Women’s Day ಶಿವಮೊಗ್ಗ :- ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ನಗರದ ಕುವೆಂಪು ರಸ್ತೆಯಲ್ಲಿನ ಗುತ್ತಿ ನರ್ಸಿಂಗ್ ಹೋಂ ಎದುರಿನ ಪಂಚಮಿ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರದಲ್ಲಿ ಮಾ. 18ರ ನಾಳೆ ಸಂಜೆ 5ರಿಂದ 8ಗಂಟೆವರೆಗೆ ಉತ್ಕಟಸ್ಥಿತಿಯ ಖಾಯಿಲೆಗೆ ಸಂಬಂಧಿಸಿದಂತೆ ಚಿಕಿತ್ಸೆ ಹಾಗೂ ರೋಗಿಗಳೊಂದಿಗೆ ಸಮಾಲೋಚನೆ ಆಯೋಜಿಸಲಾಗಿದೆ.
ಮುಟ್ಟಿನ ಸಮಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ಚರ್ಚೆ, ಔಷಧಿ, ಯೋಗ, ಮುದ್ರೆ ಹಾಗೂ ಆಧ್ಯಾತ್ಮಿಕ ಚಿಂತನೆ ಮೂಲಕ ಹೇಗೆ ನಮ್ಮನ್ನು ನಾವು ಬೊಜ್ಜು, ಆತಂಕ, ಮೂಳೆ ನೋವು, ಖಿನ್ನತೆ ಸೇರಿದಂತೆ ಇತರೆ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಂವಾದ ನಡೆಯಲಿದೆ.
ಅನುಭವಿ ವೈದ್ಯರುಗಳಾದ ಡಾ. ಕಾಂಚನ ಕುಲಕರ್ಣಿ, ಡಾ. ಆಶಾ, ಡಾ.ಚೈತ್ರ ರೋಗಿಗಳಿಗೆ ಎಲ್ಲಾ ಮಾಹಿತಿ ಹಾಗೂ ಚಿಕಿತ್ಸೆ ಕುರಿತು ಆಪ್ತ ಸಮಾಲೋಚನೆ ನಡೆಸಲಿದ್ದಾರೆ. ಯೋಗ ಮತ್ತು ಮುದ್ರಾ ತೆರಾಪಿ ಬಗ್ಗೆ ಆರುಣಾ ಸಿ. ಅವರು ತಿಳಿಸಲಿದ್ದಾರೆ.
Women’s Day ಪದ್ಮಾವತಿ ಅವರು ಉನ್ನತಿ ಹೀಲಿಂಗ್ ಚಿಕಿತ್ಸೆ ನೀಡಲಿದ್ದಾರೆ. ಮುಟ್ಟಿನ ಸಮಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಮೊದಲು ನೊಂದಾಯಿಸಿದ 30ಜನ ಸದಸ್ಯರಿಗೆ ಮಾತ್ರ ಅವಕಾಶವಿದೆ. ಕೂಡಲೇ ಹೆಸರು ನೊಂದಾಯಿಸಲು ಹಾಗೂ ಮಾಹಿತಿಗೆ ಮೊ.9900595955ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Congress party ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 20 ಹೊಸಮನೆ ಬಡಾವಣೆಯ ಬೂತ್ ನಂಬರ್ 74 ರಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಘೋಷಣೆಯಾದ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಹಾಗೂ 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಕಾರ್ಡ್ ಗಳನ್ನು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.
ಮನೆ ಮನೆಗೆ ತೆರಳಿ ಕಾರ್ಡ್ ವಿತರಣೆ ಮಾಡುತ್ತಾ ಜನತೆಯೊಂದಿಗೆ ಮಾತನಾಡಿದ ರೇಖಾ ರಂಗನಾಥ್ ರವರು ಕಾಂಗ್ರೆಸ್ ಪಕ್ಷದಿಂದ ಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಪಕ್ಷದ ಪ್ರಣಾಳಿಕೆಯಾದ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿಗಳು ಹಾಗೂ ಇನ್ನೂರು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು ಇದು ಭರವಸೆಯಲ್ಲ ಇದು ಬಡವರ ಬದುಕಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಎಂದು ತಿಳಿಸಿದರು.
