು ನೀಡು ತ್ತಿದೆ. ಇದೇ ವೇಳೆ ಪ್ರಥಮ ಬಾರಿಗೆ ಶಾಲೆಯಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

Inauguration of Smart Class ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲ ರೋಷನ್ ಸಿಕ್ವೇರಾ ಕೃತಕಬುದ್ದಿಮತ್ತೆ ತಾಂತ್ರಿಕತೆಯು ವಿದ್ಯಾರ್ಥಿಗಳಲ್ಲಿ ವಿಚಾರಣಾಶಕ್ತಿಯನ್ನು ಅಭಿವೃದ್ದಿಪಡಿಸಿ ವಿಷಯವನ್ನು ವಿಶ್ಲೇ ಷಣೆ ಮಾಡಿ ವಿವಿಧ ಆಯಾಮಗಳಲ್ಲಿ ಕಲಿಕೆಯನ್ನು ಪ್ರೋತ್ಸಾಹಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.

ಈ ತಾಂತ್ರಿಕತೆಯಿಂದ ವಿದ್ಯಾರ್ಥಿಗಳಿಗೆ ಕಲಿಯಲು, ಪ್ರಯತ್ನಶೀಲರಾಗಲು ಮತ್ತು ಪರೀಕ್ಷೆಗೆ ಒಳಪಡಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಹೇಳಿದ ವಿಷಯವನ್ನು ಅರ್ಥ ಮಾಡಿಕೊಂಡಿದ್ದಾರೆಯೇ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋಲಿ ಫ್ಯಾಮಿಲಿ ಸೇವಾ ಸಮಿತಿ ಅಧ್ಯಕ್ಷ ಬಿ.ಜಿ.ಮೋಕ್ಷಿತ್, ವಕೀಲ ಎಂ.ಬಿ.ಜಯಕೀರ್ತಿ, ಆಯೋಜಕರಾದ ಆದಿತ್ಯ, ರಾಕೇಶ್, ಶಾಲೆಯ ಆಡಳಿತ ಮಂಡಳಿಯ ಸೌಮ್ಯಶ್ರೀ, ರೇಷ್ಮಾ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

International Women’s Day ಮಹಿಳೆಯರು ಓದಿನಾಚೆಯ ಜ್ಞಾನಸಂಗ್ರಹ ಮಾಡಬೇಕು- ಗೋಪಾಲ್ ಯಡಗೆರೆ

0

International Women’s Day ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೃಜನಶೀಲತೆ ಹೆಚ್ಚಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಹೇಳಿದರು.

ಶಿವಮೊಗ್ಗದ ಪತ್ರಿಕಾಭವನದಲ್ಲಿ ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗಾಗಿ ಮಹಿಳಾ ಕೇಂದ್ರಿತವಾದ ಮತ್ತೆ ಆಡೋಣ ಬನ್ನಿ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರುವ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಕುಟುಂಬ ವೃತ್ತಿ ನಿರ್ವಹಣೆ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಮಹಿಳೆ ಹೆಚ್ಚು ತೊಡಗಿಕೊಳ್ಳಬೇಕು.‌ ಎಂತದ್ದೆ ಕಠಿಣ ಸಂದರ್ಭಗಳನ್ನು ನಿಭಾಯಿಸುವಂತ ಸೃಜನಶೀಲತೆ ಮಹಿಳೆ ಅಗತ್ಯವಾಗಿದೆ. ಸಾಮರ್ಥ್ಯಕ್ಕೆ ಇಂಬು ನೀಡುವಂತೆ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಓದಿನಲ್ಲಿ ಮಹಿಳೆಯರು ಯಾವಾಗಲು‌‌ ಮುಂದೆ ಇರುತ್ತಾರೆ. ಓದಿನಾಚೆಗಿನ ಪ್ರಪಂಚದ ಬಗ್ಗೆಯೂ ಅವರು ಜ್ಞಾನ ಸಂಗ್ರಹಿಸಬೇಕು. ಮಹಿಳೆ ತನ್ನ ಚರ್ಚೆ, ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ವಿಷಯಗಳತ್ತ ಆಳವಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ನಮ್ಮೊಳಗಿನ ಐಕ್ಯೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ‌ ಮಹಿಳೆಯರು ಗಮನ ಹರಿಸಬೇಕು ಎಂದು ಹೇಳಿದರು.

