Saturday, December 6, 2025
Saturday, December 6, 2025
Home Blog Page 10

Department of Transport ಸಂಚಾರ ವಾಹನ ದಂಡಶುಲ್ಕ ಪಾವ್ತಿ. ಸಾರಿಗೆ ಇಲಾಖೆ ಪ್ರಕಟಣೆ

0

Department of Transport ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡಾ 50% ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ.

ವಾಹನ ಮಾಲೀಕರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ದಂಡ ಮೊತ್ತದ ಅರ್ಧದಷ್ಟು ಪಾವತಿ ಮಾಡಬಹುದಾಗಿದೆ.

Department of Transport 1991-92 ರಿಂದ 2019-20 ರೊಳಗೆ ಪ್ರಾದೇಶಿಕ ಸಾರಿಗೆ ಕಛೇರಿ (ಆರ್.ಟಿ.ಓ) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ಮಾತ್ರ ಶೇಕಡಾ 50% ರಷ್ಟು ದಂಡ ಪಾವತಿ ರಿಯಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ಅವಧಿಯಲ್ಲಿ 790 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು ಸಂಬಂಧಪಟ್ಟ ವಾಹನ ಮಾಲೀಕರು ಡಿ.12 ರೊಳಗೆ ರಿಯಾಯಿತಿ ಬಳಸಿಕೊಂಡು ದಂಡ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಿ ಕೊಳ್ಳಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರೇಶ್ ಡಿ.ಹೆಚ್.ತಿಳಿಸಿದ್ದಾರೆ.

Shivamogga Youth Hostel ಪ್ರವಾಸಿಗರೇ ಗಮನಿಸಿ, ಯೂತ್ ಹಾಸ್ಟೆಲ್ಸ್ ಸಂಸ್ಥೆಯಿಂದ ಭೂತಾನ್ ಪ್ರವಾಸ

0

ಶಿವಮೊಗ್ಗ ಯೂತ್ ಹಾಸ್ಟೆಲ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ವತಿಯಿಂದ 16.01.2026 ರಿಂದ 23.01.2026 ರ ವರೆಗೆ ಭೂತಾನ್ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.

ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಅದ್ಯತೆ.
ಶುಲ್ಕ; ರೂ 66000.00 ಒಬ್ಬರಿಗೆ
ಬೆಂಗಳೂರು ನಿಂದ ಬಾಗ್ದೋರ ವರೆಗೆ ವಿಮಾನದ ಪ್ರಯಾಣ ನಂತರ ಅಲ್ಲಿಂದ ಭೂತಾನ್ ಗೆ ಬಸ್ ನಲ್ಲಿ ಪ್ರಯಾಣ ಬರುವಾಗ ಕೂಡ ಹೀಗೆ ವ್ಯವಸ್ಥೆ ಇರುತ್ತದೆ.

Shivamogga Youth Hostel ಪಾಸ್ ಪೋರ್ಟ್ ಬೇಡ,
ಹೆಚ್ಚಿನ ಮಾಹಿತಿಗಾಗಿ ಎಸ್.ಎಸ್.ವಾಗೇಶ್ ದೂರವಾಣಿ ನಂಬರ್ 7892548980 ಇವರನ್ನು ಸಂಪರ್ಕಿಸಬಹುದು. ಎಂದು ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.

Bhadravati VISL ಡಿಸೆಂಬರ್ 28.ಭದ್ರಾವತಿ ವಿಐಎಸ್ಎಲ್ ನಿವೃತ್ತ ಉದ್ಯೋಗಿಗಳ ಸಂಘದ ಚುನಾವಣೆ

0

Bhadravati VISL ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಉದ್ಯೋಗಿಗಳ ಕಲ್ಯಾಣ ಕೇಂದ್ರದ ಮುಂದಿನ ಐದು ವರ್ಷ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ಡಿ.28ಕ್ಕೆ ಸಿಲ್ವರ್ ಜ್ಯುಬಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸ್ವೇಡಿಯಂ ಪಕ್ಕ ನ್ಯೂಟೌನ್ ಭದ್ರಾವತಿಯಲ್ಲಿ ನಡೆಸಲು ನ.25ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮಹೇಶ್ವರಪ್ಪ ತಿಳಿಸಿದ್ದಾರೆ.

