Friday, April 10, 2026
Friday, April 10, 2026
Home Blog Page 1274

Breaking News ರಾಗಿಗುಡ್ಡಕ್ಕೆ ಬೆಂಕಿ!ಪರಿಸರ ಪ್ರಿಯರೇ ಬನ್ನಿ ಪರಿಸರ ಉಳಿಸೋಣ

0

Breaking News  ದಿನಾಂಕ 23.3.2023 ರ ಗುರುವಾರ ಸಂಜೆ: 6.00.ಗಂಟೆಗೆ ಶಿವಮೊಗ್ಗದ ನವ್ಯಶ್ರೀ ಸಭಾಂಗಣದಲ್ಲಿ ಪರಿಸರಾಸಕ್ತರಿಂದ ತುರ್ತು ಸಭೆ ಕರೆಯಲಾಗಿದೆ.
ದಿ: 25-3-2023ರ ಶನಿವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ರಾಗಿಗುಡ್ಡದ ಉತ್ತರ ಭಾಗದ ಇ ಎಸ್ ಐ ಆಸ್ಪತ್ರೆ ಬಳಿಯಿಂದ ಬನ್ನಿ ರಾಗಿಗುಡ್ಡ ಉಳಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ.

Breaking News ಮಾರ್ಚ್ 23ರಂದು ರಾಗಿ ಗುಡ್ಡದ ‌ಬಹುತೇಕ ಪ್ರದೇಶಕ್ಕೆ ಬೆಂಕಿ ಹಚ್ಚಲಾಗಿದ್ದು, ರಾಗಿ ಗುಡ್ಡದಲ್ಲಿ ಹಸಿರೇ ಇಲ್ಲದಂತಾಗಿದೆ.ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಪರಿಸರ ಗುಡ್ಡ ಬೆಟ್ಟಗಳ ಮಾರಣಹೋಮಕ್ಕೆ ನಾಂದಿ ಹಾಡಲಾಗಿದೆ ಎಂದು ಮನ್ವಂತರ ಮಹಿಳಾ ಮಂಡಳಿ ಅಧ್ಯಕ್ಷೆ ಹಾಗೂ ಪರಿಸರ ಪ್ರೇಮಿ ರಂಜನಿ ದತ್ತಾತ್ರಿಯವರು ತಿಳಿಸಿದ್ದಾರೆ.

ಈ ದಿಶೆಯಲ್ಲಿ ಸುಟ್ಟ ಹಸಿರು ಮತ್ತೆ ಗಿಡಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಸುತ್ತಲಿರುವ ಪರಿಸರದಲ್ಲಿ ಇಲಾಖೆ ವತಿಯಿಂದ ವಿವಿಧ ಇಲಾಖೆಗಳಿಗೆ ನೀಡಿರುವ 74 ಎಕರೆ ಜಾಗವನ್ನು ರದ್ದುಗೊಳಿಸಿ, ಇಡೀ ಶಿವಮೊಗ್ಗಕ್ಕೆ ಶುದ್ಧ ಆಮ್ಲಜನಕ, ಸಾವಿರಾರು ಅಂತರ್ಜಲದ ನೆಲೆಗೆ ಕಾರಣವಾದ ಈ ರಾಗಿ ಗುಡ್ಡ ಹೀಗೆ ಉಳಿದು ಮುಂದಿನ ಪೀಳಿಗೆಗೆ ಬೊಗಸೆಯಲ್ಲಿಟ್ಟು ಕೊಡಬೇಕಾದಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ.

ದಿನಾಂಕ 23.03.2023ರ ಗುರುವಾರ ಸಂಜೆ 06:00ಕ್ಕೆ ತುರ್ತು ಸಭೆಯನ್ನು ನವ್ಯಶ್ರೀ ಸಭಾಂಗಣದಲ್ಲಿ ಪರಿಸರ ಪ್ರೇಮಿಗಳ ನೆಲೆಯಲ್ಲಿ ಕರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ರಾಗಿಗುಡ್ಡ ಉಳಿಸಿ ಸಮಿತಿ,ಡಾ ಶ್ರೀಪತಿ, ನವ್ಯಶ್ರೀ ನಾಗೇಶ್ , ಶೇಖರ್ ಗೌಳೇರ್, ಪ್ರೊ. ಕುಮಾರಸ್ವಾಮಿ, ನಾಗರಾಜ್ ಶೆಟ್ಟರ್, ಶ್ರೀಕಾಂತ್( ಸೈಕಲ್ ಕ್ಲಬ್), ಪ್ರಕಾಶ್ , ಲೋಕೇಶ್ವರಪ್ಪ ಹಾಗೂ ಇನ್ನಿತರರು ಉಪಸ್ಥಿತರಿರಲಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Nidhi Apke Nikat ಮಾರ್ಚ್ 27ರಂದು ಶಿಕಾರಿಪುರ ಮತ್ತು ದಾವಣಗೆರೆಯಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

