Monday, April 13, 2026
Monday, April 13, 2026
Home Blog Page 1228

Nidhi Apke Nikat ಏಪ್ರಿಲ್ 27 ರಂದು ಸಾಗರದಲ್ಲಿ ನಿಧಿ ಆಪ್ ಕೆ ನಿಕಟ್ ಕಾರ್ಯಕ್ರಮ

0

Nidhi Apke Nikat ನಿವೃತ್ತ ಜೀವನಕ್ಕೆ ಸಾಮಾಜಿಕ ಭದ್ರತೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 27 ರಂದು ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಭವಿಷ್ಯ ನಿಧಿ ಸದಸ್ಯರ ಕುಂದುಕೊರತೆ ಹಾಗೂ ಅಹವಾಲು ಸ್ವೀಕರಿಸಲಾಗುತ್ತಿದೆ.

Nidhi Apke Nikat 27 ಏಪ್ರಿಲ್ 2023 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 01:00 ರವರೆಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹಾಗೂ ಮಧ್ಯಾಹ್ನ 2:30 ರಿಂದ 4:00 ರವರೆಗೆ ಪಿಂಚಣ ದಾರರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಎಲ್.ಬಿ.ಎಸ್.ಸ್ಕೂಲ್, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ತಾರಾಪುರ ಆವರಣ, ಜೋಗರಸ್ತೆ ಮತ್ತು ದಾವಣಗೆರೆ ಜಿಲ್ಲೆಯ ಶ್ರೀ ವಿಜಯ ಪಿ.ಯು.ಕಾಲೇಜ್, ಯು.ಟಿ.ಸಿ. ಸರ್ಕಲ್, ಹೆಚ್.ಕಡದಕಟ್ಟೆ, ಮಾರಿಕೊಪ್ಪ ರಸ್ತೆ, ಹೊನ್ನಳ್ಳಿ ಇಲ್ಲಿ ನಿಧಿ ಆಪ್ಕೆ ನಿಕಟ್ ಸಭೆ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ತಿಳಿಸಿದ್ದಾರೆ.

Tiger and Lion Safari ಏಪ್ರಿಲ್ 25 ರಂದು ತ್ಯಾವರೆಕೊಪ್ಪ ಹುಲಿಸಿಂಹಧಾಮ ಓಪನ್ ಇರುತ್ತದೆ

0

Tiger and Lion Safari ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಕಾರಣ ಏ.25 ರ ಮಂಗಳವಾರವೂ ಸಹ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ತೆರೆದಿರುತ್ತದೆ.

Tiger and Lion Safari ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮವನ್ನು ವೀಕ್ಷಿಸುವಂತೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Sagara Working Journalists Association ಬಿಜೆಪಿ ಮುಖಂಡರಿಂದ ಪತ್ರಿಕೆಗಳ ಬಗ್ಗೆ ಜಾಲತಾಣದಲ್ಲಿ ಅವಹೇಳನ ಸಾಂಕೇತಿಕ ಪ್ರತಿಭಟನೆ

0

Sagara Working Journalists Association ಬಿಜೆಪಿ ಮುಖಂಡರಿಂದ ಪತ್ರಿಕೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವಿರುದ್ದ ಚುನಾವಣಾಧಿಕಾರಿಗಳಿಗೆ ಪತ್ರಕರ್ತರ ಸಂಘಟನೆಗಳಿಂದ ಮನವಿ ನೀಡಲಾಯಿತು.

ಸಾಗರ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಇವುಗಳ ಸಂಯುಕ್ತಾಶ್ರಯದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ದಾಖಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡ ಸಾಗರ ಬಿಜೆಪಿ ಹಿರಿಯ ಮುಖಂಡ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ಪೈ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ದೂರು ಸಲ್ಲಿಸಲಾಯಿತು.

