Saturday, May 16, 2026
Saturday, May 16, 2026
Home Blog Page 124

Shivamogga City Water Supply and Board ಜನವರಿ 18. ನೀರಿನ ಬಾಕಿ ಕರ ಪಾವತಿಮಾಡಲು ವಿಶೇಷ ಕೌಂಟರ್. ನೀರಿ ಸರಬರಾಜು & ಒಳಚರಂಡಿ ಪ್ರಕಟಣೆ

0

Shivamogga City Water Supply and Board ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2025-26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ಜ. 18 ರಂದು ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.
ಚಿಕ್ಕಲ್ ಶಿವನ ಪಾರ್ಕ್ ಹತ್ತಿರ, ಗಾಂಧೀನಗರ ಪಾರ್ಕ್ ಹತ್ತಿರ, ವಿನೋಬನಗರ ಕಲ್ಲಹಳ್ಳಿ ಅಭೀಷ್ಟವರ ಗಣಪತಿ ದೇವಸ್ಥಾನದ ಹತ್ತಿರ-ಕೆ.ಹೆಚ್.ಬಿ., ಪರಿಚಯ ಸ್ಟೋರ್ ಎದುರು ಓ.ಟಿ.ರಸ್ತೆ, ಕೃಷಿನಗರ ಗಣಪತಿ ದೇವಸ್ಥಾನದ ಹತ್ತಿರ. ಈ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಜರ್ಮನಿಯ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರಿಗೆ ಬೆಂಗಳೂರಲ್ಲಿ ಭವ್ಯ ಸ್ವಾಗತ

0

ಬೆಂಗಳೂರು ಭೇಟಿ ಸಂಬಂಧ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರು ತಮ್ಮ ನಿಯೋಗದೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಫೆಡರಲ್‌ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸಲರ್ ಮತ್ತು ಅವರ ನಿಯೋಗದವರನ್ನು ಬಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಮಯದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಕೆ.ಜಿ ಜಗದೀಶ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್,
ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗಳು ಹಾಗೂ ಜರ್ಮನಿ ಕಾನ್ಸೂಲೇಟ್ ಜನರಲ್ ನವದೆಹಲಿ ಕಚೇರಿಯ ಅಧಿಕಾರಿಗಳು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆಡರಲ್‌ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸಲರ್ ಮತ್ತು ಅವರ ನಿಯೋಗವು ಇಂದು ಬೆಂಗಳೂರಿನ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಇಂದು ಸಂಜೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ಸಾಗಲಿದ್ದಾರೆ.

ದೇವಿಕೊಪ್ಪದಲ್ಲಿ ಸಾಲಬಾಧೆ ತಾಳದೇ ವ್ಯಕ್ತಿ ನೇಣಿಗೆ ಶರಣು

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹರತಾಳಿನ ದೇವಿಕೊಪ್ಪದಲ್ಲಿ
ಸಾಲಭಾದೆಗೆ -ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ
ಘಟನೆ ನಡೆದಿದೆ.

ಮೃತರನ್ನು ಗುರುರಾಜ್ ಬಿನ್ ನಾರಾಯಣ್ ಆಚಾರ್ (45) ಎಂದು ಗುರುತಿಸಲಾಗಿದೆ. ಸಾಲ ಭಾದೆಯಿಂದ ಬೇಸತ್ತು ಮನೆ ಸಮೀಪದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ . ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

Department of Animal Husbandry and Veterinary Services ಸಾಕು ನಾಯಿ ಮಾಲೀಕರೇ, ಜನವರಿ 25, ಜಿಲ್ಲಾಮಟ್ಟದ ಸಾಕು ನಾಯಿ ಪ್ರದರ್ಶನಕ್ಕೆ ಸಜ್ಜಾಗಿರಿ