Congress party ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ .ಪಿ.ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನ ಕಾಂಗ್ರೆಸ್ ನ ಉಪಾಧ್ಯಕ್ಷ ಕೆ ಎಲ್ ಪವನ್, ಹೊಸಮನೆ ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಧನಲಕ್ಷ್ಮಿ ರೇಣುಕಮ್ಮ ಹಾಗೂ ಇತರರು ಇದ್ದರು.
Book Your Advertisement Now. Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
EPFO Pension ಇಪಿಎಫ್‍ಒ ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಸಂಬಂಧಿಸಿದ ಅರ್ಜಿ ಅವಧಿಯನ್ನು ಮೇ 03 ರವರೆಗೆ ವಿಸ್ತರಿಸಲಾಗಿದೆ.
2014 ರ ಸೆಪ್ಟೆಂಬರ್ 01 ರ ಮೊದಲು ನಿವೃತ್ತರಾದ ಮತ್ತು ನಿವೃತ್ತಿಯ ಮೊದಲು ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಆಯ್ಕೆಯನ್ನು ಚಲಾಯಿಸಿದ ನೌಕರರು ಹೆಚ್ಚಿನ ವೇತನದ ಮೇಲೆ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿರುವನ್ವಯ ದಿನಾಂಕ: 29-12-2022 ಮತ್ತು 05-01-2023 ರ ಸುತ್ತೋಲೆ ಮೂಲಕ ಸೂಚನೆಗಳನ್ನು ನೀಡಲಾಗಿದೆ.
ದಿನಾಂಕ:01-09-2014 ರ ಮೊದಲು ನಿವೃತ್ತರಾದ ಮತ್ತು ಅವರ ನಿವೃತ್ತಿಯ ಮೊದಲು ಜಂಟಿ ಆಯ್ಕೆಗಳನ್ನು ಚಲಾಯಿಸಿದ ಉದ್ಯೋಗಿಗಳಿಗೆ ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಆನ್‍ಲೈನ್ ಸೌಲಭ್ಯವನ್ನು ಇಪಿಎಫ್‍ಓ ವೆಬ್‍ಸೈಟ್‍ನಲ್ಲಿ ದಿನಾಂಕ: 03-03-2023 ರವರೆಗೆ ಒದಗಿಸಲಾಗಿದೆ.
EPFO Pension ಈಗ ಉದ್ಯೋಗಿಗಳ/ಉದ್ಯೋಗದಾತರ ಸಂಘಗಳ ಬೇಡಿಕೆಯ ಮೇರೆಗೆ ಗೌರವಾನ್ವಿತ ಅಧ್ಯಕ್ಷರು, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಅಂತಹ ಉದ್ಯೋಗಿಗಳಿಂದ ಜಂಟಿ ಆಯ್ಕೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಸಮಯವನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Power Problem: ದಿನಾಂಕ 18.03.2023 ರಂದು ಬೆಳಗ್ಗೆ 11:00 ಘಂಟೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 5ನೇ ವಿದ್ಯುತ್ ಅದಾಲತ್ ನಡೆಯಲಿದೆ.
ಶಿವಮೊಗ್ಗ ಜಿಲ್ಲೆಯ ಈ ಕೆಳಕಾಣಿಸಿದ ಹಳ್ಳಿಗಳಲ್ಲಿ ವಿದ್ಯುತ್ ಅದಾಲತ್ ವ್ಯವಸ್ಥೆ ಮಾಡಲಾಗಿದೆ. ಈ ಅದಾಲತ್‍ನಲ್ಲಿ ಮೆಸ್ಕಾಂನ ಹಿರಿಯ ಅಧಿಕಾರಿಗಳು ಭೇಟಿ ನೀಡಲಿರುವರು.
Power Problem: ಶಿವಮೊಗ್ಗ ತಾಲೂಕಿನ- ಬಿ.ಬೀರನಹಳ್ಳಿ, ಸೇವಾಲಾಲ್ ದೇವಸ್ಥಾನ ಚನ್ನಹಳ್ಳಿ ಗ್ರಾಮ. ತೀರ್ಥಹಳ್ಳಿ ತಾಲೂಕಿನ- ನಾಲೂರು, ಮಂಡಗದ್ದೆ. ಭದ್ರಾವತಿ ತಾಲೂಕಿನ- ಹೊಸಹಳ್ಳಿ, ಮಂಗೋಟೆ. ಸಾಗರ ತಾಲೂಕಿನ ಕಲ್ಮನೆ, ಎಸ್ ಎಸ್ ಬೋಗ್. ಸೊರಬ ತಾಲೂಕಿನ – ಬಿಳವಾಣಿ, ತಲಗಡ್ಡೆ. ಹೊಸನಗರ ತಾಲೂಕಿನ- ಯಡೂರು. ಶಿಕಾರಿಪುರ ತಾಲೂಕಿನ- ಅರಷಿಣಗೆರೆ , ಚಿಕ್ಕಜಂಬೂರು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Shivamogga City Corporation ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 19/03/2023 ರ ಭಾನುವಾರದಂದು 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ “ಕಾಶೀಪುರ ಕೆನರಾ ಬ್ಯಾಂಕ್ ಎದುರು, ನೇತಾಜಿ ಸರ್ಕಲ್ ಆಟೋ ಸ್ಟ್ಯಾಂಡ್ ಹತ್ತಿರ, ಓ.ಟಿ.ರಸ್ತೆಯ ಪರಿಚಯ ಸ್ಟೊರ್ಸ್ ಹತ್ತಿರ, ಹರಿಗೆ ಗಣಪತಿ ದೇವಸ್ಥಾನದ ಹತ್ತಿರ, ಪೊಲೀಸ್ ಚೌಕಿ ಹತ್ತಿರ ವಿನೋಬನಗರ, ಶಿವಮೊಗ್ಗಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.
Shivamogga City Corporation ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
5th and 8th Board Exam ಮಾರ್ಚ್ 27ರಿಂದ ಏ. 1ರವರಿಗೆ 5, 8ನೇ ತರಗತಿ ನ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
5ನೇ ತರಗತಿ ಮಕ್ಕಳಿಗೆ ಮಾರ್ಚ್ 27ರಿಂದ 30ರವರೆಗೆ ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆ ನಡೆಯಲಿದೆ.
ಉಳಿದೆಲ್ಲ ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ 4:30ರ ವರೆಗೆ ನಡೆಯಲಿದೆ. ಗಣಿತ ವಿಷಯದ ಪರೀಕ್ಷೆ ಮಾತ್ರ ಬೆಳಗ್ಗೆ 10:30 ರಿಂದ 12:30 ವರೆಗೆ ನಡೆಯಲಿದೆ. ಎಲ್ಲಾ ಪರೀಕ್ಷೆಗಳನ್ನು ನಲವತ್ತು ಅಂಕಗಳಿಗೆ ನಡೆಸಲಾಗುತ್ತದೆ.
5th and 8th Board Exam 40 ಅಂಕಗಳ ಲಿಖಿತ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ಅದು 28 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಂದು ಅಂಕದ 20 ಬಹು ಆಯ್ಕೆ ಪ್ರಶ್ನೆಗಳು, ಎರಡು ಅಂಕಗಳ 5, ಮೂರು ಅಂಕಗಳ ಎರಡು, ಮತ್ತು ನಾಲ್ಕು ಅಂಕಗಳ ಒಂದು ವಿವರಣಾತ್ಮಕವಾಗಿ ಉತ್ತರಿಸುವ ಪ್ರಶ್ನೆಗಳಿರುತ್ತದೆ.
10 ಅಂಕಗಳ ಮೌಲ್ಯಾಂಕನ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ಸೂಚಿಸಲಾಗುತ್ತದೆ. 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಂಕನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಮೌಲ್ಯಾಂಕನ ಪರೀಕ್ಷೆಗೆ ಸಿದ್ಧಗೊಳಿಸಲು ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನ ಮತ್ತು ಮೌಲ್ಯಂಕನಕ್ಕೆ ಒಳಪಡಿಸಿರುವ ಪಠ್ಯಪುಸ್ತಕದಲ್ಲಿನ ಘಟಕಗಳ ವಿವರಗಳನ್ನು ಮಂಡಳಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
B. R. Ambedkar ದಿನಾಂಕ 14-03-2023 ರ ಮಂಗಳವಾರ ಶಿವಮೊಗ್ಗ ನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ/ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ, ಲಷ್ಕರ್ ಮೊಹಲ್ಲಾ ದಲ್ಲಿ “ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್. ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್‌ರವರ ಬಗೆಗಿನ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುಂದರ್ ಎಸ್., ಪ್ರಕಾಶಕರು, ಸಿರಿಗನ್ನಡ ಪುಸ್ತಕ ಮನೆ, ಶಿವಮೊಗ್ಗರವರು ನೀಡಿದರು.
ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಕು.ಪ್ರೀತಿ ರವರು ವಹಿಸಿದ್ದರು.
B. R. Ambedkar ಮುಖ್ಯ ಅತಿಥಿಗಳಾಗಿ ತಾಲ್ಲೂಕು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಾದ ಶ್ರೀಮತಿ ಸವಿತಾ ಹೆಚ್.ಎನ್.ರವರು ಭಾಗವಹಿಸಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Chitradurga ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲುಕಿನ ಪರಮೇನಹಳ್ಳಿ ಗ್ರಾಮದಲ್ಲಿ ಸ್ಥಾಪಿತವಾಗಿರುವ ಹೆಸರಾಂತ ಕಾರ್ಖಾನೆಗಳಲ್ಲಿ ಒಂದಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆ 2020 ರಲ್ಲಿ ವಿ ಎಸ್ ಎಲ್ ಒಡೆತನದಿಂದ ಸ್ವಾಧೀನ ಪಡಿಸಿ ಕೊಂಡು ಕಾರ್ಖಾನೆ ಪುನಃ ಪ್ರಾರಂಭವಾಗಿ ಸುರಕ್ಷತೆ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ಹರಿಸಿ,ಉತ್ಪಾದನೆ ಮಾಡುತ್ತ ಪ್ರತಿ ಹಂತದಲ್ಲಿ ಉನ್ನತ ಮಟ್ಟಕ್ಕೆ ಈ ಭಾಗದಲ್ಲಿ ಏರಲು ಪ್ರಯತ್ನಿಸುತ್ತಿದೆ.
ಪ್ರತಿ ವರ್ಷ ಮಾರ್ಚ್ 4 ರಿಂದ 10 ರ ವರೆಗೆ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮತ್ತು ಸಪ್ತಾಹ ಆಚರಣೆ ಮಾಡುತ್ತಾ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಮುಂದಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯ ಸುರಕ್ಷತಾ ದಿನಾಚರಣೆಯನ್ನು ದಿನಾಂಕ 4-3-2023 ರಂದು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಸುರಕ್ಷತಾ ಸಪ್ತಾಹ ಪ್ರಾರಂಭ ಮಾಡಲಾಯಿತು. ದಿನಕ್ಕೊಂದು ಕಾರ್ಯಕ್ರಮವನ್ನು ಹಾಕಿಕೊಂಡು ಉದ್ಯೋಗಗಳಿಗೆ ಬಹುಮಾನಗಳನ್ನು ನೀಡುವುದರ ಮೂಲಕ ಸುರಕ್ಷತಾ ಅರಿವಿನ ಸ್ಪೂರ್ತಿ ನೀಡಿರುತ್ತಾರೆ.