0

Nidhi Apke Nikat 2023 ರ ಮಾರ್ಚ್ ಮಾಹೆಯ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವು ದಿನಾಂಕ: 27-03-2023 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಪಿಯು ಬ್ಲಾಕ್‍ನ ಆಡಿಟೋರಿಯಂನಲ್ಲಿ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಎಪಿಎಂಸಿ ಯಾರ್ಡಿನ ತುಮ್ಕೋಸ್ ಆಡಿಟೋರಿಯಂನಲ್ಲಿ ನಡೆಯಲಿದೆ.

Nidhi Apke Nikat ನಿಧಿ ಆಪ್ಕೆ ನಿಟ್ 2.0 ಕಾರ್ಯಕ್ರಮವನ್ನು ಪ್ರತಿ ತಿಂಗಳ 27 ರಂದು ಭಾರತದ ಪ್ರತಿ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಇದು ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರನ್ನು ಒಳಗೊಳ್ಳುವ, ಒಗ್ಗೂಡಿಸುವ, ವಿಶಾಲ ಆಧಾರಿತ ಭಾಗವಹಿಸುವಿಕೆಯ ಅರಿವು ಮತ್ತು ಔಟ್‍ರೀಚ್ ಕಾರ್ಯಕ್ರಮ ಹಾಗೂ ಎಲ್ಲಾ ಮಧ್ಯಸ್ಥಗಾರರ ಕುಂದು ಕೊರತೆ ಪರಿಹಾರ ವೇದಿಕೆಯಾಗಿದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಕಮಿಷನರ್-II ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Prevention of Tuberculosis ನಾವು ಕ್ಷಯರೋಗ ಕೊನೆಗೊಳಿಸಬಹುದು – ವಿಶ್ವ ಕ್ಷಯರೋಗ ನಿವಾರಣೆ ದಿನದ ಘೋಷವಾಕ್ಯ

0

Prevention of Tuberculosis “ಹೌದು ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷವಾಕ್ಯದೊಂದಿಗೆ ಮಾರ್ಚ್ 24 ರಂದು ಜಿಲ್ಲೆಯಲ್ಲಿ ವಿಶ್ವ ಕ್ಷಯರೋಗ ನಿವಾರಣೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

1882 ರ ಮಾರ್ಚ್ 24 ರಂದು ‘ರಾಬರ್ಟ್ ಕಾಕ್’ ಎಂಬ ಪ್ರಸಿದ್ಧ ವಿಜ್ಞಾನಿಯು ಕ್ಷಯರೋಗವು ಮೈಕೋ ಬ್ಯಾಕ್ಟಿರಿಯಂ ಟ್ಯೂಬಕ್ರ್ಯುಲ್ಯೆ ಎಂಬ ಬ್ಯಾಕ್ಟಿರಿಯದಿಂದ ಬರುತ್ತದೆ ಎಂಬ ಅಂಶವನ್ನು ಕಂಡು ಹಿಡಿದರು. ಅವರ ನೆನಪಿಗಾಗಿ 1982 ರಿಂದ ವಿಶ್ವ ಕ್ಲಯರೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

Prevention of Tuberculosis ಭಾರತದಲ್ಲಿ ಪ್ರತಿ ದಿನ ಸುಮಾರು 6000 ಜನರಿಗೆ ಕ್ಷಯರೋಗ ಕಂಡುಬರುತ್ತಿದ್ದು ಸುಮಾರು 600 ಜನ (5 ನಿಮಿಷಕ್ಕೆ 2 ರೋಗಿಗಳು) ಸಾವನ್ನಪ್ಪುತ್ತಿದ್ದಾರೆ. ಸತತ 2 ವಾರಗಳ ಕೆಮ್ಮು ಮತ್ತು ಕಫ ಸಂಜೆ ಜ್ವರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿರುತ್ತವೆ. ಕ್ಷಯರೋಗವು ಕೆಮ್ಮುವಾಗ ಮತ್ತು ಸೀನುವಾಗ ತುಂತುರ ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮೊತ್ತಬ್ಬರಿಗೆ ಹರಡುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 2022 ರಲ್ಲಿ 37271 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ 1835 ಕ್ಷಯರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ. ಹಾಗೆಯೇ 51 ಎಂ.ಡಿ.ಆರ್ ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ.