International Women’s Day ಆಚಾರ್ ಗ್ರೋಪ್ ಆಫ್ ಕಂಪನಿಯ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಮಾತನಾಡಿ, ಸಮಾಜ ತಿದ್ದುವಲ್ಲಿ ಮಹಿಳೆ ಪಾತ್ರ ಹಿರಿದಾಗಿದೆ. ಮಹಿಳೆ ಹಿಂಜರಿಕೆ ತೊರೆದು ದೈರ್ಯದಿಂದ ಮುನ್ನಡೆಯಬೇಕು ಎಂದರು.

ಮಹಿಳೆ ಮನೆ ನಿರ್ವಹಣೆಗಷ್ಟೇ ಸೀಮಿತಗೊಳ್ಳದೇ ತಾವು ಪಡೆದುಕೊಂಡ ಶಿಕ್ಷಣವನ್ನು ಸದುಪಯೋಗ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳಬೇಕು. ಆಗ ಮಾತ್ರ ಆಕೆ ಆರ್ಥಿಕ ಸಬಲತೆಯನ್ನು ಗಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನ್ವಂತರ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸುಗುಣ ವಾಲ್ಸ್ ಮತ್ತು ಪೈಪ್ಸ್ ಪ್ರೈ.ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ವಾರಿಜಾ ರಾಮಾಚಾರ್, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್, ರಂಗಭೂಮಿ ಕಲಾವಿದ ಕಾಂತೇಶ್ ಕದರಮಂಡಲಗಿ, ರಂಗ ನಿರ್ದೇಶಕ ಹೊನ್ನಾಳಿ ಚಂದ್ರಶೇಖರ್, ಕಮಲ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Hartalu Halappa ಜೋಗದಲ್ಲಿ ಫುಡ್ ಪಾಯ್ಸನ್ ಪೀಡಿತ ಹಾಸ್ಟೆಲ್ ವಿದ್ಯಾರ್ಥಿಗಳನ್ನ ಭೇಟಿ ಮಾಡಿದ ಶಾಸಕ ಹಾಲಪ್ಪ

0

Hartalu Halappa ತುಮರಿ ಭಾಗದ ಪ್ರವಾಸದಲ್ಲಿದ್ದ ಶಾಸಕರಾದ ಹೆಚ್.ಹಾಲಪ್ಪ ನವರು,
ಜೋಗ, ಕ್ರಿಸ್ತ ಪ್ರಕಾಶ ಹಿರಿಯ ಪ್ರಾಥಮಿಕ ಶಾಲೆಯ ಹಾಸ್ಟೆಲ್ ನ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫುಡ್ ಪಾಯಿಸನ್ ನಿಂದಾಗಿ ಅಸ್ವಸ್ಥರಾಗಿ, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿ, ಪೋಷಕರಿಗೆ ಧೈರ್ಯ ತುಂಬಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

Hartalu Halappa ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B. Y. Raghavendra ಶಿವಮೊಗ್ಗದಲ್ಲಿ ಲೋಕೋಪಯೋಗಿ ಭವನ ಉದ್ಘಾಟನೆ

0

B. Y. Raghavendra  ಶಿವಮೊಗ್ಗದಲ್ಲಿ “ಲೋಕೋಪಯೋಗಿ ಭವನ” ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

B. Y. Raghavendra ಕಟ್ಟಡದ ಉದ್ಘಾಟನೆಯನ್ನು
ಸಂಸದ ಬಿ ವೈ ರಾಘವೇಂದ್ರ ಅವರು ನೆರವೇರಿಸಿದರು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಈ ಸಂದರ್ಭದಲ್ಲಿ ಶ್ರೀ ಬಿ. ಎಸ್. ಯಡಿಯೂರಪ್ಪನವರು‌ ಈ ಸಮಾರಂಭದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Vaddinakoppa Road Accident

ವಡ್ಡಿನಕೊಪ್ಪದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ ಲಾರಿ ಬಳಿ ಜನ ತೆರಳದಂತೆ ಪೊಲೀಸ್ ಕಣ್ಗಾವಲು.

ಶಿವಮೊಗ್ಗ ಬ್ರೇಕಿಂಗ್ :- ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ.
ವಡ್ಡಿನಕೊಪ್ಪ ಗ್ರಾಮದಲ್ಲಿ ನಡೆದಿರುವ ಘಟನೆ.
ಭದ್ರಾವತಿಯ ಮಾಚೇನಹಳ್ಳಿಯಿಂದ ಎನ್.ಆರ್. ಪುರ ಕಡೆಗೆ ತೆರಳುತ್ತಿದ್ದ ಲಾರಿ.

Vaddinakoppa Road Accident
Vaddinakoppa Road Accident

ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ದೌಡು.
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಹಿನ್ನೆಲೆ.
ಮುಂಜಾಗ್ರತಾ ಕ್ರಮ ತೆಗೆದುಕೊಂಡ ಪೊಲೀಸರು.
ಲಾರಿ ಬಳಿ ಯಾರಿಗೂ ತೆರಳದಂತೆ ಎಚ್ಚರಿಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shree Kshetra Gramabivruddhi Yojane ಮಹಿಳೆಯರ ಶಿಸ್ತು ಮತ್ತು ಉತ್ತಮ ಸಂಸ್ಕೃತಿಯಿಂದ ಜಿಲ್ಲೆಯಲ್ಲಿ ಸ್ವಸಹಾಯ ಸಂಘ ಶಕ್ತಿಯುತ ಬೆಳೆದಿದೆ- ಡಾ.ಮಂಜುನಾಥ್

0

Shree Kshetra Gramabivruddhi Yojane  ಚಿಕ್ಕಮಗಳೂರು,ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಸ್ವಸಹಾಯ ಸಂಘವು ಹಲವು ಸಾಲ ಸೌಲಭ್ಯ ನೀಡಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸಶಕ್ತರಾಗಬೇಕು ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಹೆಚ್. ಮಂಜುನಾಥ್ ಹೇಳಿದರು.

ಚಿಕ್ಕಮಗಳೂರು ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಜ್ಞಾನ ವಿಕಾಸ ಮಹಿಳಾ ಕೇಂದ್ರದ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯ ನಾರಾಯಣಪೂಜೆ ಹಾಗೂ ತಾಲ್ಲೂಕು ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮಾಭಿವೃದ್ದಿ ಯೋಜನೆಯು ಜಿಲ್ಲೆಯಲ್ಲಿ ಪ್ರಾರಂಭವಾಗಿ ಹದಿನಾರು ವರ್ಷಗಳು ಕಳೆದಿವೆ. ಪ್ರಾರಂಭ ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಇದೀಗ ದೊಡ್ಡಮಟ್ಟದಲ್ಲಿ ಟ್ರಸ್ಟ್ ಬೆಳೆದಿದೆ. ಮಹಿಳೆಯರಿಗೆ ಐದು ಸಾವಿರದಿಂದ 5 ಲಕ್ಷದವರೆಗೂ ಸಾಲ ವಿತರಣೆ ಮಾಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸದಲ್ಲಿ ಟ್ರಸ್ಟ್ ಮುಂದಾಗಿದೆ ಎಂದರು.
ಪ್ರತಿಯೊಂದು ಮಹಿಳೆಯರು ಸ್ವಸಹಾಯ ಸಂಘದಲ್ಲಿ ಶಿಸ್ತು ಹಾಗೂ ನಡವಳಿಕೆಯ ಸಂಸ್ಕೃತಿ ಯನ್ನು ಉತ್ತಮವಾಗಿ ನಿಭಾಯಿಸಿದ ಪರಿಣಾಮ ಸ್ವಸಹಾಯ ಸಂಘವು ಜಿಲ್ಲೆಯಲ್ಲಿ ಅತ್ಯಧಿಕ ಶಕ್ತಿಯುತವಾಗಿ ಬೆಳೆದಿದೆ. ಜೊತೆಗೆ ಮಹಿಳೆಯರ ಕೌಟುಂಬಿಕ ಜೀವನವು ಸುಖಮಯವಾಗಿರುವುದು ನಮ್ಮ ಮುಂದಿದೆ ಎಂದು ಹೇಳಿದರು.

ಇಂದಿನ ಆಧುನಿಕ ಯುಗದಲ್ಲಿ ಭಾರತೀಯ ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ವಿಚಿತ್ರ ಉಡುಪು ಗಳಿಂದ ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಲಾರದ ಸ್ಥಿತಿಗೆ ತಲುಪಿದ್ದೇವೆ. ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಯನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ನಾಡಿನ ಹಿರಿಮೆ ಹಾಗೂ ವೇಷ ಭೂಷಣಗಳನ್ನು ಅವರಲ್ಲಿ ಮನದಟ್ಟು ಮಾಡಲು ಪೋಷಕರು ಮುಂದಾಗಬೇಕು ಎಂದರು.

Shree Kshetra Gramabivruddhi Yojane  ಪ್ರಸ್ತುತ ಕಾಲದಲ್ಲಿ ಮಹಿಳೆಯರು ಅತಿಹೆಚ್ಚು ಧಾರವಾಹಿಗಳ ದಾಸರಾಗಿರುತ್ತಾರೆ. ಒಂದು ದಿನವು ವೀಕ್ಷಣೆ ಇಲ್ಲವಾದರೂ ಸಹ ಕಸಿಬಿಸಿಗೆ ಒಳಗಾಗುತ್ತಾರೆ. ಕೆಲವು ಧಾರವಾಹಿಗಳು ವಿಕೃತವಾಗುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಮರೆಮಾಚುವ ಕಾರ್ಯದಲ್ಲಿ ತೊಡಗಿದೆ. ಆ ಹಿನ್ನೆಲೆಯಲ್ಲಿ ಮಹಿಳೆಯರು ಕಥೆ, ಕಾದಂಬ ರಿಗಳ ಒಳಗೊಂಡಿರುವ ಪುಸ್ತಕಗಳ ಅಧ್ಯಯನ ನಡೆಸಿದರೆ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ ಎಂದು ತಿಳಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಸ್ವಸಹಾಯ ಸಂಘದಲ್ಲಿ ಮಹಿಳೆ ಯರು ಇಂದು ಭಾರತೀಯ ಸಂಸ್ಕೃತಿಯ ಬಿಂಬಿಸುವ ಉಡುಗೆಯನ್ನು ಧರಿಸಿರುವುದು ಖುಷಿಯ ಸಂಗತಿ. ಈ ಆಚಾರ-ವಿಚಾರಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಭಾರತೀಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬೋಳರಾಮೇಶ್ವರ ದೇವಾಲಯ ಉಸ್ತುವಾರಿ ಸಮಿತಿ ಅಧ್ಯಕ್ಷ ಗಿರಿಜಾಶಂಕರ್ ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಮುಂತಾದವುಗಳು ಯೋಜನೆಯ ಚಿಂತನೆಯ ವಿಷಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಗ್ರಾಮಾಭಿವೃದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟ್ನ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು3287  ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ 22,971ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಣಾ ಕಾರ್ಯಕ್ರಮದಡಿ ಮಹಿಳೆಯರಿಗೆ ಆರ್ಥಿಕ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 7 ರಿಂದ ಶ್ರೀ ಸತ್ಯನಾರಾಯಣ ಸ್ವಾಮಿ ಜರುಗಿತು. ನಂತರ ತಾಲ್ಲೂಕು ಮಟ್ಟದ ಒಕ್ಕೂಟಗಳ ನೂತನ ಪದಗ್ರಹಣ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಜನಜಾಗೃತಿ ವೇದಿಕೆ ಸ್ಥಾಪಕ ಪ್ರಶಾಂತ್ ರಾವ್, ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಯೋಜನಾಧಿಕಾರಿ ಗೊರಗಪ್ಪ ಪೂಜಾರಿ, ಹಿರೇಮಗಳುರು ಮೇಲ್ವಿಚಾರಕ ಚಂದನ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Ugadi Special Offers ಬಾಬಾ ಸಾಹೇಬ್ ಅಂಬೇಡ್ಕರ್ ಚರ್ಮ ನಿಗಮದಿಂದ ಉಗಾದಿ ವಿಶೇಷ ವಾರ್ಷಿಕ ತೀರುವಳಿ ಮಾರಾಟ

