Monday, April 13, 2026
Monday, April 13, 2026
Home Blog Page 1234

Department Of Pre-University Education ಏಪ್ರಿಲ್ ಕೊನೇವಾರದಲ್ಲೇ ಪಿಯು ಫಲಿತಾಂಶ

0

Department Of Pre-University Education ಪಿಯು ಮೌಲ್ಯಮಾಪನ ಮತ್ತು ಪರೀಕ್ಷಾ ಮಂಡಳಿಯ ಉನ್ನತ ಅಧಿಕಾರಿಗಳು ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಏಪ್ರಿಲ್ 24ಕ್ಕೆ ಅಥವಾ 25 ರಂದು ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಿಯು ಉತ್ತರ ಪತ್ರಿಕೆಗಳು ಮೌಲ್ಯಮಾಪನಗೊಂಡು ಫಲಿತಾಂಶ ಪ್ರಕಟಗೊಳಿಸಲು ತಯಾರಾಗಿವೆ. 2022- 23ನೇ ಶೈಕ್ಷಣಿಕ ಸಾಲಿನಲ್ಲಿ 7.27.387 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಸುಮಾರು 1.19 ಕೇಂದ್ರಗಳಲ್ಲಿ ರಾಜ್ಯದಲ್ಲೆಡೆ ಪರೀಕ್ಷೇ ನಡೆದಿವೆ.

Department Of Pre-University Education ಮಾರ್ಚ್ 9 ರಿಂದ 29 ರವರೆಗೆ ಪರೀಕ್ಷೆಯನ್ನು ಪಿಯು ವಿದ್ಯಾರ್ಥಿಗಳು ಬರೆದಿರುತ್ತಾರೆ. ಪ್ರತಿ ವಿಷಯದಲ್ಲಿ ಒಂದು ಅಂಕದ 20ದ ಬಹು ಆಯ್ಕೆ ಪ್ರಶ್ನೆಗಳನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

DC Shivamogga ಕಾರ್ಮಿಕರಿಗೆ ಮತದಾನ ಮಾಡಲು ಉದ್ಯಮಿಗಳು ಕಡ್ಡಾಯ ಅವಕಾಶ ‌ಮಾಡಿಕೊಡಬೇಕು-ಡಾ.ಸೆಲ್ವಮಣಿ

0

DC Shivamogga ಕಾರ್ಮಿಕರಿಗೆ ಮತದಾನ ಮಾಡಲು ಕಡ್ಡಾಯವಾಗಿ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಉದ್ದಿಮೆಗಾರರು ಹಾಗೂ ಕೈಗಾರಿಕೋದ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾರ್ಮಿಕರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟು ಹೆಚ್ಚಿನ ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ “ಚುನಾವಣೆ, ಮತದಾನ, ಜವಾಬ್ದಾರಿ” ಸಂವಾದ ಕಾಯಕ್ರಮದಲ್ಲಿ ಮಾತನಾಡಿದರು.

ಸಿ ವಿಜಿಲ್ ಆಪ್ಲಿಕೇಷನ್‌ ಬಿಡುಗಡೆ ಮಾಡಿದ್ದು, ಕಾರ್ಮಿಕರು ತನಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲವೆಂದು ದೂರು ಸಲ್ಲಿಸಿದರೆ ಅಂತ ಮಾಲೀಕರ ವಿರುದ್ಧ ಕೇಸು ದಾಖಲಿಸಿ ಕ್ರಮಕೈಗೊಳ್ಳಬಹುದು. 1903 ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಿದರು.

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಮತದಾನ ನಡೆಯಬೇಕು. ಜಿಲ್ಲೆಯ ಪ್ರತಿಯೊಂದು ಸಂಘ ಸಂಸ್ಥೆಗಳು ಹೆಚ್ಚಿನ ಮತದಾನ ಆಗುವಂತೆ ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಶಿವಮೊಗ್ಗ ನಂಬರ್‌ ಒನ್‌ ಸ್ಥಾನದಲ್ಲಿರಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಚುನಾವಣೆ ಪ್ರಜಾಪ್ರಭುತ್ವದ ಹಬ್ಬ, ನಾವು ಹಬ್ಬ ಆಚರಿಸಿದಂತೆ ಚುನಾವಣೆಯನ್ನು ನಡೆಸಿ ಸಂವಿಧಾನದತ್ತವಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಮತದಾರರು ಹೆಚ್ಚಿನ ಮತ ಚಲಾಯಿಸಿದಾಗ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್‌ ಮಾತನಾಡಿ, ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಮತದಾನ ಆಗುವಂತೆ ಸ್ಥಳೀಯ ಭಾಗಗಳಲ್ಲಿ ಅರಿವು ಮೂಡಿಸಬೇಕು. ಕಾರ್ಮಿಕರು ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಬೇಕು ಎಂದರು.

ಎಂಟು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಸ್ಥೆಯು ವಾಣಿಜ್ಯೋದ್ಯಮಿ ಹಾಗೂ ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಂತರ ಚುನಾವಣಾ ಬಗ್ಗೆ ಪ್ರಶ್ನೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್‌, ಸಂಘದ ನಿರ್ದೇಶಕರಾದ ಗಣೇಶ್ ಅಂಗಡಿ, ಪ್ರದೀಪ್ ಎಲಿ , ಮರಿಸ್ವಾಮಿ, ಪರಮೇಶ್ವರ್, ಉದಯಕುಮಾರ್, ಸುಕುಮಾರ್, ಮಧುಸೂದನ ಐತಾಳ, ಮಾಚನಳ್ಳಿ ಕೈಗಾರಿಕ ಸಂಘದ ಪರಮೇಶ್ವರ್, ದಿನಸಿ ವರ್ತಕರ ಸಂಘದ ಹಾಲಸ್ವಾಮಿ, ಟಾಕ್ಸ್ ಬಾರ್ ಅಸೋಸಿಯೇಷನ್‌ , ಆಟೋ ಕಾಂಪ್ಲೆಕ್ಸ್ ಕುಮಾರ ಶಾಸ್ತ್ರಿ ಹಾಗೂ ಸಂಯೋಜಿತ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

DC Shivamogga ಸುಡಾನ್ ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯವನ್ನು ಸುರಕ್ಷಿತ ಭಾರತಕ್ಕೆ ತನ್ನಿ-ಟಿ.ಎಚ್.ಹಾಲೇಶಪ್ಪ

0

DC Shivamogga ಸುಡಾನ್ ದೇಶದಲ್ಲಿ ಸೇನಾ ಸಂಘರ್ಷದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಅಲೆಮಾರಿ ಹಕ್ಕಿಪಿಕ್ಕಿಯವರನ್ನು ಸುರಿಕ್ಷಿತವಾಗಿ ಭಾರತಕ್ಕೆ ವಾಪಾಸ್ ಕರೆಸುವಂತೆ ಕೋರಿ ಜಿಲ್ಲಾಧಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ಜಿಲ್ಲಾಸಂಚಾಲಕ ಟಿ.ಎಚ್.ಹಾಲೇಶಪ್ಪ ನೀಡಿದರು.

DC Shivamogga ಈ ಸಂದರ್ಭದಲ್ಲಿ ಪ್ರಮುಖರಾದ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣ ಸಮಿತಿ ರಾಜ್ಯಾಧ್ಯಕ್ಷ ಜಗ್ಗು, ಮೀನು, ಸಂಜಿಲಾ, ರಾಜವೇಲು, ರಂಗಸ್ವಾಮಿ ಇತರರು ಇದ್ದರು.

Kateel Ashok Pai Memorial College ಕಟೀಲ್ ಅಶೋಕ್ ಪೈ ಕಾಲೇಜಿಗೆ ಭರ್ಜರಿ ಫಲಿತಾಂಶ

0


Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ 2022ನೇ ಸಾಲಿನ ಮೂರು ರ‍್ಯಾಂಕ್‌ಗಳು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಒಟ್ಟು ನಾಲ್ಕು ರ‍್ಯಾಂಕ್‌ಗಳು ಲಭಿಸಿವೆ.

2017 ರಲ್ಲಿ ಶಿವಮೊಗ್ಗ ಮಾನಸ ಟ್ರಸ್ಟ್(ರಿ) ಆರಂಭಿಸಿದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿದ 2022ನೇ ಸಾಲಿನ ರ‍್ಯಾಂಕ್ ಪಟ್ಟಿಯಲ್ಲಿ ಒಟ್ಟು ಮೂರು ರ‍್ಯಾಂಕ್‌ಗಳು ಲಭಿಸಿವೆ. ಈ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು. ಸಹನಶ್ರೀ ಟಿ., ಆ/o ಶ್ರೀ ತಿಮ್ಮಪ್ಪ ಟಿ, ದ್ವಿತೀಯ ರ‍್ಯಾಂಕ್ ಹಾಗೂ ಬಿ.ಎ ವಿದ್ಯಾರ್ಥಿನಿ ಕು. ರಾಧಿಕಾ ಎಸ್. ಜೋಷಿ ಆ/o ಶ್ರೀ ಸತೀಶ್ ಡಿ, ದ್ವಿತೀಯ ರ‍್ಯಾಂಕ್ ಮತ್ತು ಕು. ತೇಜಸ್ವಿನಿ ಎಂ.ಎಸ್., ಆ/o
ಶ್ರೀ ಶಿವಾನಂದ ಗೌಡ ನಾಲ್ಕನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಈ ಮೂವರು ವಿದ್ಯಾರ್ಥಿನಿಯರಿಗೆ ಮಾನಸ ಟ್ರಸ್ಟ್ನ ನಿರ್ದೇಶಕಿ ಡಾ. ರಜನಿ ಎ ಪೈರವರು ಅಭಿನಂದಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದಲ್ಲದೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಈ ಸಂಸ್ಥೆಯ ಗುರಿ ಎಂದು ತಿಳಿಸಿದರು.


Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನ ಸಂಸ್ಥೆಯ ಎಂ.ಎಸ್ಸಿ. ಕ್ಲಿನಿಕಲ್ ಸೈಕಾಲಜಿಯ ವಿಭಾಗದಲ್ಲಿ ರಾಜ್ಯದ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿ ಕು. ರಕ್ಷತಾ ಜೆ ರವರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇದೇ ವಿಭಾಗದ ಕು. ದೀಕ್ಷಾ ಹೆಚ್. ಆರ್, ಕು. ಹೆಬ್ಬಾರ್ ಎನ್ ಕ್ಷಿತಿಜಾ ಮತ್ತು ಕು. ರುತುಜಾ ಎಸ್ ರಾವ್ ರವರು ಕ್ರಮವಾಗಿ ಮೂರು, ಐದು ಹಾಗೂ ಏಳನೇ ರ‍್ಯಾಂಕ್ ಪಡೆದಿರುತ್ತಾರೆ.
ಈ ಕಾಲೇಜು ಪ್ರಾರಂಭವಾದ ಕೇವಲ 06 ವರ್ಷಗಳಲ್ಲಿ ಪ್ರತಿ ವರ್ಷವೂ ರ‍್ಯಾಂಕ್ ಬರುತ್ತಿರುವುದು ಶ್ಲಾಘನೀಯ ವಿಷಯ ಎಂದು ಮಾನಸ ಟ್ರಸ್ಟ್ನ ಡಾ. ವಾಮನ್ ಶಾನ್‌ಭಾಗ್,ಡಾ. ಪ್ರೀತಿ ಶಾನ್‌ಭಾಗ್ ಹಾಗೂ ಶೈಕ್ಷಣ ಕ ಸಲಹೆಗಾರರೂ, ನಿರ್ದೇಶಕರೂ ಆದ ಡಾ. ರಾಜೇಂದ್ರ ಚೆನ್ನಿ ಪ್ರಶಂಸಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ, ಬಿಎಸ್‌ಡಬ್ಲ್ಯೂ ಹಾಗೂ ಎಂಎಸ್ಸಿ ಸೈಕಾಲಜಿ ಕೋರ್ಸ್ಗಳನ್ನು ನಡೆಸುತ್ತಿದೆ. ಸುಸಜ್ಜಿತ ಕಟ್ಟಡ, ಪರಿಣಿತ ಉಪನ್ಯಾಸಕರ ವೃಂದ, ಉತ್ತಮ ಪ್ರಯೋಗಾಲಯಗಳನ್ನು ಈ ಕಾಲೇಜು ಹೊಂದಿದ್ದು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ತರಬೇತಿ, ಇಂಗ್ಲಿಷ್ ಸಂವಹನ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ನೀಡುತ್ತಿದೆ.

ಪ್ರತಿ ವಿದ್ಯಾರ್ಥಿಯು ಪದವಿಯೊಂದಿಗೆ ವಿವಿಧ ಸರ್ಟಿಫಿಕೇಟ್ ಕೋರ್ಸುಗಳನ್ನು ಮಾಡಿಕೊಂಡು ತನ್ನ ಔದ್ಯೋಗಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಈ ಕಾಲೇಜು ಅವಕಾಶ ನೀಡುತ್ತಿದೆ.
ಅತ್ಯುತ್ತಮ ಅಂಕ ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲೇ ದ್ವಿತೀಯ ರ‍್ಯಾಂಕ್ ಪಡೆದ ಬಿಎ ವಿದ್ಯಾರ್ಥಿನಿ ಕು. ರಾಧಿಕಾ ಜೋಷಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ತನ್ನ ಗುರಿಯನ್ನು ಈಡೇರಿಸಿಕೊಳ್ಳಲು ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಿದ್ದಾಗಿ ಹೇಳುತ್ತಾರೆ. ತನ್ನ ಆಸಕ್ತಿಯ ಸೈಕಾಲಜಿ, ಇಂಗ್ಲಿಷ್ ಸಾಹಿತ್ಯ ವಿಷಯಗಳನ್ನು ಬೋಧಿಸುತ್ತಿದ್ದ ಅನುಭವೀ ಉಪನ್ಯಾಸಕರು ಜ್ಞಾನದ ಧಾರೆಯನ್ನೇ ಎರೆದರು ಹಾಗೂ ಹಲವಾರು ಸೆಮಿನಾರ್‌ಗಳು, ಕಾರ್ಯಾಗಾರಗಳಲ್ಲಿ ಭಾಗವಹಿಸುವಂತೆ ಮಾಡಿ ನನ್ನ ಕೌಶಲ್ಯಗಳನ್ನೂ ನೈಪುಣ್ಯತೆಯನ್ನು ಹೆಚ್ಚು ಮಾಡಿದರು ಎಂದು ಹೇಳಿದರು.
.
ಬಿಎಸ್‌ಡಬ್ಲ್ಯೂ ರ‍್ಯಾಂಕ್ ವಿಜೇತೆ ಕು. ಸಹನಶ್ರೀ ಟಿ ಯವರ ತಂದೆ ಶ್ರೀ ತಿಮ್ಮಪ್ಪರವರು ಗ್ರಾಮೀಣ ಪ್ರದೇಶದಿಂದ ಬಂದ ತನ್ನ ಮಗಳಿಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ರ‍್ಯಾಂಕ್ ಬರಲು ಮುಖ್ಯ ಕಾರಣ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಪ್ರತಿಯೊಬ್ಬ ವಿದ್ಯಾರ್ಥಿಗೆ ಮೌಲ್ಯಯುತ ಶಿಕ್ಷಣ ನೀಡುವುದಲ್ಲದೇ ಅವರ ಭವಿಷ್ಯಕ್ಕೆ ಬೇಕಾದ ಎಲ್ಲ ಸಾಮರ್ಥ್ಯಗಳನ್ನೂ ಬೆಳೆಸಿಕೊಳ್ಳಲು ಈ ಕಾಲೇಜು ಶ್ರಮಿಸುತ್ತಿದೆ ಎಂದರು.

ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ರಾಜ್ಯಕ್ಕೇ ಮೊದಲ ರ‍್ಯಾಂಕ್ ಪಡೆದ ಕು. ರಕ್ಷತಾರವರು ಸೈಕಾಲಜಿಯಲ್ಲಿ ಅತ್ಯುತ್ತಮ ತರಗತಿಗಳು ಈ ಕಾಲೇಜಿನಲ್ಲಿ ನಡೆಯುವುದಲ್ಲದೆ, ಮಾನಸ ನರ್ಸಿಂಗ್ ಹೋಂ ಮೂಲಕ ಪ್ರಾಯೋಗಿಕ ನೇರ ತರಬೇತಿಯನ್ನು ನೀಡುತ್ತಿರುವ ಏಕೈಕ ಕಾಲೇಜು ಇದಾಗಿದೆ ಎಂದು ಹೇಳಿದರು.

ಮನೋವಿಜ್ಞಾನವನ್ನು ಅತ್ಯಂತ ಆಳವಾಗಿ ಹಾಗೂ ಆಸಕ್ತಿಯಿಂದ ಕಲಿಯಲು ಇದೇ ಕಾಲೇಜೇ ವಿದ್ಯಾರ್ಥಿಗೆ ಸೂಕ್ತ ಎಂಬುದು ಅವರ ಅಭಿಪ್ರಾಯ. ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

ಮಾನಸ ಸಂಸ್ಥೆಯ ನಿರ್ದೇಶಕಿ ಡಾ. ರಜನಿ ಎ. ಪೈರವರು ಅತ್ಯಂತ ಸಂಭ್ರಮದ ಈ ವರ್ಷದ ಉತ್ತಮ ಫಲಿತಾಂಶಕ್ಕಾಗಿ ಕಾಲೇಜಿನ ಎಲ್ಲಾ ಸಲಹಾಮಂಡಳಿ ಸದಸ್ಯರನ್ನೂ, ಸಿಬ್ಬಂದಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ.

ಇಡೀ ರಾಜ್ಯಮಟ್ಟದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡುತ್ತಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಲೆನಾಡಿನ ಒಂದು ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅರಸಿ ಬರುತ್ತಿದ್ದಾರೆ ಎಂದು ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ ಹೇಳಿದರು.

ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಹಾಗೂ ಪ್ರತಿಷ್ಟಿತ ಕಾಲೇಜುಗಳೊಂದಿಗೆ ಸಹಯೋಗದ ಮೂಲಕ ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

BJP Karnataka ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾಗಿ ಚನ್ನಬಸಪ್ಪ ಆಯ್ಕೆ

BJP Karnataka ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದೆ.
ಚನ್ನಬಸಪ್ಪ , ಆಪ್ತ ವಲಯದಲ್ಲಿ ಚೆನ್ನಿ ಎಂದೇ ಗುರುತಿಸಿಕೊಂಡಿದ್ದಾರೆ. ಅದೇ ಮನೆಮಾತಾಗಿದೆ.
ಕಟ್ಟಾ ಆರ್ ಎಸ್ಎಸ್ ಸ್ವಯಂಸೇವಕ. ಬಿಜೆಪಿ ಯಲ್ಲೂ ಮಿತ್ರರೆಲ್ಲರ ಚೆನ್ನಿ.
ನಗರದ ಸಾಂಸ್ಕೃತಿಕ ಸಂಘಸಂಸ್ಥೆಗಳ ನೇತೃತ್ವ.
ಹಿಂದೂ ಸಮಾಜದ ಹಿತ ರಕ್ಷಿಸುವಲ್ಲಿ ಹಾಲೀ ಎಸ್ ಈಶ್ವರಪ್ಪನವರ ಹೆಜ್ಜೆಯಲ್ಲಿ ಹೆಜ್ಜೆಯಿಡುವ ಆತ್ಮೀಯ.

ನಾಳೆ ಚನ್ನಬಸಪ್ಪ ನಾಮಪತ್ರ ಸಲ್ಲಿಸಲಿದ್ದಾರೆ.
ಚುನಾವಣೆಯಂತೂ
ಟೈಟ್ ಫೈಟ್.
ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿ ಈ ಬಗ್ಗೆ ಮುಂದೆ ಸಮನ್ವಯ ಮಾಡಿಕೊಂಡು ಹೋಗುವವರ ಅಗತ್ಯವಿದೆ.

ಶಿವಮೊಗ್ಗ ನಗರಕ್ಕೀಗ ಶಾಂತಿ ನೆಮ್ಮದಿಯಿಂದ ಉಸಿರಾಡುವ ಹವೆ ಅವಶ್ಯ.ಆ ದಿಸೆಯಲ್ಲಿ
ಗೆದ್ದ ಅಭ್ಯರ್ಥಿಯ ನೈತಿಕ ಹೊಣೆ ಅಪಾರ.

BJP Karnataka ಯಾವಪಕ್ಷಕ್ಕೆ ಜಯಮಾಲೆ?ಗೆಲ್ಲುವ ಅಭ್ಯರ್ಥಿ ಯಾರು?
ಅವರ ವೈಯಕ್ತಿಕ ನಿಲುವುಗಳು, ಪಕ್ಷದ ಸಿದ್ಧಾಂತ
ಈ ಅಂಶಗಳೇ ಶಿವಮೊಗ್ಹ ನಗರಕ್ಕೆ ಹೊಸಭಾಷ್ಯ ಬರೆಯಲು ಸಾಧ್ಯವಾಗಬಹುದು.

ಸುದ್ದಿ ತಿಳಿದ ತಕ್ಷಣ ಕೆ..ಎಸ್.ಈಶ್ವರಪ್ಪನವರು ಬಿಜೆಪಿ ವರಿಷ್ಡರ
ತೀರ್ಮಾನ ಸ್ವಾಗತಿಸುತ್ತೇನೆ. ಚನ್ನಿ ಅವರನ್ನ ಗೆಲ್ಲಿಸುವವರೆಗೂ ಸುಮ್ಮನೆ ಕೂರಲಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮುಖಾಂತರ ಬಿಜೆಪಿ ಅಭ್ಯರ್ಥಿಯಾಗಿರುವ
ಚನ್ನಬಸಪ್ಪ ಅವರು ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸಲಿಸುತ್ತಾರೆ.ಜಿಲ್ಲಾ ಬಿಜೆಪಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

Shivamogga Police ಕ್ಷಿಪ್ರ ಪೊಲೀಸ್ ಕಾರ್ಯಾಚರಣೆ ಮಟ್ಕಾ ಕ್ರಿಕೆಟ್ ಬೆಟ್ಟಿಂಗ್ ಖದೀಮನ ಅರೆಸ್ಟ್

0

Shivamogga Police ಮಟ್ಕಾ, ಇಸ್ಪೀಟ್ ಜೂಜಾಟ ಕ್ರಿಕೆಟ್ ಬೆಟ್ಟಿಂಗ್, ನಡೆಸುತ್ತಿರುವವರನ್ನ ಹಿಡಿಯುವಲ್ಲಿ ಶಿವಮೊಗ್ಗ ಜಿಲ್ಲೆಯ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಸ ಮನೆ ಬಡಾವಣೆಯ ಸತೀಶ್ (28) ಬಂಧಿತ ವ್ಯಕ್ತಿಯಾಗಿದ್ದಾನೆ. ಇವರು ಹೊಸ ಮನೆ ಬಡಾವಣೆಯ ನಿವಾಸಿಯಾಗಿದ್ದು, ಆರೋಪಿ ಬಳಿ 13 ಮೊಬೈಲ್ ಫೋನ್ ಹಾಗೂ ಮೊಪೆಡ್ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Shivamogga Police ಮಟ್ಕಾ ಜೂಜಾಟ ಹಾಗೂ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಅಂತಹ ಕಾನೂನು ಬಾಗಿರ ಚಟುವಟಿಕೆಗಳು , ನಿಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಅವುಗಳಲ್ಲಿ ಅವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ತಕ್ಷಣ 112 ತುರ್ತು ಸಹಾಯವಾಣಿ,/ ಹತ್ತಿರದ ತಕ್ಷಣ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ರೂಂಗೆ 9480803300/ 08182 261413 ಗೆ ಸಂಪರ್ಕ ನಡೆಸಿ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

15 ಏಪ್ರಿಲ್ ರಂದು ಶಿವಮೊಗ್ಗದಲ್ಲಿ ವಿಶೇಷ ತಂಡವು ಮಾಹಿತಿ ಸಂಗ್ರಹಿಸಿ ಜೂಜಾಟ ಹಾಗೂ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ 7.20 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಟ್ಕಾ ಇಸ್ಪೀಟ್ ಜೂಜಾಟ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಸಾಂವ್ಚನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಿ.ಇ.ಎನ್ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.