Monday, April 13, 2026
Monday, April 13, 2026
Home Blog Page 1230

80 people joined Congress in Chikkamagalore ಚಿಕ್ಕಮಗಳೂರು ಜಾಗರ ಹೋಬಳಿಯಲ್ಲಿ 80 ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

0

80 people joined Congress in Chikkamagalore ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಸಮಾಜ ಸೇವಕ ಡಿ.ಸುರೇಶ್ ನೇತೃತ್ವದಲ್ಲಿ ಜಾಗರ ಹೋಬಳಿಯ 80ಕ್ಕೂ ಹೆಚ್ಚು ಯುವಕರು ವಿವಿಧ ಪಕ್ಷವನ್ನು ತೊರೆದು ಅಧಿಕೃತ ವಾಗಿ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್, ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಮುಖಂಡರುಗಳಾದ ಬಿ.ಹೆಚ್.ಹರೀಶ್, ಕೆ.ಎಸ್.ಶಾಂತೇಗೌಡ, ಕೆ.ಮಹಮ್ಮದ್, ಮಲ್ಲೇಶ್ ಸ್ವಾಮಿ, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.

80 people joined Congress in Chikkamagalore ಇದೇ ವೇಳೆ ಡಿ.ಸುರೇಶ್ ನೇತೃತ್ವದಲ್ಲಿ ಮಂಜುನಾಥ್ ನಂಬಿಯಾರ್, ಚನ್ನಕೇಶವ, ಅಣ್ಣಪ್ಪ, ಉಮೇಶ್, ಅಜಯ್, ಸಿದ್ದಾರ್ಥ, ಮಾಲಿಂಗ, ವಾಸು, ಮೋಹನ್ ಸೇರಿದಂತೆ ೮೦ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ ಗೊಂಡರು.

Ramzan Festival ಕಾಂಗ್ರೆಸ್ ಅಭ್ಯರ್ಥಿಗೆ ರಂಜಾನ್ ಸಮಾರಂಭದಲ್ಲಿ ಭಾಗಿಯಾಗಲು ಅಡ್ಡಿಮಾಡಿದ ಬಗ್ಗೆ ಖಂಡನೆ

0

Ramzan Festival ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಸಮೀಪದ ಈದ್ಗಾ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಅವರು ರಂಜಾನ್ ಹಬ್ಬದ ಪ್ರಯುಕ್ತ ಶುಭಾಶಯ ಕೋರಲು ತೆರಳಿದ ಸಂದರ್ಭದಲ್ಲಿ ಕೆಲವು ಮಂದಿ ಅಡ್ಡಿಪಡಿರುವುದಕ್ಕೆ ಕಾಂಗ್ರೆಸ್ ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವೇಳೆ ಹೆಚ್.ಡಿ.ತಮ್ಮಯ್ಯ ಅವರು ಮುಸ್ಲೀಂ ಬಾಂದವರಿಗೆ ಹಬ್ಬದ ಶುಭಾಶಯ ಕೋರುವ ಸ್ಥಳಕ್ಕೆ ತೆರಳದಂತೆ ಕೆಲವು ಪಕ್ಷದ ವ್ಯಕ್ತಿಗಳು ತಡೆವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಾರ್ಥನೆ ಸ್ಥಳಕ್ಕೆ ತೆರಳದಂತೆ ಅಡ್ಡಿಪಡಿಸಿರುವುದನ್ನು ಗಮನಿಸಿದರೆ ವಿರೋಧ ಪಕ್ಷಗಳು ಸೋಲಿನ ಹತಾಶೆ ಯಿಂದ ಈ ರೀತಿಯ ಮಾಡಲಾಗುತ್ತಿದೆ. ಪ್ರಾರ್ಥನೆ ಸಲ್ಲಿಸುವ ಜಾಗವೆಂದರೆ ದೇವರಿರುವಂತಹ ಜಾಗ. ಅಂತಹ ಜಾಗದಲ್ಲೇ ಹಬ್ಬದ ಶುಭಾಶಯ ಕೋರಲು ತೆರಳದಂತೆ ತಡೆವೊಡ್ಡಿರುವುದನ್ನು ನೋಡಿದರೆ ವಿರೋಧ ಪಕ್ಷದ ಕೈವಾಡವಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿದ್ದಾರೆ.
ಆದ್ದರಿಂದ ಮುಸ್ಲೀಂ ಬಾಂಧವರು ಪ್ರಾರ್ಥನೆ ಸಲ್ಲಿಸುವ ಜಾಗದಲ್ಲಿ ಈ ರೀತಿ ವರ್ತನೆ ಮಾಡಬಾರದು.

Ramzan Festival ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆ ನಿಟ್ಟಿನಲ್ಲಿ ಪ್ರಾರ್ಥನಾ ಸ್ಥಳಕ್ಕೆ ತಡೆದಿರುವ ವ್ಯಕ್ತಿಗಳು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Ambedkar Jayanti ಅಂಬೇಡ್ಕರ್ ಸ್ವಸಹಾಯ ಸಂಘದ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ

0

Ambedkar Jayanti ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಗ್ರಾಮದಲ್ಲಿ ಅಂಬೇಡ್ಕರ್ ಸ್ವಸಹಾಯ ಸಂಘ ಹಾಗೂ ಜೈ ಮಾರುತಿ ಯುವಕರ ಸಂಘದ ವತಿಯಿಂದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಭಾವಚಿತ್ರಕ್ಕೆ ಮಹಿಳೆಯರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಸಡಗರ ದಿಂದ ಆಚರಿಸಿದರು.

ನಂತರ ಮಾತನಾಡಿದ ಸ್ವಸಹಾಯ ಸಂಘದ ಅಧ್ಯಕ್ಷೆ ಅರುಣಾಕ್ಷಿ ಅಂಬೇಡ್ಕರ್ ಅವರು ಭಾರತದ ಆಶಾಕಿರಣ, ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ. ಅವರ ಸಂವಿಧಾನದಂತೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ಪ್ರಗತಿ ಪಥದತ್ತ ನಡೆಯಲು ಮುಂದಾಗಬೇಕು ಎಂದು ಹೇಳಿದರು.

ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯರು ಅಂಬೇಡ್ಕರ್ ಅವರು. ಸುಮಾರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು. ಹಾಗೂ ಒಂಬತ್ತು ಭಾಷೆಗ ಳನ್ನು ಬಲ್ಲವರಾಗಿದ್ದರು. ವಿಶ್ವದರ್ಜೆಯ ವಕೀಲರಾಗಿ ಸಮಾಜ ಸುಧಾರಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದರು.

ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್. ಅವರ ಜೀವನ ಚರಿತ್ರೆಯನ್ನು ಅಭ್ಯಾಸಿಸುವ ಮೂಲಕ ಅವರ ಆದರ್ಶ, ಆಶಯ ಹಾಗೂ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಜೈ ಮಾರುತಿ ಯುವಕರ ಸಂಘದ ಯುವಕರು ಹಾಗೂ ಗ್ರಾಮಸ್ಥರು ಅಂಬೇ ಡ್ಕರ್ ಭಾವಚಿತ್ರ ವನ್ನು ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಿದರು.

Ambedkar Jayanti ಈ ಸಂದರ್ಭದಲ್ಲಿ ಜೈ ಮಾರುತಿ ಯುವಕರ ಸಂಘದ ಆನಂದ್, ಗಿರೀಶ್, ಚೇತನ್, ಮಧು, ನವೀನ್, ಚಂದ್ರು, ಮಂಜು, ಗ್ರಾಮಸ್ಥರಾದ ಶಿವಯ್ಯ, ನಟರಾಜ್, ಸ್ವಸಹಾಯ ಸಂಘದ ಉಪಾಧ್ಯಕ್ಷೆ ರೇಣುಕಾ, ಸದಸ್ಯರಾದ ಭವ್ಯ, ಹೇಮ, ವಸಂತ, ಜಯಮ್ಮ, ಪೂರ್ಣಿಮಾ, ಭಾಗ್ಯಮ್ಮ, ರೇಖಾ, ಮಂಜುಳಾ, ನಂಜಮ್ಮ, ಕವಿತಾ, ಶಂಕರಮ್ಮ, ಸವಿತಾ, ಮಂಜುಳಾ, ಮಾಲತಿ, ನೀಲಮ್ಮ, ಯಶೋಧ, ಹಾಲಮ್ಮ, ಓಂಕಾರಮ್ಮ, ಧನಲಕ್ಷ್ಮೀ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Adichunchanagiri PU College Shivamogga ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜಿಗೆಶೇ.100 ಫಲಿತಾಂಶ

Adichunchanagiri PU College Shivamogga ಶಿವಮೊಗ್ಗ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 420 ಮಕ್ಕಳು ಸಹ ಉತ್ತೀರ್ಣರಾಗಿದ್ದಾರೆ. ಅದರಲ್ಲಿ 254 ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.160 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ,
ಶೇಕಡ ನೂರಕ್ಕೆ ನೂರು ಅಂಕ ಪಡೆದ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರದ 3, ರಾಸಾಯನಶಾಸ್ತ್ರದ ನಾಲ್ಕು, ಗಣಿತದ 8, ಜೀವಶಾಸ್ತ್ರದ 3, ಕಂಪ್ಯೂಟರ್ ವಿಜ್ಞಾನದ 14 ಹಾಗೂ ಕನ್ನಡ ಎರಡು, ಸಂಸ್ಕೃತದಲ್ಲಿ 12 ವಿದ್ಯಾರ್ಥಿಗಳು ಈ ಫಲಿತಾಂಶ ಪಡೆದಿದ್ದಾರೆ.

ಈ ವಿಜ್ಞಾನ ಕಾಲೇಜಿನ ಟಾಪರ್ ಆಗಿರುವ ಎಂ ಎಸ್ ಸ್ಪೂರ್ತಿ ಅವರು 590 ಅಂಕ ಗಳಿಸಿ ಶಿವಮೊಗ್ಗ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡೆದಿದ್ದು, ರಾಜ್ಯದಲ್ಲಿ ಏಳನೇ ರಾಂಕ್ ಗಳಿಸಿದ್ದಾರೆ.

588 ಅಂಕ ಪಡೆದಿರುವ ಶಶಾಂಕ್ ಜೋಯ್ಸ್ ರಾಜ್ಯದಲ್ಲಿ 9ನೇ ಸ್ಥಾನ ಪಡೆದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.

Adichunchanagiri PU College Shivamogga ಅಂತೆಯೇ ಧ್ರುವ ಅವರು 585, ಪೂರ್ವಿಕಾಯವರು 585, ಕೃತಿಕಾ ಅವರು 584, ನಮೃತ ಅವರು 584, ಮೋನಿಷಾ ಅವರು 581, ನಮ್ರತಾ ವಿಟಿ ಅವರು 581, ವಿಜೇತ ಬಿ ವಿ ಅವರು 581, ಪ್ರಾರ್ಥನಾ ಎಂ ಅವರು 580, ವಿಸ್ಮಯ ಸೇತುರ್ ಅವರು 580 ಅಂಕಗಳಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ಹಾಗೂ ಕಾಲೇಜಿಗೆ ಶೇಕಡ ನೂರರ ಫಲಿತಾಂಶ ತಂದುಕೊಟ್ಟ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ, ಪ್ರಾಂಶುಪಾಲರಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.

Akshaya Tritiya 2023 ಅಕ್ಷಯ ತೃತೀಯ ಸಮೃದ್ದಿಯ ಸಂಕೇತ

Akshaya Tritiya 2023 ಹೆಸರಿನ ಮೊದಲಲ್ಲೇ ಬಂದಿರುವಂತೆ ಈದಿನ ಮಾಡುವ ಒಳ್ಳೆಯ ಕೆಲಸಗಳಿಗೆ ಅಕ್ಷಯಫಲ ದೊರೆಯುವುದು.ಹೆಚ್ಚಿನವರಿಗೆ ಈ ದಿನ ಚಿನ್ನ ಕೊಂಡರೆ ಐಶ್ವರ್ಯ ದುಪ್ಪಟ್ಟಾಗುವುದು ಎಂಬ
ನಂಬಿಕೆ ಇದೆ.
ಇಂದಿನ ದಿನ ಮದುವೆಯಾಗುವ ನವ ದಂಪತಿಗಳಿಗೆ ಜೀವನಪರ್ಯಂತಸುಖ,ಸಂತೋಷಗಳನ್ನು,ದಾಂಪತ್ಯದಲ್ಲಿ ಅನ್ಯೋನ್ಯತೆ ಅನುಭವಿಸುವರುಎಂಬದೃಢವಾದ ನಂಬಿಕೆ ಇದೆ.
ಮತ್ತೆ ಈದಿನ ಆಸ್ತಿ,ಸೈಟು,ವಸ್ತುಗಳನ್ನು ಖರೀದಿಸಿದರೆ
ಐಶ್ವರ್ಯ ಅಕ್ಷಯಹೊಂದುತ್ತದೆ ಎಂಬ ಅಭಿಪ್ರಾಯವೂ ಇದೆ ಜನರಲ್ಲಿ.
ಇಂದಿನ ದಿನಗಳಲ್ಲಿ ಚಿನ್ನದ ಬೆಲೆ ಏಣಿಯನ್ನು ಏರುತ್ತಿರುವ ದಿವಸದಲ್ಲಿ ಎಲ್ಲರಿಗೂ ಆ ಹಳದಿ ಲೋಹವನ್ನು ಕೊಳ್ಳುವುದು ಕಷ್ಟಸಾಧ್ಯವಾದ ವಿಷಯವೇ ಸರಿ.ಏನೋ ಹಣವಿದ್ದವರು ಮಾತ್ರ ಚಿನ್ನ
ಅಥವಾ ಚಿನ್ನದ ಆಭರಣಗಳನ್ನು ಖರೀದಿಸಲು ಮನಸ್ಸು ಮಾಡಬಹುದು.
ಚಿನ್ನವನ್ನು ಮಾತ್ರ ಕೊಳ್ಳುವುದರ ಮೂಲಕ ಅಕ್ಷಯತೃತೀಯವನ್ನು ಆಚರಣೆ ಮಾಡಬೇಕೆಂತ ಚಿಂತೆ ಯಾಕೆ ಮಾಡಬೇಕು?.
ನಾವು ಊಟಮಾಡುವುದರಲ್ಲಿ ಹಸಿದು ಬಂದವರಿಗೆ
ಹೊಟ್ಟೆ ತುಂಬಿಸಿದರೆ ನಿಜಕ್ಕೂ ಆ ಪರಮಾತ್ಮ ಮೆಚ್ಚಿ
ಅಕ್ಷಯಫಲ ಎಂದರೆ ಪುಣ್ಯವನ್ನು ನಮ್ಮ ಖಾತೆಗೆ
ಸೇರಿಸುತ್ತಾನೆ.ಅನ್ನದಾನ ಒಂದು ಶ್ರೇಷ್ಠದಾನ.ಹಸಿದ
ಹೊಟ್ಟೆಗಳನ್ನು ತೃಪ್ತಿ ಪಡಿಸಲು ಊಟವೊಂದೇ ಸಾಧನ.ನೋಡಿ ತೃಪ್ತಿಯಾಗಿ ಇನ್ನು ಸಾಕು ಎಂದು ಹೇಳುವುದು ಊಟದ ವಿಷಯದಲ್ಲಿ ಮಾತ್ರ.
ನೀವು ಹಣ ಕೊಡಿ ಇನ್ನೂ ಬೇಕೆನಿಸುತ್ತದೆ ವಿನ:
ಸಾಕು ಎಂದು ಯಾರೂ ಹೇಳುವುದಿಲ್ಲ.ಹಣ ಕೊಟ್ಟರೆ
ಇನ್ನೂ ಬೇಕುಬೇಕು ಎನ್ನುತ್ತೇವೆಯೇ ಹೊರತು ಸಾಕು
ಎಂದು ಸುತರಾಂ ಹೇಳುವುದಿಲ್ಲ.ಇದು ಮನುಷ್ಯನ
ಸ್ವಾಭಾವಿಕ ಗುಣ.
ಹಣದ ಅನುಕೂಲ ವಿದ್ದವರು ಸ್ಕೂಲುಫೀಸು,ಕಾಲೇಜು ಫೀಸು ಕಟ್ಟಲಿಕ್ಕೆ ಸಾಧ್ಯವಾಗದೇ ಇದ್ದವರಿಗೆ ಫೀಸುಕಟ್ಟಿ ವಿದ್ಯೆಕಲಿಯಲಿಕ್ಕೆ ಅನುಕೂಲ ಮಾಡಬಹುದು.
ವಿದ್ಯೆಕಲಿತವರು ಕಲಿಯುವವರಿಗೆ ವಿದ್ಯೆ ಹೇಳಿಕೊಟ್ಟು
ವಿದ್ಯಾದಾನ ಮಾಡಬಹುದು.ಇದೂ ಒಂದು ಶ್ರೇಷ್ಠವಾದ ದಾನ ಎನ್ನಿಸಿಕೊಂಡಿದೆ.ಒಳ್ಳೆಯ ಸದೃಢ
ಆರೋಗ್ಯವಿದ್ದವರು ,ಹಿರಿಯರಿಗೆ,ವಯಸ್ಸಾದವರಿಗೆ
ಅಂಗವಿಕಲರಿಗೆ ಕೈಲಾದ ಸಹಾಯ ಮಾಡಬಹುದು.
ಈ ದಿನಕ್ಕೆ ಬೇರೆಬೇರೆ ಪೌರಾಣಿಕ ಅರ್ಥಗಳೂ ಉಂಟು.
ಪವಿತ್ರಗಂಗಾಮಾತೆ ಭೂಮಿಗೆ ಬಂದ ದಿನವೂ ಅಕ್ಷಯತೃತೀಯದಂದು ಎಂದು ಹೇಳುತ್ತಾರೆ.
ವೇದವ್ಯಾಸ ಮಹರ್ಷಿಗಳು ಮಹಾಭಾರತವನ್ನು
ವಿಘ್ನೇಶ್ವರನ ಕೈಯಲ್ಲಿ ಬರೆಸಿದ ದಿನವೂ ಇದೇ ಆಗಿದೆ
ಎಂದು ತಿಳಿಯುತ್ತದೆ.
ಸೂರ್ಯದೇವನು ಅಕ್ಷಯ ಪಾತ್ರೆಯನ್ನು ಪಾಂಡವರಾಜ ದರ್ಮರಾಯನಿಗೆ ಕೊಟ್ಟ ದಿನವೂ ಇದೇ ಆಗಿದೆ.
ಗುರುಕುಲದಲ್ಲಿ ಒಟ್ಟಿಗೇ ಸಾಂದೀಪನಿ ಗುರುಗಳಲ್ಲಿ ಕಲಿತು ಸಹಪಾಠಿಗಳಾಗಿದ್ದ ಶ್ರೀಕೃಷ್ಣ ಸುಧಾಮರು ಭೇಟಿಯಾದ ದಿನವೂ ಅಕ್ಷಯ ತೃತೀಯವಾಗಿದೆ.

Akshaya Tritiya 2023 ಹೀಗೆ ಅಕ್ಷಯತೃತೀಯ ದಿನವು ಬಹಳ ಮಹತ್ವ ಹೊಂದಿದ ಶುಭದಿನವಾಗಿದೆ.
ಈ ಶುಭದಿನದಲ್ಲಿ ಮಾಡಬಹುದಾದ ಇನ್ನೊಂದು ವಿಶೇಷವಾದ ಕೆಲಸ ವೆಂದರೆ ದುಡ್ಡು ಖರ್ಚು ಮಾಡದೇಭಗವಂತನಲ್ಲಿತಮ್ಮನ್ನಲ್ಲದೇ,ರಾಜ್ಯದ,ದೇಶದ ಜನರೆಲ್ಲರಿಗೂ ಸನ್ಮಂಗಳವನ್ನು ಕರುಣಿಸುವಂತೆ ಪ್ರಾರ್ಥಿಸಿದರೆಅಕ್ಷಯವಾದಪುಣ್ಯವನ್ನುಅನುಗ್ರಹಿಸುವುದರಲ್ಲಿ ಸಂದೇಹವಿಲ್ಲ.
ಹೀಗೆ ಎಲ್ಲರೂ ಒಬ್ಬರ ಕಷ್ಟಕ್ಕೆ ಒಬ್ಬರು ಪರಸ್ಪರ ಕೈಲಾದ ಸಹಾಯಮಾಡುವ ಮನೋಭಾವನೆಯ ಸಂಕಲ್ಪ ಮಾಡುವುದರ ಮೂಲಕ ಅಕ್ಷಯತೃತೀಯದ ಆಚರಣೆಯನ್ನು ಅರ್ಥಪೂರ್ಣವಾಗಿಸ ಬಹುದು.

ಲೇ; ಎನ್.ಜಯಭೀಮ ಜೊಯಿಸ್ .ಶಿವಮೊಗ್ಗ.

Congress MLA KB Prasannakumar Joins JDS ಶಿವಮೊಗ್ಗ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಜೆಡಿಎಸ್ ಗೆ ಸೇರ್ಪಡೆ

0

Congress MLA KB Prasannakumar Joins JDS ರಾಜಕೀಯದ ಕ್ಷಿಪ್ರ ಬೆಳವಣಿಗೆಯಲ್ಲಿ ಶಿವಮೊಗ್ಗದ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಜೆಡಿಎಸ್ ಪಕ್ಷ ಸೇರಿದ್ದಾರೆ.

ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖ ತೆನೆ ಹೊತ್ತ ಮಹಿಳೆಯ ಚಿನ್ಹೆಯುಳ್ಳ ಬಾವುಟ ಸ್ವೀಕರಿಸಿದರು.
ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ
ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರು.
ಬಗ್ಗದ ಮಾಜಿ ಶಾಸಕ ಪ್ರಸನ್ನಕುಮಾರ್ ಸದ್ಯ ಬೇಷರತ್ತಾಗಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದೇನೆ.
ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಶ್ರಮಿಸುವೆ.
ಪ್ರಸ್ತುತ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನ ಗೆಲ್ಲಿಸುವುದೇ ನಮ್ಮ ಗುರಿ. ತಾವು ಜೆಡಿಎಸ್ ಸೇರುವಾಗ ಕಾಂಗ್ರೆಸ್ ಪಕ್ಷದ ಯಾರಿಗೂ ತಮ್ಮೊಡನೆ ಬರಲು ಒತ್ತಾಯಮಾಡಿಲ್ಲ. ಅಭಿಮಾನಿಗಳು ಮತ್ತು ಮಿತ್ರರ ಸಲಹೆ,ಸಮ್ಮತಿ ಪಡೆದು ಜೆಡಿಎಸ್ ಪಕ್ಷ ಸೇರುವ ನಿರ್ಧಾರಮಾಡಿದ್ದೇನೆ ಎಂದು ತಿಳಿಸಿದರು.

Congress MLA KB Prasannakumar Joins JDS ಜೆಡಿಎಸ್ ಜಿಲ್ಲಾಧ್ಯಕ್ಷ
ಶ್ರೀಕಾಂತ್,
ಅಭ್ಯರ್ಥಿ ಆಯನೂರು ಮಂಜುನಾಥ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Shankara Jayanti Mahotsava ಶಂಕರ ಜಯಂತಿ ವಿಶೇಷ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

0

Shankara Jayanti Mahotsava ಶಿವಮೊಗ್ಗ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀ ಶೋಭಕೃತ್‌ನಾಮ ಸಂವತ್ಸರದ ವೈಶಾಖ ಶುದ್ಧ ಪಾಡ್ಯದಿಂದ ಪಂಚಮಿಯವರೆಗೆ ಏ.21ರಿಂದ ಏ 25ರವರೆಗೆ ಪ್ರತಿದಿನ ಪ್ರಾತಃ 7 ರಿಂದ ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿ ರುದ್ರಾಭಿಷೇಕ, ಪ್ರಾತಃ 11 ರಿಂದ 12 ರವರೆಗೆ ಶ್ರೀ ಶಂಕರ ವಿಜಯ ಪಾರಾಯಣ ಸಂಜೆ 5ರಿಂದ 6.30ವರೆಗೆ  ಶ್ರೀ ಶಂಕರ ಸ್ತೋತ್ರಮಾಲಾ,  ರಾಜಲಕ್ಷ್ಮೀ ರವರ ನೇತೃತ್ವದಲ್ಲಿ ಸೌಂದರ್ಯ ಲಹರಿ ಸತ್ಸಂಗ ನಡೆಯಲಿದೆ.

ಏ.22ರ ಇಂದು ಸಂಜೆ 6.30ಕ್ಕೆ ಸಮ್ಮಿತ್ ನಟೇಶ್‌ರವರಿಂದ ಕರ್ನಾಟಕ ಶಾಸ್ತ್ರೀ ಸಂಗೀತ, ಏ. 23 ರಂದು ಶ್ರೀ ಶಂಕರ ವಿಜಯ ಗಮಕ ವಾಚನ ಪ್ರೊ. ಸನತ್‌ಕುಮಾರ್ ಮತ್ತೂರು, ವ್ಯಾಖ್ಯಾನ ಅಚ್ಯುತ ಅವಧಾನಿಗಳು ಮತ್ತೂರು, ಏ. 24ರಂದು ಸಂಭ್ರಮ ಹೆಚ್. ಎಸ್ ಮತ್ತು ವೃಂದದವರಿಂದ ಭಕ್ತಿ ಸಂಗೀತ, ಏ. 25ರಂದು ಶ್ರೀ ಶೃಂಗೇರಿ ಶಂಕರ ಮಠದವರಿಂದ ಶ್ರೀ ಶಂಕರ ದರ್ಶನ ಗೀತ ರೂಪಕ ಪ್ರರ್ದಶನವಿದೆ.

Shankara Jayanti Mahotsava ಪ್ರತೀ ದಿನ ಕಾರ್ಯಕ್ರಮಗಳ ನಂತರ ಪ್ರಾಕಾರೋತ್ಸವ ನಡೆಯಲಿದೆ.

ಶ್ರೀ ಶಂಕರ ಜಯಂತಿ ಸೇವಾ ಕಾರ್ಯಗಳು ಹಾಗೂ ಹೆಚಿನ ವಿವರಗಳಿಗೆ ಸಂಪರ್ಕಿಸಿ: 7892137431 ಅಥವಾ 9448943937 ರಲ್ಲಿ ಸಂಪರ್ಕಿಸಬಹುದು.

Karnataka Assembly Elections 2023 ಕಾಂಗ್ರೆಸ್ ಗೆ ಬಹುಮತ ಸರ್ಕಾರ ರಚನೆ ಖಚಿತ-ಸಿರಿವಳ್ಳಿ ಪ್ರಸಾದ್

0

Karnataka Assembly Elections 2023 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ಎ ಐ ಸಿಸಿ ಕಾರ್ಯದರ್ಶಿ ಸಿರಿವಳ್ಳಿ ಪ್ರಸಾದ್ ಅವರು ಹೇಳಿದರು.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಶೇ. 40 ಕಮಿಷನ್ ಸರ್ಕಾರದ ವಿರುದ್ಧ ಜನ ತಿರುಗಿ ಬೀಳಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷದಿಂದ ವಿತರಿಸಿರುವ ಗ್ಯಾರಂಟಿ ಕಾರ್ಡ್ ಕಾಂಗ್ರೆಸ್ ಗೆ ಮತ ತರುವಲ್ಲಿ ಸಹಕಾರಿಯಾಗಲಿದೆ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿ ಕಾರ್ಡ್ ಯೋಜನೆ ಚಾಲನೆ ನೀಡಲಾಗುತ್ತದೆ ಎಂದರು.

