Sharavati ಇತ್ತೀಚೆಗೆ ಬಹಿರಂಗಗೊಂಡ ವ್ಯಾಪಕ ಚರ್ಚೆಗೆ, ವಿವಾದಕ್ಕೆ ಕಾರಣವಾದ ಶಿವಮೊಗ್ಗಾ ಜಿಲ್ಲೆ ಸಾಗರ ತಾ.ಬೇಸೂರು ಗ್ರಾಮದ ಬಳಿ NTPC ನಿರ್ಮಾಣಕ್ಕೆ ಭೂಮಿ ನೀಡಿಕೆ ಹಿನ್ನಲೆಯಲ್ಲಿ ರಾಜ್ಯದ ಹಲವು ವಿಜ್ಞಾನಿಗಳು, ಪರಿಸರ ತಜ್ಞರು ರಾಜ್ಯದ ಮುಖ್ಯಮಂತ್ರಿ, ಅರಣ್ಯ, ಕಂದಾಯ ಸಚಿವರಿಗೆ ವಿವರ ಪತ್ರ ಬರೆದಿದ್ದಾರೆ.
ಶರಾವತಿ ಕಣಿವೆ ಸಂಪೂರ್ಣ ಜರ್ಜರಿತವಾಗಿದೆ. ಅಲ್ಲಿಗೆ ಪುನಃನಪುನಃ ಬೃಹತ್ ಮಾರಕ ಯೋಜನೆಗಳನ್ನು ಹೇರಿಕೆ ಮಾಡಬಾರದು ಎಂದು ಒತ್ತಾಯ ಮಾಡಿದ್ದಾರೆ.
ಕಾರವಾರದ ಕಾಳಿ ಕಣಿವೆಯ ಕೈಗಾ ಅಣು ಸ್ಥಾವರ ಸ್ಥಾಪನೆ ಮೊದಲೇ ಡಾ|| ಶಿವರಾಂ ಕಾರಂತ, ನೇತೃತ್ವದಲ್ಲಿ ಇಂಥ ವಿನಾಶಕಾರಿ ಯೋಜನೆ ಬೇಡ ಎಂದು ನಿರಂತರ ಜನಾಂದೋಲನ ನಡೆಸಲಾಗಿತ್ತು ಎಂಬುದನ್ನು ಎತ್ತಿ ಹೇಳಲಾಗಿದೆ.
ಕೈಗಾ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಕ್ಯಾನ್ಸರ ರೋಗ ಹೆಚ್ಚುತ್ತಿರುವ ಸಂಗತಿ ಬಗ್ಗೆ, ಗರ್ಭಪಾತ ಹೆಚ್ಚುತ್ತಿರುವ ಬಗ್ಗೆ ಅಣುಶಕ್ತಿ ಮಂಡಳಿ ಮಾತಾಡುತ್ತಿಲ್ಲ. ಕೈಗಾ ಸಮೀಪದ ಕಾಳಿ ನದಿ ನೀರು ಕುಡಿಯುದಿಲ್ಲ ಎಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಾರವಾರ ಪಕ್ಕದಲ್ಲಿ ಕಾಳಿ ನದಿ ಇದ್ದರೂ ಗಂಗಾವಳಿ ನದಿಯಿಂದ ಕಾರವಾರಕ್ಕೆ ನೀರು ನೀಡುತ್ತಿರುವದೇಕೆ? ಕೈಗಾ ಸ್ಥಾವರ
ಪ್ರದೇಶದಲ್ಲಿ ವಿಕಲಾಂಗ ಮಕ್ಕಳ ಸಂಖ್ಯೆ ಹೆಚ್ಚಾಗಿದೆ? ಅಲ್ಲಿ ನಡೆದಿರುವ ಅಪಘಾತಗಳನ್ನು ಮುಚ್ಚಿಟ್ಟಿರುವದೇಕೆ?
ಕೈಗಾ-ಕಾರೆ ಪ್ರದೇಶದ ಪರಿಸರ ಅಧ್ಯಯನ ವರದಿಗಳನ್ನು ಬಹಿರಂಗ ಪಡಿಸಿಲ್ಲ ಏಕೆ? ಹೀಗೆ ಹಲವು ಮಹತ್ವದ ವೈಜ್ಞಾನಿಕ
ಪ್ರಶ್ನೆಗಳಿಗೆ ಉ.ಕ ಜಿಲ್ಲೆ ಜನತೆಗೆ ಉತ್ತರ ಸಿಕ್ಕಿಲ್ಲ ಎಂದು ಅಲ್ಲಿನ ಅನುಭವಗಳನ್ನು ವಿಜ್ಞಾನಿಗಳು ಎತ್ತಿ ಹೇಳಿದ್ದಾರೆ.
ಯಾಕೆ ಶರಾವತಿ ನದಿ ತೀರ ಬೇಕು
ಸದಾ ನೀರು ಲಭ್ಯವಾಗುವ ಶರಾವತಿ ಹಿನ್ನಿರಿನ ನಾಗರ ತಾ। ಬೇಸೂರು ಗ್ರಾಮ ಸುತ್ತಲಿನ ಸಾವಿರಾರು ಎಕರೆ ಅರಣ್ಯ ಭೂಮಿ ವಿರಳ ಜನಸಂಖ್ಯೆ, ರಸ್ತೆ, ರಾಷ್ಟ್ರೀಯಹೆದ್ದಾರಿ, ರೈಲು-ವಿಮಾನ ಸಂಪರ್ಕ ಇವೆಲ್ಲ ಸಮೀಪದಲ್ಲಿ ಲಭ್ಯವಾಗುತ್ತಿದೆ. ಸಮೃದ್ಧ ಶರಾವತಿ ಮಳೆ ಕಾಡು ಪ್ರದೇಶವನ್ನು NTPC ಆಯ್ಕೆ ಮಾಡಿಕೊಳ್ಳಲು ಹೊರಟಿದೆ ಎಂದು ವಿಶ್ಲೇಶಿಸಲಾಗಿದೆ.
ಖ್ಯಾತ ಪರಿಸರ ತಜ್ಞ ನಾಗೇಶ ಹೆಗಡೆ ಅವರು 35 ವರ್ಷಗಳಿಂದ ಅಣುತ್ಯಾಜ್ಯ ಎಲ್ಲಿ ಹಾತ್ತೀರಿ ಎಂಬ ಪ್ರಶ್ನೆ ಮಾಡುತ್ತಲೇ
ಇದ್ದಾರೆ. ಉತ್ತರವೇ ಸಿಕ್ಕಿಲ್ಲ.
ಶರಾವತಿ ಕಣಿವೆ ಬೃಹತ್ ಜಲವಿದ್ಯುತ್ ಯೋಜನೆಗಳಿಂದ ಜರ್ಜರಿತವಾಗಿದೆ. ಯೋಜನೆಗಳಿಂದ ಭೂಮಿ ಕಳೆದುಕೊಂಡವರಿಗೆ ಬಹಳಷ್ಟು ಜನರಿಗೆ ಭೂಮಿ ಸಿಕ್ಕಿಲ್ಲ ಲಕ್ಷ ಎಕರೆ ಅರಣ್ಯಗಳು ಜಿಲಾಶಯದಲ್ಲಿ ಮುಳುಗಿವೆ. ವಿಕಿರಣ ಪರಿಣಾಮ ಜಲಾಶಯಕ್ಕೆ, ನದೀತಿರದ ಹಳ್ಳಿಗಳ ಜನತೆಗೆ ವ್ಯಾಪಕ ದುಷ್ಪರಿಣಾಮ ಉಂಟು ಮಾಡಲಿವೆ.
ಹೊಸನಗರ, ಸಾಗರ ತಾಲೂಕಿನ ಲಕ್ಷ ರೈತರ ಬದಕು. ಕೃಷಿ, ತೋಟಗಾರಿಕೆಗೆ ಕೃಷಿ ಮಾರುಕಟ್ಟೆಗೆ ವಿಕಿರಣದ ಕುತ್ತು ಬರುವ ಆತಂಕ ಇದ್ದೇ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
10 ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ ಎಂದು ವಿಜ್ಞಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಭೂಕುಸಿತ ಅಧ್ಯಯನ ವರದಿಗಳು ಸಹ್ಯಾದ್ರಿಗೆ ಬೃಹತ ಯೋಜನೆಗಳು ಸಾಧು ಅಲ್ಲ ಎಂದು ಎಚ್ಚರಿಸಿವೆ. ಭೂಕುಸಿತ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಬೇನೂರು- ಕೋಳೂರು,ಹುಲಿ ದೇವರ ಬನ ಹಳ್ಳಿಗಳು ಸೇರಿವೆ.
ಈ ಪ್ರದೇಶಗಳಿಗೆ ಹೊಂದಿಕೊಂಡಂತೆ ಶರಾವತಿ ಅಭಯಾರಣ್ಯವಿದೆ.
ಬೇಸೂರು ಸುತ್ತಲಿನ 30 ಕಿ.ಮೀ ವ್ಯಾಪ್ತಿಯಲ್ಲಿ ಹೆಗ್ಗೋಡು ನೀರಾವರಿ, ವರದಾ ಮೂಲ ಸಿಗಂದೂರು ದೇವಾಲಯ, ಸಾಗರ ಮಾರಿಕಾಂಬಾ ಇರುವಕ್ಕಿ ಕೃಷಿ ವಿಶ್ವವಿಧ್ಯಾಲಯ, ಲಿಂಗನಮಕ್ಕಿ ಆಣೆಕಟ್ಟು, ಅಮ್ಮನ ಘಟ್ಟ, 5 ನದಿ ಮೂಲಗಳು, ಕೊಡಚಾದ್ರಿ, ಕೆಳದಿ, ಇಕ್ಕೇರಿಗಳಂತ ಐತಿಹಾಸಿಕ, ಜೈನ ಪರಂಪರೆಯ ದೇವಾಲಯಗಳು, ಶ್ರೀರಾಮ ಚಂದ್ರಾಪುರ ಮಠ ಮುಂತಾದ ಪ್ರಸಿದ್ಧ ಕ್ಷೇತ್ರಗಳಿವೆ ಜೀವವೇವಿಧ್ಯ ತಾಣಗಳಿವೆ ಎಂದು ಗುರುತು ಮಾಡಲಾಗಿದೆ.
ಇದೇ ಹಳ್ಳಿಗಳ ಸುತ್ತ ಅಮೂಲ್ಯ ಮಿರಿಸ್ವಿಕಾ ಸ್ವಾಂಪ್ ದೇವರ ಕಾಡುಗಳು, ವಿನಾಶದ ಅಂಚಿನ ವೃಕ್ಷ ಜಲಚರ ವೈವಿಧ್ಯಗಳಿವೆ. ಇದೇ ಪ್ರದೇಶಗಳಲ್ಲಿ ಅಡಿಕೆ, ಯಾಲಕ್ಕಿ, ಮೆಣಸು, ಅಪ್ಪೇಮಿಡಿ, ಹಲಸು, ಜಾಯಿಕಾಯಿ ನೇರಿನ ಹಲವು ಸಾಂಬಾರು ಬೆಳೆಗಳಿವೆ.
Sharavati ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ್, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ| ಟಿ.ವಿ.ರಾಮಚಂದ್ರ, ಔಷಧಿ ಮಾಲಿಕಾ ಮಂಡಳಿ ತಜ್ಞ ಸದಸ್ಯರಾಗಿದ್ದ ಡಾ| ಕೇಶವ ಹೆಚ್ ಕೊರ್ಸೆ, ವನ್ಯಜೀವಿ ತಜ್ಞ ಡಾ| ಬಾಲಚಂದ್ರ ಸಾಯಿಮನೆ, ಶಾಸಕ, ವನವಾಸಿ ಕಲ್ಯಾಣದ ಶಾತಾರಾಂ ಸಿದ್ದಿ ಜೀವ ವೈವಿಧ್ಯ ಮಂಡಳಿ ಸದಸ್ಯರಾಗಿದ್ದ ಕೆ. ವೆಂಕಟೇಶ, ಡಾ| ಪ್ರಕಾಶ ಮೇಸ್ತ, ಶ್ರೀಪಾದ ಬಿಚ್ಚುಗತ್ತಿ, ಪರಿಸರ ಅರ್ಥಶಾಸ್ತ್ರಜ್ಞ ಪ್ರೊಲಿ ಬಿ.ಎಂ. ಕುಮಾರ ಸ್ವಾಮಿ. ಮಾಲಿನ್ಯ ನಿಯಂತ್ರಣ. ಮಂಡಳಿಯ ಅಧ್ಯಕ್ಷರಾಗಿದ್ದ ಡಾ.ವಾಮನ ಆಚಾರ್ಯ, ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿದ್ದ ಡಾ.ವೈಬಿ ರಾಮಕೃಷ್ಣ ಸುಸ್ಥಿರ ಮೊದಲಾದ ತಜ್ಞರ ತಂಡ ಅಹವಾಲು ಸಲ್ಲಿಸಿದೆ ಜನಾಲೋಂದನಕ್ಕೆ ಬೆಂಬಲ ವ್ಯಕ್ತ ಪಡಿಸಿದೆ.
ಬದಲಿ ಶಕ್ತಿ ಮೂಲಗಳು ಲಭ್ಯವಿದ್ದರೂ ಅತಿದುಬಾರಿ. ವಿನಾಶಕಾರಿ ಪರಮಾಣು ಸ್ಥಾವರವೇ ಏಕೆ? ಎಂಬ ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಮಲೆನಾಡಿಗೆ ಸೋಲಾರ, ಬಯೋಗ್ಯಾಸ್ ಯೋಜನೆಗಳನ್ನು ಪ್ರಕಟಿಸಿ ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗಾ ಜಿಲ್ಲಾಧಿಕಾರಿಗಳು ಬೇಸೂರು ಅರಣ್ಯ ಪ್ರದೇಧ ಅಲ್ಲಿ ಭೂಮಿ ಅಣು ಸ್ಥಾವರಕ್ಕೆ ಭೂಮಿ ನೀಡಿಕೆ ಅಸಾಧ್ಯ ಎಂದು ಸ್ಪಷ್ಟವಾಗಿ ವರದಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
