Friday, April 10, 2026
Friday, April 10, 2026
Home Blog Page 1273

Self Ride Bike ಸೆಲ್ಫ್ ರೈಡ್ ಬೈಕ್ ಸೌಲಭ್ಯದಿಂದ ಸ್ಥಳೀಯ ಬಾಡಿಗೆ ವಾಹನಗಳಿಗೆ ಪೈಪೋಟಿ ನೀಡುವ ಉದ್ದೇಶವಿಲ್ಲ- ಬಿಲಾಲ್ ಅಹ್ಮದ್

0

Self Ride Bike ಚಿಕ್ಕಮಗಳೂರು, ನಗರದಲ್ಲಿ ಸಂಚರಿಸುತ್ತಿರುವ ಸೆಲ್ಪ್ ಬೈಕ್‌ಗಳು ಕಾನೂನು ರೀತ್ಯಾ ಅಧಿಕೃತವಾದ ಪರವಾನಗಿಯನ್ನು ಕ್ರಮವಾಗಿ ಪಡೆದುಕೊಂಡು ಜಿಲ್ಲೆಯಲ್ಲಿ ಸಂಚರಿಸಲು ಮುಂದಾಗಿದೆ ಹೊರತು ಯಾವುದೇ ಇತರೆ ವಾಹನಗಳಿಗೆ ಪೈಪೋಟಿ ನೀಡಲು ಮುಂದಾಗಿಲ್ಲ ಎಂದು ಜಿಲ್ಲಾ ಸೆಲ್ಪ್ ರೈಡ್ ಬೈಕ್ ಬಾಡಿಗೆದಾರರ ಸಂಘವು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಬಿಲಾಲ್ ಅಹ್ಮದ್ ಬ್ಲಾಕ್ ಬೋರ್ಡ್ ಹೊಂದಿರುವ ಸೆಲ್ಪ್ ರೈಡ್ ಬೈಕ್‌ಗಳನ್ನು ಎಲ್ಲಾ ರೀತಿಯ ಅಧಿಕೃತವಾದ ಪರವಾನಗಿಯಿಂದ ಕೂಡಿದ್ದು ಜಿಲ್ಲೆಯ ಪ್ರವಾಸೋದ್ಯಮ ದೃಷ್ಟಿಯಿಂದ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡ ವ್ಯಕ್ತಿಗಳಿಗೆ ಮಾತ್ರ ಸೆಲ್ಪ್ ಬೈಕ್‌ಗಳನ್ನು ನೀಡು ತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಸೆಲ್ಪ್ ಬೈಕ್‌ಗಳ ವ್ಯವಹಾರದಿಂದ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಯಾವುದೇ ರೀತಿಯ ಪ್ರತ್ಯೇಕ ಅಥವಾ ಪರೋಕ್ಷವಾದ ಪೈಪೋಟಿ ಇರುವುದಿಲ್ಲ. ಜೊತೆಗೆ ಯಾವುದೇ ಬಾಡಿಗೆದಾರರಿಗೆ ಸಾರ್ವಜನಿಕ ಸ್ಥಳದಲ್ಲಿ ನೇರವಾಗಿ ಹೋಗಿ ವಾಹನ ಬಾಡಿಗೆಗೆ ನೀಡುವುದು, ಬಾಡಿಗೆದಾರರನ್ನು ಪಿಕ್ ಮಾಡುವ ಗೋಜಿಗೆ ಸಂಘವು ಹೋಗಿರುವುದಿಲ್ಲ ಎಂದು ಹೇಳಿದರು.

ನೇರವಾಗಿ ಸೆಲ್ಪ್ ಬೈಕ್‌ಗಳ ಅವಶ್ಯಕತೆಯಿದ್ದವರು ವಾಹನವನ್ನು ಬಾಡಿಗೆಗೆ ಕೇಳುವುದು ಹಾಗೂ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ವಾಹನವನ್ನು ಬಾಡಿಗೆಗೆ ನೀಡಲಾಗುತ್ತಿದ್ದು ಸಂಪೂರ್ಣವಾಗಿ ಸೆಲ್ಪ್ ಬೈಕ್‌ಗಳ ವ್ಯವಸ್ಥೆಯು ವೆಬ್‌ಸೈಟ್ ಮೂಲಕ ಆನ್‌ಲೈನ್ ವ್ಯವಹಾರವಾಗಿರುತ್ತದೆ ಎಂದು ತಿಳಿಸಿದರು.

ಕಾನೂನು ಬಾಹಿರವಾಗಿ ಸೂಕ್ತ ಲೈಸೆನ್ಸ್ ಪಡೆಯದೇ ಬಿಳಿ ಬೋರ್ಡ್ ವಾಹನಗಳು ಹಲವೆಡೆ ಸಂಚರಿಸು ತ್ತಿದ್ದು ಈ ವಿರುದ್ಧ ಸಂಘವು ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಿಳಿಬೋರ್ಡ್ ವಾಹನಗಳನ್ನು ಸಾಕ್ಷಿ ಸಮೇತ ಮಾಹಿತಿ ನೀಡಲು ಸಂಘವು ಸಂಪೂರ್ಣ ಸಹಕಾರ ನೀಡಲು ಮುಂದಾಗಿದೆ ಎಂದು ತಿಳಿಸಿದರು.

Self Ride Bike ಇತ್ತೀಚೆಗೆ ಕೆಲವು ಸಂಘಟನೆಗಳು ಸೆಲ್ಪ್ ಬೈಕ್‌ಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಆದರೆ ಯಾವುದೇ ಸ್ಥಳೀಯ ಆಟೋ ಅಥವಾ ಟ್ಯಾಕ್ಸಿ ವಾಹನಗಳ ನಿಲ್ದಾಣಗಳಿಗೆ ತೆರಳಿ ಬಾಡಿಗೆ ಪಡೆಯುವುದು ಇದುವರೆಗೂ ಮಾಡಿರುವುದಿಲ್ಲ. ಎಲ್ಲವು ಬೈಕ್ ಪಡೆಯುವವರು ಆನ್‌ಲೈನ್ ಮೂಲಕ ನೊಂದಣಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಮಂತ್, ಸದಸ್ಯರಾದ ಅನೀಶ್ ಚಂದ್ರ, ಶಿಥಿಲ್ ಜೈನ್, ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

JDS Party State President Appointed in Chikkamagalur ಮುಸ್ಲೀಂ ಸಮಾಜದವರನ್ನ ಮೇಲೆತ್ತುವ ಉದ್ದೇಶದಿಂದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ

0

JDS Party State President Appointed in Chikkamagalur ಮುಸ್ಲೀಂ ಸಮಾಜದವರನ್ನ ಮೇಲೆತ್ತುವ ಉದ್ದೇಶದಿಂದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮಾಜವನ್ನು ಮೇಲೆತ್ತುವ ಮಹತ್ತರ ಜವಾಬ್ದಾರಿ ಜೆಡಿಎಸ್‌ನಲ್ಲಿ ಮಾತ್ರ ಇರುವುದರಿಂದ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಿ ಗೌರವಿಸಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷ ಝಕರಿಯಾ ಝಾಕಿರ್ ಹೇಳಿದರು.

