ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣಾ ವೈಫಲ್ಯ ಹಾಗೂ ವ್ಯಾಪಕ ಅಕ್ರಮಗಳನ್ನು ಖಂಡಿಸಿ, ವಿದ್ಯಾರ್ಥಿಗಳ ಜೀವ ರಕ್ಷಣೆಗೆ ರಾಷ್ಟçಪತಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಕೆ. ಪುರಂದರ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಕುರಿತು ಸ್ವತಂತ್ರ ಹಾಗೂ ಕಾಲಮಿತಿಯ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತಿದ್ದ ದೇಶದ ಸುಮಾರು ನೂರು ವಿದ್ಯಾರ್ಥಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬವೂ ಸಹ ಸಂಕಷ್ಟದಲ್ಲಿ ಸಿಲುಕಿದೆ. ಅಂತಹವರಿಗೆ ಸೂಕ್ತ ಪರಿಹಾರ ನೀಡಬೇಕಾದ ಹೊಣೆ ಕೇಂದ್ರ ಸರ್ಕಾರದ್ದಾಗಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಭದ್ರತಾ ಕ್ರಮಗಳನ್ನೊಳಗೊಂಡ ಸ್ವತಂತ್ರ ರಾಷ್ಟಿçÃಯ ಪರೀಕ್ಷಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಬಸವರಾಜ ಹಶ್ವಿ ಮಾತನಾಡಿ, ರಾಷ್ಟçಪತಿ ದ್ರೌಪದಿ ಮುರ್ಮು ಅವರೇ ತುರ್ತಾಗಿ ಮಧ್ಯಸ್ಥಿಕೆ ವಹಿಸಿ ವಿದ್ಯಾರ್ಥಿಗಳ ಹೋರಾಟ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ದೆಹಲಿ ಸೇರಿದಂತೆ ದೇಶದೆಲ್ಲಡೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕಿದೆ. ಮಾತ್ರವಲ್ಲದೇ, ನೀಟ್ ಅಕ್ರಮದ ನೈತಿಕ ಹೊಣೆಯನ್ನು ಕೇಂದ್ರದ ಶಿಕ್ಷಣ ಸಚಿವರು ಹೋರಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದರು.
ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿಯ ಜೆ.ಡಿ. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ವೈದ್ಯರಾಗಬೇಕು ಅಥವಾ ಇಂಜಿನಿಯರ್ ಆಗಬೇಕು ಎಂಬ ಕನಸನ್ನು ಹೊತ್ತಿರುತ್ತಾರೆ. ಅವರ ಪೋಷಕರು ಸಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಶಿಕ್ಷಣ ವ್ಯವಸ್ಥೆ ಎನ್ನುವುದು ಅಕ್ರಮದಲ್ಲಿ ತೊಡಗಿದ್ದು, ಇದರಿಂದ ಗೊಂದಲಕ್ಕಿAತ ಆತಂಕ ಎದುರಾಗುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಚಳುವಳಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಉಪಾಧ್ಯಕ್ಷ ಅನಿಲ್ ಬಾಂಬೋರೆ, ಡಿಎಸ್‌ಎಸ್ ನಗರ ಸಮಿತಿ ಸಂಚಾಲಕ ಮಂಜಪ್ಪ ಮಾವಲಿ, ಪ್ರಮುಖರಾದ ಜೆ.ಡಿ. ನಾಗರಾಜ, ಟಿ.ಎಸ್. ಕುಮಾರ, ವಕೀಲ ಶಿವಕುಮಾರ್ ಕುಳವಳ್ಳಿ, ಕೆ. ಬಂಗಾರಪ್ಪ, ಉಜ್ಜಪ್ಪ, ಯುವರಾಜ ಕಾನುಗೋಡು, ಪುಂಡಲೀಕಪ್ಪ, ಮೋಹನ್ ಕುಪ್ಪೆ, ನೀಲಕಂಠಪ್ಪ ತಾವರೆಕೊಪ್ಪ, ಸತೀಶ್ ಡಿ.ಎಂ. ನಡಹಳ್ಳಿ ಸೇರಿದಂತೆ ಇತರರಿದ್ದರು.
ನೀಟ್ ಪರೀಕ್ಷಾ ಹಗರಣ: ವಿದ್ಯಾರ್ಥಿಗಳ ಜೀವ ರಕ್ಷಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಅರ್ಪಣೆ
ಶಿವಮೊಗ್ಗದ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ವಾಹನ ದಟ್ಟಣೆ: ನಿಯಂತ್ರಿಸಲು ಮನವಿ
ಪ್ರತಿಷ್ಠಿತ ಗಾಂಧಿಬಜರಿನ ರಾಮಣ್ಣ ಶ್ರೇಷ್ಠ ಕಲ್ಯಾಣ ಮಂದಿರ ಮುಂಭಾಗದಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಮತ್ತು ಮಧ್ಯಾಹ್ನ 3ರಿಂದ 6ಗಂಟೆವರೆಗೆ ಟ್ರಾಫಿಕ್ ಹೆಚ್ಚಿರುತ್ತದೆ. ಜೊತೆಗೆ ಬೆಳಿಗ್ಗೆ ಶಾಲಾ ಮಕ್ಕಳು ಹೋಗುವ ಸಂದರ್ಭ ಹಾಗೂ ಇಲ್ಲಿ ಗಣಪತಿ ದೇವಸ್ಥಾನ ಇರುವುದರಿಂದ ದೇವಸ್ಥಾನಕ್ಕೆ ಭಕ್ತಾದಿಗಳು ಬರುವ ಸಂಖ್ಯೆ ಹೆಚ್ಚಾಗಿರುತ್ತದೆ.
ಇಲ್ಲಿ ತಿಂಡಿ ಗಾಡಿಗಳು ಸಹ ಇದ್ದು, ಈ ಭಾಗದಿಂದ ಸುತ್ತಮುತ್ತ ಕೆಲಸಕ್ಕೆ ಹೋಗುವರು ತಿಂಡಿ ಸೇವಿಸಲು ಬರುತ್ತಾರೆ. ಈ ಸಮಯದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಈ ಭಾಗದಲ್ಲಿರುವ ಮನೆಯ ಮತ್ತು ಅಂಗಡಿಯವರ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಆದ ಕಾರಣ ಮಕ್ಕಳಿಗೆ ಬರುವ ಬಸ್ಸುಗಳು ಮತ್ತು ಬೇರೆ ವಾಹನಗಳಿಗೆ, ಜೊತೆಗೆ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿದೆ. ಮಕ್ಕಳು ಬಸ್ ಹತ್ತುವ ಸಂದರ್ಭದಲ್ಲಿ ಅಪಘಾತವಾಗುವ ಸಾಧ್ಯವಿದೆ.
ಆದ್ದರಿಂದ ಬೆಳಿಗ್ಗೆ 6 ರಿಂದ 10 ರವರೆಗೆ ಮತ್ತು ಮಧ್ಯಾಹ್ನ 3ರಿಂದ 6ಗಂಟೆವರೆಗೆ ವಾಹನಗಳ ಪಾರ್ಕಿಂಗ್ ಮತ್ತು ಜಂಜಾಟ ಕಡಿಮೆಯಾದರೆ, ಟ್ರಾಫಿಕ್ ಕೂಡ ಕಡಿಮೆಯಾಗುತ್ತದೆ. ಕೂಡಲೆ ಸಂಚಾರಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್ ಪೊಲೀಸ್‌ರನ್ನು ನೇಮಕ ಮಾಡಿದರೆ ಮುಂದಾಗುವ ಅನಾವುತ ತಪ್ಪಿಸಬಹುದು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ರಾಮಣ್ಣ ಶ್ರೇಷ್ಟಿ ಪಾರ್ಕ್ ಆವರಣದಲ್ಲಿ ವಾಹನ ನಿಲುಗಡೆ ಮಾಡದಂತೆ ತಕ್ಷಣ ಅವರಿಗೆ ಎಚ್ಚರಿಕೆ ನೀಡಬೇಕೆಂದು ಸಮಾಜ ಸೇವಕ ಕಾಯಕಯೋಗಿ ಚನ್ನಬಸಪ್ಪ ವಿನಂತಿಸಿದ್ದಾರೆ.
