Friday, April 10, 2026
Friday, April 10, 2026
Home Blog Page 1278

International Women’s Day ಜನರು ಕೇಂದ್ರ ಮತ್ತು ರಾಜ್ಯಸರ್ಕಾರದ ಯೋಜನೆಗಳ ಆರ್ಥಿಕ ಸೌಲಭ್ಯ ಪಡೆಯಬೇಕು- ಮೂಕಪ್ಪ ಕರಭೀಮಣ್ಣನವರ್

0

International Women’s Day  ಶಿವಮೊಗ್ಗ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯು ಊರುಗೋಲು ಆಗಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಸದುಪಯೋಗ ಪಡಿಸಿಕೊಳ್ಳುವಲ್ಲಿ ಶಿವಮೊಗ್ಗ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅನುಕೂಲ ಪಡೆದುಕೊಂಡಿದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಉತ್ತಮ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್ ಹೇಳಿದರು.

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ, ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂದಿನ ವರ್ಷಗಳಲ್ಲಿಯೂ ಶಿವಮೊಗ್ಗ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಆರ್ಥಿಕ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಆರ್ಥಿಕ ಸೌಲಭ್ಯಗಳ ಪರಿಣಾಮಕಾರಿ ಬಳಕೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು. ಉದ್ಯಮ ಕ್ಷೇತ್ರದಲ್ಲಿಯೂ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿ ಎಚ್.ಎಂ.ಸುರೇಶ್ ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಯಶಸ್ಸು ಸಾಧಿಸುತ್ತಿದ್ದು, ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಜನರಿಗೆ ಸ್ಫೂರ್ತಿ ಸಿಗುತ್ತದೆ. ಮಹಿಳೆಯರು ಸಾಧಕರ ಜೀವನಗಾಥೆ ಅರಿತುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

ಮಹಿಳೆಯರಿಗೆ ಕಾನೂನು ಸಮಾನ ಅವಕಾಶ ನೀಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಹಕಾರ ಒದಗಿಸುವ ಕೆಲಸ ಮಾಡುತ್ತಿವೆ. ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಹೊಸ ಆಲೋಚನೆಗಳ ಮೂಲಕ ಉದ್ಯಮಗಳನ್ನು ಆರಂಭಿಸಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.

International Women’s Day ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಯಾದರೆ ಕುಟುಂಬವು ಆರ್ಥಿಕವಾಗಿ ಶಕ್ತವಾಗುತ್ತದೆ. ಇದರಿಂದ ಗ್ರಾಮ, ಪಟ್ಟಣ, ನಗರ, ಜಿಲ್ಲೆ, ರಾಜ್ಯದ ಅಭಿವೃದ್ಧಿ ಆಗುತ್ತದೆ. ಮಹಿಳೆಯರು ಇಲಾಖೆ ವತಿಯಿಂದ ಸಿಗುವ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಅವರು ಹಾಸ್ಯ ಭಾಷಣ ನಡೆಸಿಕೊಟ್ಟರು. ಲಕ್ಷ್ಮಣ್ ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡೊಳ್ಳು ಕುಣಿತ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ಕಲಾವಿದೆ ವಿಜಯಲಕ್ಷ್ಮೀ, ಮಹಿಳಾ ಉದ್ಯಮಿ ಸರೋಜಾ, ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ, ಇಲಾಖೆಯ ಸಮನ್ವಯ ಕಾಶಿ, ಡಾ. ದೇವೆಂದ್ರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Adichunchanagiri Institute ಆದಿಚುಂಚನಗಿರಿ ಸಂಸ್ಥೆಯಲ್ಲಿ ಓದುವುದು ವಿದ್ಯಾರ್ಥಿಗಳ ಪುಣ್ಯ- ಪಿ.ನಾಗರಾಜ್

Adichunchanagiri Institute ರಾಜ್ಯ ವ್ಯಾಪಿ ವಿದ್ಯಾಸಂಸ್ಥೆಗಳ ಮೂಲಕ ಎಲ್ಲಾ ವರ್ಗದ ಮಕ್ಕಳಿಗೂ ಸೂಕ್ತ ಸಮರ್ಥವಾದ ಶಿಕ್ಷಣ ನೀಡುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇಲ್ಲಿಯವರೆಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ, ಕ್ರೀಡೆ ಮೊದಲಾದ ವಿಷಯಗಳಿಗೂ ಅತಿ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ.ಇಂತಹ ವಿದ್ಯಾಸಂಸ್ಥೆಯಲ್ಲಿ ಓದುವುದು ನಿಮ್ಮ ಪುಣ್ಯ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಪಿ ಅವರು ಹೇಳಿದರು.

