Friday, August 7, 2026
Friday, August 7, 2026
Home Blog Page 112

Blood Donation camp ದೊಡ್ಡಪೇಟೆ ಪೊಲೀಸ್ ಠಾಣೆ ಆಶ್ರಯದಲ್ಲಿ ರಕ್ತದಾನ ಶಿಬಿರ.

0

Blood Donation camp ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಅಂಬೇಡ್ಕರ್ ರಕ್ತಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 21 ಜನ ರಕ್ತದಾನ ಮಾಡಿದರು.

Department Of Pre-University Education ಅನುಮತಿ ಇಲ್ಲದ ಪ್ರಥಮ ಪಿಯು ಕಾಲೇಜುಗಳ ಬಗ್ಗೆ ಎಚ್ಚರ.

Department Of Pre-University Education 2026-27 ನೇ ಸಾಲಿಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡುವಾಗ ಪೋಷಕರು ದಾಖಲಾತಿ ಮಾಡುವ ಕಾಲೇಜಿಗೆ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಖಲಿಸುವಂತೆ ಶಾಲಾ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Department Of Pre-University Education ಜಿಲ್ಲೆಯ ಕೆಲವೊಂದು ಸಂಸ್ಥೆಯವರು ಹೊಸ ಕಾಲೇಜಿನ ಅನುಮತಿ ಪಡೆಯದೇ ಜಾಹಿರಾತುಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾಲೇಜುಗಳ ಬಗ್ಗೆ ಪೋಷಕರು ಎಚ್ಚರ ವಹಿಸುವುದು. ಒಂದು ವೇಳೆ ಈ ಸಂಸ್ಥೆ/ ಕಾಲೇಜುಗಳು ಅನಧಿಕೃತವಾಗಿ ದಾಖಲಾತಿ ಮಾಡಿಕೊಂಡಲ್ಲಿ ಅವರ ಮೇಲೆ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಾಗುವುದು. ಪೋಷಕರಿಗೆ ಅನುಮಾನ ಬಂದರೆ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬಿ.ಹೆಚ್ ರಸ್ತೆ ಶಿವಮೊಗ್ಗ ಇಲ್ಲಿಯ ಕಚೇರಿ ಸಮಯದಲ್ಲಿ ಬಂದು ವಿಚಾರಿಸುವಂತೆ ಅವರು ತಿಳಿಸಿದ್ದಾರೆ.

Byrathi Suresh ಸಮಾಜದ ಕಟ್ಟಕಡೆ ವ್ಯಕ್ತಿಗೂ ಮೂಲಭೂತ ಸೌಕರ್ಯಗಳ ಸೌಲಭ್ಯ – ಸಚಿವ ಭೈರತಿ ಸುರೇಶ್.

0

Byrathi Suresh ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು‌ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು ಪ್ರತಿ ಮಹಾನಗರಪಾಲಿಕೆಗಳ ಅಭಿವೃದ್ಧಿ ಯೋಜನೆಗಳಿಗೆ ನಗರಾಭಿವೃದ್ದಿ ಇಲಾಖೆಯು ರೂ.200 ಕೋಟಿ ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ತಿಳಿಸಿದರು.
ಬೊಮ್ಮನಕಟ್ಟೆ ‘ಬಿ’ ಬ್ಲಾಕ್ ನಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2), ಎನ್.ಜಿ.ಟಿ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ದಿ|| ಶ್ರೀ ಎಸ್. ಬಂಗಾರಪ್ಪ ಬಡಾವಣೆಯ ನಾಮಕರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿದ್ದೇವೆ.‌ ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲರಿಗೂ ಜನಪರವಾದ ಯೋಜನೆಗಳನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ೪ ಲಕ್ಷದ ೫೬ ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಯಡಿ ಸುಮಾರು ರೂ. 127.5 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು
ಮುಂದಿನ ೨೦ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ನಗರದ ಕುಡಿಯುವ ನೀರಿನ ಯೋಜನೆ ಕುರಿತು ಸಚಿವರು, ಶಾಸಕ ರೊಂದಿಗೆ ಚರ್ಚಿಸಿ ಸಮಗ್ರ ಕುಡಿಯುವ ನೀರಿನ‌ ಯೋಜನೆಗೆ ಹಂತ ಹಂತವಾಗಿ ಹಣ ಮಂಜೂರು ಮಾಡುವ ಮೂಲಕ ಯೋಜನೆಯನ್ನು ಸಾಕಾರಗೊಳಿಸಲು ಕಟಿಬದ್ದರಾಗಿದ್ದೇವೆಂದು ಭರವಸೆ ನೀಡಿದ ಅವರು ಪೌರ ಕಾರ್ಮಿಕರ ವಸತಿ ಯೋಜನೆಯಡಿ ಬಾಕಿ‌ ಕಾಮಗಾರಿಗೆ ಅಗತ್ಯವಾದ ಅನುದಾನ ಕೊಡಿಸಲು ಭರವಸೆ ನೀಡಿದರು.ರಾಜ್ಯದಲ್ಲಿ ನಗರಾಭಿವೃದ್ದಿ ಇಲಾಖೆಯಿಂದ ನಗರ, ಪಟ್ಟಣ, ಪಾಲಿಕೆಗಳಿಗೆ ಕುಡಿಯುವ ನೀರಿಗಾಗಿ ರೂ. ೨೫ ಸಾವಿರ ಕೋಟಿ ನೀಡಲಾಗಿದೆ. ೭೦% ನಗರಗಳಿಗೆ ಕುಡಿಯುವ ನೀರು‌ ಮತ್ತು ಯುಜಿಡಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಅಂದಿನ ಅಹಿಂದ ಪರವಾದ ನಾಯಕ ಬಂಗಾರಪ್ಪನವರನ್ನು ನೋಡಿ ಬೆಳೆದ ನಮಗೆಲ್ಲ ಅವರು ಆದರ್ಶ ವ್ಯಕ್ತಿ. ಅವರ ಕಾರ್ಯಕ್ರಮ ನೋಡಿಯೇ ರಾಜಕಾರಣಕ್ಕೆ ಪ್ರವೇಶಿಸಿದ್ದೇನೆ. ಅವರು‌ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ.ಭೈರತಿ ಸುರೇಶ್, ಸಚಿವರು, ನಗರಾಭಿವೃದ್ಧಿ ಮತ್ತು ನಗರ ಯೋಜನೆ

ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬಂತೆ ನಿಮ್ಮ‌ಹಣದಿಂದಲೇ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ಒತರೆ ಅಭಿವೃದ್ದಿ ಯೋಜನೆಗಳಿಗೆ ಹಣ ನೀಡುತ್ತಿದೆ. ಸರ್ಕಾರ ಸ್ಮಾರ್ಟ್ ಸಿಟಿಗೆ ಶೇ.೫೦ ರಷ್ಟು ಹಣ ನೀಡಿದೆ.ಯುಬಿಐಡಿ ಪ್ರಕಾರ ಪ್ರತಿ ತಿಂಗಳು ಜೀವನ ನಡೆಸಲು ಅಗತ್ಯವಾದ ಆರ್ಥಿಕ ಸಹಾಯ ಒದಗಿಸುತ್ತಿರುವ ಸರ್ಕಾರ ಇಡೀ ಪ್ರಪಂಚದಲ್ಲೇ ನಮ್ಮದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಮಾತನಾಡಿ, ಬಡಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಎಸ್. ಬಂಗಾರಪ್ಪ ಅವರ ಹೆಸರನ್ನು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ನಾಮಕರಣ ಮಾಡಬೇಕೆಂದು
2016 ರಿಂದ ಪಕ್ಷಾತೀತವಾದ ಬೇಡಿಕೆ ಇತ್ತು. ಇಂದು ಅದು ಸಾಕಾರಗೊಳ್ಳುತ್ತಿರುವುದಕ್ಕೆ ಸಂತಸವಾಗಿದೆ. ಬಡವರ ಉದ್ದಾರದ ಬಂಗಾರಪ್ಪನವರ ಕನಸನ್ನು ಸರ್ಕಾರಗಳು ನನಸು ಮಾಡುತ್ತಾ ಬಂದಿದೆ.
ಬಂಗಾರಪ್ಪನವರು ಜಾರಿಗೆ ತಂದ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಯೋಜನೆಗೆ ರೂ. ೨೦ ಸಾವಿರ ಕೋಟಿ ಅನುದಾನ ಸರ್ಕಾರ ನೀಡುತ್ತಿದೆ.
ಗ್ರಾಮೀಣ ಭಾಗದ ಯುವಜನತೆಯನ್ನು ಮುಂದೆ ತರಲು, ಉತ್ತಮ ಅವಕಾಶ ನೀಡಲು ೧೫% ಗ್ರಾಮೀಣ ಕೃಪಾಂಕ ಯೋಜನೆಯನ್ನು ನಾವೆಲ್ಲ ಸ್ಮರಿಸುತ್ತಿದ್ದೇವೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಪ್ರಾರ್ಥನಾ ಮಂದಿರಗಳು ಹಾಗೂ ಪೂಜಾ ಸ್ಥಳಗಳನ್ನು ನಿರ್ಮಿಸಲು ಮತ್ತು ಜೀರ್ಣೋದ್ಧಾರ ಮಾಡಲು ಆರ್ಥಿಕ ನೆರವು ನೀಡುವ ಆರಾಧನಾ ಯೋಜನೆ ಜಾರಿಗೆ ತಂದು ಎಲ್ಲರಿಗೂ ಸಮಾನ ಅವಕಾಶ ನೀಡಿದರೆಂದು ಸ್ಮರಿಸಿದರು.
ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವ್ಯವಸ್ಥಿತವಾದ ಕ್ರಿಯಾ ಯೋಜನೆ ಸಿದ್ದಪಡಿಸಿದ್ದು, ಈ ಯೋಜನೆಯನ್ನು ಮಂಜೂರು ಮಾಡಬೇಕೆಂದು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಯಡಿ ಸುಮಾರು ರೂ. 127.5 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಆಗಿದೆ.ಎನ್.ಜಿ.ಟಿ ಅನುದಾನದಡಿ ರೂ. 40 ಕೋಟಿ ವೆಚ್ಚದಲ್ಲಿ ತುಂಗಾ ನದಿಯ ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Byrathi Suresh ಆರಾಧನಾ, ಅಕ್ಷಯ, ಆಶ್ರಯ ಯೋಜನೆಗಳನ್ನು ನೀಡಿದ ಬಡವರ ನಾಯಕ ಬಂಗಾರಪ್ಪನವರನ್ನು ನಾವು ಮರೆಯುವ ಹಾಗಿಲ್ಲ. ಜಿಲ್ಲೆಯ ಕುಡಿಯುವ ನೀರಿಗೆ ಎಲ್ಲ ಮುಖ್ಯಮಂತ್ರಿಗಳು ಸಹಕರಿಸಿದ್ದಾರೆ. ಪ್ರಸ್ತುತ ಬೆಳೆಯುತ್ತಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ರೂ. ೪೯೦ ಕೋಟಿ ಅವಶ್ಯಕತೆ ಇದ್ದು, ಕ್ರಿಯಾ ಯೋಜನೆ ತಯಾರಿಸಿದ್ದು ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಭರವಸೆ ನೀಡಿದ್ದಾರೆ. ಹಾಗೂ ಪೌರ ಕಾರ್ಮಿಕರಿಗೆ ವಸತಿ ಯೋಜನೆಯ ಬಾಕಿ ಕಾಮಗಾರಿಗಳಿಗೆ ಅವಶ್ಯವಿರುವ ರೂ. ೨೭ ಕೋಟಿ ಅನುದಾನ ನೀಡಬೇಕೆಂದು‌ ಮನವಿ ಮಾಡುತ್ತೇನೆ.-ಎಸ್ ಎನ್ ಚನ್ನಬಸಪ್ಪ, ಶಾಸಕರು

ಬಡವರಿಗಾಗಿ‌ ಆರಾಧನಾ, ಆಶ್ರಯ, ಬಗರ್ ಹುಕುಂ, ಗ್ರಾಮೀಣ ಕೃಪಾಂಕ, ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಹೀಗೆ ಹಲವಾರು ಯೋಜನೆ ನೀಡಿದ ಮಾಜಿ‌ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪನವರು ನನ್ನಂತಹ ಯುವ ನಾಯಕರನ್ನು ಸಹ ಬೆಳೆಸಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಕೈಗೊಂಡಿದೆ.-ಗೋಪಾಲಕೃಷ್ಣ ಬೇಳೂರು, ಶಾಸಕರು.

