Monday, August 3, 2026
Monday, August 3, 2026
Home Blog Page 11

Canara Bank ಹೊಳಲೂರಿನ ಸಿಬಿಆರ್ ಎಸ್ಇಟಿಐ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಮತ್ತು ಉದ್ಯಮಶೀಲತಾ ಕಾರ್ಯಕ್ರಮ.

0

Canara Bank ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಹೊಳಲೂರು ಇಲ್ಲಿ (MSME) ಮಿನಿಸ್ಟರ್ ಆಫ್ ಮೈಕ್ರೋ ಸ್ಮಾಲ್ ಮೀಡಿಯಂ ಎಂಟರ್ಪ್ರೈಸಸ್ ಇವರ ಸಹಯೋಗದೊಂದಿಗೆ ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಶ್ರೀಯುತ ಸುರೇಶ್ ಡೆಪ್ಟಿ ಡೈರೆಕ್ಟರ್ DD ಜಿಲ್ಲಾ ಕೈಗಾರಿಕಾ ಘಟಕ ಶಿವಮೊಗ್ಗ, ಶ್ರೀಯುತ ಹನುಮಂತಪ್ಪ LDDM ಕೆನರಾ ಬ್ಯಾಂಕ್ RO ಶಿವಮೊಗ್ಗ ಹಾಗೂ ಮಾರುತಿ ದುಬೈ MSME ಕಚೇರಿ ಬೆಂಗಳೂರು, ಶಿವಾನಂದ ರಾಥೋಡ್, ಸಂತೋಷ್ H R ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು ಸುಮಾರು 80 ಜನಕ್ಕೆ ಮೇಲೆ ಫಲಾನುಭವಿಗಳು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ MSME , PMEGP, ಬ್ಯಾಂಕ್ ಹಾಗೂ ಸಾಲ ಸೌಲಭ್ಯಗಳ ಕುರಿತು ಹಾಗೂ ಯಶಸ್ವಿ ಉದ್ಯಮದ ಕುರಿತು ಮಾರ್ಗದರ್ಶನ ನೀಡಲಾಯಿತು

World Environment Day ಜನ್ಮದಿನಾಚರಣೆಗೆ ಕೇಕ್ ಕತ್ತರಿಸಬೇಡಿ.ಒಂದು ಗಿಡ ನೆಡಿ- ಡಾ. ನಾಗರಾಜ್. ‌ಪರಿಸರ

0

World Environment Day ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಸಸಿ ನೆಡಲಾಯಿತು. ವಿದ್ಯಾರ್ಥಿಗಳಿಗೆ ಅರಣ್ಯದ ಪ್ರಾಮುಖ್ಯತೆ, ಗಿಡ ನೆಡುವುದರ ಮಹತ್ವ, ಗಿಡಗಳನ್ನು ಪೋಷಿಸುವ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ಪರಿಸರ ನೀಡಿದರು. ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಬದಲು ಗಿಡ ನೆಡುವ ಮೂಲಕ ಆಚರಿಸಿ ಜೀವ ವೈವಿಧ್ಯ ಸಂರಕ್ಷಣೆಗೆ ಸಹಕರಿಸಿ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ .ಕೃಷ್ಣ ಸ್ವಾಮಿ ವಿದ್ಯಾರ್ಥಿಗಳಿಗೆ ಗಿಡಗಳ ಮಹತ್ವದ ಕುರಿತು ತಿಳಿಸಿದರು. ನಮ್ಮ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸಾಕಷ್ಟು ಗಿಡ ಮರಗಳು ಬೆಳೆದು ಜೀವ ವೈವಿಧ್ಯತೆಯ ತಾಣವಾಗಿ ಮಾರ್ಪಟ್ಟಿರುವುದು ನಮಗೆ World Environment Day ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ಸೋಮಶೇಖರ್, ಪ್ರೊ .ಸಾಯಿಶ್ವರ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ವೃಂದದವರಾದ ಡಾ.ವೆಂಕಟೇಶ್, ಡಾ.ವರುಣ್ ಕುಮಾರ್, ಡಾ.ಪುರುಷೋತ್ತಮ್ ,ಶ್ರೀ ಅನಿಲ್ ಎಸ್, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Breaking News ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ.

Breaking News ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ .
ಪ್ರಧಾನಿ ಮೋದಿಗೆ ಪತ್ರ ರವಾನಿಸಿ ಈ ವಿಷಯವನ್ನ. ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಒಕ್ಕಣಿಕೆಯಲ್ಲಿ
“ಕಳೆದ 10 ದಿನಗಳು ತಮಗೆ ವೈಯಕ್ತಿಕವಾಗಿ ತೀವ್ರ ನೋವುಂಟುಮಾಡಿವೆ ಎಂದಿರುವ ಅವರು, ಯಾವುದೇ ವಿದ್ಯಾರ್ಥಿಯ ಭವಿಷ್ಯವು “ಕಾನೂನು ತೊಡಕುಗಳಲ್ಲಿ ಸಿಲುಕಿಕೊಳ್ಳುವುದನ್ನು” ತಾವು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ಡಿಪ್ಕೆ, “ನಾವು ಯಶಸ್ವಿಯಾಗಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ” ಎಂದು ಹೇಳಿದ್ದಾರೆ

ಸಿಜೆಪಿ ಮತ್ತು ಸರ್ಕಾರದ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯುತ್ತಿರುವಾಗಲೇ ಈ ರಾಜೀನಾಮೆ ಪ್ರಕಟವಾಗಿದೆ; ಧರ್ಮೇಂದ್ರ ಪ್ರಧಾನ್ ಅವರ ನಿರ್ಗಮನವೇ ಈ ಚಳುವಳಿಯ ಪ್ರಮುಖ ಹಾಗೂ ರಾಜಿ ಮಾಡಿಕೊಳ್ಳಲಾಗದ ಬೇಡಿಕೆಯಾಗಿತ್ತು.

Breaking News ಕೇಂದ್ರ ಮಂತ್ರಿಮಂಡಲದಿಂದ
ಧರ್ಮೇಂದ್ರ ಪ್ರಧಾನ್
ಅವರನ್ನು ಸಂಪುಟದಿಂದ ಕಿತ್ತುಹಾಕಿ ಎಂಬುದೇ ವಿಪಕ್ಷನಾಯಕ ರಾಹುಲ್ ಗಾಂಧಿ ಆಗ್ರಹವೂ ಆಗಿತ್ತು.
ಒಂದೊಂದೇ ಕ್ರಮಗಳಿಂದ ವಿದ್ಯಾರ್ಥಿ ಚಳವಳಿಯ ಕಾವು ತಣ್ಣಗಾಗುತ್ತದೆಯೆ ಎಂದು ಕಾದು ನೋಡಬೇಕಿದೆ. ಏಕೆಂದರೆ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಪ್ರತಿಭಟನೆ ಹಿಂದಿನ ಶಕ್ತಿಗಳು ಬೇರೆಯೇ ಆದ ತಂತ್ರ ಹೂಡುತ್ತವೆಯೋ ನೋಡಬೇಕಿದೆ.
ಏನೇ ಆಗಲಿ ನೀಟ್ ಪರೀಕ್ಷೆಯಲ್ಲಿ ನಿರಾಶರಾಗಿ ಅಸು ನೀಗಿದ ವಿದ್ಯಾರ್ಥಿಗಳಿಗೆ ತಕ್ಕ ಪರಿಹಾರ ನೀಡಬೇಕು. ನೀಟ್ ಮುಂಬರುವ ವರ್ಷಗಳಲ್ಲಿ ಸಮಗ್ರ ಪರಿಷ್ಕರಣೆಗೊಳ್ಳಬೇಕು.
ಆಗಲೇ ಚಳವಳಿಗೆ ಸರ್ಕಾರ ಪೂರ್ಣ ಸ್ಪಂದಿಸಿದಂತಾಗುತ್ತದೆ.

Indian Army UHQ ಯು ಹೆಚ್ ಕ್ಯೂ ಕೋಟಾದಡಿ ಅಗ್ನವೀರ್ ನೇಮಕಾತಿಗೆ ಅರ್ಜಿ ಆಹ್ವಾನ.

