ಶಿವಮೊಗ್ಗನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ ಭಾರಿಯ ಬೇಸಿಗೆ ರಜೆ ನಿಮಿತ್ತ ಮೇ 8ರಿಂದ 13ರವರೆಗೆ ಪ್ರತಿ ದಿನ ಬೆಳಿಗ್ಗೆ 10:30 ರಿಂದ 11:30 ರವರೆಗೆ, ಸಂಜೆ 5ರಿಂದ 6:30ಗಂಟೆವರೆಗೆ ರವೀಂದ್ರನಗರ ದಲ್ಲಿರುವ (ಶ್ರೀನಿವಾಸ ಕೃಪ) ಶಾಖೆಯಲ್ಲಿ ಎರಡು ಬ್ಯಾಚ್‌ಗಳಲ್ಲಿ ಚೆಸ್ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಚೆಸ್ ಆಟವು ಮಾನಸಿಕ ಹಾಗೂ ಬೌದಿಕವಾಗಿ ವಿದ್ಯಾರ್ಥಿಗಳನ್ನು ಸಬಲಿಗೊಳಿಸುವಲ್ಲಿ ಪ್ರಪಂಚದ ಎಲ್ಲಾ ಆಟಗಳಿಗಿಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ಬ್ಯಾಚ್‌ನಲ್ಲಿ 10 ಮಕ್ಕಳಿಗೆ ಮಾತ್ರ ಅವಕಾಶವಿದೆ. ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು ಪ್ರಾಣೇಶ್ ಯಾದವ್ ಮೊ. ೯೨೪೨೪ ೦೧೭೦೨, ೯೭೪೩೮೧೯೬೭೮ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಮೇ 8ರಿಂದ ಯಾದವ ಸ್ಕೂಲ್ ಆಫ್ ಚೆಸ್ ನಿಂದ ಬೇಸಿಗೆ ರಜೆ ಚೆಸ್ ಶಿಬಿರ
ಶಿಕ್ಷಕರೇ..ಮನಬಿಚ್ಚಿ ಪಾಠ ಬೋಧಿಸಿ- ಡಾ.ಕೆ.ಶ್ರೀಪತಿ ಭಟ್ ಹಳಗುಂದ
“ನಾವುಗಳು ಬೋಧಿಸುವ ಪ್ರತೀ ವಿದ್ಯಾರ್ಥಿಯೂ ಈ ದೇಶದ ರಾಷ್ಟ್ರಪತಿಯಾಗುವ ಯೋಗವಿದೆ ಎಂದು ತಿಳಿದು ಬೋಧನೆ ಮಾಡಬೇಕು ಇದು ನಿಮ್ಮಂತಹ ಶಿಕ್ಷಕರಾಗುವವರಿಗೆ ಮಾತ್ರ ಸಾಧ್ಯ ಎಂದು ತಿಳಿಯಬೇಕು. ಯಾರ ಹೃದಯ ಮುಚ್ಚಿಕೊಂಡೆ ಇರುತ್ತದೆಯೋ ಅವರಿಗೆ ಪ್ರಪಂಚವೂ ಮುಚ್ಚಿರುತ್ತದೆ.
ತೆರೆಯಿರಿ ನಿಮ್ಮ ಮನಸ್ಸನ್ನು. ಮನಬಿಚ್ಚಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಶಿಕ್ಷಕರಿಗೆ ಡ್ರೆಸ್ ಕೋಡ್ ಬೇಕೇ ಬೇಕು. ನೋಡಿದ ತಕ್ಷಣ ವಿದ್ಯಾರ್ಥಿಗಳಿಗೆ ಈತ ಶಿಕ್ಷಕ ಎಂದು ಕಾಣಬೇಕು. ಶಿಕ್ಷಣವನ್ನು ನಾವು ದಿನನಿತ್ಯ ಬೇಡಬೇಕು. ಅದು ಓದಿನ ಮೂಲಕ, ಬೋಧನೆಯ ಮೂಲಕ, ಸಾಹಿತ್ಯದ ಮೂಲಕ ಮನವರಿಕೆ ಮಾಡಿಕೊಂಡಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ. ಇದೂ ಒಂದು ನಿಮ್ಮ ದೊಡ್ಡ ಸಾಧನೆ. ನಿಮ್ಮ ಜೀವನದ ತುಂಬಾ ಓದುತ್ತಿರಬೇಕು. ಗೋಪಾಳಕೃಷ್ಣ ಅಡಿಗ, ದ.ರಾ. ಬೇಂದ್ರೆ, ಚಂದ್ರಶೇಖರ ಕಂಬಾರ, ಶಿವರಾಮ ಕಾರಂತ, ಪಂಪ, ರನ್ನ, ಕುಮಾರವ್ಯಾಸ ಇವರುಗಳ ಸಾಹಿತ್ಯವನ್ನು ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದಾಗ ಮಾತ್ರ ಒಳ್ಳೆಯ ಶಿಕ್ಷಕನಾಗಲು ಸಾಧ್ಯ. ತಮ್ಮ ವೃತ್ತಿ ಜೀವನವನ್ನು ಗೌರವಿಸಿ, ಸಂತೋಷಪಡಿ. ಉತ್ತಮ ಶಿಕ್ಷಕರಾಗಿ ಪಾಠ ಮಾಡಿ, ಶಬ್ದ, ವ್ಯಾಕರಣ, ಕವನ, ಕವಿತೆ, ನಾಟಕಗಳನ್ನು ಮನದಟ್ಟಾಗಿ ವಿದ್ಯಾರ್ಥಿಗಳಿಗೆ ಬೋಧಿಸಿ, ಅವರುಗಳು ತಮ್ಮ ಜೀವಮಾನದುದ್ದಕ್ಕೂ ನೆನಪಿಡುತ್ತಾರೆ. ಈ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ರೇಣುಕಪ್ಪ ಗೌಡ, ಪ್ರಭುಸ್ವಾಮಿ ಮಠ್, ಇಂತಹ ಕನ್ನಡ ಶಿಕ್ಷಕರು ಸದಾ ನೆನಪಾಗುತ್ತಾರೆ. ಅವರುಗಳ ಪ್ರೇರಣೆಯಿಂದ ಈಗ ನಾನು ಬೋಧಿಸಿರುವ ಸಾವಿರಾರು ವಿದ್ಯಾರ್ಥಿಗಳು ನನ್ನ ನೆನಪನ್ನು ಮಾಡಿಕೊಳ್ಳುತ್ತಾರೆ. ಎಲ್ಲರೂ ಇತಿಹಾಸವನ್ನು ಓದಬೇಕು. ಇತಿಹಾಸವನ್ನು ಓದದವ ಇತಿಹಾಸವನ್ನು ನಿರ್ಮಿಸಲಾರ ಎಂಬುದನ್ನು ತಿಳಿಯಿರಿ. ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವ ಹೊಣೆ ನಿಮ್ಮ ಮೇಲಿದೆ. ನಿಮ್ಮ ಭವಿಷ್ಯ ಉಜ್ವಲವಾಗಿಲಿ, ಜೀವಂತವಾಗಿರಲಿ ಎಂದು ಎಂದು ಡಾ. ಕೆ. ಶ್ರೀಪತಿ, ಹಳಗುಂದ, ಮುಖ್ಯಸ್ಥರು, ಕನ್ನಡ ವಿಭಾಗ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಇವರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನವು ನಡೆಸುತ್ತಿರುವ ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದ 2025-27ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲು ಪ್ರಾರ್ಥನೆ ಚಿದಂಬರ ಮತ್ತು ಸಂಗಡಿಗರು ಮಾಡಿದರು. ಡಾ. ಶಿಲ್ಪ ವಿ.ಎನ್., ಪ್ರಾಚಾರ್ಯರು, ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಇವರು ಸರ್ವರನ್ನೂ ಸ್ವಾಗತಿಸಿದರು. ಪ್ರಥಮ ವರ್ಷದ ಕು. ಚಿನ್ಮಯ್ ವಿದ್ಯಾರ್ಥಿ
ಕಾರ್ಯದರ್ಶಿ, ಕು. ಅನುಷಾ ಎನ್.ಎಲ್, ಸಹ-ಕಾರ್ಯದರ್ಶಿ ವಿದ್ಯಾರ್ಥಿ ವೇದಿಕೆ ವಾರ್ಷಿಕ ಕ್ರಿಯಾ ಯೋಜನೆಯ ವರದಿಯನ್ನು ಓದಿದರು. ಕು. ಅಂಕಿತಾ, ಸಹ-ಕಾರ್ಯದರ್ಶಿ ಇವರು ಉದ್ಘಾಟಕರ ಪರಿಚಯ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಹೆಚ್.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಎಫ್., ಕೆ.ಎಂ. ಸೂರ್ಯನಾರಾಯಣ, ಉಪಾಧ್ಯಕ್ಷರು ಎಂ.ಡಿ.ಎಫ್., ಕೆ. ವೆಂಕಟೇಶ್, ಕವಲಕೋಡು, ಕೋಶಾಧ್ಯಕ್ಷರು ಎಂ.ಡಿ.ಎಫ್., ನಾಗೇಂದ್ರ, ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿ ಇವರುಗಳು ಉಪಸ್ಥಿತರಿದ್ದರು. ಕಿರಣ ಜಿ.ಎಂ. ದ್ವಿತೀಯ ವರ್ಷದ ಬಿ.ಇಡಿ ವಿದ್ಯಾರ್ಥಿ ಇವರು ಸರ್ವರಿಗೂ ವಂದನಾರ್ಪಣೆ ತಿಳಿಸಿದರು.
ಜಗತ್ತಿಗೆ ಅಹಿಂಸೆ, ಕರುಣೆ ,ಶಾಂತಿ ಸಂದೇಶ ಸಾರಿದ ಮಾನವತಾವಾದಿ ಭಗವಾನ್ ಬುದ್ಧ- ಸಿ.ಎಸ್.ಚಂದ್ರಭೂಪಾಲ್
ಬುದ್ದನನ್ನು ನಮ್ಮೊಳಗೆ ಇಳಿಸಿಕೊಳ್ಳುವ ಇಚ್ಛಾಶಕ್ತಿ ಇರಬೇಕು. ಆಗ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯವಾಗುತ್ತದೆ ಎಂದು
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ್ ನುಡಿದರು.
ಜಿಲ್ಲಾಡಳಿತ, ಜಿ.ಪಂ. ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಬುದ್ದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ದ ಜಗತ್ತಿಗೆ ಅಹಿಂಸೆ, ಕರುಣೆ ಮತ್ತು ಶಾಂತಿಯ ಸಂದೇಶವನ್ನು ಸಾರಿದ ಮಹಾ ಮಾನವತಾವಾದಿ.
ಬದುಕಿಗೆ ಜ್ಞಾನವನ್ನು ನೀಡಿದ ಜ್ಞಾನಿ ಇವರಾಗಿದ್ದು
ಜೀವನದಲ್ಲಿ ಪರಿಶುದ್ದತೆಯನ್ನು ಅಳವಡಿಸಿಕೊಳ್ಳಬೇಕು. ಮನುಷ್ಯ ಮನುಷ್ಯನಾಗಿ ಬದುಕುವ , ಇತರರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕೆಂದು ಸಾರಿದ್ದಾರೆ.
ಇಂತಹ ಬುದ್ದನ ತತ್ವಗಳು ಸರಳವಾಗಿದ್ದು ನಾವೆಲ್ಲ ಅಳವಡಿಸಿಕೊಳ್ಳೋಣವೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿರಿವಂತೆ ‘ಚಿತ್ರಸಿರಿ’ಯ ಚಂದ್ರಶೇಖರ್ ಎನ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 2600 ವರ್ಷಗಳ ಇತಿಹಾಸ ಹೊಂದಿರುವ ಬುದ್ದನ ಕಾಲದಲ್ಲಿ ಲಿಪಿ ಇರಲಿಲ್ಲ. ಸುಮಾರು ಒಂದೂವರೆ ಶತಮಾನಗಳ ನಂತರ ಬಂದ ಪಾಲಿ ಭಾಷೆಯಲ್ಲಿ ಬುದ್ದನ ಇತಿಹಾಸ ಬರೆದಿಡಲಾಗಿದೆ. ಅಂದರೆ ಅಲ್ಲಿಯವರೆಗೆ ಬುದ್ದ ಜನರ ಬಾಯಿಂದ ಬಾಯಿಗೆ, ಜನಪದದ ಮೂಲಕ ಸಾಗಿ ಬರುವುದನ್ನು ಕಾಣಬಹುದಾಗಿದೆ.
ಬುದ್ದ ಎಂದಿಗೂ ರೂಢಿಗತ ಬದುಕನ್ನು ಕಣ್ಣು ಮುಚ್ಚಿ ನಂಬಲಿಲ್ಲ. ಪ್ರತಿಯೊಂದನ್ನು ಪ್ರಶ್ನೆ ಮಾಡುತ್ತಿದ್ದ. ಈ ಗುಣವೇ ಬುದ್ದನನ್ನು ನಮ್ಮವರೆಗೆ ಕರೆ ತಂದಿದೆ. ಈ ಪ್ರಶ್ನೆ ಕೇಳುವ ಗುಣ ಎಲ್ಲರಲ್ಲಿ ಬೆಳೆಯಬೇಕು.
ಬುದ್ದ ಬಾಲ್ಯದಿಂದಲೇ ಹಿಂಸೆಯನ್ನು, ಮನುಷ್ಯ ಮನುಷ್ಯನನ್ನು ಶೋಷಿಸುವುದನ್ನು
ವಿರೋಧಿಸುತ್ತಿದ್ದ. ಸಂಸ್ಕೃತಿಯನ್ನು ಉನ್ನತೀಕರಿಸುವ ತುಡಿತ ಅವನಲ್ಲಿ ಇತ್ತು ಎಂದ ಅವರು ನಾವೆಲ್ಲ ಮಾನಸಿಕ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಬುದ್ಧನು ಅಂದಿನ ಕಾಲದ ಸಾಮಾಜಿಕ ತಾರತಮ್ಯಗಳನ್ನು ಬಲವಾಗಿ ವಿರೋಧಿಸುತ್ತಿದ್ದರು. ಮೇಲು-ಕೀಳು ಎನ್ನುವ ಭೇದಭಾವವಿಲ್ಲದೆ ಎಲ್ಲರಿಗೂ ಧರ್ಮದ ಬಾಗಿಲನ್ನು ತೆರೆಯುತ್ತಾರೆ.
ಮೌಢ್ಯ,ಅಸಮಾನತೆ, ತಾರತಮ್ಯ ಹೋಗಲಾಡಿಸುವ ಮಾರ್ಗೋಪಾಯವಾಗಿ ತನ್ನ ಕಾಲ್ನಡಿಗೆಯ ಮೂಲಕ ಪ್ರಯಾಣ ಮಾಡುತ್ತಾನೆ.
ಹುಟ್ಟು, ಬುದುಕು ಅಂದರೆ ಏನೆಂಬ ಪ್ರಶ್ನೆ ಸದಾ ಅವನಿಗೆ ಕಾಡುತ್ತಿತ್ತು. ಹಾಗೂ ಆಕಸ್ಮಿಕವಾದ ಹುಟ್ಟು ಮತ್ತು ಸಾವು ಸಹ ಬುದ್ದನನ್ನು ಸದಾ ಕಾಡುತ್ತಿತ್ತು.
ಮನುಷ್ಯನ ಆಸೆಗೆ ಮಿತಿ ಇರಬೇಕು ಎನ್ನುತ್ತಾ ಆಸೆಯೇ ದುಃಖಕ್ಕೆ ಮೂಲ ಎಂದು ಸಾರುತ್ತಾನೆ. ಹಾಗೂ ಸಾವಿಲ್ಲದ ಮನೆ ಸಾಸಿವೆ ತರುವ ಪ್ರಸಂಗದ ಮೂಲಕ ದುಃಖ ಸಾರ್ವತ್ರಿಕ ಎಂದು ಸಾರಿದ್ದಾನೆ.
ಇದ್ದದನ್ನು ಇದ್ದ ಹಾಗೆ ಹೇಳಿದ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಬುದ್ದ.
ಇನ್ನೊಬ್ಬರನ್ನು ಅರ್ಥ ಮಾಡಕೊಳ್ಳುವ ಗುಣ, ನಮ್ಮ ನಮ್ಮೊಳಗೇ ಮಾನಸಿಕ ಹಿಂಸೆ ಕೊಟ್ಟುಕೊಳ್ಳುವುದನ್ನು ಬಿಡಬೇಕು.
ದಾನ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಅಂದೇ ಸಾರಿದ್ದರು. ವೈಚಾರಿಕ ಚಿಂತನೆ ಬೆಳಿಸಿಕೊಳ್ಳಬೇಕು. ಅದಕ್ಕಾಗಿ ನಾವು ಅಧ್ಯಯನ ಶೀಲರಾಗಬೇಕು ಎಂದಿದ್ದರು ಎಂದ ಅವರು ಬುದ್ದ ಸೂಕ್ಷ್ಮವಾಗಿ ಜೀವನದ ಎಲ್ಲ ಅಂಶಗಳನ್ನು ತಿಳಿಸಿದ್ದು, ನಾವು ನಮ್ಮೊಳಗೆ ಬುದ್ದನನ್ನು ಇಳಿಸಿಕೊಂಡರೆ ಎಲ್ಲವೂ ಅರ್ಥ ಆಗುತ್ತದೆ ಎಂದು ತಿಳಿಸಿದರು.
ಬುದ್ದ ಧರ್ಮಾಂಕುರ ಟ್ರಸ್ಟ್ ಅಧ್ಯಕ್ಷರಾದ ಪ್ರೊ.ರಾಚಪ್ಪ ಬುದ್ದ ವಂದನೆ ನೆರವೇರಿಸಿಕೊಟ್ಟರು. ನೀಲಪ್ಪರವರು ಬುದ್ದ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಲಿಂಗರಾಜ್ ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಹಾಗೂ ಮುಖಂಡರು ಹಾಜರಿದ್ದರು.
Shivamogga District Police ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಡ್ರೋನ್ ಮೂಲಕ ಪತ್ತೆ. ಮೂವರ ಬಂಧನ.
Shivamogga District Police ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಡ್ರೋಣ್ ಕ್ಯಾಮೆರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಹೊರ ವಲಯದಲ್ಲಿ ಡ್ರೋಣ್ ಹಾರಿಸಿದಾಗ ಕೆಲವು ಜನರು ಕೋಟೆಗಂಗೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಧ್ಯಪಾನ ಮಾಡುತ್ತಿದ್ದ 1) ಸಂದೀಪ್, 2) ಶಿವನೇಶ ಕುಮಾರ, ಮತ್ತು 3) ಮೇಘರಾಜ್ ರವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ.
Karnataka State Backward Classes Welfare Department ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
Karnataka State Backward Classes Welfare Department ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಬೆಳಗಾವಿ ಜಿಲ್ಲೆಯ ಇಲಾಖಾ ಸೇವಾ ಆಯ್ಕೆ ಪೂರ್ವ ತರಬೇತಿ ಶಾಲೆಗಳಲ್ಲಿ ಆಯೋಜಿಸಿದ್ದ ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2026-27ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗೆ ಆರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 13 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0820-2574881/08182-222129 ಗಳನ್ನು ಸಂಪರ್ಕಿಸುವುದು.
B.Y. Raghavendra ಶಂಕರಘಟ್ಟದ ಕಾಲೇಜಿನ ವಿದ್ಯಾರ್ಥಿಗಳ ಪ್ರವಾಸಿ ಬಸ್ ಅಪಘಾತದಲ್ಲಿ ಈರ್ವರ ಸಾವು : ಸಂಸದ ರಾಘವೇಂದ್ರ ಸಂತಾಪ
B.Y. Raghavendra ಕುಂದಾಪುರ ತಾಲ್ಲೂಕಿನ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಖಾಸಗಿ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದ ಸುದ್ದಿ ಕೇಳಿ ಮನಸ್ಸಿಗೆ ಆಘಾತ ಮತ್ತು ನೋವುಂಟಾಗಿದೆ ಎಂದು ಬಿ.ವೈ.ರಾಘವೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.
ಈ ದುರ್ಘಟನೆಯಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ರಂಭಾಪುರಿ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಾಂತರ ಸಂಭವಿಸಿರುವುದು ದುರದೃಷ್ಟಕರ. ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
B.Y. Raghavendra ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಲು ಸ್ಥಳೀಯ ಆಡಳಿತ ಮತ್ತು ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ. ರಕ್ಷಣಾ ಕಾರ್ಯದಲ್ಲಿ ಶ್ರಮಿಸಿದ ಅಂಬ್ಯುಲೆನ್ಸ್ ತಂಡ ಹಾಗೂ ಸ್ಥಳೀಯ ಪೊಲೀಸರ ಕಾರ್ಯ ಶ್ಲಾಘನೀಯ. ಪ್ರವಾಸಿಗರು ಮತ್ತು ವಾಹನ ಸವಾರರು ಹೆದ್ದಾರಿಗಳಲ್ಲಿ ಸಂಚರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಈ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
S.N. Channabasappa ನಗರದ ಬಡಾವಣೆಗಳಲ್ಲಿನ ಚರಂಡಿ ಸಮಸ್ಯೆ ತ್ವರಿತ ಬಗೆಹರಿಸಿ- ಶಾಸಕ ಎಸ್.ಎನ್.ಚನ್ನಬಸಪ್ಪ
S.N. Channabasappa ಶಿವಮೊಗ್ಗ ನಗರದ ಬಡಾವಣೆಗಳಲ್ಲಿನ ಚರಂಡಿ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು,” ಎಂದು ಶಿವಮೊಗ್ಗ ನಗರ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದರು.
ಇಂದು ವಾರ್ಡ್ ಸಂಖ್ಯೆ 8ರ ವಿನೋಬನಗರ ಬಡಾವಣೆಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬಡಾವಣೆಯ ನಿವಾಸಿಗಳು ಡ್ರೈನೇಜ್ ಸಮಸ್ಯೆಯಿಂದ ಎದುರಿಸುತ್ತಿರುವ ತೊಂದರೆಯನ್ನು ಶಾಸಕರ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರು, ಸ್ಥಳದಲ್ಲಿದ್ದ ಪಾಲಿಕೆ ಇಂಜಿನಿಯರ್‌ಗಳಿಗೆ ಸಮಸ್ಯೆಗಳನ್ನು ಶೀಘ್ರವೇ ಸರಿಪಡಿಸಲು ಆದೇಶಿಸಿದರು.
S.N. Channabasappa ಜನಸಂಪರ್ಕದ ಮೂಲಕ ಜನರ ಸಮಸ್ಯೆಗಳನ್ನು ನೇರವಾಗಿ ತಿಳಿದು ಪರಿಹರಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಈ ವೇಳೆ ಪಾಲಿಕೆ ಅಧಿಕಾರಿಗಳು ಹಾಗೂ ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.
ಮೇ 1 ಮತ್ತು 2 ಶಿವಮೊಗ್ಗದ ಅಶ್ವಥ್ ನಗರ,ಕೀರ್ತಿ ನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ ಮೆಸ್ಕಾಂ ಪ್ರಕಟಣೆ
ತಾವರೆಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 01 ಮತ್ತು 02 ರಂದು ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆವರೆಗೆ ಈ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಅಶ್ವತ್‌ನಗರ, ಕೀರ್ತಿನಗರ, ದೇವಂಗಿ 1 ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್‌ಮಿಲ್, ಸೇವಾಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್‌ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯು.ಜಿ.ಡಿ ಪ್ಲಾಂಟ್, ಗುಂಡಪ್ಪ ಶೆಡ್ ಯು.ಜಿ.ಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಬೊಮ್ಮನಕಟ್ಟೆ ಎ ಯಿಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಜೆ.ಎನ್.ಸಿ.ಸಿ ಇಂಜಿನಿಯರಿಂಗ್ ಕಾಲೇಜ್, ಅಕ್ಷರನಗರ, ಕೃಷಿಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ ಕೆಳಗಿನ ತಾಂಡ/ಮೇಲಿನ ತಾಂಡ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೇಸ್, ಕೊಮ್ಮನಾಳು. ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕೃಷರ್‌ಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು ವಿದ್ಯುತ್ ಗ್ರಾಹಕರು ಮೆಸ್ಕಾಂ ನೊಂದಿಗೆ ಸಹಕರಿಸಬೇಕು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮೇ 31 ವರೆಗೆ ಲಿಡ್ಕರ್ ಉತ್ಪನ್ನಗಳ ಮೇಲೆ ಶೇ.15 ,ರಿಯಾಯಿತಿ ಮಾರಾಟ
ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಶಿವಮೊಗ್ಗದ ನೆಹರೂ ರಸ್ತೆ, ಬಸವ ಸದನ ಕಾಂಪ್ಲೆಕ್ಸ್ ನಲ್ಲಿನ ಲಿಡಕರ್ ಮಾರಾಟ ಮಳಿಗೆಯಲ್ಲಿ ಕಾರ್ಮಿಕ ದಿನಾಚರಣೆ ಹಾಗೂ ಬಕ್ರಿದ್ ಹಬ್ಬದ ಪ್ರಯುಕ್ತ ಮೇ 31ರವರೆಗೆ ಎಲ್ಲಾ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ. 15% ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಲಿಡಕರ್ ವ್ಯವಸ್ಥಾಪಕರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9141304210 ನ್ನು ಸಂಪರ್ಕಿಸುವುದು.
ಮೇ 1 ಮತ್ತು 2. ಶಿವಮೊಗ್ಗದ ಅಶ್ವಥ್ ನಗರ,ಕೀರ್ತಿ ನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ ಮೆಸ್ಕಾಂ ಪ್ರಕಟಣೆ
ತಾವರೆಚಟ್ನಹಳ್ಳಿ ವಿ ವಿ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 01 ಮತ್ತು 02 ರಂದು ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆವರೆಗೆ ಈ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಅಶ್ವತ್‌ನಗರ, ಕೀರ್ತಿನಗರ, ದೇವಂಗಿ 1 ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್‌ಮಿಲ್, ಸೇವಾಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್‌ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯು.ಜಿ.ಡಿ ಪ್ಲಾಂಟ್, ಗುಂಡಪ್ಪ ಶೆಡ್ ಯು.ಜಿ.ಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಬೊಮ್ಮನಕಟ್ಟೆ ಎ ಯಿಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಜೆ.ಎನ್.ಸಿ.ಸಿ ಇಂಜಿನಿಯರಿಂಗ್ ಕಾಲೇಜ್, ಅಕ್ಷರನಗರ, ಕೃಷಿಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ ಕೆಳಗಿನ ತಾಂಡ/ಮೇಲಿನ ತಾಂಡ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೇಸ್, ಕೊಮ್ಮನಾಳು. ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕೃಷರ್‌ಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದ್ದು ವಿದ್ಯುತ್ ಗ್ರಾಹಕರು ಮೆಸ್ಕಾಂ ನೊಂದಿಗೆ ಸಹಕರಿಸಬೇಕು ಮೆಸ್ಕಾಂ ತಿಳಿಸಿದೆ.
