Friday, April 10, 2026
Friday, April 10, 2026
Home Blog Page 1280

Detection of gender ಲಿಂಗಪತ್ತೆಗಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಬೇಡಿ- ನ್ಯಾ.ಮಲ್ಲಿಕಾರ್ಜುನ ಗೌಡ

0

Detection of  gender ಯಾರೂ ಕೂಡ ಲಿಂಗಪತ್ತೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‍ನ್ನು ಮಾಡಿಸಬಾರದು ಮತ್ತು ಮಾಡಬಾರದು. ಆಧುನಿಕ ವೈದ್ಯಕೀಯ ತಂತ್ರವಿಧಾನಗಳ ಸರಿಯಾದ ಬಳಕೆ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ, ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ-1994 ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Detection of gender ಮಕ್ಕಳಿಗೆ ಜನ್ಮ ನೀಡುವ ಮಹಿಳೆಯನ್ನು ತುಚ್ಚವಾಗಿ ಕಾಣುವುದು ಸರಿಯಲ್ಲ. ಪುರುಷ ಮಕ್ಕಳಿಗೆ ಜನ್ಮ ನೀಡಲು ಬರುವುದಿಲ್ಲ. ಪ್ರಕೃತಿ ಮಹಿಳೆಗೆ ನೀಡಿರುವ ವಿಶೇಷ ಕೊಡುಗೆ ಜನ್ಮ ನೀಡುವುದು. ಇಂತಹ ಜನ್ಮದಾತೆಯನ್ನು ಹೆಣ್ಣೆಂದು ತುಚ್ಚೀಕರಿಸಬಾರದು. ಹೆಣ್ಣೇ ಹೆಣ್ಣಿಗೆ ಶತ್ರು ಎಂಬ ಮಾತಿದ್ದು, ಅದು ಆಗಬಾರದು. ಕುಟುಂಬದ ಹಂತದಿಂದಲೇ ಗಂಡು-ಹೆಣ್ಣು ಇಬ್ಬರೂ ಸರಿ ಸಮಾನರನ್ನಾಗಿ ಕಾಣಬೇಕು ಎಂದರು.

ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನಳಾಗಿ ಸ್ಪರ್ಧಿಸುತ್ತಿದ್ದಾಳೆ. ದುಡಿಯುತ್ತಿದ್ದಾಳೆ. ಸಮಾಜ ಹಾಗೂ ಸಂಸಾರದಲ್ಲಿ ಹೆಣ್ಣಿನ ಪಾತ್ರ ಮಹತ್ತರದ್ದಾಗಿದ್ದು ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ಯಾರೂ ಕೂಡ ಲಿಂಗಬೇಧ ಮಾಡಬಾರದು.

ಕಾನೂನುಗಳ ಸಮರ್ಪಕ ಪಾಲನೆಯಾಗಬೇಕು. ವೈದ್ಯಕೀಯ ಸೌಲಭ್ಯಗಳ ಸದ್ಬಳಕೆ ಆಗಬೇಕು. ಭ್ರೂಣ ಹತ್ಯೆಯಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಬೇಕು. ಅದರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ವೀಣಾ ಭಟ್ ಮಾತನಾಡಿ, ಇಂದಿಗೂ ಸಮಾಜದಲ್ಲಿ ಹೆಣ್ಣಿಗೆ ಎರಡನೇ ದರ್ಜೆ ಪ್ರಜೆಯ ಸ್ಥಾನವಿದೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ಭಾವನೆ ಹುಟ್ಟಿಹಾಕಿರುವುದು ಸಮಾಜ. ಸಮಾಜದಲ್ಲಿ ಹೆಣ್ಣು ಅನುಭವಿಸುವ ನೋವು, ಬವಣೆಯಿಂದ ಮತ್ತೊಂದು ಹೆಣ್ಣು ಬೇಡವೆನ್ನುತ್ತಾಳೆಯೇ ಹೊರತು ಆಕೆಗೆ ಹೆಣ್ಣು ಮಗು ಕಷ್ಟವಲ್ಲ.

ಹೆಣ್ಣು ಮನೆಯಲ್ಲಿ ನಿರಂತರವಾಗಿ ಕಾಯಕದಲ್ಲಿ ನಿರತಳಾಗಿರುತ್ತಾಳೆ. ಬಹುಕಾರ್ಯಗಳ ನಿರ್ವಹಣೆಯಲ್ಲಿ ನಿಷ್ಣಾತಳು. ಪರಂಪರೆಯ ನಿರಂತರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಈಕೆಗೆ ಪ್ರಸ್ತುತ ಮನೆ ಮತ್ತು ಹೊರಗಡೆ ದುಡಿಮೆಯಲ್ಲಿ ಸಮತೋಲನ ಸಾಧಿಸುವುದು ಕಷ್ಟವಾಗುತ್ತಿದೆ. ಆರೋಗ್ಯ ಹದಗೆಡುತ್ತಿದೆ. ಇದರ ಬಗ್ಗೆ ಗಮನ ಬೇಕು. ಹಾಗೂ ಸುಧಾರಣೆಯಾಗಬೇಕೆಂದರು.

ಎಲ್ಲಿಯವರೆಗೆ ಮನದಾಳದಲ್ಲಿ ಲಿಂಗ ಸಮಾನತೆ ಬರುವುದಿಲ್ಲವೋ, ಮನೋಭಾವ ಬದಲಾಗುವುದಿಲ್ಲವೋ ಅಲ್ಲಿಯತನ ಏನೇ ಕಾನೂನು ಬಂದರೂ ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಕಷ್ಟ. ಲಿಂಗ ಸೂಕ್ಷ್ಮತೆ, ಸಮಾನತೆ ತಾಯಿ ಗರ್ಭದಿಂದಲೇ ಹಾಗೂ ಮನೆಯಿಂದ ಆರಂಭವಾಗಬೇಕು. ಹೆಣ್ಣು ತನ್ನ ಸಾಮಥ್ರ್ಯ ಮತ್ತು ಗಟ್ಟಿತನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಡಾ. ವೀಣಾ ಭಟ್ ಅವರು ತಿಳಿಸಿದರು.
ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಇದ್ದಾಳೆಯಾದರೂ ರಾಜಕೀಯ, ಅಧಿಕಾರ ಹಂಚುವಿಕೆಯಲ್ಲಿ ಅವರ ಸಂಖ್ಯೆ ಕಡಿಮೆಯೇ. ಹಾಗೂ ಇನ್ನೂ ಕೂಡ ಗಂಡಸರ ಸಂತಾನಹರಣ ಶಸ್ತ್ರಚಿಕಿತ್ಸೆ ವ್ಯಾಸಕ್ಟಮಿ ಶೇ.2 ಸಾಧ್ಯವಾಗುತ್ತಿಲ್ಲವೆಂದರು.

ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ವೈದ್ಯರಿಗೆ ಬಿ.ಸಿ.ರಾಯ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಿಖಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಐಎಂಎ ಅಧ್ಯಕ್ಷ ಡಾ.ಅರುಣ್ ಎಂ.ಎಸ್, ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿವಾನಂದ, ವೆಂಕಟೇಶ್ ರಾವ್ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

The elephant whisperers ವನ್ಯಜೀವಿ ಪರಿಸರದ ದೃಶ್ಯಕಾವ್ಯ ಎಲಿಫೆಂಟ್ ವ್ಹಿಸ್ಪರ್ಸ್

0

ಇಡೀ ಜಗತ್ತೇ ಅತ್ಯಂತ ಪ್ರತಿಷ್ಠಿತವೆಂದು ಪರಿಗಣಿಸುವ ಆಸ್ಕರ್ ಅವಾರ್ಡ್ ತಾಲಿವುಡ್ ಸಿನಿಮಾಗಳಿಗೆ ಒಲಿದಿರುವುದು ವಿಶೇಷ.

The elephant whisperers 41 ನಿಮಿಷಗಳ ‘ ದಿ ಎಲಿಫೆಂಟ್ ವಿಸ್ಪರ್ಸ್’ ಸಾಕ್ಷಾ ಚಿತ್ರವು ದಕ್ಷಿಣ ಭಾರತದ ಮಧುಮಲೈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ಎಂಬ ದಂಪತಿ ಅನಾಥ ಆನೆಮರಿ ರಘುವನ್ನು ಸಾಕುವ ಕತೆಯನ್ನು ಹೊಂದಿದೆ. ಈ ಸಿನಿಮಾ ಗೆ ಆಸ್ಕರ್ ಪ್ರಶಸ್ತಿ ದೊರೆತಿರುವುದು ವಿಶೇಷ.

The elephant whisperers ಅನಾಥ ಆನೆಮರಿಯ ಆರೈಕೆಗೆ ಜೀವನವನ್ನೇ ಮುಡಿಪಾಗಿರುವ ಈ ದಂಪತಿಯ ಕಥಾ ಹಂದರವುಳ್ಳ ದಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವೆಸ್ , ನಿರ್ಮಾಪಕಿ ಗುನೀತಾ ಮೊಂಗಾ ಪ್ರಶಸ್ತಿ ಹಿಡಿದು ಮಿಂಚಿದ್ದಾರೆ.

ದಟ್ಟ ಅರಣ್ಯ, ಆನೆಗಳ ಹಿಂಡು, ಮಾನವ ಸಂಬಂಧ ಹೀಗೆ ವನ್ಯಜೀವಿಯ ಪರಿಸರವನ್ನು ದೃಶ್ಯ ಕಾವ್ಯದಂತೆ ಈ ಸಾಕ್ಷ್ಯ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.

2022ರಲ್ಲಿ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ತೆಲುಗಿನ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಹಾಗೂ ಬೆಸ್ಟ್ ಡಾಕ್ಯುಮೆಂಟರಿ ಸಬ್ಜೆಕ್ಟ್ ವಿಭಾಗದಲ್ಲಿ ತಮಿಳಿನ ಸಾಕ್ಷ್ಯ ಚಿತ್ರ ದಿ ಎಲಿಫೆಂಟ್ ವಿಸ್ಪರ್ಸ್ ಗೆ 95ನೇ ಆಸ್ಕರ್ ಅಕಾಡೆಮಿಯ ಪ್ರಶಸ್ತಿ ಒಲಿದು ಬಂದಿದೆ.

ಒಂದೇ ಬಾರಿಗೆ ಭಾರತದ ಎರಡು ಚಿತ್ರಗಳು ಎರಡು ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dr.Sarji shimogga ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಬೇಕು- ಡಾ.ಸರ್ಜಿ

0

Dr.Sarji shimogga  ಬಿಜೆಪಿ ಡಬಲ್‌ ಎಂಜಿನ್‌ ಸರಕಾರ ಕೈಗೊಂಡಂತಹ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪ್ರಣಾಳಿಕೆಗೆ ಸಲಹೆ ಪಡೆಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಜಿಲ್ಲಾ ಪ್ರಣಾಳಿಕೆ ಸಂಗ್ರಹಣಾ ಸಮಿತಿ ಸಂಚಾಲಕರಾದ ಡಾ.ಧನಂಜಯ ಸರ್ಜಿ ಮನವಿ ಮಾಡಿದರು.

ಬಿಜೆಪಿ ಭದ್ರಾವತಿ ಮಂಡಲ ವತಿಯಿಂದ ನ್ಯೂಟೌನ್‌ ರೋಟರಿ ಸಭಾಂಗಣದಲ್ಲಿ ನಡೆದ ಪ್ರಣಾಳಿಕೆ ಸಂಗ್ರಹಣಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Dr.Sarji shimogga  ಬಿಜೆಪಿ ಸರಕಾರ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸವನ್ನು ಎಲ್ಲರೂ ಮಾಡಬೇಕು. ಜೊತೆಗೆ ಜನರಿಗೆ ಆಗಬೇಕಿರುವ ಕೆಲಸ, ಕಾರ್ಯಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹ ಮಾಡಿದಾಗ ಸಮಗ್ರವಾದ ಪ್ರಣಾಳಿಕೆ ಸಾಧ್ಯವಿದೆ. ದೇವಸ್ಥಾನಗಳಲ್ಲಿ ಅಥವಾ ಜನ ಸಂದಣಿ ಇರುವಂತಹ ಪ್ರದೇಶಗಳಲ್ಲಿ ಅಳವಡಿಸುವ
ಬಾಕ್ಸ್ ಗಳಲ್ಲಿ ಕ್ಯೂಆರ್‌ ಕೋಡ್‌ ಮೂಲಕವೂ ತಿಳಿಸಬಹುದು. ಜನಸಾಮಾನ್ಯರಿಗೆ, ಹಳ್ಳಿಗಳ ವಾಸಿಗರಿಗೆ, ಪ್ರದೇಶವಾಸಿಗಳಿಗೆ ಅಗತ್ಯವಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ರಾಜ್ಯ ಕಮಿಟಿಗೆ ಕಳಿಸಲಾಗುವುದು ಎಂದರು.

ಸ್ವಾಮಿ ವಿವೇಕಾನಂದರು ಭಾರತ ವಿಶ್ವ ಗುರು ಆಗಬೇಕೆಂದು ಮಹೋನ್ನತವಾದ ಕನಸು ಕಂಡಿದ್ದರು. ಆ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಒಂದು ಕಾಲದಲ್ಲಿ ನಮ್ಮ ಭಾರತ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ಅಮೆರಿಕ ಪ್ರವೇಶ ಕೊಟ್ಟಿರಲಿಲ್ಲ. ಆದರೆ, ಕಾಲ ಇವತ್ತು ಬದಲಾಗಿದೆ ಅದು ನಿಮ್ಮೆಲ್ಲರಿಗೂ ಗೊತ್ತು. ಹಾಗೆಯೇ ಕಾಶ್ಮೀರದಲ್ಲಿ ಭಾರತದ ಬಾವುಟವನ್ನು ಹಾರಿಸುವುದು ಕಷ್ಟವಾಗುತ್ತಿತ್ತು. ಇವತ್ತು ಸ್ವಚ್ಛಂದವಾಗಿ ಹಾರುತ್ತಿದೆ. ಇವೆಲ್ಲದಕ್ಕೂ ಕಾರಣ ನರೇಂದ್ರ ಮೋದಿಜೀ ಅವರು ಎಂದರು.

ಪಾದಯಾತ್ರೆ ಮಾಡುವುದರಿಂದ ಭಾರತ ಜೋಡೋ ಆಗುತ್ತದೆ ಎನ್ನುವುದಕ್ಕಿಂತ ವಾಯುಯಾನ, ರೈಲ್ವೆ ಮತ್ತು ರಸ್ತೆ ಸಂಪರ್ಕದಿಂದ ಸಾಧ್ಯ ಎಂಬುದನ್ನು ಡಬಲ್‌ ಎಂಜಿನ್‌ ಸರಕಾರ ಅಭಿವೃದ್ದಿ ಕಾರ್ಯಗಳ ಮೂಲಕ ತೋರಿಸಿದೆ. ಅಲ್ಲದೇ ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2000 ರೂ. ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ, ಜನಸಖ್ಯೆಯಾಧರಿಸಿ ವರ್ಷಕ್ಕೆ 75 ಸಾವಿರ ಕೋಟಿ ರೂ.ವೆಚ್ಚ ಆಗುತ್ತದೆ. ಇದು ಐದು ವರ್ಷಕ್ಕೆ ಮೂರು ಲಕ್ಷ ಕೋಟಿ ರೂ. ಆಗುತ್ತದೆ. ಇಷ್ಟೊಂದು ಮೊತ್ತವನ್ನು ಕೊಡಲು ಸಾಧ್ಯನಾ ಎಂದು ಜನಸಾಮಾನ್ಯರಾದ ನಾವುಗಳು ಯೋಚಿಸಬೇಕು , ಅಲ್ಲದೇ ಅರ್ಥಮಾಡಿಕೊಳ್ಳಬೇಕು ಎಂದರು.

ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದರೆ ಮೂಲ ಸೌಕರ್ಯಗಳು ದೊರೆಯಬೇಕು, ಅದರಲ್ಲೂ ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸಂಪರ್ಕ ಕ್ರಾಂತಿ ಆಗಿದೆ. ಒಟ್ಟು 7500 ಕೋಟಿ ರೂ. ವೆಚ್ಚದಲ್ಲಿ ರಸ್ತೆಅಭಿವೃದ್ಧಿಯಾಗಿದೆ.

