Assembly Election ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ವಿವಿಧ ವ್ಯಕ್ತಿಗಳಿಂದ ನಾಮಪತ್ರ ಸಲ್ಲಿಕೆ
Assembly Election ಚಿಕ್ಕಮಗಳೂರಿನಲ್ಲಿ ಈ ಭಾರಿಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಅಭ್ಯರ್ಥಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.
ಅವರ ವಿವರ ಈ ಕೆಳಗಿನಂತಿದೆ. ಚಿಕ್ಕಮಗಳೂರು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಲು ಮಾಜಿ ನಗರಸಭಾ ಸದಸ್ಯ ಸಿ.ಕೆ.ಜಗದೀಶ್ ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಕಿಶೋರ್‌ಕುಮಾರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿವಿಕೆಗೆ ಹಾಗೂ ಭ್ರಷ್ಟಮುಕ್ತ ಸಮಾಜ ನಿರ್ಮಾ ಣ ಮಾಡುವ ನಿಟ್ಟಿನಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನಸಾಮಾನ್ಯರಿಗೆ ಸಮಾನ ಹಕ್ಕು ದೊರೆಯುವಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೀತಾ ಜಗದೀಶ್, ಮುಖಂಡರಾದ ಯುಕ್ತದೇವಿ, ರಾಮರಾಜು, ರಾಜು ಹಾಜರಿದ್ದರು.
Assembly Election ಚಿಕ್ಕಮಗಳೂರು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಲು ಕ.ರ.ವೇ. ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್ ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಕಿಶೋರ್‌ಕುಮಾರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯ ಹಾಗೂ ಜಿಲ್ಲೆಯಲ್ಲಿ ಭಾರೀ ಭ್ರಷ್ಟಚಾರದಲ್ಲಿ ಮುಳುಗಿದ್ದು, ಜನಸಾಮಾ ನ್ಯರ ಸಣ್ಣಪುಟ್ಟ ಕೆಲಸಗಳಿಗೆ ಭಾರೀ ತೊಂದರೆಯಾಗಿದೆ. ಇವೆಲ್ಲವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು ಮತದಾರರು ಈ ಬಾರಿ ಬೆಂಬಲಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿ ಸಿದರು.
ಈ ಸಂದರ್ಭದಲ್ಲಿ ಕ.ರ.ವೇ. ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಯುವಘಟಕದ ಅಧ್ಯಕ್ಷ ಭರತ್, ನಾದೀಯಾ, ತಸ್ಮೀಯಾ ಹಾಜರಿದ್ದರು.
ಚಿಕ್ಕಮಗಳೂರು ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧಿಸಲು ಜಿಲ್ಲಾ ಅಧ್ಯಕ್ಷ ಶಿವಪ್ರಕಾಶ್ ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಕಿಶೋರ್‌ಕುಮಾರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕನ್ನಡ ನಾಡು, ನುಡಿಯ ರಕ್ಷಣೆ ಹಿನ್ನೆಲೆಯಲ್ಲಿ ಪಕ್ಷವು ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ವಿವಿಧ ಕಚೇರಿಗಳಲ್ಲಿ ಕನ್ನಡ ಭಾಷೆಯ ಅರಿವಿಲ್ಲದವರು ಕೆಲಸ ಮಾಡಲಾ ಗುತ್ತಿದೆ. ಆದ್ದರಿಂದ ವಿವಿಧ ಕಚೇರಿಗಳಲ್ಲಿ ರಾಜ್ಯದ ಯುವಕರಿಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಭ್ರಷ್ಟಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟç ಸಮಿತಿ ಜಿಲ್ಲಾ ಕಾರ್ಯದರ್ಶಿ ರತನ್, ಖಜಾಂಚಿ ವರುಣ್, ಪದಾಧಿಕಾರಿಗಳಾದ ಅಲೆನ್‌ಲೋಬೋ, ನಿತಿನ್ ಹಾಜರಿದ್ದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಬಿ.ಎಂ.ತಿಮ್ಮಶೆಟ್ಟಿ ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಧಿಕಾರಿ ಕಿಶೋರ್‌ಕುಮಾರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಂಜನ್‌ಅಜಿತ್‌ಕುಮಾರ್, ನಗರಸಭಾ ಸದಸ್ಯರಾದ ಎ.ಸಿ.ಕುಮಾರ ಗೌಡ, ಗೋಪಿ, ನಿಸಾರ್ ಅಹ್ಮದ್ ಹಾಜರಿದ್ದರು.
