ಆಟೋ ಕಾಂಪ್ಲೆಕ್ಸ್ ನ ಮಾಲೀಕರ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಚಿನ್ನಪ್ಪನವರ ಅಧ್ಯಕ್ಷತೆಯಲ್ಲಿ
ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಆಟೋ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಮಿಕರಗಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಚಿನ್ನಪ್ಪನವರು ಮಾತನಾಡುತ್ತ ಪ್ರತಿ ವರ್ಷ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನ ಗುರುತಿಸಿ ನಮ್ಮ ಸಂಸ್ಥೆಯಿಂದ ಗೌರವಿಸುತ್ತಾ ಬಂದಿದ್ದೇವೆ ಹಾಗೆ ಕಾರ್ಮಿಕರಿಗೆ ನ್ಯಾಯ ಬದ್ಧವಾಗಿ ಸಿಗುವ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ಸಿಗಲಿ ಎಂದು ನುಡಿದರು ಹಾಗೆ ಆಟೋ ಕಾಂಪ್ಲೆಕ್ಸ್ ನ ಹಲವಾರು ಸಮಸ್ಯೆಗಳಿಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದು ನುಡಿದರು. ಗೌರವಾಧ್ಯಕ್ಷರಾದ ದಯಾನಂದ್ರವರು ಉಪಾಧ್ಯಕ್ಷರಾದ ಜಾರ್ಜ್ ಕುರಿಯನ್. ಸಂಘದ ಕಾರ್ಯದರ್ಶಿಯಾದ ಎಂಬಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಪಿ ವೆಂಕಟೇಶ್, ಖಜಾಂಚಿ ವಿ ವೆಂಕಟೇಶ್ ಹಾಗೂ ಸದಸ್ಯರಾದ ಪ್ರಕಾಶ್ ಅಣ್ಣಪ್ಪ ,ಮಾಲ್ತೇಶ್ ರಮೇಶ್ ಬಾಬು ಅಂತೋನಿ ರಾಜ್ ಹಿದಾಯತ್ ಖಾನ್ ಉಪಸ್ಥಿತರಿದ್ದರು.
✒️
ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತರುವ ಕಾರ್ಮಿಕರನ್ನ ಗುರುತಿಸಿ, ಗೌರವಿಸುತ್ತಿದ್ದೇವೆ: ಚಿನ್ನಪ್ಪ
Shivamogga District Industrial Training and Employment Department ಕಾರ್ಗಲ್ ಸರ್ಕಾರಿ ಐಟಿಐ ಗೆ ವಿವಿಧ ವೃತ್ತಿಗಳಿಗೆ ಎನ್ಸಿವಿಟಿ ಯೋಜನೆಯಡಿ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ
Shivamogga District Industrial Training and Employment Department ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಸಾಗರ ತಾಲೂಕು ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ವಿವಿಧ ವೃತ್ತಿಗಳಿಗೆ 2026-27ನೇ ಸಾಲಿನ ಎನ್.ಸಿ.ವಿ.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ./ಪಿ.ಯು.ಸಿ./ ಪದವಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ವೆಬ್‌ಸೈಟ್ www.cite.karnataka.gov.in ಮೂಲಕ ಮೇ 09 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಚಾರ್ಯರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08186-200221/ 9448315128/ 8217882239 ಗಳನ್ನು ಸಂಪರ್ಕಿಸುವುದು.
ಮಕ್ಕಳ ಆಧಾರ್ ಸಂಖ್ಯೆಗೆ ಬಯೋಮೆಟ್ರಿಕ್ ಕಡ್ಡಾಯ- ವಿ.ಅಭಿಷೇಕ್
ಶಿವಮೊಗ್ಗ ಜಿಲ್ಲೆಯ ಎಲ್ಲಾ 5 ರಿಂದ 7 ಹಾಗೂ 15 ರಿಂದ 17 ರ ವಯೋಮಿತಿಯ ಮಕ್ಕಳ ಆಧಾರ್ ಸಂಖ್ಯೆಗೆ ಬಯೋಮೆಟ್ರಿಕ್ ನವೀಕರಣ ಮಾಡುವುದು ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆ. 30 ರವರೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಿಸಿಕೊಳ್ಳಬಹುದಾಗಿದೆ. ಇದರಿಂದ ಮಕ್ಕಳ ಶಾಲೆಯ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರದ ವಿವಿಧ ಯೋಜನೆಗಳು, ವಿಧ್ಯಾರ್ಥಿ ವೇತನ, ತರಬೇತಿಗಳು ಸೇರಿದಂತೆ ಇತ್ಯಾದಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ. ಪೋಷಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಯನ್ನು ಸಕಾಲದಲ್ಲಿ ತಲುಪಿಸುವಲ್ಲಿ ಸಹಕರಿಸುವಂತೆ ಅವರು ತಿಳಿಸಿದ್ದಾರೆ.
B.Y. Raghavendra ಸಹಕಾರ ಕ್ಷೇತ್ರವು ದೇಶದ ಬೆನ್ನೆಲುಬು- ಬಿ.ವೈ.ರಾಘವೇಂದ್ರ
B.Y. Raghavendra ಬಿನಾ ಸಂಸ್ಕಾರ್ ನಹೀ ಸಹಕಾರ್ – ಬಿನಾ ಸಹಕಾರ್ ನಹೀ ಉದ್ಧಾರ್” ಎಂಬ ಧ್ಯೇಯವಾಕ್ಯದೊಂದಿಗೆ, ಸಹಕಾರ ಭಾರತಿ ಶಿಕಾರಿಪುರ ತಾಲ್ಲೂಕು ವತಿಯಿಂದ ಆಯೋಜಿಸಲಾಗಿದ್ದ ‘ತಾಲ್ಲೂಕು ಅಭ್ಯಾಸ ವರ್ಗ’ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಶಿಕಾರಿಪುರದ ಕುಮುದ್ವತಿ ಆಡಿಟೋರಿಯಂನಲ್ಲಿ ಉದ್ಘಾಟಿಸಿದರು.
B.Y. Raghavendra ಸಹಕಾರ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಸ್ಕೃತಿ ಮತ್ತು ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ನೀಡುವುದು ಅತ್ಯಗತ್ಯ. ಈ ಅಭ್ಯಾಸ ವರ್ಗವು ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ತಮ್ಮ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಅರಿಯಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ರಾಘವೇಂದ್ರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದರು.
Karnataka Yakshagana Academy ಶೃಂಗೇರಿಯಲ್ಲಿ ಮೇ4 ರಂದು ಯಕ್ಷಗಾನ ಉತ್ಸವ
Karnataka Yakshagana Academy ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ಇವರು ಪ್ರದರ್ಶನ ಕಲೆಗಳ ಸಂವರ್ಧನೆ ಮತ್ತು ಸಂರಕ್ಷಣೆ ಉದ್ದೇಶದಿಂದ ಮಲೆನಾಡು ಮತ್ತು ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಯಕ್ಷಗಾನ ಉತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ.
ಈ ಟ್ರಸ್ಟ್ ನ ಮತ್ತು ಉತ್ಸವದ ರೂವಾರಿ , ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ರಮೇಶ್ ಬೇಗಾರ್ ಇವರ ಸಾಂಸ್ಕೃತಿಕ ಪಯಣ ದ 40 ನೇ ವರ್ಷದ ಈ ಯಕ್ಷಗಾನ ಉತ್ಸವವು 2026 ರ ಮೇ 4 ರ ಸೋಮವಾರದಂದು ಶೃಂಗೇರಿ ಮಾನುಗಾರಿನಲ್ಲಿರುವ ಜ್ಞಾನಭಾರತೀ ಶಾಲಾ ಮೈದಾನದಲ್ಲಿ ರಾತ್ರಿ 7 ರಿಂದ ಆಯೋಜಿಸಲಾಗಿದೆ.
Karnataka Yakshagana Academy ಬಡಗುತಿಟ್ಟಿನ ಪ್ರಸಿದ್ದ ವೃತ್ತಿಪರ ಯಕ್ಷಗಾನ ತಂಡವಾದ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪೆರ್ಡೂರು ಇವರು ಪೌಂಡ್ರಕ ವಾಸುದೇವ, ಲಂಕಾ ದಹನ ಮತ್ತು ಕಾರ್ತವೀರ್ಯ – ರಾವಣ ಕಾಳಗ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಪ್ರದರ್ಶನದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಪೌಂಡ್ರಕ ವಾಸುದೇವ ನ ಪಾತ್ರವನ್ನೂ, ನಿಲ್ಕೋಡು ಶಂಕರ ಹೆಗ್ಡೆ ಹನುಮಂತ ನ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಈ ಪ್ರದರ್ಶನ ದಲ್ಲಿ ಬಾಳ್ಕಲ್ ಪ್ರಸನ್ನ ಭಟ್, ಯಲಗುಪ್ಪ ಸುಬ್ರಮಣ್ಯ, ಚಂದ್ರಹಾಸ ಗೌಡ ಹೊಸ ಪಟ್ಟಣ , ಕಾರ್ತಿಕ್ ಚಿಟ್ಟಾಣಿ ಮೊದಲಾದ ಪ್ರತಿಭಾವಂತ ಕಲಾವಿದರ ದಂಡು ಈ ಪ್ರದರ್ಶನದಲ್ಲಿ ಪೌರಾಣಿಕ ವೈಭವ ವನ್ನು ರಂಗಕ್ಕೆ ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ರಮೇಶ್ ಬೇಗಾರ್ ಇವರನ್ನು 9448101708 ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.
Canara Bank Deshpande Orset Training Institute ಮೊಬೈಲ್ ಫೋನ್ ರಿಪೇರಿ ಉಚಿತ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನ
Canara Bank Deshpande Orset Training Institute ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 2026 ರ ಮೇ ತಿಂಗಳ ಕೊನೆಯ ವಾರದಲ್ಲಿ “ಮೊಬೈಲ್ ಫೋನ್ ರಿಪೇರಿ ಮತ್ತು ಸರ್ವಿಸ್” ತರಬೇತಿ ಆಯೋಜಿಸಲಾಗಿದ್ದು, 18 ರಿಂದ 45 ವರ್ಷ ವಯೋಮಿತಿಯ ಗ್ರಾಮೀಣ ಭಾಗದ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮೊಬೈಲ್ ಫೋನ್ ಗಳ ಮೂಲಭೂತ ಜ್ಞಾನ, ಹಾರ್ಡ್ ವೇರ್ ಮತ್ತು ಸಾಫ್ಟ್ವೇರ್ ರಿಪೇರಿ, ದೋಷ ಪತ್ತೆ, ಉಪಕರಣಗಳ ಬಳಕೆ, ಗ್ರಾಹಕ ಸೇವಾ ಕೌಶಲ್ಯಗಳು ಮತ್ತು ಸಣ್ಣ ಉದ್ಯಮ ಆರಂಭಿಸುವ ವಿಧಾನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡುತ್ತಾರೆ. ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ತರಬೇತಿ ಪೂರ್ಣಗೊಂಡ ನಂತರ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಮತ್ತು ಮಾರ್ಗದರ್ಶನ ನೀಡಲಾಗುವುದು.
ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು. ಅದನ್ನು ಫೋಟೋ ತೆಗೆದು ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಕರೆ ಮಾಡಿ ಹೆಸರು ನೋಂದಣಿ ಮಾಡಬಹುದು.
ಜಾಲತಾಣ www.rsetihaliyal.org ಅರ್ಜಿ ಸಲ್ಲಿಸಬಹುದು / CBD RSETI Haliyal ವಾಟ್ಸಾಪ್ ಚಾನಲ್ ನಲ್ಲಿರುವ ಲಿಂಕ್ https://forms.gle/m4pcmpritDevbwug9 ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯು ತಿಳಿಸಿದೆ .
Canara Bank Deshpande Orset Training Institute ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ನಿರ್ದೇಶಕರು, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ, ಮೊ. ಸಂ : 9483485489/8970145354 ಗಳನ್ನು ಸಂಪರ್ಕಿಸುವುದು.
Kuvempu University ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ,/ಬಿಸಿಎ ಪದವಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ
Kuvempu University ಕುವೆಂಪು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ 2026-27ನೇ ಸಾಲಿಗೆ ಪ್ರಥಮ ಬಿ.ಎಸ್ಸಿ./ಬಿ.ಸಿ.ಎ. ಪದವಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಬಿ.ಎಸ್ಸಿ. ಪದವಿಯಲ್ಲಿ 15 ವಿಷಯ ಸಮೂಹಗಳಿದ್ದು, ಆಸಕ್ತ ವಿದ್ಯಾಥಿಗಳು ಜಾಲತಾಣ https://uucms.karnataka.gov.in ರಲ್ಲಿ ಜೂ. 05 ರೊಳಗಾಗಿ ಅರ್ಜಿ ಸಲ್ಲಿಸುವುದು. ಪಿಯುಸಿಯಲ್ಲಿ ಶೇ. 60% ಕ್ಕಿಂತ ಹೆಚ್ಚು ಅಂಕಗಳಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಿ.ಸಿ.ಎ. ಪದವಿ ಪ್ರವೇಶಕ್ಕೆ ಮೆರಿಟ್ ಆಧಾರದ ಮೇಲೆ ಪ್ರತ್ಯೇಕ ರ‍್ಯಾಂಕ್ ಪಟ್ಟಿ ಪ್ರಕಟಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿರುತ್ತಾರೆ.
Kuvempu University ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-240435 ನ್ನು ಸಂಪಕಿಸುವುದು.
Department of School Education and Literacy ಮೇ 2.ಶಿವಮೊಗ್ಗ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ” ದಿ.ಎಸ್.ಬಂಗಾರಪ್ಪ ಬಡಾವಣೆ” ನಾಮಕರಣ ಕಾರ್ಯಕ್ರಮ
Department of School Education and Literacy ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2), ಎನ್.ಜಿ.ಟಿ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ “ದಿ|| ಶ್ರೀ ಎಸ್. ಬಂಗಾರಪ್ಪ ಬಡಾವಣೆ” ಎಂಬ ನಾಮಕರಣ ಸಮಾರಂಭವನ್ನು ಮೇ 02 ರಂದು ಬೆಳಗ್ಗೆ ಬೊಮ್ಮನಕಟ್ಟೆ ‘ಬಿ’ ಬ್ಲಾಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ.ಎಸ್. ಸುರೇಶ್‌ರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಉಪ ಆಯುಕ್ತರು ಮತ್ತು ಪಾಲಿಕೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
Mysore Chamarajendra Government College of Visual Arts ಮೈಸೂರು ದೃಶ್ಯಕಲಾ ಕಾಲೇಜಿನಲ್ಲಿ 2026-27 ನೇ ಸಾಲಿಗೆ ಮಾತ್ರ ಅತಿಥಿ ಉಪನ್ಯಾಸಕ/ಸಂಪನ್ಮೂಲ ವ್ಯಕ್ತಿಗಳ ಸ್ಥಾನಕ್ಕೆ ನೇಮಕಾತಿ ಪ್ರಕಟಣೆ
Mysore Chamarajendra Government College of Visual Arts ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅತಿಥಿ ಉಪನ್ಯಾಸಕ/ಸಂಪನ್ಮೂಲ ವ್ಯಕ್ತಿಗಳಾಗಿ ಬೋಧನೆ ಮಾಡಲು ಇಚ್ಛಿಸುವವರಿಂದ ಗೌರವ ಸಂಭಾವನೆ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗಳನ್ವಯ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಅಹ್ವಾನಿಸಿದೆ.
ಬಿ.ವಿ.ಎ/ಎಂ.ಬಿ.ಎ.ವಿದ್ಯಾರ್ಥಿಗಳು ಸೇರಿದಂತೆ ಅನ್ವಯ ಕಲೆ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ(ಗ್ರಾಫಿಕ್ಸ್) ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮಗಳ ಪ್ರಾಯೋಗಿಕ ಮತ್ತು ಥಿಯರಿ, ಕಲಾ ಇತಿಹಾಸದ ಥಿಯರಿ ಬೋಧನೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55%ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ಭಾಷಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮತ್ತು ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ಎಂ.ಎಸ್‌ಸಿ (ಇವಿಎಸ್) ಸ್ನಾತಕೋತ್ತರ ಪದವಿ ಪಡೆದಿರಬೇಕು.
chamarajendra Government College of Visual Arts ಆಸಕ್ತರು ಕರ್ನಾಟಕ ಸರ್ಕಾರದ ಅಂತರ್ಜಾಲ www.mysore.nic.in ಮತ್ತು www.cavamysore.karnataka.gov.in ದ ಮೂಲಕ ಮಾಹಿತಿ ಪಡೆದು ಅರ್ಜಿಯನ್ನು ಮೇ 15 ರೊಳಗಾಗಿ ಸಲ್ಲಿಸುವುದು. ಮೇ 19 ರಂದು 11.00ಕ್ಕೆ ಸಂಸ್ಥೆಯಲ್ಲಿ ಸಂದರ್ಶನ ನಡೆಸಿ ತರಗತಿಗಳು ಅನ್ವಯವಾಗುವಂತೆ ಕಾರ್ಯ ನಿರ್ವಹಿಸಲು ತಿಳಿಸಲಾಗುವುದು ಎಂದು ಮೈಸೂರು ಕಾವಾ ಡೀನ್ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಹಾಗೂ ದೂ.ಸಂ.: 0821-2438931 ನ್ನು ಸಂಪರ್ಕಿಸುವುದು.
ಶಿವಮೊಗ್ಗ ಗ್ರೂಪ್ ಆಶ್ರಯದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ
ಈ ದಿವಸ ವಿಶ್ವ ಕಾರ್ಮಿಕ ದಿನಾಚರಣೆಯ ಸುಸಂದರ್ಭದಲ್ಲಿ ನಮ್ಮ ಶಿವಮೊಗ್ಗ ಗ್ರೂಪ್ ನ ಅಧ್ಯಕ್ಷರಾದ ಟಿ. ಅನಿಲ್ ಕುಮಾರ್, ವಕೀಲರು ಶಿವಮೊಗ್ಗ ರವರ ನೇತೃತ್ವದಲ್ಲಿ ಡಿ ಪ್ರವೀಣ, ಪೊಲೀಸ್ ಇಲಾಖೆ, ಪ್ರವೀಣ್. ಜಿ.ಪಿ. ಚಲನಚಿತ್ರ ನಿರ್ದೇಶಕರು ಬೆಂಗಳೂರು, ಚಿತ್ರೇಶ್, ಡಿ ಪ್ರವೀಣ್, ಸಿವಿಲ್ ಇಂಜಿನಿಯರ್, ಆನಂದ್, ಮಗರ್ ಡಿಸೈನರ್ಸ್ ಶಿವಮೊಗ್ಗ,
ಪ್ರೊಫೆಸರ್ ಮಂಜುನಾಥ್ ಪ್ರಾಂಶುಪಾಲರು, ಶಿವಕುಮಾರ್. ಎಸ್.ಬಿ. ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷರು, ಕರವೇ ಪತ್ರಿಕಾ ಸಂಚಾಲಕರು ಮಾಲತೇಶ್ ಶಿವಮೊಗ್ಗ. ಕರವೇ ಕಿರಣ್ ಇನ್ನು ಮುಂತಾದವರು ಹಾಜರಿದ್ದು ಶಿವಮೊಗ್ಗದ ಮಹಾನಗರಪಾಲಿಕೆಯ ಪೌರಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರೊಂದಿಗೆ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗಿರುತ್ತದೆ.
