Legislative Assembly Election ಇನ್ನೂ ಯಾಕ ಕೊಡಲಿಲ್ಲಾವ ?
Legislative Assembly Election ಶಿವಮೊಗ್ಗ ಇಡೀ ರಾಜ್ಯದಲ್ಲೇ ಈಗ ಗಮನ ಸೆಳೆದಿದೆ. ವಿಧಾನ ಸಭಾ ಚುನಾವಣೆ ಟಕೆಟ್ ನೀಡುವ ಸಮಯ ಎಲ್ಲಾ ಪಕ್ಷಗಳೂ ಪರಸ್ಪರ ಎದುರು ಪಕ್ಷದ ಅಭ್ಯರ್ಥಿ ಯಾರು? ಎಂದು ತಾವೇ ತಲೆಕೆರೆದು ಕೊಳ್ಳುತ್ತಿದ್ದವು. ಎದುರು ಪಕ್ದ ಅಭ್ಯರ್ಥಿ ನೋಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನ ನಿರ್ಧರಿಸುತ್ತಿದ್ದವು.ಈಗ ಟಿಕೇಟು ಕೊಡುವುದು ಯಾರಿಗೆ ? ಅಂತ ಬಿಜೆಪಿಗೇ ತಲೆ ತಿನ್ನುತ್ತಿದೆ.
ಇದಕ್ಕೆ ಕಾರಣರಾಗಿರುವವರು ಹಾಲಿ ಶಾಸಕ ಈಶ್ವರಪ್ಪ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರು. ಹೈಕಮಾಂಡ್ ಗೆ ಸಂತೋಷ ಆಯಿತು. ಆದರೆ ಕ್ಷೇತ್ರದ ಅಭ್ಯರ್ಥಿಯ ಪ್ರಶ್ನೆ ಬಂದಾಗ ಈಶ್ವರಪ್ಒನವರ ಪುತ್ರ ರೇಸಿನಲ್ಲಿದ್ದಾರೆ!.
Legislative Assembly Election ಪಕ್ಷನಿಷ್ಠೆ, ಹಿರಿತನ ಮತ್ತು ಈಗಾಗಲೇ ರಾಜ್ಯದ ಹಲವೆಡೆ ತಂದೆ ನಿವೃತ್ತಿ ಪಡೆದ ಸ್ಥಳಗಳಲ್ಲಿ ಮಕ್ಕಳಿಗೆ ಟಿಕೇಟ್ ಘೋಷಿಸಿ ಆಗಿದೆ.
ಗತ್ಯಂತರವಿಲ್ಲ. ಕಾಂತೇಶ್ ಗೇ ಟಿಕೇಟ್ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದು ಈಶ್ವರಪ್ಪನವರ ಜಾಣ್ಮೆ. ಹೈ ಕಮಾಂಡ್ ಗೇ ಹೆಡೆಮುರಿ ಕಟ್ಟಿಹಾಕಿಬಿಟ್ಟಿದ್ದಾರೆ.
ಕೊನೆಗೆ ಟಿಕೆಟ್ ಘೋಷಣೆ ಕಾಂತೇಶ್ ಪರವೇ
ಅನಿಸುತ್ತದೆ.
karnataka Assembly Election ನಮ್ಮ ನಾಯಕರಾಗುವವರು ಕೋಟ್ಯಾಧಿಪತಿಗಳು ಬಡವರ ಮನೆಯಿಂದ ಬಂದವರು
karnataka Assembly Election ರಾಜಕೀಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಲೇ ಇದೆ. ಒಮ್ಮೆ ಒಬ್ಬ ವ್ಯಕ್ತಿ ರಾಜಕೀಯಕ್ಕೆ ಪ್ರವೇಶಿಸಿದರೆ ಅವರ ಮುಂದಿನ ನಾಲ್ಕೈದು ತಲೆಮಾರು ಕೂತು ತಿನ್ನುವುದು ಲೋಕರೂಢಿ.
