Sunday, April 12, 2026
Sunday, April 12, 2026
Home Blog Page 1238

Manasa Nursing Home Shivamogga ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಮುಖ್ಯ-ಡಾ.ಕೆ.ವನಮಾಲ

0

Manasa Nursing Home Shivamogga ಶೈಕ್ಷಣಿಕವಾದ ಓದು ಬರಹದೊಂದಿಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಶಿವಮೊಗ್ಗದ ಜಿಲ್ಲಾ ಖಜಾನೆ ಸಹಾಯಕ ಖಜನೆ ಅಧಿಕಾರಿಗಳಾದ ಡಾ.ಕೆ. ವನಮಾಲ ಅವರು ಅಭಿಪ್ರಾಯಪಟ್ಟರು.

ಶಿವಮೊಗ್ಗದ ಮಾನಸ ಟ್ರಸ್ಟ್ ಹಾಗೂ ನಮ್ಮ ಥಿಯೇಟರ್ ನ ಸಹಯೋಗದೊಂದಿಗೆ ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ 10ದಿನಗಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಹಳ್ಳಿಗಳಲ್ಲಿನ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಇರುವುದಕ್ಕಿಂತಲೂ ಹೆಚ್ಚು, ಮನೆಯ ಹೊರಗೆ ಕಾಲ ಕಳೆಯುತ್ತಾರೆ. ಆಟೋಟಗಳಲ್ಲಿ ಸಮಯ ಕಳೆಯುತ್ತಾರೆ.. ಸಿಟಿಗಳಲ್ಲಿನ ಮಕ್ಕಳು ಟಿವಿ ಮೊಬೈಲ್ ನಲ್ಲಿ ಸಮಯ ಕಳೆಯುತ್ತಾರೆ. ಅವರ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಅತ್ಯಗತ್ಯ ಎಂದರು.

Manasa Nursing Home Shivamogga ನಮ್ಮ ಹಳ್ಳಿ ಥಿಯೇಟರ್ ನ ನಿರ್ದೇಶಕರಾದ ಚೇತನ್ ಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಶಿಬಿರವನ್ನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮಾನಸ ನರ್ಸಿಂಗ್ ಹೋಮ್ ಮನೋವೈದ್ಯರಾದ ಡಾ. ಅಫ್ತಾಬ್ ಮಲ್ದಾರ್ ಅಹಮದ್ ಅವರು, ಇಲ್ಲಿ ಯಾವುದೇ ಓದು ಬರಹ ಇರುವುದಿಲ್ಲ. ಬದಲಾಗಿ ಮಕ್ಕಳಿಗೆ ಹಾಡು ನೃತ್ಯ ಕಿರು ನಾಟಕ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ‌. ಮಕ್ಕಳೆಲ್ಲರೂ ಶಿಬಿರವನ್ನು ಆನಂದಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜಿನಿ ಏ.ಪೈ ಯವರು ಮಾತನಾಡಿ, ಶಿಬಿರದ ಗುರಿಯು ಮಕ್ಕಳನ್ನು ವೈಜ್ಞಾನಿಕ ಉಪಕರಣದಿಂದ ದೂರವಿಡುವುದಾಗಿದೆ. ಹಾಗೂ ಶಿಬಿರದ ಪಾಲ್ಕೊಳ್ಳುವಿಕೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಜೀವನದ ಪ್ರತಿ ಸಮಯವು ಆಸಕ್ತಿದಾಯಕವಾಗಿರುತ್ತದೆ ಎಂದು ಶಿಬಿರಾರ್ಥಿಗಳಿಗೆ ತಮ್ಮ ಅಭಿಪ್ರಾಯವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಕಟೀಲ್ ಅಶೋಕ್ ಪೈ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ, ಮಾನಸ ಟ್ರಸ್ಟ್ ನ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

KPCC State Committee Assembly Election ಘೋಷಣೆ ಹಾಕಿ ಟೈರ್ ಸುಟ್ಟು ಅತೃಪ್ತಿ ಹೊರಹಾಕಿದ ಜಿಲ್ಲಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಅಭಿಮಾನಿಗಳು

0


KPCC State Committee Assembly Election ಕೆಪಿಸಿಸಿ ರಾಜ್ಯ ಸಮಿತಿ ವಿಧಾನಸಭೆ ಚುನಾವಣೆಗೆ 3ನೇ ಪಟ್ಟಿ ಬಿಡುಗಡೆಯಾದ ನಂತರ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಆಕ್ರೋಶದ ಬೆಂಕಿ ಮುಹೋತ್ಸವ ಹೊತ್ತಿದೆ. ಟಿಕೆಟ್ ವಂಚಿತ ಆಕಾಂಕ್ಷಿಗಳ ತತ್ರಮಂದಿರ ಬಳಿಯ ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


KPCC State Committee Assembly Election ಮುಂಚೆಯಿಂದಲೂ ಕಾಂಗ್ರೆಸ್ನಲ್ಲಿದ್ದೇನೆ‌. ಕಳೆದ ಚುನಾವಣೆಯಲ್ಲಿ ಸೋತರೂ ಹಿಂದೆಂದೂ ಬರದ ಮತಗಳು ಪಕ್ಷಕ್ಕೆ ಬಂದಿದ್ದವು. ಪಕ್ಷ ಈ ಸಲ ನನಗೆ ಅವಕಾಶ ನೀಡುತ್ತದೆ ಎಂಬ ನಂಬಿಕೆ ಇತ್ತು. ಆದರೆ ಯಾವ ಕಾರಣಕ್ಕೆ ಮೋಸ ಆಗಿದೆ ಎಂದು ನನಗೆ ಗೊತ್ತಿಲ್ಲ. ಪಕ್ಷದ ನಾಯಕರಿಗೆ ಕಾರ್ಯಕತ್ತರ ಅಭಿಮತ ತಿಳಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿದ ನಿಮಗೆ ಟಿಕೆಟ್ ನೀಡದಿರುವುದು ಅನ್ಯಾಯ. ಇನ್ನು ನೀವು ಕಾಂಗ್ರೆಸ್ ಕಚೇರಿಗೆ ಬರಬೇಡಿ. ವಾರ್ಡ್ಗಳಲ್ಲಿ ನಾವು ಸಹ ಕೆಲಸ ಮಾಡುವುದಿಲ್ಲ ಎಂದು ಕೆಬಿ ಪ್ರಸನ್ನ ಕುಮಾರ್ ಬೆಂಬಲಿಗರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಯಾರಿಗೆ?

0

BJP Karnataka ಹಾಸನ ಜೆಡಿಎಸ್ ಟಿಕೆಟ್ ಪಡೆಯುವವರಾರೆಂದು ರಾಜ್ಯದಲ್ಲೇ ಕುತೂಹಲ ಮನೆಮಾಡಿತ್ತು. ಆದರೆ ಅಂಥದೇ ಕುತೂಹಲ ಶಿವಮೊಗ್ಗ ಕಾಂಗ್ರೆಸ್ ಮತ್ತು ಬಿಜೇಪಿ ಬಗ್ಗೆ ಇದೆ.
ಕಾಂಗ್ರೆಸ್ ಕಾರ್ಪೋರೇಟರ್ ಯೋಗೀಶ್, ಜಿಲ್ಲಾಧ್ಯಕ್ಷ ಸುಂದರೇಶ್, ನಿವೃತ್ತ ಡಿವೈಎಸ್ಪಿ ಪಿ.ಓ.ಶಿವಕುಮಾರ್,ಅಷ್ಟೇಕೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್
ಮುಂತಾದವರಿದ್ದರು .
ಆದರೆ ಈಗ ಎಲ್ಲರೂ ಬೆರಗಾಗುವಂತೆ ಕಾಂಗ್ರೆಸ್ ಹೈಕಮಾಂಡ್ ಎಚ್.ಸಿ.ಯೋಗೀಶ್ ಅವರಿಗೆ ಟಿಕೆಟ್ ನೀಡಿದೆ.
ಹಾಗೆಯೇ ಹಾಸನಕ್ಕೂ ಭವಾನಿಯಕ್ಕ ಬದಲಿಗೆ ಸ್ವರೂಪ್ ಗೆ ಟಿಕೆಟ್ ಸಿಕ್ಕಿದೆ.

ಬಿಜೆಪಿಯಲ್ಲಿ ಡಾ.ಸರ್ಜಿ. ದತ್ತಾತ್ರಿ,
ಜ್ಯೋತಿ ಪ್ರಕಾಶ್, ಕಾಂತೇಶ್,ಹರಿಕೃಷ್ಣ, ಇತ್ಯಾದಿ
ಹೆಸರುಗಳಿವೆ. ಈಗ ಯೋಗೀಶ್ ಕಾಂಗ್ರೆಸ್ ಉಮೇದುವಾರ. ಅವರೆದುರು ನಿಲ್ಲುವ ಬಿಜೆಪಿ ವ್ಯಕ್ತಿ ಯಾರಿರಬಹುದು?

