Friday, April 10, 2026
Friday, April 10, 2026
Home Blog Page 1272

Raksha University In Shivamogga ರಾಷ್ಡ್ರೀಯ ರಕ್ಷಾ ವಿವಿಯಲ್ಲಿ ಯುವಕರಿಗೆ ಪದವಿ ಮತ್ತು ಸ್ನಾತಕೋತ್ತರ ತರಬೇತಿ ಲಭ್ಯ- ಕೆ.ಎಸ್.ಈಶ್ವರಪ್ಪ

0

Raksha University In Shivamogga  ದೇಶದ ಯುವಜನರಲ್ಲಿ ದೇಶಾಭಿಮಾನ, ದೇಶಭಕ್ತಿ ಮತ್ತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ 5ನೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಶಿವಮೊಗ್ಗದಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಅವರು, ರಾಗಿಗುಡ್ಡದ ಹಳೆಯ ಕೇಂದ್ರೀಯ ವಿದ್ಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಗೊಳ್ಳುತ್ತಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ರಕ್ಷಣಾ ಇಲಾಖೆಗೆ ಬಲತುಂಬುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಯುವಜನಾಂಗಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಹೆಚ್ಚಿನ ಅನುದಾನವನ್ನು ಖರ್ಚು ಮಾಡುತ್ತಿದೆ ಎಂದವರು ನುಡಿದರು.

ಈ ವಿಶ್ವವಿದ್ಯಾಲಯದ ಆರಂಭದಿಂದಾಗಿ ರಾಜ್ಯದ ಯುವಕರು ವಿಶೇಷ ಮಹತ್ವದ ಪದವಿ ಮತ್ತು ಸ್ನಾತಕೋತ್ತರ ತರಬೇತಿಗಳನ್ನು ಪಡೆಯಲಿದ್ದಾರೆ ಎಂದ ಅವರು, ಹೆಚ್ಚಿನ ಯುವಕರು ರಕ್ಷಣಾ ಘಟಕಗಳಲ್ಲಿ ಉದ್ಯೋಗಾವಕಾಶ ಪಡೆಯಲಿದ್ದಾರೆ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ದೇಶದ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸಲಿಚ್ಚಿಸುವ ಯುವಕರಿಗೆ ಇಲ್ಲಿನ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುವುದರಿಂದಾಗಿ ಉದ್ಯೋಗಾವಕಾಶಗಳು ಲಭಿಸಲಿವೆ. ಅದಕ್ಕಾಗಿ ಇಂದು ರಾಜ್ಯವು ರಕ್ಷಾ ವಿವಿಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ ಎಂದ ಅವರು, ದೇಶದ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಹಾಗೂ ಸಶಕ್ತ ಭಾರತ ನಿರ್ಮಿಸುವಲ್ಲಿ ಈ ವಿಶ್ವವಿದ್ಯಾಲಯ ಸಹಕಾರಿಯಾಗಲಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಉಲ್ಲೇಖಿಸಿದಂತೆ ಇಲ್ಲಿ ಶಿಕ್ಷಣ ಪಡೆವ ಪ್ರತಿ ವಿದ್ಯಾರ್ಥಿಯೂ ಭಾರತದ ಅನರ್ಘ್ಯ ರತ್ನಗಳಾಗಿ ಹೊರಹೊಮ್ಮಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿದೆ. ಎಂದ ಅವರು, ಇಲ್ಲಿನ ಮೂಲಭೂತ ಸೌಕರ್ಯಗಳು, ಸ್ಮಾರ್ಟ್ ಗ್ರಂಥಾಲಯ, ವಿದ್ಯಾರ್ಥಿನಿಲಯ, ಅತ್ಯಾಧುನಿಕ ತರಬೇತಿ ಕೇಂದ್ರಗಳು ಸೇರಿದಂತೆ ಭೌತಿಕ ಸ್ವರೂಪದ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 10 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದರು.