ಎಂ.ಡಿ.ಆರ್ ರೋಗಿಗಳ ಶೀಘ್ರ ಪತ್ತೆಗಾಗಿ ಸಿಬಿಎನ್‍ಎಎಟಿ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆ ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಭದ್ರಾವತಿ ಇಲ್ಲಿ ಟ್ರ್ಯೂನ್ಯಾಟ್ ಪ್ರಾರಂಭಿಸಲಾಗಿದ್ದು, ಇದರಿಂದ ಟಿ.ಬಿ ಮತ್ತು ಎಂ.ಡಿ.ಆರ್ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಿರುತ್ತದೆ.

ಟಿ.ಬಿ-ನೋಟಫಿಕೇಷನ್ ಅಡಿಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಪ್ರತಿ ಮಾಹೆ ವರದಿಗಳನ್ನು ತರಸಿಕೊಳ್ಳುತ್ತಿದ್ದು, 2022 ರಲ್ಲಿ ಒಟ್ಟು 476 ರೋಗಿಗಳ ವಿವರವು ಖಾಸಗಿ ಸಂಸ್ಥೆಯಿಂದ ಬಂದಿರುತ್ತದೆ.

ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಹೈ ರಿಸ್ಕ್ ಏರಿಯಾಗಳಲ್ಲಿ, ಗಣಿಗಾರಿಕೆ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ಹೆಚ್.ಐ.ವಿ ಬಾಧಿತರಲ್ಲಿ, ಮಧುಮೇಹಿಗಳಿರುವ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ, ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಕ್ಷಯರೋಗ ನಿರ್ಮೂಲನೆಗೆ ಜಿಲ್ಲೆಯು ಆಯ್ಕೆ ಆಗಿರುವುದರಿಂದ ಟಿ.ಬಿ ಪ್ರಕರಣಗಳಿರುವ ಮನೆಗಳಲ್ಲಿ ಸಂಪರ್ಕದಲ್ಲಿರುವವರಿಗೆ ಐ.ಜಿ.ಆರ್.ಎ ರಕ್ತ ಪರೀಕ್ಷೆ ಮುಖಾಂತರ ಟಿ.ಬಿ ಸೋಂಕನ್ನು ಕಂಡು ಹಿಡಿಯುವ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ.

ಇಲ್ಲಿಯವರೆಗೆ ಒಟ್ಟು 1051 ಸಂಪರ್ಕಿತರಿಗೆ ಪರೀಕ್ಷಿಸಿ ಇದರಲ್ಲಿ ಪಾಸಿಟಿವ್ ಬಂದ 319 ಸಂಪರ್ಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.

2020 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು 2025 ರೊಳಗೆ ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿರುತ್ತಾರೆ. ಹಾಗೆಯೇ ಸಾರ್ವಜನಿಕರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಚಿಕಿತ್ಸೆಯಲ್ಲಿರುವ ಕ್ಷಯ ರೋಗಿಗಳನ್ನು ಪೌಷ್ಠಿಕ ಆಹಾರ ನೀಡುವ ಮುಖಾಂತರ ದತ್ತು ಪಡೆದುಕೊಳ್ಳಲು ಸೂಚಿಸಿರುತ್ತಾರೆ.

ಜಿಲ್ಲೆಯಲ್ಲಿ 2015 ರಲ್ಲಿ 1 ಲಕ್ಷ ಜನಸಂಖ್ಯೆಗೆ 160 ಕ್ಷಯದೊಗಿಗಳು ಪತ್ತೆಯಾಗುತ್ತಿದ್ದು ಹಾಲಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಗಣನೀಯವಾಗಿ ಇಳಕೆಯಾಗಿದ್ದು, ಲಕ್ಷಕ್ಕೆ 115 ರೋಗಿಗಳು ಪತ್ತೆಯಾಗುತ್ತಿದ್ದಾರೆ. ಹಾಲಿ ಜಿಲ್ಲೆಯಲ್ಲಿ 741 ರೋಗಿಗಳು ಚಿಕಿತ್ಸೆಯಲ್ಲಿ ಇದ್ದು ಇವರಲ್ಲಿ ಸಾರ್ವಜನಿಕರಿಂದ ಪೌಷ್ಠಿಕ ಆಹಾರ ಪಡೆಯಲು 522 ರೋಗಿಗಳು ಅನುಮತಿ ನೀಡಿದ್ದು, ಇವರಲ್ಲಿ ಈಗಾಗಲೇ 414 ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡಿ ನಿಕ್ಷಯ್ ಮಿತ್ರ 02 ನಲ್ಲಿ ದಾಖಲಿಸಲಾಗಿರುತ್ತದೆ.

ಇನ್ನು ಉಳಿದ ರೋಗಿಗಳಿಗೂ ಸಹಿತಾ ಸಾರ್ವಜನಿಕರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕ್ಷಯ ರೋಗಿಗಳನ್ನು ದತ್ತುಪಡೆದು 2025 ರೊಳಗೆ ಕ್ಷಯರೋಗ ನಿರ್ಮೂಲನೆ ಮಾಡಲು ಸಹಕಾರ ನೀಡಲು ಕೋರಲಾಗಿದೆ. ಹಾಗೂ ಎನ್.ಪಿ.ವೈ ಯೋಜನೆಯಡಿಯಲ್ಲಿ ರೋಗಿಗಳಿಗೆ ಡಿ.ಬಿ.ಟಿ ಮುಖಾಂತರ ಪ್ರತಿ ಮಾಹೆ ರೂ. 500 ಅನ್ನು ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ.

ಅರಿವು ಜಾಥಾ: ಮಾರ್ಚ್ 24 ರಂದು ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಳಗ್ಗೆ 09 ಗಂಟೆಗೆ ಜಾಥಾ ಏರ್ಪಡಿಸಿದ್ದು, ಈ ಜಾಥವು ಮೆಡಿಕಲ್ ಕಾಲೇಜು ಆವರಣದಿಂದ ಆರಂಭಗೊಂಡು ಸವರ್ಲೈನ್ ರಸ್ತೆ ಮುಖಾಂತರ, ಗೋಪಿ ಸರ್ಕಲ್, ಮೂಲಕ ಬಂದು ಐ.ಎಂ.ಎ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಈ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಲಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Board Exam 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 27 ರಿಂದ ಮೌಲ್ಯಾಂಕನ ಪ್ರಕ್ರಿಯೆ

0

Board Exam  2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ:27-03-2023 ರಿಂದ 01-04-2023ರ ವರೆಗೆ ಮೌಲ್ಯಾಂಕನ ನಡೆಸಲಾಗುವುದು.

5 ಮತ್ತು 8ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. 5 ಮತ್ತು 8ನೇ ತರಗತಿಯ ಮೌಲ್ಯಾಂಕನವು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿರುತ್ತದೆ.

Board Exam  ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿಗಳನ್ನು ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಲಾಗಿದೆ.

ಈ ಮೌಲ್ಯಾಂಕನದ ಫಲಿತಾಂಶವನ್ನು ಸಂಬಂಧಿಸಿದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಆ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು. ಪಠ್ಯಪುಸ್ತಕವನ್ನಾಧರಿಸಿ ಮೌಲ್ಯಾಂಕನಕ್ಕೆ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಉಪನಿರ್ದೇಶಕರು(ಅಭಿವೃದ್ದಿ) ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Supreme Court ನೇಣು ಶಿಕ್ಷೆಗೆ ಪರ್ಯಾಯ ಕ್ರಮಗಳಿವೆಯೆ? ಸುಪ್ರೀಂ ನಿಂದ ಸರ್ಕಾರಕ್ಕೆ ಪ್ರಶ್ನೆ

0

Supreme Court ಗಲ್ಲುಗಂಬಕ್ಕೇರಿಸುವುದ ಕ್ಕಿಂತ ಪರ್ಯಾಯ ಕ್ರಮಗಳ ಮೂಲಕ ಕಡಿಮೆ ಯಾತನೆ ನೀಡುವಂತಹ ಸಾವಿಗೆ ಮರಣದಂಡನೆಯ ಅಪರಾಧಿ ತುತ್ತಾಗಬೇಕು ಎನ್ನುವುದು ಹಲವರ ಕಳಕಳಿ. ಹೀಗಾಗಿ, ಮರಣದಂಡನೆ ಗುರಿಯಾದವರನ್ನು ನೇಣಿಗೇರಿಸುವ ಬದಲು, ಕಡಿಮೆ ಯಾತನೆ ನೀಡುವಂತಹ ವಿಧಾನದ ಮೂಲಕ ಈ ಶಿಕ್ಷೆಯನ್ನು ಜಾರಿ ಮಾಡಲು ಪರ್ಯಾಯ ಮಾರ್ಗವಿದೆಯೇ? ಈ ಬಗ್ಗೆ ನಿಮ್ಮಲ್ಲಿ ಏನಾದರೂ ಅಧ್ಯಯನಗಳಿವೆಯೇ ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಕೇಳಿದೆ.

