Saturday, December 6, 2025
Saturday, December 6, 2025
Home Blog Page 9

Agricultural irrigation project ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪಡೆಯಲು ಅರ್ಜಿ ಆಹ್ವಾನ

0

Agricultural irrigation project ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯಿಂದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶಿಕಾರಿಪುರ ತಾಲೂಕಿಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೆ ಶೇ. 90 ಸಹಾಯಧನ ಲಭ್ಯವಿರುತ್ತದೆ. ಈಗಾಗಲೇ ಮಳೆಗಾಲ ಮುಕ್ತಾಯವಾಗಿದ್ದು, ಮುಂದಿನ ದಿನಗಳಲ್ಲಿ ಬೇಸಿಗೆ ಹಂಗಾಮು ಪ್ರಾರಂಭವಾಗಲಿರುವುದರಿಂದ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

2018-19 ನೇ ಸಾಲಿನ ಹಿಂದೆ ಹನಿ ನೀರಾವರಿ ಘಟಕ ಅಳವಡಿಸಿಕೊಂಡವರು ಘಟಕ ಹಾಳಾಗಿದ್ದರೆ ಪುನಃ ಹೊಸದಾಗಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುವ ಎಲ್ಲಾ ವರ್ಗದ ರೈತರಿಗೂ ಪುನಃ ಶೇ. 90 ರ ಸಹಾಯಧನ ನೀಡಲು ಅವಕಾಶವಿರುವುದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Agricultural irrigation project ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವುದು. ಅಂಜನಾಪುರ-8861994178, ತಾಳಗುಂದ – 7975515575, ಕಸಬಾ-9113812090, ಉಡುಗಣಿ – 9108548454, ಹೊಸೂರು – 6363095898 ಗಳನ್ನು ಸಂಪರ್ಕಿಸುವುದು.

TRAFFIC POLICE ಸಂಚಾರಿ ವಾಹನ ಶೇ.50 ದಂಡ ಶುಲ್ಕ ರಿಯಾಯಿತಿ. ಸಾಗರ ಸಾರಿಗೆ ಅಧಿಕಾರಿಗಳ ಪ್ರಕಟಣೆ.

0

TRAFFIC POLICE ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡಾ 50% ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ವಾಹನ ಮಾಲೀಕರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬAಧ ದಂಡ ಮೊತ್ತದ ಅರ್ಧದಷ್ಟು ಪಾವತಿ ಮಾಡಬಹುದಾಗಿದೆ.
1991-92 ರಿಂದ 2019-20 ರೊಳಗೆ ಪ್ರಾದೇಶಿಕ ಸಾರಿಗೆ ಕಛೇರಿ (ಆರ್.ಟಿ.ಓ) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ಮಾತ್ರ ಶೇಕಡಾ 50% ರಷ್ಟು ದಂಡ ಪಾವತಿ ರಿಯಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ಅವಧಿಯಲ್ಲಿ TRAFFIC POLICE 790 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು ಸಂಬAಧಪಟ್ಟ ವಾಹನ ಮಾಲೀಕರು ಡಿ.12 ರೊಳಗೆ ರಿಯಾಯಿತಿ ಬಳಸಿಕೊಂಡು ದಂಡ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಿ ಕೊಳ್ಳಬಹುದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರೇಶ್ ಡಿ.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hoysala Bravery Award ಎಂ.ಆರ್.ಮಧು ಗೆ ಹೊಯ್ಸಳ ಶೌರ್ಯ ಪ್ರಶಸ್ತಿ

0

Hoysala Bravery Award 2025-26 ನೇ ಸಾಲಿನಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಯೋಜನೆಯಡಿ 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ” ಶೌರ್ಯ ಪ್ರಶಸ್ತಿಗೆ ಶಿವಮೊಗ್ಗ ನಗರದ ಸಾಗರ ತಾಲೂಕಿನ ಆನಂದಪುರ, ಯಡೆಹಳ್ಳಿಯ ಮಾ|| ಮಧು ಎಂ.ಆರ್. ಇವನಿಗೆ ನ. 28 ರಂದು ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ Hoysala Bravery Award ನಡೆದ ಐ.ಸಿ.ಡಿ.ಎಸ್. ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹೊಯ್ಸಳ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Guarantee scheme ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಅಕ್ಷಯ ಪಾತ್ರೆ- ಹೆಚ್.ಎಂ.ಮಧು.