Raksha University In Shivamogga  ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 6-8ವರ್ಷಗಳ ಅವಧಿಯಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅವುಗಳಲ್ಲಿ ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆ, ಆಯುಷ್, ರಕ್ಷಾ ವಿವಿ ಆರಂಭಗೊಳ್ಳುತ್ತಿರುವುದು ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯಾಗಿದೆ ಎಂದು ಭಾವಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ರಕ್ಷಾ ವಿವಿಯ ಉಪಕುಲಪತಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ನಿರ್ದೇಶಕರ ಡಾ. ಆನಂದಕುಮಾರ್ ತ್ರಿಪಾಠಿ ಅವರು ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಬೇತಿಗಳು ಆರಂಭಗೊಳ್ಳಲಿವೆ.

ಪೊಲೀಸ್ ಆಡಳಿತ ಮತ್ತು ಆಂತರಿಕ ಭದ್ರತೆ, ಕೃತಕ ಬುದ್ದಿಮತ್ಯೆ, ಯಂತ್ರಕಲಿಕೆ, ದತ್ತಾಂಶ ವಿಜ್ಞಾನ, ಅಪರಾಧಶಾಸ್ತ್ರ ವರ್ತನೆಯ ವಿಜ್ಞಾನ, ಡಿಜಿಟಲ್ ಫೋರೆನ್ಸಿಕ್, ಪೋರೆನ್ಸಿಕ್ ಸೈಕಾಲಜಿ, ಮಿಲಿಟರಿ ವ್ಯವಹಾರಗಳು- ತಂತ್ರಗಳು ಮತ್ತು ಲಾಜಿಸ್ಟಿಕ್ಸ್, ಭದ್ರತೆ ಮತ್ತು ಅಪರಾಧ, ಕಾನೂನುಗಳು, ಕರಾವಳಿ ಕಡಲ ಮುಂತಾದ ವಿಜ್ಞಾನ ಕ್ಷೇತ್ರಗಳಲಿ ವಿದ್ಯಾರ್ಥಿಗಳಿಗೆ ಬೋದನೆ ನಡೆಯಲಿದೆ.

ವಾಯು ಮತ್ತು ಬಾಹ್ಯಾಕಾಶ ಭದ್ರತೆ, ಅನ್ವಯಿಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವಿದೇಶಾಂಗ ವ್ಯವಹಾರಗಳು, ವಿದೇಶಿ ಬಾಷೆಗಳು, ರಾಜಕೀಯ ಆರ್ಥಿಕತೆ, ಕ್ರೀಡೆ ಮತ್ತು ದೈಹಿಕ ಶಿಕ್ಷಣ ವಿಷಯಗಳಲ್ಲಿ ತರಬೇತಿಗಳು ನಡೆಯಲಿವೆ ಎಂದ ಅವರು, ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್, ಇಂಟರ್ನ್ಶಿಫ್ ಮತ್ತು ಪ್ಲೇಸ್‌ಮೆಂಟ್, ಹಣಕಾಸಿನ ನೆರವು ಒದಗಿಸುತ್ತದೆ. ಅಲ್ಲದೆ ಇಲ್ಲಿ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೇಮಕಾತಿಯಲ್ಲಿ ಆದ್ಯತೆ ನೀಡುವಲ್ಲಿ ಕ್ರಮ ವಹಿಸಬೇಕೆಂದವರು ನುಡಿದರು.

ಬೆಂಗಳೂರಿನಲ್ಲಿ ಕೇಂದ್ರ ಗೃಹಸಚಿವ ಅಮಿತ್‌ಶಾ ಅವರು ವರ್ಚುವಲ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹಸಚಿವ ಆರಗಜ್ಞಾನೇಂದ್ರ ಸೇರಿದಂತೆ ಸಂಬಂಧಿತ ಇಲಾಖೆಗಳ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಅಂತೆಯೇ ರಾಗಿಗುಡ್ಡದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ರಕ್ಷಾ ವಿವಿಯ ಧರ್ಮೇಂದ್ರಕುಮಾರ್, ವಿ.ಪಿ.ಸಿಂಗ್‌ಶೇಖಾವತ್ ಮತ್ತಿತರರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Paper Products Manufacturing Workshop ಪ್ಲಾಸ್ಟಿಕ್ ಗೆ ಗುಡ್ ಬೈ ಕಾಗದ ಉತ್ಪನ್ನಕ್ಕೆ ವೆಲ್ ಕಮ್ ಸ್ವೇದ ಮಹಿಳಾ ಉದ್ಯಮಿ ಸಂಘದಿಂದ ವಿನೂತನ ಕಾರ್ಯಾಗಾರ

