Klive Special Article ಮಹಾರಾಷ್ಟರದ ಪಂಢರಪುರದ ಸಮೀಪ ಬಾಮಾನಿ ಅಥವಾ ಬಾಹ್ಮನಿ ಎಂಬ ಸಣ್ಣ ಹಳ್ಳಿಯೊಂದಿದೆ. ಅಲ್ಲಿ 1270ರಲ್ಲಿ ದಮಶೇಟ್ ಮತ್ತು ಗೊನೈ ಎಂಬ ದಂಪತಿಗಳ ಪುತ್ರನಾಗಿ ಜನಿಸಿದ ನಾಮದೇವ ಅತ್ಯಂತ ಕುಶಾಗ್ರಮತಿ ಹುಡುಗ. ಬಾಲ್ಯದಿಂದಲೇ ಪಾಂಡುರಂಗನ ಪರಮ ಭಕ್ತನಾಗಿದ್ದವನು ನಾಮದೇವ. ಪಾಂಡುರಂಗನ ಪರಮ ಭಕ್ತರಲ್ಲಿ ಅಗ್ರಗಣ್ಯ ಎಂದರೆ ತಪ್ಪಾಗಲಾರದು. ಸ್ವಹಸ್ತದಿಂದ ಪಾಂಡುರಂಗನಿಗೆ ಹಾಲು ಕುಡಿಸಿದ ಮಹಾನ್ ಭಕ್ತ. ಈ ನಾಮದೇವ ತನ್ನ ವೃತ್ತಿಯಿಂದ ದರ್ಜಿ, ಪ್ರವೃತ್ತಿಯಿಂದ ಸಂತ, ಜ್ಞಾನಿ, ತತ್ತ್ವಶಾಸ್ತ್ರಜ್ಞ ಹೀಗೆ ಹಲವು ಹೆಸರುಗಳಲ್ಲಿ ನಾವು ಕರೆಯಲು ಸಾಧ್ಯ. ಏಕೆಂದರೆ ಮನುಷ್ಯನೊಬ್ಬ ತಾನು ದೇವದೂತನಾಗಿದ್ದರೂ ಸಹಾ ಗುರುವಿನ ಕೃಪೆಯಾಗದೇ ಜೀವನ್ಮುಕ್ತಿ ಸಾಧ್ಯವಿಲ್ಲ ಎಂದು ಜಗತ್ತಿಗೆ ತಿಳಿಸಿದವನು ಈ ನಾವದೇವ.
ಬ್ರಾಹ್ಮನಿ/ಬಾಮನಿಯಲ್ಲಿ ಕೇಶವರಾಜ ಎಂಬ ಕೃಷ್ಣನ ದೇವಾಲಯವಿದೆ. ಪ್ರತಿದಿನವೂ ಕೇಶವರಾಜನಿಗೆ ಹಾಲಿನ ನೈವೇದ್ಯ ಮಾಡಿ ನಂತರ ಊಟ ಮಾಡುವುದು. ದಾಮಾಶೇಟ್ ಕುಟುಂಬದ ವಾರಿಯಾಗಿತ್ತು. ಪ್ರತಿದಿನವೂ ಈ ಪ್ರಕ್ರಿಯೆ ನಡೆಯಬೇಕು. ತಲೆಮಾರುಗಳಿಂದ ನಡೆದುಬಂದ ಸಂಪ್ರದಾಯವದು. ಅದೊಂದು ದಿನ ನಾಮನು ಸಣ್ಣ ಹುಡುಗ ಕೇಶವನಿಗೆ ನೈವೇದ್ಯ ಮಾಡಿಕೊಂಡು ಬಾ ಎಂದು ತಾಯಿಯು ಬಟ್ಟಲಿನಲ್ಲಿ ಹಾಲು ಕೊಟ್ಟು ಕಳಿಸುತ್ತಾಳೆ. ಅದನ್ನು ತೆಗೆದುಕೊಂಡು ಹೋದ ಹುಡುಗ ಕೇಶವರಾಜನ ವಿಗ್ರಹದ ಮುಂದಿಟ್ಟು ಹಾಲು ಕುಡಿಯಲು ತಿಳಿಸುತ್ತಾನೆ. ಮುಗ್ಧ ಹುಡುಗನಿಗೆ ತಿಳಿಯದು ಅದು ವಿಗ್ರಹ ಅದೂ ಅಲ್ಲದೇ ಸನಾತನ ಧರ್ಮದಲ್ಲಿ ದೇವತೆಗಳು ಅಮೃತಪಾನ ಮಾಡಿರುವವರು, ಅವರು ಸ್ವೀಕರಿಸಬೇಕೆಂದಿಲ್ಲ, ಕೇವಲ ಅದನ್ನು ನೋಡಿದರೆ ಸಾಕು ಅಷ್ಟರಿಂದಲೇ ಸ್ವೀಕರಿಸಿದಂತಾಗುತ್ತದೆ ಅದರ ನಂತರ ಅದು ನಮಗೆ ಅಂದರೆ ಮನುಷ್ಯರಿಗೆ ಪ್ರಸಾದವಾಗುತ್ತದೆ. ಆದರೆ ಪುಟ್ಟ ಮಗು ನಾಮದೇವ ವಿಗ್ರಹದ ಎದುರಿಗೆ ನಿಂತು ಹಾಲು ಕುಡಿ ಎಂದಾಗ ಕೇಶವರಾಜ ನಿಶ್ಚಲನಾಘಿ ನಿಂತಿದ್ದಾನೆ. 3-4 ಬಾರಿ ಕೇಳಿಕೊಂಡರೂ ಅವನು ಸ್ವೀಕರಿಸುತ್ತಿಲ್ಲ, ಈಗ ನಾಮದೇವನಿಗೆ ಸಿಟ್ಟು ಬಂದಿದೆ “ಕೇಶವರಾಯ ! ನೀನು ಒಂದುವೇಳೆ ಹಾಲು ಕುಡಿಯದಿದ್ದರೆ ನನಗೆ ತಡವಾಗಿ ತಾಯಿಯು ಬೈಯ್ಯಬಹುದು, ಬೇಗನೇ ಕುಡಿದುಬಿಡು, ಇಲ್ಲವಾದಲ್ಲಿ ನಾನು ಇಲ್ಲಿಯೇ ಪ್ರಾಣ ಬಿಡುತ್ತೇನೆ “ಎಂದಾಗ ಭಾವಗ್ರಾಹಿ ಜನಾರ್ದನ ಅವನ ಕೈಯಿಂದ ಹಾಲನ್ನು ಸ್ವೀಕರಿಸಿ ಕುಡಿದುಬಿಡುತ್ತಾನೆ. ಸಂತೋಷದಿಂದ ನಾಮನು ಹಿಂತಿರುತಿದ್ದಾನೆ, ಮನೆಯಲ್ಲಿ ತಾಯಿ ನೋಡುತ್ತಾಳೆ ಬಟ್ಟಲಿನಲ್ಲಿ ಇದ್ದ ಹಾಳು ಖಾಲಿಯಾಗಿದೆ. ಏನಾಯಿತೆಂದು ಕೇಳಲು ನಡೆದ ಸಂಗತಿಯನ್ನು ತಾಯಿಗೆ ಮಗ ವಿವರಿಸುತ್ತಾನೆ. ಆದರೆ ಅದನ್ನು ನಂಬುವವರು ಯಾರು ? ನೀನೇ ಅದನ್ನು ಕುಡಿದಿರುವೆ ಸುಳ್ಳು ಹೇಳುವೆಯಾ ? ಎನ್ನಲು ಮರುದಿನ ನಾಮದೇವನು ತನ್ನೊಡನೆ ಅವರನ್ನು ಕರೆದುಕೊಂಡು ಹೋಗಿ ಕೇಶವರಾಜನು ಹಾಲು ಕುಡಿಯುವುದನ್ನು ತೋರಿಸುತ್ತಾನೆ.
ಇದು ನಾಮದೇವನಿಗೆ ಭಗವಂತನ ಮೇಲೆ ಒಲವು ಬರಲು ಮೊದಲ ಹೆಜ್ಜೆಯಾಯಿತು. ಆದಾಗ್ಯೂ, ಇತರ ವಿಷಯಗಳಲ್ಲಿ, ನಾಮದೇವ್ ಅವರ ಹೆತ್ತವರಿಗೆ ಮತ್ತು ನಂತರ ಅವರ ಹೆಂಡತಿ ಮತ್ತು ಇತರ ಸಂಬಂಧಿಕರಿಗೆ ಹತಾಶೆಯಾಗಿದ್ದರು. ಆರಂಭದಿಂದಲೂ ಅವರಿಗೆ ಲೌಕಿಕ ವ್ಯವಹಾರಗಳಲ್ಲಿ ಆಸಕ್ತಿ ಇರಲಿಲ್ಲ; ಅವರು ಶಾಲೆಯಲ್ಲಿ ಅಧ್ಯಯನವನ್ನು ನಿರ್ಲಕ್ಷಿಸಿದರು; ಅವರು ತಮ್ಮ ತಂದೆಯ ದರ್ಜಿ ವೃತ್ತಿಯಲ್ಲಿ ಅಥವಾ ಯಾವುದೇ ಇತರ ವ್ಯಾಪಾರದಲ್ಲಿ ಆಸಕ್ತಿ ವಹಿಸಲಿಲ್ಲ. ವಿಠ್ಠಲನ ಭಕ್ತಿಯಲ್ಲಿ ಹಗಲು ರಾತ್ರಿ ಕಳೆಯುವುದು ಅವರ ಏಕೈಕ ಆಸಕ್ತಿಯಾಗಿತ್ತು. ಅವರ ಪೋಷಕರು ವಯಸ್ಸಾಗುತ್ತಿದ್ದರು; ಕುಟುಂಬದ ಸಮೃದ್ಧಿ ಕ್ಷೀಣಿಸುತ್ತಿತ್ತು. ಆದ್ದರಿಂದ, ಅವರ ಅತ್ಯಂತ ಪ್ರೀತಿಯ ಆಶಯವೆಂದರೆ ನಾಮದೇವ್, ಅವರ ಭಕ್ತಿಗಳಿಗೆ ಸಮಂಜಸವಾದ ಬಿಡುವಿನ ಸಮಯವನ್ನು ಮೀಸಲಿಡುತ್ತಾ, ಕುಟುಂಬವನ್ನು ನೆಮ್ಮದಿಯಿಂದ ನಿರ್ವಹಿಸಲು ಸಹಾಯ ಮಾಡಬೇಕು. ಆದ್ದರಿಂದ, ನಾಮದೇವ್ ಅವರನ್ನು ಒಂದು ದಿನ ಕೆಲವು ಬಟ್ಟೆಗಳನ್ನು ಮಾರಾಟ ಮಾಡಲು ಬಜಾರಿಗೆ ಕಳುಹಿಸಲಾಯಿತು. ಆದರೆ ನಾಮದೇವ್ ವ್ಯಾಪಾರದ ತಂತ್ರಗಳ ಬಗ್ಗೆ ನಿರಪರಾಧಿಯಾಗಿದ್ದರು. ಅವರಿಗೆ, ಬೆಲೆಗಳು, ಹಣ ಮತ್ತು ಅದರ ಮೌಲ್ಯದಂತಹ ವಿಷಯಗಳು ತಿಳಿದಿಲ್ಲದ ವಿಷಯಗಳಾಗಿವೆ. ಅವರ ತಂದೆ ಒತ್ತಾಯಿಸಿದ್ದರಿಂದ ಅವರು ಬಟ್ಟೆಗಳೊಂದಿಗೆ ಬಜಾರಿಗೆ ಹೋದರು. ಅವರು ಭಜನೆ ಮಾಡುತ್ತಾ ಕಲ್ಲಿನ ಮೇಲೆ ಕುಳಿತು, ಬಟ್ಟೆಗಳನ್ನು ಮಾರಾಟ ಮಾಡಲು ಅಲ್ಲಿಗೆ ಹೋಗಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತರು. ಕೆಲವು