ಶಾಸಕ ಹಾಲಪ್ಪನವರ ವಿರುದ್ಧ ಇಲ್ಲ ಸಲ್ಲದ ಸತ್ತೇ ಹೋಗಿರುವ ಹಳೆಯ ವಿಷಯಗಳನ್ನು ಎತ್ತಿಕೊಂಡು ಸುದ್ದಿ ಮಾಡುತ್ತಿರುವುದನ್ನು ನೋಡಿದರೇ ಕಾಂಚಾಣ ಕೆಲಸ ಮಾಡಿದಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿರುವ ಮೂಲಕ ಪತ್ರಿಕೆಗಳ ಗೌರವ ಘನತೆಗೆ ಚ್ಯುತಿಯುಂಟು ಮಾಡಿರುವ ವಿರುದ್ಧ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sagara Working Journalists Association ಪತ್ರಿಕಾ ವೃತ್ತಿ ಪವಿತ್ರವಾದ ಮಾಧ್ಯಮದ ಧರ್ಮ ಎಂದುಕೊಂಡು ವೃತ್ತಿ ನಿರ್ವಹಿಸುತ್ತಿರುವ ಪತ್ರಿಕಾ ಸಮೂಹಕ್ಕೆ ಅಪಮಾನ ಮಾಡಿರುವ ವಿಷಯವನ್ನು ಪತ್ರಕರ್ತರುಖಂಡಿಸಿದರು.

ಇಂತಹ ಘಟನೆ ಇದೆ ಮೊದಲಲ್ಲ,ಈ ಹಿಂದೆ ಸ್ವತಃ ಶಾಸಕ ಹಾಲಪ್ಪನವರೇ ಸಾಗರದ ಪತ್ರಕರ್ತರಿಗೆ ನೇರವಾಗಿ ಸಾರ್ವಜನಿಕರ ಎದುರೇ ನಿಮ್ಮ ವಿರುದ್ಧ ಪತ್ರಿಕಾ ಕಚೇರಿಗೆ ಪತ್ರ ಬರೆಯುತ್ತೇನೆ ಎಂದು ಧಮಕಿ ಹಾಕಿರುವ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕೆಲವೇ ದಿನಗಳ ಹಿಂದೆ ನಡೆದಿದೆ.
ಶಾಸಕರು ಸೇರಿದಂತೆ ಬಿಜೆಪಿ ಮುಖಂಡರುಗಳು ಪತ್ರಕರ್ತರ ವಿರುದ್ಧದ ನಡವಳಿಕೆಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ,ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್,ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ್ ಜೈನ್,ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿ ಶಿರಳಗಿ,ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯಭಟ್,ಪತ್ರಕರ್ತರುಗಳಾದ ಧರ್ಮರಾಜ್,ರಮೇಶ್.ಎನ್,ರವಿಚಂದ್ರ,ಶ್ರೀಪಾದ್ ಕವಲಕೋಡು,ಅಂತೋನಿ ನಜರತ್,ವಿಜಯೇಂದ್ರ ಶಾನಭಾಗ್,ರಾಜೇಶ್ ಭಡ್ತಿ,ಪ್ರಶಾಂತ್ ಹೆಚ್.ಆರ್,ಶ್ರೀಧರ್ ಭಾಗವತ್,ಕೆ.ಎನ್.ವೆಂಕಟಗಿರಿ ಮೊದಲಾದವರು ಉಪಸ್ಥಿತರಿದ್ದರು.

BJP Karnataka ಬಿಜೆಪಿ 130 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ-ಬಿಎಸ್ ವೈ

0

BJP Karnataka ಭಾರತೀಯ ಜನತಾ ಪಕ್ಷ 130ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವ ಅಶೋಕನಾಯ್ಕ ಅವರ ಗೆಲುವು ನೂರರಷ್ಟು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನವೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಜಾತೀಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುವ ಕನಸು ಕಾಣುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಹೆಸರಿಲ್ಲದೇ ಕಳೆದುಹೋಗಿದೆ. ಇನ್ನೂ ಅಲ್ಪ ಸ್ವಲ್ಪ ಉಸಿರಾಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿಯೂ ನೆಲಕಚ್ಚುವುದು ನಿಶ್ಚಿತ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

BJP Karnataka ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರೈತರ ಜೀವನ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ಡಬಲ್ ಇಂಜಿನ್ ಸರ್ಕಾರದ ಆಡಳಿತ ಇರುವ ಕಾರಣ ಕರ್ನಾಟಕ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಭಿವೃದ್ಧಿ ಕೆಲಸಗಳು ನಿರಂತರ ಆಗಬೇಕಾದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿ ಕೃಷಿ ಬಜೆಟ್ ಮಂಡಿಸಿದ ಜನಪ್ರಿಯ ನಾಯಕ ಬಿ.ಎಸ್.ಯಡಿಯೂರಪ್ಪ. ರೈತರ ಪರ ವಿಶೇಷ ಕಾಳಜಿ ಹೊಂದಿರುವ ನಾಯಕ ನಮ್ಮೆಲ್ಲರ ಯಡಿಯೂರಪ್ಪ. ಅವರ ಆಶೀರ್ವಾದದಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು. ಗ್ರಾಮಾಂತರ ಕ್ಷೇತ್ರದ ಎಲ್ಲ ಪ್ರಸ್ತಾವನೆಗಳಿಗೂ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡುತ್ತಿದ್ದರು. ಗ್ರಾಮಾಂತರ ಕ್ಷೇತ್ರ ಯಡಿಯೂರಪ್ಪನವರ ಮೆಚ್ಚಿನ ಕ್ಷೇತ್ರ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭ ಆಗಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ, ಬಿಎಸ್‌ವೈ ಅವಧಿಯಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ಎಲ್ಲ ವರ್ಗದ ಜನರಿಗೂ ಉಪಯುಕ್ತವಾಗುವ ಯೋಜನೆ ಗಳನ್ನು ಅನುಷ್ಠಾನ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಮಾತನಾಡಿ, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅಶೋಕ ನಾಯ್ಕ ಅವರು ಅನುದಾನ ನೀಡದೇ ಇರುವ ಗ್ರಾಮ ಪಂಚಾಯಿತಿಗಳೇ ಇಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೋಟ್ಯಾಂತರ ರೂ. ಅನುದಾನ ನೀಡಿ ಕ್ಷೇತ್ರದ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿ ನಡೆಸಿದ್ದಾರೆ. ಅಶೋಕ ನಾಯ್ಕರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೇಶ ಮುನ್ನಡೆಯುತ್ತಿದ್ದು, ವಿಶ್ವದ ಪ್ರಭಾವಿ ದೇಶಗಳು ಸಹ ಭಾರತದ ನೆರವು ಕೇಳುವ ಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಅತ್ಯಂತ ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಪಕ್ಷ ನಮ್ಮ ಬಿಜೆಪಿ. ದೇಶದ ಸುರಕ್ಷತೆಗೆ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ನಿರಂತರವಾಗಿ ಸುಳ್ಳು ಘೋಷಣೆಗಳನ್ನು ಮಾಡಿಕೊಂಡು ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸುಳ್ಳು ಘೋಷಣೆಗಳಿಗೆ ಮರುಳಾಗಬೇಡಿ, ಕಾಂಗ್ರೆಸ್ ಪಕ್ಷದ ಘೋಷಣೆಗಳಿಗೆ ಅಗತ್ಯವಿರುವಷ್ಟು ಅನುದಾನ ರಾಜ್ಯದ ಬಜೆಟ್‌ಗಿಂತ ಮೀರಿದೆ. ಅವರ ಘೋಷಣೆ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಮತ್ತು ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಅಗತ್ಯ ನೆರವು ನೀಡುವ ಕೆಲಸ ನಿರಂತರವಾಗಿ ಮಾಡುತ್ತಿವೆ. ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಗಮಿಸಿದ್ದರು. ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಉತ್ತರಖಂಡ ಮಾಜಿ ಶಾಸಕ ಮುಖೇಶ್ ಸಿಂಗ್ ಕೋಲಿ, ಮಂಡಲ ಅಧ್ಯಕ್ಷ ಮಂಜುನಾಥ ಕಲ್ಲಜ್ಜನಾಳ್, ರತ್ನಾಕರ ಶೆಣೈ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ತಮ್ಮಡಿಹಳ್ಳಿ ನಾಗರಾಜ್, ಉಜ್ಜಿನಪ್ಪ, ಷಡಾಕ್ಷರಪ್ಪ, ಜಗದೀಶ್ ಗೌಡ, ಸುರೇಶ್, ರಂಗೋಜಿರಾವ್, ಸುಧಾಮಣಿ, ಸ್ಥಳೀಯ ಮುಖಂಡರು ಹಾಜರಿದ್ದರು.

power Outage In Shivamogga ಏಪ್ರಿಲ್ 26 ರಂದು ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

power Outage In Shivamogga ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಫ್-೩ ಮತ್ತು ಎಫ್-20 ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಏ.26 ರ ಬೆಳಿಗ್ಗೆ 10:00 ರಿಂದ ಸಂಜೆ 05 :00ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

power Outage In Shivamogga ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ಧರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ, ಬಸವಾಪುರ, ಹಾತಿಕಟ್ಟೆ ಹೊನ್ನವಿಲೆ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Adichunchanagiri Education Trust ಬಿಜಿಎಸ್ ಸ್ವತಂತ್ರ ಪಿಯು ಕಾಲೇಜಿಗೆ ಶೇ 99 ಫಲಿತಾಂಶ

Adichunchanagiri Education Trust ಗ್ರಾಮೀಣ ಭಾಗದ ಮಕ್ಕಳನ್ನು ಹೆಚ್ಚಾಗಿ ಹೊಂದಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಫಲಿತಾಂಶ ವಿಶೇಷವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 99 ರಷ್ಟು ಫಲಿತಾಂಶ ಲಭಿಸಿದೆ.

ಅಂತೆಯೇ ವಾಣಿಜ್ಯ ವಿಭಾಗದಲ್ಲಿ 98 ರಷ್ಟು ಬಂದಿದ್ದು ಒಟ್ಟು ಎರಡೂ ಕಡೆ 33 ಮಕ್ಕಳು ಅತ್ಯುತ್ತಮ ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದ ಪರೀಕ್ಷೆಗೆ ಭಾಗವಹಿಸಿದ್ದ 72 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದು 38 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ.
13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.

Adichunchanagiri Education Trust ವಿಜ್ಞಾನ ವಿಭಾಗದ ನಿತ್ಯಶ್ರೀ ಅವರು 578 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಬೀರ್ 570 ಅಂಕ ಪಡೆದಿದ್ದಾರೆ. ಪೂಜಾ 562, ಮಹೇಶ್ 550, ಭಾವನ ಎನ್.ಕೆ.550 ಅಂಕ ಗಳಿಸಿದ್ದಾರೆ
ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 13 ಉನ್ನತ ಶ್ರೇಣಿ, 24 ಪ್ರಥಮ ಶ್ರೇಣಿ ಹಾಗೂ 04 ದ್ವಿತೀಯ ಶ್ರೇಣಿ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಬೆನಕೇಶ್ ಪಿ. ಜಿ. ಹಾಗೂ ಬಿಂದು ಜಿ.ಅವರು 567 ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮವಾಗಿ ಹೊರಹೊಮ್ಮಿದ್ದಾರೆ.

ಉಳಿದಂತೆ ನಂದ ಕುಮಾರ್ 561, ವಿನುಶ್ರೀ 559, ಪ್ರಜ್ವಲ್ 558, ಸುನಿಧಿ 555 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳನ್ನು, ಬೋಧಕ ವರ್ಗವನ್ನು, ಪ್ರಾಂಶುಪಾಲರನ್ನು, ಹಾಗೂ ಆಡಳಿತ ಮಂಡಳಿಯ ಸರ್ವರನ್ನು ಅಭಿನಂದಿಸಿದ್ದಾರೆ.

Voters Awareness ಮತದಾನ ಮನೆಯ ಕಾರ್ಯಕ್ರಮವಿದ್ದಂತೆ ತಪ್ಪದೇ ಭಾಗವಹಿಸಿ- ಸುನೀತಾ ಶ್ರೀಧರ್

0

Voters Awareness ಪವಿತ್ರವಾದ ಮತದಾನವನ್ನು ಯಾರು ಕಳೆದು ಕೊಳ್ಳಬಾರದು. ನಮ್ಮ ಮನೆ ಕಾರ್ಯಕ್ರಮಕ್ಕೆ ಹೇಗೆ ತಪ್ಪದೆ ಭಾಗವಹಿಸುತ್ತೇವೊ ಹಾಗೆಯೆ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮ ಮತವನ್ನು ಚಲಾಯಿಸಿ, ಸದೃಡ ಗೊಳಿಸಬೇಕಾಗಿ, ಎಂಟೂ ರೋಟರಿ ಕ್ಲಬ್ ಗಳ ಪರವಾಗಿ ಅಸಿಸ್ಟೆಂಟ್ ಗೌರ್ನರ್ ರೊ.ಸುನಿತಾಶ್ರೀಧರ್ ಕೋರಿದರು.

ಮಾಜಿ ಜಿಲ್ಲಾ ರಾಜ್ಯಪಾಲರದ ರೊ.ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಮತದಾನವಾಗುತ್ತಿದೆ. ಆದರೆ, ನಗರ ಪ್ರದೇಶದ ಮತದಾರರು ಜಾಗೃತರಾಗಿ ತಪ್ಪದೆ ತಮ್ಮ ಇರುವಿಕೆಯನ್ನು ಗುರ್ತಿಸುವ ಮತದಾನದಲ್ಲಿ ಭಾಗಿಗಳಾಗಿ ಎಂದರು.

Voters Awareness ಜಿಲ್ಲಾ ಪಂಚಾಯತ್ ಸಿ.ಇ.ಒ. ಸ್ನೇಹಲ್ ಸುಧಾಕರ್ ಲೋಕಂಡೆ ಕಾರ್ಯಕ್ರಮ ಉದ್ಘಾಟಿಸಿ, ಜನಜಾಗೃತಿ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಸಂಸ್ಥೆ ರೋಟರಿಯ ಎಲ್ಲಾ ಎಂಟು ಕ್ಲಬ್ ಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿರುವುದಾಗಿ ತಿಳಿಸಿದರು.

ನೋಡಲ್ ಅಧಿಕಾರಿ ಶ್ರೀಕಾಂತ್, ಸ್ವೀಫ್ ನ ಸಿಬ್ಬಂದಿ ಸಹಕರಿಸಿದರು. ಮಾಜಿ ಅಸಿಸ್ಟೆಂಟ್ ಗೌರ್ನರ್ ಜಿ.ವಿಜಯಕುಮಾರ್, ರೊ.ಆನಂದಮೂರ್ತಿ, ರೊ.ಸುರೇಶ್, ರೊ.ಮಂಜುಳ, ರೊ.ಚಂದ್ರು, ರೊ.ಭಟ್, ವಾಗೇಶ್, ಎಂಟು ಕ್ಲಬ್ಬಿನ ಸದಸ್ಯರು ಶಿವಪ್ಪನಾಯಕ ವೃತ್ತದಿಂದ, ಗೋಪಿ ವೃತ್ತದವರೆಗೆ ಜಾತಾದಲ್ಲಿ ಭಗವಹಿಸಿ ನಾಗರಿಕರಿಗೆ ಆಮೇಶಕ್ಕೆ ಬಲಿಯಾಗದೆ ಸ್ವತಂತ್ರವಾಗಿ ಮತದಾನ ಮಾಡುವಂತೆ ಜನಜಾಗೃತಿ ಕಾರ್ಯ ನೆರವೇರಿಸಿದರು.
ರೊ.ಶ್ರೀಧರ್ ಸ್ವಾಗತಿಸಿ ರೊ.ಕೆ.ಪಿ.ಶೆಟ್ಟಿ ವಂದಿಸಿದರು.