Janaspandana Trust ಶ್ರೀ ಜನಸ್ಪಂದನ ಟ್ರಸ್ಟ್(ರಿ)ನ ಅಧ್ಯಕ್ಷರಾಗಿ ಚನ್ನಬಸಪ್ಪ(ಮನು)ರವರನ್ನು ನೇಮಕ ಮಾಡಲಾಗಿದೆ.
ಇವರು ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Janaspandana Trust ಶ್ರೀ ಜನಸ್ಪಂದನ ಟ್ರಸ್ಟ್(ರಿ)ನ ಅಧ್ಯಕ್ಷರಾಗಿ ಚನ್ನಬಸಪ್ಪ(ಮನು)ರವರನ್ನು ನೇಮಕ ಮಾಡಲಾಗಿದೆ.
ಇವರು ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Kannada Sahitya Parishath ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಸೇರಿದಂತೆ ಅನೇಕ ಮಹಾನೀಯರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯಿಂದ ಕನ್ನಡ ಸಾಹಿತ್ಯವು ಇಡೀ ವಿಶ್ವಾದಾದ್ಯಂತ ಹರಡಿಕೊಂಡು ನಾಡಿನ ಸೊಗಡನ್ನು ಎಲ್ಲೆಡೆ ಪಸರಿಸುತ್ತಿದೆ ಎಂದು ಉಪನ್ಯಾಸಕ
ಹೆಚ್.ಎಸ್. ಸತ್ಯನಾರಾಯಣ ಹೇಳಿದರು.
ಶಿವಮೊಗ್ಗದ ಎಂ.ಎಲ್.ಎಂ.ಎನ್. ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿ ಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.
Kannada Sahitya Parishath ದೇಶಕ್ಕೆ ರಾಷ್ಟ್ರಗೀತೆಯನ್ನು ರವೀಂದ್ರನಾಥ ಠಾಗೂರ್ ರಚಿಸಿರುವುದನ್ನು ಪ್ರೇರಣೆಯಾಗಿ ತೆಗೆದುಕೊಂಡು ಕುವೆಂಪು ಅವರು ಕರ್ನಾಟಕಕ್ಕೆ ನಾಡಗೀತೆ ರಚಿಸಿ ಕನ್ನಡದ ಕಂಪನ್ನು ಬೆಳೆಸಿದವರು ಎಂದ ಅವರು ಕುವೆಂಪು ಸಾಹಿತ್ಯ ಸಿಹಿಯಾದ ಲಡ್ಡುವಿನಂತೆ ಸುತ್ತಮುತ್ತಲು ಇರುವೆಗಳಿರುವ ಜೊತೆಗೆ ಎಲ್ಲಾ ಕಡೆಯಿಂದಲೂ ಸಿಹಿಯೇ ತುಂಬಿರುತ್ತದೆ ಎಂದು ಬಣ್ಣಿಸಿದರು.
ಇಂದಿನ ವಿದ್ಯಾರ್ಥಿಗಳು ಹಾಗೂ ನಾಗರೀಕರು ಜೀವಮಾನದಲ್ಲಿ ಒಮ್ಮೆಯಾದರೂ ಕುವೆಂಪು ಅವರ ರಚಿಸಿ ರುವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಅವರ ರಚನೆಗಳಲ್ಲಿ ಹೊಂಬೆಳಕು ಪದ ಸೇರಿದಂತೆ ಅನೇಕ ಕನ್ನ ಡ ಹೊಸಪದಗಳು ಅವರಿಂದಳೇ ಹುಟ್ಟಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಗಿರಿಶಿಖರ ಹಾಗೂ ಪ್ರರ್ವತಶ್ರೇಣಿಗಳು ಅದೆಷ್ಟು ಎತ್ತರಗಳಲ್ಲಿವೆಯೇ ಅದೇ ರೀತಿಯ ಕುವೆಂಪು ಸಾಹಿತ್ಯವು ಅಷ್ಟೇ ಎತ್ತರವನ್ನು ಮುಟ್ಟಿದೆ. ಭೂಮಿಯಲ್ಲಿ ಕಾಣ ಸಿಗುವ ನೀಲಾಕಾಶ, ಸುಂದರ ಜಲಪಾತ ಹಾಗೂ ಹಚ್ಚಹಸಿರಿ ನಿಂದ ಕೂಡಿರುವ ಸೊಬಗನ್ನ ಪ್ರಕೃತಿ ದೇವತೆಯೆಂದೇ ನಂಬಿದವರು
. ದೇವಾಲಯಕ್ಕಿಂತ ಪ್ರಕೃತಿಯಲ್ಲೇ ಕಂಡು ಬರುವ ಆ ಸೌಂದರ್ಯದಲ್ಲೇ ದೇವರನ್ನು ಕಾಣುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜೋಳ್ದಾಳ್ ನರ್ಸಿಂಗ್ ಹೋಂ ಮುಖ್ಯಸ್ಥ ಡಾ. ಜೆ.ಪಿ.ಕೃಷ್ಣೇಗೌಡ ದತ್ತಿದಾನಿಗಳಾದ ದಿ.ಶ್ರೀಮತಿ ತುಳಸಮ್ಮ ಮತ್ತು ರಾಮೇಗೌಡ ಅವರು ಕನ್ನಡ ಸಾಹಿತ್ಯ ಬೆಳವ ಣ ಗೆಗೆ ಹಾಗೂ ಆಶಾಕಿರಣ ಮಕ್ಕಳ ಶ್ರೇಯೋಭಿವೃದ್ದಿ ಅನೇಕ ಬಾರಿ ಸಹಕಾರ ನೀಡಿ ಬೆಳೆಸಿದ್ದರು ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ತೆರ ಳುತ್ತಾರೆ. ಎಲ್ಲಿಯೇ ಇದ್ದರೂ ತಮ್ಮ ತಾಯ್ನಾಡಿನ ಮಾತೃಭಾಷೆಯನ್ನು ಮರೆಯಬಾರದು. ಪ್ರತಿಯೊಂದಲ್ಲೂ ನಾಡಿನ ಸಂಸ್ಕೃತಿಯ ಕಂಪನ್ನು ಅನುಭವಿಸಬೇಕು. ಮೆಟ್ಟಿದ ಮಣ್ಣಿನಲ್ಲಿ ಕನ್ನಡ ಮಣ್ಣು, ಕುಡಿಯುವ ನೀರಿನಲ್ಲಿ ಕಾವೇರಿ ನೀರನ್ನು ನೆನೆದರೆ ಮಾತ್ರ ಕನ್ನಡ ನಾಡಿಗೆ ಬೆಲೆ ಕೊಟ್ಟಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಜಿಲ್ಲೆಯ ವಿವಿಧೆಡೆ ಅತಿಹೆಚ್ಚು ದತ್ತಿಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಉತ್ತಮ ಮಾಹಿತಿ ಕೊಡುವ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಕಸಾಪ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ ಕನ್ನಡಪುಸ್ತಕಗಳ ಅಧ್ಯಯನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದ್ದು ನಾಡಿನ ಋಣ ತೀರಿಸಲು ಇದೊಂದು ಸದಾವಕಾಶವೆಂದು ಭಾವಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಖಾಂಡ್ಯ ಹೋಬಳಿಯಲ್ಲಿ ರಾಜ್ಯಮಟ್ಟದ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ದಿನಾಂಕವನ್ನು ನಿಗಧಿಗೊಳಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ, ಪ್ರಸ್ತೂತಿ ತಜ್ಞೆ ಡಾ|| ಜ್ಯೋತಿ ಕೃಷ್ಣ, ಆರ್ಯುರ್ವೇದ ವೈದ್ಯೆ ಡಾ|| ಗೌರಿ ವರುಣ್, ಎಂ.ಎಲ್.ಎಂ.ಎನ್. ಕಾಲೇಜು ಪ್ರಾಂಶುಪಾಲ ಡಾ. ಜಿ.ಎಂ. ಗಣೇಶ್, ಕಸಾಪ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷಿತ ನಿರೂಪಿಸಿದರು. ರಮ್ಯ ಮತ್ತು ರುಕ್ಸಾನ ಪ್ರಾರ್ಥಿಸಿದರು. ಕಸಾಪ ಸಂಘಟನಾ ಸಂಚಾಲಕ ಎಸ್.ಎಂ.ಲೋಕೇಶಪ್ಪ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ವಂದಿಸಿದರು.
