Monday, April 13, 2026
Monday, April 13, 2026
Home Blog Page 1237

Karnataka Assembly Election ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪ್ರತಿಸ್ಪರ್ಧಿ ಆಮ್ ಆದ್ಮಿ ಹೊರತು ಬಿಜೆಪಿ ಅಲ್ಲ- ಬೇಳೂರು ಗೋಪಾಲಕೃಷ್ಣ

0

karnataka Assembly Election ಸಾಗರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೋಪಾಲಕೃಷ್ಣ ಬೇಳೂರು ಅವರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಹೇಳಿದರು.

ಮಾದ್ಯಮಮಿತ್ರರೊಂದಿಗೆ ಮಾತನಾಡಿದ ಅವರು,’ ಹಾಲಪ್ಪ ಹರತಾಳು ಅವರಿಗೆ ಮತ ನೀಡಬೇಡಿ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೇ ಪ್ರಚಾರ ಮಾಡುತ್ತಿದ್ದಾರೆ. ಈ ಕಾರಣ ಇಲ್ಲಿ ಕಾಂಗ್ರೆಸ್ ಗೆ ಆಮ್ ಆದ್ಮಿ ಪಕ್ಷ ಪ್ರತಿಪಕ್ಷ ಸ್ಪರ್ಧಿಯೇ ಹೊರತು ಬಿಜೆಪಿಯಲ್ಲ ‘ ಎಂದು ಹೇಳಿದರು.

karnataka Assembly Election ಗೋಪಾಲಕೃಷ್ಣ ಬೇಳೂರು ತಮ್ಮ ಆಸ್ತಿಯ ಮೌಲ್ಯ 2.78 ಕೋಟಿ ರೂ , ಪತ್ನಿಯ ಆಸ್ತಿ ಮೌಲ್ಯ42.61 ರೂ ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ‘ಜನರ ಬದುಕಿನಲ್ಲಿ ಬದಲಾವಣೆ ತರುವ ಅಭಿವೃದ್ಧಿ ಕಾರ್ಯವನ್ನು ಜನಪ್ರತಿನಿಧಿ ಆದವರು ಮಾಡಬೇಕು. ಭೂಮಿಯ ಹಕ್ಕು ನೀಡುವಲ್ಲಿ ಶಾಸಕ ಹಾಲಪ್ಪ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವಿನ ಪತಾಕೆ ಹಾರಿಸಲಿದೆ ‘ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷ ಬಿ,ಆರ್ ಜಯಂತ್. ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್. ವಕೀಲ ವಿ,ಶಂಕರ್ ಉಪಸ್ಥಿತರಿದ್ದರು.

Shivamogga Police ಶಿವಮೊಗ್ಗ ನಗರ ಮತ್ತು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಬ್ರೀಫಿಂಗ್