ಚಿಕ್ಕಮಗಳೂರು ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಪಕ್ಷವನ್ನು ತೊರೆದು ಸುಮಾರು 30 ಮಂದಿ ಜೆಡಿಎಸ್‌ಗೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದ ಅವರು ಕಳೆದ 75 ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳು ಮುಸ್ಲಿಂ ಸಮಾಜವನ್ನು ಕತ್ತಲೆಯಲಿಟ್ಟಿತ್ತು. ಅವರುಗಳನ್ನು ಜೆಡಿಎಸ್ ಬೆಳಕಿಗೆ ತರುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

JDS Party State President Appointed in Chikkamagalur ಮುಸ್ಲೀಂ ಸಮಾಜದವರನ್ನ ಮೇಲೆತ್ತುವ ಉದ್ದೇಶದಿಂದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ರಾಜ್ಯದಲ್ಲಿ ಗ್ಯಾರೇಜ್, ಹಣ್ಣಿನ ವ್ಯಾಪಾರ, ಮೆಕಾನಿಕ್ ಸೇರಿದಂತೆ ಸಣ್ಣಪುಟ್ಟ ಕೆಲಸದಲ್ಲಿ ಮುಸ್ಲೀಂ ಸಮಾಜದ ಯುವಕರು ತೊಡಗಿಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜನಾಂಗವು ಆರ್ಥಿಕವಾಗಿ, ರಾಜಕೀಯ ವಾಗಿ ಸದೃಢರಾಗಲು ಪ್ರತಿಯೊಬ್ಬರು ಪಣ ತೊಡಬೇಕು. ಆಗ ಮಾತ್ರ ಸಮಾಜದಲ್ಲಿ ಮುಂಚೂಣಿಗೆ ಬರಲು ಸಾಧ್ಯ ವಾಗಲಿದೆ ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಸರ್ಕಾರಗಳು ಮುಸ್ಲಿಂ ಸಮಾಜವನ್ನು ಶೋಷಿಸುತ್ತಿದೆ. ಹಲಾಲ್‌ಕಟ್ ಒಂದೆಡೆಯಾದರೆ, ಹಿಜಾಬ್‌ನಿಂದಾಗಿ ಅನೇಕ ಬಾಲಕಿಯರು ಶಾಲೆಯ ಮುಂಭಾಗದಲ್ಲಿ ಕಣ್ಣಿರು ಹಾಕಿರುವುದು ನಮ್ಮ ಮುಂದಿದೆ. ಜನಾಂಗಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಕೇವಲ ವೋಟ್‌ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಸಮುದಾಯ ಅಭಿವೃದ್ದಿ ಕಿಂಚಿತ್ತು ಗಮನಹರಿಸುತ್ತಿಲ್ಲ ಎಂದು ಹೇಳಿದರು.

ಈ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನೇಕ ಅಮಾಯಕ ಮುಸ್ಲಿಂ ಯುವಕರು ಹತರಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಾಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಹತರಾದ ಕುಟುಂಬಕ್ಕೆ ಸಾಂತ್ವಾನ ಹೇಳದೇ ರಾಜಕೀಯ ದೊಂಬರಾಟವಾಡುತ್ತಿದೆ. ಆದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆ ಕುಟುಂಬಕ್ಕೆ ಭೇಟಿ ನೀಡಿ ಧನಸಹಾಯ ಮಾಡುವ ಮೂಲಕ ಸಾಂತ್ವಾನ ಹೇಳಿದೆೆ ಎಂದರು.

ಪ್ರಸ್ತುತ ಜಿಲ್ಲೆಯ ಮುಸ್ಲೀಂ ಬಾಂಧವರು ಎರಡು ರಾಷ್ಟ್ರೀಯ ಪಕ್ಷಗಳನ್ನು ತ್ಯಜಿಸಿ ಜೆಡಿಎಸ್‌ನತ್ತ ಒಲವು ಹೊಂದುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದು ಬಡವರು, ದೀನದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಸಹಾಯಹಸ್ತ ಚಾಚಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಎಸ್ಸಿಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಮಾತನಾಡಿ, ದೇಶದಲ್ಲಿ ಮುಸ್ಲಿಂ ಹಾಗೂ ದಲಿತರು ಒಂದಾದರೆ ರಾಜಕೀಯ ಭವಿಷ್ಯವನ್ನೇ ಬದಲಿಸಬಹುದು.

ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೈಜೋಡಿಸಬೇಕು. ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ತಿಳಿಸಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಸೈಯದ್ ಅಭಿದಿನ್ ಮಾತನಾಡಿ ಕ್ಷೇತ್ರದಲ್ಲಿ ಸಮುದಾಯವು ಒಗ್ಗಟ್ಟಿನಿಂದ ಜೆಡಿಎಸ್ ಮತ ನೀಡಿದರೆ ಕ್ಷೇತ್ರ ಹಾಗೂ ಸಮುದಾಯ ಪೂರ್ಣಪ್ರಮಾಣದಲ್ಲಿ ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ನಗರ ಮಹಾಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ, ಅಲ್ಪಸಂಖ್ಯಾತರ ಘಟಕದ ನಗರ ಪ್ರಧಾನ ಕಾರ್ಯದರ್ಶಿ ಸಮೀರ್ ಖಾನ್, ಕಚೇರಿ ಕಾರ್ಯದರ್ಶಿ ಆನಂದೇಗೌಡ ಮತ್ತಿತರರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Klive Special Article ಮನಸ್ಸಿನಿಂದ ಮನಸ್ಸಿಗೆ- 21

0

Klive Special Article ಖಾಲಿಸ್ತಾನ……

ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಇಂದ ಅಮೃತ್ ಪಾಲ್ ಸಿಂಗ್ ವರೆಗೆ…..