District Health Department ಬೇಸಿಗೆ ಕಡುತಾಪದಿಂದ ರಕ್ಷಣೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುನ್ಸೂಚನೆ
District Health Department ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಪರಿಣಾಮ ನಾವು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು ಇಲ್ಲವಾದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಮರಣ ಸಂಭವಿಸುವ ಸಾಧ್ಯತೆ ಇದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜನಾಯ್ಕ ಎಚ್ಚರಿಕೆ ನೀಡಿದರು.
ತುಂಗಾನಗರದ ನಗರ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಬಿಸಿಲಿನ ತಾಪಮಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಸಿಲಿನ ತಾಪಮಾನದಿಂದ ವಯಸ್ಕರು, ಮಕ್ಕಳು ಹಾಗೂ ವಯೋವೃದ್ದರು ಅಪಾಯದ ಸ್ಥಿತಿಯಲ್ಲಿದ್ದು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು.
District Health Department ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳಲ್ಲಿ ಅತಿಸಾರ ಬೇಧಿ, ವೃದ್ದರಲ್ಲಿ ಸನ್‍ಸ್ಟ್ರೋಕ್, ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುವ ಸಂಭವ ಇರುತ್ತದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಬೆಳಿಗ್ಗೆ ಹಾಗೂ ಸಾಯಂಕಾಲ ಕೆಲಸ ಮಾಡುವ ಪದ್ದತಿ ರೂಢಿಸಿಕೊಳ್ಳಬೇಕು.
ನೀರನ್ನು ಹೆಚ್ಚಾಗಿ ಸೇವಿಸಬೇಕು. ದ್ರವರೂಪದ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಕರಿದ ಎಣ್ಣೆಯ ಪದಾರ್ಥಗಳನ್ನು ಉಪಯೋಗಿಸದೇ ಇರುವುದು ಆರೋಗ್ಯಕ್ಕೆ ಉತ್ತಮ. ಓಆರ್‍ಎಸ್ ಹೆಚ್ಚಾಗಿ ಉಪಯೋಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮರಣ ಸಂಭವದ ಸಾಧ್ಯತೆಗಳಿದ್ದು ಎಚ್ಚರಿಕೆಯನ್ನು ವಹಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಮಾತನಾಡಿ, ಜಾಗತಿಕ ತಾಪಮಾನದಲ್ಲಿ ವಿಪರೀತ ಬದಲಾವಣೆ ಆಗಿದ್ದು ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನಿಡಿ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭೀಮಪ್ಪ ಎಂ.ಎಸ್ ಮಾತನಾಡಿ, ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರ, ಕೆಮ್ಮು, ನೆಗಡಿ ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿ, ಬೇಗ ಚಿಕಿತ್ಸೆ ಪಡೆಯುವುದರಿಂದ ಮುಂದಾಗುವ ಅನಾಹುತಗಳನ್ನು ತಡೆಯಬಹುದು ಎಂದು ತಿಳಿಸಿದರು.
ಈ ವೇಳೆ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎ.ಅಕ್ತಾರ್, ಎಂಎಸ್‍ಡಬ್ಲ್ಯ ವಿದ್ಯಾರ್ಥಿಗಳು ಹಾಜರಿದ್ದರು.
Karnataka Legislative Assembly ಶಿಕಾರಿಪುರದಲ್ಲಿ ಚುನಾವಣೆ ಹಿನ್ನೆಲೆ ಪೊಲೀಸ್ ರೂಟ್ ಮಾರ್ಚ್
Karnataka Legislative Assembly ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ – 2023ರ ಹಿನ್ನೆಲೆಯಲ್ಲಿ, ಈ ದಿನ ದಿನಾಂಕಃ 20-04-2023 ರಂದು ಶ್ರೀ ಶಿವಾನಂದ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪವಿಭಾಗರವರ ನೇತೃತ್ವದಲ್ಲಿ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಪ್ಪನಹಳ್ಳಿ ಮತ್ತು ಪುಣೆದಳ್ಳಿ ಗ್ರಾಮದಲ್ಲಿ ರೂಟ್ ಮಾರ್ಚ್ (ಪಥಸಂಚಲನವನ್ನು) ನಡೆಸಲಾಯಿತು.
