Sunday, April 12, 2026
Sunday, April 12, 2026
Home Blog Page 1251

DC Ballari ಬಳ್ಳಾರಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ-ಪವನ್ ಕುಮಾರ್ ಮಾಲಪಾಟಿ

0

DC Ballari ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023 ರ ಅಂಗವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಶನಿವಾರದಂದು ಒಟ್ಟು 2,02,500 ರೂ. ನಗದು ಹಣ ಮತ್ತು 47.25 ಲೀಟರ್ (19,828 ರೂ. ಬೆಲೆಯ) ಮದ್ಯ ವಶಪಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.

ಶನಿವಾರ, 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೋಕಾ ರಸ್ತೆಯ ಕೆಇಬಿ ಚೆಕ್‍ಪೋಸ್ಟ್ ಬಳಿ ಎಸ್‍ಎಸ್‍ಟಿ ತಂಡವು ತಪಾಸಣೆ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 1,02,500 ರೂ. ನಗದು ಹಣವನ್ನು ವಶಪಡಿಸಿಕೊಂಡಿದೆ.

DC Ballari ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ತಾಳೂರು ರಸ್ತೆಯ ಚೆಕ್‍ಪೋಸ್ಟ್ ಬಳಿ ಎಸ್‍ಎಸ್‍ಟಿ ತಂಡದ ಹೆಚ್ಚುವರಿ ಸಿಬ್ಬಂದಿಯು ಪರಿಶೀಲನೆ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ರೂ.1 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದು, ವಿಚಾರಣೆಗೆ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.

94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಇಬಿ ಚೆಕ್‍ಪೋಸ್ಟ್ ಬಳಿ ಎಫ್‍ಎಸ್‍ಟಿ ತಂಡವು ವಾಹನ ತಪಾಸಣೆ ವೇಳೆ ಅನುಮತಿ ಇಲ್ಲದೇ ಸಾಗಿಸುತ್ತಿದ್ದ ರಾಜಕೀಯ ಪಕ್ಷದ 3 ಕಟ್ಟು(ಬಂಡಲ್) 1,000 ಕರಪತ್ರಗಳು, 400 ಬಿಡಿ ಕರಪತ್ರಗಳು, ಪಕ್ಷದ ಧ್ವಜ (ಒಟ್ಟು 9,17,000 ರೂ. ಮೌಲ್ಯದ) ವಶಪಡಿಸಿಕೊಂಡು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಿಂದ 18.54 ಲೀಟರ್ ಮದ್ಯ (ರೂ.8,391 ಬೆಲೆ) ಹಾಗೂ ಪೆÇಲೀಸ್ ಇಲಾಖೆಯಿಂದ 28.71 ಲೀಟರ್ (ರೂ.11,437 ಬೆಲೆ) ಮದ್ಯ ಸೇರಿದಂತೆ ಒಟ್ಟು 47.25 ಲೀಟರ್ (ರೂ.19,828 ಮೌಲ್ಯದ) ಮದ್ಯ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ. ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡ ಕೆಲಸ ನಿರ್ವಹಿಸುತ್ತಿವೆ.

ಚುನಾವಣೆ ಪ್ರಕ್ರಿಯೆಯಲ್ಲಿ ಶನಿವಾರದಂದು ಎಫ್‍ಎಸ್, ಎಸ್‍ಎಸ್‍ಟಿ ಹಾಗೂ ಪೊಲೀಸ್ ಇಲಾಖೆ ತಂಡಗಳು ವಸೂಲಿ ಮಾಡಿದ ಒಟ್ಟು 2,02,500 ರೂ.ಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಚುನಾವಣಾ ಅಧಿಕಾರಿಗಳ ಸಮಕ್ಷಮದಲ್ಲಿ ಖಜಾನೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Dr. Gururaj Karjagi ಶಿಕ್ಷಕರು ವಿಷಯ ಪ್ರೀತಿ,ವೃತ್ತಿಗೌರವ ಮತ್ತು ಸ್ನೇಹಪರತೆ ಅಳವಡಿಸಿಕೊಳ್ಳಬೇಕು- ಡಾ.ಗುರುರಾಜ ಕರ್ಜಗಿ

0

Dr. Gururaj Karjagi ವಿಷಯ ಪ್ರೀತಿ, ವೃತ್ತಿ ಗೌರವ ಮತ್ತು ಸ್ನೇಹ ಮನೋಭಾವಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸಫಲರಾಗಬಹುದು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೆಟಿವ್ ಟೀಚಿಂಗ್ ಅಧ್ಯಕ್ಷರು ಮತ್ತು ಲೇಖಕರಾದ ಡಾ.ಗುರುರಾಜ ಕರ್ಜಗಿ ಹೇಳಿದರು.

ಅವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿ.ಎಮ್.ಇ.ಬಿ ಘಟಕದ ವತಿಯಿಂದ ಜೀವ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವೃತ್ತೇಜನ’ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರೇರಣಾ ಭಾಷಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಒಬ್ಬ ಶಿಕ್ಷಕ ಜೀವನದ ಮೌಲ್ಯಗಳನ್ನು ಕೇವಲ ಪಾಠದ ಮೂಲಕ ಬೋಧಿಸಲು ಸಾಧ್ಯವಿಲ್ಲ. ವಿವರಣೆ ಮತ್ತು ಪ್ರದರ್ಶನ ಕಲೆಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬೋಧಿಸಿದಲ್ಲಿ ಅದು ಕೊನೆಯವರೆಗೂ ಅವರಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಸೃಜನಶೀಲ ಮತ್ತು ಕ್ರಿಯಾತ್ಮಕ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ತೊಡೆದುಹಾಕಿ ಅವರನ್ನು ಹೊಸ ಆವಿಷ್ಕಾರಗಳೆಡೆಗೆ ಕೊಂಡೊಯ್ಯಬಹುದು ಎಂದರು.

Dr. Gururaj Karjagi ವಿಶ್ವವಿದ್ಯಾಲಯಗಳಿಂದ ಹೊರಹೊಮ್ಮುವ ಸಂಶೋಧನೆಗಳು ಸಮಾಜಕ್ಕೆ ಕೊಡುಗೆ ನೀಡುವ ಮಾರ್ಗದಲ್ಲಿ ಸಾಗಬೇಕು. ಎಲ್ಲ ಉಪನ್ಯಾಸಕರುಗಳು ಕಾಲಕಾಲಕ್ಕೆ ಬದಲಾಗುವ ಪಠ್ಯಕ್ರಮದ ಅನುಸಾರವಾಗಿ ಬೋಧನಾ ಪರಿಕರಗಳನ್ನು ಪರಿಷ್ಕರಣೆಗೊಳಿಸಬೇಕು ಆಗ ಮಾತ್ರ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಆತಿಥಿಯಾಗಿ ಆಗಮಿಸಿದ್ದ ಮಹಾಬಲೇಶ್ವರ ಸನ್‍ರೈಸ್ ಕ್ಯಾಂಡಲ್ಸ್ ಸಂಸ್ಥಾಪಕರಾದ ಡಾ.ಭಾವೇಶ್ ಭಾಟಿಯಾ ಅವರು ಮಾತನಾಡಿ, ಕೇವಲ 5 ಸಾವಿರ ರೂ. ದಿಂದ ಆರಂಭವಾದ ಮೊಂಬತ್ತಿ ತಯಾರಿಕೆಯ ಕಸುಬು ಇಂದು 10 ಸಾವಿರ ವಿಕಲಾಂಗ ವ್ಯಕ್ತಿಗಳಿಗೆ ಜೀವನ ಕಟ್ಟಿಕೊಟ್ಟಿದೆ.

ವಿಶ್ವದ 70 ರಾಷ್ಟ್ರಗಳಿಗೆ ಈ ಕ್ಯಾಂಡಲ್‍ಗಳು ರವಾನೆಯಾಗುತ್ತವೆ. ಕಠಿಣ ಪರಿಶ್ರಮ, ತನು, ಮನ, ಶ್ರದ್ಧೆಯಿಂದ ಎಂಥಹದೆ ಕಷ್ಟದ ಹಾದಿಯನ್ನು ಸವೆಸಿ ಯಶಸ್ಸು ಸಾಧಿಸಬಹುದು ಎಂದರು.
ಅಂಧರಾದರು ತಮ್ಮ ಸಾಧನೆಗೆ ದಾರಿದೀಪವಾದ ಕಥೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್ಸ್ ಕ್ರೀಡೆಗಳಲ್ಲಿ ಸಕ್ರೀಯರಾಗಿರುವ ಭಾಟಿಯಾರವರು 117ಕ್ಕೂ ಹೆಚ್ಚು ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಿಎಸ್‍ಕೆ ವಿವಿಯ ಕುಲಪತಿಗಳಾದ ಪ್ರೊ.ಸಿದ್ದು.ಪಿ ಆಲಗೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಾ ಹೊಸ ಪ್ರಯೋಗಗಳ ಮೂಲಕ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯವು ಪೋಷಿಸುತ್ತಿದೆ. ಪ್ರಾಮಾಣಿಕ ಪ್ರಯತ್ನವೇ ಎಲ್ಲ ರಂಗಗಳಲ್ಲಿನ ಸಾಧನೆಗೆ ಮೊದಲ ಮೆಟ್ಟಿಲು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಮತ್ತಷ್ಟು ಶಿಕ್ಷಕರು ಗುರುತರ ಸಾಧನೆಗೈದು ವೃತ್ತೇಜನ ಕಾರ್ಯಕ್ರಮದ ರೂವಾರಿಗಳಾಗಬೇಕು ಎಂದು ಕರೆ ನೀಡಿದರು.

ಉತ್ತಮ ಸಂಶೋಧನೆ ಮತ್ತು ಬೋಧನಾ ಉತ್ಕ್ರಷ್ಟತೆ ಮೆರೆದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ 8 ಉಪನ್ಯಾಸಕರುಗಳನ್ನು ನಗದು ಪುರಸ್ಕಾರ ಹಾಗೂ ಪ್ರಶಂಸಾ ಪತ್ರ ವಿತರಿಸುವ ಮೂಲಕ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ, ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ, ವಿತ್ತಾಧಿಕಾರಿ ಖಾಜಾ ಮೈನುದ್ದೀನ್.ಎಂ.ಡಿ, ಪ್ರೊ.ವಿಜಯಕುಮಾರ ಮಲಶೆಟ್ಟಿ ಹಾಗೂ ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಪ್ರೊ.ಜಿ.ಪಿ.ದಿನೇಶ್, ಡಾ.ಶಶಿಧರ್, ಡಾ.ನಾಗಭೂಷಣ್.ಸಿ.ಎಂ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Shivamogga Karate Club ಶ್ರೀಲಂಕಾದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗ ಮಂಜುನಾಥ್ ಗೆ ಪದಕ

0

Shivamogga Karate Club ದಿನಾಂಕ 8 ಏಪ್ರಿಲ್ 2023 ರಂದು ಶ್ರೀಲಂಕಾದ ಕೊಲಂಬೋದ ಸುಗದ ದಾಸ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಆರನೇ ಅಂತರಾಷ್ಟ್ರೀಯ ಶೋಟೋಕನ್ ಕರಾಟೆ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ನ ಹಿರಿಯ ಕ್ರೀಡಾಪಟು ಶಿಲ್ಪಿ ಮಂಜುನಾಥ್ 40 ವರ್ಷ ಮೇಲ್ಪಟ್ಟ ಕುಮಟಿ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

Shivamogga Karate Club ಈ ಸಂದರ್ಭದಲ್ಲಿ ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಹಾಗೂ ಕೆಳದಿ ಚೆನ್ನಮ್ಮ ವಿನೋಬನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
ಅಭಿನಂದನೆಗಳನ್ನು ತಿಳಿಸಲಾಗಿದೆ.

Coronavirus Disease ಕೇರಳದಲ್ಲಿ ಕೋವಿಡ್ ಮುಂಜಾಗ್ರತೆ ಭಾಗಶಃ ಮಾಸ್ಕ್ ಕಡ್ಡಾಯ

0

Coronavirus Disease ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ. ಈ ಕಾರಣದಿಂದ, ವೃದ್ಧರು ಮತ್ತು ಗರ್ಭಿಣಿಯರು, ಜೀವನಶೈಲಿ ಕಾಯಿಲೆ ಇರುವವರಿಗೆ ಮಾಸ್ಕ್ ಕಡ್ಡಾಯವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದಾರೆ.

ಎರ್ನಾಕುಲಂ, ತಿರುವನಂತಪುರಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. “ನಾವು ಪರೀಕ್ಷೆಯನ್ನು ಹೆಚ್ಚಿಸಿದ್ದೇವೆ. ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಸ್ವಲ್ಪ ಹೆಚ್ಚುತ್ತಿವೆ. ಆದಾಗ್ಯೂ, ಒಟ್ಟು ಪ್ರಕರಣಗಳಲ್ಲಿ, ಶೇಕಡಾ 0.8 ರಷ್ಟು ರೋಗಿಗಳಿಗೆ ಮಾತ್ರ ಆಮ್ಲಜನಕದ ಬೆಂಬಲದ ಅಗತ್ಯವಿರುತ್ತದೆ, ಆದರೆ ಶೇಕಡಾ 1.2 ರಷ್ಟು ಜನರು ಐಸಿಯುಗಳಲ್ಲಿ ದಾಖಲಾಗುತ್ತಾರೆ, “ಎಂದು ಸಚಿವರು ಹೇಳಿದ್ದಾರೆ.

ಕೇರಳದಲ್ಲಿ ಶನಿವಾರ 1,801 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

Coronavirus Disease ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಸರಿಯಾದ ಕೋವಿಡ್-19 ಮೌಲ್ಯಮಾಪನವನ್ನು ನಡೆಸುವಂತೆ ಸೂಚಿಸಿದೆ. ಕೊರೊನಾ ರೋಗಿಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಉಲ್ಬಣ ಯೋಜನೆಯ ಪ್ರಕಾರ ಸೌಲಭ್ಯಗಳನ್ನು ಹೆಚ್ಚಿಸಲು ನಿರ್ದೇಶಿಸಿದೆ.

ಆಕ್ಸಿಜನ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಗೆ ಸೂಚಿಸಿದ ಸಚಿವರು, ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳ ವಿಶೇಷ ಸಭೆ ನಡೆಸಲಾಗುವುದು ಎಂದು ಹೇಳಿದರು.

ನೆರೆ ರಾಜ್ಯ ಕೇರಳದಲ್ಲಿ ಕೋವಿಡ್
ನಿಬಂಧನೆಗಳು ಒಂದೊಂದೇ ಜಾರಿಯಾಗುತ್ತಿವೆ.
ಈಗ ನಾವೂ ಎಚ್ಚೆತ್ತುಕೊಳ್ಳಬೇಕಿದೆ.

Department Of Post ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ

0

Department Of Post ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಮೂಲಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 19 ಸಾವಿರದಿಂದ 63 ಸಾವಿರದವರೆಗೆ ನೀಡಲಾಗುತ್ತದೆ.

ವಿದ್ಯಾರ್ಹತೆ ವಿವರ :
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ ವಿವರ :
ಮೇ 14, 2023 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಹಾಗೂ 27 ವರ್ಷ ವಯಸ್ಸು ಮೀರಿರಬಾರದು. ಹೌದು, ಒಟ್ಟು ನಾಲ್ಕು ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 14 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Department Of Post ಆಯ್ಕೆ ಪ್ರಕ್ರಿಯೆ :
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಡ್ರೈವಿಂಗ್ ಟೆಸ್ಟ್, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ಅಂಚೆ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ :

ಇಂಟರ್ನೆಟ್ ಬ್ರೌಸರ್‌ಗೆ ಹೋಗಿ ಮತ್ತು ನಂತರ indiapost.gov.in ಗೆ ಭೇಟಿ ನೀಡಬೇಕು.
ಅದರ ನಂತರ, ಅಭ್ಯರ್ಥಿಗಳು ನೇಮಕಾತಿ ಬಟನ್ ಅನ್ನು ಟ್ಯಾಪ್ ಮಾಡಬೇಕು ಮತ್ತು ನೋಂದಣಿಗಾಗಿ ಮುಂದೆ ಹೋಗಬೇಕು.
ನೀವು ಅರ್ಜಿ ಸಲ್ಲಿಸಲು ಬಯಸುವ ಖಾಲಿ ಹುದ್ದೆಯನ್ನು ಆಯ್ಕೆ ಮಾಡಿ ಮತ್ತು ನಂತರ ಭಾರತ ಪೋಸ್ಟ್ ನೇಮಕಾತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಪ್ರಾರಂಭಿಸಬೇಕು.
ಅಗತ್ಯವಿರುವ ವಿವರಗಳನ್ನು ಪೂರ್ಣಗೊಳಿಸಿ ಮತ್ತು ನಂತರ ನಿಮ್ಮ ಸಹಿ, ಫೋಟೋ, ಮಾರ್ಕ್‌ಶೀಟ್‌ಗಳು ಇತ್ಯಾದಿಗಳನ್ನು ಅಪ್‌ಲೋಡ್ ಮಾಡಬೇಕು.
ಅರ್ಜಿ ನಮೂನೆಯನ್ನು ಸಲ್ಲಿಸಿ, ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.
ಫಾರ್ಮ್‌ನಲ್ಲಿ ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ನೀವು ಯಾವುದೇ ದೋಷವನ್ನು ಕಂಡುಕೊಂಡರೆ ತಕ್ಷಣವೇ ತಿದ್ದುಪಡಿ ಮಾಡಬೇಕು.
ಈ ಮಾರ್ಗಸೂಚಿಗಳನ್ನು ಬಳಸಿಕೊಂಡು, ನೀವು ಆನ್‌ಲೈನ್ ಇಂಡಿಯಾ ಪೋಸ್ಟ್ ಆಫೀಸ್ ನೇಮಕಾತಿ 2023 ಅನ್ನು ಅನ್ವಯಿಸಬಹುದು.

ಅರ್ಜಿ ಸಲ್ಲಿಸುವ ವಿಳಾಸ :
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಅಂಚೆ ಇಲಾಖೆ, ಆಡಳಿತ ವಿಭಾಗ, ನವದೆಹಲಿ – 110001 ಗೆ ಕಳುಹಿಸಬೇಕು.

Karnataka Pradesh Congress Committee ಚಿಕ್ಕಮಗಳೂರಿನ ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷರ ನೇಮಕ

0

Karnataka Pradesh Congress Committee ಚಿಕ್ಕಮಗಳೂರಿನ ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ತಾಲ್ಲೂಕು ಉಪಾಧ್ಯಕ್ಷರಾಗಿ ಧರ್ಮೇಗೌಡ ರಾಮನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಓಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಕೆ.ಜಯರಾಜ್ ಅರಸ್ ತಿಳಿಸಿದ್ದಾರೆ.

