ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣಾ ವೈಫಲ್ಯ ಹಾಗೂ ವ್ಯಾಪಕ ಅಕ್ರಮಗಳನ್ನು ಖಂಡಿಸಿ, ವಿದ್ಯಾರ್ಥಿಗಳ ಜೀವ ರಕ್ಷಣೆಗೆ ರಾಷ್ಟçಪತಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಕೆ. ಪುರಂದರ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಕುರಿತು ಸ್ವತಂತ್ರ ಹಾಗೂ ಕಾಲಮಿತಿಯ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತಿದ್ದ ದೇಶದ ಸುಮಾರು ನೂರು ವಿದ್ಯಾರ್ಥಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬವೂ ಸಹ ಸಂಕಷ್ಟದಲ್ಲಿ ಸಿಲುಕಿದೆ. ಅಂತಹವರಿಗೆ ಸೂಕ್ತ ಪರಿಹಾರ ನೀಡಬೇಕಾದ ಹೊಣೆ ಕೇಂದ್ರ ಸರ್ಕಾರದ್ದಾಗಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಭದ್ರತಾ ಕ್ರಮಗಳನ್ನೊಳಗೊಂಡ ಸ್ವತಂತ್ರ ರಾಷ್ಟಿçÃಯ ಪರೀಕ್ಷಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಬಸವರಾಜ ಹಶ್ವಿ ಮಾತನಾಡಿ, ರಾಷ್ಟçಪತಿ ದ್ರೌಪದಿ ಮುರ್ಮು ಅವರೇ ತುರ್ತಾಗಿ ಮಧ್ಯಸ್ಥಿಕೆ ವಹಿಸಿ ವಿದ್ಯಾರ್ಥಿಗಳ ಹೋರಾಟ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ದೆಹಲಿ ಸೇರಿದಂತೆ ದೇಶದೆಲ್ಲಡೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕಿದೆ. ಮಾತ್ರವಲ್ಲದೇ, ನೀಟ್ ಅಕ್ರಮದ ನೈತಿಕ ಹೊಣೆಯನ್ನು ಕೇಂದ್ರದ ಶಿಕ್ಷಣ ಸಚಿವರು ಹೋರಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದರು.
ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿಯ ಜೆ.ಡಿ. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ವೈದ್ಯರಾಗಬೇಕು ಅಥವಾ ಇಂಜಿನಿಯರ್ ಆಗಬೇಕು ಎಂಬ ಕನಸನ್ನು ಹೊತ್ತಿರುತ್ತಾರೆ. ಅವರ ಪೋಷಕರು ಸಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಶಿಕ್ಷಣ ವ್ಯವಸ್ಥೆ ಎನ್ನುವುದು ಅಕ್ರಮದಲ್ಲಿ ತೊಡಗಿದ್ದು, ಇದರಿಂದ ಗೊಂದಲಕ್ಕಿAತ ಆತಂಕ ಎದುರಾಗುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಚಳುವಳಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಉಪಾಧ್ಯಕ್ಷ ಅನಿಲ್ ಬಾಂಬೋರೆ, ಡಿಎಸ್ಎಸ್ ನಗರ ಸಮಿತಿ ಸಂಚಾಲಕ ಮಂಜಪ್ಪ ಮಾವಲಿ, ಪ್ರಮುಖರಾದ ಜೆ.ಡಿ. ನಾಗರಾಜ, ಟಿ.ಎಸ್. ಕುಮಾರ, ವಕೀಲ ಶಿವಕುಮಾರ್ ಕುಳವಳ್ಳಿ, ಕೆ. ಬಂಗಾರಪ್ಪ, ಉಜ್ಜಪ್ಪ, ಯುವರಾಜ ಕಾನುಗೋಡು, ಪುಂಡಲೀಕಪ್ಪ, ಮೋಹನ್ ಕುಪ್ಪೆ, ನೀಲಕಂಠಪ್ಪ ತಾವರೆಕೊಪ್ಪ, ಸತೀಶ್ ಡಿ.ಎಂ. ನಡಹಳ್ಳಿ ಸೇರಿದಂತೆ ಇತರರಿದ್ದರು.
ನೀಟ್ ಪರೀಕ್ಷಾ ಹಗರಣ: ವಿದ್ಯಾರ್ಥಿಗಳ ಜೀವ ರಕ್ಷಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಅರ್ಪಣೆ
Date:
