Monday, April 13, 2026
Monday, April 13, 2026
Home Blog Page 1236

Putrajakavi Gawai ಶಿವಮೊಗ್ಗದಲ್ಲಿ ಏಪ್ರಿಲ್ 20 ರಂದು ಎಂಭತ್ತೇಳನೆ ಅಮಾವಾಸ್ಯೆ ಸಂಗೀತ ಸಂಜೆ

0

Putrajakavi Gawai ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಏ. 20ರ ಸಂಜೆ 6:30ಕ್ಕೆ ಗಾನಲಹರಿ ಎಂಭತ್ತೇಳನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ. ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹರೀಶ್ ಪರಮೇಶ್ವರ ಹೆಗಡೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಸಂಗೀತ ಸಂಯೋಜಿತ ಪ್ರಾರ್ಥನೆ ನಡೆಯಲಿದೆ. ಸಂಗೀತ ಮಹಾ ಪೋಷಕ ಸುರೇಶ್ ಅರಸಾಳು ಅತಿಥಿಗಳಾಗಿ ಆಗಮಿಸಲಿದ್ದಾರೆ.

Putrajakavi Gawai ವಿನೋಬನಗರ ಭಕ್ತಿ ಸಂಗಮ ಕಲಾವೃಂದದಿಂದ ಭಜನಾ ಸೇವೆ ಮತ್ತು ಜಯಶ್ರೀ ಶ್ರೀಧರ್ ಅವರಿಂದ ಭಕ್ತಿ ಸಂಗೀತ ಸೇವೆ ನಡೆಯಲಿದೆ. ಬಳ್ಳಾರಿಯ ಶರಣ್ ಕುಮಾರ್ ಕೊತ್ತಲಜಿಂತ ಅವರಿಂದ ಅತಿಥಿ ಗಾಯನ ನಡೆಯಲಿದೆ. ರಾಮಣ್ಣ ಭಜಂತ್ರಿ, ವೀರಭದ್ರಯ್ಯ ಶಾಸಿ, ಆರ್. ತುಕಾರಾಮ್ ರಂಗಧೋಳ್, ವಿನಾಯಕ ಭಟ್ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಅವರು ವಿವಿಧ ವಾದ್ಯಗಳೊಂದಿಗೆ ಸಾಥ್ ನೀಡಲಿದ್ದಾರೆ. ಉಸ್ತಾದ್ ಹುಮಾಯೂನ್ ಹರ್ಲಾಪುರ್ ನಿರೂಪಿಸಲಿದ್ದಾರೆ.

Assembly Election ಶಿವಮೊಗ್ಗ ಗ್ರಾಮಾಂತರ ಕ್ರೇತ್ರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಾಸಕ ಅಶೋಕ ನಾಯಕ್

0

Assembly Election ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬುಧವಾರ ನಾಮಪತ್ರ ಸಲ್ಲಿಸುತ್ತಿದ್ದು, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಪಾಲ್ಗೊಂಡಿದ್ದರು.

ಕಾರ್ಯಕರ್ತರ ಜತೆಯಲ್ಲಿ ಪ್ರಚಾರ ನಡೆಸಿದ ಅವರು ವಿಜಯೇಂದ್ರ ಅವರ ಗೆಲುವಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚುನಾವಣೆ ಮತ್ತು ಪ್ರಚಾರ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದರು.

Assembly Election ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರೊಂದಿಗೆ ಗ್ರಾಮಾಂತರ ಕ್ಷೇತ್ರದ ಪ್ರವಾಸದ ಕುರಿತು ಚರ್ಚಿಸಿದರು.

ಗ್ರಾಮಾಂತರ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಅವರು ಶಿಕಾರಿಪುರ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರ ಗೆಲುವಿಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರು ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.