0

Paper Products Manufacturing Workshop ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ 2 ದಿನಗಳ ಕಾಗದದ ಉತ್ಪನ್ನಗಳ ತಯಾರಿಕಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಪ್ಲಾಸ್ಟಿಕ್ ಅನ್ನು ನಿಷೇಧಿಸಿ ಪರ್ಯಾಯ ಪ್ಯಾಕಿಂಗ್ ವ್ಯವಸ್ಥೆಗಳ ಅಗತ್ಯವಿರುವ ಈ ಸಮಯದಲ್ಲಿ ಹೆಚ್ಚಿನ ವ್ಯವಹಾರಗಳು ಕಾಗದದ ಬ್ಯಾಗಗಳತ್ತ ಒಲವು ತೋರಿದೆ. ಈ ನಿಟ್ಟಿನಲ್ಲಿ ಪೇಪರ್ ಬ್ಯಾಗ್ ತಾಂಬೂಲ ಬ್ಯಾಗ್, ಕೇಕ್ ಬ್ಯಾಗ್ ಶಾಪಿಂಗ್ ಬ್ಯಾಗ್ , ವೈನ್ ಬ್ಯಾಗ್ ಗಳ ತಯಾರಿಕೆಯನ್ನು ಈ ಕಾರ್ಯಗಾರದಲ್ಲಿ ಕಲಿಸಿಕೊಡಲಾಗುತ್ತದೆ.

ಈ ಕಾರ್ಯಗಾರಕ್ಕೆ ಅಗತ್ಯವಿರುವ ಕಚ್ಚಾ ಪದಾರ್ಥಗಳನ್ನು ಹಾಗೂ ಸಲಕರಣೆಗಳನ್ನು ತರಬೇತಿದಾರರೇ ಪೂರೈಸಲಿದ್ದಾರೆ.

ಆಸಕ್ತರು ಇದರ ಸದುಪಯೋಗಪಡಿಸಿಕೊಂಡು ಉದ್ಯಮಿಯಾಗುವಂತ ಹೆಜ್ಜೆ ಇಡಬೇಕೆಂದು ಈ ಮೂಲಕ ಕೋರಿಕೊಳ್ಳಲಾಗಿದೆ.

Paper Products Manufacturing Workshop ಕಾರ್ಯಗಾರವು ಮಾರ್ಚ್ 29 ಮತ್ತು 30ಮಾರ್ಚ್ ರಂದು
ಮಥುರಾ ಪ್ಯಾರಾಡೈಸ್ ಹೋಟೆಲ್ ಶಿವಮೊಗ್ಗ ದಲ್ಲಿ ನಡೆಯಲಿದೆ.
ಕಾರ್ಯಾಗಾರದ
ಶುಲ್ಕ – 200/- ರೂಪಾಯಿ.

ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ: 9740760061, +919243314217, +919902699882.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

World Theater Day ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ

0

World Theater Day ಶಿವಮೊಗ್ಗ ರಂಗಾಯಣವು ರಂಗಭೂಮಿ ದಿನಾಚರಣೆಯ ಪ್ರಯುಕ್ತ ಮಾ.27 ರಂದು ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 06 ಗಂಟೆಗೆ ಪೂರ್ವರಂಗದಲ್ಲಿ ರೆಪರ್ಟರಿ ಕಲಾವಿದರಿಂದ ರಂಗಸಂಗೀತ ಕಾರ್ಯಕ್ರಮ ನಡೆಯಲಿದೆ.

ರಂಗಾಯಣ ಶಿವಮೊಗ್ಗವು ಮೂರು ವರ್ಷಗಳ ರಂಗಪಯಣದ ‘ರಂಗಾಯಣ-ರಂಗಯಾನ ಅಂತರಂಗದ ನೆನಪಿನ ಪಯಣ’ ಪುಸ್ತಕವನ್ನು ಬೆಂಗಳೂರು ರಂಗಸಮಾಜದ ಸದಸ್ಯರಾದ ಡಾ.ಗುರುಪ್ರಸಾದ್ ಟಿ.ಆರ್ ಇವರು ಬಿಡುಗಡೆ ಮಾಡಲಿದ್ದಾರೆ. ಶಿವಮೊಗ್ಗ ಪತ್ರಕರ್ತರು, ರಂಗಕರ್ಮಿಗಳು ಆದ ಹೊನ್ನಾಳಿ ಚಂದ್ರಶೇಖರ್ ಇವರಿಗೆ ರಂಗಗೌರವವನ್ನು ಸಲ್ಲಿಸಲಾಗುತ್ತದೆ.

World Theater Day ನಂತರ ಎಸ್.ದಿವಾಕರ್ ಕನ್ನಡ ಅನುವಾದದ, ರಾಜೇಶ್ ನೃತ್ಯ ವಿನ್ಯಾಸದ, ರಂಗನಾಥ್, ಶಿವಮೊಗ್ಗ ಇವರ ರಂಗರೂಪ ಮತ್ತು ನಿರ್ದೇಶನದ ಇನ್ ಫಾರ್ಮ್ ಥಿಯೇಟರ್ ಬೆಂಗಳೂರು ಇವರ ಪ್ರಸ್ತುತಿಯ ‘ಗೋಡೆ’ ನಾಟಕ ಪ್ರದರ್ಶನವು ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

NSUI ತೀರ್ಥಹಳ್ಳಿ ನಂದಿತಾ ಅಸಹಜ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಎನ್ ಎಸ್ ಯು ಐ ಮನವಿ

0

NSUI  ತೀರ್ಥಹಳ್ಳಿಯ ಮುಗ್ಧ ಬಾಲಕಿಯ ನಂದಿತಾಳ ಅಸಹಜ ಸಾವಿನ ಕುರಿತು ಸಿಬಿಐ ತನಿಖೆಗೆ ವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ NSUI ಮನವಿ ಪತ್ರ ಸಲ್ಲಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಗೌರವಾನ್ವಿತ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಐ.ಯು ವತಿಯಿಂದ ಒತ್ತಾಯಪೂರ್ವಕ ಮನವಿ ಮಾಡಿಕೊಂಡಿದೆ. 2013 ರಲ್ಲಿ ತೀರ್ಥಹಳ್ಳಿಯಲ್ಲಿ ಹಿಂದೂ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿ ಕುಮಾರಿ ನಂದಿತಾಳ ಅಸಹಜ ಸಾವಿಗೀಡಾಗಿದ್ದು,ಸದರಿ ಮೃತ ವಿದ್ಯಾರ್ಥಿನಿಯ ಅಸಹಜ ಸಾವಿನ ಕುರಿತು ಅಂದಿನ ಕಾಂಗ್ರೇಸ್ ನೇತೃತ್ವದ ರಾಜ್ಯಸರ್ಕಾರ ಸಿಒಡಿ ತನಿಖೆ ನಡೆಸಿತ್ತು. ಆದರೆ, ಸದರಿ ಸಿಐಡಿ ವರದಿಯ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪಣೆ ಮಾಡಿದ್ದರು. ಸದರಿ ವಿದ್ಯಾರ್ಥಿ ನಂದಿತಾ ಮೃತಳಾದ ಸಂದರ್ಭದಲ್ಲಿ ರಾಜ್ಯಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಈಗಿನ ಕರ್ನಾಟಕ ರಾಜ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಇನ್ನಿತರರು ಮೇಲ್ಕಂಡ ವಿದ್ಯಾರ್ಥಿಯ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗಾಗಿ ಉಗ್ರ ಹೋರಾಟವನ್ನು ಮಾಡಿದ್ದರು.

ಅಲ್ಲದೆ ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇಂದಿನ ಕೇಂದ್ರ ಗೃಹ ಸಚಿವರು ಆಗಿರುವ ಶ್ರೀ ಅಮಿತಾ ಷಾ ರವರು 2014 ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕುಮಾರಿ ನಂದಿತಾಳ ಮನೆಗೆ ಭೇಟಿ ನೀಡಿ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸಿ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.

NSUI  ಆದರೆ,ಈಗಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹಾಗೂ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಮೇಲ್ಕಂಡ ಮುಗ್ಧ ಬಾಲಕಿಯ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸದೆ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಲು ನಿರ್ಲಕ್ಷ್ಯತನ ತೋರಿರುತ್ತಾರೆ.

ಈ ಕಾರಣ, ತಾವುಗಳು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಾಗಲಿ ಅಥವಾ ದಾವಣಗೆರೆಯಲ್ಲಿ ನಡೆಯುವ ಬಿಜೆಪಿ ಪಕ್ಷದ “ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ” ಸಮಾರಂಭದಲ್ಲಿ ಮೇಲ್ಕಂಡ ಮುಗ್ಧ ಬಾಲಕಿಯ ನಂದಿತಾ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸಿ ಬಾಲಕಿಯ ಸಾವಿಗೆ ನ್ಯಾಯಕೊಡಸಬೇಕಾಗಿ ಕೋರಿದೆ. ಇಲ್ಲವಾದಲ್ಲಿ ಮುಗ್ಧ ಬಾಲಕಿಯ ಶವದ ಮೇಲೆ ರಾಜಕಾರಣ ಮಾಡಿದ ಅಪಕೀರ್ತಿಗೆ ತಮ್ಮ ಪಕ್ಷ ಒಳಗಾಗಲಿದೆ ಎಂದು ಪತ್ರ ದಲ್ಲಿ ತಿಳಿಸಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Breaking News ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹತೆ ಘೋಷಿಸಿದ ಲೋಕಸಭಾ ಮಹಾ ಕಾರ್ಯದರ್ಶಿ ಆದೇಶ

Breaking News  ಸೂರತ್ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರನ್ನ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಕೇರಳ ವಯ್ನಾಡ್ ನಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು.
ಲೋಸಭೆಯ ಮಹಾ ಕಾರ್ಯದರ್ಶಿ ಅವರು
ತಮ್ಮ ಆದೇಶ ಪತ್ರದಲ್ಲಿ ರಾಜೀವ್ ಗಾಂಧಿ ಅವರನ್ನ ಅನರ್ಹಗೊಳಿಸಿದ್ದಾರೆ. ಈ ಆದೇಶವು ಸೂರತ್ ಕೋರ್ಟಿನ ತೀರ್ಪಿನ ದಿನದಿಂದ ಜಾರಿಯಾಗಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಮೋದಿ ಸಮುದಾಯದ ಬಗ್ಗೆ ರಾಹುಲ್ ಅವರು ಕೋಲಾರದ ಸಭೆಯೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.ಅದನ್ನ ಪ್ರಶ್ನಿಸಿ ಬಿಜೆಪಿ ಶಾಸಕ
ಪೂರ್ಣೇಶ್ ಮೋದಿ ನ್ಯಾಯಾಲಯದಲ್ಲಿ
ಮಾನನಷ್ಟ ಮೊಕದ್ದಮೆ ಹೂಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

Breaking News  ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಈ ಬಗ್ಗೆ ತೀವ್ರತರ ಚಿಂತನೆ,ಸಭೆ ಮತ್ತು
ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತುರ್ತು ವಿಚಾರ ವಿನಿಮಯ ನಡೆಯುತ್ತಿದೆ.

ಮೇಲ್ಮನವಿ ಸಲ್ಲಿಸಲು ಮೂವತ್ತು ದಿನಗಳ ಗಡುವನ್ನೂ ರಾಹುಲ್ ಗಾಂಧಿ ಅವರಿಗೆ ಕೋರ್ಟ್ ನೀಡಿದೆ‌ ಎಂಬುದೂ ಇಲ್ಲಿ ಉಲ್ಲೇಖನೀಯ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆದೇಶದ ಪ್ರತಿ

Child Helpline ಮಕ್ಕಳ ಸಹಾಯವಾಣಿ ಸುಪರ್ದಿಯಲ್ಲಿ ಹನ್ನೆರೆಡು ವರ್ಷದ ಬಾಲಕಿ ಮೇಘನಾ

0

Child Helpline ಮಕ್ಕಳ ಸಹಾಯವಾಣಿ ಅಧಿಕಾರಿಗಳು 12 ವರ್ಷದ ಮೇಘನಾ ಎಂಬ ಬಾಲಕಿಯನ್ನು ರಕ್ಷಿಸಿ, ಪಾಲನೆ, ಪೋಷಣೆ ಮಾಡಿದ್ದಾರೆ. ಮಗುವಿನ ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿದ್ದಾರೆ.

ಈ ಬಾಲಕಿಯ ಹೆಸರು ಮೇಘನಾ, ಈಕೆಯ ತಂದೆ ಹೆಸರು ನಾಗಪ್ಪ, ತಾಯಿ ಚಿನ್ನಮ್ಮ, ವಿಳಾಸ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಎಂದು ತಿಳಿದುಬಂದಿರುತ್ತದೆ.

Child Helpline ಬಾಲಕಿಯ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಬಾಲಕಿಯ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೋಳ, ಶಿವಮೊಗ್ಗ ಇವರ ಕಚೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

SSLC Exam 2023 ಮಾರ್ಚ್ 31 ಹತ್ತನೇ ತರಗತಿ ಪರೀಕ್ಷೆ ಆರಂಭ ಜಿಲ್ಲಾಡಳಿತದಿಂದ ಮುಂಜಾಗ್ರತೆ ಕ್ರಮಗಳು

0

SSLC Exam 2023  ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಶಿವಮೊಗ್ಗ ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವ ಉದ್ದೇಶದಿಂದ ಮುಂಜಾಗೃತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ ಫಾಸಲೆಯವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸಿಆರ್‍ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿರುತ್ತಾರೆ.

SSLC Exam 2023  ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಫಾಸಲೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಪರೀಕ್ಷೆ ನಡೆಯಲಿರುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್, ಜೆರಾಕ್ಸ್, ಫ್ಯಾಕ್ಸ್ ಅಂಗಡಿಗಳು ತೆರೆಯುವುದನ್ನು ನಿರ್ಬಂಧಿಸಿದೆ. ಮೊಬೈಲ್ ಬಳಕೆಯನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

District Police Department ಚುನಾವಣೆ ಕಾವೇರುತ್ತಿದೆ ಜಿಲ್ಲಾ ಪೋಲಿಸ್ ಇಲಾಖೆಯಿಂದ ವಾಹನಗಳ ತಪಾಸಣೆ ಚುರುಕು

0

District Police Department ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ವಿಶೇಷ ವಾಹನ ಚೆಕ್ ಪೋಸ್ಟ್ ಗಳನ್ನು ಪೊಲೀಸ್ ಇಲಾಖೆ ಆರಂಭಿಸಿದೆ.

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ಜಿಲ್ಲೆಯ ಹಲವು ಕಡೆ ದಾಖಲೆಗಳಿಲ್ಲದೆ ಸಾಗಾಣೆ ಮಾಡುತ್ತಿದ್ದ ವಾಹನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಪೊಲೀಸ್ ಇಲಾಖೆಗೆ ದೊರೆತಿದೆ.

ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ 29.70 ಲಕ್ಷ ರೂ. ಮೌಲ್ಯದ1100 ನಾನ್ ಸ್ಟಿಕ್ ದೋಸೆ ತವಾಗಳು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಲಾರಿಯಲ್ಲಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ 30 ಟನ್ ತೂಕದ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳಿದ್ದ 1000 ಬ್ಯಾಗ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂ. ಮೌಲ್ಯದ 10 ಟನ್ ತೂಕದ 404 ಅಕ್ಕಿ ಚೀಲಗಳು.