0

Department of Animal Husbandry and Veterinary Services ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜ.25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ.
Department of Animal Husbandry and Veterinary Services ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜ.22 ಕಡೆಯ ದಿನವಾಗಿದ್ದು ನೋಂದಣಿ ಶುಲ್ಕ ರೂ.200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ ಶ್ವಾನಗಳಿಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿರುವುದಿಲ್ಲ. ಇತರೆ ನಿಬಂಧನೆಗಳಿದ್ದು, ನೋಂದಣಿಗಾಗಿ ಡಾ.ಪ್ರಸನ್ನ ಕೆ ಎಂ, ಮೊ.ಸಂ: 9343464008, ಡಾ.ಶಿವರಾಜ್ 9448318878, ಡಾ.ಕೆಂದೇಶ್ 9880043904, ಡಾ.ಒ.ಎಸ್.ಪ್ರಕಾಶ್ 7628659762, ಎನ್.ರಾಜೇಂದ್ರ ಕಾಮತ್ 9902191333, ಗಜಾನನ ಹೆಗಡೆ 9742352112, 9448007542, 9482635093, 9480467707, 8762099569, 9980371799, 7337629259, 9611948135 ನ್ನು ಸಂಪರ್ಕಿಸಬಹುದೆAದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Soldier Welfare Department ದೂರವಾಣಿ ಮೂಲಕ ಕುಂದುಕೊರತೆ ಸ್ವೀಕಾರ, ಮಾಜಿ ಸೈನಿಕ ಕಲ್ಯಾಣ ಇಲಾಖೆ ಪ್ರಕಟಣೆ

0

Soldier Welfare Department ಜನವರಿ 14 ರಂದು ‘ಆರ್ಮಡ್ ಫೋರ್ಸಸ್ ವೆಟರನ್ಸ್ ಡೇ’ ಅಂಗವಾಗಿ ಮಾಜಿ ಸೈನಿಕರು ಹಾಗೂ ಅವಲಂಬಿತರುಗಳಿಗೆ ದೂರುವಾಣಿ ಮೂಲಕ ಕುಂದು ಕೊರತೆಗಳ ಆಲಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
Soldier Welfare Department ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ಹಾಗೂ ಕೇಂದ್ರ ಸ್ಥಾನದ ಜಂಟಿ ನಿರ್ದೇಶಕರು ಮಾಜಿ ಸೈನಿಕರು ಹಾಗೂ ಅವಲಂಬಿತರ ದೂರವಾಣಿ ಕರೆಗಳ ಮೂಲಕ ಅಹವಾಲುಗಳನ್ನು ಸ್ವೀಕರಿಸುವರು. ಮಾಜಿ ಸೈನಿಕರು ಹಾಗೂ ಅವಲಂಬಿತರು ತಮ್ಮ ತಮ್ಮ ಕುಂದು ಕೊರತೆಗಳನ್ನು ದೂರವಾಣಿ ಸಂಖ್ಯೆಗಳಾದ 080-25589459, 8105233863, 9871103814, 7892289635 ನ್ನು ಸಂಪರ್ಕಿಸಿ ಪ್ರಸ್ತಾಪಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ)ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

Adichunchanagiri ಶಿವಮೊಗ್ಗದ ಶರಾವತಿ ಮಹಿಳಾ ಮಂಡಳಿಯಿಂದ ಸಂಕ್ರಾಂತಿ ಆಚರಣೆ

0

Adichunchanagiri ಶಿವಮೊಗ್ಗ ನಗರದ ಶರಾವತಿ ಮಹಿಳಾ ಮಂಡಳಿ ವತಿಯಿಂದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಎಳ್ಳು-ಬೆಲ್ಲ ನೀಡುವುದರ ಮೂಲಕ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೆ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಎಳ್ಳು ಬೆಲ್ಲವನ್ನು ವಿತರಿಸಿ ಶುಭಾಶಯ ತಿಳಿಸಿದರು.

B.Y. Raghavendra ಎಲ್ಲಾ ವರ್ಗದವರ ಅಭ್ಯುದಯ ಮುಖ್ಯ- ಸಂಸದ ರಾಘವೇಂದ್ರ

0

B.Y. Raghavendra ಭದ್ರಾವತಿ ತಾಲೂಕಿನ ಅರಬಿಳಚಿ ಜಿ.ಪಂ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ 2024-25 ಮತ್ತು 2025-26ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ರವರೊಂದಿಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಸಭಾಭವನ, ಮರಾಠಾ ಸಮಾಜದ ಸಭಾಭವನ ಮತ್ತು ದೇವಾಂಗ ಸಮಾಜದ ಸಭಾಭವನ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು:

