Tunga-Bhadra Reservoir ಹಾವೇರಿ ಜಿಲ್ಲೆಯ ಕೆಲ ಪ್ರದೇಶಗಳಿಗೆ ಕುಡಿಯುವ ನೀರಿನ ಅಗತ್ಯ ನಿಮಿತ್ತ ಭದ್ರಾ ಜಲಾಶಯದಿಂದ ನೀರು ಬಿಡುಗಡೆ
Tunga-Bhadra Reservoir ಹಾವೇರಿ ಜಿಲ್ಲೆ ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಾ-ಭದ್ರಾ ನದಿಗೆ 01:00 ಟಿ.ಎಂ.ಸಿ. ನೀರನ್ನು ಹರಿಸಲು ಆದೇಶಿಲಾಗಿದೆ.
Tunga-Bhadra Reservoir ಪ್ರಾದೇಶಿಕ ಆಯುಕ್ತರ ಅದೇಶದನ್ವಯ ಏ.27 ರ ಸಂಜೆ 06:00 ರಿಂದ ಮೇ 09ರ ಬೆಳಗ್ಗೆ 06:00ರವರೆಗೆ ಪ್ರತಿ ದಿನ 1000 ಕ್ಯೂಸೆಕ್ಸ್ನಂತೆ ಒಟ್ಟು 11274 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುವುದು. ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‌ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಕರ್ನಾಟಕ ನೀರಾವರಿ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
Shivamogga Police ಚುನಾವಣಾ ಹಿನ್ನೆಲೆ ಚೆಕ್ ಪೋಸ್ಟ್ ಗಳ ಮೂಲಕ ಅನಧೀಕೃತ ವಸ್ತು ಮತ್ತು ನಗದು ವಶ
Shivamogga Police ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಈ ದಿನ ದಿನಾಂಕ: 24-04-2023 ರಂದು ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಮತ್ತು ಸಂಗ್ರಹಿಸಿಟ್ಟಿದ್ದ ಈ ಕೆಳಕಂಡ ವಸ್ತು ಮತ್ತು ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
1)ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ ಅಂದಾಜು ಮೌಲ್ಯ 5,40,000/- ರೂ ಗಳ ಸೀರೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
2)ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ರೂ 98,00,000/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
Shivamogga Police 3)ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ 59,00,000/- ರೂ ಗಳ ಸೀರೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
4) ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ರೂ 12,00,000/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
Sri Shankaracharya ಶಂಕರ ನೆನಪೇ ಶುಭಕರ ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ
Sri Shankaracharya ಪ್ರತಿವರ್ಷ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿ
ಯಂದು ಶ್ರೀಶಂಕರಭಗವತ್ಪಾದರ ಜಯಂತಿಯನ್ನು
ಆಚರಿಸಲಾಗುತ್ತದೆ.
ಶ್ರೀಶಂಕರಾಚಾರ್ಯರು ಅದ್ವೈತಮತ ಸಿದ್ಧಾಂತದ
ಸ್ಥಾಪಕರು.ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀಶಂಕ
ರಾಚಾರ್ಯರು ಮೊದಲಿಗರು.
ಇವರು ಕೇರಳ ರಾಜ್ಯದ ಕಾಲಟಿ ಎನ್ನುವ ಹಳ್ಳಿಯಲ್ಲಿ
ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.
ತಂದೆ ಶಿವಗುರು,ತಾಯಿ ಆರ್ಯಾಂಬೆ ಎನ್ನುವ ಹೆಸರಿನವರು.
ತಂದೆಯನ್ನು ಬಹಳ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡರು.ತಾಯಿಯ ಆರೈಕೆಯಲ್ಲಿ ಬೆಳೆದವರು.ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತಳೆದ ಇವರು
ಸನ್ಯಾಸ ಜೀವನದ ಕಡೆಗೆ ಒಲವು ತೋರಿದರು.ಆದರೆ
ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ
ನೋಡಲು ತಾಯಿಗೆ ಮನಸ್ಸಿರಲಿಲ್ಲ.ಹಾಗಾಗಿ ತಾಯಿಯ ಮನವೊಲಿಸಲು ಬಹಳ ಕಷ್ಟ ಪಡಬೇಕಾಯಿತು.ತಾಯಿಗೆ ಅವರ ಅಂತಿಮ ಕ್ಷಣದಲ್ಲಿ
Sri Shankaracharya ತಾನು ಎಲ್ಲಿದ್ದರೂ ಬರುವುದಾಗಿ ಮಾತು ಕೊಟ್ಟು,
ಶಂಕರರು ಸೂಕ್ತ ಗುರುವನ್ನು ಹುಡುಕುತ್ತಾ ಹೊರಡುತ್ತಾರೆ.ತಾಯಿಗೆ ಕೊಟ್ಟ ಮಾತಿನಂತೆ ಆಕೆಯ
ಅಂತಿಮ ಕಾಲದಲ್ಲಿ ಕಾಲಟಿಗೆ ಹಿಂದಿರುಗಿ ತಾಯಿಯ
ಅಂತಿಮ ವಿಧಿಗಳನ್ನು ಪೂರೈಸುತ್ತಾರೆ.ನರ್ಮದಾ ನದೀ
ತೀರದಲ್ಲಿದ್ದ ಶ್ರೀಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತಮ್ಮ ಗುರುಗಳನ್ನಾಗಿ ಪಡೆಯುತ್ತಾರೆ.ಗುರುಗಳಿಂದ ವೇದಾಂತ ಶಾಸ್ತ್ರಗಳನ್ನು ಅಭ್ಯಾಸಮಾಡಿದ ನಂತರ
ಕಾಶಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಕೆಲವರು ತಮ್ಮ ಶಿಷ್ಯರನ್ನಾಗಿ
ಪಡೆದು ಅವರಿಗೆ ವೇದಾಂತದ ಪಾಠವನ್ನು ಹೇಳಿಕೊಟ್ಟರು.ಶ್ರೀಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರತಿಪಾದಕರು.ಇವರ ಸಿದ್ಧಾಂತದ ಪ್ರಕಾರ
ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆಬೇರೆ ಅಂಶಗಳಲ್ಲ.ಇರುವುದು ಒಂದೇ.ಆತ್ಮನೇ
ಪರಮಾತ್ಮನು,ಪರಮಾತ್ಮನೇ ಆತ್ಮನು.
ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿದ ಶಂಕರರು
ಅನೇಕರನ್ನು ಆಧ್ಯಾತ್ಮಿಕ ವಿಚಾರದಮೇಲಿನ ವಾದದಲ್ಲಿ ಸೋಲಿಸಿದರು.ಮಂಡನಮಿಶ್ರರೆಂಬ ದೊಡ್ಡ ವಿದ್ವಾಂಸರನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದ ಘಟನೆ ಬಹು ಮುಖ್ಯವಾದುದು.ಮುಂದೆ
ಮಂಡನ ಮಿಶ್ರರೇ ಶ್ರೀಸುರೇಶ್ವರಾಚಾರ್ಯ ಎಂಬ
ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕುಪೀಠಗಳನ್ನು ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ
ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿದರು.ಹಲ
ವಾರು ಪಂಡಿತರನ್ನೂ,ಶಾಸ್ತ್ರವೇತ್ತರನ್ನೂ ಜಯಿಸಿ,ಸರ್ವಜ್ಞಪೀಠವನ್ನೇರಿದರು.
ಕಾಶ್ಮೀರದ ಪಂಡಿತರುಗಳನ್ನು ವಾದದಲ್ಲಿ ಜಯಿಸಿ,ಅವರು ಸೋಲೊಪ್ಪುವಂತೆ ಮಾಡಿದರು.
ಶ್ರೀಶಂಕರಾಚಾರ್ಯರು ಉತ್ತರದಲ್ಲಿ ಬದರೀಪೀಠ,
ದಕ್ಷಿಣದಲ್ಲಿ ಶೃಂಗೇರಿಪೀಠ,ಪೂರ್ವದಲ್ಲಿ ಪುರಿಪೀಠ ಮತ್ತು ಪಶ್ಚಿಮದಲ್ಲಿ ದ್ವಾರಕಾಪೀಠ.ಈ ನಾಲ್ಕು ಮಠಗಳೂ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು
ಬಾದರಾಯಣರ ಬ್ರಹ್ಮಸೂತ್ರ(ವೇದಾಂತಸೂತ್ರ/ಶಾರೀರಿಕ ಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು.ಉಪನಿಷತ್ತುಗಳಿಗೆ ಮತ್ತು ಶ್ರೀ ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು.ಇವರು ರಚಿಸಿದ ಭಜಗೋವಿಂದಮ್ ಸ್ತೋತ್ರ ಪ್ರಸಿದ್ಧವಾಗಿದೆ.
ಹಲವಾರು ಇತರೆ ಸ್ತೋತ್ರಗಳನ್ನೂ ಶಂಕರ ಭಗವತ್ಪಾದರು ರಚಿಸಿದ್ದಾರೆ.ಕನಕಧಾರ ಸ್ತೋತ್ರ ಎನ್ನುವ ಶ್ರೇಷ್ಠವಾದ ಸ್ತೋತ್ರವನ್ನೂ ರಚಿಸಿದ್ದಾರೆ.