Karnataka Legislative Assembly ಸದರಿ ರೂಟ್ ಮಾರ್ಚ್ ನಲ್ಲಿ ಶ್ರೀ ಲಕ್ಷ್ಮಣ್, ಪೊಲೀಸ್ ನಿರೀಕ್ಷಕರು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀ ಪ್ರಧಾನ್, ಪೊಲೀಸ್ ನಿರೀಕ್ಷಕರು, CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಶ್ರೀ ಶರತ್ & ತಿಮ್ಮಯ್ಯ ಪೊಲೀಸ್ ಉಪ ನಿರೀಕ್ಷಕರುಗಳು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು CISF ನ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.
Election commission of India ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಕ್ಷೇತ್ರಗಳ ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಗೋವಿಂದರಾಮ್ ಚುರೇಂದ್ರ
Election commission of India ಭಾರತೀಯ ಚುನಾವಣಾ ಆಯೋಗದ ಆದೇಶದನ್ವಯ ಶಿವಮೊಗ್ಗ ಗ್ರಾಮಾಂತರ-111 ಮತ್ತು ಭದ್ರಾವತಿ-112 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರನ್ನಾಗಿ ಗೋಂವಿದ್ ರಾಮ್ ಚುರೇಂದ್ರ ಇವರನ್ನು ನೇಮಿಸಲಾಗಿದೆ.
ಇವರ ಸಂಪರ್ಕ ಸಂಖ್ಯೆ : 636674288 ಆಗಿದ್ದು ದಿನಾಂಕ: 20-04-2023 ರಿಂದ 13-05-2023 ರವರೆಗಿನ ಚುನಾವಣಾ ಪ್ರಕ್ರಿಯೆ ಅವಧಿಯಲ್ಲಿ ಇವರು ಕೊಠಡಿ ಸಂಖ್ಯೆ -03, ಸಕ್ರ್ಯೂಟ್ ಹೌಸ್, ಶಿವಮೊಗ್ಗ ಇಲ್ಲಿರುತ್ತಾರೆ.
Election commission of India ಈ ಅವಧಿಯಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಪ್ರಕ್ರಿಯೆ/ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯದ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರಗಳಾದ ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು/ಸಾರ್ವನಿಕರು ಇವರನ್ನು ಮಧ್ಯಾಹ್ನ 12 ರಿಂದ 2 ರವರೆಗೆ ವೈಯಕ್ತಿಕವಾಗಿ ಸಂಪರ್ಕಿಸಬಹುದೆಂದು ಶಿವಮೊಗ್ಗ(ಗ್ರಾಮೀಣ) ಮತ್ತು ಭದ್ರಾವತಿ ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಗೋವಿಂದ್ ರಾಮ್ ಚುರೇಂದ್ರ ತಿಳಿಸಿದ್ದಾರೆ.
Rotary Organization ರೋಟರಿ ಸಂಸ್ಥೆಯಿಂದ ಉದ್ಯೋಗಾರ್ಥಿಗಳಿಗೆ ಸಾಫ್ಟ್ ವೇರ್ ಕಂಪೆನಿ ಆಯ್ಕೆಪೂರ್ವ ಕೌಶಲ ತರಬೇತಿ
Rotary Organization ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ ಕ್ಯಾಲೈಟೆಕ್ಸ್ ಇಂಡಿಯಾ ಮುಂದಾಗಿದೆ.
ರೋಟರಿ ಸಂಸ್ಥೆಯ ಮಾರ್ಗದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಪಿಯು ನಂತರ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ತಮ್ಮ ಆಶೋತ್ತರಗಳನ್ನು ಪೂರೈಸಲಾಗದೇ ಉಳಿದಂತಹ ಯುವಕ, ಯುವತಿಯರ ಪಾಲಿಗೆ ಬೆಳಕಾಗುವ ನೂತನ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.
.
ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಹಲವು ಹಂತಗಳಲ್ಲಿ ಪರಿಚಯಿಸುತ್ತಿದೆ. ಮೊದಲನೆಯ ಹಂತದಲ್ಲಿ ಕಾರ್ಪೋರೇಟ್ ಕಂಪನಿಗಳಲ್ಲಿ ವ್ಯವಹರಿಸಲು ಆತ್ಯವಶ್ಯಕವಾದ ಆಂಗ್ಲಭಾಷೆ ಮಾತನಾಡುವ ಹಾಗೂ ಬರವಣಿಗೆಯನ್ನು ಯಶಸ್ವಿಯಾಗಿ ಕೈಗತ ಮಾಡುವುದು.