✒️
ನೀತಿ ಆಯೋಗದ ಸದಸ್ಯ ಕೆ.ರಾಜು ಅವರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಮಾಲೋಚನಾ ಸಭೆ
ನೀತಿ ಆಯೋಗದ ಸದಸ್ಯ ಕೆ. ರಾಜು ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಗುರುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು
ಮುಖ್ಯಮಂತ್ರಿಗಳಿಂದ ” ವಿಪ್ರ ವಿಕಾಸ’ ಕೈಪಿಡಿ ಬಿಡುಗಡೆ
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ನೇತೃತ್ವದ ಪದಾಧಿಕಾರಿಗಳ ನಿಯೋಗವು ಇಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ವಿಧಾನಸೌಧ ಕಚೇರಿಯಲ್ಲಿ ಗುರುವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಪ್ರ ವಿಕಾಸ ಮತ್ತು 2026-27 ರ ಕೈಪಿಡಿ ಬಿಡುಗಡೆ ಮಾಡಿದರು.
ಪದಾಧಿಕಾರಿಗಳಾದ ದೀಪಶ್ರೀ ಕೆ.ಕಶ್ಯಪ್ ನಂದನ್, ಪಿ. ಶ್ರೀನಿವಾಸ ಮೂರ್ತಿ, ಸಿ.ಎನ್. ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಜುಲೈ 25. ಶಿವಮೊಗ್ಗದ ಪ್ರಿಯಾಂಕ ಲೇಔಟ್, ನಂಜಪ್ಪ ಲೇ ಔಟ್, ಹಾಗೂ ರಾಮಯ್ಯ ಲೇ ಔಟ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ಗಣಪತಿ ಬಡಾವಣೆ ಹತ್ತಿರ ರಾಜ ಕಾಲುವೆ ಕಾಮಗಾರಿ ಇರುವುದರಿಂದ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆ ಜು. 25 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಪ್ರಿಯಾಂಕ ಲೇಔಟ್, ನಂಜಪ್ಪ ಲೇಔಟ್, ಹೇಮಶ್ರೀ ಲೇಔಟ್, ಗಣಪತಿ ಲೇಔಟ್, ಆರ್.ಟಿ.ಲೇಔಟ್ ಮತ್ತು ರಾಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೃಷಿ ಡಿಪ್ಲೊಮಾ ಕೋರ್ಸ್: ಖಾಲಿ ಉಳಿದಿರುವ 31 ಸೀಟುಗಳ ಭರ್ತಿಗಾಗಿ ಅರ್ಜಿ ಆಹ್ವಾನ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್ ನಲ್ಲಿ ಖಾಲಿ ಉಳಿದಿರುವ 31 ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೊಮಾ (ಕೃಷಿ) ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುವುದು.
