Sunday, April 12, 2026
Sunday, April 12, 2026
Home Blog Page 1250

Amul Milk ಅಮುಲ್ ಕರ್ನಾಟಕ ಪ್ರವೇಶ ಮಾಡುತ್ತಿಲ್ಲ-ಅಮಿತ್ ಮಾಳವೀಯ

0

Amul milk ಅಮುಲ್ ಮತ್ತು ಕೆಎಂಎಫ್ 2 ತಮ್ಮ ಉತ್ಪನ್ನಗಳನ್ನು ಕ್ವಿಕ್‌ ಕಾಮರ್ಸ್‌ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಎಂಎಫ್ ವಹಿವಾಟು (ರೂ) 10,000 ಕೋಟಿಗಳಷ್ಟು ಹೆಚ್ಚಾಗಿದೆ.

2022ರಲ್ಲಿ ವಹಿವಾಟು 25,000 ಕೋಟಿ ರೂ. ಇತ್ತು. ಅದರಲ್ಲಿ 20,000 ಕೋಟಿ ರೂ. ಕರ್ನಾಟಕದ ರೈತರಿಗೆ ವಾಪಸ್ ಬಂದಿದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಹಾಲು ಮತ್ತು ಮೊಸರು ಮಾರಾಟ ಮಾಡುವ ಯೋಜನೆಯನ್ನು ಅಮುಲ್ ಘೋಷಿಸಿದ ನಂತರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಅಮಿತ್ ಮಾಳವಿಯಾ ಈ ಟ್ವೀಟ್‌ಗಳನ್ನು ಮಾಡಿದ್ದಾರೆ.

Amul milk ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಮಾಲೀಕತ್ವದ ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ ಮತ್ತು ಅಮುಲ್ ಮತ್ತು ಕೆಎಂಎಫ್ ಎರಡೂ ತಮ್ಮ ಉತ್ಪನ್ನಗಳನ್ನು ಕ್ವಿಕ್‌ ಕಾಮರ್ಸ್‌ ವೇದಿಕೆಗಳಲ್ಲಿ ಮಾತ್ರ ಮಾರಾಟ ಮಾಡುತ್ತವೆ. ಕರ್ನಾಟಕವು ಹಾಲನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯವಾಗಿದೆ. ಹೈನುಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಾಂಡ್ ನಂದಿನಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್, ಗೋಹತ್ಯೆ ವಿರೋಧಿ ಮಸೂದೆಯನ್ನು ವಿರೋಧಿಸಿ, ನಮ್ಮ ನಂದಿನಿಗಳ ಹತ್ಯೆಗೆ ಅನುಮೋದನೆ ನೀಡಿದೆ. ಬಿಜೆಪಿ ಯೋಜನೆ ನಂದಿನಿಯನ್ನು ದೊಡ್ಡ ಬ್ರ್ಯಾಂಡ್ ಮಾಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

Amul vs Nandini: ಬೆಂಗಳೂರು ಹೋಟೆಲ್ ಉದ್ಯಮವಿಗಳಿಂದ ನಂದಿನಿಗೆ ಬೆಂಬಲ

0

Amul vs Nandini: ರಾಜ್ಯದಲ್ಲಿ ಅಮುಲ್ ಮತ್ತು ನಂದಿನಿ ಹಾಲಿನ ವಿವಾದದ ಬೆನ್ನಲ್ಲೇ, ಬೆಂಗಳೂರು ಹೊಟೇಲ್ ಅಸೋಸಿಯೇಷನ್, ನಂದಿನಿ ಹಾಲನ್ನು ಪ್ರೋತ್ಸಾಹಿಸಿ ಮತ್ತು ರಾಜ್ಯದ ಹೈನುಗಾರಿಕೆ ರೈತರಿಗೆ ಬೆಂಬಲಿಸುವುದಾಗಿ ಘೋಷಿಸಿದೆ.