Karnataka Pradesh Congress Committee ಮುಂದಿನ ದಿನಗಳಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಂಪರ್ಕಿದಲ್ಲಿರಿಸಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ.

Vivekananda H K ಮನಸ್ಸಿನಿಂದ ಮನಸ್ಸಿಗೆ ಭಾಗ -23

0

Vivekananda H K ಹಾಲಿಗೆ ವಿಷ ಬೆರೆಸುವ ಸ್ಪರ್ಧಾತ್ಮಕ ಜಗತ್ತಿನ ಮುಕ್ತ ಮಾರುಕಟ್ಟೆ…….

“ಸಹಕಾರಿ ತತ್ವದ ಮೂಲ‌ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ ಮತ್ತು ಸರ್ವೋದಯ “…….

ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ ಹೇರಿಕೆಯ ಜೊತೆಗೆ ಕುತಂತ್ರದ ಭಾಗ…..

ಈ ವಿವಾದದ ಸುತ್ತ ಅನೇಕ ಚರ್ಚೆಗಳು ವಾದಗಳು ನಡೆಯುತ್ತಿವೆ. ಎರಡೂ ವಾದಗಳಿಗೆ ಪೂರಕವಾಗಿ ಅನೇಕ ಸರಿ ಎನಿಸುವ ಕಾರಣಗಳು ಸಿಗಬಹುದು. ಆದರೆ ವಿವಾದ ಹುಟ್ಟುಹಾಕಿದ ಮಹಾಶಯರ ಹಿಡನ್ ಅಜೆಂಡಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವಾಸ್ತವ ಅರ್ಥವಾಗುತ್ತದೆ. ಚರ್ಚೆಗಾಗಿ‌ ದ್ವೇಷ ಅಸೂಯೆಯಿಂದ ಯಾರ ಪರ ಅಥವಾ ವಿರೋಧ ಮಾತನಾಡಬಹುದಾದರು ಒಟ್ಟಾರೆ ಬಹುಸಂಖ್ಯೆಯ ರೈತ ಜನರ ಹಿತವನ್ನು ಗಮನಿಸಿದಾಗ…….

ಹಾಲು ಬೇಕೆ ಹಾಲು…

Vivekananda H K ಗುಜರಾತಿನ ಅಮುಲ್ ಹಾಲು………

ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ. ಆಕರ್ಷಕ ಪಾಕೆಟ್, ಹೆಚ್ಚು ಕಮೀಷನ್, ಡೋರ್ ಡೆಲಿವರಿ ಬೇಗ ಬೇಗ ಕೊಳ್ಳಿ……

ರೈತರು ಆತ್ಮಹತ್ಯೆ ಮಾಡಿಕೊಂಡು ಸಾಯಲಿ, ನಮಗೆ ಚಿಂತೆ ಇಲ್ಲ,
ಹಾಲು ಮಾರಿ ಬದುಕು ಕಟ್ಟಿಕೊಂಡ ಜನರು ಹಾಳಾಗಲಿ, ನಮಗೆ ಯೋಚನೆ ಇಲ್ಲ,
ನಮ್ಮ ಮಣ್ಣಿನ ಸಂಸ್ಕೃತಿ ನಾಶವಾಗಲಿ, ನಮಗೆ ಬೇಸರವಿಲ್ಲ,
ನಮ್ಮ ವ್ಯಾಪಾರ ಕುಸಿದು ಬೀಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ,
ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿ, ನಮಗೇನು ಆಗಬೇಕಾದ್ದಿಲ್ಲ,……

ಏಕೆಂದರೆ ನಾವು ಅಮುಲ್ ಸಂಸ್ಥೆಯವರು, ಲಾಭ ಅಷ್ಟೇ ನಮಗೆ ಮುಖ್ಯ. ಬೆಳೆಯಬೇಕು, ಹೆಚ್ಚು ಲಾಭ ಮಾಡಬೇಕು, ಬೇರೆಯವರನ್ನು ತುಳಿಯಬೇಕು, ಇದು ಮುಕ್ತ ಸ್ಪರ್ಧಾತ್ಮಕ ಮಾರುಕಟ್ಟೆ. ತಾಖತ್ತು ಇರುವವರು ಮಾತ್ರ ಇಲ್ಲಿ ಉಳಿಯಬೇಕು. ಇಲ್ಲಿ ಯಾವುದೇ ಭಾವುಕತೆಗೆ ಅವಕಾಶ ಇಲ್ಲ. ದುಡ್ಡೇ ನಿಜವಾದ ಯಶಸ್ಸು. ಸಂಸ್ಕೃತಿ, ಸಹಕಾರ, ಸೌಜನ್ಯ, ಸಭ್ಯತೆ, ಮಮಕಾರ, ಕರುಣೆ, ಹೊಂದಾಣಿಕೆಗೆ ಅವಕಾಶವೇ ಇಲ್ಲ. ನಾವೇನು ದೇಶದ ಕಾನೂನಿಗೆ ವಿರುದ್ಧವಾಗಿ ಹೋಗುತ್ತಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿಯೇ ನಮ್ಮ ವ್ಯಾಪಾರ ಅಭಿವೃದ್ಧಿ ಪಡಿಸುತ್ತಿದ್ದೇವೆ. ನೀವು ಸಹ ಹಾಗೆಯೇ ಮಾಡುವ ಪ್ರಯತ್ನ ಮಾಡುತ್ತಿದ್ದೀರಲ್ಲವೇ….

ಸ್ಪರ್ಧೆ, ವೇಗ, ಅಭಿವೃದ್ಧಿ, ದುರಾಸೆಯ ಫಲವೇ ಮಾನವೀಯ ಮೌಲ್ಯಗಳ ನಾಶ, ಮನುಷ್ಯ ಸಂಬಂಧಗಳ ಶಿಥಿಲತೆ, ಸರ್ಕಾರಗಳ ನಡುವೆ ಸಂಘರ್ಷ, ಒಕ್ಕೂಟ ವ್ಯವಸ್ಥೆಯ ಸರ್ವಾಧಿಕಾರಿ ಧೋರಣೆ……..

ಭಾರತದಲ್ಲಿ ಕ್ಷೀರ ಕ್ರಾಂತಿಯ ಎರಡು ಪ್ರಮುಖ ಕೇಂದ್ರಗಳು ಗುಜರಾತ್ ಮತ್ತು ಕರ್ನಾಟಕ. ಹಾಲು ಮತ್ತು ಹಾಲಿನ ಉತ್ಪಾದನೆಯ ಅನೇಕ ಉಪ ಪದಾರ್ಥಗಳ ತಯಾರಿಕೆಯಲ್ಲಿ, ಪಶುಸಂಗೋಪನೆ ಬದುಕಿನ ಅನಿವಾರ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇತರೆ ಅನೇಕ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳು ಇದ್ದರೂ ಇವೆರಡು ರಾಜ್ಯಗಳು ದೇಶದ ಮತ್ತು ವಿದೇಶದ ಮಾರುಕಟ್ಟೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿವೆ.

ಹೇಗೋ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವಾಗ ಇನ್ನೂ ಇನ್ನೂ ಬೇಕು ಎನ್ನುವ ದುರಾಸೆಯ ರಾಜಕಾರಣಿಗಳ ಮೂರ್ಖ ಕುತಂತ್ರದ ಫಲವಾಗಿ ವಿವಾದ ಭುಗಿಲೆದ್ದಿದೆ. ಅಮುಲ್ ಗೆ ಮಾರುಕಟ್ಟೆ ವಿಸ್ತರಿಸಲು ಈಗಾಗಲೇ ಕರ್ನಾಟಕದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಮತ್ತು ಜನರ ಜೀವನಾಡಿಯಾಗಿರುವ ನಂದಿನಿ ಹೊರತುಪಡಿಸಿ ಅನೇಕ ರಾಜ್ಯ – ದೇಶಗಳಿವೆ. ಅಲ್ಲಿ ತಮ್ಮ ಕಾರ್ಯತಂತ್ರ ರೂಪಿಸಬಹುದು. ಅದು ಬಿಟ್ಟು ಇಲ್ಲಿಗೆ ಅನೇಕ ಜನರ ವಿರೋಧದ ನಡುವೆ ಪ್ರವೇಶಿಸುವ ಸಣ್ಣತನ ಏಕೆ.

ಈಗಾಗಲೇ ಅಮುಲ್ ಮತ್ತು ನಂದಿನಿ ನಡುವೆ ಒಂದು ಒಪ್ಪಂದ ಇದೆ. ಅಷ್ಟು ಸಾಕಲ್ಲವೇ. ಅಮುಲ್ ಗೆ ಇನ್ನೂ ದುರಾಸೆ ಏಕೆ. ವ್ಯಾಪಾರದ ಅಭಿವೃದ್ಧಿ ಎಂದರೆ ಎಲ್ಲಾ ಮೌಲ್ಯಗಳನ್ನು ಮರೆತು ಹಣವನ್ನೇ ಪ್ರಧಾನವಾಗಿ ಎಲ್ಲೆಂದರಲ್ಲಿ ನುಗ್ಗುವುದೇ. ಸಾಮಾನ್ಯ ಜ್ಞಾನ ಬೇಡವೇ…….

ಒಂದು ನೆನಪಿಡಿ. ಅಮುಲ್ ಸಂಸ್ಥೆಗೆ ಕರ್ನಾಟಕದ ಮಾರುಕಟ್ಟೆಗೆ ಸುಸಜ್ಜಿತ ರೀತಿಯಲ್ಲಿ ಸಂಪೂರ್ಣವಾಗಿ ಪ್ರವೇಶಿಸುವ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ಇದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಕರ್ನಾಟಕದ ರೈತ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ಇತರ ಅನೇಕ ವಿದೇಶಿ ವ್ಯಾಪಾರಿ ಸಂಸ್ಥೆಗಳ ರೀತಿಯಲ್ಲಿ ಇಲ್ಲಿ ಪ್ರವೇಶಿಸಿ ಭವಿಷ್ಯದಲ್ಲಿ ಕರ್ನಾಟಕದ ನಂದಿನಿಯನ್ನು ನಿಯಂತ್ರಣಕ್ಕೆ ಪಡೆಯುವ ಅಥವಾ ಧಕ್ಕೆ ಮಾಡುವ ವ್ಯಾಪಾರದ ನೀತಿ ಅವಶ್ಯವೇ ಮತ್ತು ಅನಿವಾರ್ಯವೇ ಎಂಬುದನ್ನು ಗುಜರಾತಿನ ಮಹಾಶಯರು ನೈತಿಕ ನೆಲೆಯಲ್ಲಿ ಯೋಚಿಸಬೇಕಿದೆ….

ಈ ತಕ್ಷಣದಲ್ಲಿ ಕರ್ನಾಟಕದ ಹಾಲು ಒಕ್ಕೂಟ ಅತ್ಯಂತ ಪ್ರಬಲವಾಗಿದೆ. ನಿಜ, ಆದರೆ ಮುಂದೆ ಗುಜರಾತಿನ ವ್ಯಾಪಾರಿ ಮನೋಭಾವದ ಜನರು ನಿಧಾನವಾಗಿ ಅದನ್ನು ದುರ್ಬಲಗೊಳಿಸುವುದು ಖಚಿತ.‌ ಅಂಬಾನಿ ಅದಾನಿಗಳ ಮುಂದೆ ಬಡ ಬೋರೆಗೌಡ ಬೆತ್ತಲಾಗುವುದನ್ನು ತಡೆಯುವ ಮುನ್ನೆಚ್ಚರಿಕೆಯಾಗಿ ಮಾತ್ರ ನಾವು ಅಮುಲ್ ಅನ್ನು ವಿರೋಧಿಸಬೇಕು.

ಮುಕ್ತ ಮಾರುಕಟ್ಟೆಯ ಇತಿಹಾಸದಿಂದ ಕಲಿಯಬಹುದಾದ ಪಾಠವೇ ಇದು. ಧರ್ಮದ ಅಮಲಿನಲ್ಲಿ‌ ಎಲ್ಲವನ್ನೂ ಸಮರ್ಥಿಸುತ್ತಾ ಮುಕ್ತವಾಗುತ್ತಾ ಕೊನೆಗೆ ಎಲ್ಲರೂ ಬೆತ್ತಲಾಗುವ ಪರಿಸ್ಥಿತಿ ನಿರ್ಮಿಸಿಕೊಳ್ಳದಿರೋಣ.

ಅಮುಲ್ ಸಮರ್ಥಿಸುವ ವಾದಗಳಿಗೆ ಇದಕ್ಕಿಂತ ಉತ್ತಮ ಅಂಶಗಳು ಸಿಗಬಹುದು. ಆದರೆ ಅಂತಿಮ ಪರಿಣಾಮ ಮತ್ತು ಫಲಿತಾಂಶ ಮಾತ್ರ ನಾವು ಬೆತ್ತಲಾಗುವುದನ್ನು ತಡೆಯಲು ಸಾಧ್ಯವಿಲ್ಲ. ಮುಕ್ತ ಮಾರುಕಟ್ಟೆಯ ಹಣ ಕೇಂದ್ರಿತ ನೀತಿ ಇದೇ ಆಗಿರುತ್ತದೆ.
ಮತ್ತೊಮ್ಮೆ ಕೂಲಂಕಷವಾಗಿ ದಯವಿಟ್ಟು ಯೋಚಿಸಿ. ನಿರ್ಧಾರ ನಿಮ್ಮ ವಿವೇಚನೆಗೆ ಬಿಟ್ಟದ್ದು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……

ಹಾಲಿಗೆ ವಿಷ ಬೆರೆಸುವ ಸ್ಪರ್ಧಾತ್ಮಕ ಜಗತ್ತಿನ ಮುಕ್ತ ಮಾರುಕಟ್ಟೆ…….

” ಸಹಕಾರಿ ತತ್ವದ ಮೂಲ‌ ಆಶಯವೇ ಅನಾರೋಗ್ಯಕಾರಿ ಸ್ಪರ್ಧೆ ತಪ್ಪಿಸಿ ಸೌಹಾರ್ದ ವ್ಯಾಪಾರಿ ನೀತಿಯ ಪಾಲನೆ ಮತ್ತು ಸರ್ವೋದಯ “…….

ಹಾಗಾದರೆ ನಂದಿನಿ ಮತ್ತು ಅಮುಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಾಕಾರಿ ಹಾಗು ನಿರ್ದಿಷ್ಟ ಒಳಮರ್ಮದ ಒತ್ತಾಯ ಪೂರ್ವಕ ಹೇರಿಕೆಯ ಜೊತೆಗೆ ಕುತಂತ್ರದ ಭಾಗ…..

ಈ ವಿವಾದದ ಸುತ್ತ ಅನೇಕ ಚರ್ಚೆಗಳು ವಾದಗಳು ನಡೆಯುತ್ತಿವೆ. ಎರಡೂ ವಾದಗಳಿಗೆ ಪೂರಕವಾಗಿ ಅನೇಕ ಸರಿ ಎನಿಸುವ ಕಾರಣಗಳು ಸಿಗಬಹುದು. ಆದರೆ ವಿವಾದ ಹುಟ್ಟುಹಾಕಿದ ಮಹಾಶಯರ ಹಿಡನ್ ಅಜೆಂಡಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವಾಸ್ತವ ಅರ್ಥವಾಗುತ್ತದೆ. ಚರ್ಚೆಗಾಗಿ‌ ದ್ವೇಷ ಅಸೂಯೆಯಿಂದ ಯಾರ ಪರ ಅಥವಾ ವಿರೋಧ ಮಾತನಾಡಬಹುದಾದರು ಒಟ್ಟಾರೆ ಬಹುಸಂಖ್ಯೆಯ ರೈತ ಜನರ ಹಿತವನ್ನು ಗಮನಿಸಿದಾಗ…….

ಹಾಲು ಬೇಕೆ ಹಾಲು…

ಗುಜರಾತಿನ ಅಮುಲ್ ಹಾಲು………

ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ. ಆಕರ್ಷಕ ಪಾಕೆಟ್, ಹೆಚ್ಚು ಕಮೀಷನ್, ಡೋರ್ ಡೆಲಿವರಿ ಬೇಗ ಬೇಗ ಕೊಳ್ಳಿ……

ರೈತರು ಆತ್ಮಹತ್ಯೆ ಮಾಡಿಕೊಂಡು ಸಾಯಲಿ, ನಮಗೆ ಚಿಂತೆ ಇಲ್ಲ,
ಹಾಲು ಮಾರಿ ಬದುಕು ಕಟ್ಟಿಕೊಂಡ ಜನರು ಹಾಳಾಗಲಿ, ನಮಗೆ ಯೋಚನೆ ಇಲ್ಲ,
ನಮ್ಮ ಮಣ್ಣಿನ ಸಂಸ್ಕೃತಿ ನಾಶವಾಗಲಿ, ನಮಗೆ ಬೇಸರವಿಲ್ಲ,
ನಮ್ಮ ವ್ಯಾಪಾರ ಕುಸಿದು ಬೀಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ,
ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿ, ನಮಗೇನು ಆಗಬೇಕಾದ್ದಿಲ್ಲ,……

ಏಕೆಂದರೆ ನಾವು ಅಮುಲ್ ಸಂಸ್ಥೆಯವರು, ಲಾಭ ಅಷ್ಟೇ ನಮಗೆ ಮುಖ್ಯ. ಬೆಳೆಯಬೇಕು, ಹೆಚ್ಚು ಲಾಭ ಮಾಡಬೇಕು, ಬೇರೆಯವರನ್ನು ತುಳಿಯಬೇಕು, ಇದು ಮುಕ್ತ ಸ್ಪರ್ಧಾತ್ಮಕ ಮಾರುಕಟ್ಟೆ. ತಾಖತ್ತು ಇರುವವರು ಮಾತ್ರ ಇಲ್ಲಿ ಉಳಿಯಬೇಕು. ಇಲ್ಲಿ ಯಾವುದೇ ಭಾವುಕತೆಗೆ ಅವಕಾಶ ಇಲ್ಲ. ದುಡ್ಡೇ ನಿಜವಾದ ಯಶಸ್ಸು. ಸಂಸ್ಕೃತಿ, ಸಹಕಾರ, ಸೌಜನ್ಯ, ಸಭ್ಯತೆ, ಮಮಕಾರ, ಕರುಣೆ, ಹೊಂದಾಣಿಕೆಗೆ ಅವಕಾಶವೇ ಇಲ್ಲ. ನಾವೇನು ದೇಶದ ಕಾನೂನಿಗೆ ವಿರುದ್ಧವಾಗಿ ಹೋಗುತ್ತಿಲ್ಲ. ಕಾನೂನಿನ ವ್ಯಾಪ್ತಿಯಲ್ಲಿಯೇ ನಮ್ಮ ವ್ಯಾಪಾರ ಅಭಿವೃದ್ಧಿ ಪಡಿಸುತ್ತಿದ್ದೇವೆ. ನೀವು ಸಹ ಹಾಗೆಯೇ ಮಾಡುವ ಪ್ರಯತ್ನ ಮಾಡುತ್ತಿದ್ದೀರಲ್ಲವೇ….

