Sunday, April 12, 2026
Sunday, April 12, 2026
Home Blog Page 1248

Goodluck Care Center ಗುಡ್ ಲಕ್ ಸಂಸ್ಥೆಯು ವೃದ್ಧರ ಅಸ್ವಸ್ಥರ ಬುದ್ಧಿಮಾಂದ್ಯರಿಗೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ- ಪೂರ್ಣಿಮಾ ಸುನೀಲ್

0

Goodluck Care Center ಸಮಾಜದಲ್ಲಿ ಅನೇಕ ಸೇವಾ ಸಂಸ್ಥೆಗಳಿದ್ದು, ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿರುವ, ಅಗತ್ಯ ಇರುವವರಿಗೆ ನೆರವು ನೀಡುವುದು ತುಂಬಾ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.

ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ವತಿಯಿಂದ ಆರೈಕೆ ಕೇಂದ್ರದ ಅನ್ನಪೂರ್ಣೇಶ್ವರಿ ಪ್ರಸಾದ ಯೋಜನೆಗೆ ಆ ರ್ಥಿಕ ನೆರವು ಹಾಗೂ ಆಹಾರ ಸಾಮಾಗ್ರಿ ನೀಡಿ ಮಾತನಾಡಿ, ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ವೃದ್ಧರ, ಪಾರ್ಶ್ವವಾಯು ಪೀಡಿತರ, ಬುದ್ದಿಮಾಂದ್ಯರ ಸೇವೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ತುಂಬಾ ಕಷ್ಟಕರ ಆಗಿರುವ ಪರಿಸ್ಥಿತಿಯಲ್ಲಿ ಸೇವಾ ಮನೋಭಾವದಿಂದ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

Goodluck Care Center ಪಂಚಾಕ್ಷರಿ ಹಿರೇಮಠ ಅವರು 70ನೇ ವಯಸ್ಸಿನಲ್ಲಿಯೂ ಸ್ವಾರ್ಥರಹಿತ ಸೇವೆ ಮಾಡುತ್ತಿರುವುದು ಮನುಕುಲಕ್ಕೆ ಮಾದರಿಯಾಗಿದೆ. ಇಂತಹ ಸೇವಾ ಮನೋಭಾವ ಹೊಂದಿರುವ ಸಂಸ್ಥೆಗಳಿಗೆ ಸಾರ್ವಜನಿಕರು ಹೆಚ್ಚು ಭೇಟಿ ನೀಡಿ ನೆರವು ನೀಡಬೇಕು ಎಂದರು.

ಇಂದಿನ ಯುಗದಲ್ಲಿ ಮನೆಯಲ್ಲಿ ಇರುವ ಹಿರಿಯರನ್ನು ನೋಡಿಕೊಳ್ಳುವುದು ಕಷ್ಟ ಎಂದು ಭಾವಿಸುವ ಜನರೇ ಜಾಸ್ತಿ. ಇಲ್ಲಿ ಮಾನಸಿಕವಾಗಿ ನೊಂದವರನ್ನು, ಕಷ್ಟದಲ್ಲಿರುವ ಹಿರಿಯರನ್ನು ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಿರುವುದು ಉತ್ತಮ ಸೇವೆ ಎಂದು ಹೇಳಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಶಿವಮೊಗ್ಗದ ನಾಗರೀಕರ ಸಹಕಾರದಿಂದ ಸಂಸ್ಥೆ ಉತ್ತಮವಾಗಿ ನಡೆಯುತ್ತಿದೆ ಎಂದರು. ನಿರ್ದೇಶಕ ಜಿ.ವಿಜಯ್‌ಕುಮಾರ್ ಮಾತನಾಡಿ, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಜನರು ಹೆಚ್ಚಿನ ನೆರವು ನೀಡಬೇಕು ಎಂದು ತಿಳಿಸಿದರು.

ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ರೋಟರಿ ಉತ್ತರ ಮಾಜಿ ಅಧ್ಯಕ್ಷ ಜೆ.ಶರವಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Cast Reservation ಒಳ ಮೀಸಲಾತಿ ವಿಚಾರಗಳ ಬಗ್ಗೆ ಬಂಜಾರ ಸಮುದಾಯದ ಸಭಾ ನಿರ್ಣಯಗಳು

0

Cast Reservation ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಒಳ ಮೀಸಲಾತಿ ವರ್ಗೀಕರಣ ಕುರಿತ ತೀರ್ಮಾನದ ಬಗ್ಗೆ ಲಂಬಾಣಿ ತಾಂಡಾಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳು ಹಬ್ಬಿಸುತ್ತಿದ್ದು, ಜನರ ನೆಮ್ಮದಿ ಕೆಡುತ್ತಿದೆ. ಸರಿಯಾದ ಮಾಹಿತಿಯ ಕೊರತೆ ಮತ್ತು ಅಪಪ್ರಚಾರದ ಕಾರಣ ಕೆಲವು ಮುಖಂಡರ ವಿರುದ್ಧ ಸಮುದಾಯದ ಜನ ಆಕ್ರೋಶಿತರಾಗಿ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಿವೆ.

ಈ ಘಟನೆಗಳ ಬಗ್ಗೆ ಸಮುದಾಯದ ಮುಖಂಡರು ವಿಷಾದ ವ್ಯಕ್ತಪಡಿಸಿ ದಿನಾಂಕ:09-04-2023 ರಂದು ಬೆಳಿಗ್ಗೆ 11:00 ಘಂಟೆಗೆ ಶಿವಮೊಗ್ಗ ಬಂಜಾರ ಭವನದಲ್ಲಿ ಸಮುದಾಯದ ಮುಖಂಡರಾದ ಡಾ. ಸಣ್ಣರಾಮರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ನಾಯ್ಕರವರು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡ ತೀರ್ಮಾನಗಳಲ್ಲಿ ಬಹುಪಾಲು ತೀರ್ಮಾನಗಳು ಸಮುದಾಯದ ಹಿತ ಕಾಪಾಡುವ ಅಂಶಗಳಿದ್ದು, ಅವುಗಳನ್ನು ತಾಂಡ ನಿವಾಸಿಗಳಿಗೆ ಮನವರಿಕೆ ಮಾಡಬೇಕಾಗಿದೆ.

Cast Reservation ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಚುನಾವಣೆಯ ನಂತರ ಸರ್ಕಾರದ ಗಮನ ಸೆಳೆದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಹಿರಿಯ ಮುಖಂಡರುಗಳಾದ ಡಾ|| ಸಣ್ಣರಾಮ ನಿವೃತ್ತ ಹಿರಿಯ ಅಧಿಕಾರಿಗಳಾದ ಬಿ.ಪಿ. ಕನಿರಾಂ, ಹೀರಾನಾಯ್ಕ, ಭೋಜ್ಯಾನಾಯ್ಕ, ತಾರ‍್ಯಾನಾಯ್ಕ, ಗಂಗಾನಾಯ್ಕಗೊಂದಿ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ, ಜಿಲ್ಲಾ ಬಂಜಾರ ಸಂಘದ ನಿರ್ದೇಶಕರುಗಳಾದ ನಾಗೇಶನಾಯ್ಕ, ಗಿರಿಯಾನಾಯ್ಕ, ಆನಂದನಾಯ್ಕ, ಸಕ್ರ್ಯನಾಯ್ಕ, ಆಯನೂರು ಶಿವಾನಾಯ್ಕ ಸೇರಿದಂತೆ ಅನೇಕರು ಮಾತನಾಡಿ ಈ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ನಿರ್ಣಯಗಳು:
01.ಕರ್ನಾಟಕ ಸರ್ಕಾರದ ಮೀಸಲಾತಿ ವರ್ಗೀಕರಣದ ಆದೇಶವನ್ನು ಚುನಾವಣೆಯ ಅಸ್ತçವಾಗಿ ಸಮುದಾಯವು ಬಳಸಬಾರದೆಂದು ನಿರ್ಣಯಿಸಲಾಯಿತು.

02.ಸಮುದಾಯದ ಕೆಲವು ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮುಖಂಡರುಗಳು ರಾಜಕೀಯ ದುರುದ್ದೇಶದಿಂದ ಪ್ರಚೋದಿಸುವ, ಉದ್ವೇಗದ ಹೇಳಿಕೆಗಳಿಗೆ ಸಮುದಾಯದ ಬಂಧುಗಳು ಕಿವಿಗೊಡಬಾರದೆಂದು ಹಾಗೂ ಇಂತಹ ಮುಖಂಡರುಗಳಿಂದ ಸಮುದಾಯ ದೂರವಿರಬೇಕೆಂದು ತೀರ್ಮಾನಿಸಲಾಯಿತು.