0

Shivamogga Police ಶಿವಮೊಗ್ಗ ನಗರದ ವಿನಾಯಕ ವೃತ್ತ, ವಿನೋಬನಗರ ನಾಗೇಂದ್ರ ಕಾಲೋನಿ, ಜಯನಗರದ ಈದ್ಗಾ ಮೈದಾನ, ಶಿವಪ್ಪ ನಾಯಕ ವೃತ್ತ, ಅಶೊಕ ವೃತ್ತ, ಕುಂಸಿ ಗ್ರಾಮ, ಭದ್ರಾವತಿಯ ಹೊಳೆಹೊನ್ನೂರು ಸರ್ಕಲ್, ಲಷ್ಕರ್ ಮೊಹಲ್ಲಾ, ಖಾಜಿ ಮೊಹಲ್ಲಾ, ಕಾಗದ ನಗರ 3ನೇ ವಾರ್ಡ್, ಹೊಸಮನೆ ಶಿವಾಜಿ ವೃತ್ತ, ದೊಣಭಘಟ್ಟ, ನ್ಯೂ ಟೌನ್ ನ ಅಂಡರ್ ಬ್ರಿಡ್ಜ್, ಹೊಳೆಹೊನ್ನೂರಿನ ಅಶೋಕ ನಗರ, ಸಾಗರ ಟೌನ್ ಉಪ್ಪಾರ ಕೇರಿ, ಸಾಗರ ಯಳಗಳಲೆ ದರ್ಗಾ, ಕಾರ್ಗಲ್ ನ ಭಟ್ಕಳ ಸರ್ಕಲ್, ತೀರ್ಥಹಳ್ಳಿಯ ಆಗುಂಬೆ ಸರ್ಕಲ್, ರಿಪ್ಪನ್ ಪೇಟೆ ಸಾಗರ ರಸ್ತೆ, ಮಾಳೂರಿನ ಕುಕ್ಕೆ ಸರ್ಕಲ್, ಆಗುಂಬೆ ಮಲಬಂದೂರ್ ಸರ್ಕಲ್, ಹೊಸನಗರದ ಗಣಪತಿ ದೇವಸ್ಥಾನ, ನಗರ ಜುಮ್ಮಾ ಮಸೀದಿ, ಆನವಟ್ಟಿಯ ಆಜಾದ್ ನಗರ, ಶಿರಾಳಕೊಪ್ಪದ ಜಾಮಿಯಾ ಮಸೀದಿ ಮತ್ತು ಸೊರಬದ ಕಾನ್ಕೇರಿಗಳಲ್ಲಿ ಶಿವಮೊಗ್ಗ – ಎ ಉಪ ವಿಭಾಗ, ಶಿವಮೊಗ್ಗ – ಬಿ ಉಪ ವಿಭಾಗ, ಭದ್ರಾವತಿ ಉಪ ವಿಭಾಗ, ತೀರ್ಥಹಳ್ಳಿ ಉಪ ವಿಭಾಗ, ಸಾಗರ ಉಪ ವಿಭಾಗ ಮತ್ತು ಶಿಕಾರಿಪುರ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿದರು.

Shivamogga Police ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ವೃತ್ತ ನಿರೀಕ್ಷಕರು ಮತ್ತು ಉಪ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಿದರು.

Kuvempu University ಶೇ.ನೂರಕ್ಕೆ ನೂರು ಮತದಾನವಾಗುವಂತೆ ಮಾಡಬೇಕು- ಪ್ರೊ.ವೀರಭದ್ರಪ್ಪ

0

Kuvempu University 18-04-2023ರಂದು ಜಿಲ್ಲಾಧಿಕಾರಿಗಳ ಆವರಣದಲ್ಲಿ ಜಿಲ್ಲೆಯ ಮುಖ್ಯ ಅಧಿಕಾರಿಗಳ ಮತ್ತು ಸಾರ್ವಜನಿಕಕರ ಸಮ್ಮುಖದಲ್ಲಿ ಮತಾದಾರರ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾಡಳತ, ಜಿಲ್ಲಾ ಪಂಚಾಯತ್, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಷ್ಟ್ರಿಯ ಶಿಕ್ಷಣ ಮಹಾವಿದ್ಯಾಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್, ಇವರು ಉದ್ಘಾಟಿಸಿ ಮಾತನಾಡುತ್ತಾ ನಾವೆಲ್ಲಾ ಕಡ್ಡಾಯವಾಗಿ ಮತದಾನ ಮಾಡೋಣ ಮತ್ತು ಎಲ್ಲ್ಲರೂ ಮತದಾನ ಮಾಡುವ ಹಾಗೆ ಪ್ರೇರೇಪಿಸೋಣ ಎಂದು ತಿಳಿಸಿದರು.

ಚುನಾವಣಾ ದಿನದಂದು ವ್ಯಯಕ್ತಿಕ ಕೆಲಸಗಳಿಗೆ ಕಡಿವಾಣ ಹಾಕಿ, ಪ್ರವಾಸ ಇತ್ಯಾದಿಗಳಿಗೆ ಹೋಗದೆ ನಮ್ಮ ಹಕ್ಕನ್ನು ಚಲಾಯಿಸೋಣ ಎಂದು ತಿಳಿಸಿದರು.

Kuvempu University ಪ್ರೊ. ಬಿ.ಪಿ. ವೀರಭದ್ರಪ್ಪ, ಮಾನ್ಯ ಕುಲಪತಿಗಳು, ಕುವೆಂಪು ವಿಶ್ವವಿದ್ಯಾಲಯ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ನೂರಕ್ಕೆ ನೂರು ಮತದಾನವಾಗುತ್ತದೆ. ನಮ್ಮಲ್ಲಿಯೂ ಸಹ ಆದೇರೀತಿ ಮತದಾನ ಆಗುವ ಹಾಗೆ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನ ದೊಡ್ಡದು ಎಂದು ತಿಳಿಸಿದರು.

ಶ್ರೀ ಸ್ನೇಹಲ್ ಸುಧಾಕರ್ ಲೋಖಂಡೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್ ಇವರು ಕಾರ್ಯಕ್ರಮಕ್ಕೆ ಶುಭಕೋರುತ್ತಾ ಮತದಾನದ ಮಹತ್ವ ಕುರಿತು ಎಲ್ಲರಿಗೂ ತಿಳಿಸಲು ಸಲಹೆ ನೀಡಿದರು.

ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸಂಯೋಜನಾಧಿಕಾರಿ ಎನ್.ಎಸ್.ಎಸ್. ಕುವೆಂಪು ವಿ.ವಿ. ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ, ಮತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿ ಯಾವುದೇ ಆಮಿಷಕ್ಕೆ ಒಳಗಾಗದೆ ಹೆಚ್ಚು ಮತದಾನ ಮಾಡುವ ಹಾಗೆ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಧು ಜಿ. ಹಾಗು ಡಾ. ಚಿದಾನಂದ ಎನ್.ಕೆ. ಹಾಗೂ ಶ್ರೀ ಬಸವರಾಜ್ ಕೆ.ಸಿ, ಶ್ರೀ ನವೀದ್, ಶ್ರೀ ವಿಜಯ್ ಕುಮಾರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಡಾ.ಪ್ರಕಾಶ್ ಸ್ವಾಗತಿಸಿ ಶ್ರೀ ಶರಣನಾಯಕ್ ವಂದಿಸಿದರು. 250ಕ್ಕೂ ಹೆಚ್ಚು ಎನ್.ಎನ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.

B.Y.Vijayendra BJP Karnataka ಒಳ್ಳೆಯ ದಿನ ನಾಮಪತ್ರ ಸಲ್ಲಿಸಿದ್ದೇನೆ ಅಭಿಮಾನಿಗಳೊಂದಿಗೆ ಪ್ರಚಾರ ಸಭೆ ಆರಂಭಿಸುವೆ- ಬಿ.ವೈ.ವಿಜಯೇಂದ್ರ

0

B.Y.Vijayendra BJP Karnataka ಇನ್ನೇನು ವಿಧಾನಸಭಾ ಚುನಾವಣೆಯ ಸಮೀಪಿಸುತ್ತಿದೆ. ಪ್ರಜೆಗಳೆಲ್ಲರೂ ಮತ ಹಾಕಲು ಸಿದ್ದರಾಗಿರುವ ಸಂದರ್ಭದಲ್ಲಿ, ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಸಾಂಕೇತಿಕವಾಗಿ ಸೋಮವಾರ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿದರು.

ಶುಭ ಮುಹೂರ್ತದಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ನಂತರ ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯದಿಂದ ಏ. 19 ರಂದು ಬೆಳಿಗ್ಗೆ 9ಕ್ಕೆ ಬೃಹತ್ ಉತ್ಸವ ಮೆರವಣಿಗೆ ಹಾಗೂ ಕಾರ್ಯಕರ್ತರೊಂದಿಗೆ ಬಂದು ಇನ್ನೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಹಿತಿ ನೀಡಿದರು.