1150 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ನಮ್ಮ ಜಿಲ್ಲೆಯಲ್ಲಾಗಿದೆ. 2014ಕ್ಕೆ ಮೊದಲು ಒಂದು 11.3 ಕಿ.ಮೀ. ಹೈವೇ ಆಗ್ತಿತ್ತು, ಇವತ್ತು ಒಂದು ದಿನಕ್ಕೆ 33.6 ಕಿ.ಮೀ ಹೈವೇ ಅಭಿವೃದ್ಧಿಯಾಗುತ್ತಿದೆ, ಇದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.

ಮಂಡಳ ಅಧ್ಯಕ್ಷರಾದ ಜಿ. ಧರ್ಮ ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌, ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್‌, ರಂಗಸ್ವಾಮಿ, ಸಭೆಯ ಸಂಚಾಲಕರಾದ ಗಿರೀಶ್‌, ಕುಮಾರ್‌ ನಾಯ್ಡು, ವರದರಾಜ್‌ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Swach Bharath ಕಸ ಸಂಗ್ರಹಕಾರರಿಗೆ ಕನಿಷ್ಠ ವೇತನ ಸುರಕ್ಷಾ ಕಿಟ್ ನೀಡಲು ಒತ್ತಾಯ

0

Swachh Bharath  ಮನೆ ಮನೆ ಕಸ ಸಂಗ್ರಹಕಾರರ ಪೌರಕಾರ್ಮಿಕರರಿಗೆ ಕನಿಷ್ಟ ವೇತನವನ್ನು ನೀಡದೇ ಹಾಗೂ ಸುರಕ್ಷತೆಯ ಕಿಟ್ ವ್ಯವಸ್ಥೆಯು ಕಲ್ಪಿಸದಿರುವ ಪರಿಣಾಮ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದಸಂಸ (ಪ್ರೋ.ಕೃಷ್ಣಪ್ಪ ಸ್ಥಾಪಿತ ಬಣ) ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ಹೇಳಿದರು.

ಚಿಕ್ಕಮಗಳೂರಿನ ಆಜಾದ್‌ಪಾರ್ಕ್ನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಪೌರಕಾರ್ಮಿಕರ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಮನೆ ಮನೆಗಳಿಗೆ ಗಂಟೆಗಾಡಿಗಳ ಮೂಲಕ ಕಸ ಸಂಗ್ರಹಿಸುವವರಿಗೆ ಸೂಕ್ತ ಭದ್ರತೆಯಿಲ್ಲದೇ ಪರಿತಪಿಸುವಂತಾಗಿದೆ ಎಂದು ತಿಳಿಸಿದರು.

Swachh Bharath  ಕಳೆದ ಹಲವಾರು ವರ್ಷಗಳಿಂದ ಕಸ ಸಂಗ್ರಹಣೆ ವೃತ್ತಿಯಲ್ಲಿ ಬದುಕುತ್ತಿರುವ ಪೌರಕಾರ್ಮಿಕರು ಅನೇಕ ರೋಗರುಜಿನಿಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆಂದು ತೆರಳಿದರೆ ಸಾವಿರಾರು ರೂ.ಗಳು ತಗುಲಲಿದೆ. ಇದರೊಂದಿಗೆ ವೃತ್ತಿಯಲ್ಲಿ ಕನಿಷ್ಟ ವೇತನವು ಸಿಗದ ಪರಿಣಾಮ ಊಟಕ್ಕಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಊಟಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ನಗರಸಭಾ ಆಡಳಿತವು ಗುತ್ತಿಗೆ ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮಾಜ ದಲ್ಲಿ ಸದೃಢವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮಾಹಿತಿ ತಿಳಿಸಿದ ತರೀಕೆರೆ ವೆಂಕಟೇಶ್ ಕೂಡಲೇ ಗುತ್ತಿಗೆ ಪೌರಕಾರ್ಮಿಕರ ಕನಿಷ್ಟ ವೇತನ, ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕೀರ್ತಿ, ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರುಗಳಾದ ಮೋಹನ್, ಆನಂದ್, ಶ್ರೀನಿವಾಸ್, ಎಸ್.ಪಿ.ಪವನ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Stress Management ಮುಂಚಿತ ಆರೋಗ್ಯ ತಪಾಸಣೆ ಮಾಡಿಸಿದರೆ ರೋಗ ಗುಣಪಡಿಸಬಹುದು- ಡಾ.ಸಾಗರ್

0

Stress Management ಮನುಷ್ಯನ ಒತ್ತಡದ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಕಾಲ ಕಾಲಕ್ಕೆ ವೈದ್ಯರ ಸಲಹೆ ಪಡೆದು ತಪಾಸಣೆ ನಡೆಸಿದ್ದಲ್ಲಿ ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಗುಣಪಡಿಸಬಹುದು ಎಂದು ಡಾ|| ಸಾಗರ್ ಹೇಳಿದರು.

ಚಿಕ್ಕಮಗಳೂರು ಹೊರವಲಯದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಪ್ರಿಸರ‍್ಸ್ ಹೋಪ್ ಮಿನಿಸ್ಟರಿ ಆಫ್ ಇಂಡಿಯಾ ಸಂಯುಕ್ರಾಶ್ರಯದಲ್ಲಿ ಬಂಧಿಗಳಿಗೆ ಆರೋಗ್ಯ ತಪಾಸಣಾ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.
ಬಂಧಿಗಳ ಆರೋಗ್ಯ ದೃಷ್ಟಿಯಿಂದ ಹಲವಾರು ಆರೋಗ್ಯ ಶಿಬಿರವನ್ನು ಇಲಾಖೆಯಿಂದ ಏರ್ಪಡಿಸಲಾಗಿತ್ತು.

