Monday, April 13, 2026
Monday, April 13, 2026
Home Blog Page 1233

Karnataka High Court ಹೈ ಕೋರ್ಟ್ ತೀರ್ಪುಗಳು ಈಗ ವೆಬ್ ಪೇಜ್ ನಲ್ಲಿ ಕನ್ನಡೀಕರಣವಾಗಿ ಲಭ್ಯ

0

Karnataka High Court ಕರ್ನಾಟಕ ಹೈಕೋರ್ಟ್ ನೀಡುವ ತೀರ್ಪುಗಳು ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಲಭ್ಯವಾಗಲಿದೆ. ಹೈ ಕೋರ್ಟ್ ಕನ್ನಡದ ತೀರ್ಪುಗಳ ವೆಬ್ ಪುಟವನ್ನ ಪ್ರಾರಂಭಿಸಿದೆ.

ಮೊದಲ ಹಂತದಲ್ಲಿ ಕರ್ನಾಟಕ ಹೈಕೋರ್ಟ್ ನ 169 (https://karnatakajudiciary. Kar. Nic. In/hck-judgements. Php) ಕನ್ನಡೀಕರಿಸಿದ ತೀರ್ಪು ಪ್ರಕಟಿಸಲಾಗಿರುತ್ತದೆ.

Karnataka High Court ಕೇರಳ ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ತಮ್ಮ ಸ್ಥಳೀಯ ಭಾಷೆಯಲ್ಲಿ ತೀರ್ಪು ನೀಡಲು ಆರಂಭಿಸಿದ್ದರು ಸಹ ಕರುನಾಡಿನ ಹೈಕೋರ್ಟ್ ಅತಿ ಹೆಚ್ಚು ತೀರ್ಪು ಕನ್ನಡದಲ್ಲಿ ಪ್ರಕಟಿಸಿ ಅವುಗಳನ್ನು ವೆಬ್ ಪೇಜ್ ನಲ್ಲಿ ಹಾಕಿದೆ.

ನ್ಯಾಯಮೂರ್ತಿ ಪಿ, ಬಿ, ವರ್ಲೆಯವರು ವೆಬ್ ಪೇಜ್ ಅನಾವರಣಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಸಾಮಾನ್ಯ ಜನರಿಗೆ ಅನುಕೂಲವಾಗುವ ಉದ್ದೇಶದಿಂದ 197 ಪ್ರಮುಖ ಸುದ್ದಿಯನ್ನು ಪ್ರಕಟಿಸಿರುವುದು ಮಹತ್ವದ ಕಾರ್ಯವಾಗಿದೆ.

‘ಸುವಸ್ ‘ಕೃತಕ ಬುದ್ಧಿಮತ್ತೆ ಟೂಲ್ ಬಳಸಿ ನ್ಯಾಯಾಂಗ ದಾಖಲೆ ಮತ್ತು ತೀರ್ಪು ನೀಡುವ ಕನ್ನಡೀಕರಿಸಲಾಗುತ್ತದೆ.

Assembly Election ಶಿಕಾರಿಪುರ ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಯಾಗಿ ಅನಿಲ್ ಕುಂಚಿ

0

Assembly Election ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ಇಂದು ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಅವರು ನಾಮ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನಿಲ್ ಅವರ ಜೊತೆ ಗೆಳೆಯರ ಬಳಗದ ಶಿಕಾರಿಪುರದ ತೇಜರಾಜು, ಚುಚ್ಚುಗುಂಡಿ ರಾಜೇಶ್, ಸಿರಿ ಹಳ್ಳಿ ಮಂಜು ಬಾಗವಹಿಸಿದ್ದರು.

Assembly Election ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಅವರು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನಿಲ್ ಅವರ ಜೊತೆ ಗೆಳೆಯರ ಬಳಗದ ಎಸ್.ಪಿ. ಶಿವಣ್ಣ, ರೂಪ ನಾಗರಾಜ್, ಜ್ಯೋತಿ ಉಮೇಶ್, ರಿಜ್ವಾನ್, ಉಪಸ್ಥಿತರಿದ್ದರು.

Assembly election ಜಿಲ್ಲೆಯ ಏಳು ವಿಧಾನ ಸಭಾಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರ ನೇಮಕ

0

Assembly Election ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶಿವಮೊಗ್ಗ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಿಗೆ ಈ ಕೆಳಗಿನಂತೆ ಚುನಾವಣಾ ಸಾಮಾನ್ಯ ವೀಕ್ಷಕರನ್ನು ನೇಮಿಸಿದೆ.
ಸಾಮಾನ್ಯ ವೀಕ್ಷಕರು & ಸಂಪರ್ಕ ಸಂಖ್ಯೆ : ಶಿವಮೊಗ್ಗ ಗ್ರಾಮಾಂತರ-111 ಮತ್ತು ಭದ್ರಾವತಿ-112 ಗೆ ಗೋವಿಂದ್ರಂ ಚುರೇಂದ್ರ ಮೊ.ಸಂ: 9425585295, 6366742881. ಶಿವಮೊಗ್ಗ-113 ಮತ್ತು ತೀರ್ಥಹಳ್ಳಿ-114 ಕಾಂತಿಲಾಲ್ ದಾಂಡೆ ಮೊ.ಸಂ: 9100459888, 8197699925.

Assembly Election ಶಿಕಾರಿಪುರ-115 ಕೃಪಾನಂದ್ ಝಾ ಮೊ.ಸಂ: 9931727204, 8197699897. ಸೊರಬ-116 ಮತ್ತು ಸಾಗರ-117 ರಂಜಿತ ಮೊ.ಸಂ: 7033202202, 8197699842 ಆಗಿರುತ್ತದೆ.

Radio Shivamogga ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಶಿವಮೊಗ್ಗ ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ

0

Radio Shivamogga ಮಲೆನಾಡಿನ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರವಾದ ರೇಡಿಯೋ ಶಿವಮೊಗ್ಗ 90.8 ಎಫ್ ಎಂ ನಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಿ ಏ.22ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈ ಪಯಣದಲ್ಲಿ ಸಹಕಾರ ನೀಡಿದ ಎಲ್ಲಾ ಕೇಳುಗರಿಗೆ, ಜಾಹೀರಾತುದಾರರು ಹಾಗೂ ಹಿತೈಷಿಗಳಿಗೆ ಬಾನುಲಿ ಕೇಂದ್ರದ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಆತ್ಮೀಯ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಿಡ್ಸ್ (ಕೊಡಚಾದ್ರಿ ಡೆವೆಲ್ ಪ್ಮೆಂಟ್ ಸೊಸೈಟಿ)ಯ ಕನಸಿನ ಯೋಜನೆ ಈ ಬಾನುಲಿ ಕೇಂದ್ರವಾಗಿದೆ. ಈ ಒಂದು ವರ್ಷದ ಪಯಣದಲ್ಲಿ ಲಕ್ಷಾಂತರ ಕೇಳುಗರ ಹೃನ್ಮನಗಳನ್ನು ರೇಡಿಯೋ ತಲುಪಿದೆ. ದಿನದ 24 ತಾಸೂ ರೇಡಿಯೋ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ.

ರೇಡಿಯೋ ಶಿವಮೊಗ್ಗ ಆಪ್ ನ ಮುಖಾಂತರ ಜಗತ್ತಿನಾದ್ಯಂತ 176 ರಾಷ್ಟ್ರಗಳಲ್ಲಿ ಕೇಳುಗ ವಲಯವನ್ನು ವಿಸ್ತರಿಸಿಕೊಂಡಿರುವುದು ನಮ್ಮ ರೇಡಿಯೋದ ಹೆಮ್ಮೆಯಾಗಿದೆ. ಕೇಳುಗರ ವಿನಂತಿಯ ಮೇರೆಗೆ, ಅನೇಕಾನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಮುದಾಯ ಬಾನುಲಿಯಾಗಿ ತನ್ನ ಛಾಪು ಮೂಡಿಸುತ್ತಿರುವುದು ಸಂತಸ ತಂದಿದೆ ಎಂದರು.

Radio Shivamogga ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಹೊರತಾದ ಸಮಗ್ರ ಶಿಕ್ಷಣವನ್ನು ನಮ್ಮ ಬಾನುಲಿ ಕೇಂದ್ರ ಗುರುತಿಸಿ, ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಶಿಕ್ಷಣ ಎಂಬುದನ್ನು ಇಲ್ಲಿ ಮೂರು ಸ್ತರದಲ್ಲಿ ನಾವು ನೋಡುತ್ತಿದ್ದೇವೆ. ಮೊದಲನೆಯದಾಗಿ ಶಾಲಾ ಶಿಕ್ಷಣದ ಹಂತ, ಎರಡನೆಯದಾಗಿ ಉನ್ನತ ಶಿಕ್ಷಣದ ಹಂತ, ಮೂರನೆಯದಾಗಿ ಸಮುದಾಯ ಶಿಕ್ಷಣದ ಹಂತ. ನಮ್ಮೆಲ್ಲ ಕಾರ್ಯಕ್ರಮಗಳ ಒಟ್ಟೂ ಉದ್ದೇಶ ಹೀಗೆ ಮೂರು ಹಂತದಲ್ಲಿ ಶಿಕ್ಷಣವನ್ನು ನೀಡಿ, ಸುಸ್ಥಿರ ಬದುಕಿಗೆ ವೇದಿಕೆಯನ್ನಾಗಿ ರೂಪಿಸಿ, ಭರವಸೆಯ ಭವಿಷ್ಯಕ್ಕಾಗಿ ಬಾನುಲಿಯಲ್ಲಿ ಕಾರ್ಯಕ್ರಮಗಳನ್ನು ನೀಡುವುದಾಗಿದೆ ಎಂದಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೃಷಿ, ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ವಾಣಿಜ್ಯ, ಶಿಕ್ಷಣ, ಕಲೆ, ಸಂಸ್ಕೃತಿ, ಸ್ಥಳೀಯ ಭಾಷೆಗಳು, ಪರಿಸರ, ಗುಡಿಕೈಗಾರಿಕೆ, ಬ್ಯಾಂಕಿಂಗ್, ಆರೋಗ್ಯ, ಕೈಗಾರಿಕೆ, ಸೇವಾ ಕ್ಷೇತ್ರ, ಡಿಜಿಟಲ್ ತಂತ್ರಜ್ಞಾನ ಇನ್ನಿತರ ವಿಷಯಾಧಾರಿತ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದೆ. ಶ್ರವಣ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನೂ ಒಳಗೊಳ್ಳುವುದು ನಮ್ಮ ಆಶಯವಾಗಿದೆ.

ನಮ್ಮ ಆಪ್‌ ನ ಪಾಡ್‌ಕಾಸ್ಟ್ ಮೂಲಕ ಮುಖ್ಯ ಕಾರ್ಯಕ್ರಮಗಳ ಆಡಿಯೋವನ್ನು ಕೇಳುಗರು ತಮಗೆ ಬೇಕೆಂದಾಗ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಅವಕಾಶವನ್ನು ರೇಡಿಯೋ ಶಿವಮೊಗ್ಗ ಎಫ್.ಎಂ. ಒದಗಿಸುತ್ತದೆ ಎಂದಿದ್ದಾರೆ.

ಒಂದು ವರ್ಷದ ಸವಿ ಸಂದರ್ಭಕ್ಕೆಂದು ಆಹ್ವಾನಿತ ಶ್ರೋತೃಗಳು, ಗಣ್ಯಮಾನ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಮ್ಮುಖದಲ್ಲಿ ರೇಡಿಯೋ ಹಬ್ಬವನ್ನು ಆಯೋಜಿಸಲಾಗಿದೆ. ಇವರಿಂದ ವರ್ಷದ ಹಿನ್ನೋಟ, ಪ್ರತಿಸ್ಫಂದನೆ ಹಾಗೂ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ಒಗ್ಗೂಡಿಸುವ ಚಿಂತನ – ಮಂಥನ ಇದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೃಹತ್ ಮಟ್ಟದಲ್ಲಿ ಆಯೋಜಿಸುವ ಚಿಂತನೆ ಇದೆ.

ಇದಕ್ಕೆ ನಮ್ಮೆಲ್ಲ ಕೇಳುಗರ, ಹಿತೈಷಿಗಳ ಸಹಕಾರ ಮಾರ್ಗದರ್ಶನವೇ ಮುಖ್ಯವಾಗಿದೆ. ಜನ ಸಮುದಾಯಗಳು ಅಪೇಕ್ಷಿಸಿದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲೂ ರೂಪಿಸಲಾಗುವುದು ಎಂದರು.

ರೇಡಿಯೋ ಶಿವಮೊಗ್ಗದ ಒಂದು ವರ್ಷದ ಪಯಣದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಶಿಕ್ಷಣ ತಜ್ಞರು, ಪರಿಸರ ವಿಜ್ಞಾನಿಗಳು, ಜನಪದ ತಜ್ಞರು, ರೈತವಿಜ್ಞಾನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಪಾಠಗಳು, ಶಿಕ್ಷಕರಿಗೆ ಅಗತ್ಯವಾದ ವಿದ್ಯಾಗಮ ಆನ್ ಲೈನ್ ತರಬೇತಿ ಕಾರ್ಯಕ್ರಮಗಳು ನಮ್ಮ ರೇಡಿಯೋದಲ್ಲಿ ಬಿತ್ತರವಾಗಿದೆ. ವಿಶೇಷವಾಗಿ ರೇಡಿಯೋ ಮುಖಾಂತರ ಬದುಕಿಗಾಗಿ ರಂಗಪಾಠಗಳನ್ನು ಬಿತ್ತರಿಸುತ್ತಾ,ಅಭಿನಯದ ಕುರಿತಾಗಿ ದೂರಶಿಕ್ಷಣದ ಸರ್ಟಿಫಿಕೇಟ್ ಕೋರ್ಸ್ ನ್ನು ನಡೆಸಲಾಗಿದೆ. ವಿವಿಧ ದಿನಾಚರಣೆಗಳಿಗೆ ಕೂಡಾ ಕಾರ್ಯಕ್ರಮಗಳನ್ನು ನಡೆಸಿದೆ. ವೈದ್ಯರ ಸಂದರ್ಶನ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು, ಶಾಸಕರು, ಮಹಾಪೌರರ ಜೊತೆಗೆ ನೇರಪ್ರಸಾರದ ಸಂವಾದ ನಡೆಸಲಾಗಿದೆ. ತೃತೀಯ ಲಿಂಗಿ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ಹಿರಿಯ ಚಲನಚಿತ್ರ ಕಲಾವಿದ ರಮೇಶ್ ಭಟ್ ಅವರೊಂದಿಗೆ ಸಂದರ್ಶನ ನಡೆಸಲಾಗಿದೆ. ಪಂಚಾಯತ್ ರಾಜ್ ಸಚಿವಾಲಯದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಜನರ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾದ ವಿಶೇಷ ಕಾರ್ಯಕ್ರಮಗಳು ಕೂಡಾ ಪ್ರಸಾರವಾಗುತ್ತಿದೆ. ದೇಶದ ಚಾರಿತ್ರಿಕ ಪುಟದಲ್ಲಿ ಸದಾ ರಾರಾಜಿಸುವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಬರಹಗಳು- ಚಿಂತನೆಗಳನ್ನು ಪ್ರತಿದಿನ ರೇಡಿಯೋದಲ್ಲಿ ಪ್ರಸಾರ ಮಾಡುತ್ತಿರುವುದು ಮತ್ತೊಂದು ಸಂತಸದ ಸಂಗತಿಯಾಗಿದೆ.

JCI Shivamogga ಶಿವಮೊಗ್ಗ ಮಲ್ನಾಡ್ ಜೆಸಿಐ ನಿಂದ ಯಶಸ್ವಿ ಮಕ್ಕಳ ಬೇಸಿಗೆ ಶಿಬಿರ

0

JCI Shivamogga ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಜೂನಿಯರ್ ಜೇಸಿ ವಿಭಾಗದ ವತಿಯಿಂದ ಶಿವಮೊಗ್ಗದ ರೋಟರಿ ಬ್ಲಡ್ ಬ್ಯಾಂಕ್ ನ ಮೊದಲನೇ ಮಹಡಿಯ ಸಭಾಂಗಣದಲ್ಲಿ ದಿನಾಂಕ 03-04-2023 ರಿಂದ 08-04-2023 ರ ವರೆಗೆ 6 ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆಯನ್ನು ವಿಶೇಷವಾಗಿ ಕ್ಯಾನ್ವಾಸ್ ಮೇಲೆ ಮಕ್ಕಳ ಹಸ್ತ ಮುದ್ರೆ ಹಾಕುವುದರೊಂದಿಗೆ ಉದ್ಘಾಟಿಸಲಾಯಿತು ಮತ್ತು ಅತ್ಯಂತ ವರ್ಣರಂಜಿತವಾಗಿ ಮೂಡಿಬಂದಿತು.

ಸಮಾರಂಭದಲ್ಲಿ ಜೆಸಿಐ ವಲಯ -24 ರ ಅಧ್ಯಕ್ಷರಾದ ಜೇಸಿ ಅನುಷ್ ಗೌಡ ರವರು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ವತಿಯಿಂದ ಪ್ರತೀ ವರ್ಷ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದು, ಹಾಗೂ ಈ ಬಾರಿಯ ಬೇಸಿಗೆ ಶಿಬಿರವು ವಿಶೇಷವಾಗಿ ಆಯೋಜಿಸಲಾಗಿದೆ, ಇದಕ್ಕೆ ನಮ್ಮ ವಲಯದ ಬೆಂಬಲ ಸದಾ ಇರುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ , ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಮಕ್ಕಳಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸಿ, ಭಾರತದ ಜೆಸಿಐ ಘಟಕಗಳಲ್ಲಿ ವಿಶೇಷ ಸ್ಥಾನ ದೊರಕಲಿ ಎಂದು ಆಶಿಸಿದರು.

JCI Shivamogga ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜೂನಿಯರ್ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಜೇಸಿ ವಾಣಿ ಜಗದೀಶ್ ರವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಪ್ರತೀ ದಿನ ಭಗವದ್ಗೀತೆ ಪಠಣ, ಚಿತ್ರಕಲೆ, ಕರಕುಶಲ ತರಬೇತಿ, ಪ್ರತಿದಿನ ಕಥೆ ಹೇಳುವುದು, ರೊಬೋಟಿಕ್ಸ್, ನೃತ್ಯ ಮತ್ತು ವಿಶೇಷವಾಗಿ ರೂಪುಗೊಳಿಸಿದ್ದ ಆಟಗಳು, ಸ್ಪರ್ಧೆಗಳು ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ಶಿಬಿರದಲ್ಲಿ ಭಗವದ್ಗೀತೆ ಪಠಣವನ್ನು ಶ್ರೀಮತಿ ವಿಮಲಾ ರೇವಣಕರ್, ಚಿತ್ರಕಲೆ ಮತ್ತು ಕರಕುಶಲ ಕಲೆಯನ್ನು ಶ್ರೀಮತಿ ನಾಗರತ್ನ ಜನ್ನು ರವರು, ಕಥೆ ಹೇಳುತ್ತಿದ್ದ ನಿವೃತ್ತ ಶಿಕ್ಷಕರಾದ ಶ್ರೀ ರಂಗನಾಥ ರವರು, ಶಿವಮೊಗ್ಗದ ಡು ಇಟ್ ಮೈಂಡ್ಸ್ ಖ್ಯಾತಿಯ ವಿಶೇಷ ಎಲೆಕ್ಟ್ರಾನಿಕ್ಸ್ ಮತ್ತು ನೂತನ ಆವಿಷ್ಕಾರ ಕಾರ್ಯನಿರ್ವಹಿಸುವ ವಿಧಾನಗಳನ್ನು ಶ್ರೀ ನವೀನ್ ರವರು ಮತ್ತು ಸ್ಟೆಪ್ ಹೋಲ್ಡರ್ಸ್ ಡಾನ್ಸ್ ಅಕಾಡೆಮಿ ಖ್ಯಾತಿಯ ಅರುಣ್ ರಾಜ್ ಶೆಟ್ಟಿ ರವರ ತಂಡ ಮಕ್ಕಳಿಗೆ ಯಶಸ್ವಿಯಾಗಿ ತರಬೇತಿ ನೀಡಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಡಾಕ್ಟರ್ ಸುನಿಲ್ ಮತ್ತು ತಂಡದವರಿಂದ ಉಚಿತ ದಂತ ತಪಾಸಣೆ ಮತ್ತು ಬಾಯಿ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

ಶಿಬಿರದ ಮುಖ್ಯ ಆಕರ್ಷಣೆಯಾಗಿದ್ದ ಲಕ್ಕಿನಕೊಪ್ಪ ಸಮೀಪದ ಅಮುಲ್ಯಶೋಧ ವಸ್ತು ಸಂಗ್ರಹಾಲಯ ಭೇಟಿ. ಮಕ್ಕಳನ್ನು ಬೆಳಿಗ್ಗೆ ಅಮೂಲ್ಯಶೋಧ ವಸ್ತು ಸಂಗ್ರಹಾಲಯಕ್ಕೆ ಕರೆದು ಕೊಂಡು ಹೋಗಿ ಅಲ್ಲಿನ ಸಂಗ್ರಹಿಸಲಾಗಿರುವ ನಾಣ್ಯಗಳು, ಹಿಂದೆ ಬಳಸುತ್ತಿದ್ದ ವಸ್ತುಗಳು, ಶಿವಮೊಗ್ಗದ ವೈಶಿಷ್ಟ್ಯತೆ ಎಲ್ಲವನ್ನೂ ಕಂಡು ಮಕ್ಕಳು ಬೆರಗಾಗಿ ಕುತೂಹಲದಿಂದ ವೀಕ್ಷಿಸಿದರು.

ಒಟ್ಟಾರೆ ಈ ಬೇಸಿಗೆ ಶಿಬಿರವು ಮಕ್ಕಳ ಕಲಿಕೆ ಮತ್ತು ಜ್ಞಾನ ಅಭಿವೃದ್ದಿ, ಮೊಬೈಲ್ ಪ್ರಪಂಚದಿಂದ ಆಚೆ ಉತ್ತಮ ಚಟುವಟಿಕೆಯುಕ್ತ ಜೀವನ ಇದೆ ಎಂದು ಸಾರಿ ಸಾರಿ ಹೇಳಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾದ ಶ್ರೀಮತಿ ಕಿರಣ್ ದೇಸಾಯಿ ರವರು ಮಕ್ಕಳಿಗೆ ವಿಭಿನ್ನವಾದ ಕಥೆಗಳ ಮುಖಾಂತರ ಯಾವುದೇ ಪರಿಸ್ಥಿತಿ ಬಂದರೂ ಪ್ರಾಮಾಣಿಕವಾಗಿ, ಎದೆಗುಂದದೆ ಎದುರಿಸುವ ಛಲ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಜೇಸಿ ಗೌರೀಶ್ ಭಾರ್ಗವ ರವರು ಮಕ್ಕಳಿಗೆ ನೀತಿ ಕಥೆಯ ಮೂಲಕ ಹೊಸ ಸಂಪ್ರದಾಯಕ್ಕೆ ಬದ್ದವಾಗಿ ನಾವು ವಿಶೇಷ ಆಸಕ್ತಿ ರೂಢಿಸಿಕೊಂಡು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಶೇಷ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪೋಷಕರಾದ ಶ್ರೀ ಸುದೀಪ್ ಮಾತನಾಡಿ ಒಟ್ಟಾರೆ ಕಾರ್ಯಕ್ರಮವು ಮೊದಲ ದಿನದಿಂದ ಕೊನೆಯ ದಿನದವರೆಗೂ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಬಿರ ನಡೆಸಿದ ತಂಡಕ್ಕೆ ಕೃತಜ್ಞತೆ ಸಲ್ಲಸುತ್ತೇನೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ದಿನದ ಶಿಬಿರ ಆಯೋಜಿಸಲು ಕೋರಿ ತಾವು ಸಹ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮಕ್ಕಳೇ ಕಾರ್ಯಕ್ರಮವನ್ನು ನಿರೂಪಿಸಿ, ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಶಿಬಿರದಲ್ಲಿ ಉತ್ತಮವಾಗಿ ಭಾಗವಹಿಸಿದ ಅರ್ಜುನ್ ಭಾರದ್ವಾಜ್, ಪ್ರಣತಿ, ದೇವಾಂಶ್ ಗೌಡ ಮತ್ತು ಸುರಭಿ ರವರಿಗೆ ಪ್ರಶಸ್ತಿ ನೀಡಲಾಯಿತು ಮತ್ತು ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಮತ್ತು ಭಗವದ್ಗೀತೆ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾದ ಜೇ ಜೇ ಸಿ ವೈಷ್ಣವಿ ಕೆ ಎನ್ ರವರು ವಹಿಸಿದ್ದರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸುತ್ತಾ ಶಿಬಿರದ ಆರಂಭದಿಂದ ಕೊನೆಯವರೆಗೂ ತನ್ನ ಬೆಂಬಲಕ್ಕೆ ನಿಂತ ತನ್ನ ತಂದೆ ಜೇಸಿ ನರೇಂದ್ರ ಹಾಗೂ ತಾಯಿ ಜೇಸಿ ದೀಪಾ ನರೇಂದ್ರ ರವರಿಗೆ ಕೃತಜ್ಞತೆ ತಿಳಿಸಿದರು.

ವೇದಿಕೆಯಲ್ಲಿ ಘಟಕದ ಅಧ್ಯಕ್ಷರಾದ ಜೇಸಿ ಕಿರಣ್ ಎನ್ ಪಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಜೇಸಿ ಶೃತಿ ಅಶೋಕ್ ಹಾಗೂ ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಉತ್ಕಲಾ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

BJP Karnataka ಅಭಿವೃದ್ಧಿಯೇ ನಮ್ಮ ಗೆಲುವಿಗೆ ಕಾರಣ ಆಗಲಿದೆ-ಕೆ.ಬಿ.ಅಶೋಕ ನಾಯಕ್

0

BJP Karnataka ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಿಜೆಪಿಯೇ ಶಕ್ತಿ ಆಗಿದ್ದು, ಬಿಜೆಪಿ ಆಡಳಿತ ನಡೆಸಿದ ಅವಧಿಯಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೋಟ್ಯಾಂತರ ರೂ. ಅನುದಾನ ನೀಡುವ ಮೂಲಕ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಹೇಳಿದರು.

ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಸೈದರ ಕಲ್ಲಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ, ರಸ್ತೆ, ಸಮುದಾಯ ಭವನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೋಟಿ ರೂ.ಗೂ ಅಧಿಕ ಅನುದಾನ ಒದಗಿಸಲಾಗಿದೆ.

BJP Karnataka ಅಭಿವೃದ್ಧಿಯೇ ನಮ್ಮ ಗೆಲುವಿಗೆ ಕಾರಣ ಆಗಲಿದೆ ಎಂದು ತಿಳಿಸಿದರು.
ಐದು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಆಯೋಜಿಸುತ್ತಿರುವ ಸಭೆಗಳಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷಕ್ಕೆ ಸೇರುತ್ತಿರುವುದು ಮತ್ತಷ್ಟು ಶಕ್ತಿ ಹೆಚ್ಚಿಸಲಿದೆ ಎಂದರು.

ಪ್ರತಿಯೊಂದು ಗ್ರಾಮಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಮನೆ ಮನೆಗಳಿಗೂ ತಲುಪಿಸುವ ಮೂಲಕ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೆಚ್ಚಿನ ಕ್ಷೇತ್ರ ಆಗಿದ್ದು, ನೀರಾವರಿ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳಿಗೂ ಹೆಚ್ಚಿನ ಅನುದಾನ ಒದಗಿಸಿದ್ದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಗೆಲುವು ಕೂಡ ಮುಖ್ಯ ಎಂದು ಹೇಳಿದರು.
ಕ್ಷೇತ್ರ, ಜಿಲ್ಲೆ, ರಾಜ್ಯ ಹಾಗೂ ದೇಶದ ಹಿತದೃಷ್ಠಿಯಿಂದ ಬಿಜೆಪಿ ಪಕ್ಷ ಅತ್ಯಂತ ಅಗತ್ಯವಾಗಿದ್ದು, ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ದೇಶ ಐತಿಹಾಸಿಕ ಹಾಗೂ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದು, ದೇಶ ಸದೃಢವಾಗಿ ರೂಪುಗೊಳ್ಳುತ್ತಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಕ್ರಾಂತಿಕಾರಿ ನಿರ್ಣಯಗಳಿಂದ ಬಿಜೆಪಿ ಬಲ ಮತ್ತಷ್ಟು ಹೆಚ್ಚಿದೆ. 2023ರ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಸೈದರ ಕಲ್ಲಹಳ್ಳಿ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಮಂಡಲ ಅಧ್ಯಕ್ಷ ಮಂಜುನಾಥ ಕಲ್ಲಜ್ಜನಾಳ್, ವಿರೂಪಾಕ್ಷಪ್ಪ, ಸದಾಶಿವಪ್ಪ, ಜಗದೀಶ್ ಗೌಡ, ಮಲ್ಲೇಶ್, ಷಡಾಕ್ಷರಪ್ಪ, ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ಪ್ರಮುಖರ ಸಭೆ ನಡೆಸಲಾಯಿತು. ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಪ್ರಧಾನ ಕಾರ್ಯದರ್ಶಿ ಗೋಪಾಲ್, ಉಜ್ಜಿನಪ್ಪ, ಮಲ್ಲೇಶ್, ರಂಗೋಜಿರಾವ್ ಸೇರಿದಂತೆ ಪ್ರಮುಖರು ಸಭೆ ನಡೆಸಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದರಕಲ್ಲಹಳ್ಳಿ, ದಿಗ್ಗೇನಹಳ್ಳಿ, ಆದ್ರಿಹಳ್ಳಿ, ಅರಸನಘಟ್ಟ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು. ಗ್ರಾಮಾಂತರ ವ್ಯಾಪ್ತಿಯ ಕುರುಬರ ವಿಠಲಪುರ, ನಿಂಬೆಗೊಂದಿ, ವಡೇರಪುರ, ಆನವೇರಿ, ಇಟ್ಟಿಗೆಹಳ್ಳಿ, ಮಂಗೋಟೆ, ನಾಗಸಮುದ್ರ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.