Manasa Nursing Home Shivamogga ಶೈಕ್ಷಣಿಕವಾದ ಓದು ಬರಹದೊಂದಿಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಶಿವಮೊಗ್ಗದ ಜಿಲ್ಲಾ ಖಜಾನೆ ಸಹಾಯಕ ಖಜನೆ ಅಧಿಕಾರಿಗಳಾದ ಡಾ.ಕೆ. ವನಮಾಲ ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗದ ಮಾನಸ ಟ್ರಸ್ಟ್ ಹಾಗೂ ನಮ್ಮ ಥಿಯೇಟರ್ ನ ಸಹಯೋಗದೊಂದಿಗೆ ಮನಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ 10ದಿನಗಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಹಳ್ಳಿಗಳಲ್ಲಿನ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಇರುವುದಕ್ಕಿಂತಲೂ ಹೆಚ್ಚು, ಮನೆಯ ಹೊರಗೆ ಕಾಲ ಕಳೆಯುತ್ತಾರೆ. ಆಟೋಟಗಳಲ್ಲಿ ಸಮಯ ಕಳೆಯುತ್ತಾರೆ.. ಸಿಟಿಗಳಲ್ಲಿನ ಮಕ್ಕಳು ಟಿವಿ ಮೊಬೈಲ್ ನಲ್ಲಿ ಸಮಯ ಕಳೆಯುತ್ತಾರೆ. ಅವರ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಅತ್ಯಗತ್ಯ ಎಂದರು.
Manasa Nursing Home Shivamogga ನಮ್ಮ ಹಳ್ಳಿ ಥಿಯೇಟರ್ ನ ನಿರ್ದೇಶಕರಾದ ಚೇತನ್ ಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಶಿಬಿರವನ್ನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮಾನಸ ನರ್ಸಿಂಗ್ ಹೋಮ್ ಮನೋವೈದ್ಯರಾದ ಡಾ. ಅಫ್ತಾಬ್ ಮಲ್ದಾರ್ ಅಹಮದ್ ಅವರು, ಇಲ್ಲಿ ಯಾವುದೇ ಓದು ಬರಹ ಇರುವುದಿಲ್ಲ. ಬದಲಾಗಿ ಮಕ್ಕಳಿಗೆ ಹಾಡು ನೃತ್ಯ ಕಿರು ನಾಟಕ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಮಕ್ಕಳೆಲ್ಲರೂ ಶಿಬಿರವನ್ನು ಆನಂದಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜಿನಿ ಏ.ಪೈ ಯವರು ಮಾತನಾಡಿ, ಶಿಬಿರದ ಗುರಿಯು ಮಕ್ಕಳನ್ನು ವೈಜ್ಞಾನಿಕ ಉಪಕರಣದಿಂದ ದೂರವಿಡುವುದಾಗಿದೆ. ಹಾಗೂ ಶಿಬಿರದ ಪಾಲ್ಕೊಳ್ಳುವಿಕೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಜೀವನದ ಪ್ರತಿ ಸಮಯವು ಆಸಕ್ತಿದಾಯಕವಾಗಿರುತ್ತದೆ ಎಂದು ಶಿಬಿರಾರ್ಥಿಗಳಿಗೆ ತಮ್ಮ ಅಭಿಪ್ರಾಯವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಕಟೀಲ್ ಅಶೋಕ್ ಪೈ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ, ಮಾನಸ ಟ್ರಸ್ಟ್ ನ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.