ಎಲ್ಲಾ ವರ್ಗದ ಜನರ ಅಭ್ಯುದಯ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಮುದಾಯ ಭವನಗಳು ಸದ್ಬಳಕೆಯಾಗಲಿ ಎಂದು ಸಂಸದ ರಾಘವೇಂದ್ರ ಹಾರೈಸಿದರು

B.Y. Raghavendra ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಕೆ ಜಗದೀಶ್, ಜಿ.ಪಂ ಮಾಜಿ ಸದಸ್ಯರಾದ ಶ್ರೀ ಶ್ರೀನಿವಾಸ್, ದಿಶಾ ಸಮಿತಿ ಸದಸ್ಯರಾದ ಶ್ರೀ ಗಿರೀಶ್ ಭದ್ರಾಪುರ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ರಾಜು ತಲ್ಲೂರು,ಮರಾಠ ಸಮಾಜದ ಅಧ್ಯಕ್ಷರಾದ ಶ್ರೀ ರುದ್ರೋಜಿ ರಾವ್, ತಾ.ಪಂ ಮಾಜಿ ಸದಸ್ಯರಾದ ಶ್ರೀ ನಾಗರಾಜಪ್ಪ ನವರು, ದೇವಾಂಗ ಸಮಾಜದ ಅಧ್ಯಕ್ಷರಾದ ಶ್ರೀ ನಾಗೇಂದ್ರ, ಉಪ್ಪಾರ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರೇಖಾ ಭೋಸ್ಲೆ, ಅರಬೀಳಚಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ರುದ್ರೋಜಿ, ಸಿದ್ದಪ್ಪ, ಉಜಿನಪ್ಪ ಸೇರಿದಂತೆ ಅನೇಕ ಗಣ್ಯರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದರು.

Klive Special Article ಅತ್ತೆ-ಸೊಸೆ ಸ್ಪರ್ಧಿಗಳಲ್ಲ, ಸಂಸಾರದ ಸೌಹಾರ್ದ ಜೀವಿಗಳು

0

ಲೇ: ಶ್ವೇತಾ ಸುಧೀರ್ ಶೃಂಗೇರಿ.

Klive Special Article ಅತ್ತೆ–ಸೊಸೆ ಸಂಬಂಧವನ್ನು ನಮ್ಮ ಸಮಾಜದಲ್ಲಿ ಬಹುಸಾರಿ ಸಂಘರ್ಷದ ಕಣ್ಣಿನಿಂದಲೇ ನೋಡಲಾಗುತ್ತದೆ. “ಅತ್ತೆ–ಸೊಸೆ ಸೌಹಾರ್ದದಿಂದ ಇರುವುದು ಅಸಾಧ್ಯ” ಎಂಬ ಕಲ್ಪನೆ ಪೀಳಿಗೆಗಳಿಂದ ಹರಡಿಕೊಂಡು ಬಂದಿದೆ. ಆದರೆ ಈ ಕಲ್ಪನೆ ನಿಜಕ್ಕೂ ಅಷ್ಟು ಅಚಲವೇ? ಮಾನವ ಸಂಬಂಧಗಳ ಮೂಲ ಸ್ವರೂಪವನ್ನು ನೋಡಿದರೆ, ಅತ್ತೆ–ಸೊಸೆ ನಡುವಿನ ಅಸಮಾಧಾನ ಅನಿವಾರ್ಯವಲ್ಲ; ಅದು ತಪ್ಪು ಕಲ್ಪನೆಗಳು, ಅಹಂಕಾರ, ಮತ್ತು ಪರಸ್ಪರದ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದರಿಂದ ಮಾತ್ರ ಉಂಟಾಗುತ್ತದೆ.
ಅತ್ತೆ ಅಮ್ಮನಾದಾಗ, ಸೊಸೆಯೂ ಕೂಡಾ ಮಗಳು ಆಗ್ತಾಳೆ, ಅತ್ತೆಯಾದವರು ಅತ್ತೆಯ ಸ್ಥಾನವನ್ನು ತುಂಬುವ ಭರದಲ್ಲಿ ಅತ್ತೆಯಂತೆ ವರ್ತಿಸಿ ಸೊಸೆಯನ್ನು ದೂರೋದ್ರಲ್ಲಿ ಅರ್ಥ ಇಲ್ಲ ಅಲ್ಲವೇ?
ಅತ್ತೆಯ ದೃಷ್ಟಿಯಲ್ಲಿ, ಸೊಸೆ ತನ್ನ ಮನೆಗೆ ಹೊಸದಾಗಿ ಬಂದವಳು ಮಾತ್ರವಲ್ಲ; ತನ್ನ ಮಗನ ಜೀವನದಲ್ಲಿ ಹೊಸ ಸ್ಥಾನ ಪಡೆದವಳು. ವರ್ಷಗಳ ಕಾಲ ಮಗನನ್ನು ಸಾಕಿ ಬೆಳೆಸಿದ ಅತ್ತೆಗೆ, ಆ ಮಗನ ಮೇಲಿನ ಪ್ರೀತಿ ಮತ್ತು ಹಕ್ಕು ಸಹಜ. ಆದರೆ ಸೊಸೆ ಬಂದ ನಂತರ, ಆ ಹಕ್ಕು ಕಡಿಮೆಯಾಗುತ್ತಿದೆ ಎಂಬ ಭಾವನೆ ಅತ್ತೆಯ ಮನಸ್ಸಿನಲ್ಲಿ ಮೂಡಬಹುದು. ಇದರಿಂದ ಸೊಸೆಯನ್ನು “ಪ್ರತಿಬಂಧಿ”ಯಂತೆ ಕಾಣುವ ಪ್ರವೃತ್ತಿ ಉಂಟಾಗುತ್ತದೆ. ಇದು ಅತ್ತೆಯ ತಪ್ಪಲ್ಲ; ಬದಲಾವಣೆಯ ಭಯ ಮತ್ತು ಬಂಧನದ ಆಳವೇ ಅದರ ಮೂಲ. ಸೊಸೆಯ ಆಯ್ಕೆಯ ಉದ್ದೇಶವೇ ನನ್ನ ಮಗ ಚೆನ್ನಾಗಿ ಇರ್ಬೇಕು ಅನ್ನೋದು ಮನಸಲ್ಲಿ ಇರುವಾಗ, ಸೊಸೆ ಬಂದಮೇಲೆ ಮಗ ದೂರಾಗುತ್ತಾನೆ ಅನ್ನೋ ಭಯದ ಮನಸ್ಥಿತಿ ಏಕೆ ಬೇಕು?
Klive Special Article ಇನ್ನೊಂದು ಕಡೆ, ಸೊಸೆಯ ಮನಸ್ಸಿನಲ್ಲಿ ಬೇರೆ ಚಿಂತನೆ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗಳು—ಇವೆಲ್ಲದರ ನಡುವೆ ಗಂಡನ ಪ್ರೀತಿ ತನ್ನದಾಗಿರಬೇಕು ಎಂಬ ಭಾವನೆ ಸಹಜ. ಅತ್ತೆ ಗಂಡನ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದಾಳೆ ಎಂಬ ಅನುಮಾನ ಸೊಸೆಗೆ ಮೂಡಬಹುದು. ಇದರಿಂದ ಅತ್ತೆ ತನ್ನ ಗಂಡನನ್ನು ತನ್ನಿಂದ ದೂರ ಮಾಡುತ್ತಿದ್ದಾಳೆ ಎಂಬ ಭಾವನೆ ಬಲವಾಗುತ್ತದೆ. ಈ ಮನಸ್ಥಿತಿಗಿಂತ ಮಗನಿಗೆ ಅಮ್ಮನು ಕೂಡಾ ಮುಖ್ಯ ಅನ್ನೋದನ್ನ ಅರ್ಥ ಮಾಡ್ಕೊಂಡು ಬಿಟ್ರೆ ಜೀವನ ಸ್ವರ್ಗಕ್ಕೆ ಸಮ ಅಲ್ವೇ?
ಆದರೆ ನಿಜವಾಗಿ ನೋಡಿದರೆ, ಈ ಇಬ್ಬರ ನಡುವೆ ಸ್ಪರ್ಧೆ ಇರಬೇಕಾದ ಅಗತ್ಯವೇ ಇಲ್ಲ. ಅತ್ತೆ ತನ್ನ ಮಗನನ್ನು ಮಗುತನದಿಂದಲೇ ಸಾಕಿ ಬೆಳೆಸಿದವಳು; ಅವಳ ಪಾತ್ರ ಅತ್ಯಂತ ಮಹತ್ವದದು. ಆದರೆ ಮದುವೆಯ ನಂತರ, ಆ ಜವಾಬ್ದಾರಿಯ ಒಂದು ಭಾಗವನ್ನು ಸೊಸೆಗೆ ಹಸ್ತಾಂತರಿಸುವುದು ಸಹಜ. ಇದು ಕಳೆದುಕೊಳ್ಳುವಿಕೆ ಅಲ್ಲ—ಹೊಸ ಸಂಬಂಧಕ್ಕೆ ಅವಕಾಶ ನೀಡುವಿಕೆ, ಜವಾಬ್ದಾರಿಯನ್ನ ಸೊಸೆಗೆ ನೀಡಿ ನಿರ್ವಹಣೆ ಮಾಡೋ ಕಲೆಯನ್ನು ಕಲಿಸುವ ಪರಿ, ವಯಸ್ಸು ಆಗ್ತಾ ಹೋದ ಹಾಗೆ ಜವಾಬ್ದಾರಿ ಮಕ್ಕಳಿಗೆ ನೀಡುತ್ತಾ ವೃದ್ಧಾಪ್ಯಕ್ಕೆ ಸಾಗೋದು ಜಗದ ನಿಯಮ ಕೂಡಾ, ಅದೇ ರೀತಿ, ಸೊಸೆಯೂ ಅತ್ತೆಯನ್ನು ಕೇವಲ “ಗಂಡನ ತಾಯಿ”ಯಾಗಿ ನೋಡದೆ, ತಾಯಿಯ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಿದರೆ, ಸಂಬಂಧದಲ್ಲಿ ಮೃದುತ್ವ ಹೆಚ್ಚುತ್ತದೆ.
ಸೌಹಾರ್ದದ ಮೂಲ ಪರಸ್ಪರ ಗೌರವ. ಅತ್ತೆ ಸೊಸೆಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು; ಸೊಸೆ ಅತ್ತೆಯ ಜೀವನದಲ್ಲಿ ಬದಲಾವಣೆಗಳು ಸಹಜವೆಂದು ಒಪ್ಪಿಕೊಳ್ಳಬೇಕು. ಮಾತಿನ ಮೃದುತ್ವ, ಪರಸ್ಪರದ ಭಾವನೆಗಳಿಗೆ ಗೌರವ, ಮತ್ತು ಸ್ವಲ್ಪ ಸಹನೆ—ಇವು ಇದ್ದರೆ ಅತ್ತೆ–ಸೊಸೆ ಸಂಬಂಧ ಕಠಿಣವಾಗಬೇಕಾದ ಅಗತ್ಯವೇ ಇಲ್ಲ.
ಅಂತಿಮವಾಗಿ, ಅತ್ತೆ–ಸೊಸೆ ಸಂಬಂಧವು ಸ್ಪರ್ಧೆಯಲ್ಲ; ಅದು ಎರಡು ಮಹಿಳೆಯರ ನಡುವೆ ನಿರ್ಮಾಣವಾಗುವ ಹೊಸ ಬಂಧ. ಈ ಬಂಧವನ್ನು ಪ್ರೀತಿ, ಗೌರವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಿಂದ ಪೋಷಿಸಿದರೆ, ಸೌಹಾರ್ದದಿಂದ ಬದುಕುವುದು ಅಸಾಧ್ಯವಲ್ಲ—ಅದು ಸುಲಭವಾಗಿ ಸಾಧ್ಯವಾಗುವ ಸುಂದರ ವಾಸ್ತವ.
ಶ್ವೇತಾ ಸುಧೀರ್ ಶೃಂಗೇರಿ
ಜಿನೀವಾ, ಸ್ವಿಟ್ಜರ್ಲ್ಯಾಂಡ್ ಇಂದ,