ಪ್ರವೇಶ ಅರ್ಹತೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್ ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಠ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).ದಿನಾಂಕ: 06-08-2026 ರಂದು ಅಭ್ಯರ್ಥಿಗಳ ವಯಸ್ಸು 19 ವರ್ಷಗಳನ್ನು ಮೀರಿರಬಾರದು. ರೈತರ ಹಾಗೂ ಕೃಷಿಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ. ಅಧಿಸೂಚನೆ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವೆಬ್ಸೈಟ್: www.uahs.edu.in ನಲ್ಲಿ ದಿನಾಂಕ: 06-08-2026 ರೊಳಗೆ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಗಳನ್ನು ಮತ್ತು ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ, ದಿನಾಂಕ: 06-08-2026 ರೊಳಗೆ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ಕಳುಹಿಸಿಕೊಡಬೇಕು. ದಿನಾಂಕ: 06-08-2026 ರ ನಂತರ ಡಿ.ಡಿ. ಯನ್ನು ಪಡೆದು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ರೂ. 500/-, ಪ.ಜಾ./ಪ.ಪಂ./ಪ್ರವರ್ಗ-1ರವರಿಗೆ ರೂ. 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳ (Nationalized Bank) ಡಿ.ಡಿ. ಯನ್ನು Comptroller, KSNUAHS, Shivamogga –577 412 ಇವರ ಹೆಸರಿನಲ್ಲಿ ಪಡೆದು ಎಲ್ಲಾ ಅಗತ್ಯ ಅಡಕಗಳೊಂದಿಗೆ ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ದಿನಾಂಕ: 06-08-2026 ರೊಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. ದಿನಾಂಕ: 06-08-2026 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರವೇಶ ಮತ್ತು ಆಯ್ಕೆ ವಿಧಾನ: ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್‌ಸೈಟ್ ಮುಖಾಂತರ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ29. ಶಿವಶರಣ ಹಡಪದಪ್ಪಣ್ಣ ಜಯಂತಿ: ಜಿಲ್ಲಾಡಳಿದಿಂದ ಸಕಲ ಸಿದ್ಧತೆ
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜು. 29 ರ ಬೆಳಗ್ಗೆ 11 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಶಾಸಕರಾದ ಎಸ್.ಎನ್ ಚನ್ನಬಸಪ್ಪ ನೆರವೇರಿಸುವರು, ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ/ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಇವರುಗಳು ಉಪಸ್ಥಿತರಿರುವರು.
ಶಿವಮೊಗ್ಗದ ಕುವೆಂಪು ರಾಜ್ಯ ಪ್ರಶಸ್ತಿ ಪುರಸ್ಕೃತ ವೇ|| ಹಾಲಪ್ಪಯ್ಯ ಶಾಸ್ತಿಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಮಾಹಿತಿ ಒದಗಿಸುವ “ಕಿಶೋರ ದೀಪಿಕಾ” ಕೃತಿ, ಶಿವಮೊಗ್ಗದಲ್ಲಿ ಲೋಕಾರ್ಪಣೆ
ಹದಿ ಹರೆಯ (ಸುಮಾರು 13–19 ವರ್ಷ) ವ್ಯಕ್ತಿಯ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ನಿರ್ಣಾಯಕ ಹಂತವಾಗಿದೆ. ಈ ಅವಧಿಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಈ ಕಾರಣದಿಂದ ಮಕ್ಕಳು ಮಾತ್ರವಲ್ಲ, ಅವರ ಶಿಕ್ಷಕರು ಮತ್ತು ಪೋಷಕರೂ ಅನೇಕ ಸವಾಲುಗಳನ್ನು ಎದುರಿಸುತ್ತಾರೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನ. ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುವುದು ಮತ್ತು ಅಂಕಗಳ ಬಗೆಗಿನ ಆತಂಕ. ಸ್ನೇಹಿತರ ಪ್ರಭಾವದಿಂದ ಕೆಟ್ಟ ಅಭ್ಯಾಸಗಳಿಗೆ ಒಳಗಾಗುವ ಭಯ. ಪೋಷಕರ ಮಾತನ್ನು ಕೇಳದಿರುವುದು, ಪ್ರತಿಯೊಂದು ವಿಷಯದಲ್ಲೂ ವಾದಿಸುವುದು. ಮಾನಸಿಕ ಒತ್ತಡ, ಖಿನ್ನತೆ, ಆತ್ಮವಿಶ್ವಾಸದ ಕೊರತೆ ಮೊದಲಾದ ಸಮಸ್ಯೆಗಳನ್ನು ಪೋಷಕರು ಎದುರಿಸುತ್ತಿದ್ದಾರೆ.
