Thursday, June 18, 2026
Thursday, June 18, 2026

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

Date:

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ. ಪ್ರಕೃತಿಯಲ್ಲಿ ಮಾನವನ ತೀವ್ರ ತೆರನಾದ ಹಸ್ತಕ್ಷೇಪದಿಂದಾಗಿ ಕಾಲ ಕಳೆದಂತೆ ಭೂಮಿಯ ಸ್ಥಿತಿ ಅಧೋಗತಿಗೆ ತಲುಪುತ್ತಿದೆ. ಮನುಷ್ಯ ಮಾತ್ರವಲ್ಲ, ಪ್ರಾಣಿ – ಪಕ್ಷಿಗಳು, ಗಿಡ – ಮರಗಳು ಕೂಡ ತಮ್ಮ ಉಳಿವಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಂದು ವಿಶ್ವ ಭೂಮಿದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವ್ಯಕ್ತಪಡಿಸಿದ್ದಾರೆ

ಸಾವಿರಾರು ಜೀವ ಪ್ರಭೇದಗಳು ಈಗಾಗಲೇ ಕಣ್ಮರೆಯಾಗಿವೆ, ಇನ್ನೂ ನೂರಾರು ಜೀವ ಸಂಕುಲಗಳು ಅಳಿವಿನ ಅಂಚು ತಲುಪಿವೆ.

ಅರಣ್ಯನಾಶ, ವಾಯುಮಾಲಿನ್ಯ, ಜಲಮಾಲಿನ್ಯ, ಯುದ್ಧ ಮುಂತಾದ ಕಾರಣಗಳಿಂದಾಗಿ ಭೂಮಿಯ ಮೇಲಿನ ಪ್ರಾಕೃತಿಕ ಸಮತೋಲನ ಹಿಂದಿನಂತೆ ಇಂದಿಲ್ಲ.
ಗಾಳಿ, ನೀರು, ಬೆಳಕು, ಬದುಕು ಈ ಎಲ್ಲವನ್ನೂ ಕೊಟ್ಟಿರುವ ಭೂಮಿಗೆ ಮರಳಿ ಮನುಷ್ಯ ಕೊಡುತ್ತಿರುವುದು ಹಲವು ವಿಧದ ಮಾಲಿನ್ಯಗಳು. ಈ ನಡವಳಿಕೆ, ಮನಸ್ಥಿತಿ ಬದಲಾಗಬೇಕು, ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು.

ಭೂಮಿಯೊಂದಿಗಿನ ತನ್ನ ಸಖ್ಯವನ್ನು ವಿಮರ್ಷೆಗೊಡ್ಡಿಕೊಳ್ಳಲು ಮನುಕುಲಕ್ಕಿದು ಸಕಾಲ. ವಿಶ್ವ ಭೂದಿನವಾದ ಇಂದು ಭೂಮಿಯ ಸಂರಕ್ಷಣೆ, ಸಮತೋಲನ ಕಾಪಾಡುವ ಪ್ರತಿಜ್ಞೆ ಸ್ವೀಕರಿಸೋಣ.
ನಾವು ಬಾಳೋಣ, ಮುಂದಿನ ತಲೆಮಾರಿಗೂ ಸ್ವಸ್ಥ, ಸುಂದರ ಭೂಮಿಯನ್ನು ಉಳಿಸಿ ಹೋಗೋಣ.

CM Siddharamaiah ವಿಶ್ವ ಭೂದಿನವು ಸರ್ವರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಎಂದು ಹಾರೈಸುತ್ತೇನೆ. ಎಂದು ಮುಖ್ಯಮಂತ್ರಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...