Blood Donation ಜೀವನದ ವಿಶೇಷ ಸಂದರ್ಭಗಳಲ್ಲಿ ರಕ್ತದಾನ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್.ಕುಮಾರ್ ಹೇಳಿದರು.
ಜನ್ಮದಿನದ ಪ್ರಯುಕ್ತ ಶಿವಮೊಗ್ಗದ ಭಾರತೀಯ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವುದರ ಮುಖಾಂತರ ವಿಶೇಷವಾಗಿ ಆಚರಿಸಿಕೊಂಡು ಮಾತನಾಡಿದರು. ಜನ್ಮದಿನದ ಪ್ರಯುಕ್ತ ರಕ್ತದಾನದಂತಹ ಸಾರ್ಥಕ ಕಾರ್ಯ ಮಾಡಿದ್ದೇನೆ. ಪ್ರತಿಯೊಬ್ಬರು ಜನ್ಮದಿನ ಹಾಗೂ ವಿಶೇಷ ಸಂದರ್ಭದಲ್ಲಿ ರಕ್ತದಾನ ಮಾಡಬೇಕು. ಇದರಿಂದ ಕಷ್ಟದಲ್ಲಿ ಇರುವವರಿಗೆ ನೆರವು ನೀಡಿದಂತಾಗುತ್ತದೆ ಎಂದು ತಿಳಿಸಿದರು.
Blood Donation ರಕ್ತದ ಅವಶ್ಯಕತೆ ನಿರಂತರವಾಗಿ ಬೇಕಾಗುವುದರಿಂದ ಹಾಗೂ ರಕ್ತದ ಕೊರತೆ ಆಗದಂತೆ ನೋಡಿಕೊಳ್ಳಲು ಆರೋಗ್ಯವಂತಯ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ರಕ್ತದ ಬೇಡಿಕೆಗೆ ಅವಶ್ಯಕತೆಗೆ ಅನುಗುಣವಾಗಿ ರಕ್ತದಾನ ಶಿಬಿರಗಳು ನಡೆಯಬೇಕು. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಮಹಾತ್ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
ಯುವಜನತೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡಲು ಯಾವುದೇ ಹಿಂಜರಿಕೆ, ಭಯ ಬೇಡ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದೇ ಆಗುತ್ತದೆ. ರಕ್ತದಾನದಂತಹ ಸಮಾಜಮುಖಿ ಸೇವೆ ಅತ್ಯಂತ ಮುಖ್ಯ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ರಕ್ತದಾನದಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಹೃದಯಾಘಾತ ಪ್ರಮಾಣ ಕಡಿಮೆ ಆಗುತ್ತದೆ. ಆರೋಗ್ಯ ಸದೃಢವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಆರ್.ಗಿರೀಶ್ 59ನೇ ಬಾರಿ ರಕ್ತದಾನ ಮಾಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಮಂಜುನಾಥ್, ಧರಣೇಂದ್ರ ದಿನಕರ್, ನವೀನ್, ಅಲ್ಲಾಭಕ್ಷಿ ಹಾಗೂ ರೆಡ್‌ಕ್ರಾಸ್ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನೇಕರು ರಕ್ತದಾನ ಮಾಡಿದರು.
Voters awareness ಭೂಮಿ ಸಂಸ್ಥೆ ಪ್ರತಿ ಚುನಾವಣಾ ಸಂಧರ್ಭದಲ್ಲೂ ಶೇಕಡಾ 100% ಮತದಾನ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತವಾಗಿ ಮಾಡಿಕೊಂಡು ಬಂದಿದ್ದು. ಈ ಭಾರಿಯೂ ರಾಜ್ಯಾದ್ಯಂತ ಸಂಚರಿಸಿ ಮತದಾನ ಜಾಗೃತಿ ಕಾರ್ಯಕ್ರಮ ಅಭಿಯಾನ ನಡೆಸುತ್ತಿದೆ.
Voters awareness ನನ್ನ ಮತ ಮಾರಾಟಕ್ಕಿಲ್ಲ, ಉತ್ತಮ ಭಾರತಕ್ಕಾಗಿ ಮತ ಚಲಾಯಿಸಿ, ಹಲವು ಜಾಗೃತಿ ಘೋಷಣೆಗಳ ಮೂಲಕ ಶೇಕಡ 100ರಷ್ಟು ಮತದಾನಕ್ಕೆ ಹಾಗೂ ಪ್ರಾಮಾಣಿಕ ಮತದಾನಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು ಸ್ವಯಂಸೇವಕರು ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಬೀದಿ ನಾಟಕ, ರಸಪ್ರಶ್ನೆ ಕಾರ್ಯಕ್ರಮ, ಮತದಾನದ ಬಗ್ಗೆ ಕಿರುಚಿತ್ರ ಸ್ಪರ್ಧೆ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ವಿಶೇಷ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪತ್ರಿಕೆಗೆ ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ತಿಳಿಸಿದ್ದಾರೆ.

Samanvaya Trust Shivamogga ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ಜತೆಯಲ್ಲಿ ಸಂವಹನ, ನಾಯಕತ್ವ ಸೇರಿದಂತೆ ಉತ್ತಮ ಕೌಶಲ್ಯಗಳ ಕಲಿಕೆಗೆ ಸಹಕಾರಿ ಆಗುತ್ತದೆ ಎಂದು ರಂಗಭೂಮಿ ಕಲಾವಿದೆ ವಿಜಯಲಕ್ಷ್ಮೀ ಹೇಳಿದರು.
ಶಿವಮೊಗ್ಗ ತಾಲೂಕಿನ ತೋಪಿನಘಟ್ಟದಲ್ಲಿ ಸಮನ್ವಯ ಟ್ರಸ್ಟ್‌ನಿಂದ ಆಯೋಜಿಸಿರುವ “ಮಕ್ಕಳ ಹಬ್ಬ ಮಕ್ಕಳಿಗಾಗಿ ವಿಶೇಷ ಉಚಿತ ಬೇಸಿಗೆ ಶಿಬಿರ”ಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಸಾಹಿತ್ಯ, ಸಂಗೀತ, ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದಾಗ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
Samanvaya Trust Shivamogga ಶಿಕ್ಷಣದ ಜತೆಯಲ್ಲಿ ಮಕ್ಕಳು ಬೇಸಿಗೆ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮಕ್ಕಳು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡು, ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಉಚಿತ ಶಿಬಿರ ನಡೆಸುತ್ತಿರುವ ಸಮನ್ವಯ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಮಕ್ಕಳಿಗೆ ಶಿಬಿರದಲ್ಲಿ ಪರಿಸರ ಕಾಳಜಿ, ಕೃಷಿ ತಿಳವಳಿಕೆ, ತಾರಸಿ ತೋಟ, ಸಂಗೀತ ಕಲಿಕೆ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಆಗಿರುವಂತೆ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮಕ್ಕಳ ಬೇಸಿಗೆ ಸಂಪೂರ್ಣ ಉಚಿತವಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಎಲ್ಲ ರೀತಿ ನಾಯಕತ್ವ, ಸಂವಹನ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಉತ್ತಮ ಸ್ವಯಂಸೇವಕ ಪುರಸ್ಕೃತ ಅಭಿ ಎಚ್.ಎನ್.ಗೌಡ, ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾ ದೇವಿ, ತ್ರಿವೇಣಿ, ವಿಜಯ್, ಸಮನ್ವಯ ಸ್ವಯಂಸೇವಕರು ಮತ್ತಿತರರು ಉಪಸ್ಥಿತರಿದ್ದರು.
Red Cross Shimoga ಪ್ರತಿಯೊಬ್ಬರು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಜಾಗೃತಿ ಹೊಂದುವ ಜತೆಯಲ್ಲಿ ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಎಸ್.ದಿನೇಶ್ ಹೇಳಿದರು.
ಶಿವಮೊಗ್ಗ ನಗರದ ರೆಡ್‌ಕ್ರಾಸ್ ಕಚೇರಿ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ 10 ಜನ ಕ್ಷಯ ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಟಿಬಿ ನಿರ್ಮೂಲನಾ ಗುರಿಯಿಂದ ರಾಜ್ಯದ ಎಲ್ಲ ರೆಡ್‌ಕ್ರಾಸ್ ಶಾಖೆಗಳಲ್ಲಿ ಪ್ರತಿ ತಿಂಗಳು ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶದ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ದಿನೇಶ್ ಮಾತನಾಡಿ, ಕ್ಷಯ ರೋಗಕ್ಕೆ ಭಯ ಪಡುವುದು ಬೇಡ, ಸಕಾಲದಲ್ಲಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯ ರೋಗ ಗುಣಪಡಿಸಬಹುದು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ಹಾಗೂ ಉಚಿತ ಔಷಧೋಪಚಾರ, ಟಿಬಿ ರೋಗಿಗಳಿಗೆ ಧನ ಸಹಾಯ ನೀಡಲಾಗುತ್ತದೆ ಎಂದು ಹೇಳಿದರು.
Red Cross Shimoga ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರು ಮಾತನಾಡಿ, ತೂಕ ಕಡಿಮೆ ಆಗುವುದು, ಪದೇ ಪದೇ ಜ್ವರ ಬರುವುದು ಕ್ಷಯ ರೋಗದ ಮುಖ್ಯ ಗುಣ ಲಕ್ಷಣಗಳು. ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಟಿ.ಬಿ. ಮುಕ್ತರಾಗಬಹುದು. ಎಲ್ಲರ ಸಹಕಾರದಿಂದ ಟಿಬಿ ಮುಕ್ತ ಭಾರತ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕರಾದ ಗಿರೀಶ್, ನವೀನ್, ಧರಣೇಂದ್ರ ದಿನಕರ್, ಜಿ.ವಿಜಯ್‌ಕುಮಾರ್, ರೆಡ್‌ಕ್ರಾಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Election Nomination ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರಲ್ಲಿ 126568 ಪುರುಷ, 132334 ಮಹಿಳೆ ಮತ್ತು 14 ತೃತೀಯ ಲಿಂಗಿ ಸೇರಿದಂತೆ ಒಟ್ಟು 258916 ಮತದಾರರಿದ್ದಾರೆ. ದಿನಾಂಕ: 13-04-2023 ರಿಂದ ನಾಮಪತ್ರಗಳನ್ನು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಎನ್.ಚಂದ್ರಕುಮಾರ್ ತಿಳಿಸಿದರು.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯಲ್ಲಿ ಅವರು ಮಾಹಿತಿ ನೀಡಿ, 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ದಿನಾಂಕ 13-04-2023 (ಗುರುವಾರ)ರಂದು ಹೊರಡಿಸಲಾಗುತ್ತದೆ.
Election Nomination ದಿನಾಂಕ 13-04-2023 ರಿಂದ 20-04-2023 ರವರೆಗೆ ನಿಯಮಾನುಸಾರ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು.
ಹೆಚ್ಚುವರಿ ಮತದಾನ ಕೇಂದ್ರಗಳು :113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 286 ಮತದಾನ ಕೇಂದ್ರಗಳಿದ್ದು, 8 ಹೆಚ್ಚುವರಿ ಮತದಾನ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆಯೋಗದಿಂದ ಅನುಮತಿ ದೊರೆತ ನಂತರದಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತದೆ.
ಮತದಾರರ ಪಟ್ಟಿ: ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: 05-01-2023 ರಂದು ಪ್ರಕಟಿಸಲಾಗಿರುತ್ತದೆ. ಹಾಗೂ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಷ್ಟ್ರದ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ನಿರ್ದೇಶನುಸಾರ ನೀಡಲಾಗಿದೆ. ದಿನಾಂಕ: 05-01-2023 ರಿಂದ ಈ ತಹಲ್ ವರೆಗೆ ಸೇರ್ಪಡೆಯಾದ ಮತದಾರರ ಪಟ್ಟಿಯ ಪೂರಕ ಪಟ್ಟಿಗಳನ್ನು ಭಾರತ ಚುನಾವಣೆ ಆಯೋಗದ ನಿರ್ದೇಶನುಸಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಮತದಾರರಿಗೆ ಗುರುತಿನ ಚೀಟಿ ವಿತರಣೆ: ದಿನಾಂಕ 05-01-2022ರ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರದಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಸುಮಾರು 10,090 ಮತದಾರರ ಗುರುತಿನ ಚೀಟಿಗಳನ್ನು ಸ್ಪೀಡ್ ಪೊಸ್ಟ್ ಮೂಲಕ ಮತದಾರರಿಗೆ ರವಾನಿಸಿದೆ.
ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ದಿನಾಂಕ: 11-04-2023 ಅಂತಿಮ ದಿನವಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳ ಪಟ್ಟಿ: ಭಾರತೀಯ ಜನತಾ ಪಾರ್ಟಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಿದ್ದಾರೆ. ಜನತಾದಳ ಜಾತ್ಯಾತೀತ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಬೇಕಾಗಿದೆ.
ಮಾದರಿ ನೀತಿ ಸಂಹಿತೆ: ಭಾರತ ಚುನಾವಣಾ ಆಯೋಗ ನವದೆಹಲಿ ಇವರ ದಿನಾಂಕ: 29-03-2023 ರ ಪತ್ರಿಕಾ ಪ್ರಕಟಣೆಯಂತೆ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ ಹಾಗೂ ದಿನಾಂಕ: 13-05-202 ರ ವರೆಗೆ ಜಾರಿಯಲ್ಲಿರುತ್ತದೆ. ಕೆ.ವಿ ನಾಗರಾಜ್ ರವರು 110-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾದರಿನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ ಮೊ. 944804743 10.
ಅಂಚೆ ಮತಪತ್ರ ವಿತರಣೆ: 80 ವರ್ಷ ವಯೋಮಾನ ಮೀರಿದವರು, ವಿಕಲಚೇತನರು ಮತ್ತು ಕೋಡ್ 19 ಬಾಧಿತ ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿದೆ.
ಸದರಿ ವ್ಯಕ್ತಿಗಳು ಮತದಾನ ಮಾಡುವ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೀಕ್ಷಿಸಲು ಅವಕಾಶವಿದೆ.
ವಿದ್ಯುನ್ಮಾನ ಮತ ಯಂತ್ರಗಳು: 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿಗಳು ಬ್ಯಾಲೆಟ್ ಯುನಿಟ್-339, ಕಂಟ್ರೋಲ್ ಯುನಿಟ್-339, ವಿವಿಪ್ಯಾಟ್-067 ಸರಬರಾಜು ಮಾಡಿದ್ದು ಸುರಕ್ಷಿತೆಗಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಿಸಿ ಭದ್ರತಾ ಕೊಠಡಿಯಲ್ಲಿ ಇರಿಸಿ ಪೆÇಲೀಸ್ ವಶಕ್ಕೆ ನೀಡಲಾಗಿದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 09-05-2022 ರಂದು ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 10- 05-2022 ರಂದು ನಿರ್ವಹಿಸಲಾಗುತ್ತದೆ. (ಮುಕ್ತಾಯವಾಗುವವರೆಗೆ) ಹಾಗೂ ನಂತರದಲ್ಲಿ ಜಿಲ್ಲಾ ಭದ್ರತಾ ಕೊಠಡಿಗೆ ರವಾನಿಸಲಾಗುತ್ತದೆ.
ಸಹಾಯವಾಣಿ: ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತ ಸಹಾಯವಾಣಿಯು 24*7 ಕಾರ್ಯನಿರ್ವಹಿಸುತ್ತಿದೆ, ಟೋಲ್‍ಫ್ರೀ ದೂರವಾಣಿ ಸಂಖ್ಯೆ: 1800-4257677 ಗೆ ಸಾರ್ವಜನಿಕರು, ಮತದಾರರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯ ಅಥವಾ ಯಾವುದೇ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್‍ನ್ನು ವಿತರಿಸುತ್ತಾರೆ.
ಡಿವೈಎಸ್‍ಪಿ ಬಾಲರಾಜ್ ಮಾತನಾಡಿ, ನಾಮಪತ್ರ ಸಲ್ಲಿಕೆ ಆರಂಭ ದಿನಾಂಕದಿಂದ ಅಂತಿಮ ದಿನದವರೆಗೆ ಪಾಲಿಕೆ ಹಿಂದಿನ ಗೇಟ್‍ನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗುವುದು, ಪಾಲಿಕೆಯ ಇನ್ನೊಂದು ಗೇಟ್‍ನಿಂದ ಪ್ರವೇಶಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್ ಇದ್ದರು.