Royal Arcade Shivamogga ರಾಯಲ್ ಆರ್ಕಿಡ್ ನಲ್ಲಿ ಸೀರೆಗಳ ಸಾಮ್ಯಾಜ್ಯ ಪ್ರದರ್ಶನ ಮಾರಾಟ

0

Royal Arcade Shivamogga ಸಿಲ್ಕ್ ಇಂಡಿಯಾ ,ರೇಷ್ಮೆ ಸಹಕಾರ ಸಂಘಗಳು ಹಾಗೂ 60ಕ್ಕೂ ಹೆಚ್ಚಿನ ಮಳಿಗೆಗಳ ವತಿಯಿಂದ ಶಿವಮೊಗ್ಗದ ರಾಯಲ್ ಆರ್ಕೆಡ್ ನಲ್ಲಿ ಏ.20ರಿಂದ ಏ.28ರವರೆಗೆ ರಾಜ್ಯದ ಸಾಂಪ್ರದಾಯಿಕ ಉಡುಪುಗಳ ಪ್ರದರ್ಶಿನ ಮತ್ತು ಮಾರಾಟ ನಡೆಯಲಿದೆ.

ಪ್ರದರ್ಶನದಲ್ಲಿ ತಸ್ಸರ್ ರೇಷ್ಮೆ ಸೀರೆ. ಕ್ರೇಪ್ ಮತ್ತು ಜಾರ್ಜೆಟ್ ಸೀರೆ.ಆರಿಣಿ ಸೀರೆ. ಧರ್ಮಾವರಂ ಸೀರೆ. ಕಾಂಜಿಪುರಂ ಸಿಲ್ಕ್. ಎಂಬ್ರಾಯಿಡರಿ ಸೀರೆಗಳು ಇಲ್ಲಿ ಸಿಗಲಿವೆ.

Royal Arcade Shivamogga ಗೃಹಪಯೋಗಿ ವಸ್ತುಗಳಾದ ಕುಶನ್ ಕವರ್ ಗಳು, ಬೆಡ್ ಶೀಟ್ ಹಾಗೂ ಮಕ್ಕಳಿಗಾಗಿ ಕುರ್ತಾ. ಸ್ಟ್ರೋಲ್. ಶಾಲು, ಬಟ್ಟೆಗಳು ನ್ಯಾಯಯುತ ಬೆಲೆಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು..

ಈ ಮಾರಾಟ ಮತ್ತು ಪ್ರದರ್ಶನವು ಬೆಳಿಗ್ಗೆ 10:30ರಿಂದ ರಾತ್ರಿ 8:30ರವರೆಗೆ ನಡೆಯಲಿದೆ. ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಗ್ರಾಹಕರು ಆಗಮಿಸಿ, ನೇಕಾರರು, ಮತ್ತು ಕುಶಲಕರ್ಮಿಗಳ, ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಲಾಗಿದೆ.

Covid Disease ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೆ ಏರಿಕೆ ಲಕ್ಷಣ

0

Covid Disease ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ
ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಾಗುತ್ತಿವೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Covid Disease ಸೋಂಕು ಹೆಚ್ಚಳ ಆಗಿರುವುದರಿಂದ ಮನೆ ಹಾಗೂ ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಹಾಗೂ ಸಾರಿ (ತೀವ್ರ ಉಸಿರಾಟದ ತೊಂದರೆ) ಮತ್ತು ಐಎಲ್‌ಐ (ಶೀತಜ್ವರ ಸಮಸ್ಯೆಗಳು) ಪ್ರಕರಣಗಳನ್ನು, ರೋಗ ಲಕ್ಷಣ ಹೊಂದಿರುವ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿತ್ತು.

ಏ. 14ರಂದು 16, 496 ಪರೀಕ್ಷೆ ನಡೆಸಲಾಗಿದ್ದು, 498 (ಶೇ. 3.31) ಪ್ರಕರಣಗಳು ವರದಿಯಾಗಿವೆ. ಏ. 15ರಂದು 9,265 ಪರೀಕ್ಷೆ, 377 (ಶೇ. 4.06), ಏ. 16ರಂದು 11,693 ಪರೀಕ್ಷೆ 235 (ಶೇ. 2), ಏ. 17ರಂದು 4,012 ಪರೀಕ್ಷೆ 358 (ಶೇ. 8.92) ಹಾಗೂ ಏ. 18ರಂದು 16,634 ಪರೀಕ್ಷೆ ನಡೆಸಲಾಗಿದ್ದು, 379 (ಶೇ. 2.27) ಪ್ರಕರಣಗಳು ವರದಿಯಾಗಿವೆ.

District Aam Aadmi Party ಚಿಕ್ಕಮಗಳೂರು ಕ್ಷೇತ್ರಕ್ಕೆ ಆಮ್ ಆದ್ಮಿ ಅಭ್ಯರ್ಥಿಯಾಗಿ ಎಂ.ಪಿ.ಈರೇಗೌಡ ನಾಮಪತ್ರ

0

District Aam Aadmi Party ಜಿಲ್ಲಾ ಆಮ್‌ಆದ್ಮಿ ಪಕ್ಷದಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ನಡೆಸಲು ಎಂ.ಪಿ.ಈರೇಗೌಡ ಅವರು ಚಿಕ್ಕಮಗಳೂರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ.ಕಿಶೋರ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರಕ್ಕೂ ಮುನ್ನ ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ವರೆಗೆ ಪಕ್ಷದ ಮುಖಂ ಡರುಗಳು ಕಾಲ್ನಡಿಗೆ ಜಾಥಾ ನಡೆಸಿದರು.
ನಂತರ ನಾಮಪತ್ರ ಸಲ್ಲಿಸಿ ಮಾತನಾಡಿದ ಅಭ್ಯರ್ಥಿ ಎಂ.ಪಿ.ಈರೇಗೌಡ ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಎಪಿ ಪಕ್ಷವು ಜನಸಾಮಾನ್ಯರಲ್ಲಿ ಉತ್ತಮ ಒಲವು ಹೊಂದಿದ್ದು ಮುಂದಿನ ದಿನಗಳ ಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ದೆಹಲಿ ಮಾದರಿಯ ಆಡಳಿತವನ್ನು ರೂಪಿಸಲಾಗುವುದು ಎಂದು ತಿಳಿಸಿದರು.

District Aam Aadmi Party ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ರಾಜ್ಯಗಳ ಚುಕ್ಕಾಣ ಹಿಡಿದು ಉತ್ತಮ ಆಡಳಿತ ನೀಡು ತ್ತಿದೆ. ಜೊತೆಗೆ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುವ ಮೂಲಕ ಪಕ್ಷವು ಅತ್ಯಂತ ಚುರುಕಿನಿಂದ ಕಾರ್ಯನಿರ್ವ ಹಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಜಮೀಲ್ ಅಹ್ಮದ್, ಯೂತ್ ಅಧ್ಯಕ್ಷ ಡಿ.ಎಸ್.ಪವನ್‌ಶೆಟ್ಟಿ, ಮಹಿಳಾ ಅಧ್ಯಕ್ಷೆ ನಸೀರ್ ಬೇಗಂ ಹಾಗೂ ಜಾಥಾದಲ್ಲಿ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಮತ್ತಿತರರು ಹಾಜರಿದ್ದರು.

ಇನ್ನರ್ ವೀಲ್ ಕ್ಲಬ್ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದೆ-ಮಧುರಾ ಮಹೇಶ್

0

Innerwheel Club Shivamogga ಸ್ನೇಹ, ಸೇವೆ, ಓಡನಾಟಕ್ಕಾಗಿ ಆರಂಭಗೊಂಡ ಅಂತರಾಷ್ಟ್ರೀಯ ಸೇವಾ ಸಂಸ್ಥೆಯು ಇನ್ನರ್‌ವ್ಹೀಲ್ ಆಗಿದ್ದು, ಮನುಕುಲದ ಸೇವೆಗೆ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಮಧುರಾ ಮಹೇಶ್ ಹೇಳಿದರು.