ದಿನಾಂಕ 4-03-2023 ರಂದು ಕಾರ್ಖಾನೆಯ ಆಡಳಿತ ಕಛೇರಿಯ ಮುಂಭಾಗ 52 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಾ ಪ್ರತಿಜ್ಞೆ ಪಡೆದು ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ದಿನಾಂಕ 16-3-2023 ಗುರುವಾರ ಸುರಕ್ಷತಾ ಸಪ್ತಾಹ ಅಂಗವಾಗಿ ವೇದಿಕೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಾರಂಭದಲ್ಲಿ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
Chitradurga ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಿಸಿದ್ದ ಶ್ರೀಮತಿ ಚೈತ್ರ, ಪೋಲಿಸ್ ಉಪ ಅಧೀಕ್ಷಕರು, ಹಿರಿಯೂರು , ಶ್ರೀ ಕಾಳಿಕೃಷ್ಣ ,ಪೋಲೀಸ್ ನಿರೀಕ್ಷಕರು,ಗ್ರಾಮಾಂತರ ಪೋಲಿಸ್ ಠಾಣೆ,ಹಿರಿಯೂರು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ.ನಾರಾಯಣ, ಪರಮೇನಹಳ್ಳಿ ಬೀಡುಕಬ್ಬಿಣ ಘಟಕದ ಪ್ಲಾಂಟ್ ಹೆಡ್ ಶ್ರೀ ಚಂದ್ರಶೇಖರ್ ಚಾರಿ.ಕೆ ಇವರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಸುರಕ್ಷತಾ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಶ್ರೀ ಅರಿಹಂತ್ ರವರು ಕಾರ್ಖಾನೆಯಲ್ಲಿ ಈಗಾಗಲೇ ಉತ್ತಮ ಸುರಕ್ಷತಾ ವಾತಾವರಣ ಮೂಡಿಸಲು ಉದ್ಯೋಗಿಗಳು , ಕಾರ್ಮಿಕರ ಸಹಕಾರದಿಂದ ಸುರಕ್ಷತಾ ವಾತವರಣವನ್ನು ಮಾಡಲಾಗುತ್ತಿದೆ. 2021 ನೇ ಸಾಲಿನಲ್ಲಿ ಎನ್ ಎಸ್ ಸಿ ಬೆಂಗಳೂರು ವತಿಯಿಂದ ಕಾರ್ಖಾನೆ ಗೆ ಉತ್ತಮ ಸುರಕ್ಷ ಪುರಸ್ಕಾರ ಪ್ರಶಸ್ತಿ ಬಂದಿರುತ್ತದೆ. ಅಪಘಾತ ರಹಿತ ಕಾರ್ಖಾನೆಯಾಗಲು ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಸುರಕ್ಷತಾ ವಿಭಾಗದ ಅಧಿಕಾರಿಗಳು ಮನವಿ ಮಾಡಿದರು. ಸುರಕ್ಷತಾ ದಿನಾಚರಣೆ ಯನ್ನು ಆಚರಣೆ ಮಾಡುವ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ,ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಸುರಕ್ಷತೆ ಬಗ್ಗೆ ಅರಿವನ್ನು ಮೂಡಿಸುವುದರ ಮೂಲಕ ಜಾಗೃತಿ ಮೂಡಿಸುವ ಒಂದು ಪ್ರಯತ್ನವಾಗಿದೆ ಮತ್ತು ಕಾರ್ಖಾನೆಗಳಲ್ಲಿ ಅಪಘಾತವನ್ನು ತಗ್ಗಿಸಿ, ಶೂನ್ಯ ಅಪಘಾತಕ್ಕೆ ತರುವ ಉದ್ದೇಶದಿಂದ ಕಂಪನಿಯ ಆವರಣದಲ್ಲಿ ದಿನಾಂಕ 4-3-2023 ರಿಂದ 10-3-2023 ರ ತನಕ ವಿಭಿನ್ನ ರೀತಿಯಲ್ಲಿ 52 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಸುರಕ್ಷತಾ ಅಧಿಕಾರಿ ತಿಳಿಸಿದರು.
ಶ್ರೀ ಪಿ.ನಾರಾಯಣ ರವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಕಾರ್ಖಾನೆಯ ವತಿಯಿಂದ ಆಡಳಿತ ಮಂಡಳಿಯು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಾರ್ಖಾನೆಯ ಒಳಭಾಗದಲ್ಲಿ ಸುರಕ್ಷತೆ, ಪರಿಸರ ಮತ್ತು ಆರೋಗ್ಯಕ್ಕಾಗಿ ಕೈಗೊಂಡ ಕೆಲಸದ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಿಸಿದ್ದ ಶ್ರೀಮತಿ ಚೈತ್ರ, ಪೋಲಿಸ್ ಉಪ ಅಧೀಕ್ಷಕರು, ಹಿರಿಯೂರು ಇವರು ಮೆ. ಟಾಟಾ ಕಾರ್ಖಾನೆಯ ಸಂಸ್ಥಾಪಕರಾದ ಶ್ರೀ ಟಾಟಾ ರವರು ಪ್ರಾರಂಭದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡುವಾಗ ಪಟ್ಟ ಕಷ್ಟವನ್ನು ತುಂಬಾ ಚನ್ನಾಗಿ ತಮ್ಮ ಭಾಷಣದಲ್ಲಿ ಎಲ್ಲರಿಗೂ ತಿಳಿಸಿ ಶುಭಾಶಯ ಕೋರಿದರು.
ನಂತರ ಹಿರಿಯೂರು ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಕಾಳಿಕೃಷ್ಣರವರು ರಸ್ತೆ ಸುರಕ್ಷತೆ ಮತ್ತು ಕಾರ್ಖಾನೆಗಳ ಸುರಕ್ಷತೆ ಬಗ್ಗೆ ಮನವರಿಕರ ಮಾಡಿದರು.
ಕಾರ್ಯಕ್ರಮದ ಮಧ್ಯೆ ಅನೇಕ ವಿಭಾಗದ ಉದ್ಯೋಗಿ ಗಳಿಂದ ಸುರಕ್ಷತೆ ಕುರಿತು ಕಿರು ನಾಟಕ ಪ್ರದರ್ಶನ ಮಾಡಲಾಯಿತು.
ಸುರಕ್ಷತೆ, ಪರಿಸರದಲ್ಲಿ ಆಗಿರುವ ಬದಲಾವಣೆಗಳನ್ನು ವಿವರವಾಗಿ ತಿಳಿಸಿದರು.
ಪುನಃ ಹತ್ತಿರ ಸ್ಥಾಪಿತವಾಗಿರುವ ಐಎಸ್ಎಂಟಿ ಕಾರ್ಖಾನೆಯನ್ನು ಸಹ ಸ್ವಾಧೀನ ಪಡಿಸಿಕೂಳ್ಳಲಾಗಿದೆ . ಈಗ ನಮ್ಮ ಕಾರ್ಖಾನೆಯ ಜೊತೆ ಜೊತೆಗೆ ಆ ಕಾರ್ಖಾನೆಗಳ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿ ಉತ್ಪಾದನೆಯನ್ನು ತೆಗೆಯಲಾಗುತ್ತಿದೆ. ಸೊಲ್ಲಾಪುರ, ಹಿರಿಯೂರು ಮತ್ತು ಕೊಪ್ಪಳ ಕಾರ್ಖಾನೆಗಳಲ್ಲಿ ಡಿ ಎಸ್ ಎಸ್ ಸೇಫ್ಟಿ ಸಿಸ್ಟಮ್ಸ್ ಅಳವಡಿಸಲಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಶೂನ್ಯ ಅಪಘಾತ ಸಾಧಿಸಲು ಪ್ರಯತ್ನ ನೆಡೆಯುತ್ತದೆ ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಸುರಕ್ಷತೆಗಾಗಿ ಮಾಡಲಾದ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ದಿನದಿಂದ ದಿನಕ್ಕೆ ರಸ್ತೆಗಳು, ಲೈಟಿಂಗ್, ಹೌಸ್ ಕೀಪಿಂಗ್ ವ್ಯವಸ್ಥೆ ಪ್ರಗತಿಯಿಂದ ಸುರಕ್ಷತೆಗೆ ವರದಾನವಾಗಿದೆ ಮತ್ತು ವಿಭಾಗಗಳಲ್ಲಿ ಸುರಕ್ಷತೆಗಾಗಿ ಹೊಸ ಹೊಸ ಯಂತ್ರಗಳು ಮತ್ತು ಉಪಕರಣಗಳ ಅಳವಡಿಕೆ ಮಾಡಲಾಗಿದೆ ಎಂದು ಕಾರ್ಖಾನೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸವಿಸ್ತಾರವಾಗಿ ಶ್ರೀ ಪಿ.ನಾರಾಯಣ ತಮ್ಮ ಭಾಷಣದಲ್ಲಿ ತಿಳಿಸಿ ಕಾರ್ಖಾನೆಯ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ಅಭಿನಂದನೆ ತಿಳಿಸಿ ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಲಾಯಿತು.
ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
Chitradurga ಬನ್ನಿ ಕೈ ಜೋಡಿಸಿ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಸುರಕ್ಷತೆ ಯಿಂದ ಕಾರ್ಯ ನಿರ್ವಹಿಸಿ, ಮನೆಗೆ ಹಿಂದಿರುಗಿ ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಸಮಾರಂಭ ಮುಕ್ತಾಯವಾಯಿತು.
ವರದಿ ಕೃಪೆ: ಮುರಳಿಧರ್ ನಾಡಿಗೇರ್ ಸುರಕ್ಷತಾ ವಿಭಾಗ
Book Your Advertisement Now. Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
women’s day ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗ ಜಿಲ್ಲಾ ಕಾರ್ಯಕನಿರತ ಸಂಘ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾ.18ರಂದು ಬೆಳಿಗ್ಗೆ 10:30ಕ್ಕೆ ಪತ್ರಿಕಾ ಭವನದಲ್ಲಿ `ಮತ್ತೆ ಆಡೋಣ ಬನ್ನಿ ನಾಟಕ’ ಮಹಿಳೆಯರಿಗಾಗಿ ಮಹಿಳಾ ಕೇಂದ್ರಿತ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
women’s day ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ಮನ್ವಂತರ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಅಧ್ಯಕ್ಷತೆ ವಹಿಸುವರು. ಆಚಾರ್ ಗ್ರೂಪ್ ಆಫ್ ಕಂಪನಿಯ ಅಧ್ಯಕ್ಷ ಜೋಯ್ಸ್ ರಾಮಾಚಾರ್, ಸುಗುಣ ವಾಲ್ವಸ್ ಮತ್ತು ಪೈಪ್ಸ್ ಪ್ರೈ.ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ವಾರಿಜಾ ರಾಮಾಚಾರ್ ಪಾಲ್ಗೊಳ್ಳುವರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30ರವರೆಗೆ ಸ್ಪರ್ಧೆ ನಡೆಯಲಿದ್ದು, ನಂತರ ಲಘು ಉಪಹಾರದ ವ್ಯವಸ್ಥೆ ಇರುತ್ತದೆ.
ಇದೇ ದಿನ ಮಧ್ಯಾಹ್ನ 2:30ಕ್ಕೆ ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ರಂಗಭೂಮಿ ಕಲಾವಿದ ಕಾಂತೇಶ್ ಕದರಮಂಡಲಗಿ, ಮೆಗ್ಗಾನ್ ಆಸ್ಪತ್ರೆ ವೈಧ್ಯಕೀಯ ಅಧೀಕ್ಷಕ ಡಾ. ಶ್ರೀಧರ್, ರಂಗ ನಿರ್ದೇಶಕ ಹೊನ್ನಾಳಿ ಚಂದ್ರಶೇಖರ್, ಕಮಲ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಪ್ರೊ.ಕಿರಣ್ ದೇಸಾಯಿ ಭಾಗವಹಿಸುವರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಿವಮೊಗ್ಗ ಜಿಲ್ಲಾ ಕಾರ್ಯಕನಿರತ ಸಂಘ ಹಾಗೂ ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಕೋರಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
KSRTC ಮಾ. 17ರಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಳು ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುಗಣಿಯ ಸಮಾರಂಭದಲ್ಲಿ ವಿವಿಧ ಇಲಾಖೆಯ
ಅಭಿವೃದ್ಧಿ ಕಾಮಗಾರಿ ಹಾಗೂ ನೂತನ ಬಸ್ ಘಟಕ ಮತ್ತು
ನೂತನ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲು ಆಗಮಿಸುತ್ತಿದ್ದು, ಈ
ಕಾರ್ಯಕ್ರಮಕ್ಕೆ ಶಿಕಾರಿಪುರ ತಾಲೂಕಿನ ಸಾರ್ವಜನಿಕರು
ಆಗಮಿಸಲು ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ
125 ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ
ಒದಗಿಸಲಾಗುತ್ತಿದೆ.
KSRTC ಆದ್ದರಿಂದ ಮಾ. 17 ರಂದು ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ
ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ
ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ
ಶಾಲಾ/ಕಾಲೇಜು ವಿದ್ಯಾರ್ಥಿಗಳು ನಿಗಮದೊಂದಿಗೆ ಸಹಕರಿಸುವಂತೆ
ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು
ಕೋರಿರುತ್ತಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.