B.Y.Vijayendra BJP Karnataka ಈ ಸಂದರ್ಭದಲ್ಲಿ ಶಾಸಕರಾದ ಕೆ.ಎಸ್‌ ಈಶ್ವರಪ್ಪ, ಶಿವಮೊಗ್ಗ ಸಂಸದ ರಾಘವೇಂದ್ರ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಕಲಬುರ್ಗಿ ಸಂಸದ ಉಮೇಶ್ ಜಾದವ್, ವಿವಿಧ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬಹಿರಂಗ ಪ್ರಚಾರ ಸಭೆಯು ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಜೇಂದ್ರ ಅವರ ಪತ್ನಿ ಪ್ರೇಮಾ, ಮುಖಂಡರಾದ ಕೆ. ಎಸ್. ಗುರುಮೂರ್ತಿ, ವೀರೇಂದ್ರ ಪಾಟೀಲ್ ಇನ್ನಿತರರು ಅವರೊಡನೆ ಹಾಜರಿದ್ದರು.

DC Shivamogga ಬೊಗಸೆ ಗ್ರಾಮದ ದೇವಾಲಯ ಮುಂಭಾಗ ವಿರೂಪಗ್ರಾಮಸ್ಥರ ದೂರು

0

DC Shivamogga ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಬೊಗಸೆ ಗ್ರಾಮದ ಶ್ರೀ ತಿರುಮಲ ಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿದ್ದ ನಾಗರವಿಗ್ರಹ ಕಿತ್ತುಹಾಕಿ, ತ್ರಿಶೂಲವನ್ನು ಬಗ್ಗಿಸಿ ಹಾಗೂ ಕೆಂಚ ದೇವರ ಹರಿಗೆ ಯನ್ನು ಸ್ಥಾನ ಪಲ್ಲಟ ಮಾಡಿ ಹಿಂದೂ ಸಂಪ್ರದಾಯಕ್ಕೆ ಧಕ್ಕೆ ತಂದಿರುವ ಪ್ರಕರಣ ವರದಿಯಾಗಿದೆ.

ಈ ಸಂಬಂಧ ದೇವಸ್ಥಾನದ ಮುಖ್ಯಸ್ಥ ಶಿವಣ್ಣಗೌಡ ಎಂಬುವವರು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ನೇತೃತ್ವದಲ್ಲಿ ಸ್ಥಳೀಯರಾದ ಮುಕುಂದ ಶೆಟ್ಟಿ, ನರೇಂದ್ರ, ರಾಮಚಂದ್ರ ಹಾಗೂ ಪೊಲೀಸ್ ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ಮಾತನಾಡಿದ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಇತ್ತೀಚೆಗೆ ಬೊಗಸೆ ಗ್ರಾಮದ ದೇವಸ್ಥಾನದ ವರ್ಷದ ಸುಗ್ಗಿ ಹಬ್ಬ ಮುಕ್ತಾಯವಾಗಿತ್ತು. ಈ ನಡುವೆ ದೇವಸ್ಥಾನದ ಮುಂಭಾಗದಲ್ಲಿರುವ ನಾಗರಕಟ್ಟೆಯಲ್ಲಿ ದ್ದ ನಾಗರ ಕಲ್ಲಿನ ವಿಗ್ರಹವನ್ನು ಹಾನಿಗೊಳಿಸಿ, ಚೌಡಮ್ಮ ಗುಡಿಯ ಹೂವಿನ ಹಾರವನ್ನು ಕಿತ್ತು ಬಿಸಾಡಿ ಪಕ್ಕದಲ್ಲಿ ಸ್ಥಾಪಿಸಲಾಗಿದ್ದ ತ್ರಿಶೂಲವನ್ನು ಬಗ್ಗಿಸಿ ಮುರಿಯಲು ಪ್ರಯತ್ನಿಸಿರುವ ಜೊತೆಗೆ ಕೆಂಚಪ್ಪ ಗುಡಿಯ ದೇವರ ಹರಿಗೆ ಯನ್ನು ಸ್ಥಾನ ಪಲ್ಲಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

DC Shivamogga ಇಷ್ಟೆಲ್ಲಾ ಹಿಂದೂ ಸಂಪ್ರದಾಯಕ್ಕ ಅವಮಾನಗೊಳಿಸಿದ ಹಿನ್ನೆಲೆಯಲ್ಲಿ ದೇವಾಲಯ ಮುಖ್ಯಸ್ಥರ ಮೂಲಕ ಪ್ರಕರಣ ದಾಖಲಿಸಲಾಗಿದ್ದ ಹಿನ್ನೆಲೆಯಲ್ಲಿ ಗ್ರಾಮದ ಯುವಕನೋರ್ವ ಅದೇ ಜಾಗದಲ್ಲಿ ಅನುಮಾನವಾಗಿ ತಿರು ಗಾಡುತ್ತಿದ್ದನೆಂಬ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ ಬಳಿಕ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದೇ ರೀತಿ ಹಿಂದೂ ಸಂಪ್ರದಾಯವನ್ನು ಹಾಳುಗೆಡವಲು ಮುಂದಾಗಿರುವವರನ್ನು ಪೊಲೀಸ್ ಅಧಿಕಾರಿಗಳು ಯಾವುದೇ ದಯೆತೋರದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

Ramzan Festival ಉಪವಾಸ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ-ಸಿ.ಎನ್.ಅಕ್ಮಲ್

0

Ramzan Festival ಚಿಕ್ಕಮಗಳೂರು ನಗರದ ಸಂತೆಮೈದಾನದ ಸಮೀಪವಿರುವ ನ್ಯೂ ಲೇಕ್ ವ್ಯೂ ಕೇಂಬ್ರಿಡ್ಜ್ ಶಾಲೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸುಮಾರು ಒಂದು ಸಾವಿರ ದಿನಸಿ ಕಿಟ್‌ಗಳನ್ನು ಸಮಾಜದ ಮುಖಂಡ ಸಿ.ಎನ್.ಅಕ್ಮಲ್ ಅವರು ಎಲ್ಲಾ ಸಮುದಾಯದ ಕುಟುಂಬಗಳಿಗೆ ಸಂಜೆ ಉಚಿತವಾಗಿ ವಿತರಿಸಿದರು.

ಈ ವೇಳೆ ಮಾತನಾಡಿದ ಸಿ.ಎನ್.ಅಕ್ಮಲ್ ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರತಿದಿನ ಉಪವಾಸ ಮಾಡು ತ್ತಾರೆ. ಈ ವೇಳೆ, ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟಿರುತ್ತಾರೆ. ಈ ಆಚರಣೆಯ ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪ ವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಅದೃಷ್ಟ ಸಂಪಾದನೆ ಮಾಡಲು ಈ ಉಪವಾಸವನ್ನು ಆಚರಿಸುತ್ತಾರೆ ಎಂದರು.

Ramzan Festival ರಂಜಾನ್ ತಿಂಗಳಲ್ಲಿ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ, ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಹಾಗೂ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ ಎಂದರು.

ಸೂರ್ಯಾಸ್ತದ ವೇಳೆ, ಉಪವಾಸ ಮುರಿಯುವುದನ್ನು ಇಫ್ತಾರ್ ಎಂದು ಹೇಳಲಾಗುತ್ತದೆ. ಎಲ್ಲರೂ ಒಂದೇ ಕಡೆ ಸೇರುವುದು. ಅದು ಸಾರ್ವಜನಿಕ ಸ್ಥಳವೇ ಆಗಿರಲಿ, ಮನೆಯೇ ಆಗಿರಲಿ. ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸುತ್ತಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಅವಧಿಗೆ ಉಪವಾಸ ಸಮಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ರಿಯಾಜ್, ಅತೀಕ್ ಖೈಸರ್, ಕಾಲುಬಾ ನಜೀರ್, ಬಾಬುಶೇಟ್, ಜಬೀ, ರಿಜ್ವಾನ್‌ಖಾನ್, ಸಾದಿಕ್, ಶಹಬುದ್ದಿನ್, ಚಂದ, ಜಹೋರ್ ಅಜುಂ, ನೂರ್ ಅಹ್ಮದ್ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.