Supreme Court ಈ ಕುರಿತು ಪರಿಶೀಲನೆ ಬಗ್ಗೆ ಚರ್ಚೆ ಪ್ರಾರಂಭಿಸಬಹುದು ಮತ್ತು ಸೂಕ್ತ ಮಾಹಿತಿ ಸಂಗ್ರಹಿಸಿ ತಿಳಿಸುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿದೆ.

ಈ ವಿಚಾರ ಪರಿಗಣಿಸುವ ಸಂಬಂಧ ತಜ್ಞರ ಸಮಿತಿ ರಚನೆ ಮಾಡಲು ನ್ಯಾಯಾಲಯ ಮುಕ್ತವಾಗಿದೆ ಎಂದೂ ತಿಳಿಸಲಾಗಿದೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Indian Family System ಭಾರತೀಯ ಕುಟುಂಬ ವ್ಯವಸ್ಥೆ ಜಗತ್ತಿನಲ್ಲೇ ಸರ್ವಶ್ರೇಷ್ಠ- ಮೇಗ ಜೊನ್ಸ್

0

Indian Family System ಜಗತ್ತಿನೆದುರು ವಿವಿಧ ಸಂಕಟಗಳು ಇದ್ದರೂ ಕುಟುಂಬ ವ್ಯವಸ್ಥೆಯ ಕಡೆಗೆ ಆಗುವ ನಿರ್ಲಕ್ಷದಿಂದ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತಿದೆ, ಎಂದು ‘ಯುನೈಟೆಡ್ ನೇಶನ್ ವುಮೆನ್ಸ್ ಎಂಪಾವರಮೆಂಟ್,ನ ಮುಖ್ಯಸ್ಥರಾದ ಮೇಗ ಜೋನ್ಸ್ ಹೇಳಿದ್ದಾರೆ.

Family System ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ಮತ್ತು ಭಾರತೀಯ ಮಹಿಳೆಯರ ಅಭ್ಯಾಸ ಮಾಡುತ್ತಿರುವ ಅವರು, ಅವಿಭಕ್ತ ಕುಟುಂಬ ಪದ್ಧತಿ ಆಧಾರಿತ ಭಾರತೀಯ ಕುಟುಂಬ ವ್ಯವಸ್ಥೆ ಇದು ಜಗತ್ತಿನಲ್ಲಿ ಸರ್ವಶ್ರೇಷ್ಟವಾಗಿದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ‘ಲಿವ್ ಇನ್ ರಿಲೇಶನ್ ಶಿಪ್’ನ ಪದ್ಧತಿ ಮಾರಕವಾಗಿದ್ದು, ಅವಿಭಕ್ತ ಕುಟುಂಬ ಪದ್ಧತಿಯ ಅವನತಿಯ ಅನೇಕ ಸಮಸ್ಯೆಗಳ ಮೂಲವಾಗಿದೆ ಎಂದಿದ್ದಾರೆ.
ಅವರು ಮೂಲತಃ ಆಸ್ಟ್ರೇಲಿಯನ್ ವಂಶದವರಾಗಿದ್ದಾ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Reservation of Scheduled Castes ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ವಿಳಂಬ ನೀತಿಗೆ ದಲಿತಪರ ಸಂಘಟನೆಗಳ ಪ್ರತಿಭಟನೆ

0

Reservation of Scheduled Castes  ಚಿಕ್ಕಮಗಳೂರಿನ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವಲ್ಲಿ ರಾಜ್ಯಸರ್ಕಾರ ವಿಳಂಭ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸ ಲಾತಿ ಜಾರಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ನಲ್ಲಿ ಮಂಗಳವಾರ ಮುಖಂಡರುಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಂವಿಧಾನದಲ್ಲಿ ಸಮಾನತೆಯನ್ನು ಸಾಧಿಸಲು ಸಮಪಾಲು, ಸಮಬಾಳು ನ್ಯಾಯದ ತತ್ವದಡಿಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಕ್ಕೋತ್ತಾಯ ಹೋರಾಟವು ಇಪ್ಪತ್ತೈದು ವರ್ಷಗಳನ್ನು ಪೂರೈಸಿದೆ ಎಂದರು.

Reservation of Scheduled Castes  ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಶಿಫಾರಸ್ಸು ಮಾಡಲು ಮತ್ತು ಸಂವಿಧಾನ ಪರಿಚ್ಚೇಧ ತಿದ್ದುಪಡಿ ತರುವಂತೆ ರಾಜ್ಯಸರ್ಕಾರಗಳಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಸಾವಿರಾರು ಜನರಿಂದ ಬೃಹತ್ ಸಮಾ ವೇಶವಾಗಿ ಮಾರ್ಪಾಟ್ಟ ಹೋರಾಟವು ನೂರನೇ ದಿನ ನಿರಂತರವಾಗಿ ಮುಂದುವರೆದಿದೆ ಎಂದು ತಿಳಿಸಿದರು.

ಬಹುಸಂಖ್ಯಾತ ಜನಾಂಗವನ್ನು ಹೊಂದಿರುವ ಪರಿಶಿಷ್ಟರು ಮೀಸಲಾತಿಯನ್ನು ಪಡೆಯುವ ಸಲುವಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದೊದಗಿದೆ. ಚುನಾವಣಾ ಸಮಯದಲ್ಲಿ ಕೇವಲ ಮತಬ್ಯಾಂಕ್‌ನ್ನಾಗಿ ಬಳಸಿಕೊಂಡು ಸೌಲಭ್ಯಗಳನ್ನು ನೀಡದೇ ಸತಾಯಿಸುವ ಕಾರ್ಯ ಮಾಡಲಾಗುತ್ತಿದ್ದು ಸಮುದಾಯವು ಎಚ್ಚೆತ್ತುಕೊಂಡು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಮಾದಿಗ, ಛಲವಾದಿ, ತ್ರಿಮತಸ್ಥ ಚರ್ಮ ಕಾರರು ಮತ್ತು ಅಲೆಮಾರಿಗಳ ಸಮುದಾಯಗಳ ಬಹು ವರ್ಷಗಳ ಒತ್ತಾಯವಾಗಿರುವ ನ್ಯಾ.ಎ.ಜೆ.ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಆಡಳಿತ ರೂಢ ಬಿಜೆಪಿ ಸರ್ಕಾರಕ್ಕೆ ಕಟ್ಟಕಡೆಯ ಎಚ್ಚರಿಕೆಯಾಗಿದೆ ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಸಮುದಾಯದ ಒತ್ತಾಯದ ಶಿಫಾರಸ್ಸು ಕೇಂದ್ರ ಸರ್ಕಾರಕ್ಕೆ ರವಾನೆಯಾಗದಿದ್ದರೆ ಈ ಹಿಂದೆ ಕಾಂಗ್ರೆಸ್ ಪಕ್ಷ ಸೋಲುಭವಿಸಿದ ರೀತಿಯಲ್ಲೇ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಸೋಲಾನುಭವಿಸುವ ಕಾಲ ಸನ್ನಿತಹಿತವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ಶ್ರೀಕಾಂತ್ ಮಾತನಾಡಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮತ್ತು ಅನುಚ್ಚೇಧ ತಿದ್ದುಪಡಿ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಮತ್ತು ಛಲವಾದಿಗಳ ಜನಸಂಖ್ಯೆಗೆ ತಕ್ಕಂತೆ ಪ್ರಾತಿನಿಧ್ಯ ಕಲ್ಪಿಸಬೇಕು. 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿಭಟನೆ ನಂತರ ಮುಖಂಡರುಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್, ಮುಖಂಡರುಗಳಾದ ಎನ್.ಗಿರೀಶ್, ಬಿ.ಜಿ.ಮೈಲಾರಪ್ಪ, ರವಿಕುಮಾರ್, ಬಿ.ಎನ್.ಮಲ್ಲಿಕಾರ್ಜುನ, ಗಂಗರಾಜು, ಕುಮಾರ್, ನಾಗರಾಜ್, ಸಗನಪ್ಪ, ವಸಂತ್‌ಕುಮಾರ್ ಮತ್ತತಿರರು ಹಾಜರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Ugadi Festival ಶಿವಮೊಗ್ಗದ ಜಯನಗರ ಶ್ರೀಸೀತಾರಾಮ ಮಂದಿರದಲ್ಲಿ ವಸಂತ ರಾಮೋತ್ಸವ

0

Ugadi  Festival ಶಿವಮೊಗ್ಗ ಜಯನಗರದ ಶ್ರೀ ಸೀತಾರಾಮ ಮಂದಿರದಲ್ಲಿ ಮಾ. 22ರಿಂದ ಏ. 03ರವರೆಗೆ 60ನೇ ಶ್ರೀ ವಸಂತ ರಾಮೋತ್ಸವ, ಸೀತಾ ಕಲ್ಯಾಣೋತ್ಸವ ಪಟ್ಟಾಭಿಷೇಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಚಾಂದ್ರಮಾನ ಯುಗಾದಿ ನಿಮಿತ್ತ ಮಾ. 22ರಂದು ಉತ್ಸವ ರಾಮರಿಗೆ ಅಭಿಷೇಕ, ಮಾ. 30ರಂದು ಬೆಳಿಗ್ಗೆ 08ರಿಂದ ಶ್ರೀ ರಾಮನವಮಿ ನಿಮಿತ್ತ ದೇವರಿಗೆ ಮಹಾಭಿಷೇಕ, ಮಾರುತಿ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ, ಅನ್ನಸಂತರ್ಪಣೆ ಜರುಗಲಿದ್ದು, ಅಂದು ರಾತ್ರಿ 07ಕ್ಕೆ ರಥದೊಂದಿಗೆ ಪ್ರಾಕಾರೋತ್ಸವ ನಡೆಯಲಿದೆ.

Ugadi Festival ಮಾ. 31ರಂದು ಬೆಳಿಗ್ಗೆ 10ರಿಂದ ಶ್ರೀ ಲಕ್ಷ್ಮೀ ನರಸಿಂಹ ಮೂಲಮಂತ್ರ ಹೋಮ, ರಾತ್ರಿ 07ರಿಂದ ಸೀತಾ ಕಲ್ಯಾಣೋತ್ಸವ ಜರುಗಲಿದೆ.
ಏ. 01ರಂದು ಬೆಳಿಗ್ಗೆ 10ರಿಂದ ರುದ್ರಹೋಮ, ರಾತ್ರಿ 07ರಿಂದ ರಾಜಬೀದಿ ಉತ್ಸವ, ಏ. 02ರಂದು ಭಾನುವಾರ ಬೆಳಿಗ್ಗೆ 09ರಿಂದ ರಾಮತಾರಕ ಹೋಮ, 11ರಿಂದ ಶ್ರೀರಾಮ ಪಟ್ಟಾಭಿಷೇಕದ ಮಹಾಭಿಷೇಕ, ಕಿರೀಟಧಾರಣೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಹಾಗೂ ಏ. 03ರಂದು ರಾತ್ರಿ 08ಗಂಟೆಗೆ ದೇವರಿಗೆ ಶಯನೋತ್ಸವ ವಿಶೇಷ ಅಲಂಕಾರ ಇರುತ್ತದೆ. ಹಾಗೆಯೇ ರಾಮನವಮಿ ನಿಮಿತ್ತ ಮಾ. 22ರಿಂದ ಏ.03 ರವರೆಗೆ ಶ್ರೀರಾಮ ದೇವರಿಗೆ ವಿಶೇಷ ಅಲಂಕಾರಗಳಿರುತ್ತವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಅಧ್ಯಕ್ಷ ಎಂ.ಡಿ. ಲಕ್ಷ್ಮಿಕಾಂತ್, ಕರ‍್ಯದರ್ಶಿ ಸತೀಶ್ ಅಯ್ಯಂಗಾರ್ ಮತ್ತು ಪದಾಧಿಕಾರಿಗಳು ಕೋರಿದ್ದಾರೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Assembly Election ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಮಹದೇವಪ್ಪ ಸ್ಪರ್ಧಿಸಲು ಒತ್ತಾಯ

0

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‍ನ ಹಿರಿಯ ನಾಯಕರು, ಮಾಜಿ ಸಚಿವರೂ ಆದ ಹೆಚ್.ಸಿ. ಮಹದೇವಪ್ಪ ಅವರು ಸ್ಪರ್ಧಿಸುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್ ಹಾಗೂ ಕಿಸಾನ್ ಕಾಂಗ್ರೆಸ್‍ನ ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಗಿರೀಶ್, ಮುಖಂಡರಾದ ಶಶಿಧರ್ ಒತ್ತಾಯಿಸಿದ್ದಾರೆ.

Assembly Election ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೆಚ್.ಸಿ. ಮಹದೇವಪ್ಪ ಅವರು ಹಲವಾರು ಬಾರಿ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಲೋಕೋಪಯೋಗಿ ಸಚಿವರಾಗಿದ್ದಾಗ ನಡೆಸಿದ ರಸ್ತೆ ಅಭಿವೃದ್ಧಿ ಕಾರ್ಯಗಳು ಐತಿಹಾಸಿಕ ದಾಖಲೆಯಾಗಿ ಉಳಿದಿವೆ. ಆರೋಗ್ಯ ಸಚಿವರಾಗಿಯೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.

Assembly Election 2023ರ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ ಇವರು, ಕಾಂಗ್ರೆಸ್‍ನ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ್ ಅವರ ಅಕಾಲಿಕ ಮರಣದಿಂದಾಗಿ ನಂಜನಗೂಡು ಕ್ಷೇತ್ರವನ್ನು ಧ್ರುವನಾರಾಯಣ್ ಅವರ ಪುತ್ರನಿಗೆ ಬಿಟ್ಟುಕೊಟ್ಟು ಆದರ್ಶ ಮೆರೆದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಹೆಚ್.ಸಿ. ಮಹದೇವಪ್ಪ ಅವರು ಸ್ಪರ್ಧಿಸಿದಲ್ಲಿ ದಾಖಲೆಯ ಗೆಲುವು ಸಾಧಿಸಲಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ. ಆದ್ದರಿಂದ ಹೆಚ್.ಸಿ.ಮಹದೇವಪ್ಪ ಅವರು ಇಲ್ಲಿ ಸ್ಪರ್ಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gender Identity ಲಿಂಗಪತ್ತೆ ಕಾನೂನು ಪಾಲಿಸದ ಸಾಗರದ ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರ ಸೀಜ್

0

Gender Identity ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಇವರ ಸೂಚನೆ ಮೇರೆಗೆ ಪಿಸಿ & ಪಿಎನ್‍ಡಿಟಿ ಕಾಯಿದೆಯ ಅನ್ವಯ ಡಿಐಎಂಸಿ ತಂಡವು ಸಾಗರದ ಚಾಮರಾಜಪೇಟೆಯ ಸಂಜೀವಿನಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಸ್ಕ್ಯಾನಿಂಗ್‍ಗೆ ಸಂಬಂಧಿಸಿದ ದಾಖಲೆಗಳು ಮತ್ತು ಸ್ಕ್ಯಾನಿಂಗ್ ಯಂತ್ರವನ್ನು ವಶಪಡಿಸಿಕೊಂಡು ಸೀಲ್ ಮಾಡಲಾಗಿದೆ.

Gender Identity ಮಾರ್ಚ್ 18 ರಂದು ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾ.ಪಂ ವ್ಯಾಪ್ತಿಯ ತಡಗಳಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಗರ್ಭಿಣಿ ಸ್ತ್ರೀಯ ಆರೋಗ್ಯವನ್ನು ವಿಚಾರಿಸಿದಾಗ, ತಪಾಸಣೆಗೆಂದು ಇಲ್ಲಿಗೆ ಬಂದಿರುತ್ತೇನೆ, ಈ ಹಿಂದೆ ಸಂಜೀವಿನಿ ಆಸ್ಪತ್ರೆ, ಸಾಗರ ಇಲ್ಲಿ ತಪಾಸಣೆ ಮಾಡಿಸಿದ್ದು, ಆ ಸಂದರ್ಭದಲ್ಲಿ ತನಗೆ ಗಂಡು ಮಗು ಆಗುವುದಾಗಿ ತಿಳಿಸಿರುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿರುತ್ತಾರೆ.

ಅದರನ್ವಯ ಜಿಲ್ಲಾಧಿಕಾರಿಗಳು ಪಿಸಿ & ಪಿಎನ್‍ಡಿಟಿ ಸಕ್ಷಮ ಪ್ರಾಧಿಕಾರದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಡಿಐಎಂಸಿ ತಂಡವು ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದನ್ವಯ ಪರಿಶೀಲನೆ ನಡೆಸಿ ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಲಾಗಿರುತ್ತದೆ.

ಪಿಸಿ ಮತ್ತು ಪಿಎನ್‍ಡಿಟಿ ಸಲಹಾ ಸಮಿತಿಯಲ್ಲಿ ಈ ವಿಚಾರವನ್ನು ಮಂಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.