ಗೋಪಾಳದ ಆಟೋ ಚಾಲಕರ ಪತ್ನಿ ಸುಮಾ ಎನ್ನುವವರು ಗ್ಯಾಂಗ್ರೀನ್ ನಿಂದ ಬಳಸುತ್ತಿದ್ದು ಹಾಗೂ ಪಾರ್ಶ್ವವಾಯು ಪೀಡಿತರಿಗೆ ಎರಡು ತಿಂಗಳ ಔಷಧಿ ಹಾಗೂ ಆರ್ಥಿಕ ನೆರವು ನೀಡಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯು ತೀವ್ರ ಸಂಕಷ್ಟ ಹಾಗೂ ನೋವಿನಿಂದ ಬಳಲುತ್ತಿರುವವರಿಗೆ ನೆರವು ನೀಡುವ ಮೂಲಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಉಚಿತ ಶಿಬಿರ ಹಾಗೂ ಕಾಯಿಲೆಗಳಿಂದ ನೋವು ಅನುಭವಿಸುತ್ತಿರುವವರಿಗೆ ಅಗತ್ಯ ನೆರವು ನೀಡುವ ಮೂಲಕ ಸಾರ್ಥಕ ಕಾರ್ಯಗಳನ್ನು ಇನ್ನರ್‌ವ್ಹೀಲ್ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಮಹತ್ತರ ಕೆಲಸಗಳನ್ನು ಮಾಡುತ್ತಿದ್ದು, ವಿಶೇಷ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

Innerwheel Club Shivamogga ಕಾಯಿಲೆಯಿಂದ ನೋವು ಅನುಭವಿಸುತ್ತಿರುವ ಜತೆಯಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಕಷ್ಟದಲ್ಲಿರುವ ಇವರಿಗೆ ಬಂದು ನೆರವು ನೀಡಬೇಕು. ಇವರ ಮೊ.ಸಂ. 9741956602 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ನಿಜವಾಗಿ ಅಗತ್ಯ ಇರುವವರಿಗೆ ಸೇವೆ ಮಾಡುವುದು ಅತ್ಯಂತ ಮುಖ್ಯ. ಇಂತಹ ಕಷ್ಟದಲ್ಲಿ ಇರುವ ಕುಟುಂಬಗಳಿಗೆ ನೆರವು ನೀಡಬೇಕು. ಇನ್ನರ್‌ವ್ಹೀಲ್ ಸಂಸ್ಥೆಯು ಮಾಡುತ್ತಿರುವ ಕೆಲಸ ಅತ್ಯಂತ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಚಂದ್ರ., ಸವಿತಾ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.

Bapuji Institute of Hi-Tech Education ಸೇವಾರಂಗಗಳಲ್ಲಿ ಹೇರಳ ಉದ್ಯೋಗ ಸೃಷ್ಟಿ-ಡಾ.ಪಿ.ಪರಮಶಿವಯ್ಯ

0

Bapuji Institute of Hi-Tech Education ಜಾಗತೀಕರಣದ ನಂತರ ಸಾಮಾನ್ಯ ಮನುಷ್ಯನ ಅಭಿ ರುಚಿಯೂ ವಿಶ್ವಮಟ್ಟಕ್ಕೇರಿದ್ದು ದಶಕಗಳ ಹಿಂದೆ ಭೋಗ ವಸ್ತುಗಳು ಎನಿಸಿಕೊಂಡಿದ್ದವು ಈಗ ಅಗತ್ಯ ವಸ್ತುಗಳೆಂಬ ಸಾಲಿಗೆ ಬಂದಿವೆ, ಹಣವನ್ನು ನೀರಿನಂತೆ ಬಳಸಬೇಕೆಂಬುದೇ ಈಗಿನ ವಾಣಿಜ್ಯ ಕ್ಷೇತ್ರದ ಧೋರಣೆಯಾಗಿದೆ, ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಿದ್ದು ದೇಶಕ್ಕೆ ಮಾಸಿಕ 1 ಲಕ್ಷ 65,000 ಕೋಟಿ ರೂಪಾಯಿಯಷ್ಟು ಜಿಎಸ್‌ಟಿಯಿಂದಲೇ ಬರುತ್ತಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಸಂಶೋಧನಾ ವಿಭಾಗದ ಚೇರ್ಮನ್ ಡಾ. ಪಿ. ಪರಮಶಿವಯ್ಯ ಹೇಳಿದರು.

ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ವತಿಯಿಂದ ಏರ್ಪಾಡಾಗಿದ್ದ “ವಾಣಿಜ್ಯ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರ ದಲ್ಲಿ ಗೋಚರಿಸುತ್ತಿರುವ ಹೊಸ ಪ್ರವೃತ್ತಿಗಳು” ಎಂಬ ವಿಷಯವಾಗಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧ ಮಂಡನೆ ಹಾಗೂ ವಾದಾನುವಾದ ಕಾರ್ಯಕ್ರಮ ‘ಪ್ರಜ್ಞಾ-2’ರ ಉದ್ಘಾಟನೆ ನೆರವೇರಿಸಿ ಪ್ರಧಾನ ಭಾಷಣ ಮಾಡುತ್ತಾ ಪ್ರಸ್ತುತ ಡಿಜಿಟಲ್ ತಂತ್ರಜ್ಞಾನ ಕ್ರಾಂತಿ ಯುಗ ಆರಂಭವಾಗಿದ್ದು ಇದರಿಂದ ಭೌತಿಕ ಉದ್ಯೋಗಗಳು ನಶಿಸುತ್ತವೆ ಎಂಬ ಆತಂಕವಿದ್ದರೂ ಸೇವಾ ರಂಗದಲ್ಲಿ ಬೌದ್ಧಿಕ ಉದ್ಯೋಗಗಳು ಹೇರಳವಾಗಿ ಸೃಷ್ಟಿಯಾಗಲಿದ್ದು ಕೇವಲ ಪಾರ್ಟ್ ಟೈಮ್ ಉದ್ಯೋಗಿಗಳೇ ದೇಶಕ್ಕೆ ದೊಡ್ಡ ಮೊತ್ತದ ಸೇವಾ ತೆರಿಗೆ ಕೊಡುವಂತಾಗುವ ಸಂದರ್ಭ ದೂರವಿಲ್ಲ, ಇದನ್ನು ಬಳಸಿಕೊಳ್ಳುವ ಕೌಶಲ್ಯ ಯುವ ವಿದ್ಯಾರ್ಥಿ ಸಮೂಹಕ್ಕೆ ಬೇಕಿದೆ, ನೂತನ ಶಿಕ್ಷಣ ನೀತಿಯು ಇದಕ್ಕೆ ಪೂರಕವಾಗಿದೆ ಎಂದರು.

Bapuji Institute of Hi-Tech Education ಭವಿಷ್ಯದ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಮೂಲಕ ದಿನದ 24 ಗಂಟೆಯೂ ಚಟುವಟಿಕೆ ನಿರಂತರ ನಡೆಯುವಂತಾಗಲಿದ್ದು ವಿನೂತನತೆ ಇಲ್ಲವೇ ವಿನಾಶ ಎಂಬುದು ಘೋಷವಾಕ್ಯವಾಗಲಿದೆ, ಇಂತಹ ಸಂದಿಗ್ಧದಲ್ಲಿ ಭಾರತದ ಜನಸಂಖ್ಯೆಯ ಶೇಕಡಾ 61ಕ್ಕೂ ಹೆಚ್ಚಿರುವ ಯುವಶಕ್ತಿಯು ದಿನದ 24 ಗಂಟೆಯಲ್ಲಿ 11 ಗಂಟೆಗಳ ಕಾಲ ಬರಿ ಸೋಶಿಯಲ್ ಮೀಡಿಯಾ ವೀಕ್ಷಣೆಯಲ್ಲಿ ಕಳೆಯುತ್ತಿದ್ದರೆ ಹೇಗೆ ಎಂಬ ಆತಂಕ ವ್ಯಕ್ತಪಡಿಸಿದರಲ್ಲದೆ ‘6ಜಿ’ ಯಾವಾಗ ಬರುತ್ತದೆ ಎಂದು ಕಾಯುವುದಲ್ಲ, ಹೊಸ ಡಿಜಿಟಲ್ ಕ್ರಾಂತಿಯ ಸವಾಲೆದುರಿಸಿ ಸಫಲವಾಗುವುದರ ಬಗ್ಗೆ ಯೋಚಿಸಬೇಕು ಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಎಸ್ಎಚ್ ಅವರು ವಾಣಿಜ್ಯ, ತಂತ್ರಜ್ಞಾನ ಹಾಗೂ ಶಿಕ್ಷಣ ಮೂರೂ ವಿಭಾಗಗಳು ಕೂಡಿಸಾಗಬೇಕಾದ ಅನಿವಾರ್ಯತೆ ಇದೆ, ದಶಕದ ಹಿಂದೆ ಬ್ಯಾಂಕಿಂಗ್ ಬಗ್ಗೆ ಗೊತ್ತಿಲ್ಲದವರು ದೇಶದಲ್ಲಿದ್ದರು, ಈಗ ರಸ್ತೆ ಬದಿಯ ಸಾಮಾನ್ಯ ವ್ಯಾಪಾರ ಯೂ ಫೋನ್ ಪೇ ವಿಧಾನ ಬಳಸುವಂತಾಗಿದೆ, ವಿದೇಶದ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರುವಕಾಲ ದೂರವಿಲ್ಲ, ಜ್ಞಾನದ ನವೀಕರಣ ಹಾಗೂ ಕಾರ್ಯದಲ್ಲಿ ನೈಪುಣ್ಯತೆ ಅವಶ್ಯ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪ್ರಾಂಶುಪಾಲ ಡಾ ನವೀನ್ ನಾಗರಾಜ್ ಮಾತನಾಡಿ ಅವಕಾಶಗಳ ಸದುಪಯೋಗದ ಮಹತ್ವ ಅರಿತಲ್ಲಿ ಮಾತ್ರ ಸಾಧನೆ ಸಾಧ್ಯ ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ರವರು ಈ ‘ಪ್ರಜ್ಞಾ’ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತದಿಂದ ಬಂದ ಸುಮಾರು 80 ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡನೆ ಮಾಡಲಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವ್ಯಕ್ತಿಗೆ ಇದು ಸಫಲ ವೇದಿಕೆಯಾಗಿದೆ ಎಂದರು.

