KLive Special ಇಂದಿನ ಕೆ ಲೈವ್ ಕವಿತಾಂಗಣ
KLive Special “ಇದು ಯುಗ ಯುಗದ ಜನರ ಮನೋಧರ್ಮದ ಕವಿತೆ. ನಿತ್ಯ ಸತ್ಯ ಜಗಧರ್ಮದ ವಿಷಾದದ ಭಾವಗೀತೆ. ಅಂತರ್ಜಾಲದಿ ಕಂಡ ಈ ಅನನ್ಯ ಚಿತ್ರವೇ ಈ ಮಾರ್ಮಿಕ ಕವಿತೆಗೆ ಪ್ರೇರಣವಾದದ್ದು.. ಕಾರಣವಾದದ್ದು. ಅಂದಿಗೂ ಇಂದಿಗೂ ಎಂದಿಗೂ ಈ ಲೋಕಕ್ಕೆ ಪರಿವರ್ತನೆಗೆ ಒಗ್ಗಿಕೊಳ್ಳಲು ಏನೆಲ್ಲ ಸಂಕಷ್ಟ? ಪರಿವರ್ತಕರನ್ನು ಒಪ್ಪಿಕೊಳ್ಳಲು ಅದೆಷ್ಟು ಕಷ್ಟ..?? ಏನಂತೀರಾ..???” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಜಗಧರ್ಮ..!
ಮಿಥ್ಯೆಯ ದರಬಾರಿನಲ್ಲಿ
ಸತ್ಯಕ್ಕೆ ಮರಣ ದಂಡನೆ
ಸುಳ್ಳಾಡುವವರ ಸಾಮ್ರಾಜ್ಯದಿ
ನಿಜ ನುಡಿವವನಿಗೆ ನೇಣು.!
ಬೆತ್ತಲೆಜನರ ಸಂತೆಯಲ್ಲಿ
ಬಟ್ಟೆಗೆ ಸದಾ ಬಹಿಷ್ಕಾರ
ನಗ್ನವಾದವರ ನಡುವಲ್ಲಿ
ಅರಿವೆ ತೊಟ್ಟರೆ ಕಲ್ಲೇಟು.!
ಸೈತಾನರ ನಾಡಿನಲ್ಲಿ
ಸಾಧುವಾದರೆ ಗಡಿಪಾರು
ಕಟುಕರ ಚಕ್ರಾಧಿಪತ್ಯದಲ್ಲಿ
ಕರುಣಿಯಾದರೆ ಶಿರಚ್ಚೇದನ.!
ಮೂರ್ಖರ ನಗರದಲ್ಲಿ
ಮೇಧಾವಿಗೆ ನಿತ್ಯಾಪಮಾನ
ದಡ್ಡರ ಒಡ್ಡೋಲಗದಲ್ಲಿ
ಚತುರನಿಗೆ ದಿನವು ಶಿಕ್ಷೆ.!
ಕಡುಭ್ರಷ್ಟರ ಬಜಾರಿನಲ್ಲಿ
ನಿಷ್ಟನೆಂದೂ ನಿಕೃಷ್ಟ
ವಂಚಕರ ಒಕ್ಕೂಟದಲಿ
ಪ್ರಾಮಾಣಿಕನಿಗೆ ಪ್ರತಿಕ್ಷಣ ಸಂಕಷ್ಟ.!

KLive Special ಯುಗಯುಗದಿಂದ ಹೀಗೆ
ಜಗದ ಜಾತಕದ ಬಗೆ
ತನ್ನೊಡಲ ಬೆಳಗುವ ಬೆಳಕನ್ನೇ
ಒಪ್ಪಿಕೊಳ್ಳದ ಕತ್ತಲಿನ ಹಾಗೆ.!
ಒಳಿತು ಒಳ್ಳೆಯತನಗಳಿಗೆ
ಬೆಳಕು ಬದಲಾವಣೆಗಳಿಗೆ
ಒಪ್ಪದ ಒಗ್ಗಿಕೊಳ್ಳದ ರೀತಿ
ಕ್ರಾಂತಿ ಸಂಕ್ರಾಂತಿಯಿಂದಲೇ
ಪರಿವರ್ತಿಪ ಲೋಕದ ಚಿರನೀತಿ.!
- ಎ.ಎನ್.ರಮೇಶ್. ಗುಬ್ಬಿ.
Election Boycott: ಕನಸಿನಕಟ್ಟೆ 99 ನೇ ಮತಗಟ್ಟೆಯ ಮತದಾರರಿಂದ ಚುನಾವಣಾ ಮತದಾನ ಬಹಿಷ್ಕಾರ
Election Boycott: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕನಸಿನಕಟ್ಟೆ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕನಸಿಕಟ್ಟೆ
ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕಲ್ಪಿಸಿ ಕೊಟ್ಟಿಲ್ಲ ಎಂದು ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕೂಡ ಸಮರ್ಪಕವಾಗಿಲ್ಲ.
ಗ್ರಾಮದಲ್ಲಿ ಎಲ್ಲೂ ಕೂಡ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ.
ಇದರಿಂದ ಕನಸಿನಕಟ್ಟೆ ಕುಗ್ರಾಮ ವಾಗಿ ಮಾರ್ಪಟ್ಟಿದೆ.
ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Election Boycott: ಬೇಡಿಕೆ ಈಡೇರಿಸದೇ ಇದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಕನಸಿನಕಟ್ಟೆಯ 99ನೇ ಮತಗಟ್ಟೆಯ ಮತದಾರರ ಪರವಾಗಿ ಮೋಹನ್ ಕುಮಾರ್
ಮನವಿ ಅರ್ಪಿಸಿದರು.
Karnataka Elections 2023: ಕಾಂಗ್ರೆಸ್ ನೆಲೆದಪ್ಪಿದ ವೈಎಸ್ವಿ ದತ್ತ ಈಗ ಪಕ್ಷೇತರ ಸ್ಪರ್ಧಿಸಲು ಯೋಜನೆ
Karnataka Elections 2023: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಿದ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಿದ ವೈ.ಎಸ್.ವಿ. ದತ್ತಾ, ಅಭಿಮಾನಿಗಳು, ಬೆಂಬಲಿಗರ ಜೊತೆ ಚರ್ಚಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಮುಗಿದ ಕಥೆ, ಹಣ, ಜಾತಿ ಮೇಲೆ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Karnataka Elections 2023: ಟವೆಲ್ ಗುರುತಿನಿಂದ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚುನವಣಾ ಖರ್ಚಿಗಾಗಿ ಹಣ ಸಂಗ್ರಹಿಸಿದ ದತ್ತಾ ಅವರು, ಸಮಾವೇಶದಲ್ಲಿಯೇ ಟವೆಲ್ ಹಾಸಿ ಹಣ ಸಂಗ್ರಹಿಸಿದರು.
Tirupati Temple: ನೂಕು ನುಗ್ಗಲು ತಪ್ಪಿಸಲು ಟೋಕನ್ ಪಡೆದೇ ತಿರುಪತಿ ದರ್ಶನಕ್ಕೆ ಬರಲು ಟಿಟಿಡಿ ಮನವಿ
Tirupati Temple: ಕಳೆದೆರಡು ದಿನಗಳಿಂದ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ. ಆದ್ದರಿಂದ ಜನಸಂಖ್ಯೆ ಹೆಚ್ಚಾಗಿರುವ ಕಾರಣ ತಿರುಪತಿಗೆ ಹೋಗಬೇಕು ಎಂದುಕೊಂಡವರು ಈ ವಿಷಯಗಳ ಬಗ್ಗೆ ತಿಳಿದುಕೊಳ್ಳ ಬೇಕು.

ತಿರುಮಲಕ್ಕೆ ಹೋಗುವ ಭಕ್ತರಿಗೆ ಟಿಟಿಡಿ ಅನೇಕ ಸೌಲಭ್ಯಗಳನ್ನು ನೀಡಿದೆ.
Tirupati Temple: ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಟ್ಟಡದಲ್ಲಿ ಭಕ್ತರಿಗೆ ಅನ್ನ, ಹಾಲು ಮತ್ತು ನೀರಿನ ಸೌಲಭ್ಯ ಇರುತ್ತದೆ. ಜೊತೆಗೆ ತಿರುಮಲದ ಅನ್ನಪ್ರಸಾದ ಕೌಂಟರ್‌ಗಳು, ನಾರಾಯಣಗಿರಿ ಉದ್ಯಾನವನಗಳು ಮತ್ತು ಭಕ್ತರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅನ್ನ, ಹಾಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ
ಸರತಿ ಸಾಲಿನಲ್ಲಿ ಯಾವುದೇ ಕಾಲ್ತುಳಿತ ಸಂಭವಿಸದಂತೆ ಟಿಟಿಡಿ ವಿಜಿಲೆನ್ಸ್ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಇದೆ. ಭಕ್ತಾದಿಗಳ ವಿಪರೀತ ದಟ್ಟಣೆಯಿಂದಾಗಿ, 300 ರೂ. ವಿಶೇಷ ಪ್ರವೇಶ ದರ್ಶನ ಟೋಕನ್‌ಗಳು, ಎಸ್‌ಎಸ್‌ಡಿ ಟೋಕನ್‌ಗಳು ಮತ್ತು ದೈವಿಕ ದರ್ಶನ ಟೋಕನ್‌ಗಳನ್ನು ಹೊಂದಿರುವ ಭಕ್ತರು ಮಾತ್ರ ತಿರುಮಲಕ್ಕೆ ಬರಬೇಕೆಂದು ಟಿಟಿಡಿ ಮನವಿ ಮಾಡಿದೆ.
