Monday, April 13, 2026
Monday, April 13, 2026
Home Blog Page 1229

Assembly Election ರಾಜ್ಯ ವಿಧಾನಸಭಾ ಚುನಾವಣೆ-2023 ಶಿಕಾರಿಪುರ ವಿಧಾನ ಸಭಾ ಕ್ಷೇತ್ರಕಿರು ಮಾಹಿತಿ

0

Assembly Election ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಶಿಕಾರಿಪುರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳಲ್ಲಿ ಒಂದಾಗಿದೆ.

2018, ಕಳೆದ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು.

2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಬಿಎಸ್ ಯಡಿಯೂರಪ್ಪ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಜಿ .ಬಿ. ಮಾಲತೇಶ್ 35397 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

2023ರ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಜೆಡಿಎಸ್ ನಿಂದ ಸುಧಾಕರ ಶೆಟ್ಟಿ

ಎನ್ ಐಸಿ ಯಿಂದ ಜಿ.ಬಿ. ಮಾಲತೇಶ್

ಬಿಜೆಪಿಯಿಂದ ಬಿ ವೈ ರಾಘವೇಂದ್ರ

ಆಮ್ ಆದ್ಮಿ ಪಾರ್ಟಿಯಿಂದ ಚಂದ್ರಕಾಂತ್ ರೇವಣಕರ್

Assembly Election 2018ರ ವಿಧಾನಸಭಾ ಚುನಾವಣೆಯಲ್ಲಿ
ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪನವರು 86,983 ಮತಗಳನ್ನು ಗಳಿಸಿದ್ದರು. ಬಿಎಸ್ ಯಡಿಯೂರಪ್ಪನವರು 35,397 ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದರು.

ಕಾಂಗ್ರೆಸ್ ನಿಂದ ಜಿ. ಬಿ. ಮಾಲತೇಶ್ ಅವರು
51,586 ಮತಗಳನ್ನು ಗಳಿಸಿದ್ದರು.

2023 ಶಿಕಾರಿಪುರ ವಿಧಾನಸಭಾ ಚುನಾವಣೆಯ ಮತದಾರರ ಸಂಖ್ಯೆ

98,281ಪುರುಷ ಮತದಾರರು
98,086 ಮಹಿಳಾ ಮತದಾರರು
ತೃತೀಯ ಲಿಂಗಿ 04 ಮತದಾರರು
ಒಟ್ಟು 19,371 ಮತದಾರರು

ಮತದಾನದ ದಿನಾಂಕ: ಬುಧವಾರ, 10 ಮೇ 2023
ಮತ ಎಣಿಕೆ ದಿನಾಂಕ: ಶನಿವಾರ, 13 ಮೇ 2023

BJP Karnataka ಡಬ್ಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಾಗಿವೆ

0

BJP Karnataka ಬಿಜೆಪಿ ಸರ್ಕಾರದ ಅವಧಿಯ ಪರಿಣಾಮಕಾರಿ ಯೋಜನೆಗಳಿಂದ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ ಹೇಳಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಹರಿಗೆ, ಹಾಥಿನಗರ, ಯಲವಟ್ಟಿ ಕ್ಯಾಂಪ್ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರಚಾರ ಸಭೆ ಹಾಗೂ ಮನೆ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಕೋಟಿ ರೂ.ಗೂ ಅಧಿಕ ಅನುದಾನ ಉಪಯೋಗಿಸಿ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ರಾಜ್ಯದಲ್ಲಿ ಮಾದರಿ ಗ್ರಾಮಗಳ ನಿರ್ಮಾಣಕ್ಕೆ ಬಿಜೆಪಿಯೇ ಭರವಸೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.

BJP Karnataka ದೇಶದ ಸುರಕ್ಷತೆ ಹಾಗೂ ಹಿತದೃಷ್ಠಿಯಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ತರ ಕೆಲಸಗಳನ್ನು ಮಾಡುತ್ತಿದೆ. ದೇಶದಲ್ಲಿ ಉತ್ತಮ ಆಡಳಿತ ನಡೆಸುವ ಸದೃಢ ರಾಷ್ಟ್ರ ನಿರ್ಮಾಣ ಆಗಿದೆ.

ನರೇಂದ್ರ ಮೋದಿ ನಾಯಕತ್ವಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಕೊಡುಗೆಯು ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಪ್ರಮುಖರಾದ ವೀರೂಪಾಕ್ಷಪ್ಪ, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಹರಿಗೆ, ಹಾಥಿನಗರ, ಯಲವಟ್ಟಿ ಕ್ಯಾಂಪ್‌ನ ಸ್ಥಳೀಯರು ಹಾಜರಿದ್ದರು. ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ ಕಲ್ಲಜ್ಜನಾಳ್, ಸ್ವರೂಪ್ ಸೇರಿದಂತೆ ಪಕ್ಷದ ವಿವಿಧ ಸಮಿತಿ ಮುಖಂಡರು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕರ್ತರು ಚುನಾವಣಾ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

Shivamogga Assembly Election ರಾಜಾಹುಲಿಯ ಆಶೀರ್ವಾದ ಪಡೆದ ಚೆನ್ನಿ

0

Shivamogga Assembly Election ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಶ್ರೀ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ರವರು ಇಂದು ಬೆಳ್ಳಗ್ಗೆ ಶಿಕಾರಿಪುರದಲ್ಲಿ ಪಕ್ಷದ ಹಿರಿಯರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Shivamogga Assembly Election ಈ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರು ನಾವು ಗೆದ್ದೇ ಗೆಲ್ಲುತ್ತೀಯ ಎಂದು ಹಾರೈಸಿದರು. ಚುನಾವಣಾ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

World Book Day ಪೀಳಿಗೆಗಳಿಗೆ ಉಳಿಯುವ ಆಸ್ತಿ -ವಿಶ್ವ ಪುಸ್ತಕ

0

World Book Day ಅಕ್ಷಸ್ಥರ ಮಾಧ್ಯಮ ಪುಸ್ತಕ .ಈಗಿನ ಐಟಿ ಯುಗದಲ್ಲಿ ಡಿಜಿಟಲ್ ಆಗಿ ತನ್ನ ಸ್ವರೂಪಕ್ಕೆ ಹೊಸ ಆಯಾಮ ಪಡೆದುಕೊಂಡಿದೆ.

ಒಂದುಕ್ಷಣ ಯೋಚಿಸಿ!.ಪುಸ್ತಕ ಅರ್ಥಾತ್ ಗ್ರಂಥಗಳೇ ಇಲ್ಲದಿದ್ದರೆ ಏನಾಗುತ್ತಿತ್ತು? ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮೊಟ್ಟಮೊದಲಿಗೆ
ಇಂದು ನಾವು ಅಪಾರ ‌ಭಕ್ತ್ಯಾದರಗಳಿಂದ ಕಾಣುವ ಧರ್ಮಗ್ರಂಥಗಳೇ ಲಭ್ಯವಾಗುತ್ತಿರಲಿಲ್ಲ.
ಇದು ಎಲ್ಲ ಧರ್ಮೀಯರಿಗೂ ಅನ್ವಯಿಸುತ್ತದೆ.

ಮನುಷ್ಯನ ಜ್ಞಾನದ ಬೆಳವಣಿಗೆಯ ಹಂತಗಳು, ಸಂಶೋಧನೆಗಳು ಅದರ ಫಲಿತಾಂಶಗಳು ನಮಗೆ ಸಿಗುತ್ತಿರಲಿಲ್ಲ.
ಮುಖ್ಯವಾಗಿ ಆಯಾ ದೇಶಗಳ ಇತಿಹಾಸ,ಚರಿತ್ರೆಗಳೂ ಅಷ್ಟೆ.
ಮನುಷ್ಯ ಜನಾಂಗದ ಅಭಿವ್ಯಕ್ತಿಯಾಗಿ ಭಾಷೆ ಕರಗತದಾಗ
ಬರವಣಿಗೆ ಸಿದ್ಧಿಸಿತು.
ಆ ಬರಹಗಳು‌ ಓಲೆಗರಿ,ತಾಳೆಗರಿಗಳಲ್ಲಿ ,ತಾಮ್ರ ಮತ್ತು ಶಿಲಾ ಕೆತ್ತನೆಗಳಲ್ಲಿ ಮೂಡಿ ಅಲ್ಲೇ ಅಡಗಿದ್ದವು.

ನಂತರ ಸಂಶೋಧನಾ ಪ್ರವೃತ್ತಿಯ ಪ್ರತಿಭಾವಂತರಿಂದ ಮುದ್ರಣ ಕಲೆಯ ಆವಿಷ್ಕಾರದಿಂದ ಅವುಗಳು ಪುಸ್ತಕರೂಪತಾಳಿದವು. ಗ್ರಂಥಾಲಯಗಳಲ್ಲಿ ಲಭ್ಯವಾದವು.

ಮತ್ತಷ್ಟು ಮನುಷ್ಯ ವಿಕಾಸವಾದಂತೆ ಯೋಚನೆ,ಕಲ್ಪನೆಗಳಿಗೆ ಅವಕಾಶ ಸಿಕ್ಕವು.
ಕತೆ,ಕಾವ್ಯ, ಕಾದಂಬರಿ,ಪ್ರಬಂಧನಾಟಕ ಹೀಗೆ ಬರಹಗಳು ನಮಗೆ ಪ್ರವಾಹೋಪಾದಿಯಲ್ಲಿ ಓದಲು ದೊರೆತಿವೆ.

World Book Day ಪುಸ್ತಕಗಳ ಈ ಮಹತ್ವವನ್ನ ನಮ್ಮ ಮಕ್ಕಳಿಗೆ ತಿಳಿಯಹೇಳುವ ಉದ್ದೇಶದಿಂದ ವಿಶ್ವಸಂಸ್ಥೆಯ ಯುನೆಸ್ಕೊ ವಿಭಾಗವು ಪ್ರತೀ ವರ್ಷದ ಏಪ್ರಿಲ್ 23 ನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ಆಚರಣೆ 1995 ರಿಂದ ಆರಂಭಗೊಂಡಿದೆ.

ವಿಶ್ವ ಪುಸ್ತಕ ದಿನದ ಸಂಸ್ಥಾಪಕ
ಬರೊನಸ್ ಗೈಲ್ ರೆಬಕ್ ಪ್ರಕಾರ
” ಹಿಂದಿನಂತೆ ನಮ್ಮ ಗುರಿಯೂ ಓದಿನ ಪ್ರಕ್ರಿಯೆಯನ್ನ ಮರುಹೊಂದಿಸುವುದೇ ಆಗಿದೆ.ನಮ್ಮ ಸಂದೇಶವು ವರ್ತಮಾನದಲ್ಲಿ ಓದಿನ ಸಂತೋಷ,ಮಜಾ , ಪ್ರಸ್ತುತತೆ, ,ಸ್ವೀಕೃತಿ ಇತ್ಯಾದಿಗಳಿಂದ ನಮ್ಮ ಬದುಕನ್ನೇ ಬದಲಿಸುವ ಚೈತನ್ಯ ಅದರಲ್ಲಿದೆ.

ಲೇ: ಡಾ.ಸುಧೀಂದ್ರ, ಕೆ ಲೈವ್ ಸಂಪಾದಕರು

Sorab Assembly Election ವಿಧಾನ ಸಭಾ ಚುನಾವಣೆ2023 ಸೊರಬ ವಿಧಾನ ಸಭಾ ಕ್ಷೇತ್ರ ಕಿರು ಮಾಹಿತಿ

0

Sorab Assembly Election ವಿಧಾನಸಭಾ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೊರಬ ವಿಧಾನ ಕ್ಷೇತ್ರ ಬಂಗಾರಪ್ಪನವರ ರಾಜಕೀಯದ ತವರೂರು ಎಂದೇ ಪ್ರಸಿದ್ದಿ ಪಡೆದಿದೆ. ಬಂಗಾರಪ್ಪನವರ ಇಬ್ಬರು ಮಕ್ಕಳು ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರ ರಾಜಕೀಯ ಆಶ್ರಯ ಪಡೆದಿರುವ ಕ್ಷೇತ್ರವಿದು.

ಈ ಕ್ಷೇತ್ರದಲ್ಲಿ ಯಾವ ಪಕ್ಷಗಳು ಗೆಲುವು ಸಾಧಿಸುತ್ತವೆ ಎಂಬುದಕ್ಕಿಂತ ಬಂಗಾರಪ್ಪನವರ ಮಕ್ಕಳು ಯಾವ ಯಾವ ಪಕ್ಷದಲ್ಲಿದ್ದಾರೆ ಎಂಬುದು ಮುಖ್ಯ.

ಮಧು ಬಂಗಾರಪ್ಪ ಅವರು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದ್ರು. ದೀರ್ಘ ಕಾಲದಲ್ಲಿ ಕಾಂಗ್ರೆಸ್ ನಲ್ಲಿದ್ದ ಕುಮಾರ್ ಬಂಗಾರಪ್ಪನವರು ಬಿಜೆಪಿಗೆ ಸೇರ್ಪಡೆಯಾದರು..

ಪ್ರತಿ ಬಾರಿಯ ಚುನಾವಣೆಯಲ್ಲಿ ಬಂಗಾರಪ್ಪ ಅವರ ಮಕ್ಕಳದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರ ಸ್ಪರ್ಧೆಯಿಂದಾಗಿ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.

2018ರಲ್ಲಿ ಸೊರಬ ಕ್ಷೇತ್ರದ ಫಲಿತಾಂಶವನ್ನು ನೋಡುವುದಾದರೆ…

2018ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಕುಮಾರ್ ಬಂಗಾರಪ್ಪ ಅವರು ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಸ್ಪರ್ಧಿಸಿದ್ದರು.

72,091 ಮತಗಳನ್ನು ಬಿಜೆಪಿ ಅಭ್ಯರ್ಥಿಯಾದ ಕುಮಾರ್ ಬಂಗಾರಪ್ಪ ಅವರು ಗಳಿಸಿದ್ದರು.

58,805 ಮಧು ಬಂಗಾರಪ್ಪನವರು ಪಡೆದಿದ್ದರು. ಇವರಿಬ್ಬರ ನಡುವೆ ಸುಮಾರು 13 ಸಾವಿರ ಮತಗಳ ಅಂತರದಲ್ಲಿ ಕುಮಾರ್ ಬಂಗಾರಪ್ಪ ಅವರು ಗೆಲುವನ್ನು ಸಾಧಿಸಿದ್ದರು.

2018ರಲ್ಲಿ ಸೊರಬ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 1,84,585 ಮತಗಳು. ಇದರಲ್ಲಿ ಪುರುಷ ಮತದಾರರ ಸಂಖ್ಯೆ 93911.

ಒಟ್ಟು ಮಹಿಳಾ ಮತದಾರರ ಸಂಖ್ಯೆ 90662.

ತೃತೀಯ ಲಿಂಗಿ ಮತದಾರರ ಸಂಖ್ಯೆ 12.

ಒಟ್ಟು ನೋಟಾ ಓಟುಗಳು 1039.

Sorab Assembly Election ಸೊರಬ ಕ್ಷೇತ್ರದಲ್ಲಿ ಸುಮಾರು ಐದು ಬಾರಿ ಬಂಗಾರಪ್ಪ ಅವರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈಗ 2023ನೇ ವಿಧಾನಸಭಾ ಚುನಾವಣೆಯಲ್ಲಿ ಆರನೇ ಬಾರಿ ಈ ಸಹೋದರರು ಸ್ಪರ್ಧೆಯ ಅಖಾಡಕ್ಕಿಳಿಯಲಿದ್ದಾರೆ.

ಇನ್ನೂ 2023ರ ಸೊರಬ ಕ್ಷೇತ್ರದ ಒಟ್ಟು ಮತದಾರರು 1,84,621.

ಈ ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 239.

2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಜಯ ಗಳಿಸಿದ್ದರು. ಈ ಬಾರಿಯ 2023ನೇ ವಿಧಾನಸಭಾ ಚುನಾವಣೆಯ ಯುದ್ಧದಲ್ಲಿ ಜಯಮಾಲೆ ಯಾರು ಪಡೆಯುತ್ತಾರೆ ಎಂದು ಕಾದು ನೋಡಬೇಕಾಗಿದೆ.