ಬಡವರ ಬಂಧು ಬಂಗಾರಪ್ಪನವರು ನೀಡಿರುವ ಕೊಡುಗೆಗಳು, ಕೆಲಸಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ, ಬಗರ್ ಹುಕುಂ‌ ಸಮಿತಿ‌ ರಚನೆ ಸೇರಿದಂತೆ ಹಲವಾರು ಜನಪರ, ಬಡವರಪರವಾದ ಯೋಜನೆಗಳನ್ನು ಬಂಗಾರಪ್ಪನವರು ನೀಡಿರುವುದು ಅತ್ಯಂತ ಅನುಕೂಲವಾಗಿದೆ.- ಶಾರದಾ ಪೂರ್ಯಾನಾಯ್ಕ್, ಶಾಸಕರು

ಇತಿಹಾಸ ತಿಳಿಯದೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಮಾಜಿ ಸಚಿವರಾದ ದಿ.ಎಸ್.ಬಂಗಾರಪ್ಪನವರವ ಕೊಡುಗೆಗಳ ಬಗ್ಗೆ ತಿಳಿಯಬೇಕಿದೆ. ಶಿವಮೊಗ್ಗ ನಗರದಲ್ಲಿ ಸ್ಲಂಗಳ ಅಭಿವೃದ್ದಿ ಆಗಬೇಕು.ಬಲ್ಕೀಶ್ ಬಾನು, ವಿಧಾನ ಪರಿಷತ್ ಶಾಸಕರು

ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಪಾಲಿಕೆ ತೆರಿಗೆ ವ್ಯವಸ್ಥೆ ಸರಳೀಕರಣ ಮಾಡಿ, ರಿಯಾಯಿತಿ ನೀಡಬೇಕು.ಡಿ.ಎಸ್ ಅರುಣ್, ವಿಧಾನ ಪರಿಷತ್ ಶಾಸಕರು

ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ರಾಜ್ಯ ಎಸ್ ಸಿ/ಎಸ್ ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ,
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್,
ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಡಿಸಿ ಅಭಿಷೇಕ್ ವಿ, ಡಿಯುಡಿಸಿ ಯೋಜನಾ ನಿರ್ದೇಶಕ ರಂಗಸ್ವಾಮಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಕೆ, ಇತರೆ ಮುಖಂಡರು ಹಾಜರಿದ್ದರು.

Backward Classes Welfare Department ಸೇನಾ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ & ತರಬೇತಿಗೆ ಅರ್ಜಿ ಆಹ್ವಾನ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ಭಾರತೀಯ ಸೇನೆ/ಇತರೆ ಯೂನಿಫಾರ್ಮ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಂದ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಮಾಜಾಳಿ, ಕಾರವಾರದಲ್ಲಿ ನೀಡುವ ಸೇನಾ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗಾಗಿ (ಬಾಲಕರಿಗೆ ಮಾತ್ರ) ಅರ್ಜಿ ಆಹ್ವಾನಿಸಲಾಗಿದೆ.

Backward Classes Welfare Department ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಪ್ರವರ್ಗ-1 ಕ್ಕೆ ರೂ. 2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ. 1.00 ಲಕ್ಷಗಳ ಮಿತಿಯಲ್ಲಿರಬೇಕು. ಅಭ್ಯರ್ಥಿಯು 10ನೇ ತರಗತಿಯನ್ನು ಉತ್ತೀರ್ಣನಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳು ಮತ್ತು ಸರಾಸರಿ ಶೇ. 45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಜನ್ಮ ದಿನಾಂಕ ಮತ್ತು ವಯಸ್ಸು ಅಭ್ಯರ್ಥಿಯ ವಯಸ್ಸು 17 ರಿಂದ 20ರೊಳಗಿರಬೇಕು. ಮೇ.28 ಕ್ಕೆ ಅನ್ವಯಿಸುವಂತೆ ದಿ:28-05-2006 ರಿಂದ 28-05-2009 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು.
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆಯ ಮೂಲಕ ಮೇ 28 ರೊಳಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ನೆಲಮಹಡಿ, ಕೊಠಡಿ ಸಂಖ್ಯೆ 01, ಕಾರವಾರ 58130 ಇಲ್ಲಿಗೆ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Acharya Tulsi National College of Commerce ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ- ಡಾ.ಕೆ.ರಾಘವೇಂದ್ರ