Karnataka Assembly Elections 2023 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎ ಚ್.ಸಿ. ಸುಂದರೇಶ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಪಕ್ಷಕ್ಕೆ ಜನರ ಒಲವಿದೆ ಎಂದು ತಿಳಿದು ಬರುತ್ತಿದೆ. ಶಿವಮೊಗ್ಗ ನಗರದಲ್ಲಿ 40,000ಕ್ಕೂ ಹೆಚ್ಚು ಗ್ಯಾರಂಟಿ ಕಾರ್ಡ್ ನೀಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಅನುಕೂಲಕರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಚಂದ್ರ ಭೂಪಾಲ, ಚಂದ್ರಶೇಖರ್, ಇನ್ನು ಮುಂತಾದವರು ಉಪಸ್ಥಿತರಿದ್ದರು.

Election Police Observer ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಪೊಲೀಸ್ ವೀಕ್ಷಕ ರಾಗಿ ಕೆ.ಸತ್ಯನಾರಾಯಣ ನೇಮಕ

0

Election Police Observer ಶಿವಮೊಗ್ಗ ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಮತ್ತು ಶಾಂತಿ ಯುತ ಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗವು ಪೊಲೀಸ್ ವೀಕ್ಷಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಕೆ. ಸತ್ಯನಾರಾಯಣ ಅವರನ್ನು ನೇಮಿಸಿದೆ.

ಪೊಲೀಸ್ ವೀಕ್ಷಕರು ನಗರದಲ್ಲಿ ಸಾಗರ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಗಣ್ಯರ ಕೊಠಡಿ ಸಂಖ್ಯೆ 6ರಲ್ಲಿ ಲಭ್ಯವಿರುತ್ತಾರೆ.

Election Police Observer ಇವರನ್ನ ಸಂಪರ್ಕಿಸಲು ಮೊಬೈಲ್ ಸಂಖ್ಯೆ 6364172080 ಅಥವಾ ಇ ಮೇಲ್ ವಿಳಾಸ www.poshimoga113@gmail.com ಸಂಪರ್ಕಿಸಬಹುದು.

Canara Bank Self Employed Training ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಕೋಳಿ ಸಾಕಾಣಿಕೆ ತರಬೇತಿ

0

Canara Bank Self Employed Training ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಕುರಿ ಸಾಕಾಣಿಕೆ (೧೦ ದಿನಗಳ) ಮತ್ತು ಕೋಳಿ ಸಾಕಾಣಿಕೆ (೧೦ ದಿನಗಳ) ಉಚಿತ ತರಬೇತಿಯನ್ನು ಹಮ್ಮಿಕೊಂಡಿದೆ.

ಆಸಕ್ತಿ ಇರುವ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕ ಮತ್ತು ಯುವತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. 8ನೇ ತರಗತಿ ಉತ್ತೀರ್ಣರಾಗಿರಬೇಕು. ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ,ವಸತಿ ವ್ಯವಸ್ಥೆ ಇರುತ್ತದೆ.

ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಇಲ್ಲಿ ಈ ತರಬೇತಿಗಳನ್ನು ಒಳಗೊಂಡಿದೆ.
ಕುರಿ ಸಾಕಾಣಿಕೆ -10ದಿನಗಳು, ಕೋಳಿ ಸಾಕಾಣೀಕೆ – 10 ದಿನಗಳು
ತರಬೇತಿಯು ಮೇ – 2023 ಪ್ರಾರಂಭವಾಗಲಿದೆ. ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
Canara Bank Self Employed Training ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು- 577216 ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8722384541 ,8660062683 ಸಂಪರ್ಕಿಸಬಹುದು.