ಶಿವಮೊಗ್ಗದ ಗುರುಪುರದ ಬಿಜಿಎಸ್ ಶಾಲೆಯ ಸಭಾಭವನದಲ್ಲಿ ನಡೆದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ )ಶಿವಮೊಗ್ಗ ಶಾಖೆಯ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುರುಪುರ, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶರಾವತಿ ನಗರ ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಶರಾವತಿ ನಗರ ಶಿವಮೊಗ್ಗ ಹಾಗೂ ಬಿಜಿಎಸ್ ವಸತಿಯುತ ಪ್ರೌಢಶಾಲೆ ಶರಾವತಿ ನಗರ, ಶಿವಮೊಗ್ಗ ಇವರ ಸಹಯೋಗದೊಂದಿಗೆ. 2022 — 23 ನೇ ಸಾಲಿನ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗಾಗಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಗುರುಪುರದ ಬಿಜಿಎಸ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದು, ಶಾಲೆಯ ಮಕ್ಕಳ ಶಾರದಾ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯು ರಾಜ್ಯ ವ್ಯಾಪಿ,625 ಮತ್ತು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ ಶಿಕ್ಷಣ ಸಂಸ್ಥೆಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಪರೀಕ್ಷೆಯ ವಿಷಯದಲ್ಲಿ ಮಕ್ಕಳು ಗಾಬರಿಯಾಗುವುದು ಬೇಡ ಯಾವುದೇ ಒತ್ತಡ ಇಲ್ಲದೆ ಮುಕ್ತವಾಗಿ ಕಲಿತದ್ದನ್ನು ಸಮರ್ಪಕವಾಗಿ ಬರೆದು ಬನ್ನಿ, ಅಂಜಿಕೆ ಇಟ್ಟುಕೊಳ್ಳದಿರಿ ಪರೀಕ್ಷೆ ಎಂಬುದು ನೀವು ಮಾಡಿದ ಕಲಿಕೆಯ ಫಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಇಂದಿನ ದಿನಮಾನಗಳಲ್ಲಿ ಶಿಕ್ಷಣ ಪಡೆಯುವುದು ಕಷ್ಟದ ವಿಷಯವೇನಲ್ಲ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಕ್ಲಿಷ್ಟ ಹಾಗೂ ಕಠೋರ ಎನಿಸುತ್ತಿದ್ದವು ಅಂತಹುದರಲ್ಲೇ ನಾನು ಸಹ ಜಯಿಸಿ ಬಂದೆ ಎಂದು ತಮ್ಮ ಬದುಕಿನ ವಿವರಣೆಯೊಂದಿಗೆ ಮಕ್ಕಳಿಗೆ ಸವಿಸ್ತಾರವಾಗಿ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ಆದಿಚುಂಚನಗಿರಿ ಸಂಸ್ಥೆಯು ಅತ್ಯಂತ ವ್ಯವಸ್ಥಿತವಾದ ಕಲಿಕೆಗೆ ಹಾಗೂ ಸಂಸ್ಕಾರದ ಬದುಕು ರೂಪಿತವಾಗಲು ಪೂರಕವಾದ ಎಲ್ಲಾ ಬಗೆಯ ವಾತಾವರಣವನ್ನು ಸೃಷ್ಟಿಸಿದೆ. ಪರೀಕ್ಷೆಯ ಈ ಸಂದರ್ಭದಲ್ಲಿ ಅನಗತ್ಯವಾಗಿ ಗಾಬರಿಯಾಗದೆ ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗುವ ಜೊತೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಇಲ್ಲಿಯವರೆಗೆ ನಿಮಗೆ ಶಿಕ್ಷಕರು ಕಲಿಸಿರುವ ಕಲಿಕೆಯನ್ನು ಮನದಲ್ಲಿಟ್ಟುಕೊಂಡು ಪ್ರಶಾಂತವಾಗಿ ಪರೀಕ್ಷೆಯನ್ನು ಎದುರಿಸಿ, ಶಾಲೆಗೆ,ಶಿಕ್ಷಕರಿಗೆ, ಪೋಷಕರಿಗೆ ಗೌರವ ತರುವಂತಹ ಕೆಲಸ ಮಾಡಿ ಎಂದು ಮಕ್ಕಳಿಗೆ ತಿಳಿ ಮಾತು ಹೇಳಿದರು.

