Monday, April 13, 2026
Monday, April 13, 2026
Home Blog Page 1231

Department of fisheries shivamogga ಚಿಬ್ಬಲಗುಡ್ಡೆ ದೇವರ ಮೀನಿಗೆ ಯಾವುದೇ ಜೀವ ಭಯವಿಲ್ಲ

0

Department of fisheries shivamogga ಚಿಬ್ಬಲಗುಡ್ಡೆ ಮತ್ಸಧಾಮದ ದೇವರ ಮೀನು ಎಂದೇ ಪ್ರಸಿದ್ದವಾಗಿರುವ ಮಹಸೀರ್ ಮೀನುಗಳಿಗೆ ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತೀರ್ಥಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಚಿಬ್ಬಲಗುಡ್ಡೆ ತುಂಗಾನದಿ ಭಾಗದ 500 ಮೀಟರ್ ಅನ್ನು ಮತ್ಸ್ಯಧಾಮವೆಂದು ಸರ್ಕಾರ ಘೋಷಣೆ ಮಾಡಿದೆ. ನದಿಭಾಗದ ಸುತ್ತಮುತ್ತಲಿನ ರೈತರು ಮೋಟಾರ್ ಅಳವಡಿಸಿ ನೀರನ್ನು ತೋಟಗಳಿಗೆ ಬಳಸುತ್ತಿದ್ದು ಇದರಿಂದ ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಮೀನುಗಳು ಮರಣ ಹೊಂದುತ್ತಿರುತ್ತದೆ ಎಂದು ಸಾರ್ವಜನಿಕರು ದೂರವಾಣಿ ಮೂಲಕ ಸಲ್ಲಿಸಿದ ದೂರಿನನ್ವಯ ದಿ: 19-04-2023 ರಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಮತ್ತು ತೀರ್ಥಹಳ್ಳಿ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಮತ್ಸ್ಯಧಾಮದಲ್ಲಿ ತುಂಗಾನದಿಯ ಹರಿವು ನಿಂತಿರುವುದು ಗಮನಕ್ಕೆ ಬಂದಿರುತ್ತದೆ ಮತ್ತು ತೋಟದ ಮಾಲೀಕರಿಗೆ ಪಂಪ್ ಮೋಟಾರ್ ಅನ್ನು ತೆರವುಗೊಳಿಸಲು ತಿಳಿಸಲಾಗಿರುತ್ತದೆ.

Department of fisheries shivamogga ಮತ್ಸ್ಯಧಾಮದಲ್ಲಿ ಸುಮಾರು 30 ರಿಂದ 40 ದೊಡ್ಡಗಾತ್ರದ(20 ರಿಂದ 30 ಕೆಜಿ) ಮೀನುಗಳು ಹಾಗೂ ಸುಮಾರು 150 ರಿಂದ 200 ಬಲಿತ ಬಿತ್ತನೆಮರಿ ಮತ್ತು ವರ್ಷದ ಮೀನುಗಳು ಇರುತ್ತವೆ.

ಮತ್ಸ್ಯಧಾಮದ ತುಂಗಾ ನದಿಭಾಗದ ಮಡುವಿನಲ್ಲಿ 10 ಅಡಿ ನೀರು ಶೇಖರಣೆಯಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮೀನುಗಳಿಗೆ ನೀಡುವ ಆಹಾರವನ್ನು ನಿಲ್ಲಿಸುವಂತೆ ತಿಳಿಸಲು ದಡದಲ್ಲಿರುವ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಸಮಿತಿಗೆ ತಿಳಿಸಲಾಗಿದೆ. ಹಾಗೂ ಸಮಿತಿಗೆ 1/2 ಹೆಚ್.ಪಿ.ಮೋಟಾರ್‍ನಿಂದ ನೀರನ್ನು ಸಿಂಪಡಿಸಲು ತಿಳಿಸಲಾಗಿದೆ. ಈ ಕುರಿತು ಕ್ರಮ ವಹಿಸಲು ದೇವಸ್ಥಾನ ಸಮಿತಿಯವರು ಒಪ್ಪಿಗೆ ನೀಡಿದ್ದು ಪ್ರಸ್ತುತ ಮೀನುಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲವೆಂದು ಅವರು ತಿಳಿಸಿದ್ದಾರೆ.