ಸ್ಪರ್ಧೆ, ವೇಗ, ಅಭಿವೃದ್ಧಿ, ದುರಾಸೆಯ ಫಲವೇ ಮಾನವೀಯ ಮೌಲ್ಯಗಳ ನಾಶ, ಮನುಷ್ಯ ಸಂಬಂಧಗಳ ಶಿಥಿಲತೆ, ಸರ್ಕಾರಗಳ ನಡುವೆ ಸಂಘರ್ಷ, ಒಕ್ಕೂಟ ವ್ಯವಸ್ಥೆಯ ಸರ್ವಾಧಿಕಾರಿ ಧೋರಣೆ……..

ಭಾರತದಲ್ಲಿ ಕ್ಷೀರ ಕ್ರಾಂತಿಯ ಎರಡು ಪ್ರಮುಖ ಕೇಂದ್ರಗಳು ಗುಜರಾತ್ ಮತ್ತು ಕರ್ನಾಟಕ. ಹಾಲು ಮತ್ತು ಹಾಲಿನ ಉತ್ಪಾದನೆಯ ಅನೇಕ ಉಪ ಪದಾರ್ಥಗಳ ತಯಾರಿಕೆಯಲ್ಲಿ, ಪಶುಸಂಗೋಪನೆ ಬದುಕಿನ ಅನಿವಾರ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇತರೆ ಅನೇಕ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳು ಇದ್ದರೂ ಇವೆರಡು ರಾಜ್ಯಗಳು ದೇಶದ ಮತ್ತು ವಿದೇಶದ ಮಾರುಕಟ್ಟೆಯಲ್ಲಿ ಸಾಕಷ್ಟು ಹಿಡಿತ ಸಾಧಿಸಿವೆ.

ಹೇಗೋ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವಾಗ ಇನ್ನೂ ಇನ್ನೂ ಬೇಕು ಎನ್ನುವ ದುರಾಸೆಯ ರಾಜಕಾರಣಿಗಳ ಮೂರ್ಖ ಕುತಂತ್ರದ ಫಲವಾಗಿ ವಿವಾದ ಭುಗಿಲೆದ್ದಿದೆ. ಅಮುಲ್ ಗೆ ಮಾರುಕಟ್ಟೆ ವಿಸ್ತರಿಸಲು ಈಗಾಗಲೇ ಕರ್ನಾಟಕದ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಮತ್ತು ಜನರ ಜೀವನಾಡಿಯಾಗಿರುವ ನಂದಿನಿ ಹೊರತುಪಡಿಸಿ ಅನೇಕ ರಾಜ್ಯ – ದೇಶಗಳಿವೆ. ಅಲ್ಲಿ ತಮ್ಮ ಕಾರ್ಯತಂತ್ರ ರೂಪಿಸಬಹುದು. ಅದು ಬಿಟ್ಟು ಇಲ್ಲಿಗೆ ಅನೇಕ ಜನರ ವಿರೋಧದ ನಡುವೆ ಪ್ರವೇಶಿಸುವ ಸಣ್ಣತನ ಏಕೆ.

ಈಗಾಗಲೇ ಅಮುಲ್ ಮತ್ತು ನಂದಿನಿ ನಡುವೆ ಒಂದು ಒಪ್ಪಂದ ಇದೆ. ಅಷ್ಟು ಸಾಕಲ್ಲವೇ. ಅಮುಲ್ ಗೆ ಇನ್ನೂ ದುರಾಸೆ ಏಕೆ. ವ್ಯಾಪಾರದ ಅಭಿವೃದ್ಧಿ ಎಂದರೆ ಎಲ್ಲಾ ಮೌಲ್ಯಗಳನ್ನು ಮರೆತು ಹಣವನ್ನೇ ಪ್ರಧಾನವಾಗಿ ಎಲ್ಲೆಂದರಲ್ಲಿ ನುಗ್ಗುವುದೇ. ಸಾಮಾನ್ಯ ಜ್ಞಾನ ಬೇಡವೇ…….

ಒಂದು ನೆನಪಿಡಿ. ಅಮುಲ್ ಸಂಸ್ಥೆಗೆ ಕರ್ನಾಟಕದ ಮಾರುಕಟ್ಟೆಗೆ ಸುಸಜ್ಜಿತ ರೀತಿಯಲ್ಲಿ ಸಂಪೂರ್ಣವಾಗಿ ಪ್ರವೇಶಿಸುವ ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ಇದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಕರ್ನಾಟಕದ ರೈತ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ಇತರ ಅನೇಕ ವಿದೇಶಿ ವ್ಯಾಪಾರಿ ಸಂಸ್ಥೆಗಳ ರೀತಿಯಲ್ಲಿ ಇಲ್ಲಿ ಪ್ರವೇಶಿಸಿ ಭವಿಷ್ಯದಲ್ಲಿ ಕರ್ನಾಟಕದ ನಂದಿನಿಯನ್ನು ನಿಯಂತ್ರಣಕ್ಕೆ ಪಡೆಯುವ ಅಥವಾ ಧಕ್ಕೆ ಮಾಡುವ ವ್ಯಾಪಾರದ ನೀತಿ ಅವಶ್ಯವೇ ಮತ್ತು ಅನಿವಾರ್ಯವೇ ಎಂಬುದನ್ನು ಗುಜರಾತಿನ ಮಹಾಶಯರು ನೈತಿಕ ನೆಲೆಯಲ್ಲಿ ಯೋಚಿಸಬೇಕಿದೆ….

ಈ ತಕ್ಷಣದಲ್ಲಿ ಕರ್ನಾಟಕದ ಹಾಲು ಒಕ್ಕೂಟ ಅತ್ಯಂತ ಪ್ರಬಲವಾಗಿದೆ. ನಿಜ, ಆದರೆ ಮುಂದೆ ಗುಜರಾತಿನ ವ್ಯಾಪಾರಿ ಮನೋಭಾವದ ಜನರು ನಿಧಾನವಾಗಿ ಅದನ್ನು ದುರ್ಬಲಗೊಳಿಸುವುದು ಖಚಿತ.‌ ಅಂಬಾನಿ ಅದಾನಿಗಳ ಮುಂದೆ ಬಡ ಬೋರೆಗೌಡ ಬೆತ್ತಲಾಗುವುದನ್ನು ತಡೆಯುವ ಮುನ್ನೆಚ್ಚರಿಕೆಯಾಗಿ ಮಾತ್ರ ನಾವು ಅಮುಲ್ ಅನ್ನು ವಿರೋಧಿಸಬೇಕು.

ಮುಕ್ತ ಮಾರುಕಟ್ಟೆಯ ಇತಿಹಾಸದಿಂದ ಕಲಿಯಬಹುದಾದ ಪಾಠವೇ ಇದು. ಧರ್ಮದ ಅಮಲಿನಲ್ಲಿ‌ ಎಲ್ಲವನ್ನೂ ಸಮರ್ಥಿಸುತ್ತಾ ಮುಕ್ತವಾಗುತ್ತಾ ಕೊನೆಗೆ ಎಲ್ಲರೂ ಬೆತ್ತಲಾಗುವ ಪರಿಸ್ಥಿತಿ ನಿರ್ಮಿಸಿಕೊಳ್ಳದಿರೋಣ.

ಅಮುಲ್ ಸಮರ್ಥಿಸುವ ವಾದಗಳಿಗೆ ಇದಕ್ಕಿಂತ ಉತ್ತಮ ಅಂಶಗಳು ಸಿಗಬಹುದು. ಆದರೆ ಅಂತಿಮ ಪರಿಣಾಮ ಮತ್ತು ಫಲಿತಾಂಶ ಮಾತ್ರ ನಾವು ಬೆತ್ತಲಾಗುವುದನ್ನು ತಡೆಯಲು ಸಾಧ್ಯವಿಲ್ಲ. ಮುಕ್ತ ಮಾರುಕಟ್ಟೆಯ ಹಣ ಕೇಂದ್ರಿತ ನೀತಿ ಇದೇ ಆಗಿರುತ್ತದೆ.
ಮತ್ತೊಮ್ಮೆ ಕೂಲಂಕಷವಾಗಿ ದಯವಿಟ್ಟು ಯೋಚಿಸಿ. ನಿರ್ಧಾರ ನಿಮ್ಮ ವಿವೇಚನೆಗೆ ಬಿಟ್ಟದ್ದು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……

Bapuji Academy of Management and Research ಪ್ರಕೃತಿ ಶೋಷಣೆಯಿಂದ ಸಂಪತ್ತು ಗಳಿಸುವ ನಂಬಿಕೆದೂರಾಗಬೇಕು- ವಸಂತ ಕೇಶವ ಕಜೆ

0

Bapuji Academy of Management and Research ಕಾರ್ಪೊರೇಟ್ ರಂಗ ಹಾಗೂ ಪರಿಸರ ಪರಸ್ಪರ ವಿರೋಧಿಗಳು ಎಂಬ ಭಾವನೆ ಇದೆ, ಪ್ರಕೃತಿಯ ಶೋಷಣೆಯಿಂದಲೇ ಸಂಪತ್ತು ಗಳಿಸಲು ಸಾಧ್ಯವೆಂಬ ನಂಬಿಕೆ ದೂರಾಗಬೇಕು ಎಂದು ಮಂಗಳೂರಿನ ವೃಕ್ಷಾಲಯದ ಸ್ಥಾಪಕ ವಸಂತ ಕೇಶವ ಕಜೆ ಅಭಿಪ್ರಾಯಪಟ್ಟರು.

ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ನ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪದವಿ ಪ್ರದಾನ ಮಾಡಿ ಮಾತನಾಡುತ್ತಾ ಕಾರ್ಪೊರೇಟ್ ರಂಗದ ಉದ್ಯೋಗಿಗಳು ಮೂಲ ವಿಜ್ಞಾನದ ಯಾವುದಾದರೂ ಒಂದು ವಿಭಾಗವನ್ನು ಆಯ್ದುಕೊಂಡು ಬಿಡುವಿನ ವೇಳೆಯಲ್ಲಿ ಆ ಕುರಿತು ಅಧ್ಯಯನ ನಡೆಸುತ್ತಿದ್ದಲ್ಲಿ ಬರುವ ಜ್ಞಾನದಿಂದ ವೃತ್ತಿಜೀವನದಲ್ಲಿ ಮಹತ್ತರ ತಿರುವನ್ನೇ ಪಡೆಯಬಹುದು, ಸಾಧ್ಯವಾದಷ್ಟು ಬಹುಭಾಷೆಗಳನ್ನು ಮತ್ತು ಯಾವುದಾದರೂ ಒಂದು ಪಾಶ್ಚಿಮಾತ್ಯ ಭಾಷೆಯನ್ನು ಕಲಿಯಬೇಕು, ಲಲಿತ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಜೀವನಾನಂದವನ್ನು ಹೊಂದಬೇಕು ಎಂದರು.

Bapuji Academy of Management and Research ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಪ್ರತಿಯೊಬ್ಬರ ಆಲೋಚನಾ ವಿಧಾನದಲ್ಲಿ ಹಾಗೂ ಮನೋ ಭೂಮಿಕೆಯಲ್ಲಿ ಬದಲಾವಣೆ ಬಾರದೇ ಪ್ರಗತಿ ಸಾಧ್ಯವಿಲ್ಲ, ಪೋಷಕರು ತಾಳ್ಮೆಯಿಂದ ಮಕ್ಕಳನ್ನು ಬೆಳೆಸಿರುತ್ತಾರೆ, ಪೋಷಕರ ಸದ್ಗುಣಗಳನ್ನು ಮಕ್ಕಳೂ ರೂಢಿಸಿಕೊಳ್ಳಬೇಕು, ಹಣದ ಹಿಂದೆ ಹೋಗದೆ ಹಣವೇ ನಿಮ್ಮನ್ನು ಹಿಂಬಾಲಿಸುವಂತೆ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ವಿಭಾಗ ಮುಖ್ಯಸ್ಥ ಡಾ.ಸುಜಿತ್ ಕುಮಾರ್ ಎಸ್.ಹೆಚ್. ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು.ಫ್ರೊ. ವಿಜಯ್ ಕೆ.ಎಸ್. ವಂದನೆಗಳನ್ನು ಸಮರ್ಪಿಸಿದರು. 160 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

-ವರದಿ: ಎಚ್.ಬಿ.ಮಂಜುನಾಥ-