District Police Department ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಡಲಾಗಿದ್ದ 10 ಲಕ್ಷ ರೂ. ಮೌಲ್ಯದ ಬಟ್ಟೆ, ಸೀರೆ, ಕುಕ್ಕರ್ ಗಳು.

ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ, 8 ಪ್ರತ್ಯೇಕ ಪ್ರಕರಣ ದಾಖಲಿಸಿ ಸುಮಾರು 25 ಲೀಟರ್ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sri Charukeerthi Bhattarak Swamiji ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ

0

Sri Charukeerthi Bhattarak Swamiji  ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಅಸ್ತಂಗತರಾಗಿದ್ದಾರೆ.

ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.

ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಆರೋಗ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿತ್ತು. ಮಾರ್ಚ್ 24ರಂದು ಭಂಡಾರ ಭವನದಲ್ಲಿ ಬೆಳಿಗ್ಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರುಪೇರಿನಿಂದಾಗಿ ಅಸ್ವಸ್ಥಗೊಂಡು ಸ್ವಾಮೀಜಿಗಳು ಕುಸಿದು ಬಿದ್ದಿದ್ದರು. ಕೂಡಲೇ ಮಠಕ್ಕೆ ವೈದ್ಯರನ್ನ ಕರೆಸಿ ಚಿಕಿತ್ಸೆ ನೀಡಲಾಯಿತು. ನಂತರ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸ್ವಾಮೀಜಿಗಳು ದೈವಾಧೀನರಾದರು.

Sri Charukeerthi Bhattarak Swamiji  ಜಿ ನೈಕ್ಯರಾದ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಕರ್ಮ ಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯಗಳಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಸ್ವಾಮೀಜಿಗಳ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಅಪಾರ ಭಕ್ತ ಮುಂದಕ್ಕೆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Canara Bank Rural Self Employment Training Institute Shimoga ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ

0

Canara Bank Rural Self Employment Training Institute Shimoga ಶಿವಮೊಗ್ಗ ಜಿಲ್ಲೆಯ ಹೊಳಲೂರಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಕುರಿತು ಉಚಿತ ತರಬೇತಿ ಏರ್ಪಡಿಸಲಾಗಿದೆ.

ಏಪ್ರಿಲ್ 17 ರಿಂದ ಏಪ್ರಿಲ್ 26ರವರೆಗೆ ಸುಮಾರು ಹತ್ತು ದಿನಗಳ ಕಾಲ ಉಚಿತವಾಗಿ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಕುರಿತು ಉಚಿತ ತರಬೇತಿಗಳನ್ನ ಏರ್ಪಡಿಸಲಾಗಿದೆ.

ಈ ಶಿಬಿರದಿಂದ ಶಿಬಿರಾರ್ಥಿಗಳಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿದೆ. ಅವುಗಳೆಂದರೆ,
*ಉಚಿತವಾಗಿ ತರಬೇತಿ
*ಉಚಿತ ಊಟದ ವ್ಯವಸ್ಥೆ
*ವಸತಿ ವ್ಯವಸ್ಥೆ

*ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ ಹಾಗೂ ಪ್ರಾಯೋಗಿಕವಾಗಿಯು ತರಬೇತಿಯನ್ನು ಏರ್ಪಡಿಸಲಾಗಿದೆ.

*ತರಬೇತಿಯಲ್ಲಿ ಧರಿಸಲು ಯೂನಿಫಾರ್ಮ್ ನೀಡಲಾಗುತ್ತದೆ.
*ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ.
* ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ (MORD) ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಆಸಕ್ತ ನಿರುದ್ಯೋಗ ಅಭ್ಯರ್ಥಿಗಳು 18 ವರ್ಷದಿಂದ 45 ವರ್ಷದೊಳಗಿ ನವರು ಹಾಗೂ ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿದವರು ಅರ್ಜಿ ಸಲ್ಲಿಸಬಹುದು.

Canara Bank Rural Self Employment Training Institute Shimoga ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 8660062683,
9743429595, ಅಥವಾ 94 81955721.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹೊಳಲೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.