Friday, August 7, 2026
Friday, August 7, 2026
Home Blog Page 111

Karnataka State Industrial and Infrastructure Corporation Board ಕೆಎಸ್ಐಡಿಸಿ ಅಧ್ಯಕ್ಷರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ

0

Karnataka State Industrial and Infrastructure Corporation Board ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ) ಅಧ್ಯಕ್ಷರಾದ ನಂಜಯ್ಯ ಮಠ ರವರು ಶಿವಮೊಗ್ಗ ನಗರ ವಿಮಾನ ನಿಲ್ದಾಣದಲ್ಲಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಶಿವಮೊಗ್ಗ ನಗರಕ್ಕೆ ಆಗಮಿಸಿ,ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ತಿಂಗಳ 7 ಮತ್ತು 8 ರಂದು ತಾವು ಮತ್ತೊಮ್ಮೆ ಆಗಮಿಸಲಿದ್ದು ಅದರೊಳಗಾಗಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಸಂಪೂರ್ಣ ಗೊಳಿಸಬೇಕೆಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದರು.
ಜೂನ್ ತಿಂಗಳ ಮೊದಲನೇ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಽಕಾರಿಗಳು ನೀಡಿದರು. ಇದರ ಜೊತೆಗೆ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿರುವುದು ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಸಂಪೂರ್ಣ ರಾಜ್ಯ ಸರ್ಕಾರವೇ ಹಣವನ್ನು ನೀಡಿದ್ದು, ಇಂಡಿಗೋ ವಿಮಾನವು ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್‌ಗಳ ಕೊರತೆಯಿಂದ ಚಾಲನೆ ಯನ್ನು ನಿಲ್ಲಿಸಿರುತ್ತದೆ ಎಂದು ಅವರು ಹೇಳಿದರು.
Karnataka State Industrial and Infrastructure Corporation Board ಶಿವಮೊಗ್ಗ ನಗರದಲ್ಲಿ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹಲವು ವರದಿಗಳು ಬಂದಿದ್ದವು. ಈ ಸಂಬಂಧ ನೈಟ್ ಲ್ಯಾಂಡಿಂಗ್ ಚಾಲನೆಗೆ ಇಂಡಿಗೋ ವಿಮಾನ ಸಂಸ್ಥೆ ಹಾಗೂ ಇನ್ನುಳಿದ ಅನೇಕ ವಿಮಾನ ಸಂಸ್ಥೆ ಗಳೊಂದಿಗೆ ಚರ್ಚಿಸಿ ಶಿವಮೊಗ್ಗ ನಗರಕ್ಕೆ ವಿಮಾನದ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು

ಹೊಲದಲ್ಲಿ ಹಾವು ಕಚ್ಚಿ ಗರ್ಭಿಣಿ ಸಾವು

0

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಗರ್ಭಿಣಿ ಸಾವನ್ನಪ್ಪಿರುವ ಘಟನೆ ನಡೆದಿದೆ.

26 ವರ್ಷದ ಸ್ವಾತಿ ಎಂಬ ಗರ್ಭಿಣಿ ಶುಂಠಿ ಗದ್ದೆಯಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

ತಕ್ಷಣ ಆಸ್ಪತ್ರೆಗೆ ರವಾನೆ ಮಾಡಿದರೂ ಪ್ರಯೋಜನವಾಗಿಲ್ಲ.. ಆನಂದಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

S.N. Channabasappa ಶಿವಮೊಗ್ಗದಲ್ಲಿ ನೂತನ ನೀರಿನ ಶುದ್ಧೀಕರಣ ಘಟಕ ಸ್ಥಾಪನೆಗೆ ಹಾಗೂ ಟೆಕ್ನಿಕಲ್ ಎಫರ್ಟ್ಸ್ ನಿವಾರಣೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಪ್ರಯತ್ನ

0

S.N. Channabasappa ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸುವ ಹಾಗೂ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಇಂದು ತೀರ್ಥಹಳ್ಳಿ ರಸ್ತೆಯ ನೀರಿನ ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕರು, “ನಗರದ ಕುಡಿಯುವ ನೀರಿನ ಬೇಡಿಕೆ ಹೆಚ್ಚುತ್ತಿದ್ದು, ಹಾಲಿ ಇರುವ ಘಟಕದ ಮೇಲೆ ಒತ್ತಡ ಹೆಚ್ಚಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇತ್ತೀಚೆಗೆ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗಕ್ಕೆ ಮತ್ತೊಂದು ನೂತನ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಮಂಜೂರು ಮಾಡುವಂತೆ ಅಧಿಕೃತ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಯೋಜನೆಯನ್ನು ತ್ವರಿತವಾಗಿ ಅನುಮೋದನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ತಿಳಿಸಿದರು.