0

Guarantee scheme ಸರ್ಕಾರದ ಜನಪರ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸರ್ಕಾರ ನೀಡುವ ಪಂಚ ಗ್ಯಾರಂಟಿಗಳು ಬಡವರ ಮತ್ತು ಮಧ್ಯಮ ವರ್ಗದವರ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ಮಧು ಹೇಳಿದರು.
ಶನಿವಾರ ನಗರದ ತಾಲ್ಲೂಕು ಪಂಚಾಯತ್‌ನಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡವರು, ಮಧ್ಯಮ ವರ್ಗದವರು ಹಾಗೂ ಮಹಿಳೆಯರು ಇನ್ನೂ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿವಾಗಿ ಹಿಂದುಳಿದಿದ್ದಾರೆ. ಅವೆಲ್ಲರನ್ನೂ ಸಬಲರನ್ನಾಗಿ ಮಾಡಿ ಸಮಾಜದ ಮುಖ್ಯಭೂಮಿಕೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಪಂಚ ಗ್ಯಾರಂಟಿ ಯೋಜನೆಗಳು ಸಮಪರ್ಕವಾಗಿ ಜಾರಿ ಆಗಿದ್ದು, ಇದರಿಂದ ರಾಜ್ಯದಲ್ಲಿ ಅದೆಷ್ಟೋ ಬಡವರು, ಮಧ್ಯಮ ವರ್ಗದವರು ಹಾಗೂ ಮಹಿಳೆಯರಿಗೆ ಫಲವನ್ನು ಪಡೆದು ನೆಮ್ಮದಿಯಿಂದಿದ್ದಾರೆ. ಇದರಂತೆ ಜಿಲ್ಲೆಯ ತಾಲ್ಲೂಕಿನಲ್ಲೂ ಕೂಡ ತಾಲ್ಲೂಕು ಮಟ್ಟದ ಪ್ರಾಧಿಕಾರದಿಂದ ಇದನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರದ ಜನಪರ ಕಾಳಜಿಯಿಂದ ಹಾಗೂ ಅಭಿವೃದ್ದಿ ಉದ್ದೇಶದಿಂದ ಈಡೇರಿಸಲು ಅಧಿಕಾರಿಗಳ ಒಳಗೊಂಡAತೆ ತಾಲ್ಲೂಕು ಮಟ್ಟದ ಪ್ರಾಧಿಕಾರದ ಸದಸ್ಯರುಗಳು ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದವರೆಗೂ ಮೀಸಲಾಗಿದೆ. ಜನರಿಗೆ ಆದಷ್ಟು ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಆಗ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು
ಅಗಸ್ಟ್-2025 ರ ಮಾಹೆಯಲ್ಲಿ ಜಿಲ್ಲೆಯ 1,07,655 ಫಲಾನುಭವಿಗಳ ಖಾತೆಗೆ ಗೃಹಲಕ್ಷಿö್ಮÃ ಹಣ ಜಮಾ ಮಾಡಲಾಗಿದೆ. ಇನ್ನೂ 2044 ಖಾತೆಗಳು ಐಟಿ/ಜಿಎಸ್‌ಟಿ ಫಲಾನುಭವಿಗಳಿದ್ದು, ಇದರಲ್ಲಿ 304 ಅರ್ಜಿಗಳನ್ನು ಕಚೇರಿ ಸ್ವೀಕರಿಸಲಾಗಿದೆ. ಹಾಗೂ ಎನ್‌ಪಿಸಿಐ ಯಲ್ಲಿ 300 ಫಲಾನುಭವಿಗಳು ಬಾಕಿ ಇದೆ.
ಅನ್ಯಭಾಗ್ಯ ಯೋಜನೆಗೆ ಸಂಬAಧಿಸಿದAತೆ ಸರ್ಕಾರವು ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನೂ ಮುಂದೆ 5 ಕೆಜಿ ಅಕ್ಕಿ ಹಾಗೂ ಇನ್ನೂ 5 ಕೆಜಿ ಅಕ್ಕಿ ಬದಲಾಗಿ ಆಹಾರಧಾನ್ಯಗಳ ಕಿಟ್ ನೀಡಲಿದೆ. ಈ ಯೋಜನೆ ಜನವರಿ-2026 ರಿಂದ ಜಾರಿಯಾಗಲಿದೆ.
Guarantee scheme ಈಗಾಗಲೇ ಸರ್ಕಾರದ ಆದೇಶದಂತೆ ಐಟಿ ಹೊಂದಿರುವ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಬೇಕೆಂದು ಆದೇಶ ಮಾಡಲಾಗಿದ್ದು, ಅದರಂತೆ 1.20 ಲಕ್ಷ ಆದಾಯ ಹೊಂದಿರುವ 1,562 ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ಗಳಾಗಿ ಮಾರ್ಪಾಡು ಮಾಡಲಾಗುತ್ತದೆ. ಇನ್ನೂ 7,716 ಕಾರ್ಡ್ಗಳು ಬಾಕಿ ಉಳಿದಿವೆ. ಹಾಗೂ ಹೊಸ ಪಡಿತರ ಚೀಟಿಗೆ 208 ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಿ ಅನುಮೋದಿಸಲಾಗುತ್ತದೆ.
ಅನ್ನ ಸುವಿಧ ಯೋಜನೆಯಡಿ ಸರ್ಕಾರ 75 ವರ್ಷ ದಾಟಿದ ವ್ಯಕ್ತಿಗಳಿಗೆ ಮನೆಯ ಬಾಗಿಲಿಗೆ ಅಕ್ಕಿಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಪ್ರತಿ ತಿಂಗಳು 6 ರಿಂದ 15 ತಾರೀಖು ಒಳಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕು ಮಟ್ಟದಲ್ಲಿ 7.51 ಕೋಟಿ ವಿದ್ಯುತ್ ಬಳಕೆ ಮಾಡಲಾಗಿದ್ದು, ಸರ್ಕಾರದಿಂದ 6.34ಕೋಟಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ಜುಲೈ-2025 ಮಾಹೆಯವರೆಗೂ 2,95,03,500 ಕೋಟಿ ಹಣವನ್ನು ವಿದ್ಯಾರ್ಹತೆಯನುಸಾರವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 7 ಕೋಟಿ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡಿದ್ದು, ಇದರಿಂದ 276 ಕೋಟಿ ಆದಾಯ ಸರ್ಕಾರ ಖಜಾನೆ ಬಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಸಿಓ ಪರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಶಿವಾನಂದ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಟಿ.ಸಿ ಜಯಪ್ಪ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

S.N.Chennabasappa ಶಿವಮೊಗ್ಗ 30ನೇ ವಾರ್ಡಿನಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ

0

S.N.Chennabasappa ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 30ರ ಸೀಗೆಹಟ್ಟಿಯಲ್ಲಿನ ಕೆಂಚರಾಯನ ಬೀದಿಯಲ್ಲಿ ಯುಜಿಡಿ (Underground Drainage) ಕಾಮಗಾರಿಗೆ ಶಾಸಕರಾದ ಎಸ್. ಎನ್. ಚನ್ನಬಸಪ್ಪ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಯುಜಿಡಿ ಯೋಜನೆಯು ಪ್ರದೇಶದಲ್ಲಿನ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

S.N.Chennabasappa ಈ ಸಂದರ್ಭದಲ್ಲಿ, ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಶಂಕರ್ ಗನ್ನಿ, ಬಿಜೆಪಿಯ ಸ್ಥಳೀಯ ಪ್ರಮುಖರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ಪ್ರಾದೇಶಿಕ ಸಮ್ಮೇಳನದಲ್ಲಿ ಸಂಸ್ಥೆಯ ಸಾಧನೆಗೆ ಪ್ರಶಸ್ತಿ ಸ್ವೀಕರಿಸಿದ ಎನ್.ಜಿ.ಉಷಾ

0

ಪ್ರಾದೇಶಿಕ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಸಂಸ್ಥೆಯ ಅಧ್ಯಕ್ಷರಾದ ಎನ್ ಜಿ ಉಷಾ ಹಾಗೂ ಸದಸ್ಯರು ಸಮಾಜ ಸೇವಾ ಯೋಜನೆಗಳಿಗಾಗಿ ಅತ್ಯುತ್ತಮ ಘಟಕ ಪ್ರಶಸ್ತಿ, ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ, ವಿದ್ಯಾನಿಧಿ ಪ್ರಶಸ್ತಿ ಮತ್ತು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪುರಸ್ಕಾರಗಳನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Usha Multispeciality Hospital ಹದಿಹರೆಯದ ಹೆಣ್ಣುಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ: ಡಾ.ರಕ್ಷಾರಾವ್

0

Usha Multispeciality Hospital ಹೆಣ್ಣುಮಕ್ಕಳಿಗೆ ಶಿಕ್ಷಣದೊಂದಿಗೆ ಬದುಕುವ ಸಾಮರ್ಥ್ಯ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸಬೇಕು ಎಂದು ಉಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್, ಪ್ರಸೂತಿ ಸ್ತ್ರೀರೋಗ ತಜ್ಞೆ ಡಾ.ರಕ್ಷಾರಾವ್ ಹೇಳಿದರು.

ಅವರು ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಹದಿಹರೆಯದ ವಯಸ್ಸಿನ ಸಮಸ್ಯೆಗಳು, ಋತು ಶುಚಿತ್ವ, ಪೋಕ್ಸೋ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸುವುದು ಸಹಜ. ಈ ಅವಧಿಯಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಸಂವಹನ ಮತ್ತು ಭರವಸೆಯ ವಾತಾವರಣದ ಅಗತ್ಯವಿದೆ ಎಂದರು.

ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮ ಇವುಗಳ ಮಹತ್ವವನ್ನು ತಿಳಿಸಿದರು.

ಋತುಶುಚಿತ್ವವನ್ನು ಸರಿಯಾಗಿ ಪಾಲಿಸದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ತಮ್ಮ ಪೋಷಕರ ಜೊತೆಗೆ ಮುಕ್ತವಾಗಿ ಮಾತನಾಡುವ ಮೂಲಕ ಸಲಹೆಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

Usha Multispeciality Hospital ಮಕ್ಕಳ ರಕ್ಷಣೆಯ ಉದ್ದೇಶದಿಂದ ರಚಿಸಲಾದ ಪೋಕ್ಸೋಕಾಯ್ದೆ ಕುರಿತು ಅರ್ಥವಾಗುವ ರೀತಿಯಲ್ಲಿ ಮಕ್ಕಳ ಸುರಕ್ಷತೆಯ ಪ್ರಮುಖ ಅಂಶಗಳನ್ನು ವಿವರಿಸಿದರು
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ದಿವ್ಯ ಕರಣಮ್, ಶಿಕ್ಷಕಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Rotary Jubilee Club ಪರಿಸರ ಉಳಿಸಲು”ಈಶ್ವರ ವನ” ಸ್ಥಾಪಿಸಿದ್ದೇನೆ- ನವ್ಯಶ್ರೀ ನಾಗೇಶ್

0

Rotary Jubilee Club ನಮ್ಮ ದೇಶದ ಪರಿಸರವನ್ನು ಬಗರಹುಕುಂ, ಅಭಿವೃದ್ಧಿ ಹೆಸರಿನಲ್ಲಿ ಬಹಳಷ್ಟು ಹಾನಿಮಾಡುತ್ತಿದ್ದೇವೆ. ಪ್ರಕೃತಿ ಇಲ್ಲದೆ ಮಳೆ ಬೆಳೆ ಇಲ್ಲ. ಮುಂದೆ ಜೀವನ ಸಾಗಿಸುವುದು ಹೇಗೆ? ಆದ್ದರಿಂದ ನನ್ನ ಕೈಲಾದ ಮಟ್ಟಿಗೆ ಪುಟ್ಟ ಪ್ರಯತ್ನದಿಂದ ‘ಈಶ್ವರವನ’ ಸ್ಥಾಪಿಸಿರುವುದಾಗಿ, ರೋಟರಿ ಜ್ಯೂಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ನಾನೇನು ಹೆಚ್ಚು ಓದಿದವನಲ್ಲ, ವಾರನ್ನ ಮಾಡಿಕೊಂಡು ಬೆಳೆದವನು. ಪದವಿ ಪಡೆದು ಕೆಲಸವು ಸಿಕ್ಕಿತ್ತು. ಆದರೆ ನನ್ನದೆ ಸ್ವಂತ ಉದ್ಯೋಗ ಮಾಡಬೇಕೆಂದು ಬಯಸಿ ಚಿಕ್ಕದಾಗಿ ಪ್ರಾರಂಭಿಸಿದ ಉದ್ಯಮ, ಶಿವಮೊಗ್ಗದ ಜನರ ಪ್ರೀತಿಗೆ ಪಾತ್ರರಾಗಿ ಇಂದು ತಕ್ಕಮಟ್ಟಿಗೆ ಉತ್ತಮ ಗಳಿಕೆಕಂಡು ಹಲವರಿಗೆ ಉದ್ಯೋಗ ನೀಡಿದ್ದೇನೆ.

ಸಮಾಜಕ್ಕೆ ಹಲವು ಋಣ ತೀರಿಸುವ ಜವಾಬ್ದಾರಿ ಎಲ್ಲರ ಮೇಲು ಇರುತ್ತದೆ. ಹಿಂದೆ ‘ದೇವರ ವನ’ ಎಂದು ಗಿಡಮರ ಬೆಳೆಸಿ ಪೂಜಿಸುತ್ತಿದ್ದರು. ಅದರಂತೆ ನನ್ನ ದುಡಿಮೆಯಲ್ಲಿ ಸ್ವಲ್ಪ ವ್ಯಯಿಸಿ, ನಶಿಸುತ್ತಿರುವ ಗಿಡಮರಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ.

ಈಗಾಗಲೇ ನೂರೈವತ್ತಕ್ಕಿಂದ ಹೆಚ್ಚಿನ ಗಿಡಗಳನ್ನು ಗುರ್ತಿಸಿ ಬೆಳೆಸುತ್ತಿದ್ದೇನೆ. ಸಾವಿರಾರುಮಕ್ಕಳಿಗೆ ಅವುಗಳ ಪರಿಚಯ ಪ್ರತೀ ವರ್ಷ ಮಾಡಿಸುತ್ತಿದ್ದೇನೆ, ಅವರಿಂದ ಪ್ರಮಾಣಸಹ ಮಾಡಿಸುತ್ತಿದ್ದೇವೆ.

ಇದು ಚಿಕ್ಕ ಪ್ರಯತ್ನ. ಸಾರ್ವಜನಕರಿಗೆ ಪ್ರತಿ ವರ್ಷ ಶಿವರಾತ್ರಿಯಂದು ವಿಶೇಷ ಪೂಜೆ ಏರ್ಪಡಿಸಿ ಸಸ್ಯರಾಶಿಯ ಪರಿಚಯ ಈಶ್ವರನ ಆರಾಧನೆಗೆ ಅವಕಾಶ ಮಾಡಿಕೊಡುತ್ತಿದ್ದೇನೆ.

ಹಲವು ಸಂಘ ಸಂಸ್ಥೆ, ದಾನಿಗಳ ಸಹಕಾರದಿಂದ ಸರ್ಕಾರಿ ಆಸ್ವತ್ರೆಗೆ ಬರುವ ರೋಗಿಗಳ ಸಂಬಂದಿಗಳಗೆ ಪ್ರತಿದಿನ ಉಚಿತ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಅಶ್ವಥ್ ಮಾತನಾಡಿ ಕಷ್ಟದಿಂದ ಓದಿ ಮುಂದೆ ಸ್ವಂತ ಉದ್ಯಮಸ್ಥಾಪಿಸಿ, ಹಲವರಿಗೆ ಬದುಕುನೀಡಿ, ಎಲೆಮರೆ ಕಾಯಿಯಂತೆ ಬೆಳೆದಿ ಇಂದು ನಗರದಲ್ಲಿ ಅತ್ಯುತ್ತಮ ಕಾರ್ಯಮಾಡುತ್ತಿರುವ ನವ್ಯಶ್ರಿನಾಗೇಶ್ ಮನೆ ಮಾತಾಗಿದ್ದಾರೆ.

Rotary Jubilee Club ಅವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರಿದು, ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.

ಭಾರದ್ವಾಜ್ ಸ್ವಾಗತಿಸಿದರು, ಲಕ್ಷ್ಮೀನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು ಲಕ್ಷ್ಮೀನಾರಾಯಣ್ ವಂದಿಸಿದರು.

Akashavani Bhadravati ನಮ್ಮ ತಾಯ್ನುಡಿಯನ್ನ ಗೌರವಿಸಬೇಕು- ಡಾ.ಡಿ.ಆರ್. ಭಾರತೀದೇವಿ

0

Akashavani Bhadravati ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರು ಮತ್ತು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ಸದಸ್ಯರಾದ ಡಾ. ಭಾರತಿದೇವಿ ಡಿ.ಆರ್ ಅವರು ಅನ್ನಕೊಡುವ ಭಾಷೆಯೆಂದು ಬೇರೆ ಭಾಷೆಯನ್ನು ಓಲೈಸದೆ ನಮ್ಮ ತಾಯ್ನುಡಿಯನ್ನ ಗೌರವಿಸಬೇಕು ಹಾಗು ಕರ್ನಾಟಕvದವರೆಲ್ಲರೂ ಒಗ್ಗೂಡಿ ನಾವು ಕನ್ನಡಿಗರೂ ಎನ್ನುವ ಭಾವನೆ ಬೆಳೆಸಿಕೊಳ್ಳಲು ತಿಳಿಸಿದರು.

ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಅವರು ಕನ್ನಡ ನಾಡು ನುಡಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ, ಜ್ಞಾನಪೀಠ ಮತ್ತು ಮುಖ್ಯಮಂತ್ರಿಗಳನ್ನ ನೀಡಿ ಕನ್ನಡದ ಹೋರಾಟದಲ್ಲಿಯೂ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು ಅದನ್ನ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಕೃಷ್ಣಪ್ಪ ರವರು ಹಳ್ಳಿಯಲ್ಲಿ ಹುಟ್ಟಿದರೂ ಇಂಗ್ಲೀಷಿನ ವ್ಯಾಮೋಹವನ್ನ ಬೆಳೆಸಿಕೊಂಡು ಹೋಗುತ್ತಿರುವಾಗ ನಮ್ಮಲ್ಲಿರುವ ಕನ್ನಡದ ಕೀಳಿರೆಮೆಯನ್ನ ಬಿಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಕಾಶವಾಣಿಯ ಕಾರ್ಯಕ್ರಮ, ತಾಂತ್ರಿಕ, ಆಡಳಿತ, ಉದ್ಘೋಷಕವರ್ಗ ಹಾಗು ನಿರ್ಮಾಣ ತಂಡದ ಎಲ್ಲಾ ಸಿಬ್ಬಂದಿಗಳಿಗೆ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಮ್ಯೂಸಿಕಲ್ ಚೇರ್ ಹಾಗು ಅಂತ್ಯಾಕ್ಷರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Akashavani Bhadravati ಎಸ್.ಎಂ.ಸುಧಾಕರ್ ಅವರು ಸ್ವಾಗತಿಸಿ, ಕೇಶವಮೂರ್ತಿಯವರು ವಂದನಾರ್ಪಣೆಯನ್ನು ಸಲ್ಲಿಸಿದರು. ಅರ್ಪಿತಾ ನಾಯುರ್ ನಿರೂಪಣೆ ಮಾಡಿದರು. ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Women and Child Development Department ಡಿಸೆಂಬರ್ 3. ವಿಶ್ವವಿಕಲಚೇತನರ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

0

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಡಿ.3 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ “ ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಲಚೇತನರನ್ನು ಒಳಗೊಂಡ ಸಮಾಜವನ್ನು ರೂಪಿಸುವುದು” ಎಂಬ ಘೋಷವಾಕ್ಯದಡಿ 2025 ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಸಚಿವೆಯಾದ ಲಕ್ಷ್ಮಿ
ಆರ್.ಹೆಬ್ಬಾಳ್ಕರ್, ಭದ್ರಾವತಿ ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ, ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
Women and Child Development Department ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಸಿಬ್ಬಂದಿಗಳು, ವಿವಿಧ ಸಂಘಗಳ ಮುಖ್ಯಸ್ಥರು, ಪದಾಧಿಕಾರಿಗಳು ಪಾಲ್ಗೊಳ್ಳುವರು.