Friday, April 10, 2026
Friday, April 10, 2026
Home Blog Page 1271

SAIL-VISL ಸರ್ಕಾರಿ ಶಾಲೆಗಳ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಭದ್ರಾವತಿ ವಿಐಎಸ್ ಎಲ್ ನಿಂದ ಉಪಕರಣಗಳ ಕೊಡುಗೆ

0

SAIL-VISL  ಮಾರ್ಚ್ 23,2023 ರಂದು ಭದ್ರಾವತಿಯ ಕರ್ನಾಟಕ ಸರ್ಕಾರಿ ಶಾಲೆಗಳ 83 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಉಪಕರಣಗಳನ್ನು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದಿಂದ ಶಾರದ ಮಂದಿರದಲ್ಲಿ ವಿತರಿಸಲಾಯಿತು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು), ಶ್ರೀ ಜೆ. ಜಗದೀಶ, ಅಧ್ಯಕ್ಷರು, VISL ಕಾರ್ಮಿಕರ ಸಂಘ, ಶ್ರೀ ನವೀನ್ ರಾಹುಲ್, ಉಪಾಧ್ಯಕ್ಷರು, VISL ಅಧಿಕಾರಿಗಳ ಸಂಘ ಮತ್ತು ಶಿಕ್ಷಣ ಇಲಾಖೆಯಿಂದ ಶ್ರೀ ಸಿ.ಆರ್.ಪರಮೇಶಪ್ಪ, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ, ಶಿವಮೊಗ್ಗ ಮತ್ತು ಶ್ರೀ ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

4.82 ಲಕ್ಷ ರೂಪಾಯಿ ಮೌಲ್ಯದ 31 ವ್ಹೀಲ್ ಚೇರ್‌ಗಳು, 3 ಸಿ.ಪಿ. ಚೇರ್‌ಗಳು, 43 MSIED ಕಿಟ್‌ಗಳು, 4 ವಾಕರ್ಸ್, 2 ರೋಲೇಟರ್‌ಗಳನ್ನು ಗಣ್ಯರಿಂದ ವಿತರಿಸಲಾಯಿತು.

ಉಕ್ಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಾಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಉಪಯುಕ್ತವಾದ ಡಬಲ್ ಬರ್ನರ್ ಗ್ಯಾಸ್ ಸ್ಟೌವ್‌ನ್ನು ಹಸ್ತಾಂತರಿಸಲಾಯಿತು.

ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ), ಸ್ವಾಗತಿಸಿ, ಧನ್ಯವಾದಗಳನ್ನು ಕೋರಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ಮಾತನಾಡಿ SAIL-VISL ವಿವಿಧ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಯಾವಾಗಲೂ ತೊಡಗಿಸಿಕೊಂಡಿದೆ.

ಈ ಹಣಕಾಸು ವರ್ಷದಲ್ಲಿ ದೊಡ್ಡೇರಿ ಗ್ರಾಮ, ಉಕ್ಕುಂದ ಗ್ರಾಮ, ಭದ್ರಾವತಿಯ ರೋಟರಿ ಕ್ಲಬ್‌ನಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ ಮತ್ತು VISL ಆಸ್ಪತ್ರೆಗಳು ಸಹಯೋಗದೊಂದಿಗೆ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು 500 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಶಿಕ್ಷಣ ವಲಯದಲ್ಲಿ, 2 ಕಂಪ್ಯೂಟರ್‌ಗಳು ಮತ್ತು ಒಂದು ವೆಬ್ ಕ್ಯಾಮೆರಾವನ್ನು ಒಳಗೊಂಡಿರುವ ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಹಸ್ತಾಂತರಿಸಲಾಯಿತು, ಇದು ಗ್ರಾಮೀಣ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿ ನಡೆಸಲು ಶಿಕ್ಷಣ ಇಲಾಖೆಗೆ ನೆರವಾಗುತ್ತದೆ. ವಿಶೇಷವಾಗಿ ವಿಕಲಚೇತನರಿಗೆ ಭದ್ರಾವತಿಯ ತರಂಗ ಕಿವುಡರ ಶಾಲೆಯ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ೨೨ ಜೋಡಿ ಶ್ರವಣ ಸಾಧನಗಳನ್ನು ಡಿಸೆಂಬರ್
3,2022ರಂದು ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಸಂದರ್ಭದಲ್ಲಿ ಮತ್ತು ಇಂದು ಕರ್ನಾಟಕ ಸರ್ಕಾರದ ಭದ್ರಾವತಿಯ ಶಾಲೆಗಳ 83 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಪಕರಣಗಳನ್ನು ಹಸ್ತಂತರಿಸಲಾಗಿದೆ.

ನಮ್ಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ನೆರವನ್ನು ಮತ್ತು ಉಪಕರಣಗಳನ್ನು ಹಸ್ತಾಂತರಿಸಲಾಯಿತು.

ಒಟ್ಟಾರೆಯಾಗಿ ಈ ಹಣಕಾಸು ವರ್ಷದಲ್ಲಿ SAIL-VISL ನಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಈ ಉದಾತ್ತ ಉದ್ದೇಶಕ್ಕಾಗಿ 8.22ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ.

ಶ್ರೀ ಸಿ.ಆರ್. ಪರಮೇಶಪ್ಪ, ಡಿ.ಡಿ.ಪಿ.ಐ, ಶಿವಮೊಗ್ಗ ಮತ್ತು ಶ್ರೀ ಎ.ಕೆ. ನಾಗೇಂದ್ರಪ್ಪ, ಬಿ.ಈ.ಓ, ಭದ್ರಾವತಿ ಅವರು SAIL-VISL ಕೊಡುಗೆಗೆ ಧನ್ಯವಾದ ಸಲ್ಲಿಸಿದರು ಮತ್ತು ಸರ್ಕಾರಿ ಶಿಕ್ಷಣ ಇಲಾಖೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ವಿಶೇಷ ಚೇತನರಿಗೆ ಭವಿಷ್ಯದಲ್ಲಿಯೂ ಸಹಾಯ ಮತ್ತು ಬೆಂಬಲವನ್ನು ಕೋರಿದರು.

SAIL-VISL  ಭದ್ರಾವತಿಯ ಕ್ಷೇತ್ರ ಶಿಕ್ಷಣ ಕಛೇರಿಯಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗಣ್ಯರು ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳೊಂದಿಗೆ ಗ್ರಾಮೀಣ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದರು.

ಶ್ರೀಮತಿ ಕೆ.ಎಸ್. ಶೋಭ, ಸಹಾಯಕ ವ್ಯವಸ್ಥಾಪಕರು (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಕಾರ್ಯಕ್ರಮವನ್ನು ನಿರೂಪಿಸಿ ಸಂಯೋಜಿಸಿದರು.

ಶ್ರೀ ವಿ.ಹೆಚ್, ಪಂಚಾಕ್ಷರಿ, ಭದ್ರಾವತಿಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮತ್ತು ಶ್ರೀಮತಿ ಕವಿತಾ, ಕ್ಷೇತ್ರ ಸಮನ್ವಯಾಧಿಕಾರಿ ಉಪಸ್ಥಿತರಿದ್ದರು.

World Theatre Day 2023 ಕೆ ಲೈವ್ ನ್ಯೂಸ್ ಮತ್ತು ಕೆ.ಅಶೋಕ ಪೈ ಸ್ಮಾರಕ ಕಾಲೇಜಿನ ಆಶ್ರಯದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆ

0

World Theatre Day 2023 ಕೆ ಲೈವ್ ಮಾಧ್ಯಮ ಮತ್ತು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ಮಾರ್ಚ್. 28ರಂದು ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ಮಾರ್ಚ್ 28 ರಂದು ಬೆಳಗ್ಗೆ 10:30 ಕ್ಕೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗದಲ್ಲಿ ರಂಗ ಮಂಚ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು
ಹಿರಿಯ ರಂಗಕರ್ಮಿ ಗಳಾದ ಪೊ. ಬಿ. ಎಮ್. ಕುಮಾರ ಸ್ವಾಮಿ , ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ಸಂಘಟಕರು, ರಂಗ ಸಮಾಜದ ಮಾಜಿ ಸದಸ್ಯರು ಎಸ್.ಆರ್. ಹಾಲಸ್ವಾಮಿ, ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ. ರಜಿನಿ ಎ. ಪೈ, ಕೆ ಲೈವ್ ನ್ಯೂಸ್ ಶಿವಮೊಗ್ಗ ಪ್ರಧಾನ ಸಂಪಾದಕರಾದ ಡಾ. ಸುಧೀಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ
ಡಾ. ಸಂಧ್ಯಾ ಕಾವೇರಿ ವಹಿಸಲಿದ್ದಾರೆ.

World Theatre Day 2023 ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Bellary Vijayanagar Koppal Zone Safety Day Celebration ಎಸ್ ಎಲ್ ಆರ್ ಕಾರ್ಖಾನೆ ಆತಿಥ್ಯದಲ್ಲಿ ವಿಜಯನಗರ ಕೊಪ್ಪಳ ವಲಯಮಟ್ಟದ ಸುರಕ್ಷಾ ದಿನಾಚರಣೆ

0

Bellary Vijayanagar Koppal Zone Safety Day Celebration ಪ್ರತಿ ವರ್ಷವೂ ಮಾರ್ಚ್‌ ತಿಂಗಳಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಸುರಕ್ಷತಾ ದಿನಾಚರಣೆ ಯ ನಂತರ ಬಳ್ಳಾರಿ ವಿಜಯನಗರ ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ ಸಮಿತಿಯ ವತಿಯಿಂದ ಸುರಕ್ಷತಾ ದಿನಾಚರಣೆ ಆಚರಣೆ ಮಾಡುವ ಪದ್ದತಿ 2002 ನೇ ಸಾಲಿನಿಂದ ನಡೆದುಕೊಂಡು ಬಂದಿದೆ.

ಅದರಂತೆ ಈ ವರ್ಷದ ಆಚರಣೆಯನ್ನು ಮಾರ್ಚ್ 24ರಂದು ಹೊಸಪೇಟೆಯ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಆಚರಿಸಲಾಯಿತು.

‌2000 ರಿಂದ 2002 ರ ಮಧ್ಯದಲ್ಲಿ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಭಾಗದಲ್ಲಿ ಕೈಗಾರಿಕೆ ಗಳ ಅಭಿವೃದ್ಧಿ ಗಾಗಿ ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಯಡಿಯಲ್ಲಿ ವಿದ್ಯುತ್, ಉಕ್ಕು ಮತ್ತು ಕಬ್ಬಿಣ, ಸಕ್ಕರೆ, ಸಿಮೆಂಟ್ ವಲಯದಲ್ಲಿ ಸಣ್ಣ ಮತ್ತು ಮಧ್ಯಮ ವಲಯದ ಕಾರ್ಖಾನೆಗಳು ಪ್ರಾರಂಭವಾದವು. ಅವುಗಳಲ್ಲಿ ಮುಖ್ಯವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ , ಜಿಂದಾಲ್ ಸ್ಟೀಲ್ ಲಿಮಿಟೆಡ್, , ಆರ್ ಟಿ .ಪಿ.ಎಸ್, ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ , ಎ.ಸಿ ಸಿ ಸಿಮೆಂಟ್ , ಎಂಎಸ್ ಪಿ.ಎಲ್ ಬಿ.ಎಂ.ಎಂ ಇಸ್ಪಾತ್, ಬಿಟಿಪಿಎಸ್, ಎಸ್ ಎಲ್ ಆರ್ ಅಂತಹ ಅನೇಕ ಕಾರ್ಖಾನೆಗಳು ಮತ್ತು ಸಣ್ಣ ಪುಟ್ಟ ಕಾರ್ಖಾನೆಗಳು ಹಂತಹಂತವಾಗಿ ಪ್ರಾರಂಭವಾಗಿ ಉತ್ಪಾದನೆ ಯನ್ನು ಮುಖ್ಯ ಗುರಿಯಾಗಿ ಮಾಡಿಕೊಂಡು ಕಾರ್ಖಾನೆ ಮಾಲಿಕರು ಕೆಲಸಗಾರರ ಸುರಕ್ಷತೆಗೆ ಹೆಚ್ಚಿನ ಗಮನ ಕೊಡದೆ ಉತ್ಪಾದನೆ ಯನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಕಾರ್ಖಾನೆಗಳಲ್ಲಿ ಮಾರಣಾಂತಿಕ ಅಪಘಾತಗಳು ಜೋತೆಗೆ ಅನೇಕ ದೂಡ್ಡ ಅಪಘಾತಗಳು ಸಂಭವಿಸಿದವು. ಅದು ಅಲ್ಲದೆ ಆಗ ಗುಲ್ಬರ್ಗ ದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು ಮತ್ತು ಪದೆ ಪದೆ ಅಧಿಕಾರಿಗಳು ಕಾರ್ಖಾಗಳಿಗೆ‌ ಭೇಟಿ ನೀಡಲು ಸಹ ಬೇಸರವಾಗುತ್ತಿತ್ತು. ಏಕೆಂದರೆ, ಆಗ ಈ ಭಾಗದ ರಸ್ತೆಗಳ ಪರಿಸ್ಥಿತಿಯು ಸಹ ಉತ್ತಮವಾಗಿ ಇರಲಿಲ್ಲಾ ಮತ್ತು ಅಧಿಕಾರಿಗಳ ಭೇಟಿಯು ಸಹ ಆಗುತ್ತಿರಲಿಲ್ಲಾ. ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟು ಕೊಂಡು 2002 ನೇಯ ಸಾಲಿನಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳಾದ ಶ್ರೀ ಡಿ ಸಿ ಜಗದೀಶ್ ಮತ್ತು ಶ್ರೀ ನವನಿತ್ ಮೋಹನ್ ಮತ್ತು ಮೇಲ್ವೀಚಾರಕರಾದ ಶ್ರೀಮತಿ ಭಾರತಿ ಎಂ ಕಾರ್ಖಾನೆಗಳ ಆಡಳಿತ ಮಂಡಳಿಯ ಸಹಾಕಾರದೊಂದಿಗೆ ಮಾತನಾಡಿ
“ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ” ಯನ್ನು ಪ್ರಾರಂಭಿಸಿದರು. ಮತ್ತು ಆ ಕಮೀಟಿಯಲ್ಲಿ ಈ ಕೆಳಕಂಡ ಅಂಶಗಳನ್ನು ಮಾತನಾಡಿ ಸೂಚನೆಯನ್ನು ಹೊರಡಿಸಿದರು.