ರೂಪಾ ಡಿ. ಮತ್ತು ಸಂಜನಾ ವಿ.ಎನ್. ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಹರ್ಷಿತ ಕೋರಿದರೆ ವೈಷ್ಣವೀ, ಅಫ್ರೀನ್, ಮೆಹತಾಜ್ ಅತಿಥಿಗಳ ಪರಿಚಯ ಮಾಡಿದರು ಪವನ್ ವಂದನೆಗಳನ್ನು ಸಮರ್ಪಿಸಿದರು.

-ಚಿತ್ರ ಹಾಗೂ ವರದಿ: ಎಚ್.ಬಿ.ಮಂಜುನಾಥ-

BJP Karnataka ಇ.ಡಿ.ಮತ್ತು ಸಿಬಿಐ ಗುಮ್ಮಗಳಿಗೆ ಹೆದರಿ ಬಿಎಸ್ ವೈ ಇನ್ನೂ ಬಿಜೆಪಿಯಲ್ಲಿದ್ದಾರೆ- ವೈ.ಬಿ.ಚಂದ್ರಕಾಂತ್

0

BJP Karnataka ಮಾಜಿ ಉಪ ಮುಖ್ಯಮಂತ್ರಿ ಜಗದೀಶ ಶೆಟ್ಟರ್
ಭಾರತೀಯ ಜನತಾ
ಪಕ್ಷ ತ್ಯಜಿಸಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದು
ಪಕ್ಷದ್ರೋಹ ಮತ್ತು ಅಕ್ಷಮ್ಯ ಅಪರಾಧ ಎಂದು ಹೇಳಿಕೆ
ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ
ಪಕ್ಷ ಎಲ್ಲಾ ರಾಜಕೀಯ ಸ್ಥಾನ ಮಾನಗಳನ್ನು ಕೊಟ್ಟಿದ್ದರೂ
ಕಳೆದ 05 ವರ್ಷಗಳ ಹಿಂದೆ ತಾವೇ ಭಾರತೀಯ ಜನತಾ ಪಕ್ಷವನ್ನು
ತ್ಯಜಿಸಿ, ಕೆ.ಜೆ,ಪಿ. ಕಟ್ಟಿದ್ದು ಪಕ್ಷದ್ರೋಹ, ಅಕ್ಷಮ್ಯ ಅಪರಾಧವಲ್ಲವೆ ?
ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್
ಪ್ರಶ್ನಿಸಿದ್ದಾರೆ.

BJP Karnataka ಕಳೆದ ಮೂರುವರೆ ವರ್ಷಗಳ ಹಿಂದೆ ಕಾಂಗ್ರೇಸ್ ಸೇರಿದಂತೆ
ಇತರೆ ಪಕ್ಷಗಳ 22 ಜನ ಚುನಾಯಿತ ಶಾಸಕರನ್ನು
ಬಿ.ಎಸ್,ಯಡಿಯೂರಪ್ಪರ ಕುಮ್ಮಕ್ಕಿನಿಂದ ಆಮಿಷ್ಯ ತೋರಿಸಿ
ಕರೆದೊಯ್ದು ಸರ್ಕಾರ ಮಾಡಿದಾಗ, ವಿರೋಧ ಪಕ್ಷಗಳು ತಮ್ಮ
ಶಾಸಕರನ್ನು ಹಿಡಿದಿಟ್ಟುಕೊಳ್ಳದೆ ನಮ್ಮ ಮೇಲೆ ಗೂಬೆ ಕೂರಿಸುತ್ತಿವೆ
ಎಂದಿದ್ದರು.

ಈಗ ನಿಮ್ಮ ಶಾಸಕರನ್ನು ನೀವೇಕೆ ಹಿಡಿದಿಟ್ಟುಕೊಳ್ಳಲಿಲ್ಲ.
ಕಳೆದ 40 ವರ್ಷಗಳಿಂದ ಅಧಿಕಾರ ಅನುಭವಿಸಿದ್ದ
ಯಡಿಯೂರಪ್ಪರವರು ಕೆ.ಜೆ.ಪಿ. ಕಟ್ಟುವ ಮೂಲಕ ಮಾಡಿದ
ಪಕ್ಷದ್ರೋಹ, ಅನಾಚಾರ ಸರಿಯಾದುದ್ದು ಎಂದಾದರೆ, ಈಗ ಬಿ.ಜೆ,ಪಿ.
ನಾಯಕರಾದ ಜಗದೀಶ ಶೆಟ್ಟರ್, ಲಕ್ಷ್ಮಣ್ ಸವದಿ ಇತರರು ಬಿ.ಜೆ.ಪಿ. ಬಿಟ್ಟು
ಕಾಂಗ್ರೇಸ್ ಪಕ್ಷ ಸೇರಿರುವ ನಿರ್ಧಾರವೂ ಸರಿಯಾದುದ್ದೆ ಆಗಿದೆ ಎಂದು
ಸಮರ್ಥಿಸಿಕೊಂಡಿರುವ ಅವರು, ಪ್ರಜಾಪ್ರಭುತ್ವ
ವ್ಯವಸ್ಥೆಯನ್ನೆ ಕಗ್ಗೊಲೆ ಮಾಡುವ ರೀತಿಯಲ್ಲಿ ಒಂದು ಚುನಾಯಿತ
ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಶಾಸಕರನ್ನು
ಖರೀದಿಸುವಂತಹ ಭ್ರಷ್ಟಾತಿ ಭ್ರಷ್ಟ ವ್ಯವಸ್ಥೆಯ ಹುಟ್ಟು ಹಾಕಿದ
ಮಹಾನ್ ಕೀರ್ತಿ ಬಿ.ಎಸ್.ಯಡಿಯೂರಪ್ಪರಿಗೆ ಸಲ್ಲಬೇಕು ಎಂದು
ವೈ.ಬಿ.ಚAದ್ರಕಾಂತ್ ಕುಟುಕಿದ್ದಾರೆ.