ಗಂಟೆಗಳ ನಂತರ ಸೂರ್ಯ ಮುಳುಗಿತು ಮತ್ತು ಸಂಜೆ ಭಕ್ತಿ ಪ್ರದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುವ ಸಮಯ ಬಂದಿತು. ಆಗ ಅವನಿಗೆ ತಾನು ಬಟ್ಟೆಗಳನ್ನು ಮಾರಿಲ್ಲ ಮತ್ತು ತನ್ನ ತಂದೆಯಿಂದ ಹೊಡೆಯಲ್ಪಡುತ್ತೇನೆಂದು ನೆನಪಾಯಿತು. ದೇವಸ್ಥಾನಕ್ಕೆ ಹೋಗಲು ಅವನಿಗೆ ತಾಳ್ಮೆ ಇರಲಿಲ್ಲ. ಆದ್ದರಿಂದ ಅವನು ಎಲ್ಲಾ ಬಟ್ಟೆಗಳನ್ನು ತಾನು ಕುಳಿತಿದ್ದ ಕಲ್ಲಿಗೆ ಮಾರಿ, ಅಂದರೆ, ಬಟ್ಟೆಗಳನ್ನು ಕಲ್ಲಿನ ಮೇಲೆ ಇಟ್ಟುಕೊಂಡು, ಮೊದಲನೆಯವನು ಮರುದಿನ ಹಣವನ್ನು ಪಾವತಿಸುತ್ತಾನೆ ಎಂಬ ಖಾತರಿಯಾಗಿ ಮತ್ತೊಂದು ಕಲ್ಲನ್ನು ನೇಮಿಸಿ, ದೇವಸ್ಥಾನಕ್ಕೆ ಹೋದನು. ನಾಮದೇವನ ತಂದೆ ತನ್ನ ಮಗನ ಸಾಹಸಗಳನ್ನು ಕೇಳಿ ಕೋಪಗೊಂಡು ಹಣವನ್ನು ಖಾತರಿಪಡಿಸಿದ ಧೋಂಡ್ಯ (ಅಂದರೆ ಕಲ್ಲು ಮತ್ತು ಮಹಾರಾಷ್ಟ್ರದ ಕೆಲವು ವರ್ಗದ ಜನರಲ್ಲಿ ಇದನ್ನು ಸರಿಯಾದ ಹೆಸರಾಗಿಯೂ ಬಳಸಲಾಗುತ್ತದೆ) ಅನ್ನು ಹೊರಗೆ ತರುವಂತೆ ಕೇಳಿಕೊಂಡನು. ಮರುದಿನ ನಾಮದೇವನು ಬಜಾರ್ಗೆ ಹಿಂತಿರುಗಿದನು, ರಾತ್ರಿಯಲ್ಲಿ ಬಟ್ಟೆಗಳು ಕಣ್ಮರೆಯಾಗಿರುವುದನ್ನು ಕಂಡುಕೊಂಡನು ಮತ್ತು ಎರಡನೇ ಕಲ್ಲನ್ನು (ಧೋಂಡ್ಯ) ಮನೆಗೆ ತೆಗೆದುಕೊಂಡು ಹೋದನು, ಏಕೆಂದರೆ ಅದು ಹಣವನ್ನು ಪಾವತಿಸಲು ನಿರಾಕರಿಸಿತು, ಮತ್ತು ಅದನ್ನು ಒಂದು ಕೋಣೆಯಲ್ಲಿ ಬೀಗ ಹಾಕಿದನು. ನಂತರ ಅವನು ದೇವಸ್ಥಾನಕ್ಕೆ ಹೋಗಿ ವಿಠ್ಠಲನಿಗೆ ಎಲ್ಲಾ ಘಟನೆಗಳನ್ನು ವಿವರಿಸಿದನು ಮತ್ತು ತನ್ನ ಕಷ್ಟಗಳನ್ನು