ಇಂತಹ ಮಹಿಮರಾದ ಶ್ರೀಶಂಕರಾಚಾರ್ಯರು ತಮ್ಮ
32ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶ್ರೀಶಂಕರಾಚಾರ್ಯರ ಜಯಂತಿಯ ದಿನವಾದ ವೈಶಾಖ ಶುಕ್ಲಪಕ್ಷದ ಪಂಚಮಿಯ ದಿನವಾದ ಇಂದು
ಗುರುಗಳನ್ನು ಭಕ್ತಿಯಿಂದ ಸ್ಮರಿಸಿ,ನಮ್ಮ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
Vijayanagara ವಿಜಯನಗರವನ್ನು ಅಭಿವೃದ್ಧಿ ಮಾಡಿ ತೋರಿಸುವೆ
Vijayanagara ವಿಜಯನಗರ ಕ್ಷೇತ್ರದ ರಾಜಕೀಯ ಮುಖಂಡರಾದ ಮಾನ್ಯ ಶ್ರೀ ಆನಂದ್ ಸಿಂಗ್ ರವರ ಮಗ ವಿಜಯನಗರ ಕ್ಷೇತ್ರದ ಬಿ ಜೆ ಪಿ ರಾಷ್ಟೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಶ್ರೀ ಸಿದ್ದಾರ್ಥ ಸಿಂಗ್ ಇವರು ದಿನಾಂಕ 24-4-2023 ರಂದು ಸಂಜೆ 7 ಗಂಟೆಗೆ ವಿಜಯನಗರ ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಛೇರಿಯ ಆವರಣದಲ್ಲಿ ತ್ರಿಮತಸ್ತ ಬ್ರಾಹ್ಮಣ ಸಮಾಜದವರ ಜೊತೆ ಸಮಾಲೋಚನೆ ಸಭೆಯನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಅನಂದ್ ಸಿಂಗ್, ಬ್ರಾಹ್ಮಣ ಸಮಾಜದ ಮುಖಂಡರು ಹೊಸಪೇಟೆ ಹುಡಾ ಅದ್ಯಕ್ಷರಾದ ಶ್ರೀ ಅಶೋಕ್ ಜಿರೆ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀ ಸಿದ್ದಾರ್ಥ ಸಿಂಗ್ ಭಾಗವಹಿಸಿ ಸುಮಾರು ಒಂದು ಘಂಟೆಗಳ ಕಾಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಕ್ತ ಸಮಾಲೋಚನೆ ಮಾಡಿದರು.
Vijayanagara ಬ್ರಾಹ್ಮಣ ಸಮಾಜದ ಮುಖಂಡರು ಗಳಾದ ಶ್ರೀ ಹನುಮಂತರಾವ್, ಉದ್ಯೋಗ್ ಪೆಟ್ರೋಲ್ ಬಂಕ್ ಮಾಲಿಕರು ಮತ್ತು ಸಮಾಜ ಸೇವಕರಾದ ಶ್ರೀ ಶ್ರೀನಿವಾಸ್, ಶ್ರೀ ದಿವಾಕರ್ , ಹೆಸರಾಂತ ನ್ಯಾಯವಾದಿಗಳಾದ ಸಿನಂಭಟ್, ಶ್ರೀ ರಾಘವೇಂದ್ರ ಡೆಕೋರೇಟರ್ಸ ಮಾಲಿಕರಾದ ಶ್ರೀ ಅಪ್ಪಣ್ಣ, ನ್ಯಾಯವಾದಿ ಶ್ರೀ ಕಲಂಭಟ್ ,ಹಾಗೂ ಅನೇಕ ಮುಖಂಡರು, ಮಹಿಳಾ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಬ್ರಾಹ್ಮಣ ಸದಸ್ಯರು, ಕಿರ್ಲೋಸ್ಕರ್, ಬಿಎಂಎಂ ,ಎಸ್ ಎಲ್ ಆರ್ ಕಾರ್ಖಾನೆಯ ಬ್ರಾಹ್ಮಣ ಉದ್ಯೋಗಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಾನ್ಯ ಸಚಿವರು ತಮ್ಮ 15 ವರ್ಷದ ಕಾಲಾವಧಿಯಲ್ಲಿ ಮಾಡಲಾದ ಶ್ಲಾಘನೀಯ ಜನಪರ ಕೆಲಸಗಳನ್ನು ತಿಳಿಸಿದರು.
ಮುಂದಿನ ಯೋಜನೆಯನ್ನು ತಿಳಿಸಿ ಬ್ರಾಹ್ಮಣ ಸಮಾಜದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿದರು. ಶ್ರೀ ಅಶೋಕ ಜಿರೆ ಮತ್ತು ಹನುಮಂತರಾವ್ ರವರು ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಸಮಾಜದ ಅಭಿವೃದ್ಧಿ ಅನಿವಾರ್ಯ ಕಾರಣ ಬ್ರಾಹ್ಮಣರಲ್ಲಿ ಅನೇಕ ಬಡತನ ಕುಟುಂಬದವರು ಇರುತ್ತಾರೆ. ಕಾರಣ ಅವರು ಆರ್ಥಿಕವಾಗಿ ಕಡು ಬಡತನದಲ್ಲಿ ಇದ್ದು ಉತ್ತಮ ವಿದ್ಯಾಭ್ಯಾಸ ಮಾಡಿರುತ್ತಾರೆ. ಇಂದಿನ ಮೀಸಲಾತಿ ಪದ್ದತಿಯಲ್ಲಿ ಅವರಿಗೆ ಸೀಟುಗಳು ಸಿಗುತ್ತಿಲ್ಲ ಕಾರಣ ಈ ವ್ಯವಸ್ಥೆ ಸರಿಯಾಗಬೇಕಾಗಿದೆ ಎಂದು ತಿಳಿಸಿದರು.
ಅಡುಗೆ ಸಂಘದ ಸದಸ್ಯರು ಮನವಿ ಪತ್ರ ನೀಡಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಶ್ರೀ ಸಿದ್ದಾರ್ಥ ಸಿಂಗ್ ರವರು ಮಾತನಾಡುತ್ತ ಮುಂದಿನ ಅವರ ಯೋಜನೆ ,ಕನಸುಗಳನ್ನು ತಮ್ಮ ಭಾಷಣದಲ್ಲಿ ತಿಳಿಸುತ್ತಾ, ಬುದ್ದಿಜೀವಿಗಳಾದ ತಮ್ಮ ಸಮುದಾಯಕ್ಕೆ ಇವುಗಳನ್ನು ತಿಳಿಸುವುದು ಬೇಕಾಗಿಲ್ಲ ಆದರೂ ನನ್ನ ಕರ್ತವ್ಯ ಎಲ್ಲಾ ವಿಚಾರ ತಿಳಿಸಿರುವೆ. ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ ಇತಿಹಾಸದಲ್ಲಿ ಬೆರೆಯುವ ಹಾಗೆ ನಮ್ಮ ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ತೋರಿಸುವೆ ಎಂದು ತಿಳಿಸಿದರು.
ಹೊಸಪೇಟೆ ಬ್ರಾಹ್ಮಣ ಸಮಾಜ ಮತ್ತು ಅಡುಗೆ ಸಂಘದ ಎಲ್ಲಾ ಸದಸ್ಯರು ಶ್ರೀ ಸಿದ್ದಾರ್ಥ ಸಿಂಗ್ ಗೆ ಸನ್ಮಾನಿಸಲಾಯಿತು.
ವರದಿ
ಮುರುಳಿಧರ್ ನಾಡಿಗೇರ್
ಹೊಸಪೇಟೆ
SVEEP Shivamogga ಮತದಾರರ ಜಾಗೃತಿಗೆ ಜಿಲ್ಲಾದ್ಯಂತ ಸ್ವೀಪ್ ಎಕ್ಸ್ ಪ್ರೆಸ್ ಬಸ್ ಸಂಚಾರ-ಡಾ.ಸೆಲ್ವಮಣಿ
SVEEP Shivamogga ಜನರಲ್ಲಿ ಇವಿಎಂ/ವಿವಿಪ್ಯಾಟ್ ಸೇರಿದಂತೆ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮತದಾನ ಪ್ರಮಾಣ ಹೆಚ್ಚಿಸುವುದು ಈ ‘ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಸಂಚಾರದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ .ಆರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ‘ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉತ್ತಮವಾಗಿ ಮತದಾನ ಆಗಿದೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದ್ದು, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಉತ್ತಮ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಕಳೆದ ಬಾರಿಗಿಂತ ಶೇ.10 ರಷ್ಟಾದರೂ ಮತದಾನ ಪ್ರಮಾಣ ಹೆಚ್ಚಬೇಕು. ಈ ಎಕ್ಸ್‍ಪ್ರೆಸ್ ಬಸ್ ಜಿಲ್ಲಾದ್ಯಂತ ಕಡಿಮೆ ಮತದಾನ ಆದ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ. ಮೇ 09 ರವರೆಗೆ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಬೇಕೆಂದರು.
SVEEP Shivamogga ಸ್ವೀಪ್ ಎಕ್ಸ್‍ಪ್ರೆಸ್ ಬಸ್’ ಒಳಗೆ ಮಾದರಿ ಮತದಾನ ಕೇಂದ್ರ, ಮತದಾನ ಕೇಂದ್ರಗಳಲ್ಲಿನ ಮೂಲಭೂತ ಸೌಕರ್ಯಗಳು, ಇವಿಎಂ/ವಿವಿಪ್ಯಾಟ್(ಇಗಿಒ/ಗಿಗಿPಂಖಿ) ಪ್ರತಿಕೃತಿಗಳು ಹಾಗು ಮತದಾನ ಜಾಗೃತಿ ಬಿತ್ತಿ ಚಿತ್ರಗಳಿವೆ. ಬಸ್ ಹೊರಮೈಯಲ್ಲಿ ಸಿವಿಜಿಲ್ ಆ್ಯಪ್ , 1950 ಟಾಲ್‍ಫ್ರೀ ಸಂಖ್ಯೆ, ವೋಟರ್ ಹೆಲ್ಪ್‍ಲೈನ್ ಪೋರ್ಟಲ್ ಹಾಗೂ ಸ್ವೀಪ್ ಕುರಿತು ಮಾಹಿತಿ ಇದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಜಿ.ಪಂ. ಸಿಇಓ, ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳು ಬಸ್ ಒಳಗಿನ ಮತದಾನ ಕೇಂದ್ರದಲ್ಲಿ ಕುಳಿತು ಪರಿವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಮಾತನಾಡಿ, ಮತದಾನ ಕುರಿತು ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಈ ಸ್ವೀಪ್ ಎಕ್ಸ್‍ಪ್ರೆಸ್ ಬಸ್ ಸಂಚಾರ ಆರಂಭಿಸಲಾಗಿದೆ. ಕಡಿಮೆ ಮತದಾನ ಆದ ಪ್ರದೇಶಗಳಿಗೆ ಇದು ಭೇಟಿ ನೀಡಿ ಮತದಾನ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸುವುದು. ಹಾಗೂ ಚುನಾವಣಾ ಅಕ್ರಮ ತಡೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು, ಸಿವಿಜಿಲ್ ಆ್ಯಪ್ ಕುರಿತು ಮಾಹಿತಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದರು.
ಶಿವಮೊಗ್ಗ ನಗರ ಸೇರಿದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಜನ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಿಗೆ ದಿನಾಂಕ:25/04/2023 ರಿಂದ 02/05/2023 ರ ವರೆಗೆ, ಭೇಟಿನೀಡಿ ಮತದಾನ ಜಾಗೃತಿ ಮೂಡಿಸಲಿದೆ.
ಇಂದು ಈ ಬಸ್ ಕುವೆಂಪು ಪ್ರತಿಷ್ಟಾನ ಬಿ.ಎಡ್ ಕಾಲೇಜ್, ನ್ಯಾಷನಲ್ ಕಾಲೇಜ್, ಡಿವಿಎಸ್ ಕಾಲೇಜ್, ಸಹ್ಯಾದ್ರಿ ಕಾಲೇಜ್ ಮಾರ್ಗವಾಗಿ ಸಾಗಿ ಒಡ್ಡಿನಕೊಪ್ಪ, ಓಲ್ಡ್ ಮಂಡ್ಲಿ, ಗೋಪಾಳ, ಅಶೋಕನಗರ, ಗಾಡಿಕೊಪ್ಪ, ಶಾಂತಿನಗರ, ರಾಜೇಂದ್ರನಗರ, ರವೀಂದ್ರ ನಗರ, ಬಸವನಗುಡಿಗೆ ಬಂದು ತಲುಪಿ ಅಲ್ಲಿಂದ ಜಿಲ್ಲಾ ಪಂಚಾಯ್ತಿಗೆ ಆಗಮಿಸಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸ್ವೀಪ್ ನೋಡಲ್ ಅಧಿಕಾರಿ ಶ್ರೀಕಾಂತ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
Shivamogga Rotary Mid Town ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯದ ಕೊರತೆಯಿಂದ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ-ಡಿ.ಸುರೇಶ್ ಕುಮಾರ್
Shivamogga Rotary Mid Town ಪ್ರತಿಯೊಂದು ಕ್ಷೇತ್ರ ಹಾಗೂ ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಂತ ಮುಖ್ಯ ಆಗುತ್ತದೆ. ಕೌಶಲ್ಯಗಳು ವೃತ್ತಿಯಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸಲು ನೆರವಾಗುತ್ತದೆ ಎಂದು ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಿಇಒ ಡಿ.ಸುರೇಶ್ ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನದ ಪ್ರವೇಶ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Shivamogga Rotary Mid Town ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಅಧ್ಯಯನದಲ್ಲಿ ಮುಂದಿದ್ದರೂ ಕೌಶಲ್ಯಗಳ ವಿಷಯದಲ್ಲಿ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯವು ತುಂಬಾ ಮುಖ್ಯವಾಗುತ್ತದೆ. ಕೌಶಲ್ಯಗಳ ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಉದ್ಯೋಗ ಬಯಸುವ ಎಲ್ಲರೂ ಶಿಕ್ಷಣದ ಜತೆಯಲ್ಲಿ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು. ಶ್ರದ್ಧೆ ಹಾಗೂ ಆತ್ಮವಿಶ್ವಾಸದಿಂದ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯ ಮಾರ್ಗದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಮಿಡ್ ಟೌನ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸಂವಹನ ಕೌಶಲ್ಯ, ಕಂಪ್ಯೂಟರ್ ವಿಜ್ಷಾನದ ಮೂಲ ಆಶಯ, ಸಾಪ್ಟವೇರ್‌ಗಳ ಪರಿಚಯ, ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ತರಬೇತುದಾರರಾದ ರಘುಪತಿ, ಸುಜಾತಾ ಉದಯ್, ವೀಣಾ ಸುರೇಶ್, ವಿಜಯ್‌ಕುಮಾರ್, ಉದಯ್, ಸುರೇಶ್ ಕುಮಾರ್ ಉಪಸ್ಥಿತರಿದ್ದರು.
K.S.Eshwarappa ರಾಹುಲ್ ಗಾಂಧಿ ಕಾಲಿಟ್ಟಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ- ಕೆ.ಎಸ್.ಈಶ್ವರಪ್ಪ
K.S.Eshwarappa ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೇಸ್ ಸೋಲು
ಕಾಣುತ್ತಿದೆ ಹಾಗಾಗಿ ಶಿವಮೊಗ್ಗಕ್ಕೆ ಬಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ
ಎಸ್.ಎನ್.ಚನ್ನಬಸಪ್ಪರನ್ನು ಗೆಲ್ಲಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕಾಂಗ್ರೇಸ್ ನಾಯಕ ರಾಹುಲ್
ಗಾಂಧಿಯವರು ಶಿವಮೊಗ್ಗಕ್ಕೆ ಕಾಲಿಟ್ಟರೆ ಬಿ.ಜೆ.ಪಿ ಅಭ್ಯರ್ಥಿ ಚನ್ನಬಸಪ್ಪ
ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಅದು ನಂತರ ಇರಲಿ.
K.S.Eshwarappa ಚನ್ನಬಸಪ್ಪರನ್ನು ಸೋಲಿಸುವುದಕ್ಕೆ ಕೆ.ಎಸ್.ಈಶ್ವರಪ್ಪ ಪಕ್ಷದಲ್ಲೆ
ಇರಬೇಕಾದರೆ ರಾಹುಲ್ ಗಾಂಧಿಯೇಕೆ ಬರಬೇಕೆಂದು ಜಿಲ್ಲಾ ಕಾಂಗ್ರೇಸ್
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಲೇವಡಿ ಮಾಡಿದ್ದಾರೆ.
ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಪಕ್ಷದ
ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದಕ್ಕೆ ಮಾತ್ರ
ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ರಾಹುಲ್
ಗಾಂಧಿಯವರನ್ನು ದೂರದಿಂದ ಅದೂ ಕೆ.ಎಸ್.ಈಶ್ವರಪ್ಪರಪ್ಪರೆ ಭರಿಸುವ
ಹೆಲಿಕಾಫ್ಟರ್ ಖರ್ಚನಲ್ಲಿ ಬಂದು ಬಿ.ಜೆ.ಪಿ.ಅಭ್ಯರ್ಥಿ ಚನ್ನಬಸಪ್ಪರನ್ನು
ಗೆಲ್ಲಿಸಬಹುದೇನೋ ಆದರೆ, ಚನ್ನಬಸಪ್ಪ ಗೆಲುವೇ ಬೇಕಾಗಿರದ
ಈಶ್ವರಪ್ಪರವರು ತಮ್ಮದೆ ಆದ ಕೂಟ ಕಟ್ಟಿಕೊಂಡು ಶತಾಯ ಗತಾಯ
ಚನ್ನಬಸಪ್ಪರನ್ನು ಸೋಲಿಸಲೇಬೇಕೆಂದು ನಿರ್ಧರಿಸಿರುವಾಗ ರಾಹುಲ್
ಗಾಂಧಿಯವರ ಅಗತ್ಯತೆ ಅಷ್ಷಾಗಿ ಕಂಡು ಬರುವುದಿಲ್ಲವೆಂದು ವಕ್ತಾರರಾದ
ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.
ಒಂದೊಮ್ಮೆ ಚನ್ನಬಸಪ್ಪ ಚುನಾವಣೆಯಲ್ಲಿ ಗೆದ್ದರೆ ತಮ್ಮ ಪುತ್ರ
ಕಾತೇಶನ ರಾಜಕೀಯ ಜೀವನಕ್ಕೆ ಕೊಡಲಿ ಪೆಟ್ಟು ಬೀಳುವುದನ್ನು
ಮನಗಂಡಿರುವ ಕೆ.ಎಸ್.ಈಶ್ವರಪ್ಪ ಯಾವ ಬೆಲೆಯನ್ನಾದರೂ ತೆತ್ತು
ಚನ್ನಬಸಪ್ಪರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದಾರೆನ್ನುವ ಗುಟ್ಟು
ಗುಟ್ಟಾಗಿಯೇನು ಉಳಿದಿಲ್ಲವೆಂದು ತಮ್ಮದೆ ಪಕ್ಷದಲ್ಲಿ ಕೇಳಿ ಬರುತ್ತಿರುವ
ಮಾತಾಗಿದೆ.
K.S.Eshwarappa ಈ ತಂತ್ರಗಾರಿಕೆಯ ನಡುವೆ ಕಾಂಗ್ರೇಸ್ ಅಭ್ಯರ್ಥಿಗೆ
ಹೆಚ್.ಸಿ.ಯೋಗೀಶ್‌ರವರ ಗೆಲುವಿಗೆ ಯಾವುದೇ ಅಡೆತಡೆ ಇಲ್ಲವೆಂದು, ಇನ್ನು
ಕೆ.ಎಸ್.ಈಶ್ವರಪ್ಪರವರು ಬೇರೆ ಪಕ್ಷಗಳ ಬಗ್ಗೆ, ಬೇರೆ ಪಕ್ಷಗಳ
ನಾಯಕರ ಸರ್ವನಾಶದ ಬಗ್ಗೆ ಸದಾ ಬಾಯಿಗೆ ಬಂದAತೆ
ಮಾತನಾಡುವುದಕ್ಕಾಗಿಯೆ ತಮ್ಮ ನಾಲಿಗೆ ಚಾಚಿಕೊಂಡೆ ಇರುತ್ತಾರೆಂದು
ವಕ್ತಾರರಾದ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಯಾವುದೆ ಮಹಾರಾಜರ ಕುಟುಂಬಕ್ಕೆ
ಸೇರಿದವರಲ್ಲ. ಆದರೂ ಅವರು ಗಳಿಸಿರುವ ಸಂಪತ್ತು ಎಷ್ಷೆಂದು ಅವರೇ
ಹೇಳಬೇಕು. ಇನ್ನು ಮೋತಿಲಾಲ್ ನೆಹರು ಮನೆತನ ಹಲವು ತಲೆಮಾರಿನಿಂದಲೆ
ಅಘರ್ಭ ಶ್ರೀಮಂತಿಕೆಯ ಕುಟುಂಬವಾಗಿದೆ. ನೆಹರು ಪುತ್ರಿ ಇಂದಿರಾ ಗಾಂಧಿ
ತಂದೆಯ ನೆರಳಿನಲ್ಲಿಯೆ ಬೆಳೆದು ಬಂದಿದ್ದರಿಂದ ಗಾಂಧಿ ಕುಟುಂಬಕ್ಕೂ
ದೇಶವನ್ನು ಕೊಳ್ಳೆ ಹೊಡೆಯಬೇಕಾದ ಅಗತ್ಯವಿರಲಿಲ್ಲ.
ಬಿ.ಜೆ.ಪಿ ನಾಯಕರ ಕುತಂತ್ರದಿಂದ ಸಂಸತ್ ಸದಸ್ಯ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ,
ಕೇಂದ್ರ ಸರ್ಕಾರ ತಮಗೆ ನೀಡಿದ್ದ ನಿವಾಸವನ್ನು ತೆರವು ಮಾಡಬೇಕೆಂದು
ನೋಟೀಸ್ ನೀಡಿದ ಕೂಡಲೆ ಒಬ್ಬ ಮಾಜಿ ಪ್ರಧಾನ ಮಂತ್ರಿಯ ಪುತ್ರ, ಸಂಸತ್
ಸದಸ್ಯನಾಗಿದ್ದರೂ ವಾಸಿಸುವುದಕ್ಕೆ ಒಂದು ಮನೆ ಇಲ್ಲದಂತ್ತಾಗಿ ತಮ್ಮ ತಾಯಿ
ಸೋನಿಯಾ ಗಾಂಧಿಯವರ ಮನೆಗೆ ಹೋಗಬೇಕಾಯಿತ್ತು.
ಇಂತಹ ಪರಿಸ್ಥಿತಿ
ಕೆ.ಎಸ್.ಈಶ್ವರಪ್ಪರಿಗೆ ಇದೆಯೇ, ಇಂತದರಲ್ಲಿ ಇತ್ತೀಚಿನವರೆಗೂ ರಾಜಕೀಯ
ಅನೈತಿಕತೆ ಮತ್ತು ಭ್ರಷ್ಷಾಚಾರದ ಬಗ್ಗೆ ಮಾತನಾಡದ
ಕೆ.ಎಸ್.ಈಶ್ವರಪ್ಪರವರು ಅನೈತಿಕ ರಾಜಕೀಯದಿಂದಲೆ ಅಧಿಕಾರ
ಅನುಭವಿಸಿದವರು ಎನ್ನುವುದನ್ನು ಮರೆತಂತೆ ಇದೆ. ಆದರೆ,
ಕೆ.ಎಸ್.ಈಶ್ವರಪ್ಪರವರು ಕಳೆದಡರಡು ದಿನಗಳ ಹಿಂದೆ ಇಂದಿನ ರಾಜಕೀಯ
ಅನೈತಿಕತೆ ಮತ್ತು ಭ್ರಷ್ಷಾಚಾರದ ಬಗ್ಗೆ ಮಾತನಾಡಿರುವುದು ಕಾಂಗ್ರೇಸ್
ಪಕ್ಷಕ್ಕೆ ಅಷ್ಟೆ ಅಲ್ಲ.
ರಾಜ್ಯದ ಜನತೆಯಲ್ಲಿಯೆ ಆಶ್ಚರ್ಯ ಉಂಟು ಮಾಡಿದೆ ಎಂದು
ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್
ತಿಳಿಸಿದ್ದಾರೆ.
Assembly Election ಜಿಲ್ಲೆಯ ಚುನಾವಣಾ ಕಣದಲ್ಲಿ 74 ಅಭ್ಯರ್ಥಿಗಳು
Assembly Election ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು 74 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ-111 ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್ ಕಣದಲ್ಲಿ ಉಳಿದಿದ್ದಾರೆ.
Assembly Election ಭದ್ರಾವತಿ-112 ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.
ಶಿವಮೊಗ್ಗ-113 ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಯ ಎಸ್.ಎನ್.ಚನ್ನಬಸಪ್ಪ, ಐಎನ್‍ಸಿ ಹೆಚ್.ಸಿ.ಯೋಗೇಶ್, ಎಎಪಿ ನೇತ್ರಾವತಿ.ಟಿ, ಜೆಡಿಎಸ್ ಆಯನೂರ್ ಮಂಜುನಾಥ, ಉತ್ತಮ ಪ್ರಜಾಕೀಯ ಪಾರ್ಟಿ ಯ ವೆಂಕಟೇಶ್ ಆರ್, ಕೆಆರ್‍ಎಸ್ ನ ರಾಜೇಂದ್ರ ಡಿ, ಪಕ್ಷೇತರ ರಿಯಾಜ್ ಅಹಮದ್, ಮೊಹಮ್ಮದ್ ಯೂಸುಫ್ ಖಾನ್, ಅಜಯ್‍ಕುಮಾರ್ ಬಿ.ಎಸ್, ಅಕ್ಕಮಹಾದೇವಿ.ಹೆಚ್.ಎಂ, ಶೇಖರನಾಯ್ಕ್, ವಿ.ಹನುಮಶೆಟ್ಟಿ, ಅನಿಲ್.ಎಂಆರ್, ಹೆಚ್.ಎಸ್.ಗಣೇಶ್, ರವಿಕುಮಾರ್.ಎನ್ ಕಣದಲ್ಲಿದ್ದಾರೆ.
ತೀರ್ಥಹಳ್ಳಿ-114 ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್‍ಸಿ ಕಿಮ್ಮನೆ ರತ್ನಾಕರ, ಕೆಆರ್‍ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಹೆಗ್ಗಡೆ ಕಣದಲ್ಲಿದ್ದಾರೆ.
ಶಿಕಾರಿಪುರ-115 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್‍ಪಿಐ ಪಕ್ಷದ ಯಲ್ಲಪ್ಪ, ಕೆಆರ್‍ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ ಇಮ್ತಿಯಾಜ್ ಅತ್ತರ್, ಜಿ.ಬಿ.ಮಾಲತೇಶ್, ಅನಿಲ್.ಎಂ.ಆರ್, ಮೊಹಮ್ಮದ್ ಸಾದಿಕ್, ನಾಗನಗೌಡ ಎಸ್.ಪಿ, ಗಣೇಶ ಆರ್. ಕಣದಲ್ಲಿದ್ದಾರೆ.
ಸೊರಬ-116 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಬಿ.ಚಂದ್ರಪ್ಪಗೌಡ, ಸಮಾಜವಾದಿ ಪಾರ್ಟಿ ಪರಶುರಾಮ ವಿ.ಜಿ, ಎಎಪಿ ಚಂದ್ರಶೇಖರ ಕೆ ವೈ, ಉತ್ತಮ ಪ್ರಜಾಕೀಯ ಪಾರ್ಟಿ ಲಕ್ಷ್ಮೀಕಾಂತ ಸಿ.ಎಸ್, ಐಎನ್‍ಸಿ ಮಧು ಬಂಗಾರಪ್ಪ, ಬಿಜೆಪಿ ಎಸ್ ಕುಮಾರ್ ಬಂಗಾರಪ್ಪ, ಕೆಆರ್‍ಎಸ್ ಟಿ.ಮಂಜುನಾಥ, ಪಕ್ಷೇತರ ಶಿವಯೋಗಿ ಎಸ್ ಎಸ್, ಗುಡ್ಡಪ್ಪ, ಜೆ.ಎಸ್.ಚಿದಾನಂದ ಗೌಡ ಕಣದಲ್ಲಿದ್ದಾರೆ.
ಸಾಗರ-117 ಕ್ಷೇತ್ರದಲ್ಲಿ ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಸೈಯದ್ ಜಾಕಿರ್, ಕೆಆರ್‍ಎಸ್ ಕಿರಣ್.ಬಿ.ಇ, ಬಿಜೆಪಿ ಹೆಚ್.ಹಾಲಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ ಸೋಮರಾಜ ಎನ್, ಐಎನ್‍ಸಿ ಗೋಪಾಲಕೃಷ್ಣ ಬೇಳೂರು, ಎಎಪಿ ಕೆ.ದಿವಾಕರ, ಪಕ್ಷೇತರ ಶಿವಕುಮಾರ ಕೆ.ವಿ, ಹರಟೆ ಗಾಮಪ್ಪ, ಟಿ.ಎನ್.ಶ್ರೀನಿವಾಸ ಕಣದಲ್ಲಿದ್ದಾರೆ.