ಹಾಗೆಯೇ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಏಕಾಗ್ರತೆಯ ಕೊರತೆ, ತರಗತಿಯಲ್ಲಿ ಮೊಬೈಲ್ ಬಳಸುವುದರಿಂದ ಅವರ ಗಮನ ಬೇರೆಡೆ ಹೋಗುವುದು, ವಿದ್ಯಾರ್ಥಿಗಳ ವಿಭಿನ್ನ ಹಿನ್ನೆಲೆ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಬೋಧಿಸುವ ಸವಾಲು. ಪೋಷಕರ ಹೆಚ್ಚಿನ ನಿರೀಕ್ಷೆಗಳು ಮತ್ತು ಒತ್ತಡ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಸಹಾಯ ಮಾಡುವ ಅಗತ್ಯ.
ಪರೀಕ್ಷಾ ಫಲಿತಾಂಶಗಳ ಒತ್ತಡ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವುದು ಶಿಕ್ಷಕರ ಸವಾಲಾಗಿದೆ.
ಇದಕ್ಕೆ ಪರಿಹಾರವಾಗಿ ಮಕ್ಕಳೊಂದಿಗೆ ಪ್ರೀತಿಯಿಂದ, ಮುಕ್ತವಾಗಿ ಮತ್ತು ವಿಶ್ವಾಸದಿಂದ ಸಂವಾದ ನಡೆಸಬೇಕು.
ಶಿಕ್ಷಕರು ಮತ್ತು ಪೋಷಕರು ನಿರಂತರ ಸಂಪರ್ಕದಲ್ಲಿದ್ದು ಮಗುವಿನ ಬೆಳವಣಿಗೆಯನ್ನು ಗಮನಿಸಬೇಕು.
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು; ಇತರರೊಂದಿಗೆ ಹೋಲಿಕೆ ಮಾಡಬಾರದು.
ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಗೆ ಸಮಂಜಸವಾದ ನಿಯಮಗಳನ್ನು ರೂಪಿಸಬೇಕು.
ಕ್ರೀಡೆ, ಯೋಗ, ಧ್ಯಾನ, ಸಂಗೀತ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು.
ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಜವಾಬ್ದಾರಿಯ ಅರಿವನ್ನು ಬಾಲ್ಯದಿಂದಲೇ ಬೆಳೆಸಬೇಕು.
ಹದಿ ಹರೆಯದ ಮಕ್ಕಳನ್ನು ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಎರಡು ಕಣ್ಣುಗಳಿದ್ದಂತೆ. ಪರಸ್ಪರ ಸಹಕಾರ, ತಾಳ್ಮೆ, ಪ್ರೀತಿ ಮತ್ತು ವಿಶ್ವಾಸದಿಂದ ಮಕ್ಕಳನ್ನು ಮಾರ್ಗದರ್ಶನ ಮಾಡಿದರೆ ಅವರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. “ಮಕ್ಕಳನ್ನು ಬದಲಾಯಿಸುವುದಕ್ಕಿಂತ ಅವರ ಪರಿಸರವನ್ನು ಉತ್ತಮಗೊಳಿಸುವುದು ಮುಖ್ಯ” ಎಂಬ ಅರಿವಿನಿಂದ ಶಿಕ್ಷಕರು ಮತ್ತು ಪೋಷಕರು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಹದಿ ಹರೆಯದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು.