Adichunchanagiri Institute ಎರಡು ದಿನಗಳ ಹಿಂದೆ ನಡೆದಂತಹ ಪರೀಕ್ಷಾ ಕೇಂದ್ರದ ಅದಲು ಬದಲು ಘಟನೆಯ ಬಗ್ಗೆ ಸವಿಸ್ತಾರವಾದ ಕಥೆಯ ರೂಪದಲ್ಲಿ ಮಾಹಿತಿ ನೀಡಿದ ಶ್ರೀಗಳು ಅಂದು ಮಗು ಮತ್ತು ಪೋಷಕ ಮಾಡಿದ ತಪ್ಪಿನಿಂದಾಗಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆಯಾಗಿದ್ದಾಗ, ಅಲ್ಲಿನ ಪೊಲೀಸ್ ಅಧಿಕಾರಿ ಒಬ್ಬರು ಕೇವಲ 20 ನಿಮಿಷದಲ್ಲಿ ಮಗುವಿನ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಬಂದ ಘಟನೆಯನ್ನು ತಿಳಿಸುವ ಮೂಲಕ ಪೋಷಕರು ಸಹ ಮಗುವಿನ ಪರೀಕ್ಷಾ ಕೇಂದ್ರ, ಪ್ರವೇಶ ಪತ್ರ, ನೀರು,ಪರೀಕ್ಷೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಜಾಗೃತಿ ವಹಿಸಿ ಮಗುವಿಗೆ ಖುಷಿಯ ಮಾತನಾಡಿ ಸಂತೋಷದಿಂದ ಪರೀಕ್ಷೆ ಬರೆಯಲು ಕಳುಹಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜ್ ಪಿ. ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ಕೊಳಿಗೆ ಡಿ ವಾಸಪ್ಪ ಗೌಡ, ಶ್ರೀ ಸತೀಶ್ ಡಿ. ವಿ. ಯವರು, ಭದ್ರಾವತಿ ಶಾಖೆಯ ಎಸ್ ಎ ವಿ ಶಾಲಾ – ಕಾಲೇಜಿನ ಆಡಳಿತಾಧಿಕಾರಿಗಳಾದ ಶ್ರೀ ಜಗದೀಶ್ ಪಿ., ಸಂಸ್ಥೆಯ ಪ್ರಾಂಶುಪಾಲರುಗಳಾದ ಶ್ರೀಮತಿ ಹೇಮಾ ಎಸ್.ಆರ್., ಶ್ರೀ ಸುರೇಶ್ ಎಸ್. ಹೆಚ್. ಹಾಗೂ ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್, ಇಂಜಿನಿಯರ್ ಬಸವರಾಜ್ ಹಾಗೂ ಸಂಸ್ಥೆಯ ಅಧ್ಯಾಪಕರುಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shree Navachandika Yaga ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ಶ್ರೀನವಚಂಡಿಕಾ ಯಾಗ

0

Shree Navachandika Yaga ಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಾ.20ರಂದು ಬೆಳಿಗ್ಗೆ 9 ರಿಂದ 1 ರವರೆಗೆ ಜನರ ಸುಖ-ಶಾಂತಿ-ನೆಮ್ಮದಿ ಮತ್ತು ದೇಶದ ಸರ್ವಾಭಿವೃದ್ಧಿಗಾಗಿ ಸಂಕಲ್ಪಿಸಿ ಶ್ರೀನವಚಂಡಿಕಾಯಾಗವನ್ನು ನೆರವೇರಿಸಲಾಗುತ್ತಿದೆ.

Shree Navachandika Yaga ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಧಾನ ಅರ್ಚಕರಾದ ವಿದ್ವಾನ್ ಶಂಕರಾನಂದ ಜೋಯ್ಸ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9448525103.7411317093. ಸಂಪರ್ಕಿಸಬಹುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

SDMC ಎಸ್ಡಿಎಂಸಿ ಮತ್ತು ಮುಖ್ಯಶಿಕ್ಷಕರ ಹೆಸರಲ್ಲಿ ಬ್ಯಾಂಕ್ ನಲ್ಲಿ ಜಂಟಿಖಾತೆ ತರೆಯದಿರಲು ಒತ್ತಾಯ

0

SDMC ಚಿಕ್ಕಮಗಳೂರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯುವ ಇಲಾಖೆಯ ಆದೇಶವನ್ನು ಹಿಂಪಡೆದು ಮೊದಲಿದ್ದ ಆದೇಶವನ್ನು ಮುಂದುವರೆ ಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಕ್ಷರ ದಾಸೋಹ, ಬಿಸಿಯೂಟ ಕಾರ್ಯಕರ್ತೆಯರ ಫೆಡರೇಷನ್ (ಎಐಟಿ ಯುಸಿ) ಸಮಿತಿ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಒತ್ತಾಯಿಸಿದರು.

SDMC  ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ರಘು, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ತಾಲ್ಲೂಕು ಅಧ್ಯಕ್ಷೆ ಇಂದುಮತಿ, ಉಪಾಧ್ಯಕ್ಷ ನಾಗಮಣಿ, ಅಜ್ಜಂಪುರ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಸುನಂದ, ಕಡೂರು ಕಾರ್ಯದರ್ಶಿ ಸ್ವಪ್ನ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

krushimela Navule ಸಮಗ್ರ ಕೃಷಿಯೊಂದಿಗೆ ಉದ್ಯಮಶೀಲತೆ ಬೆಳಿಸಿಕೊಳ್ಳಬೇಕು : ಸಿ.ವಾಸುದೇವಪ್ಪ

0

krushimela Navule ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಸಿ.ವಾಸುದೇವಪ್ಪ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಮಾ.17 ರಿಂದ 20 ರವರೆಗೆ ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮತ್ತು ತೋಟಗಾರಿಕೆ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

krushimela Navule ಹೊಸ ಆವಿಷ್ಕಾರಗಳು, ವೈಜ್ಞಾನಿಕತೆ, ವಿವಿಧ ತಳಿಗಳು, ಕೀಟ, ರೋಗ ನಿಯಂತ್ರಣ, ಮಣ್ಣು ನಿರ್ವಹಣೆ, ಸಾವಯವ ಕೃಷಿ ಜೊತೆಗೆ ಸಮಗ್ರ ಕೃಷಿ ಪರಿಚಯವನ್ನು ಈ ಕೃಷಿ ಮೇಳ ಮಾಡಿಕೊಡುತ್ತಿದೆ. ಮೊದಲು ಶಿವಮೊಗ್ಗದಲ್ಲಿ ಎಲ್ಲಿ ನೋಡಿದರಲ್ಲಿ ಭತ್ತದ ಹಸಿರು ಕಾಣುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಲಾಭದ ಉದ್ದೇಶದಿಂದ ಅಡಿಕೆ ಮತ್ತು ಪ್ಲಾಂಟೇಷನ್ ಕಡೆ ವಾಲುತ್ತಿದ್ದು, ಆಹಾರ ಧಾನ್ಯ ನಿರ್ಲಕ್ಷಿಸಲಾಗುತ್ತಿದೆ. ಅಡಿಕೆಗೆ ಮೌಲ್ಯವರ್ಧನೆ ಮಾಡಲು ಅನೇಕ ಅವಕಾಶ ಇರುವುದರಿಂದ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ.

