Sunday, May 17, 2026
Sunday, May 17, 2026

Chikmagalur ದೇಶದಲ್ಲಿ ಉರ್ದು ಪ್ರಭಾವಿ ಭಾಷೆಯಾಗಿದೆ-ಶಾಸಕ ಸಿ.ಟಿ.ರವಿ

Date:

Chikmagalur ದೇಶದಲ್ಲಿ ಉರ್ದು ಪ್ರಭಾವಿ ಭಾಷೆಯಾಗಿ ಪರಿವರ್ತನೆಯಾಗಿದೆ. ಆಲಿಸಲು, ಮಾತನಾಡಲು ಹಾಗೂ ಬರೆಯಲು ಉರ್ದು ಭಾಷೆ ತನ್ನದೆಯಾದ ಸೊಗಡನ್ನು ಹೊಂದಿದೆ ಎಂದು ಶಾಸಕ ಸಿ.ಟಿ.ರವಿ ಅವರು ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಉರ್ದು ಅದಬ್ ಚಿಕ್ಕಮಗಳೂರು ವತಿಯಿಂದ ವಿದ್ಯಾಭಾರತಿ ಶಾಲೆಯ ಸಹಯೋಗದಲ್ಲಿ ನಡೆದ ಅಖಿಲ ಭಾರತ ಕವಿ ಸಮ್ಮೇಳನ-2023 ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಹಲವು ಭಾಷೆಗಳ ಸಮ್ಮಿಳಿತದಿಂದ ಶ್ರೀಮಂತಿಕೆ ಪಡೆದ ಉರ್ದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸೇನೆಯಲ್ಲಿ ಪ್ರಭಾವಿ ಭಾಷೆಯಾಗಿ ಮಾರ್ಪಟ್ಟಿದ್ದನ್ನು ಇತಿಹಾಸದಿಂದ ತಿಳಿಯಬಹುದು ಎಂದ ಅವರು ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಉರ್ದು ಸಮ್ಮೇಳನ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಉರ್ದು ಭಾಷೆಗೆ ಮುಸಲ್ಮಾನ್ ಸಮುದಾಯದವರು ಕೊಟ್ಟಿರುವ ಮಹತ್ವವಾದ ಕೊಡುಗೆಯನ್ನು ನಾಡಿನ ಕನ್ನಡ ಭಾಷೆಗೂ ನೀಡಿ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಮುಮೀನ್ ಮುನಾವರ್ ಮಾತನಾಡಿ ಉರ್ದು ಸಮ್ಮೇಳನ ಏರ್ಪಡಿಸುವ ಮೂಲಕ ಉರ್ದು ಭಾಷೆಯ ಮಹತ್ವ ಹಾಗೂ ಹಿರಿಮೆಯನ್ನು ತೆರೆದಿಟ್ಟಂತಾಗಿದೆ. ಕನ್ನಡಿಗರಾದ ನಾವು ಕನ್ನಡ ಮತ್ತು ಇತರೆ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮಾತೃಭಾಷೆ ಉರ್ದುವಿಗೆ ನೀಡುವ ಮೂಲಕ ಭಾಷೆ ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಬೇಕು ಎಂದು ಹೇಳಿದರು.

ವಿದ್ಯಾಭಾರತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಪ್ಸರ್ ಅಹ್ಮದ್ ಮಾತನಾಡಿ ಮೊಬೈಲ್ ಬಳಕೆಯಿಂದ ವಿದ್ಯಾ ರ್ಥಿಗಳ ಓದಿಗೆ ಕತ್ತು ಒದಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಮಾಡಿಕೊಂಡು ಪುರಾತನ ಇತಿಹಾಸ ಹೊಂದಿರುವ ಉರ್ದು ಭಾಷೆಯನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಮಗಳೂರು ಉರ್ದು ಅದಬ್ ಅಧ್ಯಕ್ಷ ದಾವೂದ್ ಆಲಿ ಜಂಶೀದ್ ಕನ್ನಡ ಭಾಷೆಯಂತೆ ಉರ್ದು ಭಾಷೆಯನ್ನು ಸಹ ಉಳಿಸಿ ಉರ್ದು ಶಾಲೆಗಳ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ತಿಳಿಸಿದರು.

Chikmagalur ಇದೇ ವೇಳೆ ದೇಶದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ಸುಮಾರು 26 ಉರ್ದು ಸಾಹಿತಿಗಳು ಉರ್ದು ಕವಿತೆಗಳನ್ನು ಹೇಳುವ ಮೂಲಕ ಸಭಿಕರನ್ನು ಮನರಂಜಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಉರ್ದು ಅದಬ್ ಉಪಾಧ್ಯಕ್ಷ ಫೈರೋಜ್ ಅಹ್ಮದ್, ಕಾಲಿದ್ ರೆಹಮಾನ್, ಮುಖಂಡರುಗಳಾದ ಎಸ್.ಕೆ.ಭಾಷ, ಶಫೀಕ್ ಅಹ್ಮದ್, ಮುಖ್ಯ ಶಿಕ್ಷಕಿ ಸಾಹೇರ ಫಾತಿಮಾ, ಪರ್ದಾನ ಪಾರನ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...