0

Acharya Tulsi National College of Commerce ದೇಶದ ಅಭಿವೃದ್ಧಿಗೆ ವಿದ್ಯಾವಂತ ಯುವಕರ ಪಾತ್ರ ಪ್ರಮುಖವಾಗಿದ್ದು, ತಾವು ಓದಿದ ಕಾಲೇಜು, ಪ್ರಾದ್ಯಾಪಕರನ್ನು ಎಂದಿಗೂ ಮರೆಯುವುದಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಅಮೇರಿಕಾದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ.ರಾಘವೇಂದ್ರ ಪೈ ಕರೆ ನೀಡಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎನ್ ಸಿ ಸಿ ವಿದ್ಯಾರ್ಥಿಯಾಗಿ ದೆಹಲಿಗೆ ಹೋದಾಗ, ಅಲ್ಲಿ ಯುವ ಮಹೋತ್ಸವದಲ್ಲಿ ಯೋಗಾಸನ ಸ್ವರ್ಧೆಯಲ್ಲಿ ಭಾಗವಹಿಸಿದ್ದೆ. ಪ್ರಥಮ ಸ್ಥಾನ ದೊರೆಯಿತು. ನಂತರ ಅಂತರ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದೆ. ಅಲ್ಲಿಯೂ ಪ್ರಥಮ ಸ್ಥಾನ ದೊರಕಿತು. ಹೀಗೆ ನನ್ನ ಹವ್ಯಾಸ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಇಂದು ಅಮೇರಿಕದ ವ್ಯಾಸ ಭಾರತಿ ತ್ರಿಯೋಗ ವಿಶ್ವವಿದ್ಯಾಲಯದ ಇನ್ನೂರ ಐವತ್ತಾರು ಶಾಖೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಯುವ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು.

ಯೋಗದಿಂದ ದೊರಕುವ ಪ್ರಯೋಜನ ಹಾಗೂ ಪ್ರಾತ್ಯಕ್ಷೆಕೆ ಮೂಲಕ ಹಿರಿಯ ವಿದ್ಯಾರ್ಥಿಗಳ ಮನಗೆದ್ದು, ಆರೋಗ್ಯದ ಬಗ್ಗೆ ಕೆಲವು ಮಾಹಿತಿ ನೀಡಿದರು. ತಮಗೆ ಕಾಲೇಜಿನಲ್ಲಿ ಸಿಕ್ಕ ನೆರವು ಸ್ನೇಹಿತರ ಹುಡುಗಾಟದ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಕಿಮ್ಮನೆ ಜಯರಾಂ ಮಾತನಾಡಿ, ಅಂದು ಮಾಡಿದ ಹುಡುಗಾಟಿಕೆ ಇಂದು ನೆನೆಪು ಮಾತ್ರ, ಆದರು ಖುಷಿ ಕೊಡುತ್ತದೆ. ಸ್ನೇಹಿತರು ಇಂದಿಗೂ ಜೊತೆಗಿದ್ದಾರೆ. ನನ್ನ ಊರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಬಹುದಾದ ಹಾಗೂ ಮತ್ತೊಬ್ಬರು ಸ್ವರ್ಧೆಗೆ ಬಾರದೆ ಇರುವ ಕೆಲಸ ಮಾಡಬೇಕೆಂದು ತಮ್ಮ ಪತ್ನಿಯೊಂದಿಗೆ ಚರ್ಚಿಸಿ ಗಾಲ್ಫಕ್ಲಬ್ ಪ್ರಾರಂಭಿಸಿದೆ. ಈಗ ಅದರ ಬಗ್ಗೆ ಪ್ರಶಂಸೆ ಸಿಕ್ಕಾಗ ಸಂತೃಪ್ತ ಭಾವ ಮೂಡುತ್ತದೆ ಎಂದರು.