Stress Management ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಅದನ್ನು ಕಾಪಾಡಿಕೊಂಡು ಸುಸ್ಥಿರ ಜೀವನ ನಡೆಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಪ್ರಸ್ತುತ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತಿಮುಖ್ಯ. ಆ ಹಿನ್ನೆಲೆಯಲ್ಲಿ ಪ್ರತಿ ಯೊಬ್ಬರು ಮೊದಲು ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ಇಂತಹ ತಪಾಸಣಾ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಿಸರ‍್ಸ್ ಹೋಮ್ ಮಿನಿಸ್ಟರಿ ಆಫ್ ಇಂಡಿಯಾ ಸದಸ್ಯೆ ಶ್ರೀಮತಿ ಮಂಜುಳಾ ಮಾತನಾಡಿ ಆರೋಗ್ಯವನ್ನು ಯಾರಿಂದರಲೂ ಎರವಲು ಪಡೆದುಕೊಳ್ಳಲು ಸಾಧ್ಯವಿಲ್ಲ. ಉತ್ತಮ ವ್ಯಾಯಾಮ, ನಿಯಮಿತ ಆಹಾರ ಸೇವನೆ ಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿ ಬಂಧಿಗಳಿಗೆ ಕಾರಾಗೃಹದಲ್ಲಿ ಆರೋಗ್ಯ ಶಿಬಿರ ಸೇರಿದಂತೆ ಹಲವಾರು ರೀತಿಯ ಕೌಶಲ್ಯ ತರಬೇತಿಗಳನ್ನು ಆಯೋಜಿಸುವ ಮೂಲಕ ಬಿಡುಗಡೆ ನಂತರ ಸಾತ್ವಿಕ ಜೀವನ ನಡೆಸಲು ದಾರಿಯನ್ನು ತೋರಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಬಂಧಿಗಳಿಗೆ ರಕ್ತದೊತ್ತಡ, ಮಧುಮೇಹ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಹಾಗೂ ಸಾಮಾನ್ಯ ರೋಗಗಳಾದ ಜ್ವರ, ಶೀತ, ಕೆಮ್ಮು, ಚರ್ಮರೋಗ ಮತ್ತು ಕೀಲುನೋವುಗಳಿಗೆ ಸಂಬಂಧಿಸಿದ ಔಷಧಿ ಮಾತ್ರೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹ ಜೈಲರ್ ಎಂ.ಕೆ.ನೆಲಧರಿ, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

UAHS ಶಿವಮೊಗ್ಗ ನವುಲೆಯಲ್ಲಿ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನ

0

UAHS  ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪಶು ವೈದ್ಯಕೀಯ ಕಾಲೇಜು, ಕರ್ನಾಟಕ ಪಶು ವೈದ್ಯಕೀಯ ಸಂಘ, ಶಿವಮೊಗ್ಗ ಇವರುಗಳ ಸಹಯೋಗದೊಂದಿಗೆ ಮಾ.17 ರಂದು ಬೆಳಗ್ಗೆ 9:30ಕ್ಕೆ ಶಿವಮೊಗ್ಗದ ನವುಲೆ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.

UAHS  ಈ ಪ್ರದರ್ಶನದಲ್ಲಿ ಭಾಗವಹಿಸಲು ಒಂದು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಶ್ವಾನಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಗರ್ಭಿಣ ಮತ್ತು ಈಸ್ಟಸ್‌ನಲ್ಲಿರುವ ಶ್ವಾನಗಳಿಗೆ ಪ್ರವೇಶವಿಲ್ಲ. ಸ್ಪರ್ಧೆಗೆ ಪ್ರತಿ ತಳಿ ವಿಭಾಗದಲ್ಲಿ ಕನಿಷ್ಠ 5 ತಳಿವಾರು ಶ್ವಾನಗಳಿದ್ದಲ್ಲಿ ಮಾತ್ರ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯು ತಳಿವಾರು ನಡೆಯಲಿದ್ದು, ಪ್ರತಿ ತಳಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಪ್ರತಿ ತಳಿ ವಿಭಾಗದಲ್ಲಿ ಪ್ರಥಮ ಸ್ಪರ್ಧಿಗಳಿಗೆ ಕೊನೆಯಲ್ಲಿ ಚಾಂಪಿಯನ್ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾವುದೇ ಕೌಶಲ್ಯ ಹಾಗೂ ಚಾಕಚಕ್ಯತೆಯ ಪ್ರದರ್ಶನಕ್ಕೆ ಅವಕಾಶವಿಲ್ಲ ಹಾಗೂ ಪರಿಗಣಿಸುವುದಿಲ್ಲ. ಆಯೋಜಕ/ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.

ಪ್ರUAHS ಶಿವಮೊಗ್ಗ ನವುಲೆಯಲ್ಲಿ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನಯ ವ್ಯವಸ್ಥೆ ಮಾಡಲಾಗಿರುತ್ತದೆ. ಯಾವುದೇ ರೋಗಗ್ರಸ್ಥ ಶ್ವಾನಗಳ ಪ್ರವೇಶ ನಿರ್ಬಂಧಿಸಲಾಗುವುದು.

ಸ್ಪರ್ಧೆಗೆ ನೋಂದಾಯಿಸಿಕೊಳ್ಳು ಮಾ.17 ಕೊನೆಯ ದಿನವಾಗಿದ್ದು, ನೋಂದಣಿ ಶುಲ್ಕ 100 ರೂ.ಆಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆ 9844014063/ 9448318878/9343464008/ 9449585021/ 9986339515/ 9611948135/ 6362432686 ಗಳನ್ನು ಸಂಪರ್ಕಿಸಬಹುದಾಗಿದೆ.

ವಿಶೇಷ ಸೂಚನೆ: ಅಂತಿಮವಾಗಿ ಚಾಂಪಿಯನ್ ಶ್ವಾನ ಸ್ಪರ್ಧೆಯಲ್ಲಿ ಗೆದ್ದ ಶ್ವಾನಗಳಿಗೆ 1ನೇ, 2ನೇ, ಹಾಗೂ 3ನೇ ಸ್ಥಾನಕ್ಕೆ ನಗದು ಬಹುಮಾನ ನೀಡಲಾಗುವುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Canara Bank Self Employed Training Institute ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮೋಟಾರ್ ರಿವೈಂಡಿಂಗ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

0

Canara Bank Self Employed Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ , ಹೊಳಲೂರು ಇಲ್ಲಿ ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರ್ ಸರ್ವಿಸಸ್ ” 30 ದಿನಗಳ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ನಿರುದ್ಯೋಗಿ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು, 8 ನೇ ತರಗತಿ ಪಾಸ್ ಆಗಿರಬೇಕು ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಸ್ವ – ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರಬೇಕು.

Canara Bank Self Employed Training Institute ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ, ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು 12/04/2023 ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577216 (ಶಿವಮೊಗ್ಗ ತಾಲ್ಲೂಕು)
ಇವರಿಗೆ ಕೂಡಲೇ / ತಕ್ಷಣವೇ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ
ಮೊಬೈಲ್ ನಂ. 8660062683, 9743429595, 8722371579, 9449371579, 9481955721 ಸಂಪರ್ಕಿಸಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Siddheshwara Swamiji ಸಿದ್ಧೇಶ್ವರ ಸ್ವಾಮೀಜಿಯವರ ನಡೆನುಡಿಗಳಲ್ಲಿ ಸಾಮ್ಯವಿತ್ತು-ಎಚ್.ಬಿ.ಮಂಜುನಾಥ್

0

Siddheshwara Swamiji ಪ್ರಯತ್ನಶೀಲತೆಗೆ ಮಾತ್ರ ಅದೃಷ್ಟವೆಂಬುದು ಒಲಿಯುವುದಾಗಿದ್ದು ಸತ್ಪುರುಷರ, ಜ್ಞಾನಿಗಳ ಸಹಚರ್ಯದ ಪ್ರಯತ್ನ ಮಾಡಿದರೆ ಮಾತ್ರ ಅವರ ಮೌಲ್ಯಯುತ ನುಡಿ ಸಂದೇಶಗಳು ನಮಗೆ ಪ್ರಾಪ್ತವಾಗುತ್ತದೆ ಎಂದು ಹಿರಿಯ ಪತ್ರಕರ್ತ,ಆಧ್ಯಾತ್ಮಿಕ ಚಿಂತಕ ಹೆಚ್. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಅವರು ದಾವಣಗೆರೆಯ ನಿರಂತರ ಯೋಗ ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಪುಣ್ಯ ಸ್ಮರಣ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ಬದುಕು ಬರಹ ಪುಸ್ತಕ ಬಿಡುಗಡೆ ನೆರವೇರಿಸಿ ಮಾತನಾಡಿದರು.

Siddheshwara Swamiji ಬದುಕೆಂಬುದು ಅನುಭವಗಳ ಸಾಗರವಾಗಿದ್ದು ಬದುಕಿನ ಸಿರಿವಂತಿಕೆ ಇರುವುದು ವಿಶ್ವ ಚಿಂತನೆಯಲ್ಲಿ ಮತ್ತು ಸತ್ಯಶೋಧನೆಯಲ್ಲಿ ಎಂಬ ಸಿದ್ದೇಶ್ವರ ಸ್ವಾಮಿಗಳವರ ಅಂತಿಮ ಅಭಿವಂದನಾ ಸಂದೇಶದ ಸಾಲುಗಳನ್ನು ಉದಾಹರಿಸುತ್ತಾ ಕಣ್ಣಿಗೆ ಕಾಣುವ ಆಕಾಶ, ಪರ್ವತ, ಸಮುದ್ರಾದಿಗಳು, ಕಣ್ಣಿಗೆ ಕಾಣದ ಗಾಳಿ, ನಿಸರ್ಗ,ಪ್ರಕೃತಿ ಮುಂದೆ ನಮ್ಮ ಆಸ್ತಿ ಅಂತಸ್ತು ದೊಡ್ಡ ಸಂಪತ್ತಲ್ಲ, ವಿಶ್ವವನ್ನೇ ಭಗವಂತ ನಮಗೆ ನೀಡಿರುವಾಗ ನಮ್ಮ ವೈಯಕ್ತಿಕ ಗಳಿಕೆಗಳು ಅದರ ಮುಂದೆ ಏನೂ ಅಲ್ಲ, ನಮ್ಮ ಬಳಿ ಸಂಪತ್ತಿದ್ದರೂ ಅದು ನಮ್ಮದಲ್ಲ ಇಡೀ ವಿಶ್ವದ್ದು ಎಂದು ಭಾವಿಸುವ ವಿಶ್ವ ಚಿಂತನೆಯಲ್ಲಿ ಅಧ್ಯಾತ್ಮದ ಸಾರವಿದೆ, ಭೌತಿಕ ಸಂಪತ್ತು ನಮಗೆ ‘ಮದ’ ನೀಡಿದರೆ ಅಧ್ಯಾತ್ಮದ ಸಂಪತ್ತು ನಮಗೆ ‘ಮುದ’ ನೀಡುತ್ತದೆ ಎಂದರು.

ಎಷ್ಟೇ ಗಳಿಸಿದರೂ ಕೊನೆಯಲ್ಲಿ ಅದನ್ನು ಬಿಟ್ಟು ಹೋಗಬೇಕೇ ಹೊರತು ಜೊತೆಯಲ್ಲಿ ಕೊಂಡೊಯ್ಯಲು ಆಗುವುದಿಲ್ಲ ಎಂಬ ಅರಿವು ಉಂಟಾಗುವುದು ಸತ್ಯಶೋಧನೆಯಲ್ಲಿ ಎಂದು ತಿಳಿಸಿದರು.

ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ನಡೆನುಡಿಗಳೆರಡರಲ್ಲೂ ಸಾಮ್ಯವಿತ್ತು, ಅವರು ಸಾತ್ವಿಕ ಸಂಪೂರ್ಣತೆಗೊಂದು ವಿಶ್ವ ಮಾದರಿಯಾಗಿದ್ದರು ಎಂದರು. ಅಂತರಿಂದ್ರಿಯವಾದ ಮನಸ್ಸು, ಬುದ್ಧಿ ಮತ್ತು ಚಿತ್ತ, ಬಹಿರಿಂದ್ರಿಯವಾದ ಕಣ್ಣು, ಕಿವಿ,ಮೂಗು, ನಾಲಿಗೆ ಮತ್ತು ಚರ್ಮಗಳ ಕಾಮನೆ, ಅಂತರ್ ಬಹಿರಿಂದ್ರಿಯವಾದ ವಾಕ್ಕು ಗಳ ನಿಗ್ರಹವೇ ಯಮ ನಿಯಮಗಳಾಗಿದ್ದು ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಅನುಸರಿಸುವ ಅಷ್ಟಾಂಗ ಯೋಗಕ್ಕೆ ಶ್ರವಣ,ಮನನ, ನಿ ದಿಧ್ಯಾಸನಗಳೆಂಬ ತ್ರಯಂಗ ಯೋಗವೇ ಮೂಲವಾಗಿದೆ ಎಂದು ಮಂಜುನಾಥ್ ಉದಾಹರಣೆಗಳ ಸಹಿತ ವಿವರಿಸಿದರು.

ಉದ್ಘೋಷಕರಾಗಿ ಎಸ್ ಎಂ ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶಾಬನೂರು ಎಸ್ ಕೆ ನಾಗರಾಜ ಹಾಡಿದರು. ಎಂ ಜಿ ಸುರೇಶ್ ಸ್ವಾಗತ ಕೋರಿದರು. ಮಲ್ಲಿಕಾರ್ಜುನ ಮಠದ್ ಎಸ್‌ ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳವರ ಕುರಿತು ಎಸ್ ಎಂ ಪ್ರಭುದೇವಯ್ಯನವರು ಮಾತುಗಳನ್ನಾಡಿದರು.

ಶಾಬನೂರು ಭೀಮಣ್ಣನವರ ನಿವಾಸದ ಮಹಡಿಯಲ್ಲಿ ಕಾರ್ಯಕ್ರಮ ಏರ್ಪಾಡಾಗಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dr. Ambedkar ಕೃಷಿ ವಿವಿ ಯಲ್ಲಿ ಅಂಬೆಡ್ಕರ್ ಓದು ಕಾರ್ಯಕ್ರಮ

0

Dr. Ambedkar ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ “ಅಂಬೇಡ್ಕರ್‌ ಓದು” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇಲಾಖೆಯ ಸಹಾಯಕ ನಿರ್ದೇಶಕರಾದ‌ ಶ್ರೀ‌ ಉಮೇಶ್ ಹೆಚ್. ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

Dr. Ambedkar ಡಾ. ಬಿ.ಆರ್. ಅಂಬೇಡ್ಕರ್‌ರವರ ಬಗೆಗಿನ ಮಾಹಿತಿಯನ್ನು ಸಂಪನ್ಮೂಲ‌ ವ್ಯಕ್ತಿಗಳಾದ ಶ್ರೀ ಎನ್.ಡಿ. ಹೆಗಡೆ ರವರು ನೀಡಿದರು.

ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.‌ ಶಶಿಧರ್‌‌ ಕೆ.ಸಿ. ವಹಿಸಿದ್ದರು.
ಸ್ವಾಗತವನ್ನು ಡಾ.ಶಶಿಕಲಾರವರು ನೆರವೇರಿಸಿ, ಡಾ.‌ಮಲ್ಲಿಕಾರ್ಜುನ್ ರವರು ನಿರೂಪಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು‌ ವಿತರಿಸಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dr. Sarji shimogga ಬಿಜೆಪಿ ಪ್ರಣಾಳಿಕೆಗೆ ಸಾರ್ವಜನಿಕರು ಸಲಹೆ ನೀಡಲು ಮನವಿ-ಡಾ.ಸರ್ಜಿ

0

Dr. Sarji shimogga  ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪ್ರಣಾಳಿಕೆ ಸಿದ್ಧಪಡಿಸುವಂತ ಅತ್ಯಂತ ಪ್ರಬುದ್ಧರು ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ, ಆದರೆ, ಜನಸಾಮಾನ್ಯ ರಿಂದಲೇ ಪಡೆಯುವ ಸದುದ್ದೇಶ ಹೊಂದಿ ಪ್ರಣಾಳಿಕೆ ಸಲಹಾ ಸಂಗ್ರಹ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ, ಇದಕ್ಕೆ ಜನತೆ ಸಂಪೂರ್ಣವಾಗಿ ಸ್ಪಂದಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಣಾಳಿಕೆ ಸಲಹಾ ಸಮಿತಿಯ ಜಿಲ್ಲಾ ಸಂಚಾಲಕರಾದ ಡಾ.ಧನಂಜಯ ಸರ್ಜಿ ಮನವಿ ಮಾಡಿದರು.

Dr. Sarji shimogga  ತೀರ್ಥಹಳ್ಳಿ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರಣಾಳಿಕೆ ಸಲಹೆ ಮತ್ತು ಸಂಗ್ರಹಣಾ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಅಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ನಾವು ಸರಿಯಾಗಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಿಲ್ಲ. ಈಗ ಬಿಜೆಪಿ ಡಬಲ್‌ ಎಂಜಿನ್‌ ಸರಕಾರ ಕೈಗೊಂಡಂತಹ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪ್ರಣಾಳಿಕೆಗೆ ಸಲಹೆ ಪಡೆಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಆಯಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯಾ ಕಟ್ಟಿನ ಜಾಗಗಳಲ್ಲಿ ಪ್ರಣಾಳಿಕೆ ಬಾಕ್ಸ್ ಗಳನ್ನು ಅಳವಡಿಸಲಾಗುವುದು. ದೇವಸ್ಥಾನ, ಮಾರುಕಟ್ಟೆ ಹಾಗೂ ಜನ ಸಂದಣಿ ಪ್ರದೇಶಗಳಲ್ಲಿ ಕ್ಯೂಆರ್‌ ಕೋಡ್‌ ಹೊಂದಿದ ಬಾಕ್ಸ್ ಅಳವಡಿಸುತ್ತಿದ್ದು, ಜನರು ಬೂತ್‌, ವಾರ್ಡ್‌ ಮಟ್ಟದಲ್ಲಿ ಪ್ರಣಾಳಿಕೆಗೆ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ಕೋವಿಡ್‌ ಸಂದರ್ಭ 1ಲಕ್ಷದ 92 ಸಾವಿರ ವಿಮಾನಗಳನ್ನು ಹಾರಾಟ ಮಾಡಿಸಿ, ಭಾರತದಿಂದ ಹೊರ ಹೋಗಿದ್ದ ಒಂದು ಕೋಟಿ 90 ಲಕ್ಷ ಜನರನ್ನು ಸುರಕ್ಷಿತವಾಗಿ ಕರೆ ತಂದವರು ಮೋದಿಜೀ ಅವರು. ಬೇರೆ ದೇಶಗಳಿಂದ ಕೋವಿಡ್‌ ವ್ಯಾಕ್ಸಿನ್‌ನ್ನು ಸಾಲವಾಗಿ ಪಡೆಯಲಾಗುತ್ತಿತ್ತು. ಅಂತಹ ಸಂದರ್ಭ 250 ಕೋಟಿ ಡೋಸ್‌ನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ಕೊಟ್ಟು 100 ಬೇರೆ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನೇಷನ್‌ ನ್ನು ನೀಡುವ ಮೂಲಕ ಭಾರತಕ್ಕೆ ಶಕ್ತಿ ತುಂಬಿದ್ದು ಬಿಜೆಪಿ ಸರಕಾರ. ಮೊದಲು ವೈದ್ಯರು, ದಾದಿಯರಿಗೆ ವ್ಯಾಕ್ಸಿನ್‌ ನೀಡಿ ಜನ ಸೇವೆಗೆ ಅನುಕೂಲ ಮಾಡಿಕೊಟ್ಟಿದ್ದು ಹೆಮ್ಮೆಯ ಸಂಗತಿ ಎಂದರು.

ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕೆಂದರೆ ಮೂಲ ಸೌಕರ್ಯಗಳು ದೊರೆಯಬೇಕು, ಅದರಲ್ಲೂ ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸಂಪರ್ಕ ಕ್ರಾಂತಿ ಆಗಿದೆ. ಒಟ್ಟು 7500 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಿದೆ. 1150 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ನಮ್ಮ ಜಿಲ್ಲೆಯಲ್ಲಾಗಿದೆ. 2014ಕ್ಕೆ ಮೊದಲು ಒಂದು 11.3 ಕಿ.ಮೀ. ಹೈವೇ ಆಗ್ತಿತ್ತು, ಇವತ್ತು ಒಂದು ದಿನಕ್ಕೆ 33.6 ಕಿ.ಮೀ ಹೈವೇ ಅಭಿವೃದ್ಧಿಯಾಗುತ್ತಿದೆ, ಇದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.

ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾ ಪ್ರಣಾಳಿಕೆ ಸಲಹಾ ಸಮಿತಿಯ ಸಹ ಸಂಚಾಲಕರಾದ ಸಂದೇಶ್‌ ಜವಳಿ, ಮಂಡಲ ಅಧ್ಯಕ್ಷರಾದ ಬಾಳೇಬೈಲು ರಾಘವೇಂದ್ರ ನಾಯಕ್‌ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.