ರಾಜಕಾರಣಿಗಳು ತಮ್ಮ ಮುಂದಿನ ತಲೆಮಾರುಗಳು ಕುಳಿತು ತಿನ್ನುವಷ್ಟು ಆಸ್ತಿಯನ್ನು ವ್ಯವಸ್ಥೆ ಮಾಡಿ ಬಿಟ್ಟಿರುತ್ತಾರೆ. ಹೀಗಿರುವಾಗ ಸಮಾಜದ ಬೆಳವಣಿಗೆ ಹೇಗೆ ಸಾಧ್ಯ ಎಬುವುದು ಯಕ್ಷಪ್ರಶ್ನೆಯಾಗಿದೆ.
ಪ್ರತಿಷ್ಠಿತ ರಾಜಕಾರಣಿಗಳ ಆಸ್ತಿ ವಿವರಗಳನ್ನು ಉದಾಹರಣೆ ನೀಡಿರುವುದಾದರೆ,
ಕಾಂಗ್ರೆಸ್ ದಾವಣಗೆರೆ ದಕ್ಷಿಣ ಮೂಲದ ಆಡಳಿತಗಾರರಾದ ಶಾಮನೂರು ಶಿವಶಂಕರಪ್ಪನವರ ಕೃಷಿ ಭೂಮಿ ಮೌಲ್ಯ,- 35 ಕೋಟಿ, ಒಟ್ಟು ಆಸ್ತಿ ವರದಿಯಲ್ಲಿ ನೀಡಿರುವಂತೆ ಹೇಳುವುದಾದರೆ – 292. 83 ಕೋಟಿ ರೂ ಇವರು ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲಾಭ ಪಡೆದಿದ್ದಾರೆ.
karnataka Assembly Election ನೂರಾರು ಕೋಟಿ ಒಡೆಯರಾದ ಸಂತೋಷ್ ಲಾಡ್ ಕಲಘಟಗಿಯ ಕಾಂಗ್ರೆಸ್ ಆಡಳಿತಗಾರರ ಬಳಿ ಮಾರುತಿ ಒಮಿನಿಯನ್ನು ಮಾತ್ರ ಕಾಣಬಹುದಾಗಿದೆ. ಇವರ ಬಳಿ ಸುಮಾರು 121. 63 ಕೋಟಿ ರೂ ಹೊಂದಿದ್ದಾರೆ. ಜಾಸ್ತಿ ಹಾಗೂ ಚಿರಾಸ್ತಿಗಳ ಮೂಲಕ ಲಾಡ್ರವರು ಕೋಟಿ ಹಣವನ್ನು ಗಳಿಸಿದ್ದಾರೆ.
ಡಿ,ಕೆ,ಶಿ ಕೋಟಿಸರದಾರ, ಕನಕಪುರದ ಕಾಂಗ್ರೆಸ್ ಆಡಳಿತಗಾರರಾದ ಇವರ ಬಳಿ ಒಟ್ಟು ಆಸ್ತಿ 1114 ಕೋಟಿಯನ್ನು ಹೊಂದಿದ್ದಾರೆ. ಪತಿ ಪತಿ ಇಬ್ಬರೂ ಕೂಡ ತಮ್ಮ 16 ಕೋಟಿಗಳಷ್ಟು ವಾರ್ಷಿಕ ವರಮಾನ ಹೊಂದಿದ್ದಾರೆ.
ಎಂ,ಟಿ,ಬಿ ಎಂದೆ ಹೆಸರಾಗಿರುವ ಬಿಜೆಪಿ ಪಕ್ಷದ ಹೊಸಕೋಟೆಯ ಆಡಳಿತಗಾರರಾದ ಎನ್, ನಾಗರಾಜ್ ರವರು 400 ಕೋಟಿ ಆಸ್ತಿ ಹೆಚ್ಚಳವಾಗಿದೆ ಅಂದಿದ್ದಾರೆ, ಇವರ ಒಟ್ಟು ಆಸ್ತಿ ಮೌಲ್ಯ ವು – 1510 ಕೋಟಿ ಆಗಿರುತ್ತದೆ.
238 ಕೋಟಿ ಒಡೆಯರಾಗಿರುವ ಮಂಜುನಾಥ್ ರವರು, ಜೆ, ಡಿ, ಎಸ್, ಹಾನೂರು ಪಕ್ಷದ ನಾಯಕರು, ಒಟ್ಟು ಆಸ್ತಿ = 238 ಕೋಟಿ ಆಗಿದೆ ಎಂಬುದಾಗಿದೆ.