0

Indian Army UHQ ಯು.ಹೆಚ್.ಕ್ಯೂ. ಕೋಟಾದಡಿಯಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
17 ವರ್ಷ ಆರು ತಿಂಗಳಿಂದ 22 ವರ್ಷದೊಳಗಿನ ವೀರನಾರಿಯರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರುಗಳಿಗೆ ಆ.29 ರಿಂದ ಅ.11 ರವರೆಗೆ ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಟೆಕ್ನಿಕಲ್ ಮತ್ತು ಕ್ರೀಡಾ ಕೋಟಾದಡಿ ನೇಮಕಾತಿ ನಡೆಯಲಿದೆ.
Indian Army UHQ ಆಸಕ್ತರು ಆ. 29 ರಂದು ಬೆಳಗ್ಗೆ 6 ಕ್ಕೆ ಮಿಲ್ಕಾ ಸಿಂಗ್ ಕ್ರೀಡಾಂಗಣ, 1 ಟ್ರೈನಿಂಗ್ ಬೆಟಾಲಿಯನ್, ಇ.ಎಂ.ಇ.ಸೇನಾ ತರಬೇತಿ ಸೆಂಟರ್, ಸಿಕಂದರಾಬಾದ್, ತೆಲಂಗಾಣ ಇಲ್ಲಿ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 04027-863016 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Karnataka State Human Rights Commission ಜುಲೈ 30. ಶಿವಮೊಗ್ಗದಲ್ಲಿ “ಮಾನವ ಕಳ್ಳ ಸಾಗಣೆ ತಡೆ” ದಿನಾಚರಣೆಗೆ ಸಿದ್ಧತೆ.

0

Karnataka State Human Rights Commission ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 30 ರಂದು ನಗರದ ಡಿಎಆರ್ ಪೊಲೀಸ್ ಸಭಾ ಭವನದಲ್ಲಿ ಬೆಳಿಗ್ಗೆ 10.30 ಕ್ಕೆ “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ” ಯನ್ನು ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಸಂತೋಷ್ ಎಂ.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ
Karnataka State Human Rights Commission ಹೇಮಂತ್ ಎನ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ನಟರಾಜ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಬಿ.ಆರ್.,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಮಲ್ಲೇಶಪ್ಪ ಡಿ. ಜಿಲ್ಲಾ ಕಾರ್ಮಿಕ ಅಧಿಕಾರಿ
ವೇಣುಗೋಪಾಲ್ ಎಂ.ಪಿ., ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ
ಆರಕ್ಷಕ ಉಪ ನಿರೀಕ್ಷಕರಾದ ಸಿದ್ಧರಾಮಪ್ಪ ಕೆ. , ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಡ್ ಕಾನ್ಸ್‌ಟೇಬಲ್ ದ ಮಂಜುನಾಥ ಪಾಟೀಲ್ ಉಪನ್ಯಾಸ ನೀಡುವರು.

Shivamoga News ಎಸ್ಐಆರ್ ಪ್ರಕ್ರಿಯೆಯಲ್ಲಿ ಯುವಜನತೆ ಕಡ್ಡಾಯ ಭಾಗವಹಿಸಬೇಕು- ರಂಗಸ್ವಾಮಿ.

0

Shivamoga News ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ತಾಲೂಕು ಆಡಳಿತ, ಪುರಸಭೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂನಲ್ಲಿ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ 2026 ಕಾರ್ಯದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಾಧಿಕಾರಿಗಳಾದ ಶ್ರೀ ರಂಗಸ್ವಾಮಿ ಅವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷವಾದ ಮಹತ್ವವಿದೆ. ಮತದಾರರ ಪಟ್ಟಿಯ ಶುದ್ದಿ ಮಾಡುವ ನಿಟ್ಟಿನಲ್ಲಿ ಎಸ್,ಐ,ಆರ್ (S I R) ಕಾರ್ಯಕ್ರಮ ನಡೆಯುತ್ತಿದ್ದು ಯುವ ಸಮುದಾಯ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು . ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಾಗೂ ತಮ್ಮ ಕುಟುಂಬದ, ಬಂಧು ಬಳಗದ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಬಿ ಎಲ್ ಓ ಗಳಿಗೆ ನೀಡಲು ಸಹಕರಿಸುವಂತೆ ಮನವಿ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜ್ಯಮಟ್ಟದ ಸ್ವೀಪ್ ತರಭೇತುದಾರರಾದ Shivamoga News ನವೀದ್ ಅಹ್ಮದ್ ಪರ್ವೇಶ್ ರವರು ಮಾತನಾಡುತ್ತಾ ಎಸ್ಐಆರ್ ಪ್ರಕ್ರಿಯೆಯು ದಿನಾಂಕ 29-07-2026 ರಿಂದ ಆಗಸ್ಟ್ 8 ರವರೆಗೆ ಜರುಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಗಣತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಭರತ್, ಪರಿಸರ ಅಭಿಯಂತರ ರಾಜಕುಮಾರ್, ಗ್ರೇಡ್ 2 ತಹಶಿಲ್ದಾರ್ ರವಿಕುಮಾರ್ , ಇಂದೂಧರ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರುದ್ರೇಶ್ ರವರು ಹಾಗೂ ನಾರಾಯಣ್‌ ರವರು ವಂದಾನಾರ್ಪಣೆಯನ್ನು ನಡೆಸಿಕೊಟ್ಟರು.