S.N. Channabasappa ಇದೇ ವೇಳೆ ನೀರು ಸರಬರಾಜಿನ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಾದ ಶುದ್ಧೀಕರಣ ಮಾನದಂಡಗಳನ್ನು ಅನುಸರಿಸಲು ನೀರು ಸರಬರಾಜು ಮಂಡಳಿಯ ಇಂಜಿನಿಯರ್‌ಗಳಿಗೆ ಸೂಚಿಸಿದರು. ಪೈಪ್‌ಲೈನ್ ಸೋರಿಕೆ ತಡೆಗಟ್ಟುವುದು ಮತ್ತು ಎಲ್ಲಾ ವಾರ್ಡ್‌ಗಳಿಗೆ ಸಮಾನವಾಗಿ ನೀರು ಹಂಚಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಭೇಟಿಯ ಸಂದರ್ಭದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ , ಸಾರ್ವಜನಿಕರಲ್ಲಿ ಆತಂಕ ಬೇಡ : ಜಿಲ್ಲಾಧಿಕಾರಿ ಸ್ಪಷ್ಟನೆ

0

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ ಎಂಬ ಸುದ್ದಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್. ನಿರಾಕರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎನ್‌ಟಿಪಿಸಿ (NTPC) ಸಂಸ್ಥೆಯು ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಮೀನು ಗುರುತಿಸಿದೆ ಮತ್ತು ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಈ ಸುದ್ದಿಯಿಂದಾಗಿ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವುದು ಗಮನಕ್ಕೆ ಬಂದಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿಲ್ಲ.
ಜಮೀನು ಗುರುತಿಸುವಿಕೆ ಅಥವಾ ಸ್ಥಾವರ ಸ್ಥಾಪನೆಯ ಕ್ರಮಗಳು ನಡೆಯುತ್ತಿವೆ ಎಂಬುದು ಕೇವಲ ವದಂತಿಯಾಗಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಗರ: ಐಟಿಐ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

0

ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು 2026ನೇ ಶೈಕ್ಷಣಿಕ ಸಾಲಿನ ಐಟಿಐ ತರಬೇತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಎಂ.ವಿ., ಇ.ಎಂ., ಎಂ.ಈ.ವಿ., ಸಿ.ಎನ್.ಸಿ., ಇಂಡಸ್ಟ್ರೀಯಲ್ ರೋಬೋಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫಾಕ್ಚರಿಂಗ್, ಮೆಕ್ಯಾನಿಕ್ ಡೀಸೆಲ್, ಡ್ರಸ್ ಮೇಕಿಂಗ್, ವೆಲ್ಡರ್, ಇಂಜಿನಿಯರಿಂಗ್ ಡಿಸೆನ್ ಟೆಕ್ನಿಷಿಯನ್,ಮ್ಯಾನುಫಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಆಂಡ್ ಅಟೋಮಸನ್ ಲಭ್ಯವಿರುವ ಸ್ಥಾನಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು www.cite.karnataka.gov.in ಆನ್‌ಲೈನ್‌ನಲ್ಲಿ ಅಥವಾ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹೊಸನಗರ ರಸ್ತೆ, ರಾಮನಗರ, ಸಾಗರ ಇಲ್ಲಿಗೆ ನೇರವಾಗಿ ಮೇ 08 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 888434984/ 797522263812/ 8073653319/ 9113668875 ಗಳನ್ನು ಸಂಪರ್ಕಿಸುವುದು.

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

0

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾದರೆ ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಅತ್ಯಂತ ಅವಶ್ಯಕ ಎಂದು ಉದ್ಯಮಿ ಜಿ.ಸುನೀಲ್‌ಕುಮಾರ್ ಅಭಿಪ್ರಾಯಪಟ್ಟರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ಮಾಧ್ಯಮಗಳ ಮೂಲಕ ಮಾರ್ಕೆಟಿಂಗ್ ತಂತ್ರಗಳನ್ನು ಅನುಸರಿಸಬೇಕು. ಜನಸಾಮಾನ್ಯರಿಗೆ ತಲುಪುವ ರೀತಿ ಮುನ್ನಡೆಯಬೇಕು ಎಂದು ತಿಳಿಸಿದರು.