Minority Development Services Association ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾಸಂಘದಿಂದ ದಿನಸಿ ಕಿಟ್ ವಿತರಣೆ

0

Minority Development Services Association ರಂಜಾನ್ ಪವಿತ್ರ ಮಾಸದ ಅಂಗವಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ಸೇವಾ ಸಂಘದಿಂದ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ನಗರದ ಕೆ.ಎಂ.ರಸ್ತೆಯ ಜಿಲ್ಲಾ ಸಂಘದ ಕಚೇರಿಯಲ್ಲಿ ವಿತರಿಸಲಾಯಿತು.

ಈ ವೇಳೆ ಸಂಘದ ಜಿಲ್ಲಾ ಅಧ್ಯಕ್ಷ ಅಜ್ಮಾಲ್ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಪಂದಿಸುವ ಕಾರ್ಯದಲ್ಲಿ ತೊಡಗಲಾಗುವುದು ಎಂದು ತಿಳಿಸಿದರು.

Minority Development Services Association ರಂಜಾನ್ ಹಬ್ಬವು ಪ್ರತಿಯೊಬ್ಬ ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರವಾಗಿದೆ. ಇಂತಹ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸಲಿದ್ದಾರೆ ಎಂದರು. ಇದೇ ವೇಳೆ ಸುಮಾರು 150 ಮಂದಿಗೆ ಉಚಿತ ವಾಗಿ ದಿನಸಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಶಿಹಾನ್, ಸದಸ್ಯ ನಯಾಜ್, ಜಿಲ್ಲಾ ಸಮಿತಿಯ ಸದಸ್ಯರಾದ ಅಕ್ರಮ್, ಮೆಹರಾಜ್, ವಾಜೀದ್, ಶಿರಾಜ್, ಫಾರ್ದಿನ್, ಯೂಸುಫ್ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Department Of Agriculture ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟಕ್ಕೆ ಕ್ರಮಕೈಗೊಳ್ಳಲು‌ ಆಗ್ರಹ

0

Department Of Agriculture ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಗೊಬ್ಬರ ಅವಶ್ಯವಿರುವ ಹಿನ್ನೆಲೆಯಲ್ಲೆ ಮಾರಾಟಗಾರರು ನಿಗಧಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡದಂತೆ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತಾಲ್ಲೂಕು ಘಟಕ ಜಿಲ್ಲಾ ಕೃಷಿ ಇಲಾಖೆಯನ್ನು ಒತ್ತಾಯಿಸಿದೆ.

ಈ ಸಂಬಂಧ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಎಸ್.ಚೌವ್ಹಾಣ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಘಟಕದ ತಾಲ್ಲೂಕು ಕಾರ್ಯದರ್ಶಿ ಕೆ.ಇ.ಪೂರ್ಣೇಶ್ ಜಿಲ್ಲೆಯಲ್ಲಿ ಹಿಂದಿನ ವರ್ಷ ದಂತೆ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ಮಾರಾಟಗಾರರು ಚೀಲದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.

Department Of Agriculture ರೈತರಿಗೆ ರಸಗೊಬ್ಬರವನ್ನು ತೆಗೆದುಕೊಂಡಾಗ ಚೀಲದ ಎಂ.ಆರ್.ಪಿ ಬೆಲೆಯನ್ನು ತೆಗೆದುಕೊಳ್ಳಬೇಕು ಜೊತೆಗೆ ಅಂಗಡಿ ಮಾರಾಟಗಾರರ ಸಮರ್ಪಕ ರಶೀದಿಯನ್ನು ಕಡ್ಡಾಯವಾಗಿ ರೈತರಿಗೆ ನೀಡಬೇಕು. ರಸಗೊಬ್ಬರದ ದರಪಟ್ಟಿಯನ್ನು ಕಡ್ಡಾಯವಾಗಿ ಗ್ರಾಹಕರಿಗೆ ಕಾಣ ಸುವಂತೆ ಅಂಗಡಿಯ ಮುಂಭಾಗದಲ್ಲಿ ನಿಗಧಿತ ದರದಲ್ಲಿ ನಾಮಫಲಕ ಹಾಕಬೇಕು ಎಂದರು.

ರೈತರಿಗೆ ವಂಚಿಸುವ ಸಲುವಾಗಿ ರಸಗೊಬ್ಬರವನ್ನು ಅಂಗಡಿಯೊಳಗೆ ಇಟ್ಟುಕೊಂಡು ಖಾಲಿಯಾಗಿದೆ ಎಂದು ಸಬೂಬು ಹೇಳಬಾರದು. ರಸಗೊಬ್ಬರ ಖರೀದಿಸಿದಾಗ ಮತ್ತೊಂದು ವಸ್ತುವನ್ನು ರೈತರಿಗೆ ಖರೀದಿಸು ವಂತೆ ಒತ್ತಡ ಹಾಕಬಾರದು. ಚೀಲದಲ್ಲಿ ಕಡಿಮೆ ತೂಕ ಹೊಂದಿರುವ ಗೊಬ್ಬರವನ್ನು ಮಾರಾಟ ಮಾಡದಂತೆ ಜೊತೆಗೆ ಸರ್ಕಾರದ ಸೂಕ್ತ ಆದೇಶವನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.

Shivamogga Police ಕೋಟೆ ಪೊಲೀಸ್ ಠಾಣೆಯಲ್ಲಿ ನೊಂದವರ ಸಭೆ ಅಹವಾಲು ವಿಚಾರಣೆ

0

Shivamogga Police ದಿನಾಂಕಃ-16-04-2023 ರಂದು ಬೆಳಗ್ಗೆ ಶ್ರೀ ತ್ಯಾಗರಾಜನ್, ಐಪಿಎಸ್, ಮಾನ್ಯ ಡಿಐಜಿಪಿ, ಪೂರ್ವ ವಲಯ ದಾವಣಗೆರೆ ರವರು ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ನೊಂದವರ ಸಭೆಯನ್ನು ನಡೆಸಿ ಅವರುಗಳ ಕುಂದುಕೊರತೆಯನ್ನು ಆಲಿಸಿದರು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆಯನ್ನು ನೀಡಿದರು.

ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು ಮತ್ತು ಪಿ.ಐ ಕೋಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಕಳೆದು ಹೋದ ಒಟ್ಟು 12 ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೊರ್ಟಲ್ ನ ಸಹಾಯದಿಂದ ಪತ್ತೆ ಮಾಡಿದ್ದು, ಸದರಿ ಮೊಬೈಲ್ ಫೋನ್ ಗಳನ್ನು ಮಾಲೀಕರುಗಳಿಗೆ ಹಿಂದಿರುಗಿಸಿದರು.

Shivamogga Police ಈ ಸಂದರ್ಭದಲ್ಲಿ ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಕು. ಬಿಂದು ಮಣಿ ಆರ್.ಎಸ್, ಐಪಿಎಸ್, (ಪ್ರೊ), ಶ್ರೀ ಬಾಲರಾಜ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ, ಶ್ರೀ ಶಿವಪ್ರಸಾದ್ ರಾವ್, ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ, ಮತ್ತು ಕೋಟೆ ಪೊಲೀಸ್ ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.