ಈಗ ತೋಟಗಾರಿಕಾ ಬೆಳೆಗಳು ಮುಂಚೂಣಿಯಲ್ಲಿದ್ದು 333 ಬಿಲಿಯನ್ ಟನ್‍ಗಳಷ್ಟು ತೋಟಗಾರಿಕೆ ಉತ್ಪನ್ನವಾಗುತ್ತಿದೆ. ಪ್ರತಿ ಮನೆಗಳಲ್ಲಿ ಹಣ್ಣು ಹಂಪಲುಗಳನ್ನು ಇದರಿಂದಾಗಿ ಕಾಣಬಹುದಾಗಿದೆ.

ರೈತರ ಉತ್ಪಾದನೆಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಜೊತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಹರಿಸಬೇಕು. ಯಾವುದೇ ಉತ್ಪನ್ನವನ್ನು ಮೌಲ್ಯವರ್ಧಿಸುವ ಕುರಿತು ಗಮನ ಹರಿಸಬೇಕು. ಮೌಲ್ಯ ಕೊಂಡಿ ವ್ಯವಸ್ಥೆಯನ್ನು ಅಳವಡಿಕೊಳ್ಳವುದರೊಂದಿಗೆ ಶೇಖರಣೆಗೆ ಹೆಚ್ಚಿನ ಒತ್ತು ನೀಡಿ, ವ್ಯಾವಹಾರಿಕ ಜ್ಞಾನ ಇಟ್ಟುಕೊಂಡು ಬೆಳೆಗಳನ್ನು ಬೆಳೆಯಬೇಕು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹಲವಾರು ಪ್ರಯತ್ನಗಳು ಆಗುತ್ತಿವೆ. ಎನ್‍ಇಪಿ ಯಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಆಗುವ ಅನಕೂಲಗಳ ಬಗ್ಗೆ ಚಿಂತನೆ ನಡೆಸಬೇಕು. ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.

ರೈತ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ಮಂಚಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಂತ್ರಿಕತೆ ಉತ್ತುಂಗಕ್ಕೇರುತ್ತಿದೆ. ಸಂಪನ್ಮೂಲ ಹೆಚ್ಚಿದೆ, ಆದರೂ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ಇಲ್ಲದೆ ಕೃಷಿ ಉತ್ಪನ್ನಗಳ ಮಾರಾಟ ಕಡಿಮೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೃಷಿ ಮೇಳ ಮತ್ತು ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿ ಅವರ ಅಂತಃಶಕ್ತಿ ವೃದ್ದಿಸುವ ಕೆಲಸ ಆಗಬೇಕು.

ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಮಣ್ಣಿನ ಮಹತ್ವ ಹಾಗೂ ಮಣ್ಣಿನಲ್ಲಿನ ಸೂಕ್ಷ್ಮ ಜೀವಿಯ ಬಗ್ಗೆ ರೈತರಿಗೆ ಜ್ಞಾನ ನೀಡಬೇಕು. ಶೇ.83 ರಷ್ಟು ಅತಿ ಸಣ್ಣ ರೈತರಿದ್ದು, ಸ್ವಲ್ಪ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ, ಸಾವಯ ಕೃಷಿ ಬಗ್ಗೆ ಹೆಚ್ಚಿನ ಗಮನ ನೀಡುವಂತಾಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಆರ್.ಸಿ ಜಗದೀಶ್ ಮಾತನಾಡಿ, ಪ್ರಸಕ್ತ ಸಾಲನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದು, ಅತ್ಯಂತ ಮಹತ್ವದ ವರ್ಷವಾಗಿದೆ. ನೈಸರ್ಗಿಕ, ಸಾವಯವ ಕೃಷಿ, ಕೃಷಿ ತಾಂತ್ರಿಕತೆ, ಗೊಬ್ಬರ, ಸಸಿ ಸೇರಿದಂತೆ ಒಂದೇ ಸೂರಿನಡಿ ರೈತರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ ಮತ್ತು ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದೆ. 6 ಕೃಷಿ ಸಂಬಂಧಿತ ಇಲಾಖೆಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ರೈತರು, ಉದ್ದಿಮೆದಾರರು, ತಜ್ಞರು, ವಿದ್ಯಾರ್ಥಿಗಳು ಇಲ್ಲಿ ಲಭ್ಯವಿದ್ದು ಎಲ್ಲರೂ ಈ ಮೇಳದ ಪ್ರಯೋಜನ ಪಡೆಯಬೇಕು.

