Friday, June 20, 2025
Friday, June 20, 2025

Nandini vs Amul: ನಂದಿನಿ ಡೇರಿ ಉತ್ಪನ್ನಗಳು ದೇಶದಲ್ಲೇ ನಂಬರ್ ಒನ್ – ವಿನಯ್ ತಾಂದ್ಲೆ

Date:

Nandini vs Amul: ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರ್ಯಾಂಡ್‌ ಅನ್ನು ಮುಗಿಸಲೆಂದೇ ಅಮುಲ್‌ ಹಾಲು, ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ ಎಂದು ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಂದಿನಿ ಹಾಲು ಮತ್ತು ಉತ್ಪನ್ನಗಳು ಕನ್ನಡಿಗರ ಅಸ್ಮಿತೆ. ನಮ್ಮ ಸ್ವಾಭಿಮಾನದ ಸಂಕೇತ ಇದು. ಈ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ರಾಜ್ಯದಲ್ಲಿ ಲಕ್ಷಾಂತರ ರೈತರು, ಅವರು ಕುಟುಂಬ ಅವಲಂಬಿತರಾಗಿದ್ದಾರೆ. ಆದರೆ, ನಂದಿನಿ ಉತ್ಪನ್ನವನ್ನು ಮುಗಿಸುವ ಮೂಲಕ ರಾಜ್ಯದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಎಂಎಫ್‌ಗೆ ಅಮುಲ್‌ ಯಾವ ರೀತಿಯಲ್ಲೂ ಸಾಟಿಯಲ್ಲ. ನಂದಿನಿ ಉತ್ಪನ್ನಗಳು ಬೆಲೆ ಹಾಗೂ ಗುಣಮಟ್ಟದಲ್ಲಿ ಇಡೀ ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ಹಾಗಾಗಿಯೇ, ಹೇಗಾದರೂ ಮಾಡಿ ಮಾರುಕಟ್ಟೆ ತಂತ್ರ ಬಳಸಿ ತನ್ನ ಉತ್ಪನ್ನಗಳ ಬೇಡಿಕೆ ಹೆಚ್ಚಿಸಿಕೊಳ್ಳಲು ಅಮೂಲ್‌ ಇಂತಹ ಕುತಂತ್ರ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಕೆಎಂಎಫ್‌ನ ಹಾಲು, ಮೊಸರಿಗೆ ಮುಂಬೈ, ಗೋವಾ, ಹೈದರಾಬಾದ್‌, ಪೂನಾ, ಸೊಲ್ಲಾಪುರ, ಇತರೆ ಪ್ರಾಂತ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಚೆನ್ನಾಗಿ ಮಾರಾಟವಾಗುತ್ತಿದೆ. ಅದನ್ನು ಅಮುಲ್‌ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿಯೇ, ಮುಂದೆ ಕೆಎಂಎಫ್‌ ಎಲ್ಲಿ ತನ್ನ ಬುಡಕ್ಕೆ ಅಪತ್ತು ತರುತ್ತದೋ ಎಂದು ಹೆದರಿ ಅಮುಲ್‌ ಇಂತಹ ಷಡ್ಯಂತ್ರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಈ ಮಧ್ಯೆ, ಉತ್ಪನ್ನಗಳ ದರ ಮತ್ತು ಗುಣಮಟ್ಟ ಸೇರಿದಂತೆ ಯಾವ ರೀತಿಯಲ್ಲೂ ಅಮುಲ್‌, ಕೆಎಂಎಫ್‌ ವಿರುದ್ಧ ಸ್ಪರ್ಧೆ ನಡೆಸಲಾಗದು. ಉದಾಹರಣೆಗೆ ಕೆಎಂಎಫ್‌ ಹಾಲಿನ ದರ ಲೀಟರ್‌ಗೆ 39ರೂ. ಇದ್ದರೆ, ಅಮುಲ್‌ ಹಾಲಿನ ದರ 54. ರೂ. ಇದೆ. ಅಂತೆಯೇ ಗುಣಮಟ್ಟವೂ ನಂದಿನಿಗಿಂತ ಚೆನ್ನಾಗಿಲ್ಲ. ಹಾಗಾಗಿ ಜನರೇ ಅಮುಲ್‌ ಉತ್ಪನ್ನಗಳನ್ನು ತಿರಸ್ಕರಿಸುತ್ತಾರೆ. ಕೆಎಂಎಫ್‌ ದೇಶದ ಅತಿದೊಡ್ಡ ಬ್ರ್ಯಾಂಡ್‌ ಆಗಿದ್ದು, ವಿದೇಶದಲ್ಲೂ ಹೆಸರು ಮಾಡಿದೆ ಎಂದು ತಿಳಿಸಿದ್ದಾರೆ.

Nandini vs Amul: ಕೇಂದ್ರ ಸರ್ಕಾರ ಗುಜರಾತ್ ಮೂಲದ ಸಹಕಾರ ಸಂಸ್ಥೆ ಅಮುಲ್ ಮೂಲಕ ರಾಜ್ಯದ ನಂದಿನಿಯನ್ನು ಮುಗಿಸುವ ಕುತಂತ್ರ ನಡೆಸಿದೆ ಎಂದು ಹೇಳಿದ್ದಾರೆ.

ನಂದಿನಿಯನ್ನು ಅಮುಲ್‍ನಲ್ಲಿ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸಹಕಾರ ಸಚಿವರು ಕೊಟ್ಟಿರುವ ಹೇಳಿಕೆ ಕನ್ನಡಿಗರಿಗೆ ಆಘಾತ ಉಂಟು ಮಾಡಿದೆ. ಕರ್ನಾಟಕದ ಅಸ್ಮಿತೆಯಾದ ನಂದಿನಿಯನ್ನು ಉಳಿಸಿಕೊಳ್ಳಬೇಕಾದ ಹೊಣೆ ಸರ್ಕಾರ ಹಾಗೂ ಕನ್ನಡಿಗರ ಮೇಲಿದೆ. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿನಯ್ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...

MESCOM ಜೂ.21 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ತಾಲ್ಲೂಕು, ಕುಂಸಿ ಗ್ರಾಮದ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ...