Thursday, April 24, 2025
Thursday, April 24, 2025

Media Academy Award ಪತ್ರಿಕೋದ್ಯಮದಲ್ಲಿ ವೃತ್ತಿಪರತೆ ಕಡಿಮೆಯಾಗುತ್ತಿದೆ-ಡಿ.ಪಿ.ಮುರಳೀಧರ್

Date:

Media Academy Award ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರುಳೀಧರ್ ಅವರು ತಿಳಿಸಿದರು.

ಶಿವಮೊಗ್ಗದ ಪ್ರೆಸ್‌ಟ್ರಸ್ಟ್ ನಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ಪತ್ರಿಕೋದ್ಯಮದ ವೃತ್ತಿಪರತೆಯತ್ತ ತುಡಿಯಲು ಕಾರಣವಾಗುತ್ತದೆ. ಮಾಧ್ಯಮ ಅಕಾಡೆಮಿ ಬಂದ ಮೇಲೆ ಪತ್ರಕರ್ತರನ್ನು ಗುರುತಿಸುವಂತ ಕೆಲಸ ಆಗುತ್ತಿದೆ. ವೃತ್ತಿಪರರಿಗೆ ಪ್ರಶಸ್ತಿಗಳನ್ನುನೀಡಿ ಬೆನ್ನು ತಟ್ಟುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸೇವೆ ಪರಿಗಣಿಸಿ ನೀಡುವ ಪುರಸ್ಕಾರದಿಂದ ಪತ್ರಿಕೋದ್ಯಮಕ್ಕೆ ಗರಿ ಮೂಡಿದೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ಕರೆದರೂ ಪತ್ರಿಕೋದ್ಯಮದಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ನಂಟಿದೆ ಎಂದರು.

ಪತ್ರಿಕೋದ್ಯಮ ಬಲಿಷ್ಠವಾಗಿ ಬೆಳೆಯಬೇಕು ಪತ್ರಕರ್ತರು ವೃತ್ತಿಬದ್ದತೆಯಿಂದ ಕೆಲಸ ಮಾಡಬೇಕು ಎನ್ನುವುದು ಸಮಾಜದ ನಿರೀಕ್ಷೆ. ಆದರೆ, ಇತ್ತೀಚೆಗೆ ಅವಸರದ ಪತ್ರಿಕೋದ್ಯಮದಲ್ಲಿ ಆ ವೃತ್ತಿ ಬದ್ಧತೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಅನೇಕ ಸವಾಲುಗಳ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸನ್ಮಾನಗಳು, ಪುರಸ್ಕಾರಗಳಿಂದ ಪತ್ರಿಕೆಗಳನ್ನು ಗುರುತಿಸುವಂತ ಕೆಲಸ ಆಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಪತ್ರಕರ್ತರು ಸರ್ಕಾರಿ ನೌಕರರಂತೆ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಲ್ಲಿ 12ಮಂದಿ ಶಿವಮೊಗ್ಗ ಜಿಲ್ಲೆಯವರೇ ಇರುವುದು ಪತ್ರಿಕೋದ್ಯಮದಲ್ಲಿ ಶಿವಮೊಗ್ಗ ಜಿಲ್ಲೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂದು ಪ್ರಶಸ್ತಿಗಳನ್ನು ಲಾಭಿ ಮಾಡಿ ತೆಗೆದುಕೊಳ್ಳುವವರ ಮಧ್ಯೆ ಅರ್ಹತೆಯಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲು. ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವುದು ಯುವ ಪತ್ರಕರ್ತರಲ್ಲಿ ಉತ್ಸಹ ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಪ್ರಶಸ್ತಿಗಳು ಲಾಭಿಗೆ ಒಳಗಾಗಿವೆ. ಇದರ ನಡುವೆಯೂ ಅರ್ಹತೆಯಿಂದ ಪ್ರಶಸ್ತಿಗಳಿಸುವ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ. ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.

Media Academy Award ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಕೆ.ತಿಮ್ಮಪ್ಪ ಹುಲಿಮನೆ, ನಾಗರಾಜ್ ನೇರಿಗೆ, ರಾಮಸ್ವಾಮಿ ಹುಲ್ಕೊಡು, ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ನಗರ ಕಾರ್ಯದರ್ಶಿ ಗೋ.ವ.ಮೋಹನಕೃಷ್ಣ, ಡಿ.ವತ್ಸಲ ಸೂರ್ಯನಾರಾಯಣ, ರಾಮಚಂದ್ರ ಗುಣಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...