ಕೆನಡಾ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳ ಭಾರತದ ರಾಯಭಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಹಿಂಸೆ….

ಅಂದಿನ ದೇಶದ ಕಾರ್ಯನಿರತ ಪ್ರಧಾನಿ ಇಂದಿರಾ ಗಾಂಧಿಯವರನ್ನೇ ಹತ್ಯೆಗೈದ ಸತ್ವಂತ್ ಸಿಂಗ್ ಮತ್ತು ಬೇಹತ್ ಸಿಂಗ್ ಎಂಬ ಅಂಗರಕ್ಷಕರು ಮತ್ತು ಖಾಲಿಸ್ತಾನ ಬೆಂಬಲಿಗರು ….

ಇಂದಿಗೂ ಭಾರತದ ರಕ್ತಸಿಕ್ತ ಅಧ್ಯಾಯಗಳಲ್ಲಿ ಒಂದಾದ ಅಮೃತಸರ ಸ್ವರ್ಣ ಮಂದಿರದ ಬ್ಲೂಸ್ಟಾರ್ ಸೇನಾ ಕಾರ್ಯಾಚರಣೆಯ ಸೇಡಿಗಾಗಿ…..

ಆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದ ಜನರಲ್ ವೈದ್ಯ ಸಹ ನಿವೃತ್ತಿಯ ನಂತರ ಇದಕ್ಕಾಗಿ ಹತ್ಯೆಯಾಗುತ್ತಾರೆ….

ಸ್ವತಃ ಸಿಖ್ ಸಂತ ಹರಚಂದ್ ಸಿಂಗ್ ಲೋಂಗೋವಾಲ್, ಮುಖ್ಯಮಂತ್ರಿ ಬಿಯಾಂತ್ ಸಿಂಗ್‌ ಸೇರಿ ಸಾವಿರಾರು ಜನರ ಮಾರಣಹೋಮ…..

ಪಂಜಾಬ್ ಪೋಲೀಸ್ ಮುಖ್ಯಸ್ಥರಾಗಿದ್ದ ಜ್ಯೂಲಿಯೋ ರಿಬೆರೋ, ಕೆ ಪಿ ಎಸ್ ಗಿಲ್ ಮುಂತಾದವರ ಕಠಿಣ ಪರಿಶ್ರಮ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ದೂರದೃಷ್ಟಿಯ
” ರಾಜೀವ್ – ಲೋಂಗೋವಾಲ್ ” ಯಶಸ್ವಿ ಒಪ್ಪಂದ, ಪ್ರಜಾಪ್ರಭುತ್ವದ ಪುನರ್ ಸ್ಥಾಪನೆ, ಸುರ್ಜಿತ್ ಸಿಂಗ್ ಬರ್ನಾಲ ನೇತೃತ್ವದ ಅಕಾಲಿದಳ ಮತ್ತು ನಂತರದ ಕಾಂಗ್ರೇಸ್ ನ ನಿರಂತರ ಅಧಿಕಾರದ ಚುನಾಯಿತ ಸರ್ಕಾರಗಳು…

Klive Special Article  ಕೊನೆಗೂ ಹಿಂಸೆಗೆ ಕಡಿವಾಣ,
” ಬತ್ತದ ಕಣಜವಾಗಿ ” ಪಂಜಾಬ್ ಮರು ಸ್ಥಾಪನೆ…..

ಸುಮಾರು 35/40 ವರ್ಷಗಳ ನಂತರ ‌ಆ ಕರಾಳ ದಿನಗಳು ನೆನಪಾಗುವಂತೆ ಮತ್ತೆ ಖಾಲಿಸ್ತಾನದ ಪರ ಹೋರಾಟದ ಸುದ್ದಿಗಳು…

ದೇಶದೊಳಗಿನ ಡ್ರಗ್ಸ್ ಮಾಫಿಯಾ, ವಿದೇಶಿ ಶಕ್ತಿಗಳ ಪ್ರಚೋದನೆ, ಧಾರ್ಮಿಕ ಮೂಲಭೂತವಾದಿಗಳ ಕಾರಣದಿಂದ ಮತ್ತೆ ಚಿಗುರೊಡೆಯುವ ಲಕ್ಷಣಗಳು ಕಾಣುತ್ತಿದೆ…..

ಸಿಖ್ ಧರ್ಮ ಮತ್ತು ಸಮುದಾಯದವರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯೇ ” ಖಾಲಿಸ್ತಾನ ” ಹೋರಾಟದ ಮುಖ್ಯ ಗುರಿ. ಭಾರತದಿಂದ ಪ್ರತ್ಯೇಕವಾಗುವ ಆಶಯ. ಜಗಜಿತ್ ಸಿಂಗ್ ಚೌಹಾಣ್ ಎಂಬ ವ್ಯಕ್ತಿಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಾರಂಭದ ಹೋರಾಟವಿದು.

ವಾಸ್ತವವಾಗಿ ಸಿಖ್ ಎಂಬುದು ಒಂದು ಪ್ರತ್ಯೇಕ ಧರ್ಮವಾದರು ಭಾರತ ಸರ್ಕಾರದ ಆಡಳಿತಗಾರರಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಸಿಖ್ಖರನ್ನು ಪ್ರತ್ಯೇಕವಾಗಿ ನೋಡಿಲ್ಲ,‌ ಯಾವುದೇ ತಾರತಮ್ಯ ಅಥವಾ ಶೋಷಣೆಗೆ ಒಳಪಡಿಸಿಲ್ಲ. ಅದಕ್ಕೆ ಬದಲಾಗಿ ಸಿಖ್ ಸಮುದಾಯದ ಬಗ್ಗೆ ಅಪಾರ ಪ್ರೀತಿ ಗೌರವ ಅಭಿಮಾನ ಮತ್ತು ಹೆಮ್ಮೆ ಇದೆ. ಸ್ವಾತಂತ್ರ್ಯ ಹೋರಾಟವೇ ಇರಲಿ, ಸೈನ್ಯದ ಪರಾಕ್ರಮಗಳೇ ಇರಲಿ, ಸೈನಿಕ ಹೋರಾಟಗಳೇ ಇರಲಿ, ರೈತ ಚಳುವಳಿಗಳೇ ಇರಲಿ, ಕ್ರೀಡಾ ಕ್ಷೇತ್ರವೇ ಇರಲಿ ಸಿಖ್ ಸಮುದಾಯದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಯಿಂದ ಮಾತನಾಡುತ್ತಾರೆ.

ಸಿಖ್ ಸಮುದಾಯದ ಗ್ಯಾನಿ ಜೇಲ್ ಸಿಂಗ್ ಭಾರತದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರೆ, ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿ 10 ವರ್ಷ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಸಿಖ್ ಸಮುದಾಯದ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಯಾವುದೇ ವೈಚಾರಿಕ ಅಥವಾ ಭಾವನಾತ್ಮಕ ಹಿನ್ನೆಲೆ ಇಲ್ಲ. ಅದು ಕೇವಲ ಕೆಲವು ಸ್ವಾರ್ಥ, ಮೂಲಭೂತವಾದಿಗಳ ಮತ್ತು ರಾಜಕೀಯ ಕಿಡಿಗೇಡಿಗಳ ಬೇಡಿಕೆ ಮಾತ್ರ. ಇಂದಿರಾಗಾಂಧಿ ಹತ್ಯೆಯ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಿದವರು ಸಿಖ್ಖರು ಎಂಬ ಕಾರಣದಿಂದ ಅವರ ಮೇಲೆ ಸಾಕಷ್ಟು ಹಲ್ಲೆ – ಹತ್ಯೆಗಳು ನಡೆದವು. ಅದರಲ್ಲೂ ದೆಹಲಿಯಲ್ಲಿ ಕೆಲವು ರಾಜಕಾರಣಿಗಳು ದೊಡ್ಡ ಮಟ್ಟದ ಹತ್ಯಾಕಾಂಡ ನಡೆಸಿದರು. ಕೊನೆಗೆ ಅದಕ್ಕೆ ಸಾಕಷ್ಟು ಜನರಿಗೆ ಶಿಕ್ಷೆಯೂ ಆಯಿತು. ನಿರಾಶ್ರಿತರಿಗೆ ಅಲ್ಪ ಪ್ರಮಾಣದ ಪರಿಹಾರವೂ ದೊರೆಯಿತು. ಅದನ್ನು ಹೊರತುಪಡಿಸಿದರೆ ಸಿಖ್ ಸಮುದಾಯ ಭಾರತದ ಗೌರವ ಎಂಬುದು ನಿಸ್ಸಂಶಯವಾಗಿ ದೃಢಪಟ್ಟಿದೆ….

ಎಂದಿನಂತೆ ನಮ್ಮ ದೇಶದ ಎರಡು ಪ್ರಬಲ ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ಜವಹರಲಾಲ್ ನೆಹರು ಕಾಲದಿಂದಲೂ ಭಾರತದ ಅಭಿವೃದ್ಧಿಯನ್ನು, ಬಲಿಷ್ಠತೆಯನ್ನು ಸಹಿಸುವುದಿಲ್ಲ. ನಮ್ಮ ಆಂತರಿಕ ತಿಕ್ಕಾಟಗಳಿಗೆ ತಮ್ಮ ಅಂತರಾಷ್ಟ್ರೀಯ ಏಜೆನ್ಸಿಗಳ ಮೂಲಕ ಪರೋಕ್ಷವಾಗಿ ಹಣ – ಶಸ್ತ್ರಾಸ್ತ್ರ ನೀಡಿ ಬೆಂಬಲಿಸುತ್ತಲೇ ಇರುತ್ತವೆ. ಅದು ಆ ದೇಶಗಳ ವಿದೇಶಾಂಗ ನೀತಿಯ ಭಾಗವೂ ಸಹ ಹೌದು….

ಭಾರತದಂತ ಬೃಹತ್ ದೇಶಕ್ಕೆ ಈ ರೀತಿಯ ಕೆಲವೇ ಜನರ ಪ್ರತ್ಯೇಕ ರಾಷ್ಟ್ರದ ಕೂಗನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಕೇವಲ ಆಡಳಿತ ಸರ್ಕಾರ ಮಾತ್ರವಲ್ಲ ಇಡೀ‌ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇದನ್ನು ವಿರೋಧಿಸಬೇಕು. ಅದಕ್ಕಾಗಿ ಈಗಿನ ಸರ್ಕಾರ ಪಂಜಾಬ್ ಪ್ರಾಂತ್ಯದ ಆಡಳಿತ ಪಕ್ಷ ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ತೋರಬಾರದು.

ಒಮ್ಮೆ ಈ ರೀತಿಯ ಚಳವಳಿಗಳು ಸಾಮಾನ್ಯ ಜನರ ಭಾವನಾತ್ಮಕ ಬೆಂಬಲ ಗಳಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ನಿಯಂತ್ರಣ ಬರುವ ವೇಳೆಗಾಗಲೇ ಸಾಕಷ್ಟು ಹಿಂಸೆ ನಡೆದಿರುತ್ತದೆ……

ಸ್ವಾತಂತ್ರ್ಯ ನಂತರ ಭಾರತದ ಇತಿಹಾಸದಲ್ಲಿ ಬಹುಶಃ ಖಾಲಿಸ್ತಾನ ಚಳವಳಿಯೇ ಅತ್ಯಂತ ದೊಡ್ಡ ಪ್ರತ್ಯೇಕತವಾದದ ಹಿಂಸಾತ್ಮಕ ಸಂಘರ್ಷ. ಅದು ಮುಗಿದ ಅಧ್ಯಾಯ ಎಂದು ಭಾವಿಸಲಾಗಿತ್ತು. ಆದರೆ ಅದು ಮತ್ತೊಮ್ಮೆ ಚಿಗುರೊಡೆಯುವ ಮುನ್ನ ಚಿವುಟಿಯಾಕಬೇಕಿದೆ. ಇಲ್ಲದಿದ್ದರೆ ವಿದೇಶಿ ಶಕ್ತಿಗಳಿಗೆ ಮತ್ತೊಂದು ಅಸ್ತ್ರ ನೀಡಿದಂತಾಗುತ್ತದೆ.

ಇದಕ್ಕಾಗಿ ಕೇವಲ ಸೈನಿಕ ಶಕ್ತಿ ಬಳಸುವುದು ಮಾತ್ರವಲ್ಲ, ಇಡೀ ದೇಶದ ಜನ ಪಂಜಾಬಿನ ಜನರ ಜೊತೆ ನಿಲ್ಲಬೇಕಿದೆ. ಅವರ ಆತ್ಮ ಗೌರವಕ್ಕೆ ಕುಂದು ಬರದಂತೆ ನೋಡಿಕೊಳ್ಳಬೇಕಿದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shimoga Rangayana ರಂಗಾಯಣದಲ್ಲಿ ಮಕ್ಕಳ ಬೇಸಿಗೆ ಶಿಬಿರ

0

Shimoga Rangayana ಶಿವಮೊಗ್ಗ ರಂಗಾಯಣವು ರಂಗಭೂಮಿ ತರಬೇತಿ ಕುರಿತು ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ ಎಂಬ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏ.11 ರಿಂದ 30 ರವರೆಗೆ ಆಯೋಜಿಸಲಾಗಿದೆ.