DC Shivamogga ಎಸ್ಎಸ್ಎಲ್ ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರದ ಸುತ್ತ ನಿಷೇಧಾಜ್ಞೆ

0

DC Shivamogga ಮಾರ್ಚ್/ಏಪ್ರಿಲ್-2023 ರ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ದಿ: 24-04-2023 ರಿಂದ 31-04-2023 ರವರೆಗೆ ನಗರದ 07 ಕೇಂದ್ರಗಳಲ್ಲಿ ನಡೆಯಲಿದೆ.

DC Shivamogga ಮೌಲ್ಯಮಾಪನ ಪಾರದರ್ಶಕವಾಗಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುಂಜಾಗೃತೆಯಾಗಿ ಈ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ಫಾಸಲೆಯವರೆಗೆ ಬೆಳಿಗ್ಗೆ 7.30 ರಿಂದ ಸಂಜೆ 7 ಗಂಟೆವರೆಗೆ ಸಿಆರ್‍ಪಿಸಿ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

Karnataka Election Commission ಶಿವಮೊಗ್ಗ ನಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಸಾಮಾನ್ಯ ಚುನಾವಣಾ ವೀಕ್ಷಕ ಕಾಂತಿಲಾಲ್ ದಂಡೆ

0

 Karnataka Election Commission ಭಾರತೀಯ ಚುನಾವಣಾ ಆಯೋಗದ ಆದೇಶದನ್ವಯ ಶಿವಮೊಗ್ಗ ನಗರ-113 ಮತ್ತು ತೀರ್ಥಹಳ್ಳಿ-114 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರನ್ನಾಗಿ ಕಾಂತಿಲಾಲ್ ದಂಡೆ ಇವರನ್ನು ನೇಮಿಸಲಾಗಿದೆ.
ಇವರ ಸಂಪರ್ಕ ಸಂಖ್ಯೆ : 8277519288 , 8197699925, 9100459888 ಆಗಿದೆ.

Karnataka Election Commission ಈ ಅವಧಿಯಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಪ್ರಕ್ರಿಯೆ/ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯದ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರಗಳಾದ ಶಿವಮೊಗ್ಗ ನಗರ ಮತ್ತು ತೀರ್ಥಹಳ್ಳಿಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು/ಸಾರ್ವನಿಕರು ಇವರನ್ನು ಕೆಲಸದ ದಿನದಂದು ಸಂ.4.00 ರಿಂದ ಸಂ.05.30 ರವರೆಗೆ ವೈಯಕ್ತಿಕವಾಗಿ ಸಂಪರ್ಕಿಸಬಹುದೆಂದು ಶಿವಮೊಗ್ಗ -113 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ

Department Of Pre-University Education ದ್ವಿತೀಯ ಪಿಯು ಫಲಿತಾಂಶ ದೀಪಿಕಾ ಜಿ.ಸ್ವಾಮಿಗೆ ಶೇ93

Department Of Pre-University Education ಏ.21ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಪಿಕ ಜಿ. ಸ್ವಾಮಿ ಅವರು ಶೇ. 93 ರಷ್ಟು ಫಲಿತಾಂಶ ಪಡೆದಿದ್ದಾರೆ.

Department Of Pre-University Education ದೀಪಿಕಾ ತುಂಗಾತರಂಗ ಪತ್ರಿಕಾ ಸಂಪಾದಕ ಎಸ್.ಕೆ. ಗಜೇಂದ್ರಸ್ವಾಮಿ ಹಾಗೂ ವೀಣಾರಾಣಿ ಅವರ ಪುತ್ರಿಯಾಗಿದ್ದಾರೆ.
ವಿದ್ಯಾರ್ಥಿನಿ ದೀಪಿಕಾ ಅವರ ಸಾಧನೆಗೆ ಕುಟುಂಬದವರು ಹಾಗೂ ಶಾಲಾ ಆಡಳಿತ ಅಭಿನಂದನೆ ಸಲ್ಲಿಸಿದೆ.

Legislative Assembly Election ಗ್ರಾಮಸ್ಥರೇ ಅಭ್ಯರ್ಥಿಯ ವೆಚ್ಚಕ್ಕೆ ದೇಣಿಗೆ ನೀಡಿದ ಪ್ರಸಂಗ

0

Legislative Assembly Election ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಅವರಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದ್ದು, ವಿವಿಧೆಡೆ ಗ್ರಾಮಸ್ಥರು ಸೇರಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ನಿಂಬೆಗೊಂದಿ ಹಾಗೂ ಆನವೇರಿಯಲ್ಲಿ ಗ್ರಾಮಸ್ಥರು ತಲಾ 25,000 ರೂ. ದೇಣಿಗೆ ನೀಡಿದರು.

ಅರಸನ ಘಟ್ಟ ತಾಂಡಾ, ಕುರುಬರ ವಿಠಲಪುರ, ವಡೇರಪುರ, ನಿಂಬೆಗೊಂದಿ, ಇಟ್ಟಿಗೆಹಳ್ಳಿ ಹಾಗೂ ಆನವೇರಿ ವ್ಯಾಪ್ತಿಯಲ್ಲಿ ಭೇಟಿ ಮಾಡಿ ಗ್ರಾಮಸ್ಥರಲ್ಲಿ ಮತಯಾಚನೆ ಮಾಡಿದರು.

ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಗ್ರಾಮಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಬಾರಿಯು ಬಿಜೆಪಿಯೇ ಗೆಲ್ಲಲಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಸುವಂತಾಗಲಿ ಎಂದು ಎಲ್ಲ ಗ್ರಾಮಗಳ ಮುಖಂಡರು ಶುಭಕೋರಿದರು.

Legislative Assembly Election ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಕುಂಸಿ ಹಾಗೂ ಆಯನೂರು ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಚಿಕ್ಕಮರಸ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು.

ಬಾಳೆಕೊಪ್ಪ ಹಾಗೂ ಹುಬ್ಬನಹಳ್ಳಿ ಗ್ರಾಮದ ರಸ್ತೆಗಳಲ್ಲಿ ಮನೆ ಮನೆಗಳಿಗೂ ಭೇಟಿ ನೀಡಿ ಮತಯಾಚನೆ ನಡೆಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿರುವ ಪರಿಣಾಮ ರಸ್ತೆಗಳನ್ನು ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಮಾತನಾಡಿ, ಹೊಸದಾಗಿ ಸ್ಪರ್ಧಿಸಿದ್ದ ನನಗೆ ಗೆಲುವು ನೀಡಿದ್ದರಿಂದ ಗ್ರಾಮಾಂತರ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಯಿತು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರ ನಾಯಕತ್ವದಲ್ಲಿ ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯಾಗಿದೆ. ಮತ್ತೊಮ್ಮೆ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಗಳ ಕುರಿತು ಶಿವಮೊಗ್ಗ ಕಾರ್ಯಾಲಯದಲ್ಲಿ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್ ಕಲ್ಲಜ್ಜನಾಳ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಉಜ್ಜಿನಪ್ಪ, ಮಲ್ಲೇಶ್, ಸ್ವರೂಪ್, ರಂಗೋಜಿರಾವ್ ಸೇರಿದಂತೆ ಪ್ರಮುಖರು ಸಭೆ ನಡೆಸಿದರು.

ಗುರುವಾರ ಮತ್ತು ಶುಕ್ರವಾರ ವಿವಿಧೆಡೆಗಳಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪಕ್ಷದ ಪ್ರಮುಖರು, ಮಹಾಶಕ್ತಿ ಕೇಂದ್ರದ ಪ್ರಮುಖರು, ಗ್ರಾಮದ ಮುಖಂಡರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Department Of Pre-University Education ದ್ವಿತೀಯ ಪಿಯು ಫಲಿತಾಂಶ ಪ್ರಕಟ ಬಾಲಕಿಯರದೇ ಮೇಲುಗೈ

0

Department Of Pre-University Education ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ.
ಈ ಬಾರಿ ದಾಖಲೆಯ ಶೇ.74.67ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾದಿಸಿದ್ದು, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮುನ್ನಡೆ ಪಡೆದಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷ ಡಾ.ರಾಮಚಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ರಿತ್ ಸಿಂಗ್ ಅವರು ಪತ್ರಿಕಾಗೋಷ್ಟಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದರು.

Department Of Pre-University Education ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನನ್ಯ ಕೆ.ಎ 600ಕ್ಕೆ 600 ಅಂಕಗಳನ್ನು ಗಳಿಸಿದ್ದಾರೆ.
ಬೆಂಗಳೂರಿನ ಎನ್‍ಎಂಕೆ ಆರ್‍ವಿ ಕಾಲೇಜಿನ ವಿದ್ಯಾರ್ಥಿನಿ ತಬಸಮ್ ಶೇಕ್ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 593 ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕಾಲೇಜಿನ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ.ಕೌಶಿಕ್ ಅವರು 600 ಅಂಕಗಳಿಗೆ 596 ಅಂಕ ಪಡೆದು ಮೊದಲ ರ್ಯಾಂಕ್ ಗಳಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಉಡುಪಿ 2ನೇ ಸ್ಥಾನ, ಕೊಡುಗು 3ನೇ ಸ್ಥಾನ ಪಡೆದಿದ್ದರೆ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 7,02,067 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Shivamogga Rural Assembly Election ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ (ಮೀಸಲು) ವಿಧಾನಸಭಾ ಕ್ಷೇತ್ರ ಚುನಾವಣೆ 2023

0

Shivamogga Rural Assembly Election ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಸಭಾ ಚುನಾವಣೆ

2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಕೆ.ಬಿ. ಅಶೋಕ್
ನಾಯ್ಕ ಗೆಲುವು ಸಾಧಿಸಿದ್ದರು. ಜನತಾ ದಳ (ಜಾತ್ಯತೀತ)ಯ ಶಾರದಾ ಪೂರ್ಯ ನಾಯಕ 3777 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ -2023ರಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಭಾರತೀಯ ಜನತಾ ಪಾರ್ಟಿಯಿಂದ ಅಶೋಕ್ ನಾಯಕ್

ಕಾಂಗ್ರೆಸ್ ಪಕ್ಷದಿಂದ ಡಾ.ಶ್ರೀನಿವಾಸ್ ಕರಿಯಣ್ಣ

ಜೆಡಿಎಸ್ ಪಾರ್ಟಿಯಿಂದ ಶಾರದಾ ಪೂರ್ಯಾ ನಾಯ್ಕ್

Shivamogga Rural Assembly Election ಶಿವಮೊಗ್ಗ ಗ್ರಾಮಾಂತರದಲ್ಲಿ 1,03,534 ಪುರುಷ,
1,04,525 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,08,062 ಮತದಾರರು ಇದ್ದಾರೆ.

ಕಳೆದ ವಿಧಾನಸಭಾ ಗ್ರಾಮಾಂತರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ.ಬಿ. ಅಶೋಕ್ ನಾಯ್ಕ 69,326 ಮತಗಳನ್ನು ಗಳಿಸಿದ್ದರು.

ಸಮೀಪದ ಜೆಡಿಎಸ್ ನಿಂದ ಶಾರದಾ ಪೂರ್ಯಾ ನಾಯ್ಕ್ ಅವರು 65,549 ಮತಗಳನ್ನು ಗಳಿಸಿದ್ದರು.

ಬಿಜೆಪಿಯಿಂದ ಕೆ.ಬಿ. ಅಶೋಕ್ ನಾಯ್ಕ 3,777 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.

ಮತದಾನದ ದಿನಾಂಕ: ಬುಧವಾರ, 10 ಮೇ 2023

ಮತ ಎಣಿಕೆ ದಿನಾಂಕ:
ಶನಿವಾರ, 13 ಮೇ 2023

Shivamogga Assembly Election ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಚುನಾವಣೆ 2023

0

Shivamogga Assembly Election ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಶಿವಮೊಗ್ಗ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ.

2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಕೆ.ಎಸ್ ಈಶ್ವರಪ್ಪ ಗೆಲುವು ಸಾಧಿಸಿದ್ದರು. ಕೆ .ಬಿ. ಪ್ರಸನ್ನ ಕುಮಾರ್ 46107 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ -2023ರಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಭಾರತೀಯ ಜನತಾ ಪಾರ್ಟಿಯಿಂದ ಚನ್ನಬಸಪ್ಪ

ಕಾಂಗ್ರೆಸ್ ಪಕ್ಷದಿಂದ ಎಚ್.ಸಿ.ಯೊಗೇಶ್

ಆಮ್ ಆದ್ಮಿ ಪಾರ್ಟಿಯಿಂದ ನೇತ್ರಾವತಿ ಟಿ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಸೇರಿದಂತೆ 2,52,989 ಮತದಾರರು ಇದ್ದಾರೆ.

Shivamogga Assembly Election ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರು 104,027 ಮತಗಳು ಬಂದಿದ್ದವು . ಸಮೀಪದ ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ನಿಂದ ಕೆ ಬಿ ಪ್ರಸನ್ನ ಕುಮಾರ್ ಅವರಿಗೆ
57,920 ಮತಗಳು ಬಂದಿದ್ದವು.

ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪನವರು 46,107 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದರು.