Friday, August 7, 2026
Friday, August 7, 2026
Home Blog Page 125

Shikaripura Horticulture Department ಹವಾಮಾನ ವಿಮೆ ಆಧಾರಿತ ವಿಮೆ ಯೋಜನೆಯಡಿ ಶುಂಠಿ,ಕಾಳುಮೆಣಸು,ಮಾವು ಬೆಳೆಗಳ ಕರಡು ಟರ್ಮ್ ಶೀಟ್ ತಯಾರಿಕೆಗೆ ರೈತರಿಂದ ಸಲಹೆಗಳಿಗೆ ಆಹ್ವಾನ

0

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2026-27 ರಿಂದ 2028-29ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಶುಂಠಿ, ಕಾಳುಮೆಣಸು ಮತ್ತು ಮಾವು ಬೆಳೆಗಳ ಉದ್ದೇಶಿತ ಕರಡು ಟರ್ಮ್ ಶೀಟ್ ತಯಾರಿಸಿದ್ದು, ಟರ್ಮ್ ಶೀಟ್ ಉತ್ತಮಗೊಳಿಸಲು ರೈತರಿಂದ ಸಲಹೆಗಳನ್ನು ಆಹ್ವಾನಿಸಿದೆ.

ರೈತರು ತಮ್ಮ ಸಲಹೆಗಳನ್ನು ಏ. 27 ರೊಳಗಾಗಿ ಲಿಖಿತ ರೂಪದಲ್ಲಿ ಕಚೇರಿಗೆ ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಹೆಸರು ಮಾಸಿದ ಹುರಳಿಹಳ್ಳಿ: ಅಪೂರ್ವ ಕೃಷಿ ಸಂಸ್ಕೃತಿಯ ತಾಣ

0

ಸಂಶೋಧನಾ ಬರಹ;
ದಿಲೀಪ್ ನಾಡಿಗ್. ಶಿವಮೊಗ್ಗ

ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಅನೇಕ ಹಳ್ಳಿಗಳು ಮಹತ್ವದ ಪಾತ್ರವಹಿಸಿವೆ. ಅಂತಹ ಹಳ್ಳಿಗಳಲ್ಲಿ ಹುರಳಿಹಳ್ಳಿ ಒಂದು. ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಪ್ರಾಚೀನ ಹಳ್ಳಿ.

ಈ ಹಳ್ಳಿಯ ಇತಿಹಾಸವು ಪ್ರಾಚೀನ ಕಾಲದ ಆಡಳಿತ, ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ.

“ಹುರಳಿಹಳ್ಳಿ” ಎಂಬ ಹೆಸರಿನ ಮೂಲವನ್ನು ಸ್ಥಳೀಯ ಸಂಪ್ರದಾಯಗಳು ಮತ್ತು ಕೃಷಿ ಜೀವನಶೈಲಿಯೊಂದಿಗೆ ಸಂಬಂಧಿಸಲಾಗಿದೆ. “ಹುರಳಿ” (ಕುದುರೆಗಡಲೆ) ಎಂಬ ಬೆಳೆ ಈ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದುದರಿಂದ ಈ ಪ್ರದೇಶಕ್ಕೆ “ಹುರಳಿ + ಹಳ್ಳಿ” ಎಂಬ ಹೆಸರು ಬರಲು ಕಾರಣವಾಯಿತು.
ಇದು ಕೃಷಿ ಆಧಾರಿತ ಜೀವನದ ಸೂಚಕವಾಗಿದೆ.

ಈ ಪ್ರದೇಶದ ಪ್ರಾಚೀನ ಇತಿಹಾಸದತ್ತ ದೃಷ್ಟಿಹರಿಸೋಣ.
ಈ ಭಾಗವು ಪ್ರಾಚೀನ ಕಾಲದಲ್ಲಿ ಕದಂಬ, ಗಂಗ, ರಾಷ್ಟ್ರಕೂಟ ಮತ್ತು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿತ್ತು. ಈ ರಾಜಮನೆತನದ ಕಾಲದಲ್ಲಿ ಈ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ, ಕೃಷಿ ಅಭಿವೃದ್ಧಿ ಮತ್ತು ಗ್ರಾಮ ವ್ಯವಸ್ಥೆ ಬಲವಾಗಿತ್ತು.
ಈ ಪ್ರದೇಶದ ಸುತ್ತಮುತ್ತ ಹಲವಾರು ಶಾಸನಗಳು ಮತ್ತು ದೇವಾಲಯ ಅವಶೇಷಗಳು ದೊರೆತಿರುವುದು ಈ ಭಾಗದ ಪುರಾತನತೆಯನ್ನು ಸೂಚಿಸುತ್ತದೆ.

ಕೆಲವು ಶಾಸನಗಳಲ್ಲಿ ಗ್ರಾಮಗಳ ದಾನ, ದೇವಾಲಯಗಳಿಗೆ ನೀಡಿದ ಭೂಮಿಗಳು ಮತ್ತು ಸ್ಥಳೀಯ ಆಡಳಿತದ ಮಾಹಿತಿ ದೊರಕುತ್ತದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ
ಹುರಳಿಹಳ್ಳಿಯಲ್ಲಿ ಪುರಾತನ ಶೈವ ಮತ್ತು ವೈಷ್ಣವ ದೇವಾಲಯಗಳ ಕುರುಹುಗಳನ್ನು ಕಾಣಬಹುದು.

ಈ ದೇವಾಲಯಗಳಲ್ಲಿ ಮಧ್ಯಯುಗೀನ ಕರ್ನಾಟಕದ ವಾಸ್ತುಶಿಲ್ಪದ ಕುರುಹುಗಳನ್ನು ಕಾಣಬಹುದು.

ಹುರಳಿಹಳ್ಳಿ ಒಂದು ಸಾಮಾನ್ಯ ಹಳ್ಳಿಯಷ್ಟೇ ಅಲ್ಲ; ಅದು ಕರ್ನಾಟಕದ ಗ್ರಾಮೀಣ ಇತಿಹಾಸ, ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಸ್ಥಳವಾಗಿದೆ.

ಇಂತಹ ವೈಶಿಷ್ಟ್ಯ ಪೂರ್ಣ ಹೆಸರು ಹೊಂದಿರುವ
ಹುರುಳಿಹಳ್ಳಿಯು ಭದ್ರಾ ನದಿಯ ದಡದಲ್ಲಿರುವ ಉಂಬಳಿಬೈಲು(ಪ್ರಾಚೀನ ‌ಹೆಸರು ಕದಂಬದ ಹಳ್ಳಿ) ಗ್ರಾಮದ ಕಾಡಂಚಿನಲ್ಲಿದ್ದು ಇಲ್ಲಿ ಹೊಯ್ಸಳರ ವೀರಬಲ್ಲಾಳನ ಕಾಲದಲ್ಲಿ ಕದಂಬದೇವ, ದೇವಿಯ ಆರಾಧನೆಯು ನಡೆಯುತ್ತಿದ್ದ ಕುರುಹುಗಳು ಶಾಸನಗಳ ಮೂಲಕ ಕಾಣಸಿಗುತ್ತವೆ.

ಇಂತಹ ಒಂದು ಅಪರೂಪದ 12-13 ನೇ ಶತಮಾನಕ್ಕೆ ಸೇರಿದ ಶಾಸನವೊಂದನ್ನು ಹುರಳಿಹಳ್ಳಿ ಗ್ರಾಮಸ್ಥರ, ಯುವಕರ ಸಹಾಯದಿಂದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷರು ಡಾ. ಎಸ್.ಜಿ ಸಾಮಕ್, ಕಾರ್ಯದರ್ಶಿ ದಿಲೀಪ್ ನಾಡಿಗ್ ಪತ್ತೆ ಹಚ್ಚಿದ್ದು ಇವರೊಂದಿಗೆ ವೇದಿಕೆಯ ಸದಸ್ಯರಾದ ಶ್ರೀ ಆದಿತ್ಯಪ್ರಸಾದರು ಸಹಾಯವನ್ನು ನೀಡಿದ್ದಾರೆ.

Klive Special Article ಕನ್ನಡ ಸಾರಸ್ವತ ಲೋಕದ ಧೃವತಾರೆ: ಗಳಗನಾಥರು ಲೇ: ಶ್ರೀವತ್ಸ ಪ್ರಸಾದ್. ದಾವಣಗೆರೆ

0

Klive Special Article ಆಧ್ಯಾತ್ಮ ರಶ್ಮಿ -4
ಪುಸ್ತಕ ಸಂತ – ಶ್ರೀ ಗಳಗನಾಥರು
ಕಾವೇರಿಯಿಂದ ಗೋದಾವರಿಯವರೆಗೆ ಹರಡಿ, ಸಾಹಿತ್ಯ ಸಂಗೀತ, ಕಲೆ ವಾಸ್ತುಶಿಲ್ಪ ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ನಮ್ಮ ಕನ್ನಡ ನಾಡು ಕೇವಲ ಸಾಂಪ್ರದಾಯಕವಾಗಿ ಮಾತ್ರ ಅಲ್ಲದೇ ಸಾಹಿತ್ಯದ ಮೂಲಕವೂ ಸಹಾ ತತ್ತ್ವವನ್ನು ಜನರಿಗೆ ತಿಳಿಸಿದಂಥಹುದು. ಪಂಪನಿಂದ ಹಿಡಿದು ದಾಸರು, ವಚನಕಾರರೂ, ಕುವೆಂಪು, ಬೇಂದ್ರೆ, ಕಾರಂತರು ಭೈರಪ್ಪನವರು ಇನ್ನೂ ಅನೇಕ ಕವಿಪುಂಗವರೆಲ್ಲರೂ ನಮ್ಮ ಕನ್ನಡ ನಾಡಿನ ಆಧ್ಯಾತ್ಮಿಕ ಸಂಪತ್ತನ್ನು ತಮ್ಮ ಕಾವ್ಯಗಳ ಪ್ರೌಢಿಮೆಯಿಂದ ತಮ್ಮದೇ ವಿಶಿಷ್ಟ ಪ್ರಕಾರದಲ್ಲಿ ತತ್ತ್ವವನ್ನು ಜಗತ್ತಿಗೆ ಉಣಬಡಿಸಿದರು. ಕೆಲವು ಕವಿಗಳ ಹೆಸರು ಕೇಳಿದಾಗ ಉದಾಹರಣೆಗೆ ಶಿಶುನಾಳ ಶರೀಫರು, ಹಡಗಲಿ ಭೀಮವ್ವ, ಕಡಕೋಳ ಮಡಿವಾಳಜ್ಜ ಹೀಗೆ ಇವರು ತತ್ತ್ವಪದಕಾರರಾಗಿ ಸಂತ ಕವಿಗಳೆನಿಸಿಕೊಂಡವರು ಏಕೆಂದರೆ ಇವರೆಲ್ಲರ ಪದ್ಯಗಳ ಅಧ್ಯಾತ್ಮ ಲೋಕದ ಹಾದಿಹೋಕರಿಗೆ ಅವರ ಬಂಡಿ ಯಾವ ಹಂತದಲ್ಲಿ ಹೋಗುತ್ತಿದೆ ಮತ್ತು ಮುಂದೆ ಹೋಗಬೇಕಾದ್ದು ಎಲ್ಲಿಗೆ ಎಂದು ತಿಳಿಸುತ್ತವೆ. ಅದರಂತೆ ಹಾವೇರಿ ಜಿಲ್ಲೆಯಲ್ಲಿ ನಾವು ಒಬ್ಬ ಪುಸ್ತಕಸಂತರನ್ನು ಕಾಣಬಹುದು. ಅವರ ಹೆಸರು ಯಾರಿಗೂ ತಿಳಿಯಪಡಿಸದೇ ತನ್ನ ಗ್ರಾಮದೈವವನ್ನೇ ಅಂಕಿತವಾಗಿ ಬಳಸಿಕೊಂಡು ಅದರಂತೆ ಕನ್ನಡ ಕಾದಂಬರಿಯ ಪಿತಾಮಹರಾಗಿ ಮೆರೆದವರು.
ಇಸ್ವಿ ಸನ್‌ 05-01-1869 ರಲ್ಲಿ ಧಾರವಾಡ ಜಿಲ್ಲೆಯ ಗಳಗನಾಥ ಗ್ರಾಮದಲ್ಲಿ ಜನಿಸಿದ ಶ್ರೀ ವೆಂಕಟೇಶ ತ್ರಿವಿಕ್ರಮ (ತಿರುಕೊ) ಕುಲಕರ್ಣಿಯವರು, ಕಾದಂಬರಿಕಾರರು, ಪತ್ರಕರ್ತರು, ಹಾಗೂ ತತ್ತ್ವ ಚಿಂತಕರಾಗಿದ್ದವರು. ಬಾಲ್ಯದಿಂದಲೇ ಆಶಾವಾದಿಗಳಾದ ಇವರು. ಆ ಊರಿನ ಕುಲಕರ್ಣಿಗಳ ಜ್ಯೇಷ್ಠ ಪುತ್ರರು. ವರದಾ ಮತ್ತು ತುಂಗಭದ್ರೆಯರ ಸಂಗಮದ ತಟದಲ್ಲಿರುವ ಶ್ರೀ ಗಳಗೇಶ್ವರ ದೇವಾಲಯದಲ್ಲಿ ವೆಂಕಣ್ಣನವರ ವಿದ್ಯಾಭ್ಯಾಸ ಪ್ರಾರಂಭವಾಯಿತು. ಸ್ವಾಭಿಮಾನಿ, ಬುದ್ಧಿವಂತ ವೆಂಕಣ್ಣ, ಉತ್ತಮ ವಿದ್ಯಾಭ್ಯಾಸ ಮಾಡುತ್ತಾ, ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆಯನ್ನು ಬರೆದು, ನಂತರ ಶಿಕ್ಷಕರಾಗಬೇಕು ಎಂದು ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು ಅತ್ಯತ್ತಮ ಶಿಕ್ಷಕರಾದರು. ಶಿಕ್ಷಕ ತರಬೇತಿ ಕಾಲೇಜಿನ ಪ್ರಾಂಶುಪಾಲರಾದ ಕೈ.ವಾ. ರಾವಜೇರಾವ ಕರಂದೀಕರರು ಇವರ ಬರಹಗಳನ್ನು ಮೆಚ್ಚಿ ಪೂನಾದ ರೀಜನಲ್‌ ಬುಕ್‌ ಕಮಿಟಿಯಲ್ಲಿ ಸದಸ್ಯತ್ವ ಕೊಡಿಸಿ ಲೇಖನ ಕಲೆಯನ್ನು ಕಲಿಸಿದವರು ಎಂದು ಗಳಗನಾಥರು ಸ್ವತಃ ತಿಳಿಸುತ್ತಾರೆ. ಶಿಕ್ಷಕನಾಗಿ ಸೇವೆ ಸಲ್ಲಿಸುವಸಂದರ್ಭದಲ್ಲಿ ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳ ಪ್ರಭಾವಕ್ಕೊಳಗಾಗಿ, ಆನಂದವನದ ಸಂಸ್ಕೃತ ಪಾಠಶಾಲೆಯ ಜವಾಬ್ದಾರಿ ಇವರ ಹೆಗಲೇರಿತು. Klive Special Article ಮೊದಲೇ ಗಳಗನಾಥರು ಗುರುವಾಕ್ಯ ಪರಾಯಣರು ಗುರುಗಳ ಆಣತಿತಂತೆ ವಹಿಸಿದ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ “ಸದ್ಬೋಧ ಚಂದ್ರಿಕೆ”ಎಂಬ ಮಾಸಿಕವೊಂದನ್ನು ಪ್ರಾರಂಭಿಸಿದರು. ಅಂದಿನ ಕಾಲದಲ್ಲಿ 7000 ಚಂದಾದಾರರನ್ನು ಹೊಂದಿದ ಪತ್ರಿಕೆ ಇದಾಗಿತ್ತು. ಇದರಲ್ಲಿ ಮೂಡಿ ಬರುತ್ತಿದ್ದ ಎಲ್ಲಾ ಲೇಖನಗಳೂ ಸಹಾ ತತ್ತ್ವಲೋಕದ ಹಾದಿ ಹೋಕರಿಗೆ ಒಂದೊಂದೂ ಮೈಲಿಕಲ್ಲುಗಳಾಗಿ ಪರಿಣಮಿಸುತ್ತಿದ್ದವು. ಅದೇ ಸಂದರ್ಭ ಶೇಷಾಚಲ ಸದ್ಗುರುಗಳು ದೇಹಬಿಟ್ಟರು. ಮಹಾಯುದ್ಧದ ಸಮಯ ಸಂಸ್ಕೃತ ಪಾಠಶಾಲೆ, ಪತ್ರಿಕೆಗಳನ್ನು ನಡೆಸುವುದು ಗಳಗನಾಥರಿಗೆ ಸ್ವಲ್ಪ ಕಠಿಣವೆನಿಸಿದರೂ ಸಹಾ ಎದೆಗುಂದಲಿಲ್ಲ. ಪಾಠಶಾಲೆಯ ಸಮೇತ ಆನಂದವನದಿಂದ ಹಾವೇರಿಗೆ ಬಂದರು. ಸಂಸ್ಕೃತ ಪಾಠಶಾಲೆಯ ಶಿಕ್ಷಕರ ಸಂಬಳ, ಪ್ರಿಂಟಿಂಗ್‌ ಪ್ರೆಸ್‌ ನೌಕರರ ಪ್ರತಿ ತಿಂಗಳ ಸಂಬಳ, ಇದು ಸಾಲದು ಎಂಬಂತೆ ಅವರ ಎರಡು ಹೆಣ್ಣುಮಕ್ಕಳ ಮದುವೆಯನ್ನು ಮಾಡಿ ಒಟ್ಟು 60000 ರೂಪಾಯಿಗಳ ಸಾಲ ಅವರ ಹೆಗಲೇರಿತು. ನಾನು ಮತ್ತೆ ಒಮ್ಮೆ ಇಲ್ಲಿ ಉದ್ಧವಗೀತೆಯನ್ನು ನೆನಸಬೇಕಾಗುತ್ತದೆ “ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಹಂ”ಎಂಬಂತೆ, ಒಂದೊಂದೆ ಗಳಗನಾಥರಿಂದ ದೂರ ಸರಿದವು. ಏಕೆಂದರೆ ಅವರ ಆದಾಯದ ಬಹುಪಾಲು ಸಂಸ್ಕೃತ ಪಾಠಶಾಲೆ, ಮತ್ತು ಗೋಶಾಲೆಗಳ ನಿರ್ವಹಣೆಗೇ ಖರ್ಚಾಗುತ್ತಿದ್ದವು. ಹೆದರಲಿಲ್ಲ, ಬೆದರಲಿಲ್ಲ ಯೋಚಿಸುತ್ತಾ ಕೂಡದ ಗಳಗನಾಥರು ಇದೊಂದು ಸತ್ವಪರೀಕ್ಷೆಯೆಂದು ಭಾವಿಸಿದರು. ಅದೇ ಸಂದರ್ಭದಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತ ಪಾಠಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು ಅದಕ್ಕೆ ಶ್ರೀಯುತರಿಗೆ ಬಹಳ ಖೇದವಾಯಿತು.
ನಂತರ ಸುಮಾರು ಪುಸ್ತಕಗಳನ್ನು ಮಾರಿ, ಸದ್ಬೋಧಚಂದ್ರಕೆ, ಸದ್ಗುರು ಮಾಸಪತ್ರಿಕೆಗಳ ಚಂದಾ ಮೂಲಕ 40000 ಸಾಲವನ್ನು ತೀರಿಸಿದರು. ಅವರ ಕಾದಂಬರಿಗಳ ಮೊದಲ ಮಾತು “ತೋರಣ” ಎಂಬಲ್ಲಿ ಅವರೇ ತಿಳಿಸುತ್ತಾರೆ. “ಸದ್ಬೋಧ ಚಂದ್ರಿಕೆಗೆ 7000 ಚಂದಾದಾರಿದ್ದಾರೆ, ಸದ್ಗುರು ಮಾಸ ಪತ್ರಿಕೆಗೂ ಅಷ್ಟೇ, ಇದೆಲ್ಲವೂ ಗಳಗನಾಥನ ಸಾಧನೆಯಲ್ಲ ಸದ್ಗುರುವಿನ ಕೃಪೆ ಮಾತ್ರ “ಎಂದು. ಒಂದು ಕಡೆಯಲ್ಲಿ ವಾರ್ಧಕ್ಯವು ಇವರನ್ನು ಸೇರುತ್ತಿದ್ದರೂ, ಅದರೆಡೆಗೆ ಲಕ್ಷ್ಯಕೊಡದೇ, ತಲೆಯಮೇಲೆ ಪುಸ್ತಕಗಳನ್ನು ಹೊತ್ತು ತಿರುಗಿ ಮನೆ ಮನೆಗೆ ಕನ್ನಡ ಪುಸ್ತಕಗಳನ್ನು ತಲುಪಿಸಿದ ಏಕೈಕ ಸಾಹಿತಿ, ಕಾದಂಬರಿಕಾರರು ಇದ್ದರೆ ಅವರು “ಶ್ರೀಗಳಗನಾಥರು” ಮಾತ್ರ. ಮಾಧವ ಕರುಣಾ ವಿಲಾಸ, ಪ್ರಬುದ್ಧ ಪದ್ಮನಯನೆ, ರಾಣಿ ಮೃಣಾಲಿನಿ, ಕನ್ನಡಿಗರ ಕರ್ಮಕಥೆ, ದುರ್ಗದ ಬಿಚ್ಚುಗತ್ತಿ, ಧರ್ಮ ರಹಸ್ಯ ಹೀಗೆ ಹಲವಾರು ಕಾದಂಬರಿಗಳನ್ನು ಬರೆದು ಕನ್ನಡದಲ್ಲಿ ಕಾದಂಬರಿಯ ಹರಿಕಾರರಾದರು, “ಕಾದಂಬರಿಯ ಪಿತಾಮಹ”ರೆನಿಸಿದರು. ಇವರ ಸಾಹಿತ್ಯ ಪ್ರತಿಭೆಯನ್ನು ನಾವು ಅಳೆಯಲು ಅಸಾಧ್ಯ, ಇವರು ಈ ಎಲ್ಲ ಪುಸ್ತಕಗಳನ್ನು ಬರೆದು ಅವುಗಳನನು ತಲೆಯ ಮೇಲೆ ಹೊತ್ತು ತಿರುಗಿ ಜನತೆಗೆ ಅಕ್ಷರ ಜ್ಞಾನ ನೀಡಿದವರು. ಅದೆಷ್ಟೋ ಕಷ್ಟ, ನಿಷ್ಠುರ, ಕುಹಕ ಎಲ್ಲವನ್ನೂ ಎದುರಿಸಿ. ಓದುಗರಿಗೆ ಪುಸ್ತಕದ ರುಚಿ ಹತ್ತಿಸಿದವರು. ತಮ್ಮ ತೋರಣ ಭಾಗದಲ್ಲಿ, ಅವರಿಗಾದ ನೋವನ್ನು, ಹಿಂಸೆಯನ್ನು ಎಲ್ಲಿಯೂ ತೋರ್ಪಡಿಸಿಲ್ಲ. ಅದೆಲ್ಲವನ್ನೂ ಮರೆತು, ಬೆಂಗಳೂರು, ಮೈಸೂರು, ಧಾರವಾಡ, ಹೀಗೆ ಎಲ್ಲಾ ಪ್ರಾಂತ್ಯದ ಜನರೂ ಸಹ ನನ್ನನ್ನು ಸಾಕಿ ಸಲುಹಿ ನನ್ನ ಪುಸ್ತಕಗಳನ್ನು ಓದಿ ಸಂತೋಷಪಟ್ಟು ಈ ಗಳಗನಾಥನನ್ನು ಬೆಳೆಸಿದರು ಎಂದು ತಿಳಿಸುವಾಗ ನನಗೂ ಸಂತೋಷ ದುಃಖ ಎರಡೂ ಉಂಟಾಗುತ್ತದೆ. ಏಕೆಂದರೆ ಗಳಗನಾಥರು ಇದೆಲ್ಲವನ್ನೂ ಮಾಡಿದ್ದು ಕೇವಲ ಶಾಲೆಯನ್ನು ನಡೆಸಲು, ಅಲ್ಲಿಯ ವಿದ್ಯಾರ್ಥಿಗಳ ಹಸಿವು ನೀಗಿಸುವ ಸಲುವಾಗಿ ಎಂದರೆ ತಪ್ಪಾಗಲಾರದು. ಇದೆಲ್ಲದರ ನಂತರ ಸದ್ಬೋಧ ಚಂದ್ರಿಕೆಯು ಕರ್ನಾಟಕದ ತುಂಬೆಲ್ಲ ವ್ಯಾಪಕವಾಗಿ ಹರಡಿ, ಸಾವಿರಾರು ಚಂದಾದಾರರು ಕಾತುರದಿಂದ ಎದುರು ನೋಡುವಂತೆ ಮಾಡಿದ ಏಕೈಕ ಆಧ್ಯಾತ್ಮಿಕ ಸೌರಭ ಎಂದರೆ ತಪ್ಪಾಗಲಾರದು. ಹೀಗೆ ತಿರುಗಿ ತಿರುಗಿ ಪುಸ್ತಕಗಳನ್ನು ಮನೆ ಮನೆಗೆ ಮುಟ್ಟಿಸಿದ ಇವರು 1942 ಏಪ್ರಿಲ್‌ 22ರಂದು ವಿಕ್ಟೋರಿಯ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು. ಆಗ ಅವರಿಗೆ 78 ವರ್ಷ ವಯಸ್ಸಾಗಿತ್ತು. ಅಂದು ಪ್ರತಿ ಪುಸ್ತಕ ಮಾರಿದಾಗಲೂ ಸಹಾ ತಮ್ಮ ಸಾಲದ ಒಂದಂಶ ಕಡಿಮೆಯಾಯಿತು ಎಂಬ ಸಮಾಧಾನ, ಇಂದು ಸಾಲ ಮಾಡಿ ತೀರಿಸುವುದೇ ಇಲ್ಲ ಎಂಬ ಅಭಿಮಾನ ಅಲ್ಲ ಅಲ್ಲ ದುರಭಿಮಾನ ಅಥವಾ ಸಾಲವನ್ನೇಕೆ ತೀರಿಸಬೇಕು ಎಂಬ ಧೋರಣೆ ಕೆಲವೆಡೆ ನಾವು ಕಾಣಬಹುದು. ಆದರೆ ಗಳಗನಾಥರಂಥ ನಿಸ್ಪೃಹರು ಕಾಣಲಿಕ್ಕೆ ಹೇಗೆ ಸಾಧ್ಯ ಅವರೂ ಎಲ್ಲರಂತೆ ಮನುಷ್ಯರೇ, ಆದರೆ ಸಂಸಾರದಲ್ಲಿದ್ದು ಸದ್ಗುರುಗಳಿಗೆ ಕೊಟ್ಟ ಒಂದೇ ಒಂದು ಮಾತಿನಿಂದ ತಮ್ಮ ಇಡೀ ಜೀವನವನ್ನು ಸಂತರ ಜೀವನದ ಬಗ್ಗೆ ತಿಳಿಸುವಲ್ಲಿ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಲು, ಬಡತನದ ಬವಣೆಗಳನ್ನು ನೀಗಿಸಿಕೊಳ್ಳುವಲ್ಲಿ ವಿದ್ಯೆ, ಹಾಗೂ ವಿದ್ಯಾಲಯಗಳ ಮಹತ್ವವೇನು ಎಂಬುದನ್ನು ನಾವು ಇವರನ್ನು ನೋಡಿ ಕಲಿಯಬೇಕಿದೆ.
1999ರಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗ ಕೇವಲ ರೂ. 600/-ಕ್ಕೆ ಗಳಗನಾಥರ ಅಷ್ಟೂ ಕಾದಂಬರಿಗಳನ್ನು ಆರು ಸಂಪುಟಗಳ ಮೂಲಕ ಪ್ರಸಾರ ಮಾಡಿದರು. ಅದರಲ್ಲಿ ಮೊದಲ ಹಾಗೂ ಎರಡನೇ ಸಂಪುಟ ನನ್ನ ತಂದೆಯಿಂದ ನನಗೆ ದೊರೆತಿದ್ದು ಈ ಮಹಾತ್ಮರನ್ನು ತಿಳಿಯುವಲ್ಲಿ ಸಹಾಯಕವಾಯಿತು. ನಾನು ಬಹಳ ಚೆನ್ನಾಗಿ ಬರೆಯುತ್ತೇನೆ ಆದರೆ ಏಕೆ ಯಾರೂ ಓದುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡಿದರೆ ನಾನು ಗಳಗನಾಥರನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವೇ ? ಮಾಧವ ಕರುಣಾ ವಿಲಾಸದಲ್ಲಿ ಮಾಧವಾಚಾರ್ಯರು ವಿದ್ಯಾರಣ್ಯರಾಗಿ ಕುರಿಕಾಯುವ ಇಬ್ಬರು ತರುಣರು ಹಕ್ಕಬುಕ್ಕರಾಗ ಕರ್ನಾಟಕ ಸಾಮ್ರಾಜ್ಯವಾದದನ್ನು ಓದುತ್ತಿರುವಾಗ, ಪರಕೀಯ ಸುಲ್ತಾನರ ದಾಳಿಯಿಂದ ಜನರನ್ನು ಉಳಿಸಲು ಹಕ್ಕ-ಬುಕ್ಕರ ಶ್ರಮ ಹಾಗೂ ಅದಕ್ಕೆ ವಿದ್ಯಾರಣ್ಯರ ನಿರಂತರ ಪ್ರೇರಣೆ ಮತ್ತು ಮಾರ್ಗದರ್ಶನ ಇಂದಿಗೂ ನನಗೆ ಮೈ ನವಿರೇಳಿಸುತ್ತದೆ. ಕೇವಲ ಹೆಣ್ಣು-ಹೊನ್ನು-ಮಣ್ಣಿಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳುಗೆಡವುತ್ತಿರುವ ಸಂದರ್ಭದಲ್ಲಿ ಕೇವಲ ಸಂಕಲ್ಪ ಮಾತ್ರದಿಂದ ಸಂತರು ಹೇಗೆ ಅಲ್ಲಿನ ಕಲುಷಿತ ವಾತಾವರಣವನ್ನು ಶುದ್ಧಗೊಳಿಸಿ, ಎಲ್ಲರನ್ನು ಒಗ್ಗೂಡಿಸಿ, ಅನ್ಯಾಯದ ವಿರುದ್ಧ ತಿರುಗಿಬಿದ್ದು ಅದನ್ನು ನಿವಾರಿಸಿ, ಎಲ್ಲರೂ ಖುಷಿಯಲ್ಲಿರುವಂತೆ ಮಾಡಿ, ಕೊನೆಗೆ ತಮಗೆ ಸಂಬಂಧವೇ ಇಲ್ಲದಂತೆ ತಮ್ಮೆಡೆಗೆ ಬರುವವರಿಗೆ ಜ್ಞಾನವನ್ನುಣಬಡಿಸುವವರ ತ್ಯಾಗ ಎಲ್ಲವೂ ಈ ಕಾದಂಬರಿಯಲ್ಲಿ ಅಡಗಿದೆ. ಓದುತ್ತಾ ಓದುತ್ತಾ ಪರಕೀಯರಿಂದಾದ ಅನಾಹುತಗಳೂ ಕಣ್ಮುಂದೆ ಬಂದಾಗ ರಕ್ತ ಕುದಿಯುವಂತಾಗುತ್ತದೆ. ಇವರ ಯಾವುದೇ ಕಾದಂಬರಿಯನ್ನು ಓದುತ್ತಿರುವಾಗ ನಮ್ಮ ಕಣ್ಣ ಮುಂದೆ ಅದರ ಚಲನ ಚಿತ್ರಗಳು ಮೂಡುತ್ತವೆ. ಕೇವಲ ಬಂದವರಿಗೆ, ಅಥವಾ ಕೇಳಿದವರಿಗೆ ಜ್ಞಾನ ನೀಡುತ್ತಾ ಮೌನದಲ್ಲಿದ್ದು ಸಾಧನೆ ಮಾಡುತ್ತಾ, ಚಮತ್ಕಾರ ತೋರಿಸುವವರಿಗಷ್ಟೇ ನಾವು ಸಂತರೆನ್ನುವುದಾದರೆ ಜ್ಞಾನವನ್ನು ತಲೆಯಮೇಲೆ ಹೊತ್ತು ಮೆರೆಸಿ ಕೇಳಿದವರಿಗೂ ಕೇಳದವರಿಗೂ ಸದ್ಬೋಧೆಯನ್ನು ಬಿತ್ತರಿಸಿದ ಗಳಗನಾಥರು “ಪುಸ್ತಕ ಸಂತ” ಎಂದರೆ ಬಹುಶಃ ಅತಿಶಯೋಕ್ತಿಯೇನಲ್ಲ. ವಾಚಕರಿಗೆ ಈ ನನ್ನ ಲೇಖನವು ಅಷ್ಟೇನೂ ಸತ್ವಭರಿತವಾಗಿಲ್ಲ ಎನಿಸಿದಲ್ಲಿ, ಈ ನನ್ನ ತೊದಲು ಮಾತಿನ ಕುರಿತು ಕ್ಷಮೆಯಿರಲಿ. ಸಾಹಿತ್ಯದ ಮೂಲಕ ನಮ್ಮನ್ನು ಜಾಗ್ರತರನ್ನಾಗಿ ಮಾಡಿದ ಗಳಗನಾಥರನ್ನು ಅವರ “ಪುಣ್ಯ ತಿಥಿ”ಸಂದರ್ಭದ ನೆನಪಿಗಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಲೇ: ಶ್ರೀವತ್ಸ ಪ್ರಸಾದ್.
ದಾವಣಗೆರೆ.

ಶಿವಮೊಗ್ಗದ ಒಂದನೇ ವಾರ್ಡಿಗೆ ಶಾಸಕ ಚೆನ್ನಿ ಭೇಟಿ, ಸಾರ್ವಜನಿಕರ ಅಹವಾಲು ಸ್ವೀಕಾರ

0

ಶಿವಮೊಗ್ಗ ನಗರದ ಜನತೆಯ ದೈನಂದಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪನವರು ಇಂದು ವಾರ್ಡ್ ನಂಬರ್ 01ರ ಪಾರ್ವತಮ್ಮ ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಡಾವಣೆಯಾದ್ಯಂತ ಸಂಚರಿಸಿದ ಶಾಸಕರು, ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು. ಮುಖ್ಯವಾಗಿ ಒಳಚರಂಡಿ (UGD) ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಹಾಗೂ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಅವರು, ಕಾಮಗಾರಿಗಳ ವಿಳಂಬಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ದುರಸ್ತಿ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಚಂದ್ರಪ್ಪ, ರಾಜು, ಮಹಾನಗರ ಪಾಲಿಕೆಯ ಅಭಿಯಂತರರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ಪಶ್ಚಿಮಘಟ್ಟ ಪ್ರದೇಶ ಸಂಬಂಧಿತ ಕುಂದುಕೊರತೆ ಆಲಿಸಲು ಸ್ಥಳೀಯ ಕಛೇರಿ ತೆರೆಯಲು ನಿರ್ಧಾರ- ಮೊಹಮ್ಮದ್ ತಬ್ರೇಜ್ಆಲಂ ಶರೀಫ್

0

ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಮಲೆಶಂಕರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿದ ಕುಂದುಕೊರತೆ ಆಲಿಸಲು ಸ್ಥಳೀಯ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಬ್ರೇಝ್‌ಆಲಂ ಶರೀಫ್ ತಿಳಿಸಿದರು.
ಮಲೆಶಂಕರದಲ್ಲಿ ಮೇ ಮಾಹೆಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಲೆಶಂಕರಕ್ಕೆ ತಾವು ಖುದ್ದು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬುಡಕಟ್ಟು ಜನಾಂಗದ ಕುಂದುಕೊರತೆ ಸೇರಿದಂತೆ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಕ್ರಮ ಕೈಗೊಳ್ಳಲಾಗುವುದು. ಹಾಗೂ ಮೇ ಮಾಹೆಯಲ್ಲಿ ಒಂದು ಕಾರ್ಯಕ್ರಮ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದ ಅವರು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸಲು ಸ್ಥಳೀಯರು ಬೆಂಗಳೂರಿಗೆ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ಕುಂದು ಕೊರತೆಯನ್ನು ಆಲಿಸಲು ಸ್ಥಳೀಯವಾಗಿ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದರು.
ದೇಶದ ಪಶ್ಚಿಮ ಘಟ್ಟಗಳನ್ನು ಹೊಂದಿರುವ 6 ರಾಜ್ಯಗಳ ಪೈಕಿ ನಮ್ಮ ರಾಜ್ಯವೇ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಹಾಗೂ ಸಂರಕ್ಷಣೆಗಾಗಿ ಸಮಿತಿ ರಚಿಸಿದ ಮೊದಲ ರಾಜ್ಯವಾಗಿದ್ದು, 2008 ರಲ್ಲಿ ಈ ಸಮಿತಿ ರಚನೆಯಾಗಿದೆ. ವನ್ಯಜೀವಿ ಅಭಯಾರಣ್ಯ, ರಾಷ್ಟಿçÃಯ ಉದ್ಯಾನವನಗಳನ್ನು ಘೋಷಿಸುವ ಮೂಲಕ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುತ್ತಿದೆ.
ತಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದು, ಇದರಲ್ಲಿ ಮುಖ್ಯವಾಗಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಗ್ರೀನ್ ಚೆಕ್ ಪೋಸ್ಟ್ಗಳ ಸ್ಥಾಪನೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ನಿಯಮಗಳು ಮತ್ತು ಪಶ್ಚಿಮ ಘಟ್ಟ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಮುಖ್ಯವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವುದು, ನಿಯಮಗಳ ರಚನೆ ಹಾಗೂ ಕತ್ತಲೆ ಕಾಡು ಸಂರಕ್ಷಣೆ ಗೆ ಒತ್ತು ನೀಡಲಾಗುತ್ತಿದ್ದು, ಕತ್ತಲೆ ಕಾನನ್ನು ಹೆರಿಟೇಜ್ ಸೈಟ್ ಆಗಿ ಘೋಷಿಸುವಂತೆ ಜೀವ ವೈವಿಧ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.
ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪೋಸ್ಟ್ ಕಾರ್ಡ್ ಬಿಡುಗಡೆಗೊಳಿಸಲಾಗಿದೆ. ಹಾಗೂ ಇತ್ತೀಚಿಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೋಂ ಸ್ಟೇ, ರೆಸಾರ್ಟ್ ಸ್ಥಾಪನೆ ಕುರಿತು ಡೇಟಾ ಬೇಸ್ ಸಂಗ್ರಹಿಸಿ, ಅಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಎಸ್ ಓ ಪಿ ಯನ್ನು ತರಲಾಗುವುದು ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ವಿಷಯಕ್ಕೆ ಸಂಬAಧಿಸಿದAತೆ ಉಚ್ಚನ್ಯಾಯಾಲಯ ಸ್ಟೇ ನೀಡಿದೆ. ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟು ಮಾಡುವ ಯಾವುದೇ ಯೋಜನೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದ ಅವರು ಹುಲಿಕಲ್ ಘಾಟಿ ಸಮಸ್ಯೆ ಕುರಿತು ಅರಿಯಲು ತಾವು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ಜೀವವೈವಿಧ್ಯ ಉಳಿವಿಗೆ ಸೂಕ್ಷö್ಮ ಪ್ರದೇಶಗಳನ್ನು ಘೋಷಿಸುವ ಉದ್ದೇಶ ಹೊಂದಿದ್ದು ಸುಸ್ಥಿರ ಪ್ರವಾಸೋದ್ಯಮ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಮಾತನಾಡಿ. ಜಿಲ್ಲೆಯಲ್ಲಿ 4 ಅರಣ್ಯ ವಿಭಾಗ, 3 ಪ್ರಾದೇಶಿಕ ವಿಭಾಗಗಳಿದ್ದು ಒಟ್ಟು 420 ಹೆಕ್ಟೇರ್ ಅರಣ್ಯ ಭೂಮಿ ಇದೆ. ಅದರಲ್ಲಿ 363 ಹೆ. ಸೂಚಿತ ಅರಣ್ಯವಿದ್ದು ಒಟ್ಟು ಶೇ. 39 ಅರಣ್ಯ ಹೊಂದಿದ್ದೇವೆ. ಮೂರು ವನ್ಯಜೀವಿ ಅಭಯಾರಣ್ಯ ಇದೆ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ಶರಾವತಿ ಅಭಯಾರಣ್ಯ ಹಾಗೂ ಗುಡವಿ ಪಕ್ಷಿಧಾಮವಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪ್ರಸನ್ನ ಕೃಷ್ಣ ಪಟಗಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸೊರಬದ ಉಳವಿಯಲ್ಲಿ ಸುರಿದ ಮಳೆ.ತೆಂಗಿನ ಮರ ಬಿದ್ದು ಮನೆಗೆ ಜಖಂ

0

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಹೋಬಳಿಯ ಸಿಗ್ಗ ಗ್ರಾಮ ಪಂಚಾಯತ್ ಅನಸಗದ್ದೆ ಗ್ರಾಮದಲ್ಲಿ ಅಕಾಲಿಕ ಸುರಿದ ರಾತ್ರಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ.

ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ಹಲವು ಮನೆಗಳ ಛಾವಣಿಗೆ ಹಾನಿ ಉಂಟಾಗಿದ್ದು, ಮನೆ ಮುಂದೆ ನಿಲ್ಲಿಸಿದ ಕಾರು ಹಾಗೂ ಬೈಕ ಗಳು ಜಖಂ ಗೊಂಡಿವೆ.

Kuvempu University ಕುವೆಂಪು ವಿವಿ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನ

0

Kuvempu University ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು 35ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ
ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಏ. 24, ದಂಡ ಶುಲ್ಕ ರೂ.100/-ರೊಂದಿಗೆ ಅರ್ಜಿ ಸಲ್ಲಿಸಲು ಏ. 26 ಹಾಗೂ ದಂಡ ಶುಲ್ಕ ರೂ. 200/- ರೊಂದಿಗೆ ಅರ್ಜಿ ಸಲ್ಲಿಸಲು ಏ. 27 ಕೊನೆಯ ದಿನಾಂಕವಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ತಿಳಿಸಿರುತ್ತಾರೆ.

ಶ್ರೀಶಂಕರ ಜಯಂತಿಕವನ. ರಚನೆ : ಪ್ರೇಮಾ ಶ್ರೀಕೃಷ್ಣ, ಮಂಗಳೂರು

0

ಕಾಲಡಿ ಗ್ರಾಮದಿ ಜನಿಸಿದ ಶಿವಗುರು
ಆರ್ಯಾಂಬೆಯ ಸುತ ಶಂಕರರು
ಬಾಲ್ಯದಿ ವೇದವ ಕರಗತ ಮಾಡಿದ
ಪ್ರತಿಭಾನ್ವಿತ ಹಿತಚಿಂತಕರು

ಜ್ಞಾನದ ಹಸಿವೆಯ ತಣಿಸಲು ಸನ್ಯಾ-
ಸತ್ವದ ದೀಕ್ಷೆಯ ಪಡೆದಿಹರು
ಮಾತೆಯ ಕಷ್ಟಕೆ ಮರುಗುತ ನದಿಯನೆ
ಮನೆಯ ಸಮೀಪಕೆ ಹರಿಸಿಹರು

ದೇಶಾಟನೆಯಲಿ ಶ್ರೇಷ್ಠ ಸನಾತನ
ಧರ್ಮದ ಹಿರಿಮೆಯ ಸಾರಿದರು
ಅದ್ವೈತವ ಪ್ರತಿಪಾದಿಸಿ ಮೌಢ್ಯವ
ನೀಗಿಸಿ ದೀಪ್ತಿಯ ಹರಡಿದರು

ಬಕುತಿಯು ತುಂಬಿದ ಚಿತ್ತವ ಬೆಳಗುವ
ಕೃತಿಗಳ ರಚಿಸಿದ ಆಚಾರ್ಯ
ಮಠಗಳ ಸ್ಥಾಪಿಸಿ ತತ್ತ್ವವ ಸಾರಿದ
ಶಿವನವತಾರವೆ ಗುರುವರ್ಯ!!

ಪ್ರೇಮಾ ಶ್ರೀಕೃಷ್ಣ, ಮಂಗಳೂರು

ಏಪ್ರಿಲ್ 22 .ಸರ್ಕಾರಿ ನಿವೃತ್ತ/ ಕುಟುಂಬ ಪಿಂಚಣಿದಾರರ ಕುಂದುಕೊರತೆ ಆಲಿಸಲು ವಿಡಿಯೊ ಕಾನ್ಫರೆನ್ಸ್

0

ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ನಿವೃತ್ತ/ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ನಿವಾರಣೆಗಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಏ.22 ರಂದು ಬೆಳಗ್ಗೆ 11.00ಕ್ಕೆ “ಪಿಂಚಣಿ ಅದಾಲತ್” ಹಾಗೂ ಮಧ್ಯಾಹ್ನ ಜಿಪಿಎಫ್ ಚಂದಾದಾರರ ಕುಂದುಕೊರತೆಗಳ ನಿವಾರಣೆಗಾಗಿ ”ಜಿಪಿಎಫ್ ಅದಾಲತ್” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪಿಂಚಣಿದಾರರು ಬೆಳಿಗ್ಗೆ 11 ಗಂಟೆಗೆ ಎ.ಸಿ.ಕಚೇರಿಯ ಕೆ-ಸ್ವಾನ್-ವಿ.ಸಿ. ಸಭಾಂಗಣದಲ್ಲಿ ನಡೆಯುವ ಪಿಂಚಣಿ ಮತ್ತು ಜಿಪಿಎಫ್ ಅದಾಲತ್‌ನಲ್ಲಿ ಭಾಗವಹಿಸಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ. ಅಥವಾ ಶಿವಮೊಗ್ಗ ಜಿಲ್ಲಾ ಖಜಾನೆಯ ಉಪನಿರ್ದೇಶಕರ ಕಚೇರಿಯಲ್ಲಿ ಮುಂಚಿತವಾಗಿ ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಮ್ಮ ಧರ್ಮದ ಮೌಲ್ಯ ಮತ್ತು ಸಂಸ್ಕೃತಿಯ ರಕ್ಷಣೆ ಮಾಡೋಣ- ಎಂ.ವಿಜಯ್

0

ನಮ್ಮೂರ ಬಳಗದ ವತಿಯಿಂದ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ದರ್ಶನಿಕ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಎಂ ವಿಜಯ್ ರವರು ಅದ್ವೈತ ತತ್ವದ ಜೊತೆಗೆ ವೇದಾಂತದ ಸತ್ಯವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಮಾನವ ಕಲ್ಯಾಣದ ಸಂದೇಶ ಸಾರಿ “ಎಲ್ಲರಿಗಾಗಿ ಶಂಕರ… ಎಲ್ಲೆಡೆಯೂ ಶಂಕರ…” ಎಂಬ ಆಶಯದಂತೆ ಸರ್ವರಿಗೂ ಜಗದ್ಗುರುಗಳ, ನಮ್ಮ ಧರ್ಮದ ಮೌಲ್ಯಗಳನ್ನು ತಿಳಿಸುವ ಸಂಕಲ್ಪ ಮಾಡೋಣ ನಮ್ಮ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು

ಕಾರ್ಯಕ್ರಮಕ್ಕೆ ವಿಶೇಷವಾಗಿ ಕವಿಗಳಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮೊಮ್ಮಗ ಚೈತನ್ಯ ಮಾಸ್ತಿ ರವರು ಆಗಮಿಸಿ ಶುಭ ಕೋರಿದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್ ಪಿ ಗಿರೀಶ್, ರಾಜೇಶ್ ಮಂದಾರ,ಎಸ್ ಬಸವರಾಜ್, ಪ್ರಶಾಂತ್ ರಾಯ್ , ಆರ್ ಕಿರಣ್ ,ಟಿ ಪಿಆರ್ ಸಂತೋಷ್ ವಕೀಲರು, ಗುರುಪ್ರಸಾದ್, ಎಂ. ರಾಕೇಶ್, ಕೆ ಎಲ್ ಪವನ್, ಕರಾಟೆ ವಿನೋದ್, ಮುರುಳಿ ಸಣ್ಣಕ್ಕಿ, ಕೇಶವ ಸಿಗೆಹಟ್ಟಿ , ಎಂ.ಸುಹಾಸ್, ಗಿರೀಶ್ ಶಾಸ್ತ್ರಿ, ಭವಾನಿ ರಾವ್, ಪೈಂಟರ್ ಕೃಷ್ಣಪ್ಪ ಇದ್ದರು