ಮಕ್ಕಳಿಗೆ ರಂಗಭೂಮಿಯ ಕುರಿತು ಆಸಕ್ತಿ ಬೆಳೆಸುವಂತಹ ವಿವಿಧ ರೀತಿಯ ಪ್ರಕಾರಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಶಿವಮೊಗ್ಗ ರಂಗಾಯಣವು ಆಯೋಜಿಸುತ್ತಿರುವ ಈ ಶಿಬಿರದಲ್ಲಿ ನಾಟಕ ಕಲೆ ಮತ್ತು ಇದಕ್ಕೆ ಸಂಬಂಧಿಸಿದ ಕಥೆ, ಚಿತ್ರಕಲೆ, ಸಂಭಾಷಣೆ, ಪಾತ್ರ ವೈವಿಧ್ಯತೆ, ನೃತ್ಯ, ಯಕ್ಷಗಾನ, ಕಳರಿ, ಮೈಮ್, ಮುಖವಾಡ ತಯಾರಿ, ಜಾನಪದ ನೃತ್ಯ, ಕರಕುಶಲ ವಸ್ತುಗಳನ್ನು ತಯಾರಿಸುವುದು ಹೀಗೆ ಹಲವು ಮಜಲುಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ನಾಟಕಗಳಲ್ಲಿಯೂ ಅವರು ಸಂತೋಷದಿಂದ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು.

Shimoga Rangayana ಇದಕ್ಕೆ ಪೂರಕವಾಗಿ ಇನ್ನಿತರ ಪ್ರಾಯೋಗಿಕ ಮತ್ತು ಸೈದ್ದಾಂತಿಕ ತರಬೇತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಗುವುದು. ಮಕ್ಕಳಿಗೆ ಸಂಬಂಧಿಸಿದ ಜಗತ್ತಿನ ಶ್ರೇಷ್ಠ ಚಲನಚಿತ್ರಗಳನ್ನು ಸಹ ಶಿಬಿರದಲ್ಲಿ ಪ್ರದರ್ಶಿಸಲಾಗುವುದು.

ಶಿಬಿರವು ಏ.11 ರಿಂದ 30 ರವರೆಗೆ ನಡೆಯುವುದು. ಶಿಬಿರದ ಕೊನೆ ಎರಡು ದಿನಗಳು ಅಂದರೆ ಏ.29 ಮತ್ತು 30 ರಂದು ಶಿಬಿರದಲ್ಲಿ ಕಲಿಸಿದ ನಾಟಕಗಳನ್ನು, ಕಲೆಗಳನ್ನು ರಂಗಾಯಣದ ಚಿಣ್ಣರ ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು.
ಒಟ್ಟು 150 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ರಂಗಭೂಮಿಯಲ್ಲಿ ಮತ್ತು ಮಕ್ಕಳ ಶಿಬಿರಗಳನ್ನು ಸಂಘಟಿಸಿ ಅನುಭವವಿರುವ ಕರ್ನಾಟಕದ ಕ್ರಿಯಾಶೀಲ ರಂಗನಿರ್ದೇಶಕರು, ರಂಗಭೂಮಿಯ ನೇಪಥ್ಯ ಕೆಲಸಗಳಲ್ಲಿ ಪರಿಣ ತರಾಗಿರುವ ಸಾಧಕರು, ವಿವಿಧ ಕಲಾಕ್ಷೇತ್ರಗಳಲ್ಲಿ ಪರಿಣ ತಿ ಹೊದಿರುವ ರಾಜ್ಯದ ಕಲಾವಿದರುಗಳು ಮತ್ತು ಶಿವಮೊಗ್ಗ ರಂಗಾಯಣದ ಕಲಾವಿದರು ಈ ಶೀಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.

ಶಿಬಿರದಲ್ಲಿ ಭಾಗವಹಿಸುವ ಒಂದು ಮಗುವಿಗೆ ಪ್ರವೇಶ ಶುಲ್ಕ ರೂ.1,500 ಆಗಿರುತ್ತದೆ. ಅರ್ಜಿ ಶುಲ್ಕ ರೂ.10/- ಆಗಿರುತ್ತದೆ. 08 ರಿಂದ 15 ವರ್ಷ ವಯೋಮಾನದ ಮಕ್ಕಳು ಪಾಲ್ಗೊಳ್ಳಬಹುದು.

ಆಸಕ್ತರು ಅರ್ಜಿಯನ್ನು ಏ.01 ರಿಂದ ಶಿವಮೊಗ್ಗ ರಂಗಾಯಣ ಕಚೇರಿಯಲ್ಲಿ ಪಡೆದು ಏ.09 ರ ಸಂಜೆ 05 ಗಂಟೆಯೊಳಗೆ ಶಿವಮೊಗ್ಗ ರಂಗಾಯಣ ಕಚೇರಿ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣ ಸಂಖ್ಯೆ 08182-25653 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ..

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kateel Ashok pai ಮನೋ ಸಾಮಾಜಿಕ ಚಿಕಿತ್ಸೆ ಕೋರ್ಸ್ ಈಗ ಆನ್ ಲೈನ್ ನಲ್ಲಿ ಲಭ್ಯ

0

Kateel Ashok pai  ಮಾನಸ ಟ್ರಸ್ಟ್ (ರಿ) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಸಮಾಜಕಾರ್ಯ ವಿಭಾಗದಿಂದ ಮನೋ ಸಾಮಾಜಿಕ ಚಿಕಿತ್ಸೆ ಎಂಬ ( ಇಂಟರ್ವೆನ್ಷನ್) ವಿಷಯವಾಗಿ ಮೂರು ತಿಂಗಳ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ.

Kateel Ashok pai  ಆಸಕ್ತ ವಿದ್ಯಾರ್ಥಿಗಳು ಈ ಕೋರ್ಸ್ಗ್ ಗೆ ಸೇರಿಕೊಳ್ಳಬಹುದು. ಸಂಪೂರ್ಣ ತರಗತಿಗಳು ಆನ್ಲೈನ್ ಮೂಲಕ ವಾರಾಂತ್ಯದಲ್ಲಿ ನಡೆಯಲಿದ್ದು, ತಮ್ಮ ತಮ್ಮ ಊರಿನಲ್ಲೇ ಇದ್ದು, ಈ ಕೋರ್ಸ್ ಮುಗಿಸಬಹುದಾಗಿದೆ. ತರಗತಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರಲಿವೆ.

ಮೂರು ತಿಂಗಳ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ ನ ಪ್ರವೇಶಾತಿ ಪ್ರಕ್ರಿಯೆಯು ಮಾರ್ಚ್.21ರಿಂದ ಪ್ರಾರಂಭಗೊಂಡು ಏಪ್ರಿಲ್ 2ರವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9480034495 , 9845014229 ಅನ್ನು ಇಮೇಲ್ ಐಡಿ: bsw@kapmi.edu.in ಅಥವಾ ವೆಬ್ಸೈಟ್ : www.kapmi.edu.in ಅನ್ನು ಸಂಪರ್ಕಿಸಬಹುದಾಗಿದೆ.

ಈ ಕೆಳಗಿನ ಲಿಂಕ್ ಮೂಲಕ ಮೂರು ತಿಂಗಳ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ಗ ಗೆ ನೋಂದಾಯಿಸಿಕೊಳ್ಳಬಹುದಾಗಿದೆ.

https://docs.google.com/forms/d/e/1FAIpQLSfJoyeGyE8wplHJBhMB3pNboC3hBwHdEdvswR4pCfxrtRisTg/viewform?usp=sf_link

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Padma Vibhushan Award ಕರ್ನಾಟಕದ ಎಂಟು ಸಾಧಕರಿಗೆ ಪದ್ಮಪ್ರಶಸ್ತಿ ವಿತರಣೆ

0

Padma Vibhushan Award  2023ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗೆ ಭಾಜನರಾದ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಸಾಹಿತಿ ಎಸ್‌.ಎಲ್‌.ಭೈರಪ್ಪ ಸೇರಿದಂತೆ ಒಟ್ಟು 106 ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ

Padma Vibhushan Award  ಈ ಬಾರಿ ಕರ್ನಾಟಕದ 8 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ವಿಶೇಷ. 2023ನೇ ಸಾಲಿನಲ್ಲಿ 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು.

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಪ್ರಧಾನ ಮಾಡಲಾಗಿದೆ. ಇನ್ನು ಸಾಹಿತಿ ಭೈರಪ್ಪ ಹಾಗೂ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇವರಲ್ಲದೇ ಖ್ಯಾತ ಗಾಯಕಿ ವಾಣಿ ಜಯರಾಂ ಹಾಗೂ ಆಸ್ಕರ್‌ ಪ್ರಶಸ್ತಿ ಗೆದ್ದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಸಹ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಉಳಿದಂತೆ ಕರ್ನಾಟಕದಿಂದ ವಿಜ್ಞಾನಿ ಖಾದರ್‌ವಲ್ಲಿ ದುಡೇಕುಲ, ಉಮ್ಮತ್ತಾಟ್‌ ನೃತ್ಯ ಕಲಾವಿದೆ ರಾಣಿ ಮಾಚಯ್ಯ, ತಮಟೆ ವಾದಕ

ಸಾಹಿತ್ಯ ಕ್ಷೇತ್ರದಲ್ಲಿ ಸಾಧನಗೈದಿರುವ ಕರ್ನಾಟಕದ ಎಸ್‌ಎಲ್ ಭ್ಯರಪ್ಪ , ಟ್ರೇಡ್ ಹಾಗೂ ಇಂಡಸ್ಟ್ರಿ ವಿಭಾಗದಲ್ಲಿ ಮಹಾರಾಷ್ಟ್ರದ ಕುಮಾರ್ ಮಂಗಲಂ, ವಿಜ್ಞಾನ ಮತ್ತು ಇಂಜಿನಿಯರಿಂಗ್‌ನಲ್ಲಿ ಮಹಾರಾಷ್ಟ್ರದಲ್ಲಿ ದೀಪಕ್ ಧರ್, ಕಲಾ ಕ್ಷೇತ್ರದಲ್ಲಿನ ಸಾಧಕಿ ತಮಿಳುನಾಡಿನ ವಾಣಿ ಜಯರಾಂ ಸೇರಿದಂತೆ ಪ್ರಮುಖ ಗಣ್ಯರಿಗೆ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
( ವಾಣಿ ಜಯರಾಂ ಅವರು ಪ್ರಶಸ್ತಿ ಘೋಷಣೆಯಾದಾಗ ಜೀವಿಸಿದ್ದರು. ಸದ್ಯ ದಿವಂಗತರಾಗಿದ್ದಾರೆ.)

ಮುನಿವೆಂಕಟಪ್ಪ, ರಶೀದ್‌ ಅಹಮದ್‌ ಖಾದ್ರಿ, ಎಸ್‌.ಸುಬ್ಬರಾಮನ್‌ ಅವರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ವಾಸ್ತುಶಿಲ್ವ ಸಾಧನೆಯಲ್ಲಿ ಗುಜರಾತ್‌ನ ಬಾಲಕೃಷ್ಣ ದೋಶಿ(ಮರಣೋತ್ತರ), ಕಲಾ ಸಾಧನೆಗೈದ ಮಹಾರಾಷ್ಟ್ರದ ಝಾಕೀರ್ ಹುಸೈನ್, ಸಾರ್ವಜನಿಕ ವ್ಯವಹಾರ ಕ್ಷೇತ್ರದಲ್ಲಿ ಕರ್ನಾಟಕ ಮಾಜಿ ಸಿಎಂ ಎಂಎಸ್ ಕೃಷ್ಣ, ಮೆಡಿಸಿನ್ ಕ್ಷೇತ್ರದಲ್ಲಿನ ಸಾಧನೆಗೆ ಪಶ್ಚಿಮ ಬಂಗಾಳದ ದಿಲೀಪ್ ಮಹಾಲಾನಬಿಸ್ (ಮರಣೋತ್ತರ), ವಿಜ್ಞಾನ ಹಾಗೂ ಎಂಜಿನೀಯರ್, ಅಮೆರಿಕದ ಶ್ರೀನಿವಾಸ್ ವರ್ಧನ್, ಸಾರ್ವಜನಿಕ ವ್ಯವಹಾರ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್(ಮರಣೋತ್ತರ) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಅಪ್ರತಿಮ ಸಾಧನೆ ಮೂಲಕ ದೇಶದ ಹೂಡಿಕೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ ರಾಕೇಶ್ ಜುಂಜುನವಾಲ ಇತ್ತೀಚೆಗೆ ನಿಧನರಾಗಿದ್ದಾರೆ. ರಾಕೇಶ್ ಜುಂಜುನುವಾಲ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ರಾಕೇಶ್ ಜುಂಜುನವಾಲ್ ಪರವಾಗಿ ಅವರ ಪತ್ನಿ ರೇಖಾ ಜುಂಜುನವಾಲ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಜುಂಜುನವಾಲ ಕುಟುಂಬಸ್ಥರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