ಪುರುಷನಿಗಿಂತ ಮಹಿಳೆಯ ಒಂದು ಕೈ ಮೇಲೆ ಎಂಬ ನುಡಿಯಂತೆ, ಲಕ್ಷ್ಮಿ ಅರುಣ ರವರು ಜನಾರ್ಧನ ರೆಡ್ಡಿ ಗಿಂತ ಶ್ರೀಮಂತೆ, ಬಳ್ಳಾರಿ ನಗರದ ಕೆ,ಆರ್, ಪಿ, ಪಿ, ಪಕ್ಷದ ಆಡಳಿತಗಾರರಾಗಿರುವ ಇವರ ಒಂದು ಆಸ್ತಿ 200 ಕೋಟಿಯಾಗಿದೆ ಎಂದು ವರದಿಯಾಗಿದೆ.
ರಾಜಕೀಯ ಎಂಬುದು ಜನರಿಂದ ಆಯ್ಕೆಯಾಗಿ, ಜನರಿಗಾಗಿ ಹಣ ವಿನಿಮಯ ಮಾಡಿ, ಅವರಿಗಾಗಿ ಹೂಡಿಕೆ ಮಾಡಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ , ಪ್ರಜೆಗಳ ಮನಗೆಲ್ಲಬಹುದು, ಇಷ್ಟಿದ್ದರೂ ಕೂಡ ನಮ್ಮ ಸುತ್ತಲಿನ ರಾಜಕೀಯ ಪ್ರತಿನಿಧಿಗಳು ಸಾಮಾನ್ಯ ಜನರ ಬಗ್ಗೆ ಚಿಂತಿಸದೇ ಇರುವುದು ದುಃಖಕರ ಸಂಗತಿಯಾಗಿದೆ.
ಬರಹ: ಭಾರ್ಗವಿ
ಪತ್ರಿಕೋದ್ಯಮ ವಿಧ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ
JCI Shivamogga ಶಿವಮೊಗ್ಗ ಸಹ್ಯಾದ್ರಿ ಜೆಸಿಐ ನ ಸತೀಶ್ ಚಂದ್ರ ಅವರಿಗೆ ಜೆಸಿಐ ರಾಷ್ಟ್ರೀಯ ಪುರಸ್ಕಾರ
JCI Shivamogga 2022-23ರ ಸಾಲಿನ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್ ಚಂದ್ರ ಅವರಿಗೆ ಜೆಸಿಐ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2022-23ನೇ ಸಾಲಿನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಮಾಡಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಸತೀಶ್ ಚಂದ್ರ ಅವರು ಗ್ರಾಮೀಣ ಶಾಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿ ಕೆಲಸ ಮಾಡಿದ್ದರು. ಜೆಸಿಐ ಸಂಸ್ಥೆಗಳಲ್ಲಿ ವಿಶೇಷ ಸಾಧನೆ ಮಾಡುವ ಒಂದು ಸಂಸ್ಥೆಗೆ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೆಸಿಐ ವಿಶೇಷ ರಾಷ್ಟ್ರೀಯ ಫ್ಲಾಗ್ ಶಿಪ್ ಕಾರ್ಯಕ್ರಮದ ಪ್ರಯುಕ್ತ ಉತ್ತಮ ಸೇವೆ ನೀಡುವ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸುಸ್ಥಿರ ಅಭಿವೃದ್ಧಿ ಪ್ರಾಜೆಕ್ಟ್ ಹಾಗೂ 2022-23ರ ಅವಧಿಯಲ್ಲಿ ಸಲ್ಲಿಸಿದ ಸೇವಾ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ಪುರಸ್ಕಾರಗಳಿಗೆ ಶಿವಮೊಗ್ಗ ಸತೀಶ್‌ಚಂದ್ರ ಅವರು ಭಾಜನರಾಗಿದ್ದಾರೆ.
