Friday, August 7, 2026
Friday, August 7, 2026
Home Blog Page 115

B.Y. Raghavendra ಪ್ರವಾಸಿ ತಾಣವಾಗಿ ಜೋಗದ ಅಭಿವೃದ್ದಿ ಕಾಮಗಾರಿ ಶೀಘ್ರ ಪೂರೈಸಲು ಸಂಸದ ರಾಘವೇಂದ್ರ ಸೂಚನೆ

0

B.Y. Raghavendra ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣವಾದ ಜೋಗ ಜಲಪಾತವನ್ನು ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಇಂದು ಅಧಿಕಾರಿಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಲು ನಿರ್ಮಾಣವಾಗುತ್ತಿರುವ ಕೆಫೆಟೇರಿಯಾ, ಮಾಹಿತಿ ಕೇಂದ್ರ, ಸುಸಜ್ಜಿತ ರಸ್ತೆಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುವಂತೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಸೂಚನೆ ನೀಡಿದರು

B.Y. Raghavendra ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Bapuji Institute of Management and Research ಭೌತಿಕ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನಕ್ಕೆ ನಮ್ಮ ಬೌದ್ಧಿಕ ಸಾಮರ್ಥ್ಯವೇ ಸವಾಲಾಗಿ ನಿಲ್ಲಬಲ್ಲದು- ಡಾ.ಅಥಣಿ ವೀರಣ್ಣ

0

Bapuji Institute of Management and Research ಭೌತಿಕ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಸವಾಲಾಗಬಲ್ಲದು ಬೌದ್ಧಿಕ ಸಾಮರ್ಥ್ಯ ಮಾತ್ರ, ಭವಿಷ್ಯದಲ್ಲಿ ಇದಕ್ಕೇ ಬೆಲೆ ಎಂದು ಖ್ಯಾತ ಲೆಕ್ಕ ಪರಿಶೋಧಕ ಡಾ ಅಥಣಿ ಎಸ್ ವೀರಣ್ಣ ಅಭಿಪ್ರಾಯ ಪಟ್ಟರು.

ಅವರಿಂದು ಬಾಪೂಜಿ ವಿದ್ಯಾ ಸಂಸ್ಥೆಯ ಲೇಕ್ ವ್ಯೂ ನ ಬಾಪೂಜಿ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ನಲ್ಲಿ ಏರ್ಪಾಡಾಗಿದ್ದ ರಾಜ್ಯಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧೋತ್ಸವ ‘ಆಕ್ಟಾಗನ್ ಸ್ಪೆಕ್ಟ್ರಾ’ವನ್ನು ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕೇ ಹೊರತು ಅದಕ್ಕೆ ಶರಣಾಗಬಾರದು, ಅದನ್ನೂ ಮೀರಿದ ಬುದ್ಧಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು, ಇದಕ್ಕೆ ಪೂರಕವಾಗಿ ಇಂತಹ ರಾಜ್ಯಮಟ್ಟದ ಸ್ಪರ್ಧೋತ್ಸವಗಳು ನಡೆಯುತ್ತಿದ್ದು ಬಹುಮಾನಗಳಿಕೆಗಿಂತ ಭಾಗವಹಿಸುವಿಕೆಯಿಂದಲೇ ಬುದ್ಧಿ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಹಾಗೂ ವೃದ್ಧಿಸಿಕೊಳ್ಳಬಹುದು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ 17 ಕಾಲೇಜುಗಳಿಂದ 29 ತಂಡಗಳಲ್ಲಿ 232 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಎಂಟು ವೈವಿಧ್ಯಮಯ ಸ್ಪರ್ಧೆಗಳು ಇಲ್ಲಿ ಏರ್ಪಾಡಾಗಿವೆ ಎಂದರು.