0

Ugadi Special Offers  ಡಾ .ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಶಿವಮೊಗ್ಗ ಇದರ ವತಿಯಿಂದ ಚಾಂದ್ರಮಾನ ಯುಗಾದಿ ಹಬ್ಬ ಮತ್ತು ವಾರ್ಷಿಕ ತೀರುವಳಿ ಮಾರಾಟದ ಪ್ರಯುಕ್ತ ನೆಹರು ರಸ್ತೆಯ ಬಸವಸದನ ಕಾಂಪ್ಲೆಕ್ಸ್‍ನಲ್ಲಿರುವ ಲಿಡ್‍ಕರ್ ಲೆದರ್ ಅಪ್ಪಟ ಚರ್ಮ ಉತ್ಪನ್ನಗಳನ್ನು ಶೇ. 20 ರಿಯಾಯಿತಿ ದರದಲ್ಲಿ ಮಾ.11 ರಿಂದ 26 ರವರೆಗೆ ಮಾರಾಟ ಮಾಡಲಾಗುತ್ತಿದೆ.

Ugadi Special Offers  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು ಲಿಡ್‍ಕರ್, ನೆಹರು ರಸ್ತೆ, ಬಸವಸದನ ಕಾಂಪ್ಲೆಕ್ಸ್ ಶಿವಮೊಗ್ಗ ಇವರನ್ನು ದೂರವಾಣಿ ಸಂಖ್ಯೆ 9480886268 ಗೆ ಸಂಪರ್ಕಿಸಬಹುದೆಂದು ಲಿಡ್ ಕರ್ ವ್ಯವಸ್ಥಾಪಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Mahatma Gandhi Narega Scheme ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನಕ್ಕೆ ಶಿವಮೊಗ್ಗ ಜಿಲ್ಲಾಪಂಚಾಯತ್ ಗೆ ದ್ವಿತೀಯ ಪುರಸ್ಕಾರ

0

Mahatma Gandhi Narega Scheme 2022-23 ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಜಿ.ಪಂ ಪ್ರಶಸ್ತಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ದ್ವಿತೀಯ ಹಾಗೂ ಅತ್ಯುತ್ತಮ ತಾಲ್ಲೂಕು ಪಂಚಾಯತಿ ವಿಭಾಗದಲ್ಲಿ ಭದ್ರಾವತಿ ತಾಲ್ಲೂಕಿಗೆ ತೃತೀಯ ಬಹುಮಾನ ಲಭಿಸಿದೆ.

ಕೃಷಿ ಸ್ನೇಹಿ ಪಂಚಾಯತ್ ಪುರಸ್ಕಾರ ವಿಭಾಗದಲ್ಲಿ ಸೊರಬ ತಾಲ್ಲೂಕಿನ ಕೃಷಿ ಇಲಾಖೆಗೆ ಅತ್ಯುತ್ತಮ ತಾಲ್ಲೂಕು ಮಟ್ಟದ ಅರಣ್ಯ ಇಲಾಖೆ ಪ್ರಶಸ್ತಿ, ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರ ವಿಭಾಗದಲ್ಲಿ ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ.

Mahatma Gandhi Narega Scheme ಪ್ರಶಸ್ತಿ ಪುರಸ್ಕೃತರಿಗೆ ದಿನಾಂಕ: 24-03-2023 ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಗಾಂಧಿ ಗ್ರಾಮ ಪುರಸ್ಕಾರ’ ಮತ್ತು ‘ನರೇಗಾ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿ.ಪಂ ಸಿಇಓ ಎನ್.ಡಿ.ಪ್ರಕಾಶ್ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಮಾರ್ಚ್ 19 ರಂದು ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Cut in Shivamogga ಶಿವಮೊಗ್ಗದ ಎಂ.ಆರ್.ಎಸ್ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಬೇ ಯ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್-1, 3, 4, 17, 18 ಮತ್ತು 20 ಮಾರ್ಗಗಳ ಕೆಳಕಂಡ ಪ್ರದೇಶದಲ್ಲಿ ಮಾ.19 ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Power Cut in Shivamogga ವಿದ್ಯುತ್ ವ್ಯತ್ಯಯಗೊಳ್ಳುವ ಗ್ರಾಮ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿ ಗ್ರಾಮ, ಹೊನ್ನವಿಲೆ, ಮೆ. ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ ಎಸ್ ಆರ್ ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರ ಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Basavaraj Bommai ಉಡುತಡಿ ಕ್ಷೇತ್ರದ ಅಭಿವೃದ್ಧಿಗೆ ₹ 5. ಕೋಟಿ- ಬಸವರಾಜ ಬೊಮ್ಮಾಯಿ

0

Basavaraj Bommai  ಅಲ್ಲಮಪ್ರಭು ಅವರ ಜನ್ಮಸ್ಥಳವನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ ಶಿವಮೊಗ್ಗ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಲೋಕೋಪಯೋಗಿ ಇಲಾಖೆ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, ನಿರ್ಮಿತಿ ಕೇಂದ್ರ, ಇವರುಗಳ ಸಂಯುಕ್ತ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಅಕ್ಕಮಹಾದೇವಿ ಅವರ 65 ಅಡಿ ಎತ್ತರದ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿದ ನಂತರ ಏರ್ಪಡಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಉಡುತಡಿಯಲ್ಲಿರುವ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಿಕ ಕಟ್ಟಡ ನಿರ್ಮಾಣ ಹಾಗೂ ಅಗತ್ಯತೆಗಳಿಗಾಗಿ ಉನ್ನತ ಶಿಕ್ಷಣ ಇಲಾಖೆಯಿಂದ 10 ಕೋಟಿ ಹಾಗೂ ಶ್ರೀಕ್ಷೇತ್ರ ಶಿವನಪಾದವನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದವರು ನುಡಿದರು.

ಕಾಯಕ ಸಮುದಾಯಗಳ ಜಾಗೃತಿ ಮೂಡಿಸಿದ ಪುಣ್ಯನೆಲ ಶಿಕಾರಿಪುರ ತಾಲೂಕು. ಮಾನ್ಯ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಸಮುದಾಯಗಳ ವಿಕಾಸಕ್ಕೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ.

45 ಕೋಟಿ ರೂ.ಗಳ ವೆಚ್ಚದಲ್ಲಿ ಕಾಗಿನೆಲೆ ಅಭಿವೃದ್ಧಿ, 14ಕೋಟಿ ರೂ.ಗಳ ವೆಚ್ಚದಲ್ಲಿ ಕನಕದಾಸ ಹುಟ್ಟೂರು ಅಭಿವೃದ್ಧಿಗೆ ಅನುದಾನ ನೀಡಿದ್ದಲ್ಲದೇ ಸರ್ಕಾರದ ವತಿಯಿಂದಲೇ ವಾಲ್ಮೀಕಿ ಜಯಂತಿ ಆಚರಣಗೆ ಆದೇಶ, ಮಠ-ಮಾನ್ಯಗಳ ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲಾಗಿದೆ ಎಂದರು.