  1. ಒಳ ಮೀಸಲಾತಿ ವರ್ಗಿಕರಣದ ಆದೇಶ ಹೊರತುಪಡಿಸಿ ಉಳಿದ ಅಂಶಗಳು ಸಮಾಜಕ್ಕೆ ಪೂರಕವಾಗಿರುವುದರಿಂದ ಒಳ ಮೀಸಲಾತಿ ವರ್ಗಿಕರಣ ವಿಚಾರವನ್ನು ಚುನಾವಣೆಯ ನಂತರ ಶಾಂತಿಯುತವಾಗಿ ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.

04.ಯಾವುದೇ ಕಾರಣಕ್ಕೂ ಮೀಸಲಾತಿ ವಿಚಾರದಲ್ಲಿ ತಾಂಡದ ನಿವಾಸಿಗಳು ಚುನಾವಣೆ ಬಹಿಷ್ಕಾರ ಹಾಗೂ ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಅವಹೇಳನ ಹಾಗೂ ಪ್ರಚೋದನಾಕಾರಿ ನಡೆಗಳನ್ನು ಮಾಡದಂತೆ ಸಂಯಮ ವಹಿಸಬೇಕೆಂದು ನಿರ್ಣಯಿಸಲಾಯಿತು

Job Vaccancy In Shivamogga ಏಪ್ರಿಲ್ 12 ರಂದು ಶಿವಮೊಗ್ಗದಲ್ಲಿ ನೇರ ಸಂದರ್ಶನದ ಮೂಲಕ ಉದ್ಯೋಗಕ್ಕೆ ಆಯ್ಕೆ

Job Vaccancy In Shivamogga ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.12ರ ಬೆಳಗ್ಗೆ 10:00ಕ್ಕೆ ಪತ್ರಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

Job Vaccancy In Shivamogga ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣ ಸಂಖ್ಯೆ : 08182-255293,
9380663606, ಮತ್ತು 9482023412, 9535312531, ಮೂಲಕ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Election Commission of India ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ಜಿಲ್ಲಾಧಿಕಾರಿಗಳ ಸೂಚನೆ

0

Election Commission of India ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಚುನಾವಣಾ ನೀತಿ ಸಂಹಿತೆ ಅನುಷ್ಟಾನಕ್ಕಾಗಿ ಸರ್ಕಾರಿ ಅಧಿಕಾರಿ/ಸಿಬ್ಬಂದಿ ವರ್ಗದವರ ಹೆಚ್ಚಿನ ಅವಶ್ಯಕತೆ ಇರುವುದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಸಿಬ್ಬಂದಿ ಹಾಗೂ ಶಿಕ್ಷಕ ವರ್ಗದವರು ತಮ್ಮ ಇಲಾಖಾ ಮುಖ್ಯಸ್ಥರ ಪೂರ್ವಾನುಮತಿ ಪಡೆಯದೆ ಕೇಂದ್ರಸ್ಥಾನವನ್ನು ಬಿಡದೇ ಇರುವಂತೆ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲಾ ಇಲಾಖಾ ಮುಖ್ಯಸ್ಥರುಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚಿಸಿದ್ದಾರೆ.

Election Commission of India ಹಾಗೂ ಈ ಬಗ್ಗೆ ಇಲಾಖಾ ಮುಖ್ಯಸ್ಥರುಗಳಿಗೆ ತಮ್ಮ ಇಲಾಖೆಯ ಅಧೀನ ಅಧಿಕಾರಿಗಳಿಗೆ ಈ ಕುರಿತು ಕಟ್ಟುನಿಟ್ಟಾಗಿ ಕ್ರಮ ವಹಿಸುವಂತೆ ನಿರ್ದೇಶಿಸಿದ್ದಾರೆ. ಮತ್ತು ಜಿಲ್ಲೆಯ ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿಯನ್ನು ಪಡೆಯದೇ ತಮ್ಮ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ನಿರ್ದೇಶಿಸಿದ್ದಾರೆ.

Shivamoagga Police ವ್ಯಕ್ತಿ ಕಾಣೆಯಾಗಿದ್ದಾರೆ

0

Shivamoagga Police ಲೋಕೇಶಪ್ಪ, ಸುಮಾರು 75 ವರ್ಷ ಇವರು ಏಪ್ರಿಲ್ 08 ರಂದು ದೇವಕಾತಿಕೊಪ್ಪದ ಬಸ್‍ಸ್ಟ್ಯಾನಿಂದ ಕಾಣೆಯಾಗಿರುತ್ತಾರೆ.

ಕಾಣೆಯಾದ ಲೋಕೇಶಪ್ಪ ಸುಮಾರು 5.6 ಅಡಿ ಎತ್ತರ, ಗೋಧಿ ಮೈಬಣ್ಣ , ಕೋಲು ಮುಖ, ತೆಳುವಾದ ಮೈಕಟ್ಟು, ತಲೆಯಲ್ಲಿ ಬಿಳಿ ಕೂದಲು ಇದ್ದು ಕನ್ನಡ ಧರಿಸಿರುತ್ತಾರೆ.

Shivamoagga Police ಕಾಣೆಯಾದ ವೇಳೆ ಬಿಳಿ ಬಣ್ಣದ ಪಂಚೆ ಮತ್ತು ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿರುತ್ತಾರೆ. ಕನ್ನಡ ಮಾತನಾಡುತ್ತಾರೆ. ಇವರು ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಕಂಟ್ರೋಲ್ ರೂಂ ಶಿವಮೊಗ್ಗ ದೂ.ಸಂ: 100, 08182-261418, 261410, 9480803350 ನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

Dr. B.R. Ambedkar ಏಪ್ರಿಲ್ 14 ರಂದು ಬಾಬಾ ಸಾಹೇಬ್ ಅಂಬೆಡ್ಕರ್ ದಿನಾಚರಣೆ ಮಾಹಿತಿ

0

Dr. B.R. Ambedkar ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‍ರವರ 132 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 14 ರ ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುವುದು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು.

Dr. B.R. Ambedkar ಚುನಾಯಿತ ಪ್ರತಿನಿಧಿಗಳು, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.

Music learning camp ಕಾರಣಗಿರಿಯಲ್ಲಿ ಸುಗಮ ಸಂಗೀತ ಕಲಿಕಾ ಶಿಬಿರ

0

Music learning camp ಕಾರಣಗಿರಿಯ ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ 4 ದಿನಗಳ ಸುಗಮ ಸಂಗೀತ ಕಲಿಕಾ ಶಿಬಿರ ನಡೆಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಗರ್ತಿಕೆರೆ ರಾಘಣ್ಣ ಶಿಬಿರದಲ್ಲಿ ಗೀತೆಗಳನ್ನ ಕಲಿಸಿಕೊಟ್ಟರು.

Music learning camp 30 ಶಿಭಿರಾರ್ಥಿಗಳು ಪಾಲ್ಗೊಂಡರು.
ಸಮಾರೋಪ ಸಮಾರಂಭದಲ್ಲಿ ಗರ್ತಿಕೆರೆ ರಾಘಣ್ಣನಿಗೆ ಸನ್ಮಾನಿಸಲಾಯಿತು.
ಹನಿಯ ರವಿ,ಸುರೇಶ್ ಕುಮಾರ್,ಗುರುಮೂರ್ತಿ,ಶ್ರೀಧರ್ ಜೋಯಿಸ್,ಗಾಯತ್ರಿ ಅರುಣ್,ವಿನಾಯಕ ಪ್ರಭು ಮತ್ತಿತರು ಪಾಲ್ಗೊಂಡಿದ್ದರು.

K. S. Eshwarappa ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ

K. S. Eshwarappa ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಮಾಜಿ ಸಚಿವ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು” ಎಂದು ಮನವಿ ಮಾಡಿದ್ದಾರೆ.

K. S. Eshwarappa ”ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ.
ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದಗಳು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲ ರಾಜಕೀಯ ನಾಯಕರಿಗೂ ಕೂಡ ಟಿಕೆಟ್‌ ನೀಡುವುದಿಲ್ಲ ಎಂಬ ಸುಳಿವನ್ನು ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗುವುದಿಲ್ಲ ಎಂಬ ನಿರೀಕ್ಷೆಯಿಂದ ಬಿಜೆಪಿಯ ಟಿಕೆಟ್‌ ಘೋಷಣೆಗೂ ಮುನ್ನವೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ಸ್ವತಃ ನಿವೃತ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.