Rotary Organization ಎರಡನೆಯ ಹಂತದಲ್ಲಿ ಶಿಭಿರಾರ್ಥಿಗಳು ಕಂಪ್ಯೂಟರ್ ವಿಜ್ಷಾನದ ಮೂಲೋದ್ಧೇಶ ಪ್ರಾಥಮಿಕ ಮಾಹಿತಿ, ಸಾಪ್ಟವೇರ್‌ಗಳ ಪರಿಚಯ. ಮೂರನೆಯ ಹಂತದಲ್ಲಿ ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಹಾಗೂ ಕಂಪ್ಯೂಟರ್ ಹಾರ್ಡ್‌ವೇರ್ ಗಳ ಮಾಹಿತಿ ಕಮ್ಯೂನಿಕೇಷನ್ ತರಬೇತಿ. ಕೊನೆಯ ಹಂತದಲ್ಲಿ ಶಿಬಿರಾರ್ಥಿಗಳ ಅಮೂಲಾಗ್ರ ತರಬೇತಿಯ ನಿರ್ವಹಣೆ ಹಾಗೂ ಮಾನದಂಡದ ಬಗ್ಗೆ ಸರ್ಟಿಫಿಕೇಷನ್ ನೀಡುವುದು.
ಅತ್ಯುತ್ತಮ ಮಾನದಂಡದ ಅರ್ಹತೆ ಪಡೆದ ಶಿಬಿರಾರ್ಥಿಗಳಿಗೆ ಕ್ಯಾಲೆಟಕ್ಸ್ ಕಂಪನಿಯಲ್ಲಿ ವಾರ್ಷಿಕ 3,00,000 ರೂ. ಸಂಬಳದ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ಅವಧಿಯಲ್ಲಿ (3 ಮತ್ತು 4ನೇ ಹಂತ) ಶಿಬಿರಾರ್ಥಿಗಳಿಗೆ 5,000 ರೂ. ಸ್ಟೈಫಂಡ್ ನೀಡಲಾಗುತ್ತದೆ.
ತರಬೇತಿಯ ಅನುಭವದ ಆಧಾರದಲ್ಲಿ ಬೇರೆ ಬೇರೆ ಸಾಫ್ಟ್ವೇರ್ ಕಂಪನಿಗಳಲ್ಲಿ ವಿಪುಲ ಅವಕಾಶಗಳಿವೆ.
ಶಿಬಿರಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನ ಪರಿಚಯಿಸಿ ಪ್ರತಿಯೊಂದು ಬ್ಯಾಚ್‌ಗೆ 30 ಅರ್ಹರಿಗೆ ಅವಕಾಶ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆಗಳನ್ನು 23-04-2023ರ ಭಾನುವಾರ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ 10-30 ಕ್ಕೆ ನಡೆಸಲಾಗುತ್ತದೆ.
ಪರೀಕ್ಷೆಯಲ್ಲಿ ಶಿಬಿರಾರ್ಥಿಗಳ ಬುದ್ಧಿಶಕ್ತಿ, ಗ್ರಹಣಶಕ್ತಿ, ಐಕ್ಯೂ ಮತ್ತು ಇಕ್ಯೂ ಪರೀಕ್ಷೆ ನಡೆಸಲಾಗುತ್ತದೆ. ಆಸಕ್ತ ಶಿಬಿರಾರ್ಥಿಗಳು ಪಿ.ಯು ಅಂಕಪಟ್ಟಿ, , ಬಿ.ಪಿ.ಎಲ್. ಕಾರ್ಡ್, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಹಿತಿ ತರಬೇತಕು ಎಂದು ರೋಟರಿ ಶಿವಮೊಗ್ಗ ಮಿಡ್ ಟೌನ್ ಅಧ್ಯಕ್ಷೆ ವೀಣಾ ಸುರೇಶ್ ತಿಳಿಸಿದ್ದಾರೆ.
ಮಾಹಿತಿಗೆ ಮೊಬೈಲ್ ಸಂಖ್ಯೆ 7829738412 ಸಂಪರ್ಕಿಸಬಹುದಾಗಿದೆ.
Legislative Assembly Election ರಾಜ್ಯ ವಿಧಾನಸಭಾ ಚುನಾವಣೆ 2023 ತೀರ್ಥಹಳ್ಳಿ ಕ್ಷೇತ್ರ ಕಿರು ಪರಿಚಯ
Legislative Assembly Election ವಿಧಾನ ಸಭಾ ಚುನಾವಣೆಗೆ ತೀರ್ಥಹಳ್ಳಿ ಕ್ಷೇತ್ರ ಸಜ್ಜಾಗಿ ನಿಂತಿದೆ. ತೀರ್ಥಹಳ್ಳಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳಲ್ಲಿ ಒಂದಾಗಿದೆ.
2018ರ ಚುನಾವಣೆಯಲ್ಲಿ ತೀರ್ಥಳ್ಳಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವನ್ನು ಸಾಧಿಸಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಆರಗ ಜ್ಞಾನೇಂದ್ರ ಅವರು ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಗಳಾಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್, ಜೆಡಿಎಸ್ ಅಭ್ಯರ್ಥಿಯಾಗಿ ಆರ್ .ಎಂ ಮಂಜುನಾಥ್ ಅವರು ಸ್ಪರ್ಧಿಸಿದ್ದರು.
2018ರ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಅವರ ನಡುವೆ 21955 ಮತಗಳ ಅಂತರದಲ್ಲಿ ಆರಗ ಜ್ಞಾನೇಂದ್ರ ಅವರು ಗೆಲುವನ್ನು ಸಾಧಿಸಿದ್ದರು.
ಹಾಗಾದ್ರೆ, 2018ರ ಚುನಾವಣೆಯ ಫಲಿತಾಂಶ ಯಾವ ಬಗೆಯಲ್ಲಿತ್ತು ಎಂಬುದರ ವಿವರ ಇಲ್ಲಿದೆ
Legislative Assembly Election ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರಗ ಜ್ಞಾನೇಂದ್ರ ಅವರ ಒಟ್ಟು 67,527
ಮತಗಳನ್ನು ಗಳಿಸಿದ್ದರು.
ಕಾಂಗ್ರೆಸ್ ಪಕ್ಷದ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಿಮ್ಮನೆ ರತ್ನಾಕರ್ ಅವರ ಒಟ್ಟು 45,572 ಮತಗಳನ್ನು ಗಳಿಸಿದ್ದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರ್‌ಎ ಮಂಜುನಾಥ್ ಗೌಡ ಅವರ ಒಟ್ಟು 40,127 ಮತಗಳನ್ನು ಗಳಿಸಿದ್ದರು.
ಕ್ಷೇತ್ರದ ವಿಸ್ತೀರ್ಣ ರಾಜ್ಯದಲ್ಲೇ ದೊಡ್ಡದು ಎಂಬ ಕೀರ್ತಿ ಇ ದೆ. ತೀರ್ಥಳ್ಳಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,86,594. ಇದರಲ್ಲಿ ಪುರುಷರ ಮತದಾರರ ಸಂಖ್ಯೆ 92,114. ಮಹಿಳೆ ಮತದಾರರ ಸಂಖ್ಯೆ 94,453. ತೃತಿಯ ಲಿಂಗಿಗಳು 0 2018ರ ಚುನಾವಣೆಯ ಫಲಿತಾಂಶದ ಪಟ್ಟಿಯಾಗಿದೆ.
2023ರ ವಿಧಾನಸಭಾ ಚುನಾವಣೆಯ ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಆರಗ ಜ್ಞಾನೇಂದ್ರ ಅವರು ಸ್ಪರ್ಧಿಸುತ್ತಿದ್ದಾರೆ.
ಇವರ ಪ್ರತಿಸ್ಪರ್ಧೆಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್ ಸ್ಪರ್ಧೆಯ ಕಣದಲ್ಲಿ ಇಳಿಯುತ್ತಿದ್ದಾರೆ.
ಮುಂದಿನ ತಿಂಗಳ ಮೇ 10 ಚುನಾವಣೆ ನಡೆಯಲಿದ್ದು. ಅಖಾಡಕ್ಕಿಳಿದ ಸ್ಪರ್ಧಿಗಳಲ್ಲಿ ಯಾರು ಉತ್ತಮರು ಎಂದು ಮತದಾರರು ಆಯ್ಕೆ ಮಾಡಲಿದ್ದಾರೆ.