ಸಹ ವಿವರಿಸಿದನು. ನಾಮದೇವ್ ಅವರ ತಂದೆ ಧೋಂಡ್ಯ ಅವರನ್ನು ಹಣದ ಖಾತರಿ ನೀಡಿದವರನ್ನು ತೋರಿಸಲು ಕೇಳಿದಾಗ, ನಾಮದೇವ್ ಅವರು ಧೋಂಡ್ಯ ಅವರನ್ನು ಮನೆಯ ಮುಚ್ಚಿದ ಕೋಣೆಯಲ್ಲಿ ಇರಿಸಲಾಗಿದೆ ಎಂದು ಉತ್ತರಿಸಿ ದೇವಸ್ಥಾನಕ್ಕೆ ಓಡಿಹೋದರು. ಹಣಕ್ಕಾಗಿ ಬೇಡಿಕೆ ಇಡಲು ತಂದೆ ಕೋಣೆಯನ್ನು ತೆರೆದಾಗ, ಅವರಿಗೆ ಆಶ್ಚರ್ಯವಾಗುವಂತೆ ಒಂದು ಚಿನ್ನದ ಮುದ್ದೆ ಸಿಕ್ಕಿತು. ತಂದೆಯ ಸಂತೋಷ ಅಪಾರವಾಗಿತ್ತು; ಆದರೆ ನಾಮದೇವ್ ಅದಕ್ಕೆ ಅಸಡ್ಡೆ ತೋರಿದರು. ಹೊಡೆತದಿಂದ ತಮ್ಮನ್ನು ರಕ್ಷಿಸಿದ್ದಕ್ಕಾಗಿ ಅವರು ದೇವರನ್ನು ಸ್ತುತಿಸಿದರು. ಹೀಗೆಯೇ ನಡೆಯಿತು. ನಾಮದೇವ್ ರಾಧಾ ಬಾಯಿಯನ್ನು ವಿವಾಹವಾದರು. ರಾಧಾ ಬಾಯಿ ಒಬ್ಬ ಲೌಕಿಕ ಮನಸ್ಸಿನ ಮಹಿಳೆ. ನಾಮದೇವ್ ಅವರ ಆಹ್ವಾನಕ್ಕೆ ಪ್ರತಿಕ್ರಿಯಿಸಿ, ವಿಠಲ ಅವರು ನಾಮದೇವ್ ಅವರ ಮಗುವಿನ ನಾಮಕರಣ ಸಮಾರಂಭದಲ್ಲಿ ಮಾನವ ವೇಷದಲ್ಲಿ ಭಾಗವಹಿಸಿದರು, ಮಗುವಿಗೆ ‘ನಾರಾಯಣ’ ಎಂದು ಹೆಸರಿಸಿದರು ಮತ್ತು ಆ ಸಂದರ್ಭದಲ್ಲಿ ಉತ್ತಮ ಉಡುಗೊರೆಗಳನ್ನು ನೀಡಿದರು. ಆದರೆ ನಾಮದೇವನಿಗೆ ಯಾವತ್ತೂ ಸಂಸಾರದ ಆಸಕ್ತಿ ಉಂಟಾಗಲೇ ಇಲ್ಲ. ಬದಲಾಗಿ ಭಕ್ತಿ ಹೆಚ್ಚಾಗುತ್ತಾ ಹೋಯಿತು.
ಹೀಗೇ ನಡೆಯುತ್ತಾ ಇರುವಾಗ ಒಮ್ಮೆ ಸಮತ ಜ್ಞಾನದೇವರು, ಮುಕ್ತಾಬಾಯಿ, ಮುಂತಾದ ಭಕ್ತಶ್ರೇಷ್ಠರೊಡನೆ “ಘೋರಾ” ಎಂಬ ಕುಂಬಾರನ ಮನೆಗೆ ಆತಿಥ್ಯಕ್ಕಾಗಿ ತೆರಳುತ್ತಾರೆ ಘೋರಾ ಕುಂಬಾರನೂ ಅತ್ಯಂತ ಬಡವ, ಆದರೆ ಪಾಂಡುರಂಗನ ಹೆಸರು ಕೇಳಿದರೆ ಪುಳಕಿತನಾಗಿ ಆನಂದಬಾಷ್ಪ ಸುರಿಸುವ ಭಾವುಕ. ಸುಮಾರು ಜನ ಅದರಲ್ಲಿಯೂ ಜ್ಞಾನದೇವರೂ, ನಾಮದೇವರು ಎಲ್ಲರೂ ತನ್ನ Klive Special Article ಮನೆಗೆ ಬಂದು ಆತಿಥ್ಯ ಸ್ವೀಕರಿಸುವುದೇ ದೊಡ್ಡ ಖುಷಿ. ಆಯಿತು ಪಾಂಡುರಂಗನ ಕೃಪೆಯಿಂದ ಅತಿಥಿಗಳೆಲ್ಲರೂ ಆತಿಥ್ಯ ಸ್ವೀಕರಿಸಿ ತೃಪ್ತರಾಗಿದ್ದಾರೆ. ಜ್ಞಾನದೇವರು ಬಹಳ ದೊಡ್ಡ ಜ್ಞಾನಿ ಭಗವದ್ಗೀತೆಯನ್ನು ಮರಾಠಿಯಲ್ಲಿ ಹೇಳಿದವರು. ಅವರಿಗೆ ನಾಮದೇವನಿಗೆ ತಾನು ಪಾಂಡುರಂಗನ ಪರಮ ಭಕ್ತನೆಂದು ಉದ್ಭವಿಸಿರುವ ಸೂಕ್ಷ್ಮ ಅಹಂಕಾರವನ್ನು ಹೊಡೆಯಲು ಒಂದು ಸಣ್ಣ ತಂತ್ರ ಹೂಡಿದರು. ಹಾಗೂ “ಘೋರಾ ಕಾಕಾ ನೀನು ಉತ್ತಮ ಘಟ ಪರೀಕ್ಷಕ ದ್ದೀಯ ( ಘಟ ಎಂದರೆ ಒಂದು ಅರ್ಥದಲ್ಲಿ ಮಣ್ಣಿನ ಮಡಕೆ ಆದರೆ ಇಲ್ಲಿ ನಾಮದೇವರಿಗಿಂತಲೂ ಒಂದು ಹೆಜ್ಜೆ ಘೋರಾ ಕುಂಬಾರನೇ ಮುಂದಿದ್ದುದರಿಂದ ಘಟ ಎಂದರೆ ಬಾಹ್ಯ ದೇಹಗಳು ಮತ್ತು ಅವರ ಪಾರಮಾರ್ಥಿಕ ಸ್ಥಿತಿ ಎಂದು ತಿಳಿಯಬೇಕಗುತ್ತದೆ ) ಇಲ್ಲಿ ನಿನ್ನ ಮನೆಯಲ್ಲಿರುವ ಎಲ್ಲಾ ಘಟಗಳನ್ನು ಪರೀಕ್ಷೆ ಮಾಡು ಹಾಗೂ ಯಾವ ಘಟ ಬೆಂದಿದೆ ಅಥವಾ ಇಲ್ಲ ಎಂಬುದನ್ನು ತಿಳಿಸು “ಎಂದರು. ಹಿರಿಯರ ಆಣತಿ ಮೀರುವಂತಿಲ್ಲ ಸರಿ ಎಲ್ಲರ ತಲೆಗೆ ತನ್ನ ಬಡಿಗೆಯಿಂದ ಒಂದೊಂದು ಸಣ್ಣ ಏಟು ಕೊಡುತ್ತಲೇ ಅವರ ಆಧ್ಯಾತ್ಮಿಕ ಓಔನ್ನತ್ಯದ ಅರಿವಾಗಿ ಹೌದು ಇಲ್ಲ ಎಂದು ತಿಳಿಸುವನು. ಈಗ ನಾಮದೇವನ ಸರದಿ ತಲೆಗೆ ಪೆಟ್ಟು ನೀಡುತ್ತಲೇ ನಾಮದೇವನಿಗೆ ಸಿಟ್ಟು ಬಂದಿತು ಸ್ವ-ಹಸ್ತದಿಂದ ಪಾಂಡುರಂಗನಿಗೆ ನೈವೇದ್ಯ ತಿನಿಸುವ ನನ್ನನ್ನು ಈ ಘೋರಾ ಏನು ಪರೀಕ್ಷೆ ಮಾಡಿಯಾನು ? ಆದರೆ ಘೋರ “ಜ್ಞಾನದೇವರು ಕ್ಷಮಿಸಬೇಕು, ಅಲ್ಪನ ಬಾಯಲ್ಲಿ ದೊಡ್ಡ ಮಾತು ಬರುತ್ತಿದೆ, ಈ ಘಟ ಸುಟ್ಟಿಲ್ಲ” ಎಂದನು. ನಾಮದೇವನಿಗೆ ತನ್ನ ಕೋಪವು ಮತ್ತಷ್ಟು ನೆತ್ತಿಗೆ ಹತ್ತಿ ತನಗೆ ಅವಮಾನ ಮಾಡಿದರೆಂದು ಅಲ್ಲಿಂದ ಹೊರಟು ಸೀದಾ ಪಾಂಡುರಂಗನ ಬಳಿಬಂದು “ರಂಗಾ, ಪಾಂಡುರಂಗಾ ನನಗೆ ಯಾಕೆ ಈ ಅವಮಾನ ?ʼ ನಿನ್ನ ಪರಮ ಭಕ್ತನಾದ ನನಗೆ ಈ ಪರಿಯ ಅಗೌರವವೇ ?”ಎಂದು ಹಲುಬಿದಾಗ ಪಾಂಡುರಂಗ ತಿಳಿಸುತ್ತಾನೆ “ನಾಮದೇವ ಸಿಟ್ಟಿಗೇಳಬೇಡ, ಘೋರನ ಮಾತು ನಿಜವಿದೆ. ನೀನು ನನ್ನ ಪರಮ ಭಕ್ತನೆಂಬುದು ಎಷ್ಟು ನಿಜವೋ ಅದರಂತೆ ನಿನ್ನ ಮನಸ್ಸು ಇನ್ನೂ ಮಾನ-ಅವಮಾನಗಳಿಂದ ಹೊರಬಂದಿಲ್ಲ. “ ನಾಮನಿಗೆ ಆಶ್ಚರ್ಯ ! ಹಾಗಾದರೆ ಆತ್ಮವಿದ್ಯೆ ನನಗೆ ದೊರೆತಿಲ್ಲವೇ ? ಅದು ದೊರೆಯಲು ನಾನೇನು ಮಾಡಬೇಕು ? ಎಂದು ಕೇಳಲು ಪಾಂಡುರಂಗ “ಗುರುವಿನ ಗುಲಾಮನಾಗದೇ ಮೋಕ್ಷ ಮುಕ್ತಿ ಆತ್ಮವಿದ್ಯೆ ಯಾವುದೂ ಸಾಧ್ಯವಿಲ್ಲ ನಾಮದೇವ. ಹೋಗು ಗುರುವಿನ ಪಾದವನ್ನು ಹಿಡಿ ಅಂದರೆ ನಿನಗೆ ಸಕಲವೂ ದೊರೆಯುತ್ತವೆ”ಎಂದು ನುಡಿದು ಅಂತರ್ಧಾನನಾಗುತ್ತಾನೆ. ಹಾಗಾದರೆ ಮುಂದಿನ ನಾಮದೇವರ ನಡೆ ಯಾವ ರೀತಿಯಾಗಿತ್ತು ಎಂದರೆ ನಿಜಕ್ಕೂ ಈ ಹಿಂದೆ ನೋಡಿದ ನಾಮದೇವನಿಗೂ ನಂತರ ನೋಡುವ ನಾಮದೇವನಿಗೂ ಬಹಳ ವ್ಯತ್ಯಾಸವಿದೆ. ( ಮುಂದುವರೆಯುವುದು)
Klive Special Article “ಸಂತನಿಧಿ” ನಾಮದೇವ.ಲೇ: ಪ್ರಸಾದ್ ಶ್ರೀವತ್ಸ .ದಾವಣಗೆರೆ
Date:
