Veerashaiva Lingayat Mahasabha ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮಹಿಳಾ-ಯುವ ಘಟಕ, ಮೂಡಿಗೆರೆ ಹಾಗೂ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಮಾಸದ ಧಾರ್ಮಿಕ ದುಂದುಭಿ ಹಾಗೂ ಸಂಗೀತ ಸಂಭ್ರಮದ ಕರಪತ್ರವನ್ನು ಪ್ರತಿಷ್ಟಾನದ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಪುಷ್ಪಗಿರಿ ಪ್ರತಿಷ್ಟಾನದ ಸಂಸ್ಥಾಪಕ ಅಧ್ಯಕ್ಷ ಮೋಹನ್‌ರಾಜಣ್ಣ ಧಾರ್ಮಿಕ ದುಂದುಭಿ ಹಾಗೂ ಸಂಗೀತ ಸಂಭ್ರಮವು ಸೆ.4ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಮಹಾಂತಿನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಂದಿನ ಕಾರ್ಯಕ್ರಮವನ್ನು ವೀರಶೈ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಓಂಕಾರ್ ಅಧ್ಯಕ್ಷತೆ ವಹಿಸ ಲಿದ್ದು ಆಧುನಿಕ ವಚನ ರಚನಕಾರ ರುದ್ರಮೂರ್ತಿ ಎಲೆರಾಂಪುರ ಉಪನ್ಯಾಸ ನೀಡಲಿದ್ದಾರೆ.
Veerashaiva Lingayat Mahasabha ವೀರಶೈವ ಮಹಾಸಭಾದ ಜಿಲ್ಲಾ ಉಸ್ತುವಾರಿ ಶ್ರೀಮತಿ ಲೀಲಾ ಮಹೇಶ್, ತಾಲ್ಲೂಕು ಅಧ್ಯಕ್ಷೆ ರಾಜಲಕ್ಷ್ಮೀ ಕಾಂತರಾಜ್, ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷೆ ಉಮಾ ಮೋಹನ್, ಯುವಘಟಕದ ಎಂ.ಸಿ.ಆನoದ್, ಉಪಾಧ್ಯಕ್ಷೆ ಶಾಲಿನಿ ಅನಿಲ್‌ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪುಷ್ಪಗಿರಿ ಪ್ರತಿಷ್ಟಾನದ ಅಧ್ಯಕ್ಷೆ ಉಮಾ ಮೋಹನ್, ಟ್ರಸ್ಟಿ ಸಿ.ಸಿ.ರಾಜಣ್ಣ ಹಾಜರಿದ್ದರು.