ನಾಯಕ ಮತ್ತು ಜನನಾಯಕರಲ್ಲಿ ವೆತ್ಯಾಸಗಳಿವೆ. ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಜನನಾಯಕ ಯಡಿಯೂರಪ್ಪ ಎಂದು ಪ್ರಶಂಸಿಸಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಯಡಿಯೂರಪ್ಪನಂತಹ ಮುತ್ಸದ್ಧಿಗಳ ಅಗತ್ಯ ಹಿಂದೆಂದಿ ಗಿಂತ ಇಂದು ಹೆಚ್ಚಾಗಿದೆ. ಅವರ ಅದಮ್ಯ ಉತ್ಸಾಹ, ಚಿಂತನೆ, ಆಲೋಚನೆಗಳು, ದಣಿವರಿಯದ ಕಾರ್ಯಪ್ರವೃತ್ತಿ, ಅಚಲ ವಿಶ್ವಾಸ, ಕಲ್ಮಶ ರಹಿತ-ದ್ವೇಷಾಸೂಯೆಗಳಿಲ್ಲದ ಅವರ ಮನಸ್ಸು ಯಡಿಯೂರಪ್ಪ ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದಿವೆ ಎಂದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶಿಕಾರಿಪುರ ಮಾತ್ರವಲ್ಲದೇ ನಾಡಿನ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಹೆಮ್ಮೆ ನನಗಿದೆ. ಜನರ ಆಶೋತ್ತರಗಳಿಗೆ ಪೂರಕವಾಗಿ ಇನ್ನಷ್ಟು ಕಾರ್ಯನಿರ್ವಹಿಸಲು ಬದ್ಧನಾಗಿದ್ದೇನೆ. ನಮ್ಮೆಲ್ಲಾ ಆಲೋಚನೆಗಳಿಗೆ ಪೂರಕವಾಗಿ ಸ್ಪಂದಿಸಿ, ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಹಕರಿಸಿದ ಅಧಿಕಾರಿ-ಸಿಬ್ಬಂಧಿಗಳು ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಇತಿಹಾಸದಲ್ಲಿ ಹೊಸ ಮನ್ವಂತರವನ್ನು ಸೃಷ್ಠಿಸಿದ ಶರಣರ ನೆಲೆವೀಡು ಶಿಕಾರಿಪುರ ಜಗತ್ತಿಗೆ ಅದ್ವಿತೀಯ ಧರ್ಮಸಂಸ್ಕಾರವನ್ನು ಪರಿಚಯಿಸಿದೆ. ಅಂತೆಯೇ ಶರಣರ ಆಶಯವನ್ನು ಈಡೇರಿಸುವ ಪರ್ವಕಾಲ ಇದಾಗಿದೆ ಎಂದರು.

ರಾಜ್ಯದಲ್ಲಿ 75,000ಕೋಟಿ ರೂ.ಗಳ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ. ೪ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ರಾಜ್ಯದ ರೈತರ ಬದುಕು ಹಸನಾಗಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂಬದು ಹರ್ಷದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 29 ಎಕರೆ ಪ್ರದೇಶಲ್ಲಿ ದೆಹಲಿ ಅಕ್ಷರಧಾಮದ ಮಾದರಿಯಲ್ಲಿ ಅಕ್ಕಮಹಾದೇವಿ ಕೋಟೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಅದಕ್ಕಾಗಿ ಸರ್ಕಾರ 69ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಕಲಿಗಳ ನೆಲೆ ಇದಾಗಿದೆ. ಜಾಗತಿಕ ಭೂಪಟದಲ್ಲಿ ಶಿಕಾರಿಪುರವನ್ನು ಗುರುತಿಸುವಂತೆ ಮಾಡಿದ ಅಪ್ರತಿಮ ಸಾಧಕರ, ಶರಣರ, ಮಹಾನುಭಾವರ ಪುಣ್ಯ ನೆಲ ಇದಾಗಿದೆ. ಜಾತಿ, ಮತ ಪಂಥಗಳನ್ನು ಮೀರಿದ ಶರಣರ ಮಾಹಿತಿಯನ್ನು ಜನರಿಗೆ ಪರಿಚಯಿಸುವಲ್ಲಿ 30 ಶರಣರ ಪ್ರತಿಮೆಗಳನ್ನು ಇಲ್ಲಿ ಚಿತ್ರಿಸಲಾಗಿದೆ ಎಂದ ಅವರು ಖಂಡಿತವಾಗಿಯೂ ಈ ಸ್ಥಳ ಪ್ರವಾಸಿಗರಿಗೆ ಮಾಹಿತಿ ಮತ್ತು ಸಂತಸವನ್ನು ನೀಡಲಿದೆ ಎಂದರು.

Basavaraj Bommai  ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು, ಶ್ರೀಮತಿ ಭಾರತಿಶೆಟ್ಟಿ, ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಪ್ರಸಾದ್, ಮುಖಂಡರಾದ ವಿಜಯೇಂದ್ರ, ಹೆಚ್.ಟಿ.ಬಳಿಗಾರ್, ಶ್ರೀಮತಿ ರೇಖಾಬಾಯಿ, ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಡಿ.ಟಿ.ಮೇಘರಾಜ್, ವೀರೇಂದ್ರ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಪತಿಗಳು, ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.