BJP Karnataka ಡಾ.ಸರ್ಜಿ. ಮೇಲ್ನೋಟಕ್ಕೆ ಉತ್ತಮ ಆಯ್ಕೆ.ಎರಡು ಮಾತಿಲ್ಲ. ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ
ಧೀಮಂತ,ಶ್ರೀಮಂತ. ಮಾತು ನಡೆ ನುಡಿಗಳಲ್ಲಿ ಆಕರ್ಷಣೀಯತೆ. ಜನಪರ ಆಲೋಚನೆಗಳ ಮಂಡನೆ ಯಲ್ಲಿ ಬದ್ಧತೆ ಇದೆ. ಅಲ್ಪಕಾಲದಲ್ಲೇ ಪಕ್ಷದ ಬಗ್ಗೆ ಪ್ರಭಾವೀ ಇಮೇಜ್ ಸೃಷ್ಟಿಸಲು ಯತ್ನಿಸಿದ್ದಾರೆ.

ಆದರೆ ಬಿಜೆಪಿ ಒಳ‌ಬೇರುಗಳನ್ನ ನೋಡಿದರೆ.ಆಯ್ಕೆ ಬಗ್ಗೆ ಬೇರೆಯೇ
ಚಿತ್ರ ಲಭಿಸುತ್ತದೆ.
ಜ್ಯೋತಿ‌ಪ್ರಕಾಶ್, ಶ್ರೀಮಂತ.
ವ್ಯವಹಾರಸ್ಥರು. ಬಿಎಸ್ವೈ ಆಪ್ತರ ವಲಯದಲ್ಲಿದ್ದಾರೆ.ಮೇಲಾಗಿ ವೀರಶೈವ ಸಮಾಜದ ಅಧ್ಯಕ್ಷರು.
ಬಿಜೆಪಿಯಲ್ಲಿದ್ದು ವಿವಿಧ ಸಮಿತಿ ಮಂಡಳಿ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸರ್ಜಿ ಅವರ ಸಾಮಾಜಿಕ ಸೇವೆಯೆದುರು ಅವರದು ಕೊಂಚ ಹೊಳಪು ಮಾಸುತ್ತದೆ.

ಕಾಂತೇಶ್ , ತಂದೆಯ ಪ್ರಭಾವಲಯದಲ್ಲೇ ಇದ್ದಾರೆ ಹೊರತು ಸ್ವಯಂ ಪ್ರಭಾವಳಿ ನಿರ್ಮಿಸಿಕೊಂಡಿಲ್ಲ. ಮೇಲ್ಪದರದಲ್ಲೇ ಹೆಸರುಗಳಿಸಿದರೆ ಸಾಕೆಂಬ ಅಲ್ಪತೃಪ್ತಿಯೇ ಅವರ ಮೈನಸ್ ಪಾಯಿಂಟ್. ಧಾರ್ಮಿಕ ವಲಯ, ಮಹಿಳೆಯರ ಕಲ್ಯಾಣ ಇಷ್ಟಾಗಿ ಯುವಜನ ಕ್ಷೇತ್ರದಲ್ಲಿ ಸಾಕಷ್ಟು ಆಳ ಪ್ರಭಾವವಿಲ್ಲದಾಗಿದೆ. ಅವರಿಗೆ ಶಾಸಕ ತಂದೆಯವರ ಅನುಭವಗಳೇ ಸಾಕಿತ್ತು ಅವುಗಳನ್ನ ಬಂಡವಾಳ ಮಾಡಿಕೊಂಡು ಈ ಹೊತ್ತಿಗೆ ಪ್ರಭಾವಿ
ನಾಯಕತ್ವ ರೂಪಿಸಿ ಕೊಳ್ಳಬಹುದಾಗಿತ್ತು. ಆದರೂ ಈಗ ಶೆಟ್ಟರ್ ಪ್ರಕರಣ ಹೈಕಮಾಂಡ್ ಗೆ ಎಚ್ಚರಿಕೆ ನೀಡಿರಬಹುದು. ಕಾಂತೇಶ್ ಗೆ ತೆರೆದ ಅವಕಾಶವಿದೆ