Acharya Tulsi National College of Commerce ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಎಂತೆಂಥ ಸಾಧನೆ ಮಾಡಿದ್ದಾರೆ, ಸಂತೋಷವಾಗುತ್ತದೆ. ಇಡೀ ವಿಶ್ವದಲ್ಲಿ ಸ್ವಂತಮಾಲಿಕತ್ವದ ಗಾಲ್ಫಕ್ಲಬ್ ಇರುವುದು ಇಬ್ಬರ ಬಳಿ ಒಬ್ಬರು ಬಿಲ್ ಕ್ಲಿಂಟನ್, ಮತ್ತೋರ್ವರು ನಮ್ಮೂರಿನ ಹುಡುಗ ಕಿಮ್ಮನೆ ಜಯರಾಂ, ಈತಾ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ. ಡಾ. ರಾಘವೇಂದ್ರ ಪೈ, ಅಮೇರಿಕ ದೇಶದ ವಿಶ್ವವಿದ್ಯಾಲಯದ ಉಪಕುಲಪತಿ, ಲೆಪ್ಟಿನೆಂಟ್ ಕರ್ನಲ್ ದಿವಾಕರನಾಯ್ಡು, ಉದ್ಯಮಿ ಬಾಲಕೃಷ್ಣ, ವಿಕ್ರಂ ರವರನ್ನು ಗುರುತಿಸಿ ಇಂದು ಕರೆದು ಗೌರವಿಸಿದ್ದು ಹಾಗೂ ನಮಗೆ ಸರಿದಾರಿ ತೋರಿಸಿದ ಪ್ರಾಧ್ಯಾಪಕರನ್ನು ಕರೆದು ಸನ್ಮಾನಿಸಿರುವುದು ಬಹಳ ಸಂತೋಷ. ಇಂತಹ ಸ್ನೇಹ ಸಮ್ಮಿಲನ ಆಗಿಂದಾಗೆ ಜರುಗುತ್ತಿದ್ದರೆ ಸಿಗುವ ಸಂತೋಷ ಬೇರೆ ಯಾವುದರಿಂದಲು ಸಿಗುವುದಿಲ್ಲ. ಇಂತಹ ಸಂದರ್ಭವನ್ನು ತಾವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ ಎಂದರು.

Acharya Tulsi National College of Commerce ಕಾರ್ಯಕ್ರಮದಲ್ಲಿ ಮಂಜುನಾಥ್ ಪ್ರಾರ್ಥಿಸಿದರು. ಪ್ರೊ. ಆಶಾಲತ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಅಧ್ಯಕ್ಷ ವಾಗೇಶ್ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಕೇಶವಮೂರ್ತಿ ಪರಿಚಯಿಸಿದರು. ಘನಶ್ಯಾಮ್, ದಿಲೀಪ್ ನಾಡಿಗ್, ಸ್ಮೀತರೂಪೇಶ್, ದೇವಿಕುಮಾರ್ ನಡೆಸಿಕೊಟ್ಟರು. ರೋಟರಿ ಜಿ.ವಿಜಯಕುಮಾರ್ ಮತ್ತು ಸಮನ್ವಯಕಾಶಿ ನಿರೂಪಿಸಿದರು. ಪ್ರಾಂಶುಪಾಲೆ ಮಮತಾ, ಪ್ರಕಾಶ್ ಕುಮಾರ್ ಜೈನ್, ಸೈಯದ್ ಅಬೂತಾಹಿರ್, ಮಹೇಶ್, ನವೀನ್, ಸುನೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳ ಆಧಾರ್ ಸಂಖ್ಯೆಗೆ ಬಯೋಮೆಟ್ರಿಕ್ ಕಡ್ಡಾಯ – ವಿ‌.ಅಭಿಷೇಕ್

0

ಶಿವಮೊಗ್ಗ ಜಿಲ್ಲೆಯ ಎಲ್ಲಾ 5 ರಿಂದ 7 ಹಾಗೂ 15 ರಿಂದ 17 ರ ವಯೋಮಿತಿಯ ಮಕ್ಕಳ ಆಧಾರ್ ಸಂಖ್ಯೆಗೆ ಬಯೋಮೆಟ್ರಿಕ್ ನವೀಕರಣ ಮಾಡುವುದು ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆ. 30 ರವರೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಿಸಿಕೊಳ್ಳಬಹುದಾಗಿದೆ. ಇದರಿಂದ ಮಕ್ಕಳ ಶಾಲೆಯ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರದ ವಿವಿಧ ಯೋಜನೆಗಳು, ವಿಧ್ಯಾರ್ಥಿ ವೇತನ, ತರಬೇತಿಗಳು ಸೇರಿದಂತೆ ಇತ್ಯಾದಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ. ಪೋಷಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಯನ್ನು ಸಕಾಲದಲ್ಲಿ ತಲುಪಿಸುವಲ್ಲಿ ಸಹಕರಿಸುವಂತೆ ಅವರು ತಿಳಿಸಿದ್ದಾರೆ.

CM Siddharamaiah ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ :‌ ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ರೋಶ

0

CM Siddharamaiah ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ನರೇಂದ್ರಮೋದಿ ಸರ್ಕಾರವು ಬೆಲೆಯೇರಿಕೆ ಮಾಡತೊಡಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ. ಒಟ್ಟಾರೆ 19 ಕೆಜಿಯ 1 ಸಿಲಿಂಡರ್‌ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್‌ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ. ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ. ಆಗಾಗ ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಕಾಪಾಡುವುದು ಪ್ರಧಾನಿಯಾಗಿ ಮೋದಿಯವರ ಕರ್ತವ್ಯವಾಗಿದೆ. ಆದರೆ ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನವಾಗಿದೆ. ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಹೇಳಿದ್ದಾರೆ.