Bhadravati VISL ಚುನಾವಣಾಧಿಕಾರಿಯಾಗಿ ಎಸ್.ಸುಮಂತ್‌ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ. ಈ ಚುನಾವಣೆಯಲ್ಲಿ ಪ್ರತಿಯೊಬ್ಬ ನಿವೃತ್ತ ಸದಸ್ಯರು ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

S.N.Chennabasappa ಜಿಲ್ಲಾ ಯೋಜನಾ ಸಭೆಯಲ್ಲಿ ಪ್ರಮುಖ ವಿಷಯಗಳನ್ನ ಚರ್ಚಿಸಿದ ಶಾಸಕ ಚನ್ನಬಸಪ್ಪ

0

S.N.Chennabasappa ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2025-26 ನೇ ಸಾಲಿನ ಜಿಲ್ಲಾ ಯೋಜನಾ ಸಮಿತಿ (KDP) ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲ್ಗೊಂಡು, ಶಿವಮೊಗ್ಗ ನಗರದ ಪ್ರಮುಖ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಸವಾಲುಗಳ ಕುರಿತು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಚರ್ಚಿಸಲಾದ ನಿರ್ಣಾಯಕ ವಿಷಯಗಳ ಸಂಕ್ಷಿಪ್ತ ವಿವರಣೆ:

  1. ಶೈಕ್ಷಣಿಕ ಸಮಸ್ಯೆಗಳು ಮತ್ತು ಬೇಡಿಕೆಗಳು:
    ಕಾಲೇಜು ಕಟ್ಟಡ ಸಮಸ್ಯೆ: ಸರ್ಕಾರಿ ಪ್ರಥಮ ದರ್ಜೆ ಬಾಲಕಿಯರ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಜಾಗದ ಸಮಸ್ಯೆಯನ್ನು ಬಗೆಹರಿಸಿ, ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ಶಿಕ್ಷಕರ ಕೊರತೆ: ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿನ ದೈಹಿಕ ಶಿಕ್ಷಕರ ಕೊರತೆಯನ್ನು ತ್ವರಿತವಾಗಿ ಪರಿಹರಿಸುವಂತೆ ಒತ್ತಾಯಿಸಿದರು.

ಕನ್ನಡ ಮಾಧ್ಯಮ ಶಾಲೆಗಳ ರಕ್ಷಣೆ: ಅನುದಾನಿತ ಶಾಲೆಗಳ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

  1. ಕಾನೂನು, ಆರೋಗ್ಯ ಮತ್ತು ಸಮಾಜ ಕಲ್ಯಾಣ:
    ಮಾದಕ ವಸ್ತುಗಳ ಹಾವಳಿ (ಗಾಂಜಾ): ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಮಿತಿಮೀರಿ ಹೆಚ್ಚಾಗಿದ್ದು, ಹದಿಹರೆಯದ ಯುವಕರು ಮಾದಕ ವ್ಯಸನಿಗಳಾಗುತ್ತಿರುವುದರ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಲಾಯಿತು. ಈ ಗಾಂಜಾ ಹಾವಳಿಯನ್ನು ಬುಡ ಸಮೇತ ಕಿತ್ತು ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮೆಗ್ಗಾನ್ ಆಸ್ಪತ್ರೆಯ ಸುಧಾರಣೆ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರ, ಪರಿಣಾಮಕಾರಿ ಉಸ್ತುವಾರಿ ಸಮಿತಿ ಇಲ್ಲದಿರುವುದು ಮತ್ತು ಬಡ ರೋಗಿಗಳಿಗೆ ಎದುರಾಗುತ್ತಿರುವ ಅನಾನುಕೂಲಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನದಟ್ಟು ಮಾಡಲಾಯಿತು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವಂತೆ ಕೋರಿದರು.

S.N.Chennabasappa ಬಿಪಿಎಲ್ ಕಾರ್ಡ್ ಸಮಸ್ಯೆ: ಬ್ಯಾಂಕಿನಿಂದ ಸಾಲ ಪಡೆಯಲು ಐಟಿ ರಿಟರ್ನ್ಸ್ ಸಲ್ಲಿಸಿರುವ ಕಡುಬಡವರ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿರುವುದರಿಂದ ಆಗುತ್ತಿರುವ ತೀವ್ರ ಸಮಸ್ಯೆಗಳ ಕುರಿತು ಗಮನ ಸೆಳೆದು, ತಾತ್ಕಾಲಿಕವಾಗಿ ಕಾರ್ಡ್‌ಗಳನ್ನು ರದ್ದು ಮಾಡದಂತೆ ಸೂಚಿಸುವಂತೆ ಮನವಿ ಮಾಡಿದರು.