ಪ್ರಸ್ತುತ ಈ ಸ್ಥಿತಿ ಗಮನಿಸಿಯೇ ಹದಿಹರೆಯದ ಮಕ್ಕಳ ಶಿಕ್ಷಕರಿಗೆ ಪೋಷಕರಿಗೆ ಮಾರ್ಗದರ್ಶಿಯಾಗಬಲ್ಲ ಕಿಶೋರ ದೀಪಿಕಾ ಎಂಬ ಪುಸ್ತಕವೊಂದನ್ನು ಶ್ರೀಮತಿ ಎಚ್ಎಂ ರುಕ್ಮಿಣಿ ನಾಯಕ್ ಹಾಗೂ ಉಪಸಂಪಾದಕರಾಗಿ ಉಷಾ ನಟೇಶ್ ಕಾಸರವಳ್ಳಿ ಇವರು ಸಂಪಾದಿಸಿದ್ದಾರೆ. ಈ ಪುಸ್ತಕದ ಸಂಪಾದಕರೇ ಹೇಳಿರುವಂತೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗದ ಇಂದಿನ ಶಿಕ್ಷಣ ಪದ್ದತಿಗೆ ಪರಿಹಾರವೆಂದರೆ ನೀತಿ ಶಿಕ್ಷಣ. ಕಥೆ, ಹಾಡು, ನಾಟಕ, ಆಟ, ನೃತ್ಯ ಇವುಗಳ ಮೂಲಕ ನೀತಿ ಶಿಕ್ಷಣ ಸರಳವೂ ಹೌದು ಪರಿಣಾಮಕಾರಿಯೂ ಹೌದು ಇದರಿಂದ ಮಕ್ಕಳ ಪೋಷಕರ ನಡುವೆ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಮಧುರ ಬಾಂಧವ್ಯ ಏರ್ಪಡುತ್ತದೆ. ಹದಿ ಹರೆಯದ ಮಕ್ಕಳಿಗೆ ತಂದೆ ತಾಯಿಗಳು ಶಿಕ್ಷಕರೂ ಆಗಬೇಕು ಹಾಗೆ ಶಿಕ್ಷಕರು ಪೋಷಕರ ಸ್ಥಾನವನ್ನೂ ನಿಭಾಯಿಸಬೇಕು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ನೀಡಿದರೆ ಅವರ ಬಾಳು ಹಸನಾಗುತ್ತದೆ. ಏಕೆಂದರೆ ಅದಕ್ಕೆ ಅಂತಹ ಮಾಂತ್ರಿಕ ಶಕ್ತಿ ಇದೆ. ಸರಿಯಾದ ಮಾರ್ಗದರ್ಶನ ದೊರೆಯದ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಹೊರಹೊಮ್ಮಬಹುದು. ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಲು ಉತ್ಸಾಹಿಗಳಾದ ಪೋಷಕರಿಗೆ, ಶಿಕ್ಷಕರಿಗೆ ನೆರವಾಗಲು ಇರುವುದೇ ‘ಕೀಶೋರ ದೀಪಿಕಾ’. ಇದರಲ್ಲಿ ಹಾಡು, ಕಥೆ, ನಾಟಕ, ಆಟ, ವಿವೇಕವಾಣಿ ಎಲ್ಲವನ್ನೂ ಇದು ಒಳಗೊಂಡಿದೆ. ವಾರಕ್ಕೊಮ್ಮೆಯಾದರೂ ಇವುಗಳಲ್ಲಿರುವುದನ್ನು ಮಕ್ಕಳಿಗೆ ಆನಂದದಾಯಕವಾಗುವ ಹಾಗೆ ಕಲಿಸಬಹುದಾಗಿದೆ.
ಇಂತಹ ವಿಶೇಷ ಕೃತಿಯನ್ನು ಸಂಪಾದಿಸಿದವರಲ್ಲಿ ಪ್ರಮುಖರು ಶ್ರೀಮತಿ ಹೆಚ್ಎಂ ರುಕ್ಮಿಣಿ ನಾಯಕ್. ಸುಮಾರು 22 ವರ್ಷಗಳು ಸಂಸ್ಕೃತ, ಕನ್ನಡ ಪಾಠ ಮಾಡಿದ ಸುದೀರ್ಘ ಅನುಭವವುಳ್ಳ ಶಿಕ್ಷಕಿ ಇವರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರು ಶಿವಮೊಗ್ಗದಲ್ಲಿ ‘ಬಾಲ ಗೋಕುಲ’ದ ಸಂಚಾಲಕಿಯಾಗಿ ಬಹು ಯಶಸ್ವಿಯಾಗಿ ಅದನ್ನು ನಿಭಾಯಿಸಿದವರು. ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಅವರು 2012 ರಲ್ಲಿ ಶ್ರೀ ಶಾರದಾ ಓದುಗರ ವೇದಿಕೆ ಸ್ಥಾಪಿಸಿ 150 ಕನ್ನಡ ಕೃತಿಗಳನ್ನು ವಿಮರ್ಶಿಸಿದ ಹೆಗ್ಗಳಿಕೆ ಅವರದು. ನೈತಿಕ ಶಿಕ್ಷಣಕ್ಕೆ ಪೂರಕವಾದ “ಬಾಲ ಪ್ರದೀಪ” ಪುಸ್ತಕ ಅನೇಕ ಮರು ಮುದ್ರಣಗಳನ್ನು ಕಂಡ ಕೃತಿಯಾಗಿದೆ.
ಉಪಸಂಪಾದಕಿಯಾದಂತಹ ಶ್ರೀಮತಿ ಉಷಾ ನಟೇಶ್ ಕಾಸರವಳ್ಳಿಯವರು ಶಾಲಾ ಶಿಕ್ಷಕಿ, ಪ್ರಾಧ್ಯಾಪಕಿ, ನಾಟಕ, ನೃತ್ಯ, ಸಂಗೀತ, ಭಜನೆ ಇತ್ಯಾದಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೊತೆಗೆ ಅನೇಕ ವಿದ್ಯಾರ್ಥಿಗಳನ್ನೂ ತೊಡಗಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯ ಹಾಕಿದವರಾಗಿದ್ದಾರೆ. ಆಕಾಶವಾಣಿ ಕಲಾವಿದೆ, ರಂಗಕರ್ಮಿ, ಧಾರಾವಾಹಿಗಳಲ್ಲಿ ನಟನೆ ಇತ್ಯಾದಿಯಾಗಿ ಸರ್ವತೋಮುಖವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆ.
ಇಂತಹ ತಜ್ಞರು ಸಂಪಾದಿಸಿದ “ಕಿಶೋರ ದೀಪಿಕಾ” ಕೃತಿ ಇದೇ ಬರುವ ಶನಿವಾರ ದಿನಾಂಕ 25.07.2026 ರಂದು ಲೋಕಾರ್ಪಣೆಗೊಳ್ಳಲಿದೆ. ಸಂಸ್ಕಾರ ಭಾರತಿ ಶಿವಮೊಗ್ಗ ಹಾಗೂ ಮಂಥನ ಶಿವಮೊಗ್ಗದೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಾಲಗೋಕುಲ ಶಿವಮೊಗ್ಗದ ಸಹಯೋಗದೊಂದಿಗೆ ಸಂಜೆ 5:30ಕ್ಕೆ
ತಿಲಕ್ ನಗರದ “ಸನ್ ಸ್ಪೆಷಾಲಿಟಿ” ಆಸ್ಪತ್ರೆಯ “ಧನ್ವಂತರಿ” ಸಭಾಂಗಣದಲ್ಲಿ ನೆರವೇರಲಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಪೋಷಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಡಾ. ಮೈತ್ರೇಯಿ ಆದಿತ್ಯ
ಸಂಸ್ಕೃತ ಉಪನ್ಯಾಸಕರು
ಪೇಸ್ ಪಿ ಯು ಕಾಲೇಜು, ಶಿವಮೊಗ್ಗ
ಜುಲೈ 26. ಶ್ರೀಅನ್ನಪೂರ್ಣೇಶ್ವರಿ ಮುಷ್ಠಿ ಅಕ್ಕಿ ಯೋಜನೆಯ 17 ನೇ ” ಸ್ನೇಹ ಮಿಲನ
ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆ ಶಿವಮೊಗ್ಗ ಹಾಗೂ ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸ್ನೇಹ ಮಿಲನ – ೧೭ನೇ ವಾರ್ಷಿಕೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿಶೇಷ ಕಾರ್ಯಕ್ರಮವು ಇದೇ ಜುಲೈ ೨೬, ೨೦೨೬ರ ಭಾನುವಾರದಂದು ಬೆಳಿಗ್ಗೆ ೧೦:೩೦ಕ್ಕೆ ನಗರದ ರವೀಂದ್ರನಗರದಲ್ಲಿರುವ ಶ್ರೀ ಗಣಪತಿ ದೇವಸ್ಥಾನದ ಅವರಣದಲ್ಲಿ ನೆರವೇರಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆಯ ಅಧ್ಯಕ್ಷರಾದ ಶ್ರೀಮತಿ ಸುಮಾ ಮೂರ್ತಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಶಾಂತಾರಾA ಸಿದ್ಧಿ, ವನವಾಸಿ ಕಲ್ಯಾಣದ ಕ್ಷೇತ್ರೀಯ ನಗರೀಯ ಕಾರ್ಯ ಪ್ರಮುಖರಾದ ಶ್ರೀ ಗೋಪಾಲ್ ಕೇಸರಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ಭಾಗವಹಿಸಲಿದ್ದಾರೆ.