Information and Public Relations Department ರಘುನಾಥ್ ಚ.ಹ., ಬಸವರಾಜ್ ಮೇಗಲಕೇರಿ,ಮತ್ತು ಡಾ.ರಾಜಶೇಖರ ಹತಗುಂದಿ ಅವರಿಗೆ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಘೋಷಣೆ.

0

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ.

2020 ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿದ , ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಆಯ್ದ 20 ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಗ್ರಹ “ನಮೋ ವೆಂಕಟೇಶ” ಕೃತಿ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಪತ್ರರ್ತರಾದ ಡಾ.ರಾಜಶೇಖರ ಹತಗುಂದಿ ಹಾಗೂ ಬಸವರಾಜ ಮೇಗಲಕೇರಿ ಅವರು 2020 ನೇ ಕ್ಯಾಲೆಂಡರ್ ವರ್ಷದ ಕೃತಿಯನ್ನು ಆಯ್ಕೆ ಮಾಡಿದ್ದರು.

2021 ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ ,ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ಬರೆದ ಡಾ.ರಾಜಕುಮಾರ್ ಬದುಕಿನ ಕುರಿತ “ಅಂತರಂಗದ ಅಣ್ಣ” ಕೃತಿ ಆಯ್ಕೆಯಾಗಿದೆ. ಸಾಹಿತಿ ಡಾ.ಚಿದಾನಂದ ಸಾಲಿ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

Information and Public Relations Department ಪ್ರಶಸ್ತಿಯು ಲೇಖಕರು ಹಾಗೂ ಪ್ರಕಾಶಕರಿಬ್ಬರಿಗೂ ತಲಾ 20 ಸಾವಿರ ರೂ.ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕಗಳನ್ನು ಒಳಗೊಂಡಿದೆ ಎಂದು ಎಂದು ವಾರ್ತಾ ಇಲಾಖೆ ಜಂಟಿ ನಿರ್ದೇಶಕ ,ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N.Chennabasappa ಶಿವಮೊಗ್ಗದ 1 & 9 ನೇ ವಾರ್ಡುಗಳಿಗೆ ಶಾಸಕ ಚೆನ್ನಿ ಭೇಟಿ. ಸಾರ್ವಜನಿಕ ಸಮಸ್ಯೆ ಪರಿಹಾರಕ್ಕೆ ಸೂಚನೆ

0

S.N.Chennabasappa ಶಿವಮೊಗ್ಗ ನಗರದ ಶಾರದಮ್ಮ ಬಡಾವಣೆ ಹಾಗೂ ರಾಜೇಂದ್ರ ನಗರದಲ್ಲಿ ಎದುರಾಗಿರುವ ಮೂಲಭೂತ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್ ನಂಬರ್ 1 ಮತ್ತು 9ರಲ್ಲಿ ಭೇಟಿ ನೀಡಿದ ಅವರು, ಶಾರದಮ್ಮ ಬಡಾವಣೆಯ ರಸ್ತೆ ಮತ್ತು ಯುಜಿಡಿ ಸಮಸ್ಯೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು.

ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ, ಕೂಡಲೇ ಸರಿಪಡಿಸಲು ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಬಳಿಕ ರಾಜೇಂದ್ರ ನಗರದ ಪಾರ್ಕ್ ವೀಕ್ಷಣೆ ನಡೆಸಿ, ಉದ್ಯಾನವನಗಳು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಪೂರಕವಾಗಿರಬೇಕು. ಅಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.

S.N.Chennabasappa ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರು ಹಾಗೂ ಒಂದನೇ ಮಹಾಶಕ್ತಿ ಕೇಂದ್ರದ ಪ್ರಭಾರಿಗಳಾದ ಗಾಡಿಕೊಪ್ಪ ಶ್ರೀ ಕುಮಾರ್, ಬೊಮ್ಮನಕಟ್ಟೆ ರಾಜು, ಪ್ರಮುಖರಾದ ನಾಗರಾಜ್, ಮಹಾನಗರ ಪಾಲಿಕೆಯ ಅಧಿಕಾರಿಗಳು, ಬಡಾವಣೆಯ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.