Shivamogga Dasara Festival ಈ ಬಾರಿ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಅಂಬಾರಿ ಉತ್ಸವ ಮೆರವಣಿಗೆಗೆ ಅಗತ್ಯವಿರುವ ಪಳಗಿರುವ ಮೂರು ಆನೆಗಳ ಪೂರೈಕೆಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ಹಾಗೂ ಉಪಮೇಯರ್ ಲಕ್ಷ್ಮಿ ಶಂಕರ್ ನಾಯ್ಕ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ರವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಮಹಾನಗರ ಪಾಲಿಕೆ ಸರ್ವ ಪಕ್ಷ ಸದಸ್ಯರ ಮನವಿಗೆ ತತಕ್ಷಣ ಅರಣ್ಯ ಸಚಿವರು ಅರಣ್ಯ ಇಲಾಖೆಯ ಸಂಬಂಧ ಪಟ್ಟ ಮೇಲೆ ಅಧಿಕಾರಿಗಳಿಗೆ ಸೂಚಸಿ ಶಿವಮೊಗ್ಗ ಸಕ್ರಬೈಲಿನ ಆನೆ ಬಿಡಾರದಿಂದ ಮೂರು ಪಳಗಿರುವ ಆನೆಗಳನ್ನು ಬಾರಿ ಉತ್ಸವಕ್ಕೆ ಒದಗಿಸಲು ಆದೇಶಿಸಿದ್ದಾರೆ.
ಸರ್ವ ಪಕ್ಷದ ಸದಸ್ಯರ ಮನವಿಗೆ ತಕ್ಷಣ ಸ್ಪಂದಿಸಿದ ಅರಣ್ಯ ಸಚಿವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.
Shivamogga Dasara Festival ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ನಾಗರಾಜ ಕಂಕಾರಿ,ಸುವರ್ಣ ಶಂಕರ್,ಭಾನುಮತಿ ವಿನೋದ್ , ಧೀರರಾಜ್ ಹೊನ್ನವಿಲೆ, ವಿಶ್ವಾಸ್ , ಎಸ್ ಜಿ ರಾಜು, ಆರ್.ಸಿ. ನಾಯ್ಕ್, ಹಾಗೂ ಪ್ರಮುಖರಾದ ಶಂಕರ ನಾಯ್ಕ, ಕೆ ರಂಗನಾಥ್ ಇನ್ನಿತರರಿದ್ದರು.