ವಾಣಿಜ್ಯ ಗ್ಯಾಸ್‌ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣಪುಟ್ಟ ಕ್ಯಾಂಟೀನ್‌ಗಳು ಹಾಗೂ ಕೆಟರಿಂಗ್‌ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ ಎಂದು ಹೇಳಿದ್ದಾರೆ.

CM Siddharamaiah ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದಾರೆ. ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿದೆ. ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ.

ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆಯಿಂದ ಮನೆ ಸುರಕ್ಷತೆ, ಭದ್ರತೆ ಬಗ್ಗೆ ವಿಶೇಷ ಯೋಜನೆ

0

LHBS ನ ಕಂಟ್ರೋಲ್ ರೂಂ / ಸಹಾಯವಾಣಿ ಸಂಖ್ಯೆ 8277982901
ಲಾಕ್ಡ್ ಹೌಸ್ (ಬೀಗ ಹಾಕಿದ ಮನೆಗಳ) ಸುರಕ್ಷತೆಯ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.

Agricultural University ಕೃಷಿ ಪದವಿಗೆ ಪ್ರಾಯೋಗಿಕ ಪರೀಕ್ಷೆಯ ಅವಧಿ ವಿಸ್ತರಣೆ

0

Agricultural University ರೈತರ ಮಕ್ಕಳಿಗಾಗಿ ಮೀಸಲಿರುವ ಕೃಷಿ ಪದವಿ ಸೀಟುಗಳಿಗಾಗಿ ಪ್ರವೇಶ ಪ್ರಾಯೋಗಿಕ ಪರೀಕ್ಷೆಯನ್ನು ಮೇ. 10 ರವರೆಗೆ ವಿಸ್ತರಿಸಲಾಗಿದ್ದು, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಾಗು ಸಿ.ಇ.ಟಿಯ ನೇತೃತ್ವದಲ್ಲಿ ನಡೆಸಲಾಗುವ ಈ ಪ್ರಾಯೋಗಿಕ ಪರೀಕ್ಷೆಯು ಎಲ್ಲಾ ಕೃಷಿ ವಿಜ್ಞಾನಗಳಿಗೆ ಹಾಗೂ ಪಶು ವೈದ್ಯಕೀಯ ವಿಜ್ಞಾನಗಳ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗಾಗಿ ನಡೆಯಲಿದೆ. ಕೃಷಿಕರ ಕೋಟಾದಲ್ಲಿ ಈಗಾಗಲೇ ಸಿ.ಇ.ಟಿ. ಅರ್ಜಿಯಲ್ಲಿ ಸಲ್ಲಿಸಿ ಅನರ್ಹರಾಗಿರುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವನ್ನು ಮೇ.04 ರ ಮಧ್ಯಾಹ್ನ 12.00 ಗಂಟೆಯವರೆಗೆ ಮುಂದೂಡಲಾಗಿದೆ.
ಈ ವೇಳಪಟ್ಟಿ ಈ ಕೆಳಕಂಡಂತಿದೆ.
ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಆನ್ ಲೈನ್ ಮೂಲಕ ಅಪ್ ಲೋಡ್ ದಿನಾಂಕ: 04-05-2026ರ ಮಧ್ಯಾಹ್ನ 12.00 ಗಂಟೆಯವರೆಗೆ ಮಾಡುವುದು
ಆನ್ ಲೈನ್ನಲ್ಲಿ ದಾಖಲಾತಿಗಳ ಪರಿಶೀಲನೆ ಮತ್ತು ಕೃಷಿ ಕೋಟಾದಡಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹ/ ಅರ್ಹರಲ್ಲದ ಅಭ್ಯರ್ಥಿಗಳ ಪಟ್ಟಿಯ ಸಿದ್ಧತೆ – ಆಯಾ ಕೇಂದ್ರಗಳಲ್ಲಿ ನಿಯೋಜಿಸಿದ ಸಮಿತಿ ಸದಸ್ಯರಿಂದ (ಆಯಾ ವಿಶ್ವವಿದ್ಯಾಲಯಗಳು ನಿಯೋಜಿಸಿದ) ದಿನಾಂಕ: 05-05-2026ರ ಸಂಜೆ 4.00 ಗಂಟೆವರೆಗೆ ಮಾಡುವುದು.
ಪ್ರಾಯೋಗಿಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ದಿನಾಂಕ: 07-05-2026 ಪ್ರಕಟಿಸಲಾಗುವುದು.
ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಮೇ 08 ರಿಂದ ಮೇ 10 ರ ಬೆಳಗ್ಗೆ 7.00 ರವರೆಗೆ ಡೌನ್ಲೋಡ್ ಮಾಡಿಕೊಳ್ಳವುದು
Agricultural University ಪ್ರಾಯೋಗಿಕ ಪರೀಕ್ಷೆಯನ್ನು ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇ 10 ರಂದು ಬೆಳಗ್ಗೆ 09.00 ರಿಂದ ಪ್ರಾರಂಭಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಪ್ರಯೋಗಿಕ ಕೇಂದ್ರಗಳಲ್ಲಿ ಮೇ.10 ರಂದು ಬೆಳಗ್ಗೆ 08.00ಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ತಡವಾಗಿ ಬರುವ ಅಭ್ಯರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಮೇ. 14 ರಂದು ಬೆಳ್ಳಿಗೆ 11.00 ಗಂಟೆಯ ಒಳಗೆ ಪ್ರಾಯೋಗಿಕ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಬದಲಾದ ದಿನಾಂಕಗಳ ಗಮನಕ್ಕಾಗಿ ಹಾಗೂ ಮಾಹಿತಿಗಾಗಿ ಈ ಕೆಳಗಿನ ಅಂತರಜಾಲ ತಾಣಗಳಿಗೂ ಭೇಟಿ ನೀಡಬಹುದಾಗಿದೆ. www.uasbangalore.edu.in, www.uasd.edu.in/www.uasd.edu, www.uhsbagalkot.edu.in/uhsbagalkot.karnataka.gov.in, www.uahs.edu.in, www.uasraichur.edu.in/raichur.karnataka.gov.in, www.kvafsu.edu.in, http//kea.kar.nic.in,http//pgadmission.kar.nic.in/ugcet/UG_Home.aspx ,www.kvafsu.edu.in,

ಮೇ. 3 ರಂದು ನಡೆಸುವ‌ ನೀಟ್ ಪರೀಕ್ಷೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಎನ್.ಹೇಮಂತ್

0

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET-UG 2026) ದಿನಾಂಕ 03.05.2026 ರಂದು ಮಧ್ಯಾಹ್ನ 02:00 ರಿಂದ ಸಂಜೆ 05:00 ರವರೆಗೆ ನಡೆಯಲಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ (ಪ್ರ) ಹೇಮಂತ್ ಎನ್. ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ನೀಟ್ ಪರೀಕ್ಷೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
ಶಿವಮೊಗ್ಗ ನಗರದ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದ್ದು, ಒಟ್ಟು 4577 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.
ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರ ಕಲಂ 163 ರನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಬಿಗಿ ಭದ್ರತೆ: ಪ್ರತಿ ಕೇಂದ್ರಕ್ಕೂ ಒಬ್ಬರು ಮ್ಯಾಜಿಸ್ಟ್ರೇಟ್ ದರ್ಜೆಯ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದ್ದು, ಸೂಕ್ತ ಭದ್ರತೆ ಒದಗಿಸಲಾಗಿದೆ.
ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿದ್ದಾರೆ. ವೀಕ್ಷಕರು ಬೆಳಗ್ಗೆ 11 ಗಂಟೆಗೆ ಕೇಂದ್ರದಲ್ಲಿ ಹಾಜರಿರಲಿದ್ದಾರೆ. ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಪೂರೈಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಆಸನ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಕೇಂದ್ರದೊಳಗೆ ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಸ್ಮಾರ್ಟ್ ವಾಚ್‌ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಒಂದು ವೇಳೆ ಇಂತಹ ವಸ್ತುಗಳನ್ನು ತಂದಿದ್ದಲ್ಲಿ, ಅಭ್ಯರ್ಥಿಗಳ ಸ್ವಂತ ಜವಾಬ್ದಾರಿಯ ಮೇಲೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗುವುದು.
ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ನಿಯೋಜಿತ ಸಿಬ್ಬಂದಿ ಮಾತ್ರ ಹಾಜರಿರಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಸಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.