Bapuji Institute of Management and Research ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ ಸ್ವಾಮಿ ತ್ರಿಭುಬನಾನಂದ ಹೆಚ್ ವಿ ಪ್ರಾಸ್ತಾವಿಕ ನುಡಿಗಳ ನಾಡಿದರು. ಪ್ರಾಂಶುಪಾಲ ಡಾ. ಪ್ರಕಾಶ್ ಎಸ್ ಅಳಲಗೇರಿ, ವಿಭಾಗ ಮುಖ್ಯಸ್ಥ ಡಾ. ಸುಜಿತ್ ಕುಮಾರ್ ಎಸ್ ಹೆಚ್, ಡಾ. ವಿಜಯ್ ಕೆ ಎಸ್ ಉಪಸ್ಥಿತಿಯಲ್ಲಿ ಸಂಜನಾ ವಿ ಎನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ. ಶ್ರುತಿ ಕೆ ಕೋರಿದರು. ಪ್ರಜ್ವಲ್ ಜೆ ಪಿ, ನರೇಶ್ ಹೆಚ್ ಯು ತಂಡಗಳ ಪರಿಚಯ ಮಾಡಿದರು. ಬೋಧಕ ವರ್ಗದ ಡಾ. ಚೈತ್ರ ಕೆ ಎಸ್, ಪ್ರೊಫೆಸರುಗಳಾದ ಸತೀಶ್ ಡಿ ರಾಯ್ಕರ್, ಸರೋಜಾ ಸಾದರ್, ಮೊಹಮ್ಮದ್ ಎಂ, ಸುಬ್ರಹ್ಮಣ್ಯ, ಸಹನ್ ಸಿ ವೈ, ವನೀಶ್ ಡಿ ಪಟೇಲ್, ರಾಜಶ್ರೀ ಬಿ ಆರ್, ಅಕ್ಷಯ್ ಹೋಲೂರ್, ಸಂಜಯ್ ಸಿ, ಸಿರೀಶ ವಿ, ಮಂಜುನಾಥ್ ಭಾಗವಹಿಸಿದ್ದು ಡಾ ಶ್ರುತಿ ವಂದನೆ ಸಲ್ಲಿಸಿದರು.

-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-

Revenue Department ಮೇ 1 & 2 ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

0

Revenue Department ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ, ಶಿವಮೊಗ್ಗ ಇವರ ಸಹಯೋಗದಲ್ಲಿ ಮೇ 01 ರ ಶುಕ್ರವಾರ ಬೆಳಿಗ್ಗೆ 8.00 ಕ್ಕೆ ರಾಜ್ಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಜೆ.ಎನ್.ಎನ್.ಸಿ.ಇ, ಕಾಲೇಜು ಮೈದಾನ, ನವುಲೆ ಇಲ್ಲಿ ಏರ್ಪಡಿಸಲಾಗಿದೆ.
ಕಂದಾಯ ಇಲಾಖೆ ಸಚಿವರಾದ ಕೃಷ್ಣಬೈರೇಗೌಡ ಇವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು.
Revenue Department ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಇವರು ಕ್ರೀಡಾ ಜ್ಯೋತಿ ಬೆಳಗಿಸುವುರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ಯೋಗೇಶ್ ನಾಯ್ಕ್ ಅಧ್ಯಕ್ಷತೆ ವಹಿಸುವರು. ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಆಯುಕ್ತಾಲಯದ ಕಂದಾಯ ಆಯುಕ್ತರು, ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಮತ್ತು ಕುಂದುಕೊರತೆಗಳ ವಿಶೇಷ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಪ್ರಾದೇಶಿಕ ವಿಭಾಗದ ಆಯುಕ್ತರು, ಜಿಲ್ಲಾಧಿಕಾರಿಗಳು ಇವರ ಗೌರವ ಉಪಸ್ಥಿತಿ ಇರಲಿದೆ. ಮತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಧಿಕಾರಿಗಳು, ರಾಜ್ಯಾಧ್ಯಕ್ಷರು, ಎಲ್ಲಾ ಜಿಲ್ಲಾಧ್ಯಕ್ಷರು, ಎಲ್ಲಾ ತಾಲ್ಲೂಕು ಅಧ್ಯಕ್ಷರು, ಎಲ್ಲಾ ಹಂತದ ಪದಾಧಿಕಾರಿಗಳು ಹಾಗೂ ರಾಜ್ಯದ ಸಮಸ್ತ ಗ್ರಾಮದ ಆಡಳಿತಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಮೇ1. ಶಿವಮೊಗ್ಗದ ಹೊಸಹಳ್ಳಿ ,ಲಕ್ಷ್ಮೀಪುರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -2ರ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಹೊಸಹಳ್ಳಿ, ಲಕ್ಷ್ಮೀಪುರ, ಮೈಲಾರಪ್ಪ ಕ್ಯಾಂಪ್, ವೀರಾಪುರ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಈಚಲವಾಡಿ, ಬಸಾಪುರ ಶಾರದಾ ಕಾಲೋನಿ, ಶರಾವತಿನಗರ, ಐಹೊಳೆ ರಸ್ತೆ, ಶ್ರೀನಿವಾಸ ಲೇಔಟ್ ಹಾಗೂ ಸುತ್ತಮುತ್ತಲಿನ ಐಪಿ ಪ್ರದೇಶಗಳಲ್ಲಿ ಮೇ.01 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