  1. ಅಪೂರ್ಣಗೊಂಡ ಕಾಮಗಾರಿ:
    ನಗರದ ಗುಂಡಪ್ಪ ಶೆಡ್ಡಿನಲ್ಲಿ ಬಾಬು ಜಗಜೀವನ್ ರಾಮ್ ನಿಗಮದ ವತಿಯಿಂದ ಅರ್ಧಕ್ಕೆ ನಿಂತಿರುವ ಕಟ್ಟಡ ನಿರ್ಮಾಣ ಕಾಮಗಾರಿಯ ಕುರಿತು ತಕ್ಷಣ ಗಮನಹರಿಸಿ, ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿದರು.

Sharanappa Saladpur ಹೆಚ್ಚುತ್ತಿರುವ ಮಾದಕ ವಸ್ತು ಬಳಕೆ ಗಮನಿಸಿ ಪುನರ್ವಸತಿ ಕೇಂದ್ರಗಳ ಕಾರ್ಯವೈಖರಿ ಬದಲಾಗಬೇಕು- ಶರಣಪ್ಪ ಸಲಾದಪುರ

0

Sharanappa Saladpur ಬೆಂಗಳೂರು ನಗರದ ಮದ್ಯ ಹಾಗೂ ಮಾದಕವಸ್ತುಗಳ ವ್ಯಸನಿಗಳಿಗೆ ಪುನರ್ವಸತಿ ನೀಡುತ್ತಿರುವ ಕೇಂದ್ರಗಳಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ನಗರದ ಪೀಣ್ಯ 2ನೇ ಹಂತದ, ಬಾಲಾಜಿನಗರದಲ್ಲಿರುವ
ಗುಡ್ ಡೇ ಟ್ರಸ್ಟ್ ಹಾಗೂ
ಸುಂಕದಕಟ್ಟೆಯಲ್ಲಿರುವ ಸನ್ ರೈಸ್ ರಿಅಬ್ಲಿಟೇಷನ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ, ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಮೂಲಭೂತ ಸೌಕರ್ಯಗಳು, ಚಿಕಿತ್ಸಾ ವಿಧಾನಗಳು, ತಜ್ಞರ ಲಭ್ಯತೆ, ನಿವಾಸಿ ರೋಗಿಗಳಿಗೆ ದೊರೆಯುವ ಆಹಾರ, ಆರೋಗ್ಯ ಸೇವೆಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ಪಡೆದರು.

Sharanappa Saladpur ಪುನರ್ವಸತಿ ಕೇಂದ್ರಗಳ ಆಡಳಿತಾಧಿಕಾರಿಗಳ ಜೊತೆ ನಡೆಸಿದ ಚರ್ಚೆಯಲ್ಲಿ, ವ್ಯಸನಮುಕ್ತಿಗಾಗಿ ವಿಜ್ಞಾನಾಧಾರಿತ ಸಮಾಲೋಚನಾ ವಿಧಾನ, ಮನೋವೈದ್ಯರ ನಿರಂತರ ಹಾಜರಾತಿ ಹಾಗೂ ಕುಟುಂಬ ಸಲಹಾ ಕಾರ್ಯಕ್ರಮಗಳನ್ನು ಬಲಪಡಿಸಬೇಕು ಹಾಗೂ ರೋಗಿಗಳ ಸುರಕ್ಷತೆ ಮತ್ತು ಮಾನವೀಯ ವರ್ತನೆಗೆ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಮಾದಕವಸ್ತು ಬಳಕೆ ಯುವಜನರಲ್ಲಿ ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿ, ಪುನರ್ವಸತಿ ಕೇಂದ್ರಗಳ ಕಾರ್ಯಪದ್ಧತಿ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ, ಪುನರ್ವಸತಿ ಕೇಂದ್ರಗಳ ಮಾಲೀಕರಾದ ಕಾರ್ತಿಕ್, ಮಣಿ, ಹಾಗೂ ಪದಾಧಿಕಾರಿಗಳಾದ ಕುಶಾಲ್ ಹರುವೇಗೌಡ, ರವಿಕುಮಾರ್, ಶರತ್, ವಿಶ್ವನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Bangalore University ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ‘ಡಿ ಲಿಟ್’ ಪದವಿ ಪ್ರದಾನ

0

Bangalore University ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ 60ನೇ ಘಟಿಕೋತ್ಸವದ ಅಂಗವಾಗಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ನೀಡಲಾಗಿರುವ ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್.) ಗೌರವ ಪದವಿಯನ್ನು ರಾಜಭವನದ ಬಾಂಕ್ವೆಟ್ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.

ನಂತರ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರು “ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್.) ಎಂಬ ಪ್ರತಿಷ್ಠಿತ ಮತ್ತು ಗೌರವಾನ್ವಿತ ಬಿರುದನ್ನು ಪಡೆದಿರುವುದು ನಿಮ್ಮ ವಿದ್ವತ್ತು ಮತ್ತು ಸಮಾಜ, ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳಿಗೆ ದೊರೆತ ಅತ್ಯುನ್ನತ ಮನ್ನಣೆಯಾಗಿದೆ.

ಈ ಪದವಿ ನಿಮ್ಮ ನಿರಂತರ ಕೆಲಸ, ಸೃಜನಶೀಲತೆ ಮತ್ತು ಅತ್ಯುತ್ತಮ ಬೌದ್ಧಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನೀವು ಪ್ರತಿಷ್ಠಿತ ಮತ್ತು ಜನಪ್ರಿಯ ರಾಜಕೀಯ ಕುಟುಂಬದಿಂದ ಬಂದಿದ್ದರೂ, ವೈಯಕ್ತಿಕ ಕೆಲಸ, ಸರಳತೆ ಮತ್ತು ಜನರಲ್ಲಿ ನಿರಂತರ ಸಕ್ರಿಯ ಉಪಸ್ಥಿತಿಯ ಮೂಲಕ ನಿಮ್ಮ ಛಾಪು ಮೂಡಿಸಿದ್ದೀರಿ” ಎಂದು ಹೇಳುವ ಮೂಲಕ ಯು.ಟಿ.ಖಾದರ್ ಅವರನ್ನು ಅಭಿನಂದಿಸಿದರು.

“ವಿದ್ಯಾರ್ಥಿ ದಿನಗಳಿಂದಲೇ, ಯುವ ಸಂಘಟನೆಗಳು ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಸಾರ್ವಜನಿಕ ಜೀವನವನ್ನು ಗುರಿಯಾಗಿಸಿಕೊಂಡು ಮತ್ತು ಕ್ರಮೇಣ ಕರ್ನಾಟಕ ರಾಜಕೀಯದಲ್ಲಿ ಬಲಿಷ್ಠ, ಸೂಕ್ಷ್ಮ ಮತ್ತು ವಿಶ್ವಾಸಾರ್ಹ ನಾಯಕನಾಗಿ ಹೊರಹೊಮ್ಮಿರುವ ಯು.ಟಿ.ಖಾದರ್ ಅವರು, ಸತತವಾಗಿ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಇದು ಸಾರ್ವಜನಿಕರ ನಂಬಿಕೆ ಮತ್ತು ನಿಮ್ಮ ನಿರಂತರ ಸಂಪರ್ಕಕ್ಕೆ ಸಾಕ್ಷಿಯಾಗಿದೆ.

ವಿಧಾನಸಭೆಯ ಸ್ಪೀಕರ್ ಆಗಿ, ಸಂವಾದ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದೀರಿ. ವಿಧಾನಸಭೆಯ ಕಲಾಪಗಳನ್ನು ನಡೆಸುವ ಮೂಲಕ, ಅಭಿಪ್ರಾಯ ವ್ಯತ್ಯಾಸಗಳಿದ್ದರೂ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ನಮ್ಮ ಬದ್ಧತೆ ಯಾವಾಗಲೂ ಅಚಲವಾಗಿರಬೇಕು ಎಂದು ನೀವು ಪ್ರದರ್ಶಿಸಿದ್ದೀರಿ. ಅವರ ವಿವಿಧ ಆಯಾಮಗಳನ್ನು ಮುಟ್ಟಿರುವ ಗಂಭೀರತೆ, ಸೂಕ್ಷ್ಮತೆ ಮತ್ತು ನಾವೀನ್ಯತೆಯು ಖಂಡಿತವಾಗಿಯೂ ಸಮಾಜ, ರಾಜ್ಯ ಮತ್ತು ರಾಷ್ಟ್ರವನ್ನು ಶ್ರೀಮಂತಗೊಳಿಸುತ್ತದೆ” ಎಂದು ಶ್ಲಾಘಿಸಿದರು.

“ಬೆಂಗಳೂರು ವಿಶ್ವವಿದ್ಯಾಲಯವು ನೀಡಿದ ಈ ಗೌರವವು ಖಾದರ್ ಅವರ ವರ್ಷಗಳ ಸಮರ್ಪಿತ ಸಾರ್ವಜನಿಕ ಸೇವೆ, ಆಡಳಿತಾತ್ಮಕ ಸಮಗ್ರತೆ ಮತ್ತು ಬಹುಮುಖಿ ಸಾಮಾಜಿಕ ಕೊಡುಗೆಗಳನ್ನು ಗುರುತಿಸಿ ನೀಡಲಾಗಿದೆ.

Bangalore University ಈ ಡಿ.ಲಿಟ್. ಪದವಿಯು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ, ಸಮರ್ಪಣೆ ಮತ್ತು ಪರಿಶ್ರಮದಿಂದ ಮಾಡಿದ ಕೆಲಸವು ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಈ ಪ್ರತಿಷ್ಠಿತ ಗೌರವಕ್ಕಾಗಿ ಅಭಿನಂದಿಸುತ್ತೇನೆ. ನಿಮ್ಮ ಅನುಭವ ಮತ್ತು ಬುದ್ಧಿವಂತಿಕೆಯು ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುವುದನ್ನು ಮತ್ತು ದೇಶವನ್ನು ಸರ್ವೋಚ್ಚವೆಂದು ಪರಿಗಣಿಸಿ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮಾನ್ಯ ವಿಧಾನಸಭೆ ಸ್ಪೀಕರ್ ಶ್ರೀ ಯು.ಟಿ. ಖಾದರ್ ಫರೀದ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್ ಎಸ್.ಎಂ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶಿವಮೊಗ್ಗ ಸ.ಪ್ರ.ಕಾಲೇಜಿನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಗೆ ವಿಶೇಷ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ 2025-26 ನೇ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಹೆಚ್.ರಸ್ತೆಯ (ಮೀನಾಕ್ಷಿ ಭವನ ಹತ್ತಿರ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಅನುಕಂಪ ಬೇಡಿ ಅವಕಾಶ ಕೊಡಿ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ 1 ರಿಂದ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ /ಅನುದಾನಿತ/ ಅನುದಾನ ರಹಿತ ಶಾಲೆಗಳ ವಿಕಲಚೇತನ ಮಕ್ಕಳು ಭಾಗವಹಿಸುವಂತೆ ಹಾಗೂ ಈ ಕಾರ್ಯಕ್ರಮದಲ್ಲಿ ಸಿಡಬ್ಲ್ಯೂಎಸ್‌ಎನ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಶಿವಮೊಗ್ಗ ತಾಲೂಕು ಬಿ.ಇ.ಓ ರಮೇಶ್ ಮತ್ತು ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ತಿಳಿಸಿದ್ದಾರೆ .

Karnataka Chamber of Commerce and Industry ಹಿರಿಯ ಮಹಿಳಾ ಉದ್ಯಮಿ ಡಾ.ಲಕ್ಷ್ಮೀಗೋಪಿನಾಥ್ ಮತ್ತು ಮಧುಮಿತಾ ಅವರಿಗೆ ಅಭಿನಂದನೆ

0

Karnataka Chamber of Commerce and Industry ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಇತರ ರಾಜ್ಯಗಳಿಂದ ಬಂದ ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದ ಕಾರ್ಯಕ್ರಮಕದಲ್ಲಿ ಸಾಧಕ ಮಹಿಳಾ ಉದ್ಯಮಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಿರ್ದೇಶಕರಾದ ಡಾ.ಲಕ್ಷ್ಮೀದೇವಿ ಗೋಪಿನಾಥ್ ರವರು ಅಸಾಮಾನ್ಯ ಸಾಧನೆ ಮತ್ತು ನಾಯುಕತ್ವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಅಲ್ಲದೆ ಸಂಸ್ಥೆಯ ಮತ್ತೋರ್ವ ನಿರ್ದೇಶಕರಾದ ಎಸ್ ಎಸ್ ಉದಯ ಕುಮಾರ್ ರವರ ಪುತ್ರಿಯಾದ ಸಂಘದ ಸದಸ್ಯರಾದ ಶ್ರೀಮತಿ ಮಧುಮಿತರವರಿಗೆ ಉದಯೋನ್ಮಕ ಯುವ ಉದ್ಯಮಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಇವರಿಬ್ಬರನ್ನು ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವ ಅಧ್ಯಕ್ಷರಾದ ಬಿ ಗೋಪಿನಾಥ್ ರವರು ಹುತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್ ರವರು ತಮ್ಮ ಹೇಳಿಕೆಯಲ್ಲಿ ಸನ್ಮಾನಿತ ಡಾ.ಲಕ್ಷ್ಮೀದೇವಿ ಗೋಪಿನಾಥ್ರವರಿಗೆ ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಮಹಿಳಾ ಉದ್ಯಮಿ ಪ್ರಶಸ್ತಿಯು ಸಹ ದೊರಕಿದೆ.

Karnataka Chamber of Commerce and Industry ಶ್ರೀಮತಿ ಮಧುಮಿತ ರವರು ಹೋಟೆಲ್ ಉದ್ಯಮದಲ್ಲಿ ಅಪಾರ ಯಶಸ್ಸುಗಳಿಸಿದ್ದಾರೆ ಇವರಿಬ್ಬರ ಈ ಸಾಧನೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕಾರ್ಯ ಸಂಘಕ್ಕೆ ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್ ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಪ್ರಶಸ್ತಿ ಪುರಸ್ಕೃತ ಮಹಿಳಾ ಉದ್ಯಮಿಗಳನ್ನು ಅಭಿನಂದಿಸಿದ್ದಾರೆ.

ಕನ್ನಡನಾಡಿನ ಕಂಪು ಎಲ್ಲೆಡೆ ಪಸರಿಸಲಿ- ಶ್ರೀನಾದಮಯಾನಂದನಾಥಶ್ರೀ

0

ಕನ್ನಡ ನಾಡಿನ ಕಂಪು ಎಲ್ಲೆಡೆ ಪಸರಿಸಲಿ ಎಂದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶರಾವತಿ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ನಾಡಗೀತೆಗೆ ನೂರರ ಸಂಭ್ರಮ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಕನ್ನಡ ನಾಡಿನ ಪರಂಪರೆಯ ಹೆಮ್ಮೆಯನ್ನು ಪ್ರತಿಬಿಂಬಿಸುವ ಕುವೆಂಪು ರಚಿಸಿದ ನಾಡಗೀತೆಗೆ ೧೦೦ ವರ್ಷ ತುಂಬಿದ ಸುಸಂದರ್ಭದಲ್ಲಿ ನೂರು ವಿದ್ಯಾರ್ಥಿಗಳ ನೂರು ಕಂಠಗಳ ಸಿರಿಯಿಂದ ಒಕ್ಕೂರಲ ಗಾಯನ ಮಾಡಲಾಯಿತು.
ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆಯನ್ನು ನೀಡಿದ ಮಹಾನ್ ಕವಿಗಳ, ಜ್ಞಾನಪೀಠ ಪ್ರಶಸ್ತಿ ವಿಜೇತರ ವೇಷವನ್ನು ಧರಿಸಿದ ಮಕ್ಕಳೊಂದಿಗೆ ಜಾಥಾ ನಡೆಸಲಾಯಿತು .
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕು. ದಿವ್ಯ ಕರಣಂ, ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಾಗರವು ಅತ್ಯುತ್ತಮ ಶ್ರೀಗಂಧದ ಕೆತ್ತನೆ ಕೌಶಲಕ್ಕೆ ಹೆಸರುವಾಸಿ- ಎನ್.ಹೇಮಂತ್

0

ಶಿವಮೊಗ್ಗ ಜಿಲ್ಲೆಯು ಧಾರ್ಮಿಕ ಪ್ರತಿಮೆಗಳು, ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿದಂತೆ ರೋಸ್ ವುಡ್ ಮತ್ತು ಶ್ರೀಗಂಧದಂತಹ ವಸ್ತುಗಳಿಂದ ಮಾಡಿದ ಸಂಕೀರ್ಣ ಮರದ ಕರಕುಶಲ ವಸ್ತುಗಳು.

ಪ್ರತಿಮೆಗಳು, ದೇವಾಲಯದ ಪ್ರತಿಕೃತಿಗಳ ಸಂಕೀರ್ಣ ಕೆತ್ತನೆಗಳು, ಗೋಡೆಯ ಅಲಂಕಾರಗಳು ಮತ್ತು ಬಾಗಿಲುಗಳು ಸೇರಿದಂತೆ ಪೀಠೋಪಕರಣಗಳು ಅಲಂಕಾರಿಕ ವಸ್ತುಗಳು , ಬಿದಿರಿನ ಕರಕುಶಲ ವಸ್ತುಗಳು , ದೀಪಗಳು, ಗೋಡೆಯ ಅಲಂಕಾರಗಳು ಮತ್ತು ಸುಸ್ಥಿರ ಬಿದಿರಿನಿಂದ ರಚಿಸಲಾದ ಪೀಠೋಪಕರಣಗಳಂತಹ ಕೈಯಿಂದ ಮಾಡಿದ ವಸ್ತುಗಳು ಮೆರುಗೆಣ್ಣೆ ಲೇಪಿತ ಮರದ ಆಟಿಕೆಗಳು ಕಸೂತಿ ಸೀರೆಗಳು ಮತ್ತು ಸಾಂಪ್ರದಾಯಿಕ ವಸ್ತುಗಳು ಸಂಕೀರ್ಣ ಕೆತ್ತನೆ ಕೆಲಸಗಳಿಗೆ ಹೆಸರುವಾಸಿಯಾಗಿದೆ.

ಟೆರಾಕೋಟಾ ಜೇಡಿಮಣ್ಣಿನ ಕಲೆ ವಿಶೇಷವಾಗಿ ಹಾರ್ನಹಳ್ಳಿಯಂತಹ ಹಳ್ಳಿಗಳಿಂದ, ವಿಗ್ರಹಗಳು ಮತ್ತು ಅಲಂಕಾರಿಕ ತುಣುಕುಗಳನ್ನು ಸುಂದರವಾಗಿ ಕರಕುಶಲ ವಸ್ತುಗಳಾಗಿ ತಯಾರಿಸುತ್ತಾರೆ.

ಹಸೆ ಚಿತ್ತಾರವು ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿ ಪ್ರಮುಖವಾಗಿ ಕಂಡುಬರುವ ಜಾನಪದ ಚಿತ್ರಕಲೆಯ ಒಂದು ಶೈಲಿಯಾಗಿದೆ.. ಹಸೆ ಚಿತ್ತಾರ ಕಲೆಯನ್ನು ಗೋಡೆಗಳ ಮೇಲೆ ಮತ್ತು ಬುಟ್ಟಿಗಳ ಮೇಲೆ ತಯಾರಿಸಲಾಗುತ್ತದೆ, ಹಸೆ ತನ್ನ ಸೊಗಸಾದ ಮತ್ತು ಸರಳ ಶೈಲಿಯಿಂದಾಗಿ ಉತ್ಪನ್ನಗಳ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಪ್ರಾಚೀನ ಕಲೆಯಾಗಿದ್ದರೂ, ಆಧುನಿಕ ಅಭಿರುಚಿಗಳು ಮತ್ತು ಜೀವನಶೈಲಿಗೆ ಸರಿಹೊಂದುವಂತೆ ಇದನ್ನು ಮಾರ್ಪಡಿಸಬಹುದು. ಸಾಗರವು ಅತ್ಯುತ್ತಮ ಶ್ರೀಗಂಧದ ಕೆತ್ತನೆಗೆ ಹೆಸರುವಾಸಿಯಾಗಿದೆ ಶ್ರೀಗಂಧದ ಮರವು ಪೂರೈಕೆಯಲ್ಲಿ ಸೀಮಿತವಾದ ಕಚ್ಚಾ ವಸ್ತುವಾಗಿದೆ ಎಂದು ಮಲೆನಾಡಿನ ಕರಕುಶಲ ವಸ್ತುಗಳ ಬಗ್ಗೆ ವಿವರವಾಗಿ ಹೇಮಂತ್ ಎನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು, ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಿಳಿಸಿದರು .