Monkey Attack ಚಿಕ್ಕಮಗಳೂರು, ತಾಲ್ಲೂಕಿನ ಮಾಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗನ ಹಾವಳಿಯಿಂದ ಓರ್ವ ಬಾಲಕ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಪ್ರಕರಣ ಸೋಮವಾರ ವರದಿಯಾಗಿದೆ.
ಈ ಸಂಬoಧ ಬಾಲಕ ತಂದೆ ಹಾಗೂ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತ ನಾಡಿ ಶಾಲೆಯ ಸುತ್ತಮುತ್ತಲು ಸುಮಾರು 40-50 ಮಂಗಗಳು ಶಾಲಾವರಣದಲ್ಲಿ ಅತ್ತಿತ್ತ ಅಲೆದಾಡುತ್ತಿದ್ದು ಇದರಿಂದ ಪ್ರತಿನಿತ್ಯ ಶಾಲೆಗೆ ತೆರಳುವ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ ಎಂದರು.
ಶಾಲೆಯಲ್ಲಿ 6 ರಿಂದ 11 ವರ್ಷದ ಬಾಲಕ-ಬಾಲಕಿಯರು ವಿದ್ಯಾಭ್ಯಾಸದಲ್ಲಿದ್ದಾರೆ. ಕೆಲವು ಬಿಡುವಿನ ಸಮ ಯದಲ್ಲಿ ಆಟೋಟ ಅಥವಾ ಸಸಿಗಳಿಗೆ ಪೋಷಿಸುವ ವೇಳೆ ಮಂಗಗಳು ಏಕಾಏಕಿ ದಾಳಿ ನಡೆಸಿ ಹಲ್ಲೆಗೊಳಿಸುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
Monkey Attack ಮಂಗಗಳ ಹಾವಳಿ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಮನವಿ ಮಾಡಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪತ್ರ ನೀಡಿದರೆ ಮಾತ್ರ ಎನ್ನುತ್ತಾರೆ. ಈ ಕುರಿತು ಬಿಇಓ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸದ್ಯದಲ್ಲೇ ಮಕ್ಕಳ ಯಾವುದೇ ಹಾನಿಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆಂದರು.
ಮoಗಗಳನ್ನು ಸ್ಥಳಾಂತರಿಸುವ ಸಂಬoಧ ಶಾಲಾ ಶಿಕ್ಷಕರಿಗೆ ವಿಚಾರಿಸಿದರೆ ಕಳೆದ ಎರಡು ವರ್ಷಗಳ ಹಿಂ ದೆಯೇ ಬಿಇಓ ಹಾಗೂ ಪಂಚಾಯಿತಿ ಮನವಿ ಮಾಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದು ಆ ನಿಟ್ಟಿನಲ್ಲಿ ಸಂಬoಧಿಸಿದ ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.