ಗುಜರಾತಿನ ಅಮುಲ್ ರಾಜ್ಯ ಪ್ರವೇಶಿಸುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ನಡುವೆ ಪರಸ್ಪರ ರಾಜಕೀಯ ಕೆಸರೆರೆಚಾಟಗಳು ಉಂಟಾಗಿದೆ. ಇವುಗಳ ನಡುವೆ ಈ ಬಗ್ಗೆ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ತನ್ನ ಅಭಿಪ್ರಾಯವನ್ನು ಬಿಡುಗಡೆ ಮಾಡಿದೆ. ಅಮುಲ್ ಅನ್ನು ಹೆಸರಿಸದೆ ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಬೆಂಬಲಿಸಬೇಕೆಂದು ಕರೆ ನೀಡಿದೆ.

Amul vs Nandini: ರಾಜ್ಯದ ರೈತಾಪಿವರ್ಗ ಉತ್ಪಾದಿಸುವ ನಂದಿನಿ ಹಾಲಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ನಾವೆಲ್ಲರೂ ನಂದಿನಿ ಹಾಲನ್ನೇ ಪ್ರೋತ್ಸಾಹಿಸಬೇಕು. ನಗರ ಪ್ರದೇಶದಲ್ಲಿ ಶುದ್ಧ ಮತ್ತು ರುಚಿಕರವಾದ ಕಾಫಿ ತಿಂಡಿಗಳಿಗೆ ನಂದಿನಿ ಹಾಲೇ ಕಾರಣ. ನಾವು ಅದನ್ನು ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ. ಇತ್ತೀಚೆಗೆ ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಹಾಲು ರವಾನೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾವೆಲ್ಲರೂ ನಂದಿನಿಯನ್ನೇ ಉಪಯೋಗಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಸೋಸಿಯೇಷನ್‍ತಿಳಿಸಿದೆ.

Corona Updates: ರಾಜ್ಯದಲ್ಲಿ ಕೊರೋನ ಆತಂಕ ಬೇಡ ಎಚ್ಚರ ವಹಿಸಿ

0

Corona Updates: ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೇರಳ ರಾಜ್ಯದಲ್ಲಿ ಸುಮಾರು 11 ಸಾವಿರ ಪ್ರಕರಣಗಳ ಗಡಿ ದಾಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದರಿಂದ ನಮ್ಮ ರಾಜ್ಯದಲ್ಲಿಯೂ ಹೆಚ್ಚಾಗುವ ಕುರಿತು ಆತಂಕ ವ್ಯಕ್ತವಾಗಿದೆ. ಈ ಆತಂಕ ಬೇಡ ಮುನ್ನೆಚ್ಚರಿಕ ಕ್ರಮಗಳನ್ನು ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Corona Updates: ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸ್ವಲ್ಪ ಹೆಚ್ಚಾಗುತ್ತಿದೆ. ಆದರೆ, ಪತ್ರಿಕೆ ದಾಖಲಾಗಿರುವವರ ಸಂಖ್ಯೆ ಇಲ್ಲ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕಿನ ರೋಗಲಕ್ಷಣ ಇರುವವರಿಗೆ ಕೊರೋನ ಪರೀಕ್ಷೆಗಳನ್ನು ಮಾಡಿಸಬೇಕು.