ಹರಿಕೃಷ್ಣ ಅವರು ತೀರಾ ಇತ್ತೀಚೆಗೆ ಶಿವಮೊಗ್ಗ ಜನಮಾನಸಕ್ಕೆ ಪ್ರವೇಶಪಡೆದ ರಾಜಕೀಯ ಪ್ರತಿಭೆ.
ಆದರೆ ಪಕ್ವತೆಯ ಕೊರತೆಯಿಂದ ಅವರು ಪೂರ್ಣಪ್ರಮಾಣದ ರಾಜಕೀಯ ತರಬೇತಿಯನ್ನ ತಂದೆಯವರಿಂದ ಪಡೆದರೆ ಕಾಲಮಿಂಚಿಲ್ಲ. ಯುವಜನರಿಗೆ ಅವಕಾಶ ನೀಡುತ್ತಿರುವ ಬಿಜೆಪಿ ಹೈಕಮಾಂಡ್ ಗಮನ ಸೆಳೆಯಬೇಕಿದೆ. ಈಗಾಗಲೇ ದೆಹಲಿಯಲ್ಲಿ ದಾಳ ಉರುಳಿಸಿರಲೂ ಸಾಕು. ಅದೃಷ್ಟದ ಹುಡುಗ ಆಗಲಿಕ್ಕೂ ಸಾಕು.

ದತ್ತಾತ್ರಿ, ಈ ಎಲ್ಲರಿಗಿಂತ ವಿಭಿನ್ನ
ವ್ಯಕ್ತಿ. ಆರ್ ಎಸ್ಎಸ್ ನ ತಳಮಟ್ಟದಿಂದ ಬೆಳೆದು ಜಿಲ್ಲಾ ಬಿಜೆಪಿಯಲ್ಲಿ ಎಲ್ಲರ ಗಮನ ಸೆಳೆದು ಆಪ್ತತೆ ಬೆಳೆಸಿಕೊಂಡಿರುವಾತ. ಬಿಜೆಪಿಯ ವಿವಿಧ ಸ್ತರಗಳಲ್ಲಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಜೀವ ತೇಯ್ದ ಮನುಷ್ಯ. ಜಿಲ್ಲೆಯ ಕೆಲವು
ಕ್ಷೇತ್ರಗಳಲ್ಲಿ ಎಮ್ಮೆಲ್ಯೆಗಳ ಗೆಲುವಿಗೆ ಶ್ರಮಿಸಿದ್ದಾರೆ. ರಾಘವೇಂದ್ರ ಅವರ ಸಂಸತ್ ಕ್ಷೇತ್ರ ಚುನಾವಣೆಯಲ್ಲಿ ಶ್ರಮಿಸಿದ್ದಾರೆ.
ಸಾಮಾಜಿಕವಾಗಿ ಯಾರೇ ಕಷ್ಟದಲ್ಲಿದ್ದರೂ ನೆರವು,ಮಾಹಿತಿ ನೀಡಿ ಸೂಕ್ತ ಸ್ಪಂದಿಸುವ ವ್ಯಕ್ತಿ.ಅದೇ ಅವರಿಗೆ ಈಗ ಟಿಕೆಟ್ ಸಿಗುವಂತೆ
ಮಾಡಬಹುದಾದ ಚಿಂತಾಮಣಿ.
ಕೆಲವೊಮ್ಮೆ ಬಿಜೆಪಿ ಹೈಕಮಾಂಡ್ ಹೀಗೆ ತಳಮಟ್ಟದ ಕಾರ್ಯಕರ್ತರನ್ನ
ಗುರುತಿಸಿ ಅಚ್ಚರಿಮೂಡಿಸುತ್ತದೆ.
ಹಾಗೂ ಆಗಬಹುದು. ಕಾಂಗ್ರೆಸ್
ಯೋಗೀಶ್ ಗೆ ನೀಡಿದೆ. ಅದೇ ಆಸುಪಾಸಿನ ಅವರಿಗಿಂತ ಸಾಮಾಜಿಕ,ರಾಜಕೀಯ ಅನುಭವ ದತ್ತಾತ್ರಿಯವರಿಗಿದೆ. ಈ ತೂಕದಲ್ಲಿ ಬಿಜೆಪಿ ದತ್ತಾತ್ರಿ ಯವರ ಕಡೆಗೇ
ತಕ್ಕಡಿ ವಾಲಬಹುದು ನೋಡೋಣ.

ಇನ್ನು ಮತ್ತೋರ್ವ ಹಿರಿಯರಿದ್ದಾರೆ ಅವರೇ ಚನ್ನಬಸಪ್ಪ.ಚನ್ನಿ ಎಂದು ಆಪ್ತವಲಯದಲ್ಲಿ ಪ್ರಸಿದ್ದರು. ಮಾತುಗಾರಿಕೆ ಇದೆ. ಜನಪ್ರಿಯತೆ ಸಂಪಾದಿಸಿದ್ದಾರೆ. ಆದರೆ ದೆಹಲಿಗೆ ಅವರು ಹೇಗೆ ತಲುಪಿದ್ದಾರೋ ಗೊತ್ತಿಲ್ಲ. ಇದೂ ಒಂದು ದಾಳವೆ.
ಎಸೆದು ನೋಡಬೇಕು. ಬಿಜೆಪಿ ವಲಯದಲ್ಲಿ ಚೆನ್ನಿ ಓರ್ವ Good Coordinator. ಇದೇ ಅವರ ಮೇಜರ್ ಪ್ಲಸ್ ಪಾಯಿಂಟ್. ಅ‌ನುಭವಿ ಲೋಕಲ್ ರಾಜಕಾರಣಿ.
ಇವರಿಗೂ ಹೈಕಮಾಂಡ್ ಮಣೆ ಹಾಕಬಹುದು.

ಜೆಡಿಎಸ್ ನಲ್ಲಿ
ಶ್ರೀಕಾಂತ್ ಗೆ ಒತ್ತಡ ತರಬಹದು. ಅವರೇ ಈಗಲೂ ಸೂಕ್ತ ವ್ಯಕ್ತಿ. ದುರಂತವೆಂದರೆ ಜೆಡಿಎಸ್ ಅಭ್ಯರ್ಥಿ ಬಗ್ಗೆ ಹಾಸನದ “ನರಕೇಂದ್ರ” ಗಂಭೀರವಾಗಿ ಆಲೋಚಿಸಿಲ್ಲ.
ಹೈಕಮಾಂಡ್ ಏನು ಮಾಡುತ್ತದೆ
ಗೊತ್ತಿಲ್ಲ. ಮೊದಲ ಆಯ್ಕೆ ಮತ್ತು.ಕೊನೆಯ ಆಯ್ಕೆಯೂ ಶ್ರೀಕಾಂತ್.ಅವರಿಗೆ ಅದೃಷ್ಟ ಒಲಿಯಬೇಕಷ್ಟೆ.

Shimoga Soldier Welfare Department ಜಿಲ್ಲಾ ಸೈನಿಕ ಮಂಡಳಿ ತ್ರೈಮಾಸಿಕ ಸಭೆಯ ಪೂರ್ವ ಮಾಹಿತಿ

0

Shimoga Soldier Welfare Department ಶಿವಮೊಗ್ಗ ಸೈನಿಕ ಕಲ್ಯಾಣಿ ಮತ್ತು ಪುನರ್ವಸತಿ ಇಲಾಖೆ ಕಛೇರಿಯ ಕಾರ್ಯ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಾಜಿ ಸೈನಿಕರ, ಮಾಜಿ ಸೈನಿಕರುಗಳ ಅವಲಂಬಿತರ ಹಾಗೂ ವೀರ ನಾರಿಯರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಿಲ್ಲಾ ಸೈನಿಕ ಮಂಡಳಿಯು 2022-23ನೇ ಸಾಲಿನ ಪ್ರಥಮ ತ್ರೈಮಾಸಿಕ ಸಭೆಯನ್ನು ಆಯೋಜಿಸಲು ಉದ್ದೇಶಿಸಿದೆ.

Shimoga Soldier Welfare Department ಈ ಸಭೆಯಲ್ಲಿ ಚರ್ಚಿಸಲು ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ಹಾಗೂ ವೀರ ನಾರಿಯರು ಇವರುಗಳಿಗೆ ಸಂಬಂಧಿತ ಸಾರ್ವತ್ರಿಕ ಅಂಶಗಳೇನಾದರೂ ಇದ್ದಲ್ಲಿ ಏಪ್ರಿಲ್ 25, 2023 ರೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಗೆ ಲಿಖಿತ ರೂಪದಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಕೋರಿದೆ.

ಜಿಲ್ಲಾ ಸೈನಿಕ ಮಂಡಳಿ ಸಭೆಯ ದಿನಾಂಕ ಮತ್ತು ಸಮಯವನ್ನು ನಂತರ ತಿಳಿಸಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದುಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

BJP Shivamogga ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ-ಎಸ್.ರುದ್ರೇಗೌಡ

0

BJP Shivamogga ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಕೋಟ್ಯಾಂತರ ರೂ. ಅನುದಾನ ತಂದಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಾಗೂ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರಿಂದಲೂ ಅನುದಾನ ತರುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹರಮಘಟ್ಟ ವ್ಯಾಪ್ತಿಯಲ್ಲಿ ಗ್ರಾಮದ ಪ್ರಮುಖರ ಮನೆ ಭೇಟಿ ಹಾಗೂ ಸಾರ್ವಜನಿಕರ ಭೇಟಿ ಮಾಡಿ ಸಮಾಲೋಚನೆ ನಡೆಸಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿಯು ಅಗತ್ಯ ಮೂಲಸೌಕರ್ಯ ಒದಗಿಸುವ ಕೆಲಸಗಳನ್ನು ಮಾಡಿದ್ದಾರೆ.

ಮುಂದಿನ ಬಾರಿಯು ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಉತ್ತರಖಂಡ ಮಾಜಿ ಎಂಎಲ್‌ಎ, ಶಿವಮೊಗ್ಗ ಗ್ರಾಮಾಂತರ ಚುನಾವಣಾ ಪ್ರಮುಖರಾದ ಮುಖೇಶ್ ಸಿಂಗ್ ಕೋಲಿ ಮಾತನಾಡಿ, ಅಭಿವೃದ್ಧಿ ವೇಗವು ದ್ವಿಗುಣಗೊಳ್ಳಬೇಕಾದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಆಡಳಿತದಲ್ಲಿ ಇರುವುದು ಅತ್ಯಂತ ಮುಖ್ಯ.

BJP Shivamogga ದೇಶ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಯನ್ನು ಬೆಂಬಲಿಸಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜತೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಪ್ರಧಾನಿ ಅವಧಿಯಲ್ಲಿ ಭಾರತ ಅತಿ ಸದೃಢ ದೇಶವಾಗಿ ಬೆಳೆಯುತ್ತಿದ್ದು, ವಿಶ್ವದ ಬಹುತೇಕ ದೇಶಗಳು ಭಾರತದ ನಾಯಕತ್ವ ಒಪ್ಪಿವೆ.

ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮುನ್ನಡೆದಿದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಮಾತನಾಡಿ, ಐದು ವರ್ಷಗಳ ಅವಧಿಯಲ್ಲಿ ಎಲ್ಲ ಗ್ರಾಮಗಳಿಗೆ ಅವಶ್ಯಕವಿರುವ ಪ್ರಥಮ ಆದ್ಯತಾ ಕೆಲಸಗಳನ್ನು ಮಾಡಿದ್ದು, ಸಂಪೂರ್ಣ ಅನುದಾನದ ಸದ್ಭಳಕೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಕೆಲಸಗಳನ್ನು ಮಾಡಲಾಗುತ್ತದೆ. ಗ್ರಾಮಾಂತರ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ.

ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಗ್ರಾಮಾಂತರ ವಿಧಾನ ಸಭಾ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಅನಾರೋಗ್ಯದಿಂದ ಇರುವ ಮುಖಂಡರನ್ನು ಭೇಟಿ ಆರೋಗ್ಯ ವಿಚಾರಿಸಿದರು.
ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಗಿರೀಶ್, ಪ್ರಮುಖರಾದ ಷಡಾಕ್ಷರಪ್ಪ, ವಿರೂಪಾಕ್ಷಪ್ಪ, ಅಶೋಕ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು. ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್ ಕಲ್ಲಜ್ಜನಾಳ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಉಜ್ಜಿನಪ್ಪ, ಮಲ್ಲೇಶ್, ರಂಗೋಜಿರಾವ್ ಸೇರಿದಂತೆ ಪ್ರಮುಖರು ಗ್ರಾಮಾಂತರ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

Bhadravati Visvesvaraya Iron and Steel Plant ಭದ್ರಾವತಿ ವಿಐಎಸ್ ಎಲ್ ನಲ್ಲಿ ಅಂಬೇಡ್ಕರ್ ಜಯಂತಿ

0

Bhadravati Visvesvaraya Iron and Steel Plant ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರದ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಶಾರದಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ಕಾರ್ಮಿಕರ ಸಂಘ, ಶ್ರೀ ನವೀನ್ ರಾಹುಲ್, ಉಪಾಧ್ಯಕ್ಷರು, ಅಧಿಕಾರಿಗಳ ಸಂಘ, ಶ್ರೀ ಎಸ್.ಸಿ.ಓ. ಶ್ರೀನಿವಾಸ್, ಅಧ್ಯಕ್ಷರು, ಅಸೋಸಿಯೇಷನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪಗಳನ್ನು ಸಮರ್ಪಿಸುವ ಮೂಲಕ ನಮನ ಸಲ್ಲಿಸಿದರು.

ಶೀ ಟಿ.ರವಿಚಂದ್ರನ್, ಮಹಾಪ್ರಬಂಧಕರು (ಸೇವೆಗಳು) ಸಂಪರ್ಕಾಧಿಕಾರಿ ಸ್ವಾಗತಿಸಿದರು. ಮತ್ತು ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ಸಿಬ್ಬಂದಿ) ವಂದನಾರ್ಪನೆಗೈದರು.

ಶ್ರೀ ಬಿ.ಎಲ್. ಚಂದ್ವಾನಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಜೆ. ಜಗದೀಶ ಮತ್ತು ಶ್ರೀ ಎಸ್.ಸಿ.ಓ. ಶ್ರೀನಿವಾಸ್ ಮಾತನಾಡಿದರು.

Bhadravati Visvesvaraya Iron and Steel Plant ಶ್ರೀ ನಾಗೇಂದ್ರಪ್ಪ, ಶ್ರೀ ಕೆ.ಲಕ್ಷ್ಮಣ, ಕುಮಾರಿ ಸೋನಾಕ್ಷಿ, ಶ್ರೀ ನಿತಿನ್, ಕುಮಾರಿ ಪ್ರತೀಕ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಶ್ರೀಮತಿ ಗಿರಿಜಾ, ಶ್ರೀಮತಿ ರಮ್ಯಾ ಮತ್ತು ಶ್ರೀ ಚಂದ್ರಕಾಂತ ಕಾರ್ಯಕ್ರಮವನ್ನು ನಿರೂಪಿಸಿದರು.

Brahmana Mahasabha DVG ಓದಿದ್ದನ್ನ ಕೇಳಿದ್ದನ್ನ ಅರ್ಥೈಸಿ ಮನಕ್ಕೆ ತಂದುಕೊಳ್ಳಬೇಕು- ಎಚ್.ಬಿ.ಮಂಜುನಾಥ್

0

Brahmana Mahasabha DVG ಯಾವುದೇ ಸದ್ವಿದ್ಯೆಯಾಗಲಿ ಓದಿದಾಕ್ಷಣ ಅಥವಾ ಕೇಳಿದಾಕ್ಷಣ ಅದು ಜ್ಞಾನವಾಗುವುದಿಲ್ಲ, ಓದಿದ್ದನ್ನು ಅಥವಾ ಕೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಾ ಮನಸ್ಸಿಗೆ ತೆಗೆದುಕೊಳ್ಳಬೇಕು, ಹಾಗೆ ಮನಸ್ಸಿಗೆ ತೆಗೆದುಕೊಂಡದ್ದನ್ನು ಗಟ್ಟಿಯಾಗಿ ನೆಲೆ ನಿಲ್ಲಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ಕಿವಿಮಾತು ಹೇಳಿದರು.

ಅವರು ದಾವಣಗೆರೆ ಬ್ರಾಹ್ಮಣ ಸಮಾಜ ಸೇವಾ ಸಂಘ ವತಿಯಿಂದ ಏರ್ಪಾಡಾಗಿರುವ ವಿಪ್ರವಟು ಶಿಕ್ಷಣ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ತ್ರಯಂಗ ಯೋಗದ ಬಗ್ಗೆ ಮಾತನಾಡುತ್ತಾ ವೇದ, ಉಪನಿಷತ್ತು, ಆಗಮ, ಪುರಾಣ, ಇತಿಹಾಸಾದಿಗಳ ಕಾಲದಿಂದಲೂ ಶ್ರವಣ, ಮನನ, ನಿದಿಧ್ಯಾಸನವೆಂಬ ತ್ರಯಂಗ ಯೋಗಕ್ಕೆ ಪ್ರಾಮುಖ್ಯತೆ ಇದ್ದು ಕೇಳಿದ್ದನ್ನು ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಜೀವನ ಅನುಭವಗಳೊಂದಿಗೆ ಅದನ್ನು ಸಮೀಕರಿಸುತ್ತಾ ಮೌಲ್ಯಯುತವಾದವುಗಳನ್ನು ಮನಸ್ಸಿಗೆ ತೆಗೆದುಕೊಂಡು ನೆಲೆಗೊಳ್ಳಿಸಿಕೊಂಡಾಗ ಜ್ಞಾನವಾಗಿ ಇರುತ್ತದೆ ಎಂದರು.

Brahmana Mahasabha DVG ಕೇವಲ ಬಾಯಿ ಪಾಠ ಜ್ಞಾನವಾಗುವುದಿಲ್ಲ, ಪುನರುಚ್ಛಾರವಾಗುತ್ತದೆ ಅಷ್ಟೇ, ಮಂತ್ರಗಳೂ ಅಷ್ಟೇ, ಕೇವಲ ಹೇಳಿದರೆ ಕೇಳಿದರೆ ಪ್ರಯೋಜನವಿಲ್ಲ, ಅರ್ಥ ತಿಳಿದುಕೊಳ್ಳಬೇಕು, ಅದೂ ಸಹ ನಿಘಂಟನ್ನು ನೋಡಿ ಪದ ಪದಗಳ ಅರ್ಥ ತಿಳಿಯುತ್ತಾ ಹೋದರೆ ಮಂತ್ರಗಳೂ ನಿಸ್ಸಾರವೆನಿಸುತ್ತವೆ.

ಮಂತ್ರಗಳ ಆದಿ ಭೌತಿಕದ ಆದಿ ದೈವಿಕದ ಆಚೆಗಿನ ಆಧ್ಯಾತ್ಮಿಕ ಅರ್ಥ ತಿಳಿದುಕೊಂಡಾಗ ಮಾತ್ರ ಅವುಗಳ ಮೌಲ್ಯ ಗೊತ್ತಾಗುತ್ತದೆ, ಮನದಟ್ಟಾಗುತ್ತದೆ. ಅದಕ್ಕಾಗಿ ಇಂತಹ ಶಿಬಿರಗಳು ವಿದ್ಯಾರ್ಥಿ ದೆಸೆಯಿಂದಲೇ ಅಗತ್ಯ ಎಂದ ಎಚ್ ಬಿ ಮಂಜುನಾಥ್ ಜ್ಞಾನದಿಂದ ಭಯ ಶೋಕ ಮೋಹಗಳ ನಿವಾರಣೆ ಸಾಧ್ಯ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ದಾವಣಗೆರೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಶಶಿಕಾಂತ್, ಲೆಕ್ಕಪರಿಶೋಧಕರಾದ ವಿನಾಯಕ ಜೋಶಿ, ಶ್ರೀನಿವಾಸ್, ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು. ಫಲ ಸಮರ್ಪಣೆಯೊಂದಿಗೆ ಮಂಜುನಾಥರನ್ನು ಗೌರವಿಸಲಾಯಿತು.

Chandika Durgaparameshwari Temple ಶಿವಮೊಗ್ಗದಲ್ಲಿ ಏಪ್ರಿಲ್ 19 ರಂದು ಶ್ರೀನವಚಂಡಿಕಾ ಯಾಗ

0

Chandika Durgaparameshwari Temple ಶಿವಮೊಗ್ಗದ ಗ್ರಾಮದೇವತೆ ಕೋಟೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ದಿನಾಂಕ 19/4/2023 ಬುಧವಾರ ಬೆ-9 ರಿಂದ 1 ರವರೆಗೆ ಲೋಕಕಲ್ಯಾಣಾರ್ಥ ಶ್ರೀನವಚಂಡಿಕಾಯಾಗವನ್ನು ದೇಶದ ಮತ್ತು ಆಸ್ತಿಕ ಭಕ್ತಮಹಾಜನರ ಸರ್ವಾಭಿವೃದ್ಧಿಗಾಗಿ ಸಂಕಲ್ಪಿಸಿ ನೆರವೇರಿಸಲಾಗುತ್ತಿದೆ.

Chandika Durgaparameshwari Temple ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಧಾನ ಅರ್ಚಕರಾದ ಆಗಮಿಕ ವಿದ್ವಾನ್ ಶಂಕರಾನಂದ ಜೋಯ್ಸ್ ತಿಳಿಸಿದ್ದಾರೆ.