Shivamogga City Water Supply ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಕ್ಲಾರಿಪ್ಲೋಕ್ಯೂಲೇಟರ್ ದುರಸ್ಥಿ ಕಾಮಗಾರಿ ಇರುವುದರಿಂದ ಮೇ 05 ಮತ್ತು 06 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
Canara Bank ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ತರಬೇತಿ ಪ್ರಕಟಣೆ.
Canara Bank ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರಿನಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 18 ರಿಂದ 49 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು.
ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
35 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್
ತರಬೇತಿಯು
11/05/2026ರಿಂದ ಪ್ರಾರಂಭಗೊಳ್ಳಲಿದೆ.
12 ದಿನಗಳ
ಹೈನುಗಾರಿಕೆ & ಎರೆಹುಳೂ ಗೋಬ್ಬರ ತಯಾರಿಕೆ ಇತ್ಯಾದಿ ) ತರಬೇತಿಯು
14/05/2026ರಿಂದ ಆರಂಭಗೊಳ್ಳಲಿದೆ.
10 ದಿನಗಳ ಅಣಬೆ ಬೇಸಾಯ ತರಬೇತಿಯು
20/05/2026 ರಿಂದ ಆರಂಭಗೊಳ್ಳಲಿದೆ.
Canara Bank ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9481955721, 9743429595, 9164411580, 9632961707, 8722384541, 9449371579,ಗೆ
ಸಂಪರ್ಕಿಸಬಹುದು.
Sharavati ಬೇಸೂರು ಅಣುಸ್ಥಾವರ ಬೇಡ. ವೃಕ್ಷಲಕ್ಷ ಆಂದೋಲನದ ಪರವಾಗಿ ಒತ್ತಾಯ.
Sharavati ಇತ್ತೀಚೆಗೆ ಬಹಿರಂಗಗೊಂಡ ವ್ಯಾಪಕ ಚರ್ಚೆಗೆ, ವಿವಾದಕ್ಕೆ ಕಾರಣವಾದ ಶಿವಮೊಗ್ಗಾ ಜಿಲ್ಲೆ ಸಾಗರ ತಾ.ಬೇಸೂರು ಗ್ರಾಮದ ಬಳಿ NTPC ನಿರ್ಮಾಣಕ್ಕೆ ಭೂಮಿ ನೀಡಿಕೆ ಹಿನ್ನಲೆಯಲ್ಲಿ ರಾಜ್ಯದ ಹಲವು ವಿಜ್ಞಾನಿಗಳು, ಪರಿಸರ ತಜ್ಞರು ರಾಜ್ಯದ ಮುಖ್ಯಮಂತ್ರಿ, ಅರಣ್ಯ, ಕಂದಾಯ ಸಚಿವರಿಗೆ ವಿವರ ಪತ್ರ ಬರೆದಿದ್ದಾರೆ.
ಶರಾವತಿ ಕಣಿವೆ ಸಂಪೂರ್ಣ ಜರ್ಜರಿತವಾಗಿದೆ. ಅಲ್ಲಿಗೆ ಪುನಃನಪುನಃ ಬೃಹತ್ ಮಾರಕ ಯೋಜನೆಗಳನ್ನು ಹೇರಿಕೆ ಮಾಡಬಾರದು ಎಂದು ಒತ್ತಾಯ ಮಾಡಿದ್ದಾರೆ.
ಕಾರವಾರದ ಕಾಳಿ ಕಣಿವೆಯ ಕೈಗಾ ಅಣು ಸ್ಥಾವರ ಸ್ಥಾಪನೆ ಮೊದಲೇ ಡಾ|| ಶಿವರಾಂ ಕಾರಂತ, ನೇತೃತ್ವದಲ್ಲಿ ಇಂಥ ವಿನಾಶಕಾರಿ ಯೋಜನೆ ಬೇಡ ಎಂದು ನಿರಂತರ ಜನಾಂದೋಲನ ನಡೆಸಲಾಗಿತ್ತು ಎಂಬುದನ್ನು ಎತ್ತಿ ಹೇಳಲಾಗಿದೆ.
ಕೈಗಾ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಕ್ಯಾನ್ಸರ ರೋಗ ಹೆಚ್ಚುತ್ತಿರುವ ಸಂಗತಿ ಬಗ್ಗೆ, ಗರ್ಭಪಾತ ಹೆಚ್ಚುತ್ತಿರುವ ಬಗ್ಗೆ ಅಣುಶಕ್ತಿ ಮಂಡಳಿ ಮಾತಾಡುತ್ತಿಲ್ಲ. ಕೈಗಾ ಸಮೀಪದ ಕಾಳಿ ನದಿ ನೀರು ಕುಡಿಯುದಿಲ್ಲ ಎಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಾರವಾರ ಪಕ್ಕದಲ್ಲಿ ಕಾಳಿ ನದಿ ಇದ್ದರೂ ಗಂಗಾವಳಿ ನದಿಯಿಂದ ಕಾರವಾರಕ್ಕೆ ನೀರು ನೀಡುತ್ತಿರುವದೇಕೆ? ಕೈಗಾ ಸ್ಥಾವರ
ಪ್ರದೇಶದಲ್ಲಿ ವಿಕಲಾಂಗ ಮಕ್ಕಳ ಸಂಖ್ಯೆ ಹೆಚ್ಚಾಗಿದೆ? ಅಲ್ಲಿ ನಡೆದಿರುವ ಅಪಘಾತಗಳನ್ನು ಮುಚ್ಚಿಟ್ಟಿರುವದೇಕೆ?
ಕೈಗಾ-ಕಾರೆ ಪ್ರದೇಶದ ಪರಿಸರ ಅಧ್ಯಯನ ವರದಿಗಳನ್ನು ಬಹಿರಂಗ ಪಡಿಸಿಲ್ಲ ಏಕೆ? ಹೀಗೆ ಹಲವು ಮಹತ್ವದ ವೈಜ್ಞಾನಿಕ
ಪ್ರಶ್ನೆಗಳಿಗೆ ಉ.ಕ ಜಿಲ್ಲೆ ಜನತೆಗೆ ಉತ್ತರ ಸಿಕ್ಕಿಲ್ಲ ಎಂದು ಅಲ್ಲಿನ ಅನುಭವಗಳನ್ನು ವಿಜ್ಞಾನಿಗಳು ಎತ್ತಿ ಹೇಳಿದ್ದಾರೆ.
ಯಾಕೆ ಶರಾವತಿ ನದಿ ತೀರ ಬೇಕು
ಸದಾ ನೀರು ಲಭ್ಯವಾಗುವ ಶರಾವತಿ ಹಿನ್ನಿರಿನ ನಾಗರ ತಾ। ಬೇಸೂರು ಗ್ರಾಮ ಸುತ್ತಲಿನ ಸಾವಿರಾರು ಎಕರೆ ಅರಣ್ಯ ಭೂಮಿ ವಿರಳ ಜನಸಂಖ್ಯೆ, ರಸ್ತೆ, ರಾಷ್ಟ್ರೀಯಹೆದ್ದಾರಿ, ರೈಲು-ವಿಮಾನ ಸಂಪರ್ಕ ಇವೆಲ್ಲ ಸಮೀಪದಲ್ಲಿ ಲಭ್ಯವಾಗುತ್ತಿದೆ. ಸಮೃದ್ಧ ಶರಾವತಿ ಮಳೆ ಕಾಡು ಪ್ರದೇಶವನ್ನು NTPC ಆಯ್ಕೆ ಮಾಡಿಕೊಳ್ಳಲು ಹೊರಟಿದೆ ಎಂದು ವಿಶ್ಲೇಶಿಸಲಾಗಿದೆ.
ಖ್ಯಾತ ಪರಿಸರ ತಜ್ಞ ನಾಗೇಶ ಹೆಗಡೆ ಅವರು 35 ವರ್ಷಗಳಿಂದ ಅಣುತ್ಯಾಜ್ಯ ಎಲ್ಲಿ ಹಾತ್ತೀರಿ ಎಂಬ ಪ್ರಶ್ನೆ ಮಾಡುತ್ತಲೇ
ಇದ್ದಾರೆ. ಉತ್ತರವೇ ಸಿಕ್ಕಿಲ್ಲ.
ಶರಾವತಿ ಕಣಿವೆ ಬೃಹತ್ ಜಲವಿದ್ಯುತ್ ಯೋಜನೆಗಳಿಂದ ಜರ್ಜರಿತವಾಗಿದೆ. ಯೋಜನೆಗಳಿಂದ ಭೂಮಿ ಕಳೆದುಕೊಂಡವರಿಗೆ ಬಹಳಷ್ಟು ಜನರಿಗೆ ಭೂಮಿ ಸಿಕ್ಕಿಲ್ಲ ಲಕ್ಷ ಎಕರೆ ಅರಣ್ಯಗಳು ಜಿಲಾಶಯದಲ್ಲಿ ಮುಳುಗಿವೆ. ವಿಕಿರಣ ಪರಿಣಾಮ ಜಲಾಶಯಕ್ಕೆ, ನದೀತಿರದ ಹಳ್ಳಿಗಳ ಜನತೆಗೆ ವ್ಯಾಪಕ ದುಷ್ಪರಿಣಾಮ ಉಂಟು ಮಾಡಲಿವೆ.
ಹೊಸನಗರ, ಸಾಗರ ತಾಲೂಕಿನ ಲಕ್ಷ ರೈತರ ಬದಕು. ಕೃಷಿ, ತೋಟಗಾರಿಕೆಗೆ ಕೃಷಿ ಮಾರುಕಟ್ಟೆಗೆ ವಿಕಿರಣದ ಕುತ್ತು ಬರುವ ಆತಂಕ ಇದ್ದೇ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
10 ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ ಎಂದು ವಿಜ್ಞಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಭೂಕುಸಿತ ಅಧ್ಯಯನ ವರದಿಗಳು ಸಹ್ಯಾದ್ರಿಗೆ ಬೃಹತ ಯೋಜನೆಗಳು ಸಾಧು ಅಲ್ಲ ಎಂದು ಎಚ್ಚರಿಸಿವೆ. ಭೂಕುಸಿತ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಬೇನೂರು- ಕೋಳೂರು,ಹುಲಿ ದೇವರ ಬನ ಹಳ್ಳಿಗಳು ಸೇರಿವೆ.
ಈ ಪ್ರದೇಶಗಳಿಗೆ ಹೊಂದಿಕೊಂಡಂತೆ ಶರಾವತಿ ಅಭಯಾರಣ್ಯವಿದೆ.
ಬೇಸೂರು ಸುತ್ತಲಿನ 30 ಕಿ.ಮೀ ವ್ಯಾಪ್ತಿಯಲ್ಲಿ ಹೆಗ್ಗೋಡು ನೀರಾವರಿ, ವರದಾ ಮೂಲ ಸಿಗಂದೂರು ದೇವಾಲಯ, ಸಾಗರ ಮಾರಿಕಾಂಬಾ ಇರುವಕ್ಕಿ ಕೃಷಿ ವಿಶ್ವವಿಧ್ಯಾಲಯ, ಲಿಂಗನಮಕ್ಕಿ ಆಣೆಕಟ್ಟು, ಅಮ್ಮನ ಘಟ್ಟ, 5 ನದಿ ಮೂಲಗಳು, ಕೊಡಚಾದ್ರಿ, ಕೆಳದಿ, ಇಕ್ಕೇರಿಗಳಂತ ಐತಿಹಾಸಿಕ, ಜೈನ ಪರಂಪರೆಯ ದೇವಾಲಯಗಳು, ಶ್ರೀರಾಮ ಚಂದ್ರಾಪುರ ಮಠ ಮುಂತಾದ ಪ್ರಸಿದ್ಧ ಕ್ಷೇತ್ರಗಳಿವೆ ಜೀವವೇವಿಧ್ಯ ತಾಣಗಳಿವೆ ಎಂದು ಗುರುತು ಮಾಡಲಾಗಿದೆ.
ಇದೇ ಹಳ್ಳಿಗಳ ಸುತ್ತ ಅಮೂಲ್ಯ ಮಿರಿಸ್ವಿಕಾ ಸ್ವಾಂಪ್ ದೇವರ ಕಾಡುಗಳು, ವಿನಾಶದ ಅಂಚಿನ ವೃಕ್ಷ ಜಲಚರ ವೈವಿಧ್ಯಗಳಿವೆ. ಇದೇ ಪ್ರದೇಶಗಳಲ್ಲಿ ಅಡಿಕೆ, ಯಾಲಕ್ಕಿ, ಮೆಣಸು, ಅಪ್ಪೇಮಿಡಿ, ಹಲಸು, ಜಾಯಿಕಾಯಿ ನೇರಿನ ಹಲವು ಸಾಂಬಾರು ಬೆಳೆಗಳಿವೆ.
Sharavati ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ್, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ| ಟಿ.ವಿ.ರಾಮಚಂದ್ರ, ಔಷಧಿ ಮಾಲಿಕಾ ಮಂಡಳಿ ತಜ್ಞ ಸದಸ್ಯರಾಗಿದ್ದ ಡಾ| ಕೇಶವ ಹೆಚ್ ಕೊರ್ಸೆ, ವನ್ಯಜೀವಿ ತಜ್ಞ ಡಾ| ಬಾಲಚಂದ್ರ ಸಾಯಿಮನೆ, ಶಾಸಕ, ವನವಾಸಿ ಕಲ್ಯಾಣದ ಶಾತಾರಾಂ ಸಿದ್ದಿ ಜೀವ ವೈವಿಧ್ಯ ಮಂಡಳಿ ಸದಸ್ಯರಾಗಿದ್ದ ಕೆ. ವೆಂಕಟೇಶ, ಡಾ| ಪ್ರಕಾಶ ಮೇಸ್ತ, ಶ್ರೀಪಾದ ಬಿಚ್ಚುಗತ್ತಿ, ಪರಿಸರ ಅರ್ಥಶಾಸ್ತ್ರಜ್ಞ ಪ್ರೊಲಿ ಬಿ.ಎಂ. ಕುಮಾರ ಸ್ವಾಮಿ. ಮಾಲಿನ್ಯ ನಿಯಂತ್ರಣ. ಮಂಡಳಿಯ ಅಧ್ಯಕ್ಷರಾಗಿದ್ದ ಡಾ.ವಾಮನ ಆಚಾರ್ಯ, ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿದ್ದ ಡಾ.ವೈಬಿ ರಾಮಕೃಷ್ಣ ಸುಸ್ಥಿರ ಮೊದಲಾದ ತಜ್ಞರ ತಂಡ ಅಹವಾಲು ಸಲ್ಲಿಸಿದೆ ಜನಾಲೋಂದನಕ್ಕೆ ಬೆಂಬಲ ವ್ಯಕ್ತ ಪಡಿಸಿದೆ.
ಬದಲಿ ಶಕ್ತಿ ಮೂಲಗಳು ಲಭ್ಯವಿದ್ದರೂ ಅತಿದುಬಾರಿ. ವಿನಾಶಕಾರಿ ಪರಮಾಣು ಸ್ಥಾವರವೇ ಏಕೆ? ಎಂಬ ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಮಲೆನಾಡಿಗೆ ಸೋಲಾರ, ಬಯೋಗ್ಯಾಸ್ ಯೋಜನೆಗಳನ್ನು ಪ್ರಕಟಿಸಿ ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗಾ ಜಿಲ್ಲಾಧಿಕಾರಿಗಳು ಬೇಸೂರು ಅರಣ್ಯ ಪ್ರದೇಧ ಅಲ್ಲಿ ಭೂಮಿ ಅಣು ಸ್ಥಾವರಕ್ಕೆ ಭೂಮಿ ನೀಡಿಕೆ ಅಸಾಧ್ಯ ಎಂದು ಸ್ಪಷ್ಟವಾಗಿ ವರದಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
Kuvempu university ನೀನಾಸಂ ಕೆ.ವಿ.ಅಕ್ಷರ ಅವರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್.
Kuvempu university ಲಾಲ್ ಬಹದ್ದೂರ್ ಕಾಲೇಜಿನ ಹಳೇ ವಿದ್ಯಾರ್ಥಿ,ನಿನಾಸಮ್ ನಿರ್ದೇಶಕರಾದ ಶ್ರೀ ಅಕ್ಷರ ಕೆ.ವಿ ಹೆಗ್ಗೋಡು.. ಇವರಿಗೆ
ಕುವೆಂಪು ವಿಶ್ವವಿದ್ಯಾಲಯ ಶಂಕರ ಘಟ್ಟ ಶಿವಮೊಗ್ಗ ದ ವರು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿದೆ.ಎಂದು ತಿಳಿಸಲು ಸಂತೋಷವಾಗುತ್ತದೆ.ನಾಳೆಯಿಂದ ಡಾ.ಅಕ್ಷರ.ಕೆ.ವಿ ಎಂದು ಕರೆಯೋಣ
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪರವಾಗಿ ಪರಿಸರವಾದಿ,ಕೃಷಿಕ ಕವಲಕೋಡು ವೆಂಕಟೇಶ್ ಅಭಿನಂದಿಸಿದ್ದಾರೆ.
B.Y. Raghavendra ಸಂಘಟನೆಯನ್ನ ಬಲಪಡಿಸಲು ಪಕ್ಷದ ಗೆಲುವು ಹೊಸ ಸ್ಫೂರ್ತಿ ನೀಡಿದೆ- ಬಿ.ವೈ.ರಾಘವೇಂದ್ರ.
B.Y. Raghavendra ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಅಭೂತಪೂರ್ವ ಯಶಸ್ಸನ್ನು ಸಾಧಿಸಿರುವ ಹಿನ್ನೆಲೆಯಲ್ಲಿ, ಇಂದು ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಶಿವಮೊಗ್ಗ ಸಮನಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.
ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವ ಮತ್ತು ಅಭಿವೃದ್ಧಿ ಮಂತ್ರಕ್ಕೆ ಜನರು ನೀಡಿರುವ ಈ ಭರ್ಜರಿ ಬೆಂಬಲವು ಪ್ರಜಾಪ್ರಭುತ್ವದ ವಿಜಯವಾಗಿದೆ ಎಂದು ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ಹೇಳಿದರು.
ಈ ವಿಜಯೋತ್ಸವದಲ್ಲಿ ಜಿಲ್ಲೆಯ ಮುಖಂಡರು ಹಾಗೂ ನೂರಾರು ಉತ್ಸಾಹಿ ಕಾರ್ಯಕರ್ತರೊಂದಿಗೆ
ಸಂಸದರು ಸಿಹಿ ಹಂಚಿ, ಪಟಾಕಿ ಸಿಡಿಸಿ ಜಯಘೋಷಗಳೊಂದಿಗೆ ಸಂಭ್ರಮವನ್ನು ಹಂಚಿಕೊಂಡರು.
B.Y. Raghavendra ಈ ಗೆಲುವು ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ನಮಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತಕ್ಕೆ ಈ ಫಲಿತಾಂಶವು ಹೊಸ ಚೈತನ್ಯ ತುಂಬಿದೆ ಎಂದು ಬಿ.ವೈ.ರಾಘವೇಂದ್ರ ಹೆಮ್ಮೆಯಿಂದ ಮಾತನಾಡಿದರು.
ಈ ಸಂಭ್ರಮದಲ್ಲಿ ಜಿಲ್ಲಾ ಅಧ್ಯಕ್ಷರು ಜಗದೀಶ್, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್. ಚೆನ್ನಬಸಪ್ಪ ಸೇರಿದಂತ ಪ್ರಮುಖ ಜನಪ್ರತಿನಿಧಿಗಳು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
S. N. Chennabasappa ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮ : ರಾಷ್ಟ್ರಭಕ್ತಿ ಹಾಗೂ ಸನಾತನ ಧರ್ಮದ ರಕ್ಷಣೆಗೆ ಸಂದ ಜಯ
S. N. Chennabasappa ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬುತ್ತಿರುವ ಈ ಐತಿಹಾಸಿಕ ಸುಸಂದರ್ಭದಲ್ಲಿ, ಬಂಗಾಳದ ಪುಣ್ಯ ಭೂಮಿಯಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿರುವ ಅಭೂತಪೂರ್ವ ಗೆಲುವು ನಮ್ಮೆಲ್ಲರನ್ನು ರಾಷ್ಟ್ರ ಮತ್ತು ಧರ್ಮದ ಸೇವೆಗೆ ಮತ್ತಷ್ಟು ಬದ್ಧತೆಯಿಂದ ದುಡಿಯಲು ಪ್ರೇರೇಪಿಸಿದೆ. ಪಶ್ಚಿಮ ಬಂಗಾಳದ ಈ ಜಯವು ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ; ಇದು ಕಾರ್ಯಕರ್ತರ ನಿರಂತರ ಪರಿಶ್ರಮ, ಸಂಘಟಿತ ನಾಯಕತ್ವ ಹಾಗೂ ಸಿದ್ಧಾಂತಾಧಾರಿತ ರಾಜಕೀಯಕ್ಕೆ ಸಂದ ಸ್ಪಷ್ಟ ಫಲವಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವಕ್ಕೆ ಸಾಕ್ಷಿಯಾಗಿರುವ ಈ ವಿಜಯವು, ತಾಯಿ ಭಾರತಿಯ ಪಾದಪದ್ಮಗಳನ್ನು ಪೂಜಿಸಲು ಬಂಗಾಳದ ಜನತೆ ನೀಡಿರುವ ಶ್ರೇಷ್ಠ ಉಡುಗೊರೆಯಾಗಿದೆ ಎಂದು ಶಾಸಕರಾದ ಎಸ್. ಎನ್. ಚೆನ್ನಬಸಪ್ಪನವರು ಹೇಳಿದ್ದಾರೆ.
ಗಡಿ ಭಾಗಗಳಲ್ಲಿ ನುಸುಳುಕೋರರ ಭೀತಿಯಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಗೆಲುವು ಅತ್ಯಂತ ಅನಿವಾರ್ಯವಾಗಿತ್ತು. ದೇಶದ ಭದ್ರತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಈ ಫಲಿತಾಂಶವು ಮೈಲಿಗಲ್ಲಾಗಿದ್ದು, ಇದು ಮೂಲಭೂತವಾಗಿ ಅಧರ್ಮದ ವಿರುದ್ಧದ ಹಿಂದೂ ಧರ್ಮದ ಗೆಲುವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಂಕಿಮಚಂದ್ರ ಚಟ್ಟೋಪಾಧ್ಯಾಯ ಹಾಗೂ ರವೀಂದ್ರನಾಥ ಟಾಗೋರರಂತಹ ಮಹನೀಯರು ನಡೆದಾಡಿದ ನೆಲದಲ್ಲಿ ರಾಷ್ಟ್ರಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತರಲು ಯತ್ನಿಸಿದ ಶಕ್ತಿಗಳಿಗೆ ಅಲ್ಲಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಈ ಗೆಲುವು ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಸಮೀಕರಣಗಳನ್ನು ರೂಪಿಸುತ್ತಿರುವುದಲ್ಲದೆ, ಸನಾತನ ಸಂಸ್ಕೃತಿಯ ಅಭಿವ್ಯಕ್ತಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದರು.
S. N. Chennabasappa ವಂದೇ ಮಾತರಂ ಎಂಬುದು ಕೇವಲ ಒಂದು ಐತಿಹಾಸಿಕ ಘೋಷವಾಕ್ಯವಲ್ಲ; ಅದು ಇಂದಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿಯೂ ಮಹತ್ವದ ಸಾರ್ಥಕತೆ ಹೊಂದಿರುವ ಒಂದು ಜೀವಂತ ಸಂಕೇತವಾಗಿದೆ. ರಾಷ್ಟ್ರದ ಸಮಗ್ರತೆ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ನಮ್ಮ ಹೋರಾಟವು ಎಂದಿನಂತೆ ನಿರಂತರವಾಗಿರಲಿದ್ದು, ದೇಶದ ಅಸ್ಮಿತೆಯನ್ನು ಕಾಪಾಡುವ ದೃಢ ಸಂಕಲ್ಪದೊಂದಿಗೆ ನಾವೆಲ್ಲರೂ ಮುನ್ನಡೆಯೋಣ. ರಾಷ್ಟ್ರದ ಸಮಗ್ರತೆ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದಿದ್ದಾರೆ.
ಮೇ 5 ಮತ್ತು 6 ರಂದು ನಗರದಲ್ಲಿ ಕುಡಿಯುವ ನೀರು ವ್ಯತ್ಯಯ
ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಕ್ಲಾರಿಪ್ಲೋಕ್ಯೂಲೇಟರ್ ದುರಸ್ಥಿ ಕಾಮಗಾರಿ ಇರುವುದರಿಂದ ಮೇ 05 ಮತ್ತು 06 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ಶಿವಮೊಗ್ಗ ನಗರ ಉಪವಿಭಾಗ-2 : ಮೆಸ್ಕಾಂ ಜನ ಸಂಪರ್ಕ ಸಭೆ
ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-02 , ಎನ್.ಟಿ.ರಸ್ತೆ, ನ್ಯೂಮಂಡ್ಲಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿಯಲ್ಲಿ ಮೇ 7. ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ, ಈ ಸಭೆಯಲ್ಲಿ ಸಂಬAಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಪತಂಜಲಿ ಕರ್ನಾಟಕ ಜನಪದ ಕಲಾಕೇಂದ್ರದ ವತಿಯಿಂದ ಶ್ರೀ ಕನಕದಾಸರ ಜಯಂತ್ಯೋತ್ಸವ
ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜನಪದ ಕಲಾಕೇಂದ್ರದ ವತಿಯಿಂದ ಶ್ರೀ ಕನಕದಾಸರ ಜಯಂತ್ಯೋತ್ಸವದ ಈ ಸಂದರ್ಭದಲ್ಲಿ ಶ್ರೀಮತಿ ದಾಕ್ಷಾಯಿಣಿ ಮತ್ತು ರಮೇಶ್‌ಬಾಬು ಎಸ್.ಆರ್. ಇವರ ಸಹಕಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರನ್ನು ಗುರುತಿಸಿ ಕನಕಶ್ರೀ ಚೇತನಾ ಪತಂಜಲಿ ರತ್ನ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಪತಂಜಲಿ ಜೆ. ನಾಗರಾಜ್, ಬಾಲಪ್ಪ, ಭವಾನಿ ಶಂಕರ್ ರಾವ್, ಪರಿಸರ ರಮೇಶ್ ಮತ್ತು ಸಂಸ್ಥೇಯ ಸದಸ್ಯರು ಇದ್ದರು. ಈ ಸಂದರ್ಭ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಭ್ರಮೆಯನ್ನು ಬಿಡಬೇಕು : ಆಯನೂರು ಮಂಜುನಾಥ್
ಪತ್ರಕರ್ತರು ಸಮಾಜದ ನೋವುಗಳನ್ನು ಅರಿತು ಅದರ ಪರಿಹಾರಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಅವರ ನೋವುಗಳನ್ನು ಪತ್ರಿಕೆಗಳಲ್ಲಿ ಬರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಭ್ರಮೆಯನ್ನು ಬಿಡಬೇಕು ಎಂದು ಮಾಜಿ ಸಂಸದ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಸರ್ಕಾರಿ ಶಾಲೆಗಳ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ, ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ, ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪತ್ರಿಕಾ ರಂಗ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ಪತ್ರಕರ್ತರ ಅಭ್ಯುದಯ ಆಗುತ್ತಿಲ್ಲ. ಪತ್ರಕರ್ತರನ್ನು ಕಂಡರೆ ರಾಜಕಾರಣಿಗಳು ಭಯ ಪಡುವುದು, ಇವರ ವಿಚಾರ ನಮಗ್ಯಾಕೆ ಎಂದು ಸುಮ್ಮನಿರುತ್ತಾರೆ. ಅದನ್ನೇ ಪತ್ರಕರ್ತರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಪತ್ರಿಕೆಗಳನ್ನು ನಡೆಸುವುದು ಕಷ್ಟಕರ. ಸಮಾಜದಲ್ಲಿ ದೊಡ್ಡ ಮನುಷ್ಯರಂತೆ ಕಾಣುವ ಪತ್ರಕರ್ತರ ಸಮಸ್ಯೆಗಳು ಯಾರ ಕಣ್ಣಿಗೂ ಕಾಣುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಾನೂ ಸಹ ಪತ್ರಿಕೆಯ ಸಂಪಾದಕನಾಗಿ, ಮಾಲೀಕನಾಗಿ ಕೆಲಸ ಮಾಡಿದ್ದೆ. ಅಜೇಯ ಪತ್ರಿಕೆಯನ್ನು ೨ ವರ್ಷಗಳ ಕಾಲ ನಡೆಸಿದ್ದೆ. ಆಗ ನನಗೆ ಅನಿಸಿದ್ದು, ಪತ್ರಿಕೆಯನ್ನು ನಡೆಸುವುದು ಸುಲಭವಲ್ಲ, ಅಂತಾ ಕೈ ಬಿಟ್ಟು ಸುಮ್ಮನಾದೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪತ್ರಿಕೆಗಳನ್ನು ನಡೆಸುವುದು ದುಸ್ಸಾಹಸದ ಕೆಲಸ. ಪತ್ರಕರ್ತರ ಅನುಕೂಲಕ್ಕೆಂದು ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿಶೇಷ ನಿಧಿ ಸ್ಥಾಪನೆ ಮಾಡಿದ್ದೆವು. ಅದರ ಸದ್ಬಳಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇAದಿನ ಕಾರ್ಯಕ್ರಮದಲ್ಲಿ ಎಲ್ಲ ಪತ್ರಿಕಾ ಸಂಘಟನೆಗಳವರನ್ನು ಆಹ್ವಾನಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಹಾಗೆಯೇ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನೂ ಸಹ ದಿನಪತ್ರಿಕೆಯನ್ನು ಹಂಚುತ್ತಿದ್ದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷö್ಮಣರಾವ್‌ರವರು ಮಾತನಾಡಿ, ಪತ್ರಿಕಾ ದಿನಾಚರಣೆಯ ಮಹತ್ವ, ಕರ್ನಾಟಕದಲ್ಲಿ ಪತ್ರಿಕಾರಂಗ ಬೆಳೆದು ಬಂದ ದಾರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಪತ್ರಕರ್ತರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪತ್ರಕರ್ತರ ಹಿತ ಕಡೆಗಣನೆ ಮಾಡಿದೆ. ಪತ್ರಕರ್ತರಿಗೆ ಸಿಗಬೇಕಾದ ಸವಲತ್ತುಗಳಿಗೆ ಕತ್ತರಿ ಹಾಕುತ್ತಿದೆ. ಇದರ ವಿರುದ್ಧ ಸಂಘದಿAದ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಸAಘದ ಕಾನೂನು ಸಲಹೆಗಾರರಾದ ಷಡಾಕ್ಷರಪ್ಪ ಜಿ.ಆರ್. ಮಾತನಾಡಿ, ಪತ್ರಕರ್ತರ ಹಾಗೂ ಸಣ್ಣಪತ್ರಿಕೆಗಳ ಏಳಿಗೆಗೆಂದು ಸ್ಥಾಪಿಸಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸ್ಥಾಪನೆಯ ಉದ್ದೇಶ ಈಡೇರಿಲ್ಲ. ಪತ್ರಿಕಾ ಆಯೋಗಗಳು ಮಾಡಿರುವ ಶಿಫಾರಸ್ಸುಗಳು ಅನುಷ್ಠಾನಗೊಂಡಿಲ್ಲ. ನ್ಯೂಸ್ ಪೇಪರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಸ್ಥಾಪನೆಯಾಗಿಲ್ಲ. ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಹಲವು ದಶಕಗಳಿಂದ ಒತ್ತಡ ಹಾಕುತ್ತಿದ್ದರೂ ರಚನೆಯಾಗಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ಸಂಘಟನೆಗಳು ಕೆಲಸ ನಿರ್ವಹಿಸಬೇಕು. ಧ್ವನಿ ಸಂಘಟನೆ ಕಳೆದ ಮೂರುವರೆ ವರ್ಷಗಳಿಂದ ತನ್ನ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತರಾದ ಸಿ.ವಿ. ರಾಘವೇಂದ್ರ ರಾವ್, ಕಾಮ್ರೇಡ್ ಲಿಂಗಪ್ಪ, ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿವಿ ವರದಿಗಾರ ಶಶಿಧರ, ಬಿ-ಟಿವಿ ವರದಿಗಾರ ಅನಿಲ್ ಹಾಗೂ ಸಾಗರದ ಪತ್ರಕರ್ತ ಓಂಕಾರ್ ತಾಳಗುಪ್ಪ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಾಂಗ್ರೆಸ್ ಯುವ ನಾಯಕ ಹೆಚ್.ಸಿ. ಯೋಗೀಶ್, ನಿವೃತ್ತ ಪ್ರಾಧ್ಯಾಪಕ ಕೆ.ಜಿ. ವೆಂಕಟೇಶ್, ಅಜೇಯ ಪತ್ರಿಕೆ ಸಂಪಾದಕ ಎಂ. ಶ್ರೀನಿವಾಸನ್, ಧ್ವನಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಇರ್ಫಾನ್ ಬೀಳಗಿ, ಉಪಾಧ್ಯಕ್ಷ ಎಸ್.ಎಸ್. ಪಾಟೀಲ್, ದುರ್ಗಿಗುಡಿ ಶಾಲೆಯ ಮುಖ್ಯೋಪಾಧ್ಯಾಯ ಮೋಹನ್, ಜನಶ್ರೀ ಚಾನಲ್‌ನ ಸಿಇಓ ವಿಜಯ್ ಸೇರಿದಂತೆ ಹಲವರು ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಾದ ಎಂ.ಶ್ರೀಕಾAತ್, ಸೂಡಾಧ್ಯಕ್ಷರಾದ ಹೆಚ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಯೋಗೀಶ್, ವೈ.ಹೆಚ್.ನಾಗರಾಜ್, ಪತ್ರಕರ್ತರು ಮತ್ತು ಸಾಹಿತಿಗಳಾದ ಕೆ.ಜಿ.ವೆಂಕಟೇಶ್, ಅಜೇಯ ಪತ್ರಿಕೆ ಸಂಪಾದಕರಾದ ಶ್ರೀನಿವಾಸ್, ರಾಜ್ಯ ಕಮಿಟಿಯ ಪದಾಧಿಕಾರಿಗಳಾದ ಚಿಕ್ಕರಸ್ ಮತ್ತು ಜಗಳೂರು ಲಕ್ಷö್ಮಣ್‌ರಾವ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ದುರ್ಗಿಗುಡಿ ಮತ್ತು ಮೀನಾಕ್ಷಿ ಭವನ ಹತ್ತಿರ ಇರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ೨೦೨೫-೨೬ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯುಲ್ಲಿ ಅತ್ಯುತ್ತಮ ಅಂಕ ಗಳಿಸಿದ ೨೫ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪತ್ರಕರ್ತರ ವಿವಿಧ ಸಂಘಟನೆಯಲ್ಲಿ ಇದ್ದರೂ ಕೂಡಾ ಯಾವುದೇ ತಾರತಮ್ಯವಿಲ್ಲದೆ, ಬೇಧಭಾವ ಇಲ್ಲದೆ ಜಿಲ್ಲಾ ಮಟ್ಟದ ಪತ್ರಿಕೆಯ ಸಂಪಾದಕರಿಗೆ, ವರದಿಗಾರರಿಗೆ ಮತ್ತು ಪತ್ರಿಕಾ ವಿತರಿಕರಿಗೆ, ಡಿಟಿಪಿ ಆಪರೇರ‍್ಸ್, ಪ್ರಿಂಟರ್ ವಿಭಾಗದಲ್ಲಿ ಕೆಲಸ ಮಾಡಿದ ವ್ಯಕ್ತಿಗಳಿಗೆ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಮಿಟಿಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರನ್ನೂ ಸಹ ಗೌರವಿಸಿ, ಸನ್ಮಾನಿಸಲಾಯಿತು. ಅದೇ ರೀತಿ ಶಿವಮೊಗ್ಗ ಜಿಲ್ಲಾ ಘಟಕದ ತಾಲೂಕು ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಿ.ಜಿ. ನಾಗರಾಜ (ರಾಜು) ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ಸಿ. ಶಿವರಾಜ್, ಎಂ. ಅಣ್ಣಪ್ಪ, ನಂದನ್ ಕುಮಾರ್ ಸಿಂಗ್, ಮಹಮ್ಮದ್ ಫಾರೂಖ್, ಹೆಚ್.ಎಸ್.ವಿಷ್ಣುಪ್ರಸಾದ್ ಹಾಜರಿದ್ದರು.
ಸಂಘದ ಖಜಾಂಚಿ ಬಿ.ಸಿ. ಗಿರೀಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ. ಸತೀಶ್ ಗೌಡ ನಿರೂಪಿಸಿದರು. ಉಪಾಧ್ಯಕ್ಷ ಚಿತ್ರಪ್ಪ ಯರಬಾಳ ವಂದಿಸಿದರು. ಸಂಘದ ಸದಸ್ಯ ರಾಬರ್ಟ್ ಪ್ರಾರ್ಥಿಸಿದರು.