PM Vishwakarma Yojana ‘ಪಿಎಂ’ ವಿಶ್ವಕರ್ಮ ಯೋಜನೆ: ಸಂಸದ ರಾಘವೇಂದ್ರ ಪ್ರಯತ್ನದಿಂದಕರ್ನಾಟಕ ರಾಜ್ಯಕ್ಕೆ ಗರಿಷ್ಠ ಪ್ರಯೋಜನ- ಸಚಿವೆ ಶೋಭಾ ಕರಂದ್ಲಾಜೆ

0

PM Vishwakarma Yojana ‘ರಾಜ್ಯದ ಕುಶಲಕರ್ಮಿಗಳಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಗರಿಷ್ಠ ಕೊಡುಗೆ’ – ಸಂಸದ ಬಿ.ವೈ.ರಾಘವೇಂದ್ರ

ಪಿಎಂ ವಿಶ್ವಕರ್ಮ ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ನಂ.1; ಯೋಜನೆಯಡಿ ರಾಜ್ಯದ 5.72 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ನೆರವು, 794 ಕೋಟಿ ರೂ. ನೇರ ಸಾಲ ವಿತರಣೆ: ಶಿವಮೊಗ್ಗ ಜಿಲ್ಲೆಯ ಕುಶಲಕರ್ಮಿಗಳಿಗೆ 38.63 ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ರೋತ್ಸಾಹ

ಪಿಎಂ ವಿಶ್ವಕರ್ಮ ಯೋಜನೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಸಮಗ್ರ ಮಾಹಿತಿ

ನವದೆಹಲಿ, 23 ಜುಲೈ 2026: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಸಾಂಪ್ರದಾಯಿಕ ಕಲೆ ಹಾಗೂ ಕುಶಲಕರ್ಮಿಗಳ ಜೀವನವನ್ನು ಸಬಲೀಕರಣಗೊಳಿಸಲು ಜಾರಿಗೆ ತಂದಿರುವ ‘ಪಿಎಂ ವಿಶ್ವಕರ್ಮ’ ಯೋಜನೆಯ ಗರಿಷ್ಠ ಪ್ರಯೋಜನ ಕರ್ನಾಟಕ ರಾಜ್ಯಕ್ಕೆ ಲಭಿಸುತ್ತಿದ್ದು, ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಈ ಕುರಿತಂತೆ ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ MSME ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು, ಮಹತ್ವದ ಅಂಕಿ-ಅಂಶಗಳ ಸಹಿತವಾಗಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಪರಿಣಾಮಕಾರಿ ಆಡಳಿತ ಹಾಗೂ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಿಂದಾಗಿ ರಾಜ್ಯದ ಲಕ್ಷಾಂತರ ಸಾಂಪ್ರದಾಯಿಕ ವೃತ್ತಿಪರ ಕುಟುಂಬಗಳು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದು, ಪಿಎಂ ವಿಶ್ವಕರ್ಮ ಯೋಜನೆಯ ಗರಿಷ್ಟ ಲಾಭ ಕನ್ನಡಿಗ ಸಾಂಪ್ರದಾಯಿಕ ಕಸುಬುದಾರರು ಮತ್ತು ಕುಶಲಕರ್ಮಿಗಳಿಗೆ ಸಿಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 16,000ಕ್ಕೂ ಹೆಚ್ಚು ಕುಶಲಕರ್ಮಿಗಳ ನೋಂದಣಿಯಾಗಿದ್ದು, ಸುಮಾರು 38.63 ಕೋಟಿ ರೂ. ಮೊತ್ತದ ಸಾಲದ ನೆರವಿನ ಮೂಲಕ ನಮ್ಮ ಮಲೆನಾಡಿನ ಸಾಂಪ್ರದಾಯಿಕ ಕಸುಬುದಾರರ ಮತ್ತು ಕುಶಲಕರ್ಮಿಗಳ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಪರಿಣಾಮಕಾರಿ ಮೈಲಿಗಲ್ಲನ್ನು ಸಾಧಿಸಲಾಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ.