ಯುವಪೀಳಿಗೆಯು ಫೇಸಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಪ್ರತಿಯೊಬ್ಬರಿಗೂ ವ್ಯಾಪಾರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಸಾಧ್ಯವಾಗುತ್ತದೆ. ಉದ್ಯಮ ವಹಿವಾಟಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಳಸುವುದರಿಂದ ವೃತ್ತಿ ಕ್ಷೇತ್ರದ ಬಗ್ಗೆ ಹಲವಾರು ರೀತಿ ಪ್ರಚಾರ ಕಾರ್ಯಗಳನ್ನು ನಡೆಸಬಹುದಾಗಿದೆ. ವ್ಯವಹಾರ ದ್ವಿಗುಣಗೊಳ್ಳಲು ಸಹ ಡಿಜಿಟಲ್ ಮಾರ್ಕೆಟಿಂಗ್ ನೆರವಾಗುತ್ತದೆ. ಇಂದಿನ ಪರಿಸ್ಥಿತಿಗೆ ತಕ್ಕತೆ ವೃತ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವದಿಂದ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುವ ಜತೆಯಲ್ಲಿ ಅರಿವು ಮೂಡಿಸುವ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ ರಾಂಪುರ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಂತ್ರಜ್ಞಾನದ ಮಾಹಿತಿಗಳನ್ನು ಅರಿತುಕೊಳ್ಳಬೇಕು. ಹೊಸ ಮಾದರಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವ್ಯಾಪಾರ ವಹಿವಾಟಿಗೆ ಸಹಕಾರಿಯಾಗುತ್ತದೆ ಎಂದರು.

ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಶ್ರೀಕಾಂತ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪರಮೇಶ್ವರ್ ಶಿಗ್ಗಾವ್, ಎಸ್.ಗಣೇಶ್, ಬಿ.ಗಂಗಪ್ಪ, ಅರುಣ್ ದೀಕ್ಷಿತ್, ಎಸ್.ಎನ್.ಸಂಜೀವ್, ಪಿ.ನಾಗರಾಜ್, ರವಿಪ್ರಕಾಶ್ ಕಾಳಾಚಾರ್, ಸತೀಶ್ ಚಂದ್ರ, ವೀಣಾ ಕಿಶೋರ್, ಕೀರ್ತನಾ ಇತರರಿದ್ದರು.

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

0

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಆದರೂ ಗಾಡಿಕೊಪ್ಪ ಸರ್ಕಲ್, ಆಟೋಸ್ಟ್ಯಾಂಡ್. ಪ್ರೈಮರಿ ಶಾಲೆ ಸಮೀಪ ,ಗುಂಡ ಕ್ಯಾಂಟೀನ ಬಳಿ ಎಂಬೆಲ್ಲ ವಿಳಾಸದ ಲೊಕೇಷನ್ ಹೊತ್ತಿದೆ.
ಅಲ್ಲಿ ಬಿ.ಹೆಚ್.ರಸ್ತೆ ಮತ್ತು ಗಾಡಿಕೊಪ್ಪ ಒಳಸಾಗುವ ಮಾರ್ಗದಿಂದಾಗಿ ವೃತ್ತ ನಿರ್ಮಾಣವಾಗಬೇಕು.

ಅಲ್ಲಿನ ವಾಹನಗಳ ಓಡಾಟ ಮಾತ್ರ ಲಂಗಿಲ್ಲ ಲಗಾಮಿಲ್ಲ.
ಈಗ್ಯೆ ನಾವೆಲ್ಲಾ ಗಮನಿಸಿದಂತೆ ಆರೇಳು ವರ್ಷಗಳಿಂದ ಗಾಡಿಕೊಪ್ಪದ ಫಾಸಲೆಯಲ್ಲಿ ಹಲವಾರು ಬಡಾವಣೆಗಳು ನಿರ್ಮಾಣವಾಗಿವೆ.

ಅಲ್ಲಿ ಹಾಹನಗಲಕ ನಿಯಂತ್ರಣ ಬೇಕಿತ್ತು.
ಇದನ್ನ ಸಾರ್ವಜನಿಕರು ಕೋರಿಕೆ ಸಲ್ಲಿಸಿಯಾಗಿತ್ತು.
ಇದೀಗ ಅಲ್ಲಿ ಸಂಚಾರಿ ದೀಪ ಬಂದಿದೆ. ಜಿಲ್ಲಾ ಪೊಲೀಸ್ ಇಲಾಖೆಯ ಈ ಕ್ರಮದಿಂದ ಅಪಘಾತಗಳು ಆಗದೇ ಇರಲಿ ಎಂದು ನಿಟ್ಟುಸಿರು ಬಿಡುವಂತಾಗಿದೆ.
ಮತ್ತೊಂದು ವಾಹನ ಚಾಲಕರಿಗೆ ಪೊಲೀಸ್ ನೆರವು ಬೇಕು. ಅದೆಂದರೆ ರಸ್ತೆ ಡಿವೈಡರ್ ಗಳ ಬಳಿ ಜನ ಇಳಿದು ರಸ್ತೆ ದಾಟುವ ಅಭ್ಯಾಸವಿದೆ.
ಎರಡೂ ರಸ್ತೆಗಳ ವಾಹನ ಸಂಚಾರದಿಂದ ಚಾಲಕರಿಗೆ ಹೆಡ್ ಲೈಟ್ ಗ್ಲೇರಿಂಗ್ ಪರಿಣಾಮದಿಂದ ವ್ಯಕ್ತಿಗಳು,ಪ್ರಾಣಿಗಳು
ವಾಹನಗಳ ಚಾಲಕರಿಗೆ
ಸ್ಪಷ್ಟ ಕಾಣಿಸುವುದಿಲ್ಲ.
ಇದೇ ಅಪಘಾತಕ್ಕೆ ಮತ್ತೊಂದು ಪ್ರಬಲ ಕಾರಣ. ಇದರ ಬಗ್ಗೆ ಸಂಚಾರಿ ಪೊಲೀಸ್ ವ್ಯವಸ್ಥೆ ತೀವ್ರ ಆಲೋಚಿಸಲಿ.
ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯುವ ಮತ್ತೊಂದು
ಸಲಹೆ .
ನಂಜಪ್ ಲೈಫ್ ಕೇರ್ ಆಸ್ಪತ್ರೆ ತಿರುವು ಪ್ರಖರ ಬೀದಿ ದೀಪವಿಲ್ಲ. ಅಲ್ಲಿ ದೀಪ ಬೇಕು.
ಮುಂದೆ ಸಾಗಿದರೆ ಪುರದಾಳ್ ಕ್ರಾಸ್ ನಲ್ಲಿ “ಮೃತ್ಯು ಸ್ಥಳ” ನಿರ್ಮಾಣವಾಗಿದೆ.
ಪುರದಾಳ್ ಕ್ರಾಸ್ ನಲ್ಲಿ ಸಾಗಿದರೆ ಐದು ಬಡಾವಣೆಗಳಿಗೆ ಅದೇ ಮುಖ್ಯಮಾರ್ಗ. ಅಲ್ಲಿ ತಿರುವನಲ್ಲೇ ರಸ್ತೆಪಕ್ಕ
ಜ್ಯೂಸ್ ಮಳಿಗೆ, ಕ್ಯಾಂಟೀನು ಶುರುವಾಗಿ ಅಲ್ಲಿ ಪ್ರಯಾಣಿಕರು ವಾಹನ ನಿಲ್ಲಿಸುತ್ತಾರೆ. ಪುರದಾಳ್ ಕ್ರಾಸ್ ನಿಂದ ಬಿ .ಹೆಚ್.ರಸ್ತೆ ಬರಲು ಶಿವಮೊಗ್ಗದ ಕಡೆಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ.
ಈಗಾಗಲೇ ಈ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯೋರ್ವರು ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಈ ಸ್ಥಳದಲ್ಲೂ ಈಗ ಎಲ್ಲೋ ಲೈಟ್ ಬೇಕು.
ಮುಖ್ಯರಸ್ತೆ ತಿರುವು ಮರೆಯಾಗುವಂತೆ ಹರ್ಷ ದಿ ಫರ್ನ್ ಹೋಟೆಲ್ ಹೋರ್ಡಿಂಗ್ ನಿಲ್ಲಿಸಲಾಗಿದೆ. ಅದನ್ನೂ ಸ್ಥಳಾಂತರಗೊಳಿಸಬೇಕು.
ಪುರದಾಳ್ ಕ್ರಾಸ್ ರಸ್ತೆ ಬಿಸಿಎಂ ಹಾಸ್ಟೆಲ್ ಕಡೆ ಸಾಗುತ್ತದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ, ಕಾರು ಲಾರಿಗಳ ಸಂಚಾರ ವೇಗವಾಗಿ ಬೆಳೆದಿದೆ. ಅಲ್ಲಿ ಸೂಕ್ತವಾದ ಎರಡು ಮೂರು ಹಂಪ್ ಗಳ ವ್ಯವಸ್ಥೆ ಮಾಡಬೇಕು.
ಅಲ್ಲಿರುವ ಸೋಷಿಯಲ್ ಆರ್ಬರ್ , ಅಂಬಿಯನ್ಸ್ ಹಾಲ್, ಹೊಟೇಲ್ ನಲ್ಲಿ ನಡೆಯುವ. ಮದುವೆ, ಇತ್ರೆ ಸಮಾರಂಭಗಳ ಅಬ್ಬರದ ಧ್ವನಿವರ್ಧಕದ ಹಾವಳಿಯನ್ನೂ ನಿಯಂತ್ರಿಸಬೇಕು.

Shivamogga Police ಶಿವಮೊಗ್ಗ ಸ್ಮಾರ್ಟ್ ಆಗುತ್ತಿದೆ. ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಗಾಡಿಕೊಪ್ಪ ಫಾಸಲೆ ಹಾಗಾಗ ಬಾರದು.
ಸಾರ್ವಜನಿಕರೆಲ್ಲರ ಮನವಿ ಎಂದರೆ ಈ ಅಂಶಗಳನ್ನ ಗಮನಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಸಿರಿಮಲ್ಲಿಗೆ ವಸತಿ ಸಂಘವು ಕೋರುತ್ತದೆ.

Madhu Bangarappa ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ ಕಂಡುಕೊಳ್ಳಲು ಶೈಕ್ಷಣಿಕ ಮಾರ್ಗದರ್ಶನ ನೀಡುವ ಉತ್ತಮ ಕಾರ್ಯಕ್ರಮ- ಮಧು ಬಂಗಾರಪ್ಪ.

0

Madhu Bangarappa TV9 ಕನ್ನಡ ವಾಹಿನಿಯು ಶಿವಮೊಗ್ಗದ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ “TV9 Education Expo 2026” ಕಾರ್ಯಕ್ರಮವನ್ನು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿ, ಮಾತನಾಡಿದರು.

ಟಿವಿ9 ಎಜುಕೇಶನ್ ಎಕ್ಸ್‌ಪೋ ಮೇ 02 ಮತ್ತು 03 ರವರೆಗೆ ದಿನಗಳ ಕಾಲ ನಡೆಯಲಿದ್ದು, ದ್ವಿತೀಯ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ ಕಂಡುಕೊಳ್ಳಲು ಶೈಕ್ಷಣಿಕ ಮಾರ್ಗದರ್ಶನ ನೀಡುವ ಒಂದು ಉತ್ತಮ ಕಾರ್ಯಕ್ರಮವಾಗಿದೆ.

Madhu Bangarappa ಈ ಎಜುಕೇಶನ್ ಎಕ್ಸ್‌ಪೋ ಹಲವು ಪ್ರತಿಷ್ಠಿತ ಕಾಲೇಜುಗಳ ಸಹಯೋಗದಲ್ಲಿ ನಡೆಯುತ್ತಿದ್ದು, ಪ್ರತಿಷ್ಠಿತ ಕಾಲೇಜುಗಳು ಇದರಲ್ಲಿ ಭಾಗಿಯಾಗಿವೆ. ಶಿಕ್ಷಣ ಸೇರಿದಂತೆ ಹೊಸ ವೃತ್ತಿ ಅವಕಾಶಗಳ ಬಗ್ಗೆ ತಜ್ಞರ ಜೊತೆಯಲ್ಲಿ ಅಭಿಪ್ರಾಯಗಳನ್ನು ಪಡೆಯಬಹುದಾಗಿದ್ದು ಇದರ ಸದುಪಯೋಗವನ್ನು ಪಡೆಯುವಂತೆ ಸಚಿವರು ತಿಳಿಸಿದರು
ಈ ಒಂದು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಹಾಗೂ ಟಿವಿ9 ವಾಹಿನಿಗೆ ಈ ವೇಳೆ ಧನ್ಯವಾದಗಳನ್ನು ಸಚಿವ ಮಧು ಬಂಗಾರಪ್ಪ ಅರ್ಪಿಸಿದರು.

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

0

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ) ಅಧ್ಯಕ್ಷರಾದ ನಂಜಯ್ಯ ಮಠ ರವರು ಶಿವಮೊಗ್ಗ ನಗರ ವಿಮಾನ ನಿಲ್ದಾಣದಲ್ಲಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಶನಿವಾರ ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿ,ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ತಿಂಗಳ 7 ಮತು 8ರಂದು ತಾವು ಮತ್ತೊಮ್ಮೆ ಆಗಮಿಸಲಿದ್ದು ಅದರೊಳಗಾಗಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಸಂಪೂರ್ಣ ಗೊಳಿಸಬೇಕೆಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಅಽಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದರು.

ಜೂನ್ ತಿಂಗಳ ಮೊದಲನೇ ವಾರದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಅಽಕಾರಿಗಳು ನೀಡಿದರು. ಇದರ ಜೊತೆಗೆ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣವನ್ನು ನಿಲ್ಲಿಸಿರುವುದು ಈ ನೈಟ್ ಲ್ಯಾಂಡಿಂಗ್ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ನೈಟ್ ಲ್ಯಾಂಡಿಂಗ್ ಕಾಮಗಾರಿಗೆ ಸಂಪೂರ್ಣ ರಾಜ್ಯ ಸರ್ಕಾರವೇ ಹಣವನ್ನು ನೀಡಿದ್ದು,
ಇಂಡಿಗೋ ವಿಮಾನವು ಕೇಂದ್ರ ಸರ್ಕಾರದ ಅಸ್ತಿತ್ವದಲ್ಲಿರುವುದರಿಂದ ಪೈಲೆಟ್‌ಗಳ ಕೊರತೆಯಿಂದ ಚಾಲನೆ ಯನ್ನು ನಿಲ್ಲಿಸಿರುತ್ತದೆ ಎಂದು ಅವರು ಹೇಳಿದರು.

Shivamogga Airport ಶಿವಮೊಗ್ಗ ನಗರದಲ್ಲಿ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹಲವು ವರದಿಗಳು ಬಂದಿದ್ದವು.
ಈ ಸಂಬಂಧ ನೈಟ್ ಲ್ಯಾಂಡಿಂಗ್ ಚಾಲನೆಗೆ ಇಂಡಿಗೋ ವಿಮಾನ ಸಂಸ್ಥೆ ಹಾಗೂ ಇನ್ನುಳಿದ ಅನೇಕ ವಿಮಾನ ಸಂಸ್ಥೆ ಗಳೊಂದಿಗೆ ಚರ್ಚಿಸಿ ಶಿವಮೊಗ್ಗ ನಗರಕ್ಕೆ ವಿಮಾನದ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

0

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ “ಅಭಿಮಾನೋತ್ಸವ” ಕಾರ್ಯಕ್ರಮದ ಯಶಸ್ಸಿನ ನಿಮಿತ್ತ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.

ಜನಸಾಮಾನ್ಯರ ಮತ್ತು ರೈತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಯಡಿಯೂರಪ್ಪನವರ ಅಭಿಮಾನಿಗಳು ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕುರಿತು ಮತ್ತು ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಈ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸುದೀರ್ಘವಾಗಿ ಚರ್ಚಿಸಿದರು.

B.Y. Raghavendra ಚಿತ್ರದುರ್ಗದ ಈ ಅಭಿಮಾನೋತ್ಸವವು ಕೇವಲ ಒಂದು ಸಮಾರಂಭವಲ್ಲ, ಇದು ನಮ್ಮ ನಾಯಕರಿಗೆ ಸಲ್ಲಿಸುವ ಗೌರವದ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಮತ್ತು ಅಭಿಮಾನಿಗಳು ಒಗ್ಗಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ಈ ಸಮಾವೇಶವನ್ನು ಐತಿಹಾಸಿಕವಾಗಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.