High Court Surat ಮೋದಿ ಉಪನಾಮ ಕುರಿತ ಹೇಳಿಕೆ ನೀಡಿದ ರಾಹುಲ್ ಗಾಂಧಿ ದೋಷಿ ಎಂದು ತೀರ್ಪಿತ್ತ ನ್ಯಾಯಾಲಯ

0

High Court Surat ಸೂರತ್ ನ್ಯಾಯಾಲಯವು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರ “ಮೋದಿ ಉಪನಾಮ” ಹೇಳಿಕೆಗಾಗಿ ದೋಷಿ ಎಂದು ತೀರ್ಪು ನೀಡಿದೆ.

High Court Surat ಐಪಿಸಿ ಸೆಕ್ಷನ್ 504 ರ ಅಡಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಲಾಗಿದ್ದು ಈ ಸೆಕ್ಷನ್ ಅಡಿಯಲ್ಲಿ ಗರಿಷ್ಠ ಎರಡು ವರ್ಷಗಳ ಸಂಭವನೀಯ ಶಿಕ್ಷೆ ನೀಡಲಾಗುತ್ತದೆ.

“ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡಿರುವುದು ಹೇಗೆ?” ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.

2019 ರ ಲೋಕಸಭೆ ಚುನಾವಣೆಗೆ ಮುನ್ನ ಕೋಲಾರದಲ್ಲಿ ನಡೆದ ರ‍್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಲಾಗಿದ್ದು, ಇದು ಇಡೀ ಮೋದಿ ಸಮುದಾಯವನ್ನು ದೂಷಿಸಿದೆ ಎಂದು ದೂರುದಾರರು ಹೇಳಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

District SVEEP Committee ಸ್ವಾಮಿ ವಿವೇಕಾನಂದ ಬಾಧ್ಯತಾ ಗುಂಪಿನವರಿಗೆ ಕ್ರೀಡಾಕೂಟ

0

District SVEEP Committee ಸ್ವಾಮಿ ವಿವೇಕಾನಂದ ಜಂಟಿ ಬಾಧ್ಯತಾ ಗುಂಪಿನ ಸದಸ್ಯರಿಗೆ ಮಾತ್ರ ಮತದಾನ ಜಾಗೃತಿ ಮೂಡಿಸುವ ಅಂಗವಾಗಿ ಮಾರ್ಚ್ 28 ರಂದು ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.

District SVEEP Committee ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ವಾಲಿಬಾಲ್(6 ಜನ), ಹಗ್ಗ ಜಗ್ಗಾಟ(5 ಜನ), ಲಗೋರಿ ಸಂಘದಿಂದ 02 ಜನ, ಪಗಡೆ ಕ್ರಿಕೆಟ್ 5 ಜನ ಮತ್ತು ಮತದಾನ ಜಾಗೃತಿಯ ಗಾಳಿಪಟ ರಚನೆ ಸಂಘದಿಂದ ಒಬ್ಬರಿಗೆ ಏರ್ಪಡಿಸಲಾಗಿದೆ.

ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ತರುವುದು ಕಡ್ಡಾಯ. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಒಂದು ಗ್ರಾಮ ಪಂಚಾಯತ್‍ನಿಂದ ಪ್ರತಿ ಸ್ಪರ್ಧೆಯಲ್ಲಿ ಒಂದು ತಂಡಕ್ಕೆ ಅವಕಾಶವಿರುತ್ತದೆ. ಆಸಕ್ತರು ಮಾ.28 ರ ಬೆಳಿಗ್ಗೆ 11 ಗಂಟೆಗೆ ನೋಂದಾವಣೆ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

District Police ಯುವತಿ ನಾಪತ್ತೆ

0

District Police ಪೂಜಾ ಎಂ, 19 ವರ್ಷ, ನಾಗರಕಟ್ಟೆ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರು ಸಹ್ಯಾದ್ರಿ ಕಾಲೇಜು ಹಾಸ್ಟೆಲ್‍ನಿಂದ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು ಮನೆಗೆ ಬಂದಿರುವುದಿಲ್ಲ.

ಸಹ್ಯಾದ್ರಿ ಕಾಲೇಜಿನಲ್ಲಿ ಮೊದಲನೇ ವರ್ಷದ ಬಯೋ ಟೆಕ್ನೋಲಜಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ಈಕೆ ಸಹ್ಯಾದ್ರಿ ಕಾಲೇಜಿಗೆ ಸಂಬಂಧಿಸಿದ ಲೇಡೀಸ್ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿರುತ್ತಾಳೆ. ಪರೀಕ್ಷೆ ಮುಗಿದು ನಾಲ್ಕೈದು ದಿನಗಳಾದರೂ ಮನೆಗೆ ಬಾರದಿದ್ದಾಗ, ಪೋಷಕರು ಕರೆ ಮಾಡಿದಾಗ ತಾನು ಬರುವುದಿಲ್ಲವೆಂದು ತಿಳಿಸಿರುತ್ತಾಳೆ. ದಿನಾಂಕ: 20-03-2023 ರಂದು ಹಾಸ್ಟೆಲ್‍ಗೆ ಹೋಗಿ ವಿಚಾರಿಸಿದಾಗ ಎರಡು ದಿನಗಳ ಹಿಂದೆಯೇ ಮನೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆಂದು ತಿಳಿಸಿರುತ್ತಾರೆ.

District Police ಕಾಣೆಯಾದ ಪೂಜಾ ಎಂ 05 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾಳೆ. ಈಕೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ : 08182-261415, 9900429516 ಅಥವಾ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Canara bank ಸಕಾಲದಲ್ಲಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಲಾಭ ಮುಟ್ಟಿಸಿ-ಬಿ.ವೈ.ರಾಘವೇಂದ್ರ

0

Canara bank ಸರ್ಕಾರದ ವಿವಿಧ ಯೋಜನೆಗಳಲ್ಲಿ ಅರ್ಹರಾಗಿರುವ ಫಲಾನುಭವಿಗಳಿಗೆ ಜಿಲ್ಲೆಯಲ್ಲಿ ಕೆಲವು ಬ್ಯಾಂಕುಗಳಿಂದ ಸಕಾಲದಲ್ಲಿ ಅಗತ್ಯ ಸೌಲಭ್ಯ ದೊರೆಯದಾಗಿದೆ. ಅಲ್ಲದೇ ಸರ್ಕಾರಿ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಾಗಿದೆ. ಆದ್ದರಿಂದ ಚುನಾವಣೆ ಮುಗಿಯುತ್ತಿದ್ದಂತೆಯೇ ಪ್ರಗತಿ ಸಾಧಿಸದಿರುವ ಬ್ಯಾಂಕುಗಳ ವ್ಯವಸ್ಥಾಪಕರನ್ನು ಕರೆದು ಸಮಾಲೋಚನೆ ನಡೆಸಿ, ಅಗತ್ಯ ಸೂಚನೆ ನೀಡುವಂತೆ ಸಾಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಸೂಚಿಸಿದರು.

Canara bank ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಏರ್ಪಡಿಸಿದ್ದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸೌಲಭ್ಯಗಳನ್ನು ಒದಗಿಸುವಲ್ಲಿ ಫಲಾನುಭವಿಗಳು ದಾಖಲೆ ಒದಗಿಸುವಲ್ಲಿನ ನ್ಯೂನತೆಗಳು ಒಂದೆಡೆಯಾದರೆ, ಬ್ಯಾಂಕುಗಳ ಅಧಿಕಾರಿ-ಸಿಬ್ಬಂಧಿಗಳ ವಿಳಂಬ ಧೋರಣೆಯೂ ಕಾರಣವಾಗಿದೆ. ಬ್ಯಾಂಕುಗಳ ವ್ಯವಸ್ಥಾಪಕರು ಸೌಲಭ್ಯವನ್ನು ಅಪೇಕ್ಷಿಸಿ, ಬ್ಯಾಂಕುಗಳಿಗೆ ಬರುವ ಅರ್ಜಿದಾರರಿಗೆ ವಿನಃಕಾರಣ ಅಲೆದಾಡಿಸದೆ, ಸಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕರಿಸಿದೆ ಸೌಲಭ್ಯಗಳನ್ನು ಒದಗಿಸುವಲ್ಲಿ ಗಮನಹರಿಸುವಂತೆ ಸೂಚಿಸಿದರು.

ಅರ್ಹ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳು ಸರಳ, ಸುಲಭವಾಗಿ ದೊರಕಿಸುವ ಸದುದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕುಗಳ ವಿಲೀನಗೊಳಿಸಲಾಗಿದೆ. ಆದರೆ, ನಾಗರೀಕರಿಗೆ ತ್ವರಿತ ಸೇವೆ ದೊರೆಯುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಫಲಾನುಭವಿಗಳಿಗೆ ಅದರಲ್ಲೂ ಮಹಿಳೆಯರಿಗೆ ಅನುಷ್ಟಾನಗೊಳಿಸಿರುವ ಯೋಜನೆಯಡಿ ಅರ್ಹರಿಗೆ ಸೌಲಭ್ಯವನ್ನು ಒದಗಿಸುವಂತೆ ಸೂಚಿಸಿದರು.

ಜೀವನ ಜ್ಯೋತಿ ಯೋಜನೆ, ಮುದ್ರಾ ಯೋಜನೆಯಡಿ ಫಲಾನುಭವಿಗಳ ಅರ್ಜಿ ಸಕಾಲದಲ್ಲಿ ವಿಲೇಯಾಗದಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ಕೆಲವು ಬ್ಯಾಂಕುಗಳಲ್ಲಿ ನಿಗಧಿಪಡಿಸಲಾಗಿರುವ ಗುರಿಯಂತೆ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳು ವಿಲೇಯಾಗದೆ ಬಾಕಿ ಉಳಿದಿರುವುದು ಗಮನಕ್ಕೆ ಬಂದಿದೆ. ಅಂತಹ ಬ್ಯಾಂಕುಗಳ ವ್ಯವಸ್ಥಾಪಕರು ಕೂಡಲೇ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಸೂಚಿಸಿದ ಅವರು, ಸಂಘಟಿತ ಪ್ರಯತ್ನಗಳಿಂದ ಸರ್ಕಾರ ನಿಗಧಿಪಡಿಸಿದ ಗುರಿ ತಲುಪಲು, ಯೋಜನೆಯ ವ್ಯವಸ್ಥಿತ ಅನುಷ್ಟಾನ ಸಾಧ್ಯವಾಗಲಿದೆ.

ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ಆಯಾ ಶಾಖಾ ವ್ಯವಸ್ಥಾಪಕರು ಗಮನಹರಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದವರು ಎಚ್ಚರಿಸಿದರು.
ಮಹಿಳೆಯರಿಗಾಗಿಯೇ ರೂಪಿಸಿ ಅನುಷ್ಠಾನಗೊಳಿಸಲಾಗಿರುವ ಸ್ತ್ರೀ ಸಮರ್ಥ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಈವರೆಗೆ ಸುಮಾರು 1200ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, 350ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಉಳಿದ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸುವಂತೆ ಸಂಸದರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿಲ್ಲೆಯ ಅನುಪಿನಕಟ್ಟೆಯಲ್ಲಿರುವ ಬ್ಯಾಂಕೊಂದು ಮುಚ್ಚುವ ಸ್ಥಿತಿಯಲ್ಲಿದೆ. ಅದನ್ನು ಮುಚ್ಚದೆ ಉಳಿಸಿಕೊಂಡು ಹೋಗುವ ಬಗ್ಗೆ ಗಮನಹರಿಸುವಂತೆ ಸಾಂಸದರು ಸೂಚಿಸಿದರಲ್ಲದೇ, ಕೃಷಿ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಆಗಿರಬಹುದಾದ ಪ್ರಗತಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಸಂದೀಪ್‌ರಾವ್, ಪ್ರಶಾಂತ್‌ಕುಮಾರ್, ವಿ.ರವಿ, ಯತೀಶ್ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.