ಕರ್ನಾಟಕ ಜನತಾ ಪಕ್ಷ ಕಟ್ಟಿ ಮಹಾ ಅಪರಾಧ ಮಾಡಿದ್ದರ ಬಗ್ಗೆ
ನಾನು ಈಗಾಗಲೆ ಕ್ಷಮೆ ಕೇಳಿದ್ದೇನೆಂದು
ಬಿ,ಎಸ್.ಯಡಿಯೂರಪ್ಪನವರು ಹೇಳಿರುವುದು ತಮ್ಮ ವಯಸ್ಸಿಗೂ,
ರಾಜಕೀಯ ಅನುಭವಕ್ಕೂ ತಾವೇ ಮಾಡಿಕೊಂಡ ದೊಡ್ಡ
ಅವಮಾನವಾಗಿದೆ. ಈಗಲೂ ಸಹ ಭಾರತೀಯ ಜನತಾ ಪಕ್ಷದ ದೆಹಲಿ ನಾಯಕರ ಮೇಲೆ ಬಿ.ಎಸ್.ಯಡಿಯೂರಪ್ಪರವರಿಗೆ ಕೋಪವಿದ್ದರೂ
ಬಿ.ಜೆ.ಪಿ.ಯ ದೊಡ್ಡ ನಾಯಕರು ತಮಗೆ ತೋರಿಸಿರುವ ಇ.ಡಿ, ಸಿ.ಬಿ.ಐ.
ನಂತಹ ಗುಮ್ಮಗಳಿಗೆ ಹೆದರಿ ಮನಸ್ಸಿಲ್ಲದ ಮನಸ್ಸಿನಿಂದ ಭಾರತೀಯ
ಜನತಾ ಪಕ್ಷದಲ್ಲಿ ಇರುವುದನ್ನು ಬಿ.ಎಸ್.ಯಡಿಯೂರಪ್ಪನವರು
ಈಗಲಾದರೂ ರಾಜ್ಯದ ಜನರ ಮುಂದೆ ಒಪ್ಪಿಕೊಳ್ಳುವ ದೈರ್ಯವನ್ನು
ತೋರಿಸಬೇಕೆಂದು.ಭಾರತೀಯ ಜನತಾ ಪಕ್ಷದ ನಾಯಕರ
ಅನಾಚಾರ ಮತ್ತು ಬ್ಲಾಕ್‌ಮೇಲ್ ರಾಜಕೀಯವನ್ನು ಗಟ್ಟಿ ದೈರ್ಯ ಮಾಡಿ
ಹೊರಗೆ ಎಳೆಯಬೇಕೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ,ಬಿ,ಚಂದ್ರಕಾಂತ್ ಆಗ್ರಹಿಸಿದ್ದಾರೆ.

Shimoga Rural Assembly Constituency ಕೆ.ಬಿ.ಅಶೋಕ ನಾಯ್ಕರಿಂದ ನಾಮಪತ್ರ ಸಲ್ಲಿಕೆ

0

Shimoga Rural Assembly Constituency ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು.

ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಅಶೋಕನಾಯ್ಕ ಅವರು ಚುನಾವಣಾ ಕಾರ್ಯಾಲಯದ ಆವರಣಕ್ಕೆ ಆಗಮಿಸಿದರು.
ಮಂಗಳವಾರ ಬೆಳಗ್ಗೆ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರಿಗೆ ಸಾವಿರಾರು ಕಾರ್ಯಕರ್ತರು ಶುಭಾಶಯ ಕೋರಿದರು.

ಡೊಳ್ಳು ಹಾಗೂ ಚಂಡೆ ವಾದನ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಬಿಜೆಪಿಯ ಥೀಂ ಸಾಂಗ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಎತ್ತಿನ ಗಾಡಿಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಕೇಸರಿ ಶಾಲು, ಪೇಟ ಧರಿಸಿ ಬಿಜೆಪಿ ಪಕ್ಷದ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Shimoga Rural Assembly Constituency ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಉತ್ತರಾಖಂಡ ಮಾಜಿ ಎಂಎಲ್‌ಎ ಮುಖೇಶ್ ಸಿಂಗ್ ಕೋಲಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಡಾ. ಧನಂಜಯ ಸರ್ಜಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್ ಕಲ್ಲಜ್ಜನಾಳ್ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಿಂದ ಸಾವಿರಾರು ಕಾರ್ಯಕರ್ತರ ಜತೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಅವರು ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಬಿಜೆಪಿಗೆ ಜೈಘೋಷ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರಿಗೆ ಜೈಘೋಷ ಹಾಕಿದರು.
ಕೆ.ಬಿ.ಅಶೋಕನಾಯ್ಕ ಅವರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಚ್.ಸಿ.ಬಸವರಾಜಪ್ಪ, ರಾಮಚಂದ್ರ, ಮಹಾದೇವಪ್ಪ ಸಾಥ್ ನೀಡಿದರು.

ಸಾವಿರಾರು ಕಾರ್ಯಕರ್ತರು ಆಗಮಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬುದನ್ನು ತೋರಿಸಿದ್ದಾರೆ.