Wednesday, September 9, 2026
Wednesday, September 9, 2026

ಶಿವಮೊಗ್ಗದ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ವಾಹನ ದಟ್ಟಣೆ: ನಿಯಂತ್ರಿಸಲು ಮನವಿ

Date:

ಪ್ರತಿಷ್ಠಿತ ಗಾಂಧಿಬಜರಿನ ರಾಮಣ್ಣ ಶ್ರೇಷ್ಠ ಕಲ್ಯಾಣ ಮಂದಿರ ಮುಂಭಾಗದಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಮತ್ತು ಮಧ್ಯಾಹ್ನ 3ರಿಂದ 6ಗಂಟೆವರೆಗೆ ಟ್ರಾಫಿಕ್ ಹೆಚ್ಚಿರುತ್ತದೆ. ಜೊತೆಗೆ ಬೆಳಿಗ್ಗೆ ಶಾಲಾ ಮಕ್ಕಳು ಹೋಗುವ ಸಂದರ್ಭ ಹಾಗೂ ಇಲ್ಲಿ ಗಣಪತಿ ದೇವಸ್ಥಾನ ಇರುವುದರಿಂದ ದೇವಸ್ಥಾನಕ್ಕೆ ಭಕ್ತಾದಿಗಳು ಬರುವ ಸಂಖ್ಯೆ ಹೆಚ್ಚಾಗಿರುತ್ತದೆ.
ಇಲ್ಲಿ ತಿಂಡಿ ಗಾಡಿಗಳು ಸಹ ಇದ್ದು, ಈ ಭಾಗದಿಂದ ಸುತ್ತಮುತ್ತ ಕೆಲಸಕ್ಕೆ ಹೋಗುವರು ತಿಂಡಿ ಸೇವಿಸಲು ಬರುತ್ತಾರೆ. ಈ ಸಮಯದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಈ ಭಾಗದಲ್ಲಿರುವ ಮನೆಯ ಮತ್ತು ಅಂಗಡಿಯವರ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಆದ ಕಾರಣ ಮಕ್ಕಳಿಗೆ ಬರುವ ಬಸ್ಸುಗಳು ಮತ್ತು ಬೇರೆ ವಾಹನಗಳಿಗೆ, ಜೊತೆಗೆ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿದೆ. ಮಕ್ಕಳು ಬಸ್ ಹತ್ತುವ ಸಂದರ್ಭದಲ್ಲಿ ಅಪಘಾತವಾಗುವ ಸಾಧ್ಯವಿದೆ.
ಆದ್ದರಿಂದ ಬೆಳಿಗ್ಗೆ 6 ರಿಂದ 10 ರವರೆಗೆ ಮತ್ತು ಮಧ್ಯಾಹ್ನ 3ರಿಂದ 6ಗಂಟೆವರೆಗೆ ವಾಹನಗಳ ಪಾರ್ಕಿಂಗ್ ಮತ್ತು ಜಂಜಾಟ ಕಡಿಮೆಯಾದರೆ, ಟ್ರಾಫಿಕ್ ಕೂಡ ಕಡಿಮೆಯಾಗುತ್ತದೆ. ಕೂಡಲೆ ಸಂಚಾರಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್ ಪೊಲೀಸ್‌ರನ್ನು ನೇಮಕ ಮಾಡಿದರೆ ಮುಂದಾಗುವ ಅನಾವುತ ತಪ್ಪಿಸಬಹುದು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ರಾಮಣ್ಣ ಶ್ರೇಷ್ಟಿ ಪಾರ್ಕ್ ಆವರಣದಲ್ಲಿ ವಾಹನ ನಿಲುಗಡೆ ಮಾಡದಂತೆ ತಕ್ಷಣ ಅವರಿಗೆ ಎಚ್ಚರಿಕೆ ನೀಡಬೇಕೆಂದು ಸಮಾಜ ಸೇವಕ ಕಾಯಕಯೋಗಿ ಚನ್ನಬಸಪ್ಪ ವಿನಂತಿಸಿದ್ದಾರೆ.
✒️

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...