PM Vishwakarma Yojana ಲೋಕಸಭೆಯಲ್ಲಿ ಸಂಸದ ರಾಘವೇಂದ್ರ ಅವರಿಗೆ ನೀಡಲಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕರ್ನಾಟಕ 5,72,108 ಯಶಸ್ವಿ ನೋಂದಣಿಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 4,89,114 ಕುಶಲಕರ್ಮಿಗಳು ತರಬೇತಿ ಪೂರ್ಣಗೊಳಿಸಿದ್ದು, 3,84,997 ಜನರಿಗೆ ಆಧುನಿಕ ಟೂಲ್‌ಕಿಟ್‌ಗಳನ್ನು ವಿತರಿಸಲಾಗಿದೆ. ಯೋಜನೆಯ ಪ್ರತಿಯೊಂದು ವಿಭಾಗದಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಈ ಯಶಸ್ವಿ ಯೋಜನೆಯ ಗರಿಷ್ಟ ಲಾಭ ರಾಜ್ಯದ ಕುಶಲಕರ್ಮಿಗಳಿಗೆ ಸಿಗುತ್ತಿದೆ. ಇಷ್ಟೇ ಅಲ್ಲದೆ, ಗ್ಯಾರಂಟಿ ರಹಿತ ಸಾಲ ಸೌಲಭ್ಯ ಒದಗಿಸುವಲ್ಲಿಯೂ ರಾಜ್ಯವೇ ಅಗ್ರಸ್ಥಾನದಲ್ಲಿದ್ದು, ಒಟ್ಟು 1,30,750 ಫಲಾನುಭವಿಗಳಿಗೆ 1,034.29 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಇದರಲ್ಲಿ ಈಗಾಗಲೇ 794.15 ಕೋಟಿ ರೂ. ಮೊತ್ತವನ್ನು ನಮ್ಮ ರಾಜ್ಯದ ಕುಶಲಕರ್ಮಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರ ಸತತ ಪರಿಶ್ರಮ ಈ ಮೂಲಕ ಸಾಬೀತಾಗಿದ್ದು, ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ 16,158 ಕುಶಲಕರ್ಮಿಗಳಲ್ಲಿ 14,248 ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಮತ್ತು 10,429 ಮಂದಿ ಉಚಿತ ಟೂಲ್‌ಕಿಟ್‌ಗಳನ್ನು ಪಡೆದುಕೊಂಡಿದ್ದಾರೆ. ಹಣಕಾಸಿನ ನೆರವಿನ ಜೊತೆಗೆ ಸರ್ಕಾರಿ ಇ-ಮಾರುಕಟ್ಟೆ, (GeM), ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮತ್ತು ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮೂಲಕ ಕುಶಲಕರ್ಮಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಹಾಗೂ ಕೇಂದ್ರ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಯ ಸಾಂಪ್ರದಾಯಿಕ ಕಸುಬುದಾರರು ಮತ್ತು ಕುಶಲಕರ್ಮಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Shri Kshetra Dharmasthala Rural Development ಮಹಿಳೆಯರ ಆರ್ಥಿಕ ಸ್ವಾವಲಂಬನೆಯು ದೇಶದ ಅಭಿವೃದ್ಧಿಗೆ ಪೂರಕ- ಡಾ.ಹೆಚ್.ಬಿ.ಮಂಜುನಾಥ್,ದಾವಣಗೆರೆ.

0

Shri Kshetra Dharmasthala Rural Development ದಾವಣಗೆರೆ.ಜು. 24. ಆರ್ಥಿಕ ಶಿಸ್ತು ಮಹಿಳೆಯರಲ್ಲಿ ತುಸು ಹೆಚ್ಚು, ಅನವಶ್ಯಕ ವೆಚ್ಚಗಳ ಬಗ್ಗೆ ಅವರು ಯೋಚಿಸುತ್ತಾರೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

Shri Kshetra Dharmasthala Rural Development ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಅಷ್ಟಲಕ್ಷ್ಮಿ ಪೂಜಾ ಧಾರ್ಮಿಕ ಸಭಾ ಉಪನ್ಯಾಸ ನೀಡುತ್ತಾ ಸಂಪತ್ತಿನೊಂದಿಗೆ ಜ್ಞಾನವೂ ಇದ್ದಲ್ಲಿ ಸದ್ವಿನಿಯೋಗ ಸಾಧ್ಯ, ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಹೆಚ್ಚು ಎಂದು ಹಿರಿಯ ಪತ್ರಕರ್ತ ಎಚ್ಪಿ ಮಂಜುನಾಥ ಹೇಳಿದರು. ಸಂಪತ್ತು ಧನಲಕ್ಷ್ಮಿಯಿಂದ ಬಂದರೆ ಜ್ಞಾನ ವಿದ್ಯಾಲಕ್ಷ್ಮಿ ಇಂದ ಬರಬೇಕು, ಇವು ಕೇವಲ ಪೂಜೆ ಇಂದಷ್ಟೇ ಬರುವುದಲ್ಲ, ಪರಿಶ್ರಮವೂ ಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮಹಿಳೆಯರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಯರ ಸ್ವಾವಲಂಬನೆಗೆ ಹೆಚ್ಚಿನ ಪ್ರೋತ್ಸಾಹ ಮಾಡಿಕೊಡುತ್ತಿರುವುದು ಪ್ರಶಂಸಾರ್ಹ ಹಾಗೂ ಅನುಕರಣೀಯ ಎಂದರು. ಅಷ್ಟಲಕ್ಷ್ಮಿಯರ ಸಾಂಕೇತಿಕ ವಿಶೇಷತೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರುತ್ತಾ ಮಹಿಳೆಯರ ಆರ್ಥಿಕ ಸ್ವಾವಲಂಬನೆಯು ದೇಶದ ಅಭಿವೃದ್ಧಿಗೆ ಪೂರಕ ಎಂದರು.

Shri Kshetra Dharmasthala Rural Development ಯೋಜನಾ ಟ್ರಸ್ಟಿನ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಿ ಪಿ ನಾಗರಾಜ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಸದಸ್ಯ ಹಾಲೇಶ್, ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದಾ ಮಾತನಾಡಿದ ನಂತರ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಅಷ್ಟಲಕ್ಷ್ಮಿಯರ ಪೂಜೆ ಎಂದರೆ ಅಂತಃಸತ್ವವನ್ನು ಗೌರವಿಸುವುದು, ಭಾವ ಶುದ್ಧಿ, ಮನಃಶುದ್ಧಿ ಇದ್ದಲ್ಲಿ ದೇವರು ಒಲಿಯುತ್ತಾರೆ ವಾಸಿಸುತ್ತಾರೆ ಎಂದರು. ಶಶಿಕಲಾ ನಿರೂಪಿಸಿದರೆ ಟ್ರಸ್ಟಿನ ಯೋಜನಾಧಿಕಾರಿ ನವೀನ್ ಸ್ವಾಗತ ಕೋರಿದರು, ತಿಮ್ಮಪ್ಪ ವಂದನೆ ಸಲ್ಲಿಸಿದರು. ಅಶಕ್ತರಿಗೆ ಗಾಲಿ ಕುರ್ಚಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇತನ ವಿತರಿಸಲಾಯಿತು.

ಶಿವಮೊಗ್ಗ ಶರಾವತಿ ನಗರದ ಶ್ರೀವಿಠ್ಠಲ ದೇಗುಲದಲ್ಲಿ ಆಷಾಢ ಏಕಾದಶಿ

0

ಸಂತ ನಾಮದೇವ ಸಿಂಪಿ ಸಮಾಜವು ಶರಾವತಿ ನಗರದ ಶ್ರೀ ವಿಠ್ಠಲ ರಖುಮಾಯಿ ಮಂದಿರದಲ್ಲಿ ದಿನಾಂಕ 25-07-2026 ರ ಶನಿವಾರ “ಆಷಾಢ ಏಕಾದಶಿ” ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ ದೇವರಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಭಜನ್‌, 9-30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1-00 ರವರೆಗೆ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಸಂಜೆ 5-00 ರಿಂದ 7.30 ಘಂಟೆಯವರೆಗೆ ಭಜನೆ, ಸತ್ಸಂಗ, ಸಂತವಾಣಿ, ಪಲ್ಲಕ್ಕಿ ಉತ್ಸವ 8.00 ಘಂಟೆಗೆ ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ಇರುತ್ತದೆ.
ಸಮಾಜ ಬಾಂಧವರು ಹಾಗೂ ಭಕ್ತ ಮಹಾಶಯರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದೇವರ ದರ್ಶನ, ಪ್ರಸಾದ ಪಡೆದು ಪುನೀತರಾಗುವಂತೆ ಶ್ರೀ ನಾಮದೇವ ಸಿಂಪಿ ಸಮಾಜದ ಅ‍ಧ್ಯಕ್ಷ ರಘುನಾಥ್‌ಧಾವಸ್ಕರ್‌ಅವರು ತಿಳಿಸಿದ್ದಾರೆ.

ಜುಲೈ 25 ರಂದು”ಬಾಡದಲ್ಲಿ ಮೂಡಿಬಂದ ಕನಕರ ಹೆಜ್ಜೆ ಗುರುತುಗಳು,”ಸ್ಲೈಡ್ಸ್ ಶೋ

0

ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ಶಿವಮೊಗ್ಗ , ಶ್ರೀಗಂಧ ಸಂಸ್ಥೆ ,ಕರ್ನಾಟಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಜುಲೈ 25 ರ ಶನಿವಾರ “ಬಾಡದ ಮಣ್ಣಿನಲ್ಲಿ ಮೂಡಿದ ಕನಕರ ಹೆಜ್ಜೆ ಗುರುತುಗಳು” ಕುರಿತ ವಿಶೇಷ ಸಾಕ್ಷ್ಯ ದೃಶ್ಯಾವಳಿ ಪ್ರದರ್ಶನ ಏರ್ಪಾಡಾಗಿದೆ.
ಸಂಜೆ 5-3೦ ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಈ ವಿನೂತನ ಕಾರ್ಯಕ್ರಮ ಶಿವಮೊಗ್ಗದ ಇತಿಹಾಸ ಪ್ರಿಯರಿಗೆ ಜ್ಞಾನದ ರಸದೌತಣ ನೀಡಲಿದೆ.

ಸಾಕ್ಷ್ಯ ದೃಶ್ಯಾವಳಿ ಪ್ರದರ್ಶನವನ್ನು (ಸ್ಲೈಡ್ಸ್ ಶೋ) ಇತಿಹಾಸ ಸಂಶೋಧನೆಯ ಹಿರಿಯ ವಿದ್ವಾಂಸ , ವೇದಿಕೆಯ ಅಧ್ಯಕ್ಷ ಡಾ.ಶಾಂತಾರಾಮ ಸಾಮಕ ಅವರು ಸೋದಾಹರಣವಾಗಿ ಪ್ರಸ್ತುತ ಪಡಿಸುವರು.
ಶಿವಮೊಗ್ಗದವರಿಗೆ ಚಿರಪರಿಚಿತರಾಗಿರುವ. ಡಾ.ಶಾಂತಾರಾಮ ಸಾಮಕ ಅವರು ಕರ್ನಾಟಕ ಸರ್ಕಾರದ ಆದೇಶದ ಮೇರೆ ಬಾಡ ಗ್ರಾಮದಲ್ಲಿ
ಈ ಸಂಶೋಧನೆ ಆರಂಭಿಸಿ, ಕನಕದಾಸರ ಅರಮನೆಯನ್ನ ಸ್ಥಳವನ್ನ ಉತ್ಖನನಮಾಡಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜನತೆಗೆ ಇದೊಂದು ಅಪೂರ್ವ ಮತ್ತು ಹೆಮ್ಮೆಪಡುವ ಸಂಗತಿಯಾಗಿದೆ.

ಪುಟ್ಟ ಸಮಾರಂಭದಲ್ಲಿ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಶ್ರೀ ನಾದಮಾಯಾನಂದ ನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು.
ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ,ಮಾಜಿ ಉಪ ಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪನವರು , ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ವಿನಯ್‌ ಉಪಸ್ಥಿತರಿವರು.
ವೇದಿಕೆಯ ಕಾರ್ಯದರ್ಶಿ ದಿಲೀಪ್ ನಾಡಿಗ್ ಮಲೆನಾಡು ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವೇದಿಕೆ ಕೈಗೊಂಡಿರುವ ಚಟುವಟಿಕೆಗಳ ಪರಿಚಯಮಾಡಿಕೊಡುವರು.
ಎಲ್ಲರಿಗೂ ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಮತ್ತು ಶ್ರೀಗಂಧ ಸಂಸ್ಥೆಯ ಉಮೇಶ್ ಆರಾಧ್ಯ ಸುಸ್ವಾಗತ ಕೋರಿದ್ದಾರೆ.