MESCOM ಮೇ1. ಶಿವಮೊಗ್ಗದ ಹೊಸಹಳ್ಳಿ ,ಲಕ್ಷ್ಮೀಪುರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -2ರ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಹೊಸಹಳ್ಳಿ, ಲಕ್ಷ್ಮೀಪುರ, ಮೈಲಾರಪ್ಪ ಕ್ಯಾಂಪ್, ವೀರಾಪುರ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಈಚಲವಾಡಿ, ಬಸಾಪುರ ಶಾರದಾ ಕಾಲೋನಿ, ಶರಾವತಿನಗರ, ಐಹೊಳೆ ರಸ್ತೆ, ಶ್ರೀನಿವಾಸ ಲೇಔಟ್ ಹಾಗೂ ಸುತ್ತಮುತ್ತಲಿನ ಐಪಿ ಪ್ರದೇಶಗಳಲ್ಲಿ ಮೇ.01 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಅಬಕಾರಿ ಇಲಾಖೆಯಲ್ಲಿ ಮುಟ್ಟುಗೋಲಾದ ವಾಹನದ ಬಹಿರಂಗ ಹರಾಜು

0

ಶಿವಮೊಗ್ಗ ಜಿಲ್ಲಾ ಅಬಕಾರಿ ನಿರೀಕ್ಷಕರವರ ಕಛೇರಿ ವತಿಯಿಂದ ಮೇ 06 ರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ವಲಯ ನಂ-1 ಕಛೇರಿಯ ಅಬಕಾರಿ ಭವನ ಆವರಣದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ 02 ದ್ವಿ ಚಕ್ರ ವಾಹನವನ್ನು ಯಥಾಸ್ಥಿತಿಯಾಗಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗದಿತ ಸಮಯಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ವಲಯ ನಂ.1 ರ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.

Klive Special Article ವಿಶಿಷ್ಟಾವತಾರಾ.. ನರಸಿಂಹಾವತಾರ ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

0

Klive Special Article ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವೇ ನೃಸಿಂಹಾವತಾರ.
ದಶಾವತಾರದಲ್ಲಿ ಇದೊಂದು ವಿಶಿಷ್ಟಾವತಾರ.
ಹೆಸರೇ ಹೇಳುವಂತೆ ಅರ್ಧಭಾಗ ಮನುಷ್ಯ ಶರೀರ,ಉಳಿದರ್ಧ ಭಾಗ ಮೃಗ(ಸಿಂಹ)ದ ಶರೀರವನ್ನು ಹೊಂದಿರುವ ಅವತಾರ.
ದಾನವ ಹಿರಣ್ಯಕಶಿಪು ಸಾವನ್ನು ಗೆಲ್ಲಲು ಬಹಳ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನನ್ನು ಪ್ರತ್ಯಕ್ಷ ಗೊಳಿಸಿ ಕೊಳ್ಳುತ್ತಾನೆ.ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವನಿಂದ ಸಾವನ್ನೇ
ವರವನ್ನು ನೀಡುವಂತೆ ಕೇಳುತ್ತಾನೆ. ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರಸನ್ನನಾದ ಬ್ರಹ್ಮದೇವರು ಹೇಳುತ್ತಾನೆ ಭೂಮಿಯಲ್ಲಿ ಹುಟ್ಟಿದವರಿಗೆ ಮರಣವಿದ್ದೇ ಇರುತ್ತದೆ.ಈ ನಿಯಮವನ್ನು ಬದಲಾಯಿಸಲು ಸಾಧ್ಯವೇ ಇಲ್ಲ.
ಆದ್ದರಿಂದ ನೀನು ಬೇರೆಯಾವುದಾದರೂವರವನ್ನು ಕೇಳುಎಂದುಬ್ರಹ್ಮದೇವನುಹೇಳುತ್ತಾನೆ.ಹಿರಣ್ಯಕಶಿಪುಬಹಳಯೋಚನೆಮಾಡಿ”ತನಗೆಮನುಷ್ಯರಿಂದಾಗಲೀ,ಮೃಗಗಳಿಂದಾಗಲೀ,ಯಾವುದೇಶಸ್ತ್ತ್ರಾಸ್ತ್ರಗಳಿಂದಾಗಲೀ,ಮನೆಯಒಳಗಾಗಲೀಹೊರಗಾಗಲೀ,ಹಗಲಿನಲ್ಲಾಗಲೀರಾತ್ರಿಯಲ್ಲಾಗಲೀಸಾವುಬಾರದಂತೆವರವನ್ನುಕೊಡುಎಂದುಬ್ರಹ್ಮನಲ್ಲಿಪ್ರಾರ್ಥಿಸುತ್ತಾನೆ.ಬ್ರಹ್ಮದೇವನು ತಥಾಸ್ತು ಎಂದು ವರವನ್ನು ಕೊಟ್ಟುಅದೃಶ್ಯನಾಗುತ್ತಾನೆ.
ಹಿರಣ್ಯಕಶಿಪುವಿನಪತ್ನಿಕಯಾದುಗರ್ಭಿಣಿಯಾಗಿದ್ದಾಗ ಕೆಲವು ಕಾಲ ನಾರದ ಮಹರ್ಷಿಗಳ ಆಶ್ರಮದಲ್ಲಿ
ಇರಬೇಕಾದ ಪ್ರಸಂಗ ಬರುತ್ತದೆ. ಕಯಾದುವಿನ ಹೊಟ್ಟೆಯಲ್ಲಿ ಹರಿಯ ಭಕ್ತ ಪ್ರಹ್ಲಾದನು ಬೆಳೆಯುತ್ತಿರುತ್ತಾನೆ.ನಾರದರು ಮಾಡುತ್ತಿದ್ದ ಶ್ರೀಹರಿಯ ಗುಣಗಾನ ಕಯಾದುವಿನ ಹೊಟ್ಟೆಯಲ್ಲಿದ್ದ ಪ್ರಹ್ಲಾದನಿಗೆ ಹರಿಯ ಮೇಲಿನ ಭಕ್ತಿಯನ್ನು ಇಮ್ಮಡಿಗೊಳಿಸಿತ್ತು.
ತನ್ನ ಕಠಿಣ ತಪಸ್ಸನ್ನು ಮುಗಿಸಿಕೊಂಡು ಬಂದ ಮೇಲೆ ಹಿರಣ್ಯಕಶಿಪು ಕಯಾದು ಗಂಡುಮಗುವಿನ ತಾಯಿಯಾಗಿರುವ ವಿಷಯ ಕೇಳಿ ಬಹಳ ಸಂತೋಷಗೊಳ್ಳುತ್ತಾನೆ.ಪ್ರಹ್ಲಾದನೆಂದು ನಾಮಕರಣವೂ ಆಗುತ್ತದೆ.
ಹಿರಣ್ಯಕಶಿಪುವಿಗೆ ಮಗ ಹುಟ್ಟಿರುವ ವಿಷಯ ಕೇಳಿ ಶ್ರೀಹರಿಯ ಬದ್ಧ ದ್ವೇಷಿಯಾದ ಇವನು ತನ್ನ ಜೊತೆ ಹೋರಾಡಲು ತನ್ನ ಮಗನೂ ಜೊತೆಗೆ ಸಿಗುತ್ತಾನೆ ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕುತ್ತಾನೆ.
ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿಕೊಡುತ್ತಾನೆ.
Klive Special Article ಗುರುಕುಲದಲ್ಲಿಯೂ ಬಾಲಕ ಪ್ರಹ್ಲಾದನಿಗೆ ಶ್ರೀಹರಿಯದೇ ಧ್ಯಾನ.ದಾನವಕುಲದಲ್ಲಿ ಹುಟ್ಟಿದ
ಪ್ರಹ್ಲಾದನನ್ನು ಕಟುಕತನದಿಂದ ಬೆಳೆಸಬೇಕೆಂದರೂ ಅದು ಸಾಧ್ಯವಾಗದೆ ಬಹಳಮೃದು ಮನಸ್ಸಿನಿಂದ ಹರಿಯ ನಾಮವನ್ನೇತನ್ನಉಸಿರಲ್ಲಿಸೇರಿಸಿಕೊಂಡು ಬೆಳೆಯತೊಡಗಿದ ಪ್ರಹ್ಲಾದ. ಪ್ರಹ್ಲಾದನು ಎಷ್ಟು ಹರಿಭಕ್ತನಾಗಿದ್ದನೋ ಅಷ್ಟೇ
ಹರಿದ್ವೇಷಿಯಾಗಿದ್ದ ಹಿರಣ್ಯಕಶಿಪು.
ಹಿರಣ್ಯಕಶಿಪುಪ್ರಹ್ಲಾದನನ್ನುತನ್ನಕಡೆಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂವಿಫಲವಾಗುತ್ತವೆ.
ಪ್ರಹ್ಲಾದನೇ ತನ್ನ ತಂದೆಗೆ “ಅಪ್ಪಾ ಶ್ರೀಹರಿಯು ಎಲ್ಲಾ ಕಡೆಯೂ ಇದ್ದಾನೆ,ಅವನೇ ನಮ್ಮೆಲ್ಲರನ್ನು
ರಕ್ಷಿಸುತ್ತಿರುವನು”ಎಂದು ಹೇಳುತ್ತಾನೆ. ಹರಿ,ಹರಿ ಎಂಬ ಶಬ್ದವನ್ನು ಪದೇಪದೇ ಪ್ರಹ್ಲಾದನ
ಬಾಯಿಂದ ಕೇಳಿ ಕೇಳಿ ಸಾಕಾಗಿ ಹಿರಣ್ಯ ಕಶಿಪು ತನ್ನ ಅರಮನೆಯ ಕಂಭವೊಂದನ್ನು ತೋರಿಸಿ
ಈ ಕಂಭದಲ್ಲಿದ್ದಾನೇಯೋ ನಿನ್ನ ಶ್ರೀಹರಿ ಎಂದು ಕೇಳಿದಾಗ ಪ್ರಹ್ಲಾದನು ಹೌದಪ್ಪಾ ಶ್ರೀಹರಿ ಎಲ್ಲಾ
ಕಡೆಯೂ ಇದ್ದಾನೆ,ಈ ಕಂಭದಲ್ಲಿಯೂ ಇದ್ದಾನೆ, ಆ ಕಂಭದಲ್ಲಿಯೂ ಇದ್ದಾನೆ ಎಂದು ಹೇಳಿದ ಕೂಡಲೇ ಹಿರಣ್ಯಕಶಿಪು ತನ್ನ ಗದೆಯಿಂದ ತನ್ನೆದುರಿನ ಕಂಭಕ್ಕೆ ಹೊಡೆಯುತ್ತಾನೆ. ಕೂಡಲೇ ಭಯಂಕರ ಶಬ್ದದಿಂದ ಕಂಬದಿಂದ ನೃಸಿಂಹರೂಪದಿಂದ ಶ್ರೀಹರಿಯು ಪ್ರತ್ಯಕ್ಷನಾಗಿ ಹಿರಣ್ಯಕಶಿಪುವನ್ನು ಸಂಹಾರಮಾಡುತ್ತಾನೆ.ಹಿರಣ್ಯ
ಕಶಿಪುವನ್ನು ಸಂಹಾರ ಮಾಡಿದ ನೃಸಿಂಹರೂಪಿ ಶ್ರೀಹರಿಯನ್ನು ಶಾಂತವಾಗಿಸಲುಸ್ವತಃ:ಲಕ್ಷ್ಮೀದೇವಿಯಿಂದಲೇ ಸಾಧ್ಯವಾಗುವುದಿಲ್ಲ.
ಬಾಲಕ ಪ್ರಹ್ಲಾದನೇ ನೃಸಿಂಹ ರೂಪಿಯಾದ ಭಗವಂತನನ್ನು ಪ್ರಾರ್ಥನೆ ಮಾಡಿ ಸಮಾಧಾನ ಮಾಡುತ್ತಾನೆ.
ನೃಸಿಂಹದೇವರು ತನ್ನ ಅಂತರಂಗ ಭಕ್ತ ಪ್ರಹ್ಲಾದನ
ಪ್ರಾರ್ಥನೆಯ ಮೇರೆಗೆ ಶಾಂತನಾಗುವುದಲ್ಲದೇ ಅವನ ಪ್ರಾರ್ಥನೆಯಂತೆ ಹಿರಣ್ಯಕಶಿಪುವಿಗೆ ಮುಕ್ತಿಯನ್ನೂ ದಯಪಾಲಿಸುತ್ತಾನೆ.
ನಾವೂ ಹಿರಣ್ಯಕಶಿಪುವಿನಂತೆ ನಮ್ಮೊಳಗಿರುವ
ಕೋಪ,ಅಸಹನೆ,ದ್ವೇಷ ಭಾವನೆ,ಅಸೂಯೆ,ಇವುಗಳನ್ನು ಹೊರಹಾಕಿ ಎಲ್ಲರ ಮೇಲೆ ಪ್ರೀತಿ,ವಿಶ್ವಾಸ,ಒಳ್ಳೆಯ ಮನಸ್ಸನ್ನು
ನಮ್ಮೊಳಗೆ ತುಂಬಿಕೊಂಡು ಶ್ರೀನೃಸಿಂಹದೇವರ ಅನುಗ್ರಹಕ್ಕೆ ಪಾತ್ರರಾಗೋಣ.

ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶಕ್ಕೆ ‌ಅರ್ಜಿ ಆಹ್ವಾನ

0

ಶಿವಮೊಗ್ಗ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ), ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲಿಷ್), ಅಪೆರಲ್ ಡಿಸೈನಿಂಗ್ ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸ್ಗಳು ಲಭ್ಯವಿದೆ.
ಅಭ್ಯರ್ಥಿಗಳು ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‌ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ (ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ 06 ಭಾವಚಿತ್ರಗಳೊಂದಿಗೆ ಮೇ 02 ರೊಳಗಾಗಿ ಸಲ್ಲಿಸುವುದು. ಪ್ರಾಂಶುಪಾಲರ ಹಂತದಲ್ಲಿಯೇ ಮೆರಿಟ್ ಹಾಗೂ ರೋಸ್ಟರ್‌ಗನುಗುಣವಾಗಿ ಆಯ್ಕೆ ಮಾಡಲಾಗುವುದು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಆರ್, ಸುನೀಲ್, ಮೊ.ಸಂ: 9480542763 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ತಿಳಿಸಿದ್ದಾರೆ.

S.N. Channabasappa ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ‌ .ತುರ್ತು ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದ ಶಾಸಕ ಚೆನ್ನಿ

0

S.N. Channabasappa ಮಹಾನಗರ ಪಾಲಿಕೆಯಲ್ಲಿ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪ್ರಮುಖ ತೀರ್ಮಾನಗಳು ಹೀಗಿವೆ:

ಗುಂಡಿ ಮುಕ್ತ ರಸ್ತೆ: ನಗರಾದ್ಯಂತ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಯಿತು. ಬಾಕಿ ಇರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ವರದಿ ನೀಡಲು ಸೂಚಿಸಲಾಯಿತು.

ಮಳೆಗಾಲದ ಮುನ್ನೆಚ್ಚರಿಕೆ: ಮುಂಬರುವ ಮಳೆಗಾಲದ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

ಅಧಿಕಾರಿಗಳಿಗೆ ಎಚ್ಚರಿಕೆ: ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮತ್ತು ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕರ್ತವ್ಯ ಲೋಪವಾದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ವಿವಿಧೆಡೆ ಇರುವ ಕನ್ಸರ್ವೆನ್ಸಿ ರಸ್ತೆಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಿ, ಅವುಗಳನ್ನು ವ್ಯವಸ್ಥಿತ ವಾಹನ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಬೀದಿ ದೀಪ ನಿರ್ವಹಣೆ: ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳು ಪ್ರತಿದಿನ ವಾರ್ಡ್‌ಗಳಲ್ಲಿ ಸಂಚರಿಸಿ ಬೀದಿ ದೀಪಗಳ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಬೇಕು. ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಯಿತು.

ಕೆರೆ ಮತ್ತು ಪಾರ್ಕ್‌ಗಳ ಅಭಿವೃದ್ಧಿ: ಅಮೃತ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆರೆ ಹಾಗೂ ಉದ್ಯಾನವನಗಳ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಯ ವಿವರ ಪಡೆಯಲಾಯಿತು.

S.N. Channabasappa ನಗರೋತ್ಥಾನ ಯೋಜನೆ: NGT ಹಾಗೂ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಯಣ್ಣ ಗೌಡ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

VISL Bhadravati ಮೃತ ವಿನೋದ ಕುಮಾರ್ ಕುಟುಂಬಸ್ಥರಿಗೆ, ಗುತ್ತಿಗೆದಾರರ ಕಡೆಯಿಂದ ₹8 ಲಕ್ಷ ಪರಿಹಾರ – ಶಾಸಕ ಬಿ.ಕೆ.ಸಂಗಮೇಶ್ವರ್

0

VISL Bhadravati ವಿ ಐ ಎಸ್ ಎಲ್ ಕಾರ್ಖಾನೆಯಲ್ಲಿ ಸೋಮವಾರ ಕ್ರೇನ್ ಮೂಲಕ ಸಾಮಗ್ರಿಗಳನ್ನು(ಬಿಲ್ಲೆಡ್) ಇಳಿಸುವ ಸಂದರ್ಭದಲ್ಲಿ ಕೇಬಲ್ ತುಂಡಾಗಿ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ, ಭದ್ರಾವತಿ ಗುತ್ತಿಗೆ ಕಾರ್ಮಿಕ ಸಂಘದ ಮಾಜಿ ಉಪಾಧ್ಯಕ್ಷರಾದ ಶ್ರೀ ವಿನೋದ್ ಕುಮಾರ್ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಸಂತಾಪ ವ್ಯಕ್ತಪಡಿದ್ದಾರೆ.

ಈ ಸಂಬಂಧ ವಿನೋದ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ವಿ ಐ ಎಸ್ ಎಲ್ ಕಾರ್ಖಾನೆಯ ಅಧಿಕಾರಿಗಳು ಮತ್ತು ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಿ ಹಾಗೂ ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮೃತ ಗುತ್ತಿಗೆ ಕಾರ್ಮಿಕರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಲು ಸೂಚಿಸಿದರು.

VISL Bhadravati ಕಾರ್ಮಿಕರ ಪರವಾಗಿ ಸದಾ ಧ್ವನಿಯೆತ್ತುತ್ತಿದ್ದ ವಿನೋದ್ ರವರ ಕುಟುಂಬದವರಿಗೆ ಅರ್ಥಿಕವಾಗಿ ಅನೂಕೂಲವಾಗುವ ಸಲುವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ, ಅವಲಂಬಿತರಿಗೆ ಶಾಶ್ವತ ಉದ್ಯೋಗ, ಗುತ್ತಿಗೆದಾರನ ಕಡೆಯಿಂದ ಮಾತನಾಡಿ 8 ಲಕ್ಷ ಪರಿಹಾರ ಕೊಡಿಸಿ ವೈಯಕ್ತಿಕವಾಗಿ ಹಣ ಸಹಾಯ ಮಾಡಿದ್ದಾರೆ. ಇದಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ (
ಸಿ.ಎಂ ಫಂಡ್ ನಲ್ಲಿ) ಗರಿಷ್ಠ ಹಣ ಕೊಡಿಸುವುದಾಗಿ ಶಾಸಕ ಸಂಗಮೇಶ್ವರ್ ಘೋಷಿಸಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಬಿ ಎಸ್ ಗಣೇಶ್, ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿ. ಐ ಎಸ್ ಎಲ್ ಕಾರ್ಖಾನೆಯ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.