Nandini vs Amul: ನಂದಿನಿ ಡೇರಿ ಉತ್ಪನ್ನಗಳು ದೇಶದಲ್ಲೇ ನಂಬರ್ ಒನ್ – ವಿನಯ್ ತಾಂದ್ಲೆ

0

Nandini vs Amul: ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರ್ಯಾಂಡ್‌ ಅನ್ನು ಮುಗಿಸಲೆಂದೇ ಅಮುಲ್‌ ಹಾಲು, ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ. ನಮ್ಮ ಸ್ವಾಭಿಮಾನದ ಸಂಕೇತ ಇದು. ಈ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ರಾಜ್ಯದಲ್ಲಿ ಲಕ್ಷಾಂತರ ರೈತರು, ಅವರು ಕುಟುಂಬ ಅವಲಂಬಿತರಾಗಿದ್ದಾರೆ. ಆದರೆ, ನಂದಿನಿ ಉತ್ಪನ್ನವನ್ನು ಮುಗಿಸುವ ಮೂಲಕ ರಾಜ್ಯದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಎಂಎಫ್‌ಗೆ ಅಮುಲ್‌ ಯಾವ ರೀತಿಯಲ್ಲೂ ಸಾಟಿಯಲ್ಲ. ನಂದಿನಿ ಉತ್ಪನ್ನಗಳು ಬೆಲೆ ಹಾಗೂ ಗುಣಮಟ್ಟದಲ್ಲಿ ಇಡೀ ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ಹಾಗಾಗಿಯೇ, ಹೇಗಾದರೂ ಮಾಡಿ ಮಾರುಕಟ್ಟೆ ತಂತ್ರ ಬಳಸಿ ತನ್ನ ಉತ್ಪನ್ನಗಳ ಬೇಡಿಕೆ ಹೆಚ್ಚಿಸಿಕೊಳ್ಳಲು ಅಮೂಲ್‌ ಇಂತಹ ಕುತಂತ್ರ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಕೆಎಂಎಫ್‌ನ ಹಾಲು, ಮೊಸರಿಗೆ ಮುಂಬೈ, ಗೋವಾ, ಹೈದರಾಬಾದ್‌, ಪೂನಾ, ಸೊಲ್ಲಾಪುರ, ಇತರೆ ಪ್ರಾಂತ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಚೆನ್ನಾಗಿ ಮಾರಾಟವಾಗುತ್ತಿದೆ. ಅದನ್ನು ಅಮುಲ್‌ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ, ಮುಂದೆ ಕೆಎಂಎಫ್‌ ಎಲ್ಲಿ ತನ್ನ ಬುಡಕ್ಕೆ ಅಪತ್ತು ತರುತ್ತದೋ ಎಂದು ಹೆದರಿ ಅಮುಲ್‌ ಇಂತಹ ಷಡ್ಯಂತ್ರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಈ ಮಧ್ಯೆ, ಉತ್ಪನ್ನಗಳ ದರ ಮತ್ತು ಗುಣಮಟ್ಟ ಸೇರಿದಂತೆ ಯಾವ ರೀತಿಯಲ್ಲೂ ಅಮುಲ್‌, ಕೆಎಂಎಫ್‌ ವಿರುದ್ಧ ಸ್ಪರ್ಧೆ ನಡೆಸಲಾಗದು. ಉದಾಹರಣೆಗೆ ಕೆಎಂಎಫ್‌ ಹಾಲಿನ ದರ ಲೀಟರ್‌ಗೆ 39ರೂ. ಇದ್ದರೆ, ಅಮುಲ್‌ ಹಾಲಿನ ದರ 54. ರೂ. ಇದೆ. ಅಂತೆಯೇ ಗುಣಮಟ್ಟವೂ ನಂದಿನಿಗಿಂತ ಚೆನ್ನಾಗಿಲ್ಲ. ಹಾಗಾಗಿ ಜನರೇ ಅಮುಲ್‌ ಉತ್ಪನ್ನಗಳನ್ನು ತಿರಸ್ಕರಿಸುತ್ತಾರೆ. ಕೆಎಂಎಫ್‌ ದೇಶದ ಅತಿದೊಡ್ಡ ಬ್ರ್ಯಾಂಡ್‌ ಆಗಿದ್ದು, ವಿದೇಶದಲ್ಲೂ ಹೆಸರು ಮಾಡಿದೆ ಎಂದು ತಿಳಿಸಿದ್ದಾರೆ.

Nandini vs Amul: ಕೇಂದ್ರ ಸರ್ಕಾರ ಗುಜರಾತ್ ಮೂಲದ ಸಹಕಾರ ಸಂಸ್ಥೆ ಅಮುಲ್ ಮೂಲಕ ರಾಜ್ಯದ ನಂದಿನಿಯನ್ನು ಮುಗಿಸುವ ಕುತಂತ್ರ ನಡೆಸಿದೆ ಎಂದು ಹೇಳಿದ್ದಾರೆ.

ನಂದಿನಿಯನ್ನು ಅಮುಲ್‍ನಲ್ಲಿ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಹಕಾರ ಸಚಿವರು ಕೊಟ್ಟಿರುವ ಹೇಳಿಕೆ ಕನ್ನಡಿಗರಿಗೆ ಆಘಾತ ಉಂಟು ಮಾಡಿದೆ. ಕರ್ನಾಟಕದ ಅಸ್ಮಿತೆಯಾದ ನಂದಿನಿಯನ್ನು ಉಳಿಸಿಕೊಳ್ಳಬೇಕಾದ ಹೊಣೆ ಸರ್ಕಾರ ಹಾಗೂ ಕನ್ನಡಿಗರ ಮೇಲಿದೆ. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿನಯ್ ಎಚ್ಚರಿಸಿದ್ದಾರೆ.

BJP First List Released ಇಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ದೆಹಲಿಯಲ್ಲಿ ಬಿಎಸ್ ವೈ ಹೇಳಿಕೆ

0

BJP First List Released ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸುಮಾರು 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

BJP First List Released ಇಂದು ಸಂಜೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಟ್ಟಿಯನ್ನು ಅಂತಿಮಗೊಳಿಸಲು ಇಂದು ಇನ್ನೂ ಒಂದು ಸಭೆ ಇದೆ. ಇಂದು ಸಂಜೆಯೊಳಗೆ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಬಿಎಸ್ ವೈ ಹೇಳಿದ್ದಾರೆ.

Media Academy Award ಪತ್ರಿಕೋದ್ಯಮದಲ್ಲಿ ವೃತ್ತಿಪರತೆ ಕಡಿಮೆಯಾಗುತ್ತಿದೆ-ಡಿ.ಪಿ.ಮುರಳೀಧರ್

0

Media Academy Award ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರುಳೀಧರ್ ಅವರು ತಿಳಿಸಿದರು.

ಶಿವಮೊಗ್ಗದ ಪ್ರೆಸ್‌ಟ್ರಸ್ಟ್ ನಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾಗುತ್ತದೆ. ಮಾಧ್ಯಮ ಅಕಾಡೆಮಿ ಬಂದ ಮೇಲೆ ಪತ್ರಕರ್ತರನ್ನು ಗುರುತಿಸುವಂತ ಕೆಲಸ ಆಗುತ್ತಿದೆ. ವೃತ್ತಿಪರರಿಗೆ ಪ್ರಶಸ್ತಿಗಳನ್ನುನೀಡಿ ಬೆನ್ನು ತಟ್ಟುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸೇವೆ ಪರಿಗಣಿಸಿ ನೀಡುವ ಪುರಸ್ಕಾರದಿಂದ ಪತ್ರಿಕೋದ್ಯಮಕ್ಕೆ ಗರಿ ಮೂಡಿದೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ಕರೆದರೂ ಪತ್ರಿಕೋದ್ಯಮದಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ನಂಟಿದೆ ಎಂದರು.

ಪತ್ರಿಕೋದ್ಯಮ ಬಲಿಷ್ಠವಾಗಿ ಬೆಳೆಯಬೇಕು ಪತ್ರಕರ್ತರು ವೃತ್ತಿಬದ್ದತೆಯಿಂದ ಕೆಲಸ ಮಾಡಬೇಕು ಎನ್ನುವುದು ಸಮಾಜದ ನಿರೀಕ್ಷೆ. ಆದರೆ, ಇತ್ತೀಚೆಗೆ ಅವಸರದ ಪತ್ರಿಕೋದ್ಯಮದಲ್ಲಿ ಆ ವೃತ್ತಿ ಬದ್ಧತೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಅನೇಕ ಸವಾಲುಗಳ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸನ್ಮಾನಗಳು, ಪುರಸ್ಕಾರಗಳಿಂದ ಪತ್ರಿಕೆಗಳನ್ನು ಗುರುತಿಸುವಂತ ಕೆಲಸ ಆಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಪತ್ರಕರ್ತರು ಸರ್ಕಾರಿ ನೌಕರರಂತೆ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ 12ಮಂದಿ ಶಿವಮೊಗ್ಗ ಜಿಲ್ಲೆಯವರೇ ಇರುವುದು ಪತ್ರಿಕೋದ್ಯಮದಲ್ಲಿ ಶಿವಮೊಗ್ಗ ಜಿಲ್ಲೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂದು ಪ್ರಶಸ್ತಿಗಳನ್ನು ಲಾಭಿ ಮಾಡಿ ತೆಗೆದುಕೊಳ್ಳುವವರ ಮಧ್ಯೆ ಅರ್ಹತೆಯಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲು. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ಯುವ ಪತ್ರಕರ್ತರಲ್ಲಿ ಉತ್ಸಹ ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಪ್ರಶಸ್ತಿಗಳು ಲಾಭಿಗೆ ಒಳಗಾಗಿವೆ. ಇದರ ನಡುವೆಯೂ ಅರ್ಹತೆಯಿಂದ ಪ್ರಶಸ್ತಿಗಳಿಸುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ. ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.

Media Academy Award ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಕೆ.ತಿಮ್ಮಪ್ಪ ಹುಲಿಮನೆ, ನಾಗರಾಜ್ ನೇರಿಗೆ, ರಾಮಸ್ವಾಮಿ ಹುಲ್ಕೊಡು, ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ನಗರ ಕಾರ್ಯದರ್ಶಿ ಗೋ.ವ.ಮೋಹನಕೃಷ್ಣ, ಡಿ.ವತ್ಸಲ ಸೂರ್ಯನಾರಾಯಣ, ರಾಮಚಂದ್ರ ಗುಣಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

AIT College Chikmagalur ಕಾಳುಮೆಣಸಿನ ಬಳ್ಳಿಗಳನ್ನ ಸೂಕ್ತ ನಿರ್ವಹಣೆ ಮಾಡಿದರೆ ಉತ್ತಮ ಇಳುವರಿ-ಡಾ.ವೇಣುಗೋಪಾಲ್

AIT College Chikmagalur ಮಲೆನಾಡು ಪ್ರದೇಶಗಳಾದ ಕಾಫಿ ಹಾಗೂ ಅಡಿಕೆ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದ್ದಲ್ಲಿ ಸುಮಾರು ಒಂದರಿಂದ ಎರಡು ಲಕ್ಷ ಟನ್‌ಗಳಷ್ಟು ಬೆಳೆಗಳ ಇಳುವರಿ ಉತ್ಪಾದಿಸಬಹುದು ಎಂದು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ|| ವೇಣುಗೋಪಾಲ್ ಹೇಳಿದರು.

ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಕೃಷಿಕ ಪತ್ರಿಕೆ ಸಹಯೋಗದಲ್ಲಿ ನಡೆದ ಲೇಖಕ ಅಚ್ಚನಹಳ್ಳಿ ಸುಚೇತನ ರಚಿಸಿರುವ ‘ಕಾಳುಮೆಣಸಿನ ಕರ್ಮಯೋಗಿ ಡಾ.ವೇಣುಗೋಪಾಲ್’ ಕೃತಿ ಲೋಕಾರ್ಪಣೆ ಹಾಗೂ ಕಾಳುಮೆಣಸಿನ ಕೃಷಿ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅತಿಹೆಚ್ಚು ಹಾಗೂ ಸಾಧಾರಣೆ ಮಳೆಯಾಗುವ ಪ್ರದೇಶಗಳಲ್ಲಿ ಕಾಳುಮೆಣಸಿನ ಬೆಳೆಗಳ ನಿರ್ವಹಣೆಯಲ್ಲಿ ರೈತಾಪಿ ವರ್ಗವು ಕೆಲವು ನಿಯಮಗಳನ್ನು ಪಾಲಿಸಿಕೊಂಡಲ್ಲಿ ಉತ್ತಮ ಇಳುವಳಿ ಪಡೆದು ಆರ್ಥಿಕವಾಗಿ ಸದೃಢ ರಾಗಬಹುದು. ಆ ನಿಟ್ಟಿನಲ್ಲಿ ಕೃಷಿಕ ಪತ್ರಿಕೆ ಅತ್ಯಂತ ಹೆಚ್ಚು ಸಹಕಾರ ನೀಡಿ ರೈತರಿಗೆ ಉತ್ತಮ ಮಾಹಿತಿಯನ್ನು ರವಾನಿಸುತ್ತಿರುವುದು ಸಂತೋಷದಾಯಕ ಎಂದರು.

AIT College Chikmagalur ಕಾಳುಮೆಣಸಿನ ರೋಗಗಳನ್ನು ನಿರ್ದಿಷ್ಟ ಸಮಯದಲ್ಲಿ ಅಗತ್ಯ ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ವಹಿಸಬಹುದು. ಬಳ್ಳಿ ಮತ್ತು ಬೆಳೆ ನಷ್ಟಕ್ಕೆ ಈ ರೋಗಗಳು ಪ್ರಮುಖ ಸಮಸ್ಯೆಯಾಗಿರುವುದರಿಂದ ರೋಗ ನಿರ್ವಹಣೆಗೆ ಕೃಷಿ-ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಳು ಮೆಣಸನ್ನು ಎರಡೂ ವಿಧಾನಗಳಲ್ಲಿಯೂ ಬೆಳೆಯಬಹುದು. ಕಾಫಿ ಇದ್ದಲ್ಲಿಯೂ ಕಾಳುಮೆಣಸು ಬೆಳೆಯಲಾಗುತ್ತಿದೆ. ಇದರಲ್ಲಿ ಕಾಫಿ ಗಿಡದ ಎತ್ತರ 5 ಅಡಿ, ಆ ಎತ್ತರ ಹೊರತುಪಡಿಸಿ ಅದಕ್ಕೂ ಎತ್ತರದಲ್ಲಿ ಮೆಣಸು ಸೊಗಸಾಗಿ ಬೆಳೆಯುತ್ತದೆ. ಬಳ್ಳಿಗಳ ಸಂಖ್ಯೆ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ರೋಬಸ್ಟಾ ತೋಟವಾದರೆ 150 ಬಳ್ಳಿಗಳು, ಅರೇಬಿಕಾ ತೋಟವಾದರೆ 350 ಬಳ್ಳಿಗಲಾದರು ಇರಬೇಕು ಎಂದು ವಿವರಿಸಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಕರ್ಮಯೋಗಿ ಡಾ.ವೇಣುಗೋಪಾಲ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ವೇಣುಗೋಪಾಲ್ ಅವರು ಸತತವಾಗಿ 48 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರ ದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯ ವಿಚಾರವಲ್ಲ. ಅದೆಷ್ಟೋ ರೈತರ ಸಮಸ್ಯೆಗಳನ್ನು ಅವರವರ ಊರು ಗಳಿಗೆ ತೆರಳಿ ಬಗೆಹರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯದಲ್ಲಿ ಸುಮಾರು 5-6 ಜಿಲ್ಲೆಗಳಲ್ಲಿ ಕಾಳುಮೆಣಸಿನ ಬೆಳೆಗಳು ಹೆಚ್ಚಾಗಿರುವ ಪ್ರದೇಶಗಳ ಜನಸಾಮಾನ್ಯ ರೊಂದಿಗೆ ಉತ್ತಮ ಒಡನಾಟವನ್ನು ವೇಣುಗೋಪಾಲ್ ಅವರು ಹೊಂದಿದ್ದಾರೆ. ಬೆಳೆಗಳ ಸಂಶೋಧನೆಯಲ್ಲಿ ರೈತರನ್ನು ಭಾಗಿಯಾಗಿ ಮಾಡಿಕೊಂಡು ಆರ್ಥಿಕವಾಗಿ ರೈತರನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿಕ ಪತ್ರಿಕೆ ಪ್ರಧಾನ ಸಂಪಾದಕ ಎಂ.ಜೆ.ದಿನೇಶ್ ಕಾಳುಮೆಣಸು ಸೇರಿದಂತೆ ಇತರೆ ಬೆಳೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಪಂಚದ ವಿವಿಧ ದೇಶಗಳಿಗೆ ಭೇಟಿ ನೀಡಿ ಯಾವು ದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೇ ಅದ್ಬುತ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರೈತರಿಗೆ ಬೆಳೆಗಳ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಇದರೊಂದಿಗೆ ಇ-ಕೃಷಿಕ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಮಲೆನಾಡು ಪ್ರದೇಶಗಳ ಬೆಳೆಗಳ ವಿವರ ಹಾಗೂ ಕಾರ್ಮಿಕರ ಮಾಹಿತಿಗಳನ್ನು ಒಳಗೊಂಡಿದೆ. ಈ ಆ್ಯಪ್‌ಅನ್ನು ದೇಶದ ಕೃಷಿ ಕ್ಷೇತ್ರದ ಏಳರಲ್ಲಿ ಒಂದಾಗಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ತಿಳಿಸಿದರು.

ಇದೇ ವೇಳೆ ಬೆಳೆಗಾರರಿಗೆ ಕಾಳುಮೆಣಸಿನ ಕೃಷಿ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಕಾರ್ಯಾಗಾರವನ್ನು ಡಾ.ವೇಣುಗೋಪಾಲ್ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿ ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ ವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ|| ಎಸ್.ಜೆ.ಅಂಕೇಗೌಡ, ಲೇಖಕ ಅಚ್ಚನಹಳ್ಳಿ ಸುಚೇತನ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ನಿರ್ದೇಶಕ ಡಾ|| ಬಿ.ಹೇಮ್ಲಾ ನಾಯ್ಕ್, ಪ್ರಗತಿಪರ ಕೃಷಿಕರಾದ ಕೇಶವ ಕೆಂಜಿಗೆ, ಡಾ.ವಿವೇಕ್, ಸೀತಾರಾಂ ಹೆಗಡೆ, ನೂಮನ್ ಆದಿಲ್, ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಡಿಎಸ್‌ಎಂಎಸ್ ಉಪಾಧ್ಯಕ್ಷ ಅಶೋಕ್‌ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PM Narendra Modi ಬಂಡಿಪುರ ವನ್ಯ ಪರಿಸರದಲ್ಲಿ ಸಂಚರಿಸಿದ ಪ್ರಧಾನಿ ಮೋದಿ

0

PM Narendra Modi ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು ಓಪನ್ ಜೀಪ್ ನಲ್ಲಿ ವನ್ಯಜೀವಿ ಸಫಾರಿ ನಡೆಸಿದರು.

ಓಪನ್ ಜೀಪಿನಲ್ಲಿ ಸಫಾರಿ ನಡೆಸಿರುವ ನರೇಂದ್ರ ಮೋದಿ ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮಿಂಚಿದ್ದು, ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ತೆರಳಿದರು.

PM Narendra Modi ತೆಪ್ಪಕಾಡಿನಲ್ಲಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿದರು.

ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ‌ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‌ಇದ್ದರು.