ಅಲ್ಲದೆ, ರಾಜ್ಯ ನಗರೀಯ ಕಾರ್ಯ ಪ್ರಮುಖರಾದ ಭಗಿನಿ ವೇದಾವತಿ ಅವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲಾ ಬಂಧುಗಳಿಗೆ ಮತ್ತು ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿಯೊಬ್ಬರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
ವಂದನೆಗಳೊAದಿಗೆ,
ಜುಲೈ,25 & 26 ರಂದು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯ ” ವಿಶೇಷ ಪ್ರಚಾರ ದಿನ
ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್)-2026ರ ಅಂಗವಾಗಿ ‘ವಿಶೇಷ ಪ್ರಚಾರ ದಿನ’ ವನ್ನು ಮಹಾನಗರ ಪಾಲಿಕೆ ಆವರಣದಲ್ಲಿ ಜು.25 ಮತ್ತು 26 ರಂದು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಆಯೋಜಿಸಲಾಗಿದೆ.
ಮಾಹಿತಿ ಹಾಗೂ ಅರ್ಜಿ ಸಹಾಯ: ಎಸ್ ಐ ಆರ್ ಸಂಬಂಧಿತ ಮಾಹಿತಿ ಮತ್ತು ಫಾರಂ ಭರ್ತಿ ಮಾಡಲು ಸಹಾಯ ಪಡೆಯಲು ತಮ್ಮ ಇತ್ತೀಚಿನ ಫೋಟೋ ಹಾಗೂ ಗುರುತಿನ ಚೀಟಿ ಯೊಂದಿಗೆ ಆಗಮಿಸಬೇಕಾಗಿರುತ್ತದೆ.
ಹೆಸರು ಸೇರ್ಪಡೆಗೆ ಕಡ್ಡಾಯ: ಭರ್ತಿ ಮಾಡಿದ ಫಾರಂಗಳನ್ನು ಬಿಎಲ್ಓ (ಬೂತ್ ಲೆವೆಲ್ ಆಫೀಸರ್) ರವರಿಗೆ ನೀಡದಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ.
ಭರ್ತಿ ಮಾಡಿ ಸಹಿ ಮಾಡಿದ ಫಾರಂಗಳನ್ನು BLO ರವರು ನಿಮ್ಮ ಮನೆಗೆ ಭೇಟಿ ನೀಡಿದಾಗ ನೀಡಬಹುದು ಅಥವಾ ವಿವಿಧ ರಾಜಕೀಯ ಪಕ್ಷಗಳ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್) ಅವರ ಮೂಲಕವೂ ಬಿಎಲ್ಓ ರವರಿಗೆ ತಲುಪಿಸಬಹುದಾಗಿದೆ.
ಅರ್ಹ ಸಾರ್ವಜನಿಕರು ಹಾಗೂ ಮತದಾರರು ಈ ‘ವಿಶೇಷ ಪ್ರಚಾರ ದಿನ’ದ ಸೌಲಭ್ಯವನ್ನು ಬಳಸಿಕೊಳ್ಳಬೇಕಾಗಿ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ
ಮತದಾರರ ನೋಂದಣಾಧಿಕಾರಿ ಅವರು ಕೋರಿದ್ದಾರೆ.