ಕೃಷಿ ವಿಶ್ವವಿದ್ಯಾಲಯವು 50 ಟನ್ ಜೈವಿಕ ಗೊಬ್ಬರ ಮತ್ತು ಕೀಟನಾಶಕವನ್ನು ರೈತರಿಗೆ ನೀಡುತ್ತಿದೆ. 1.5 ಲಕ್ಷ ಸಸಿಗಳು ಮಾರಾಟಕ್ಕೆ ಇಲ್ಲಿ ಲಭ್ಯವಿದೆ. 14 ಸಾವಿರ ಟನ್ ಬೀಜಗಳು ವಿವಿಧ ಕೇಂದ್ರಗಳಲ್ಲಿ ಮಾರಾಟಕ್ಕೆ ಸಿದ್ದವಿದೆ. ರಾಗಿ, ಭತ್ತ, ಶೇಂಗಾ ಮತ್ತು ಸಿರಿಧಾನ್ಯಗಳ ತಳಿಗಳು ಲಭ್ಯವಿದೆ. ಪ್ರತಿವರ್ಷ ವಿಶ್ವವಿದ್ಯಾಲಯವು 4 ಲಕ್ಷ ರೈತರಿಗೆ ವಿವಿಧ ರೀತಿಯಲ್ಲಿ ತಲುಪುತ್ತಿದೆ. ಕೃಷಿ, ಬೀಜ, ತಾಂತ್ರಿಕತೆ, ಹೊಸ ವಿಚಾರಗಳು ಇಲ್ಲಿ ಲಭ್ಯವಿದ್ದು ರೈತರು ಈ ಮೇಳದ ಸದುಪಯೋಗ ಪಡೆಯಬೇಕೆಂದರು.

ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಡಾ. ಹೆಚ್ ಎಲ್ ಹರೀಶ್, ಪ್ರಗತಿಪರ ರೈತರಾದ ಬಿ. ಶಿವರಾಮ್, ಕೆ ನಾಗರಾಜ್, ದೊಡ್ಡನಗೌಡ ಸಿ ಪಾಟೀಲ್ ಮಾತನಾಡಿ ವಿವಿಧ ತಾಂತ್ರಿಕತೆಯ ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಡಾ.ಮೃತ್ಯುಂಜಯ ಸಿ ವಾಲಿ, ಡಾ.ಆರ್.ಲೋಕೇಶ್, ಡಾ.ದುಷ್ಯಂತ್ ಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಇತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Krushimela ಅದ್ದೂರಿ ಉದ್ಘಾಟನೆಗೊಂಡ ಕೃಷಿ ಮೇಳ

0

Shivamogga Krushimela ಕೃಷಿಮೇಳ ಒಂದು ಸಾಂಕೇತಿಕವಾಗಿದೆ. ರೈತರು ಹಾಗೂ ವಿಶ್ವವಿದ್ಯಾಲಯ ಒಂದುಗೂಡಿ ಹೊಸ ಜ್ಯೋತಿ ಬೆಳಗಬೇಕು. ಈ ಕೃಷಿಮೇಳ ಮೂಲಕ ಅದು ನೆರವೇರಿದೆ ಎಂದು ಪ್ರಗತಿಪರ ರೈತರು, ರಾಷ್ಟ್ರ ಪ್ರಶಸ್ತಿ ವಿಜೇತರಾಗಿರುವ ಪ್ರಕಾಶ್ ಮಂಚಾಲೆಯವರು ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಮಾ.17ರಿಂದ 20ರವರೆಗೆ ನವುಲೆ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮತ್ತು ತೋಟಗಾರಿಕೆ ಮೇಳವನ್ನ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮೇಳ ನಡೆಯುತ್ತಿರುವುದು ಉತ್ತಮ ಕಾರ್ಯ. ಇಲ್ಲಿ ಹೊಸ ಹೊಸ ಆವಿಷ್ಕಾರಗಳ ವ್ಯವಸ್ಥೆಯನ್ನು ಗಮನಿಸಬಹುದು. ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳು, ಸುಧಾರಣೆಗೆ, ಇಂತಹ ಕೃಷಿ ಮೇಳಗಳು ಅತ್ಯಗತ್ಯ ಎಂದರು.

ಈಗ ತಾಂತ್ರಿಕತೆ ಉತ್ತುಂಗಕ್ಕೆ ಹೋಗುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಲ್ಲಲ್ಲಿ ಅಭಿವೃದ್ಧಿ ಕಾಣುತ್ತಿದೆ ಅಷ್ಟೇ.. ಬೆಳೆ ಬೆಳೆದ ಪ್ರತಿಯೊಬ್ಬ ರೈತನ ಬೆಳೆಗೂ ಸೂಕ್ತ ಮಾರುಕಟ್ಟೆ ದೊರೆತಾಗಲೇ ರೈತರಿಗೆ ನೆಮ್ಮದಿ ಎಂದು ತಿಳಿಸಿದರು.

ಸಾವಯುವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಮಣ್ಣು ಮಹತ್ವ ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಜೀವಿಯ ಬಗ್ಗೆ ರೈತರಿಗೆ ಜ್ಞಾನ ನೀಡಬೇಕು. ಶೇಕಡ 83 ರಷ್ಟು ಅತಿ ಸಣ್ಣ ರೈತರಿದ್ದು, ಸ್ವಲ್ಪ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ ಸಾವಯವ ಕೃಷಿ ಬಗ್ಗೆ ಹೆಚ್ಚಿನ ಗಮನ ನೀಡುವಂತಾಗಬೇಕೆಂದರು.

ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಬಿ. ಹೇಮ್ಲಾ ನಾಯಕ್ ಪ್ರಾಸ್ತಾವಿಕ ನುಡಿಗಳ ನಾಡುತ್ತಾ,ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ಕೃಷಿ ಮೇಳ ರೈತರಿಗೆ ಹಬ್ಬದಂತಿದೆ. ಪ್ರತಿವರ್ಷವೂ ರೈತರಿಗಾಗಿ ನಮ್ಮ ತಾಂತ್ರಿಕತೆಯನ್ನು ಪರಿಚಯಿಸುವುದು. ಹೊಸ ಅನುಷ್ಕಾರಗಳ ಬಗ್ಗೆ ಮಾಹಿತಿ ನೀಡುವುದನ್ನ ನಿರಂತರವಾಗಿ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ಕೃಷಿ ಮತ್ತು ತೋಟಗಾರಿಕಾ ಮೇಳ ಪೂರಕವಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕೃಷಿ ಮೇಳ ಹಲವಾರು ರೈತರಿಗೆ ಅನುಕೂಲಕರವಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಸಿ. ವಾಸುದೇವಪ್ಪನವರು ಮಾತನಾಡಿ, ಹೊಸ ಆವಿಷ್ಕಾರಗಳು, ವಿವಿಧ ತಳಿಗಳು, ರೋಗ ನಿಯಂತ್ರಣ, ಸಾವಯವ ಕೃಷಿ ಜೊತೆಗೆ ಸಮಗ್ರ ಕೃಷಿ ಪರಿಚಯವನ್ನ ಈ ಕೃಷಿ ಮೇಳ ಮಾಡಿ ಕೊಡುತ್ತಿದೆ. ಮೊದಲೆಲ್ಲ ಶಿವಮೊಗ್ಗದಲ್ಲಿ ಎಲ್ಲಿ ನೋಡಿದರೂ ಭತ್ತದ ಹಸಿರು ಕಾಣುತ್ತಿತ್ತು. ಇತ್ತೀಚೆಗೆ ಹೆಚ್ಚಿನ ಲಾಭದ ಉದ್ದೇಶದಿಂದ ಅಡಿಕೆ ಮತ್ತು ಪ್ಲಾಂಟೇಶನ್ ಕಡೆ ರೈತರು ವಾಲುತ್ತಿದ್ದಾರೆ . ಅಡಿಕೆಗೆ ಮೌಲ್ಯವರ್ಧನೆ ಮಾಡಲು ಅನೇಕ ಅವಕಾಶ ಇರುವುದರಿಂದ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಇದರೊಂದಿಗೆ ರೈತರು ಸಮಗ್ರ ಮಾಹಿತಿಯನ್ನು ಕಲೆಹಾಕಿ, ಮೌಲ್ಯವರ್ಧಿಸುವ ಕುರಿತು ಗಮನಹರಿಸಬೇಕು ಎಂದರು.

Shivamogga Krushimela ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್. ಸಿ ಜಗದೀಶ್ ಅವರು ಮಾತನಾಡಿ, ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ರೈತರಿಗಾಗಿ ಜಾತ್ರೆಯಂತೆ ನಾವು ಆಯೋಜಿಸಿದ್ದೇವೆ. ಈ ವರ್ಷದ ಕೃಷಿ ಮತ್ತು ತೋಟಗಾರಿಕಾ ಮೇಳದ ಧ್ಯೇಯ ವಾಕ್ಯವು ಸುಸ್ಥಿರ ಆದಾಯಕ್ಕಾಗಿ – ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ ಎಂಬುದಾಗಿದೆ. ಪ್ರಸ್ತುತ ವರ್ಷವನ್ನು ಅಂತರಾಷ್ಟ್ರೀಯ ಸಿಹಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದು, ಅತ್ಯಂತ ಮಹತ್ವದ ವರ್ಷವಾಗಿದೆ . ನೈಸರ್ಗಿಕ, ಸಾವಯವ ಕೃಷಿ, ಕೃಷಿ ತಾಂತ್ರಿಕತೆ, ಗೊಬ್ಬರ, ಸಸಿ ಸೇರಿದಂತೆ ಒಂದೇ ಸೂರಿ ನಡಿ ರೈತರಿಗೆ ಅಗತ್ಯವಾದ ಎಲ್ಲಾ ರೀತಿಯ ಸಲಹೆ ಮತ್ತು ಪರಿಹಾರ ಒದಗಿಸುವ ಉದ್ದೇಶದಿಂದ ಈ ಕೃಷಿ ಮೇಳವನ್ನು ಆಯೋಚಿಸಲಾಗಿದೆ ಎಂದರು.

ನಾಲ್ಕು ದಿನಗಳು ನಡೆಯುವ ಈ ಕೃಷಿ ಮೇಳದಲ್ಲಿ, ಪ್ರಗತಿಪರ ರೈತರನ್ನ ಪರಿಚಯಿಸಲಿದ್ದೇವೆ. ಸುತ್ತಮುತ್ತಲಿನ ಏಳು ಜಿಲ್ಲೆಗಳಿಂದ ಉತ್ತಮ ಸಹಕಾರ ದೊರೆತಿದೆ.

ಮಾರ್ಚ್ 17 ರಿಂದ ಮಾರ್ಚ್ 20ರವರೆಗೆ ನಡೆಯುವ ಈ ಮೇಳದಲ್ಲಿ ಪ್ರತಿ ದಿನವೂ ವಿವಿಧ ಪ್ರಗತಿಪರ ರೈತರೊಂದಿಗೆ ಅಡಿಕೆ ಕೃಷಿಯ ಸವಾಲುಗಳು, ಸೆಕೆಂಡರಿ ಕೃಷಿ ಮತ್ತು ಮೌಲ್ಯವರ್ಧನೆ, ಸಿಹಿ ಧಾನ್ಯಗಳ ಮಹತ್ವ ಮತ್ತು ಸಂಗ್ರಹ ಕೃಷಿ ಪದ್ಧತಿಗಳು, ಹೀಗೆ ವಿವಿಧ ಕೃಷಿ ಸಂಬಂಧಿತ ವಿಚಾರವಾಗಿ ಸಂವಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ವೇದಿಕೆಯಲ್ಲಿ ವಿವಿಧ ತಾಂತ್ರಿಕತೆಯ ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶ್ರೀ ದೊಡ್ಡೇಗೌಡ ಸಿ. ಪಾಟೀಲ್, ಕೃಷಿ ವಿಶ್ವವಿದ್ಯಾಲಯದ ಡಾ. ಎಚ್. ಎಲ್. ಹರೀಶ್, ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು , ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagaluru ಕಾರಾಗೃಹ ಬಂದಿಗಳ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹನ ಕಾರ್ಯಕ್ರಮ

0

Chikmagaluru  ಚಿಕ್ಕಮಗಳೂರು, ನಗರ ಹೊರವಲಯದ ಜಿಲ್ಲಾ ಕಾರಾಗೃಹದಲ್ಲಿ ಮಕ್ಕಳ ರಕ್ಷಣಾ ನಿರ್ದೇಶ ನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾನೂನು ಸೇವಾ ಪ್ರಾಧಿಕಾರ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಂಯುಕ್ತಾಶ್ರದಲ್ಲಿ ‘ಕಾರಾಗೃಹ ಬಂಧಿಗಳ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಧನಸಹಾಯ ಕಾರ್ಯ ಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ ಉದ್ಘಾಟಿಸಿದರು.

Chikmagaluru  ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ರಂಗನಾಥ್, ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿ, ಜೈಲರ್ ಎಂ.ಕೆ.ನೆಲಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagaluru ಹರಿಹರದಹಳ್ಳಿಯಲ್ಲಿ ಪಂಚಾಯತಿ ಕಚೇರಿ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ದೂರು

0

Chikmagaluru  ಚಿಕ್ಕಮಗಳೂರು, ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಓ ಹಾಗೂ ಗ್ರಂಥಾಲಯದ ಮೇಲ್ವಿಚಾರಕಿ ಕಚೇರಿಯಲ್ಲಿ ಇರದಿರುವ ಪರಿಣಾಮ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕುರುಬರಹಳ್ಳಿ ಗ್ರಾಮದ ಕೆ.ಎ.ದಿನೇಶ್ ಜಿ.ಪಂ.ಗೆ ಗುರುವಾರ ದೂರು ಸಲ್ಲಿಸಿದರು.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ದೂರ ಸಲ್ಲಿಸಿ ಮಾತನಾ ಡಿದ ಅವರು ಕಳೆದ ಒಂದು ತಿಂಗಳಿನಿಂದ ಪಿಡಿಓ ಹಾಗೂ ಮೇಲ್ವಿಚಾರಕರುಗಳು ರಜೆಯನ್ನು ಹಾಕಿರುವುದಿಲ್ಲ. ಇನ್ನುಳಿದ ಸಿಬ್ಬಂದಿಗಳು ಸಹ ಯಾವುದೇ ಮಾಹಿತಿ ನೀಡದೇ ಕರ್ತವ್ಯ ದ್ರೋಹವೆಸಗಲಾಗುತ್ತಿದೆ ಎಂದರು.

Chikmagaluru ಆದ್ದರಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕರ್ತವ್ಯಲೋಪವೆಸಗಿರುವ ಪಿಡಿಓ ಹಾಗೂ ಮೇಲ್ವಿಚಾರಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikmagalur ಗಿರಿಜನ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರಿನ ಏಂಜಲ್ಸ್ ಮತ್ತು ಸೈಂಟ್ ಮೆರಿಸ್ ಶಾಲೆಯಲ್ಲಿ ಪ್ರವೇಶಕ್ಕೆ ಮನವಿ

0

Chikmagalur  ಗಿರಿಜನ ಇಲಾಖೆಯಿಂದ ಆಯ್ಕೆ ಮಾಡುವ ಪರಿಶಿಷ್ಟ ಪಂಗಡದ ಪ್ರತಿಭಾ ವಂತ ಬಡ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರು ತಾಲ್ಲೂಕಿನ ಸೆಂಟ್ ಮೇರಿಸ್ ಮತ್ತು ಸಾಯಿ ಏಂಜಲ್ಸ್ ಶಾಲೆಯಲ್ಲಿ ಪ್ರಸ್ತಕ ಸಾಲಿನಿಂದ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಳಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕರ ಯುವಕರ ಸಂಘವು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ಗಿರಿಜನ ಯೋಜನಾ ಅಭಿವೃದ್ದಿ ಇಲಾಖೆ ವತಿಯಿಂದ ಪ.ಪಂಗಡದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡುವ ಪ್ರತಿಷ್ಟಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಲು ತಾಲ್ಲೂಕಿನ ಶಾಲೆಗಳಾದ ಸೆಂಟ್ ಮೇರಿಸ್ ಮತ್ತು ಸಾಯಿ ಏಂಜಲ್ಸ್ ಶಾಲೆಗಳನ್ನು ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಪ.ಪಂ ಗಡದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Chikmagalur ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಈ ಎರಡು ಪ್ರತಿಷ್ಟಿತ ಶಾಲೆಗಳನ್ನು 2023-24ನೇ ಪ್ರಸಕ್ತ ಸಾಲಿನಿಂದ ಸೇರಿಸುವ ಮೂಲಕ ಪ.ಪಂಗಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಮಧುಕುಮಾರ್, ಗೌರವಾಧ್ಯಕ್ಷ ಜಗದೀಶ್ ಪ್ರಸಾದ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಪ್ರದೀಪ್, ಗೌರವಾಧ್ಯಕ್ಷ ವಿಜಯಕುಮಾರ್ ಮತ್ತಿತರರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

C. T. Ravi ಸಿ.ಟಿ‌.ರವಿ‌ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ವ್ಯಾಪಕ ಅಸಮಾಧಾನ

0

C. T. Ravi ಸತತವಾಗಿ ಕ್ಷೇತ್ರದಲ್ಲಿ 4 ಬಾರಿ ವೀರಶೈವ ಲಿಂಗಾಯಿತ ಸಮು ದಾಯದ ಸಹಕಾರದೊಂದಿಗೆ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಸಿ.ಟಿ.ರವಿ ಅವರು ಇದೀಗ ಜನಾಂಗದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿಕೆ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ತಾಲ್ಲೂಕು ಸಂಚಾಲಕ ಯು.ಎಸ್.ಹೇಮಂತ್‌ಕುಮಾರ್ ಖಂಡಿಸಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಲಿಂಗಾಯಿತ ಸಮುದಾಯವು ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ. ಹಾಗೂ ಯಡಿಯೂರಪ್ಪ ನವರು ಸಹ ಹೈಕಮಾಂಡ್ ಆದೇಶವನ್ನು ಪಾಲಿಸಬೇಕು ಎಂದು ಅವಹೇಳನಕಾರಿ ಹೇಳಿಕೆ ನೀಡಿ ಸಮುದಾಯ ವನ್ನು ನಿಂದಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.

ಸಮುದಾಯದ ನಾಯಕ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಬಳಸಿಕೊಂಡು ಇಪ್ಪತ್ತು ವರ್ಷಗಳ ಕಾಲ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯವನ್ನು ಓಲೈಸಿ ಮತ ಪಡೆದುಕೊಂಡು ಈಗ ಆ ಸಮುದಾ ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಸರಿಯೇ ಎಂದ ಅವರು ಇದೇ ರೀತಿ ಮುಂದುವರೆದಲ್ಲಿ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯವು ಬಿಜೆಪಿಯನ್ನು ಪರಾಭವಗೊಳಿಸಲು ಸನ್ನದ್ದರಾಗವಾಗಲಿದೆ ಎಂದಿದ್ದಾರೆ.

C. T. Ravi ಶಾಸಕ ರವಿಯವರು ಪಕ್ಷನಿಷ್ಟೆಯಿಂದ ಎಲ್ಲವನ್ನು ನಿಭಾಯಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ವೀರಶೈವ ಸಮುದಾಯವನ್ನು ತುಳಿಯುವ ಹೇಳಿಕೆ ನೀಡ ನೀಡಿರುವುದು ನಿಮ್ಮ ಸಂಸ್ಕೃತಿಯೇ. ರಾಜಕೀಯವಾಗಿ ಬೆಳೆಯುವ ಸಂದರ್ಭದಲ್ಲಿ ಸಮುದಾಯವನ್ನು ಬಳಸಿಕೊಂಡು ಇದೀಗ ಬೆಳೆದ ನಂತರ ಆ ಜನಾಂಗಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಕೂಡಲೇ ಶಾಸಕ ಸಿ.ಟಿ.ರವಿ ಅವರು ವೀರಶೈವ ಸಮುದಾಯ ಹಾಗೂ ಯಡಿಯೂರಪ್ಪ ಅವರ ವಿರುದ್ಧ ನೀಡಿರುವ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯಿತ ಸಮುದಾಯವು ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.