JCI Shivamogga ದೆಹಲಿಯಲ್ಲಿ ನಡೆದ ಜೆಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅನ್ಸೂರ್ ಷರಿಫ್ ಅವರು ಪ್ರಶಸ್ತಿ, ಪಾರಿತೋಷಕ, ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
ವಲಯ ಅಧ್ಯಕ್ಷ ಶಿವಕುಮಾರ, ವಲಯ ಉಪಾಧ್ಯಕ್ಷ ಗೌರೀಶ್, ವಲಯ ನಿರ್ದೇಶಕ ಅನೂಷ್‌ಗೌಡ, ಕೋಟ್ಯನ್ ಶೇಷಗಿರಿ, ಡಾ. ಲಲಿತಾ ಭರತ್, ಡಾ. ಅಕಿಲಾ, ಜಿ.ವಿಜಯ್‌ಕುಮಾರ್, ಮಂಜುನಾಥ್ ಕದಂ, ಪ್ರಮೋದ್ ಶಾಸ್ತ್ರಿ, ಸುಷ್ಮಾ ಹಿರೇಮಠ, ಕಿಶೋರ್, ಸಂತೋಷ್ ಅಭಿನಂದನೆ ಸಲ್ಲಿಸಿದ್ದಾರೆ.
JDS Karnataka ಜೆಡಿಎಸ್ ತೆನೆ ಹೊತ್ತಆಯನೂರು ಮಂಜುನಾಥ್
JDS Karnataka ರಾಜಕೀಯದಲ್ಲಿ ಯಾವುದೂ ನಿಶ್ಚಿತವಲ್ಲ. ಸಿದ್ಧಾಂತಗಳ ಬಗ್ಗೆ ಪುಂಖಾನುಪುಂಖ ಭಾಷಣ ಬಿಗಿಯುತ್ತಿರುತ್ತಾರೆ.
ಮತದಾರರು ಅವರ ಪಕ್ಷನಿಷ್ಠೆಯನ್ನ ನೋಡಿ ತಲೆದೂಗುತ್ತೇವೆ.
ಶಿವಮೊಗ್ಗದ ಬಿಜಿಪಿ ಒಬ್ಬ ಒಳ್ಳೆಯ ವಾಗ್ಮಿ ಅಂತ ಇದ್ದ ಆಯನೂರು ಮಂಜುನಾಥ್ ಈಗ ತಮ್ಮ ಲಹರಿಯನ್ನೇ ಬದಲಿಸಿಕೊಂಡಿದ್ದಾರೆ.ಬಿಜೆಪಿಯಿಂದ ಶಾಸಕ ರಾಜ್ಯಸಬೆ ಲೋಕಸಭೆ ಸದಸ್ಯತ್ವ ಅನುಭವಿಸಿದ್ದರು.
ಈಗ ಈ ಬಾರಿ ಅವರಿಗೆ ಬಿಜೆಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಡಲಿಲ್ಲ. ಹಾಲಿ ಶಾಸಕ
ಈಶ್ವರಪ್ಪನವರ ಮೇಲೆ ಗರಂ ಆಗಿ ಹೇಳಿಕೆ ನೀಡಿದ್ದರು. ಫ್ಲೆಕ್ಸಿ ಹಾಕಿಸಿ ಸುದ್ದಿಮಾಡಿ ಒಂದಿಷ್ಟು ನಾಯಕರ ಗಮನವನ್ನೂ ಸೆಳೆದಿದ್ದರು.
ಅದಕ್ಕೆ ಪ್ರತಿಯಾಗಿ ಈಶ್ವರಪ್ಪನವರ ಪಕ್ಷನಿಷ್ಠೆ ,ಆಯನೂರು ಮಂಜುನಾಥರ ಹೇಳಿಕೆಗಳನ್ನೆಲ್ಲ ಸೋಪಿನಂತೆ ನಿಚ್ಚಳ ಮಾಡಿತು.
JDS Karnataka ಸದ್ಯ ಶೆಟ್ಟರ ಘರ್ ಛೋಡೋ ಅಭಿಯಾನ ಮತ್ತೆಲ್ಲಿ
ಶಿವಮೊಗ್ಗಕ್ಕೂ ಮುಟ್ಟಿತೋ ಅನ್ನುವಷ್ಟರಲ್ಲಿ ಆಯನೂರು ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದಾರೆ.
ಮಲ್ಯರ ಪಾರ್ಟಿ, ಕಾಂಗ್ರೆಸ್, ಈಗ ಜೆಡಿಎಸ್. ವಿಚಾರಧಾರೆಗೆ ಹೆಸರಾದ ವ್ಯಕ್ತಿ. ಈಗ
ಟಿಕೆಟ್ ಗಾಗಿ ಅಲೆಮಾರಿಯಾಗಿದ್ದರು. ಎಲ್ಲವೂ ಅವರವರ ಆಯ್ಕೆ ನಿಜ. ಆದರೆ ಸದ್ಯ ಅವರು ಪಕ್ಷೇತರರಾಗಿ
ಚುನಾವಣಾ ಅಖಾಡಕ್ಕೆ ಇಳಿದಿದ್ದರೆ
ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೆ.
ಚಿತ್ರದುರ್ಗದಲ್ಲಿ ಜೆಡಿಎಸ್ ಮುಖಮಣಿ ಕುಮಾರಸ್ವಾಮಿ ಅವರ ಸಮ್ಮುಖ ಪಕ್ಷ ಸೇರಿದ್ದಾರೆ.
ಕಡೂರು ವೈಎಸ್ ವಿ ದತ್ತ ಅವರ ಸಂಗತಿಗೂ ಮಂಜುನಾಥ್ ಅವರ ವಿಚಾರಕ್ಕೂ ಅಜಗಜಾಂತರವಿದೆ.
ಏನೇ ಆಗಲಿ ಬಿಜೆಪಿಗೆ
ಒಂದು ಮೈನಸ್ಸು. ಆದರೆ ಅಭ್ಯರ್ಥಿಗಳಿಲ್ಲದೇ ಸೊರಗುತ್ತಿದ್ದ ಜೆಡಿಎಸ್ ಒಂದು ಪ್ರಮುಖ ಸೇರ್ಪಡೆ ಎಂಬ ಅಂಶವಂತೂ ದಿಟ.
ಆಯನೂರು ಮಂಜುನಾಥ್ ಅಂಥವರು
ರಾಜಕೀಯದಲ್ಲಿರ ಬೇಕು. ಅವರಿಗೆ ಶುಭವಾಗಲಿ.
Shivamogga McGann Hospital ಅಪರಿಚಿತ ಶವ ಪತ್ತೆ
Shivamogga McGann Hospital ಶಿವಮೊಗ್ಗದ ಆಯನೂರಿನ ವೀರಗಾರನಬೈರನಕೊಪ್ಪ ಬಿ.ಹೆಚ್ ರಸ್ತೆ ಪಕ್ಕದಲ್ಲಿ ಗೋಕುಲ್ ಹೋಟೆಲ್ ಬಿಲ್ಡಿಂಗ್ ಪಕ್ಕದ ಸ್ಟೇರ್ ಕೇಸ್ ಕೆಳ ಭಾಗದಲ್ಲಿ ಸುಮಾರು 60-70 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತ ಪಟ್ಟಿದ್ದು, ಮೃತ ದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಈ ಮೃತ ವ್ಯಕ್ತಿಯ ವಿಳಾಸ ಅಥವಾ ವಾರಸ್ಸುದಾರರ ಯಾರು ತಿಳಿದು ಬಂದಿರುವುದಿಲ್ಲ.
ಮೃತ ವ್ಯಕ್ತಿಯ ಚಹರೆ 5.3 ಅಡಿ. ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಕೂದಲು, ಮುಖದಲ್ಲಿ ಕಪ್ಪು ಮಿಶ್ರಿತ ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಈತನ ಮೈಮೇಲೆ ಬಿಳಿ ಬಣ್ಣದ ಗೆರೆ ಇರುವ ತುಂಬು ತೋಳಿನ ಶರ್ಟು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
Shivamogga McGann Hospital ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಅಥವಾ ತಮ್ಮ ಠಾಣೆಯಲ್ಲಿ ಮನುಷ್ಯಕಾಣೆ ಪ್ರಕರಣ ದಾಖಲಾಗಿದ್ದಲ್ಲಿ ಕುಂಸಿ ಪೊಲೀಸ್ ಠಾಣೆಗಾಗಲಿ ಅಥವಾ ಶಿವಮೊಗ್ಗ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆಗೆ ಪಿ.ಎಸ್.ಐ ಕುಂಸಿ ಠಾಣೆ. – 9480803351, ಡಿ ವೈ ಎಸ್ ಪಿ ಶಿವಮೊಗ್ಗ -08182 261412, ಶಿವಮೊಗ್ಗ ಕಂಟ್ರೋಲ್ ರೂಂ.-08182 2614ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದ್ದಾರೆ.