Bellary Vijayanagar Koppal Zone Safety Day Celebration ಅದರಲ್ಲಿ ಮುಖ್ಯವಾಗಿ
1. ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಅವ್ಯಕತೆಯನ್ನು ಅಧಿಕಾರಿಗಳಿಗೆ
ಒದಗಿಸುವುದು
2. ಕಾರ್ಖಾನೆಗಳಲ್ಲಿ ಸುರಕ್ಷತಾ ಅಧಿಕಾರಿಗಳನ್ನು ನೇಮಕ ಮಾಡುವುದು
3. ಸುರಕ್ಷತಾ ತರಭೇತಿ ನೀಡುವುದು
4. ಸುರಕ್ಷತಾ ಸಾಧನ ಸಾಮಾಗ್ರಿಗಳನ್ನು ಕಾಲ ಕಾಲಕ್ಕೆ ಕಾರ್ಮಿಕರಿಗೆ ಒದಗಿಸುವುದು.
5. ಸುರಕ್ಷತಾ ಆಡಿಟ್ ಮಾಡುವುದು
6. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೈಗಾರಿಕೆಗಳಲ್ಲಿ ಹೆಚ್ಚು ಹೆಚ್ಚು ಸ್ಪರ್ಧೆಗಳನ್ನು
ಮೂಡಿಸುವುದು ಹೀಗೆ ಹಲವಾರು ಕಾರ್ಯಕ್ರಮ ಹಾಕಿಕೊಂಡು “ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ” ಪ್ರಾರಂಭಿಸಿದರು. ಆ ಸಮಿತಿಯ ಅಡಿಯಲ್ಲಿ 4 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಕಮಿಟಿಯು
ಗುಲ್ಬರ್ಗ ಮತ್ತು ಒಳ್ಳಾರಿ ಭಾಗದಲ್ಲಿ 2 ಸಮಿತಿಗಳಾಗಿ ಮಾಡಲಾಯಿತು.
1) ಗುಲ್ಬರ್ಗ ರೀಜನಲ್ ಸೇಫ್ಟಿ ಕಮಿಟಿ (ಗ್ರೀಸ್ಡ್)
2) ಬಳ್ಳಾರಿ -ಕೊಪ್ಪಳ ವಲಯ ಸುರಕ್ಷತಾ ಸಮಿತಿ ( ಬಿಕೆರೈಸ್)

ಕರ್ನಾಟಕ ಸರ್ಕಾರದ ಕಾರ್ಖಾನೆ ಮತ್ತು ಬಾಯ್ಲರ್ ವಿಭಾಗದ ಅಧಿಕಾರಿಗಳು ಮತ್ತು ಕಾರ್ಖಾನೆಗಳ ಅಧಿಕಾರಿಗಳ ಮುಂಚುಣಿಯಲ್ಲಿ ಪ್ರತಿ ವರುಷ ಒಂದೂಂದು ಕಾರ್ಖಾನೆಯು ಜವಾಬ್ದಾರಿ ತೆಗೆದುಕೊಂಡು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದೆ.
ಕಳೆದ 2 ವರ್ಷದ ಅನೇಕ ಬದಲಾವಣೆಯ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯು ಹೊಸದಾಗಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಳ್ಳಾರಿ ವಿಜಯನಗರ ಕೊಪ್ಪಳ ಸುರಕ್ಷತಾ ಸಮಿತಿ ಮಾರ್ಪಾಟು ನಂತರ ಈ ವರ್ಷ ಮೆ. ಎಸ್ ಎಲ್ ಆರ್ ಮೆಟಲಿಕ್ಸ್ ಲಿಮಿಟೆಡ್ ಆತಿಥ್ಯದಲ್ಲಿ 2022-23 ನೇ ಸಾಲಿನ ವಲಯ ಮಟ್ಟದ ಸುರಕ್ಷತಾ ದಿನಾಚರಣೆ ನಡೆಯುತ್ತಿದೆ.

ಈ ಸಂಧರ್ಭದಲ್ಲಿ ಆಗಿನಿಂದಲೂ ಇಲ್ಲಿಯವರೆಗೆ ಸತತವಾಗಿ ಈ ಸಮಿತಿಯಲ್ಲಿ ಅನೇಕ ಮಾರ್ಗದರ್ಶನ ನೀಡಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗೆ ಯಶಸ್ವಿಯಾಗಲು ಕಾರಣಕರ್ತರು ಎಂದರೆ ಮಾನ್ಯ ಶ್ರೀ ಶ್ರೀನಿವಾಸ್, ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಕರ್ನಾಟಕ ಸರ್ಕಾರ ಇವರು ಈ ಭಾಗದಲ್ಲಿ ಹಿಂದೆ ಸತತವಾಗಿ ಸುಮಾರು 5 ರಿಂದ 6 ವರ್ಷಗಳ ಕಾಲ ಮಾಡಿದ ಕೆಲಸ, ಸುಧಾರಣೆ ಮತ್ತು ಜವಾಬ್ದಾರಿಯುತವಾದ ಕೆಲಸವನ್ನು ಇಂದಿಗೂ ಈ ಭಾಗದ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಕೆಲಸಗಾರರಿಗೆ ಪೂರಕವಾಗಿದೆ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರಕ್ಷತೆ, ಆರೋಗ್ಯ ವಿಭಾಗದಲ್ಲಿ ಹೆಸರುಗಳಿಸಿದ ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ಯಶಸ್ವಿಯಾಗಿ ಸುಮಾರು 21 ವರ್ಷಗಳ ಕಾಲ ಈ ಸಮಿತಿಯು ಸುರಕ್ಷತಾ ದಿನಾಚರಣೆ ಆಚರಣೆ ಮಾಡುತ್ತಾ ಬಂದಿದೆ. ಇದಕ್ಕಾಗಿ ಇಲಾಖೆಯ ಅಧಿಕಾರಿ ವರ್ಗದವರರಿಗೆ ಸಮಿತಿಯ ಎಲ್ಲಾ ಸದಸ್ಯರಿಗೆ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿಗೆ ಧನ್ಯವಾದಗಳು. ಈಗ ಈ ಬಿಕೆವಿರೈಸ್ ಸಮಿತಿಯ ಕಾರ್ಖಾನೆಗಳ ಇಲಾಖೆಯಿಂದ ಈ ಸಮಿತಿಯ ಛೇರ್ಮನ್ ಸ್ಥಾನದಲ್ಲಿ ಇದ್ದು ಹುಬ್ಬಳ್ಳಿ ವಲಯದ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರನಾಥ್ ರಾಥೋಡ್ ರವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ವಿವಿಧ ಕಾರ್ಖಾನೆಯ ಅಧಿಕಾರಿಗಳ ಪಾತ್ರ ಬಹಳ ದೊಡ್ಡ ಪ್ರಮಾಣದಲ್ಲಿ ಮುಂದುವರಸಿ ಈ ವರ್ಷವು ಅನೇಕ ತರಬೇತಿ ಕಾರ್ಯಕ್ರಮಗಳು, ಕಾರ್ಖಾನೆಗಳಿಗೆ ಅಧಿಕಾರಿಗಳ ಭೇಟಿ ಮತ್ತು ಸ್ಪರ್ಧೆಗಳನ್ನು ಆಯೋಜಿಸಿ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡುವಂತ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರಲಾಯಿತು. ಅದರಂತೆ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಯು ಸಹ ಉತ್ಪಾದನೆ ಜೊತೆಗೆ ಕಾರ್ಮಿಕರ ಸುರಕ್ಷತೆ,ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಮಹತ್ವನೀಡುತ್ತಾ ಬಂದ ಕಾರಣದಿಂದ ಇಂದು ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳದ ಎಲ್ಲಾ ಕಾರ್ಖಾನೆಯ ಅಪಘಾತ ಪ್ರಮಾಣ ಕಡಿಮೆಯಾಗಿದೆ ಮತ್ತು ಸುರಕ್ಷತೆಯಲ್ಲಿ ಹೆಚ್ಚಾಗಿ ತಿಳುವಳಿಕೆಯು ಬಂದಿದೆ.

2022-23 ನೇ ಸಾಲಿನಲ್ಲಿ *ಮೆ. ಎಸ್ ಎಲ್ ಆರ್ ಮೇಟಾಲಿಕ್ಸ್ ಲಿಮಿಟೆಡ್ ಆತಿಥ್ಯ ದಲ್ಲಿ ದಿನಾಂಕ 24-03-2023 ರಂದು ಸಾಯಂಕಾಲ ಹೊಸಪೇಟೆಯ ಮಲ್ಲಿಗೆ ಹೋಟಲ್ ಆವರಣದಲ್ಲಿ ಬಳ್ಳಾರಿ-ವಿಜಯನಗರ ಕೊಪ್ಪಳ ವಲಯದ ಮೂಲಕ 52 ನೇ ಸುರಕ್ಷತಾ ದಿನಾಚರಣೆಯ ಈ ವರ್ಷದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮ ದಲ್ಲಿ ಮಾನ್ಯ ಶ್ರೀ ಶ್ರೀನಿವಾಸ್, ನಿರ್ದೇಶಕರು ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಕರ್ನಾಟಕ ಸರ್ಕಾರ, ಎಸ್ ಎಲ್ ಆರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಜಕೂಮಾರ್ ಗೂಯಲ್ , ಕಾರ್ಯನಿರ್ವಾಹಕ ನಿರ್ದೇಶಕರು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಶಾಖೆ ಕುಡುತಿನಿಯ ಶ್ರೀ ವೆಂಕಟಾಚಲಪತಿ ಮತ್ತು ಎಸ್ ಎಲ್ ಆರ್ ಕಾರ್ಖಾನೆಯ ನಿರ್ದೇಶಕರು (ಆಪರೇಷನ್‌‌) , ಶ್ರೀ ದೇವದುತ್ ಸಿನಾ , ದಾವಣಗೆರೆ ವಲಯದ ಉಪನಿರ್ದೇಶಕರು ಬಾಯ್ಲರ್ ವಿಭಾಗದ ಶ್ರೀ ಶ್ರೀನಿವಾಸ್, ಬಳ್ಳಾರಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರು ಶ್ರೀ ವರುಣ್, ಸಹಾಯಕ ನಿರ್ದೇಶಕರು ಕೊಪ್ಪಳ ಮತ್ತು ರಾಯಚೂರು ವಿಭಾಗದ ಶ್ರೀ ವಿಜಯಕುಮಾರ್ ಇವರುಗಳ ಸಾನಿದ್ಯದಲ್ಲಿ ಸಮಾರೋಪ ಸಮಾರಂಭ ಜರುಗಿತು.

ಕಾರ್ಯಕ್ರಮ ಸುರಕ್ಷತಾ ಧ್ವಜಾರೋಹಣ ಮತ್ತು ಸುರಕ್ಷತಸ ಪ್ರತಿಜ್ಞೆ ಮಾಡುವುದರ ಮೋಲಕ ಪ್ರಾರಂಭವಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮತ್ತು ದೀಪ ಹಚ್ಚುವುರ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಸುರಕ್ಷತಾ ನಾಟಕ ವಿಭಾಗದಲ್ಲಿ ಬಹುಮಾನಗಳಿಸಿದ ತಂಡದಿಂದ ನಾಟಕ ಪ್ರದರ್ಶನ ಮಾಡಿಸಲಾಯಿತು.

ಸುರಕ್ಷತಾ ವಿಭಾಗದಲ್ಲಿ ಸಾಧನೆ ಮಾಡಿದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಡೆಪ್ಯೂಟಿ ಮ್ಯಾನೇಜರ್ ಎಂ.ಎಂ.ನಾಡಿಗೇರ್ ರವರಿಗೆ ಸುರಕ್ಷತಾ ಸೇವಾ ಪ್ರಶಸ್ತಿ-2023 ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿರ್ಲೋಸ್ಕರ್ ಕಾರ್ಖಾನೆಯ ಡಾ.ಪ್ರವೀಣ್ ಕೂಮಾರ್, ,ಉತ್ತಮ ವೈದ್ಯಾಧಿಕಾರಿ ಪ್ರಶಸ್ತಿ, ಮತ್ತು ಸ್ಮಾಯರ್ ಕಾರ್ಖಾನೆಯ ಸುರಕ್ಷತಾ ಅಧಿಕಾರಿ ಶ್ರೀ ಮಾರುತಿ ಪ್ರಸಾದ್ ರವರಿಗೆ ಉತ್ತಮ ಸುರಕ್ಷತಾ ಅಧಿಕಾರಿ, ಸ್ಮಯರ್ ಕಾರ್ಖಾನೆ ಗೆ ಉತ್ತಮ ಸುರಕ್ಷತಾ ಕಾರ್ಖಾನೆ ಮತ್ತು ಜೆ ಎಸ್ ಡಬ್ಲ್ ಕಾರ್ಖಾನೆಯ ಶ್ರೀ ಪ್ರಸಾದ್ ಜಿ ಇವರಿಗೆ ಉತ್ತಮ ಸುರಕ್ಷ ಕಾರ್ಮಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇಯತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾದ ಎಲ್ಲಾ ಅತಿಥಿ ಮತ್ತು ಅಧ್ಯಕ್ಷ ರಿಂದ ಸುರಕ್ಷತಾ ಸುದಾರಣೆ,ಅಭಿವೃದ್ಧಿ, ಸರ್ಕಾರದ ಯೋಜನೆಗಳು ಮತ್ತು ಮುಂದಿನ ಬಿಕೆವಿರೈಸ್ ಯೋಜನೆಗಳ ಬಗ್ಗೆ ಅದ್ಯಕ್ಷರು ಮತ್ತು ಅತಿಥಿಗಳು ತಮ್ಮ ತಮ್ಮ ಭಾಷಣದಲ್ಲಿ ತಿಳಿಸಿದರು. ಕೊನೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭ ಯಶಸ್ವಿಯಾಗಿ ಮುಕ್ತಾಯವಾಗಲು ಕಾರಣರಾದ ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆಯ ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಭಾಗವಹಿಸಿದ ಎಲ್ಲಾರಿಗೂ ಧನ್ಯವಾದಗಳನ್ನು ವಂದನೆಗಳನ್ನು ತಿಳಿಸಿ ಕಾರ್ಯಕ್ರಮ ಮುಕ್ತಾಯವಾಯಿತು.

ಅಚ್ಚುಮೆಚ್ಚಿನ ಮತ್ತು ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿದ ಮೆ ಎಸ್ ಎಲ್ ಆರ್ ಮೇಟಾಲಿಕ್ಸ್ ಕಾರ್ಖಾನೆಯ ಆಡಳಿತ ಮಂಡಳಿಗೆ ಬಿಕೆವಿರೈಸ್ ಸಮಿತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕುಮಾರಿ ನಿಧಿ ಅಗರ್ವಾಲ್ ಮತ್ತು ಶ್ರಿ ಜಿ ಎಚ್ ರಮೇಶ್ ಮಾಡಿದರು, ಮುರುಳಿಧರ್ ನಾಡಿಗೇರ್ ಮತ್ತು ಶ್ರೀ ಮಾರುತಿ ಪ್ರಸಾದ್ ಸುರಕ್ಷತಾ ಪ್ರತಿಜ್ಞೆ ನೆಡೆಸಿಕೊಟ್ಟರು.

ಸುರಕ್ಷತಾ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿದ ಎಲ್ಲರಿಗೂ ಧನ್ಯವಾದಗಳು

ವರದಿ

ಮುರುಳಿಧರ್ ನಾಡಿಗೇರ್
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Service Excellence Awards ಶಿವಮೊಗ್ಗ ಡಿ.ವಿ. ಸತೀಶ್ ಅವರಿಗೆ ಸೋನಿ ಸರ್ವೀಸ್ ಎಕ್ಸಲೆನ್ಸಿ ಅವಾರ್ಡ್

0

Service Excellence Awards ಶಿವಮೊಗ್ಗದ ವಿಷ್ಣು ಸರ್ವಿಸ್ ಸೆಂಟರ್ ಮಾಲಿಕರಾದ ಸತೀಶ್ ಡಿ. ವಿ. ಅವರಿಗೆ ಸುದೀರ್ಘ ಸೇವೆ ಹಾಗೂ ಸೋನಿ ಗ್ರಾಹಕರ ಕೊಡುಗೆಯ ಅತ್ಯುತ್ತಮ ಸೇವೆಗಾಗಿ ದಕ್ಷಿಣ ಭಾರತದಲ್ಲಿನ ಹೆಸರಾಂತ ಸೋನಿ ಸರ್ವಿಸ್ ಕೊಡ ಮಾಡುವ “ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್” — 2022 ನ್ನು, ಇದೇ ತಿಂಗಳು ಮಾರ್ಚ್ 23 ರಂದು ಚೆನ್ನೈನ ರೆಡ್ಡಿ ಸನ್ ಬ್ಲೂ ಹೋಟೆಲ್ ನಲ್ಲಿ ನಡೆದ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ಸೋನಿ ಸಂಸ್ಥೆ ನೀಡಿದೆ.

Service Excellence Awards ಪ್ರಶಸ್ತಿಯನ್ನು ಕಂಪನಿಯ ಪ್ರಮುಖರು ವಿತರಿಸಿ ಗೌರವಿಸಿದರು.
ಪ್ರಶಸ್ತಿ ಪುರಸ್ಕೃತರಾದ ಸತೀಶ್ ಡಿ. ವಿ.ಅವರು ಸೋನಿ ಕಂಪನಿಯ ಪ್ರಮುಖರನ್ನು ಅಭಿನಂದಿಸಿದ್ದಾರೆ. ಹಾಗೆಯೇ ಪ್ರಶಸ್ತಿ ಇನ್ನಷ್ಡು ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Congress Party ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಮೊದಲ ಪಟ್ಟಿಯಲ್ಲಿ ಸೊರಬ ಮತ್ತು ಭದ್ರಾವತಿ ಅಭ್ಯರ್ಥಿಗಳ ಹೆಸರು

0

Congress Party  ಕಾಂಗ್ರೆಸ್ ಬಿಡುಗಡೆ ಮಾಡಿದ ವಿಧಾನಸಭಾ ಚುನಾವಣೆ ಸಂಭವನೀಯ ಮೊದಲ ಪಟ್ಟಿಯಲ್ಲಿ ಸೊರಬ ಮತ್ತು ಭದ್ರಾವತಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

ಕಾಂಗ್ರೆಸ್ಸಿನ ಬಹು ನಿರೀಕ್ಷಿತ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ಒಟ್ಟು 124 ಕ್ಷೇತ್ರಗಳ ಟಿಕೆಟ್ ಘೋಷಣ

ಮೊದಲ ಪಟ್ಟಿಯಲ್ಲಿ ಕ್ಷೇತ್ರ ಹಾಗೂ ಅಭ್ಯರ್ಥಿಗಳ ಹೆಸರು ಹೀಗಿವೆ…

ಯಮನಕನಮರಡಿ -ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ- ಲಕ್ಷ್ಮಿ ಹೆಬ್ಬಾಳ್ಕರ್

ಖಾನಾಪುರ-ಅಂಜಲಿ ನಿಂಬಾಳ್ಕರ್

ಒಬಲೇಶ್ವರ-ಎಂ.ಬಿ ಪಾಟೀಲ

ಅಳಂದ-ಬಿ ಆರ್ ಪಾಟೀಲ

ಭಾಲ್ಕಿ-ಈಶ್ವರ ಖಂಡ್ರೆ

ಚಿತ್ತಾಪುರ-ಪ್ರಿಯಾಂಕ ಖರ್ಗೆ

ಬೀದರ್-ರಹೀಂ ಖಾನ್

ಕಾಗವಾಡ-ಭರಮ ಗೌಡ ಎ. ಕಗೆ

ಕುಡಚಿ – ಮಹೇಂದ್ರ ಕೆ ತಮ್ಮನ್ನವರ್
ಹುಕ್ಕೇರಿ- ಎಬಿ ಪಾಟೀಲ್
ಬೈಲಹೊಂಗಲ- ಮಹಾಂತೇಶ್ ಶಿವಾನಂದ ಕೌಜಲಗಿ
ರಾಮದುರ್ಗ- ಅಶೋಕ್ ಎಂ ಪಟ್ಟಣ
ಜಮಖಂಡಿ -ಅನಂದ ಸಿದ್ದು ನ್ಯಾಮಗೌಡ
ಹುನಗುಂದ ವಿಜಯನಾಂದ ಕಾಶಪ್ಪನವರ್
ಮುದ್ದೇಬಿಹಾಳ ಸಿಎಸ್​ ನಾಡಗೌಡ
ಬಸವನ ಬಾಗೇವಾಡಿ ಶಿವಾನಂದ ಪಾಟೀಲ್
ಇಂಡಿ ಯಶವಂತರಾಯಗೌಡ ಪಾಟೀಲ್
ಜೇವರ್ಗಿ- ಅಜಯ್ ಧರಂಸಿಂಗ್
ಸುರಪುರ -ರಾಜಾವೆಂಕಟಪ್ಪ ನಾಯಕ್
ಶಹಪುರ -ಶರಣಬಸಪ್ಪ ಗೌಡ
ಸೇಡಂ- ಶಂಕರಪ್ರಕಾಶ್ ಪಾಟೀಲ್
ಚಿಂಚೊಳ್ಳಿ- ಸುಭಾಶ್ ವಿ ರಾಥೋಡ್
ಗುಲ್ಬರ್ಗಾ ಉತ್ತರ ಖನೀಜ- ಫಾತಿಮಾ
ಹುಮ್ನಾಬಾದ್- ರಾಜಶೇಖರ್ ಬಿ ಪಾಟೀಲ್
ಬೀದರ್ ದಕ್ಷಿಣ -ಅಶೋಕ್ ಖೇಣಿ
ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ಶಾಮನೂರು- ಶಿವಶಂಕ್ರಪ್ಪ
ಕನಕಪುರ- ಡಿ.ಕೆ. ಶಿವಕುಮಾರ್​
ಚಿಕ್ಕೋಡಿ,ಸದಲಗಾ -ಗಣೇಶ ಹುಕ್ಕೇರಿ
ಕುಡಚಿ- ಮಹೇಂದ್ರ ಕೆ ತಮ್ಮಣ್ಣವರ್​
ಗಾಂಧಿನಗರ (ಬೆಂಗಳೂರು)- ದಿನೇಶ್​ ಗುಂಡುರಾವ್​
ಚಾಮರಾಜಪೇಟೆ- ಜಮೀರ್ ಅಹ್ಮದ್ ​
ಬಿಟಿಎಂಲೇಔಟ್- ರಾಮಲಿಂಗಾರೆಡ್ಡಿ
ಜಯನಗರ- ಸೌಮ್ಯ ರೆಡ್ಡಿ
ಮಸ್ಕಿ ಬಸನಗೌಡ
ತುರ್ವಿಹಾಳ-
ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ
ಯಲಬುರ್ಗ- ಬಸವರಾಜ್ ರಾಯರೆಡ್ಡಿ
ಕೊಪ್ಪಳ ಕೆ-ರಾಘವೇಂದ್ರ
ಗದಗ- ಹೆಚ್ ಕೆ ಪಾಟೀಲ್
ರೋಣ ಜಿಎಸ್ ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ)- ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್ ವಿ ದೇಶಪಾಂಡೆ
ಕಾರವಾರ -ಸತೀಶ್ ಸೈಲ್
ಭಟ್ಕಳ- ಎಂ ಸುಬ್ಬವೈದ್ಯ
ಹಾನಗಲ್- ಶ್ರೀನಿವಾಸ್ ಮಾನೆ
ಹಾವೇರಿ- ರುದ್ರಪ್ಪ ಲಮಾಣಿ
ಬ್ಯಾಡಗಿ -ಬಸವರಾಜ್ ಎನ್ ಶಿವಣ್ಣನ್ನರ್
ಹಿರೇಕೆರೂರು -ಯುಬಿ ಬಣಕರ್
ರಾಣೇಬೆನ್ನೂರು -ಪ್ರಕಾಶ್ ಕೆ ಕೋಳಿವಾಡ
ಹಡಗಲಿ -ಪಿಟಿ ಪರಮೇಶ್ವರ್ ನಾಯಕ್
ಹಗರಿಬೊಮ್ಮನಹಳ್ಳಿ- ಭೀಮಾ ನಾಯಕ್​
ವಿಜಯನಗರ– ಹೆಚ್ ಆರ್ ಗವಿಯಪ್ಪ
ಕಂಪ್ಲಿ -ಜೆಎನ್ ಗಣೇಶ್
ಬಳ್ಳಾರಿ- ಬಿ ನಾಗೇಂದ್ರ
ಸಂಡೂರು -ಇ ತುಕಾರಾಂ
ಚಳ್ಳಕೆರೆ ಟಿ ರಘುಮೂರ್ತಿ
ಹಿರಿಯೂರು -ಡಿ ಸುಧಾಕರ್
ಹೊಸದುರ್ಗ -ಗೋವಿಂದಪ್ಪ ಬಿ.ಜಿ
ದಾವಣಗೆರೆ ಉತ್ತರ -ಎಸ್ ಎಸ್ ಮಲ್ಲಿಕಾರ್ಜುನ್
ಮಾಯಕೊಂಡ- ಕೆಎಸ್ ಬಸವರಾಜು
ಭದ್ರಾವತಿ -ಸಂಗಮೇಶ್ವರ್ ಬಿಕೆ
ಸೊರಬ -ಮಧು ಬಂಗಾರಪ್ಪ
ಸಾಗರ- ಗೋಪಾಲಕೃಷ್ಣ
ಬೈಂದೂರು- ಕೆ ಗೋಪಾಲ ಪೂಜಾರಿ
ಕುಂದಾಪುರ- ದಿನೇಶ್ ಹೆಗಡೆ
ಕಾಪು- ವಿನಯ ಕುಮಾರ್ ಸೊರಕೆ
ಮಾಗಡಿ -ಎಚ್​.ಸಿ. ಬಾಲಕೃಷ್ಣ
ರಾಮನಗರ- ಇಕ್ಬಾಲ್ ಹುಸೈನ್ ಎಚ್​.ಎ
ಮಳವಳ್ಳಿ- ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ- ಎ.ಬಿ. ರಮೇಶ್ ಬಂಡಿಸಿದ್ದೇಗೌಡ

ನಾಗಮಂಗಲ- ಎನ್. ಚೆಲುವರಾಯಸ್ವಾಮಿ
ಹೊಳೆನರಸೀಪುರ ಶ್ರೇಯಸ್ ಎಂ.ಪಟೇಲ್
ಸಕಲೇಶಪುರ(ಎಸ್​ಸಿ)- ಮುರಳಿ ಮೋಹನ್
ಬೆಳ್ತಂಗಡಿ ರಕ್ಷಿತ್ ಶಿವರಾಮ್
ಮೂಡಬಿದಿರೆ- ಮಿಥುನ್ ಎಮ್. ರೈ
ಮಂಗಳೂರು- ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ ರಮನಾಥ್ ರೈ ಬಿ
ಸುಳ್ಯ ಕೃಷ್ಣಪ್ಪ ಜಿ
ಬವಿರಾಜಪೇಟೆ ಎ.ಎಸ್ ಪೊನ್ನಣ್ಣ
ಪಿರಿಯಾಪಟ್ಟಣ ಕೆ. ವೆಂಕಟೇಶ್
ಕೃಷ್ಣರಾಜನಗರ ಡಿ. ರವಿಶಂಕರ್
ಹುಣಸೂರು ಎಚ್​.ಪಿ ಮಂಜುನಾಥ್
ಎಚ್​ಡಿ ಕೋಟೆ-ಎಸ್​ಟಿ ಅನಿಲ್ ಕುಮಾರ್. ಸಿ
ನಂಜನಗೂಡು ದರ್ಶನ್ ಧ್ರುವನಾರಾಯಣ
ನರಸಿಂಹರಾಜ ತನ್ವೀರ್ ಸೇಠ್
ಶೃಂಗೇರಿ ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ ಕಿರಣ್ ಕುಮಾರ್
ತಿಪಟೂರು ಕೆ ಷಡಕ್ಷರಿ
ತುರುವೆಕೆರೆ ಕಾಂತರಾಜ್ ಬಿಎಂ
ಕುಣಿಗಲ್ ಹೆಚ್​ ಡಿ ರಂಗನಾಥ್
ಕೊರಟಗೆರೆ ಜಿ ಪರಮೇಶ್ವರ್
ಶಿರಾ ಟಿಬಿ ಜಯಚಂದ್ರ
ಪಾವಗಡ ಹೆಚ್​ ವಿ ವೆಂಕಟೇಶ್
ಮಧುಗಿರಿ ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ್ ರೆಡ್ಡಿ
ಬಾಗೇಪಲ್ಲಿ ಎಸ್ ಎನ್ ಸುಬ್ಬಾರೆಡ್ಡಿ
ಚಿಂತಾಮಣಿ ಎಂ ಸಿ ಸುಧಾಕರ್
ಶ್ರೀನಿವಾಸಪುರ ಕೆಆರ್ ರಮೇಶ್ ಕುಮಾರ್
ಕೆಜಿಎಫ್​ ರೂಪಕಲಾ ಎಂ
ಬಂಗಾರಪೇಟೆ ಎಸ್ ಎನ್ ನಾರಾಯಣಸ್ವಾಮಿ
Congress Party  ಮಾಲೂರು ಕೆವೈ ನಂಜೇಗೌಡ
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ
ಆರ್ ಆರ್ ನಗರ ಕುಸುಮಾ
ಮಲ್ಲೇಶ್ವರಂ ಅನೂಪ್ ಅಯ್ಯಂಗಾರ್
ಹೆಬ್ಬಾಳ ಸುರೇಶ್ ಬಿ.ಎಸ್
ಸರ್ವಜ್ಞ ನಗರ ಕೆ. ಜೆ. ಜಾರ್ಜ್
ಶಿವಾಜಿನಗರ ರಿಜ್ವಾನ್ ಆರ್ಷದ್
ಶಾಂತಿನಗರ ಎನ್. ಎ. ಹ್ಯಾರಿಸ್
ರಾಜಾಜಿನಗರ ಪುಟ್ಟಣ್ಣ
ಗೋವಿಂದರಾಜ ನಗರ ಪ್ರಿಯಾಕೃಷ್ಣಾ
ವಿಜಯ ನಗರ ಎಂ. ಕೃಷ್ಣಪ್ಪ
ಬಸವನಗುಡಿ ಯು.ಬಿ. ವೆಂಕಟೇಶ್
ಮಹದೇವಪುರ ನಾಗೇಶ್ ಟಿ
ಆನೇಕಲ್ ಬಿ ಶಿವಣ್ಣ
ಹೊಸಕೋಟೆ ಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ ಕೆ. ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ ಟಿ. ವೆಂಕಟರಾಮಯ್ಯ
ನೆಲಮಂಗಲ ಶ್ರೀನಿವಾಸಯ್ಯ ಎನ್
ಟಿ ನರಸೀಪುರ ಹೆಚ್‌ ಸಿ ಮಹಾದೇವಪ್ಪ
ಹನೂರು ಆರ್.‌ ನರೇಂದ್ರ
ಚಾಮರಾಜನಗರ ಸಿ ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ ಹೆಚ್‌,ಎಂ ಗಣೇಶ್‌ ಪ್ರಸಾದ್‌

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Rahul Gandhi Disqualified | ರಾಹುಲ್ ಗಾಂಧಿ ಅನರ್ಹತೆ ಪ್ರಕರಣ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

0

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Basavaraj Bommai ಮೀಸಲಾತಿ ಕೈತುತ್ತು ಬಹುತೇಕ ಎಲ್ಲಾ ಜಾತಿಗಳಿಗೂ ಸಿಕ್ಕಿತು ಬೊಮ್ಮಾಯಿ ಕಸರತ್ತು

0

Basavaraj Bommai ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ ಬಲಗೈ ಸಮುದಾಯದವರಿಗೆ ಒಳ ಮೀಸಲಾತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಿಳಿಸಿದ್ದಾರೆ.ಮುಸ್ಲಿಮರಿಗೆ ಇದ್ದ ಶೇ. 4ರಷ್ಟು ಮೀಸಲಾತಿಯನ್ನು ತೆಗೆದುಕೊಂಡು ಅದನ್ನು ಲಿಂಗಾಯಿತ ಹಾಗೂ ಒಕ್ಕಲಿಗರಿಗೆ ತಲಾ ಶೇ.2 ರಷ್ಟು ಹಂಚುವ ನಿರ್ಣಯವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ.ಮಾರ್ಚ್ 24 ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸಚಿವ ಸಹೋದ್ಯೋಗಿಗಳ ಜೊತೆ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.Basavaraj Bommai ಸರ್ಕಾರದ ನಿರ್ಣಯಕ್ಕೆ ಒಳ ಮೀಸಲಾತಿ ಹೋರಾಟಗಾರರು ಮತ್ತು ಒಳ ಮೀಸಲಾತಿ ನೀಡುವುದನ್ನ ವಿರೋಧಿಸುತ್ತಿರುವ ಒಳ ಮೀಸಲಾತಿ ಸಂರಕ್ಷಣಾ ಸಮಿತಿಯ ಎರಡು ಗುಂಪುಗಳು ಇದನ್ನ ವಿರೋಧಿಸಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಾಗೂ ಶೇಕಡವಾರುಗಳನ್ನು ಪಟ್ಟಿ ಮಾಡುವುದಾದರೆ,

ಎಡಗೈ-6.0%
ಬಲಗೈ- -5.5%

ಲಂಬಾಣಿ, ಬೋವಿ, ಕೊರಮ, ಕೊರಚ- -4.5%

ಯಾವುದೇ ಗುಂಪಿಗೆ ಸೇರದ ಜಾತಿಗಳಿಗೆ-1.0%

ಪ್ರವರ್ಗ 2ಬಿ ಅಡಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಇತ್ತು.
ಈ ಶೇಕಡವಾರಿನಲ್ಲಿ ತಲಾ ಶೇ.2ರಷ್ಟನ್ನು 2ಸಿ ಒಕ್ಕಲಿಗರಿಗೆ, ಮತ್ತು 2 ಡಿ ಲಿಂಗಾಯಿತ ಸಮುದಾಯಕ್ಕೆ ಹಂಚಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Good News for Central Govt Employees ಕೇಂದ್ರ ನೌಕರರಿಗೆ ಸಿಹಿ ಸುದ್ದಿ ಶೇ 4 ತುಟ್ಟಿಭತ್ಯೆ ಹೆಚ್ವಳ

0

Good News for Central Govt  Employees ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020 ಜನವರಿ 1ರಿಂದಲೇ ಅನ್ವಯಿಸುವಂತೆ ಶೇ.4 ರಷ್ಟು ತುಟ್ಟಿ ಭತ್ಯೆಯನ್ನು ಕೇಂದ್ರ ಸಂಪುಟ ಹೆಚ್ಚಿಸಿದೆ.

Good News for Central Got  Employees ಇದರಿಂದಾಗಿ ಡಿಎ ಪ್ರಮಾಣ ಶೇ.42ರಷ್ಟು ಹೆಚ್ಚಳವಾಗಿದೆ.
47.58 ಲಕ್ಷ ನೌಕರರು, 69.76 ಲಕ್ಷ ಪಿಂಚಣಿ ದಾರರಿಗೆ ಇದು ಅನ್ವಯವಾಗಲಿದೆ. ವಾರ್ಷಿಕ 12,815.60 ಕೋಟಿಯನ್ನು ಹೆಚ್ಚುವರಿಯಾಗಿ ಬರಿಸಬೇಕಾಗುತದೆ ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga City Corporation ಶಿವಮೊಗ್ಗ ಪಾಲಿಕೆವತಿಯಿಂದ ನೀರಿನ ಕಂದಾಯ ಸ್ವೀಕಾರ ಕೌಂಟರ್ ಗಳ ವ್ಯವಸ್ಥೆ

0

Shivamogga City Corporation ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಮಾರ್ಚ್ 26 ರ ಭಾನುವಾರದಂದು 2022-23ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ಆರ್.ಎಂ.ಎಲ್.ನಗರ ಭಾರತೀಯ ಸಮುದಾಯ ಭವನದ ಹತ್ತಿರ, ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದ ಹತ್ತಿರ, ಗೋಪಾಲ ಕೊನೆ ಬಸ್‌ಸ್ಟಾಪ್ ಹತ್ತಿರ, ಗುಡ್‌ಲಕ್ ಸರ್ಕಲ್ ಹತ್ತಿರ ಸ್ವಾಮಿ ವಿವೇಕಾನಂದ ಬಡಾವಣೆ, ವಿನೋಬನಗರ ಪೊಲೀಸ್ ಚೌಕಿ ಹತ್ತಿರ, ಕಲ್ಲಹಳ್ಳಿ ಗಣಪತಿ ದೇವಸ್ಥಾನದ ಹತ್ತಿರ, ನ್ಯೂಮಂಡ್ಲಿ ಸರ್ಕಲ್ ಸ್ಮಶಾನದ ಹತ್ತಿರ, ಬೊಮ್ಮನಕಟ್ಟೆ ಅಪೂರ್ವ ಕಾಲೇಜಿನ ಎದುರು”, ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.

Shivamogga City Corporation ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Comrade Lingappa Shivamogga ಶಿವಮೊಗ್ಗ ಪತ್ರಿಕಾರಂಗದ ತಾತ ಕಾಮ್ರೇಡ್ ಲಿಂಗಪ್ಪ ನಿಧನ

0

Comrade Lingappa shivamogga ಹಿರಿಯ ಪತ್ರಕರ್ತ, ಕ್ರಾಂತಿ ಭಗತ್ ದಿನಪತ್ರಿಕೆಯ ಸಂಪಾದಕರಾದ ಕಾಮ್ರೇಡ್ ಎಂ. ಲಿಂಗಪ್ಪ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ.

ಮಾರ್ಚ್ 24 ಶುಕ್ರವಾರದಂದು ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಆರೈಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಮ್ರೇಡ್ ಲಿಂಗಪ್ಪ ಅವರು ತಮ್ಮ ಇಳಿ ವಯಸ್ಸಿನಲ್ಲಿ ಪತ್ರಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ನಿಷ್ಠುರ ಮಾತು, ಬರವಣಿಗೆಯಿಂದ ಶಿವಮೊಗ್ಗದ ವಲಯದ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

Comrade Lingappa shivamogga ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ತಲೆಸುತ್ತಿನಿಂದ ಬಿದ್ದಿದ್ದ ಅವರನ್ನು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾಮ್ರೇಡ್ ಲಿಂಗಪ್ಪ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.